ಅವಲೋಕನ
ಅಮಿತಾಭ್ ಕಾಂತ್, ಸಿಇಒ, ನೀತಿ ಆಯೋಗ
ಸುಮಾರು ಮೂರು ದಶಕಗಳ ಹಿಂದೆ ನಾನು, ಕೇರಳದ ಸುಂದರ ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಮೀನುಗಳ ಮಾರುಕಟ್ಟೆ ಬೆಲೆಯ ಕೇವಲ ಶೇ.20ರಷ್ಟನ್ನು ಮಾತ್ರ ಪಡೆಯುತ್ತಿದ್ದ ಮೀನುಗಾರರ ಆದಾಯವನ್ನು ಹೆಚ್ಚಿಸಲು ನಾವು ಫೈಬರ್ ಗ್ಲಾಸ್ ಕ್ರಾಫ್ ಮತ್ತು ಔಟ್ಬೋರ್ಡ್ ಮೋಟರ‍್ಸ್‌ನಂಥ ಹೊಸ ತಂತ್ರಜ್ಞಾನ ವನ್ನು ಪರಿಚಯಿಸಿದೆವು ಮತ್ತು ಬೀಚ್ ಮಟ್ಟದ ಹರಾಜನ್ನು ಸಹ ಪ್ರಾರಂಭಿಸಿದೆವು.
ಆದಾಗ್ಯೂ, ಹಣ ಪಾವತಿ ಪಡೆಯಲು ಮೀನುಗಾರರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವುದು ದೊಡ್ಡ ಸವಾಲಾಗಿತ್ತು. ಆ ದಿನಗಳಲ್ಲಿ, ಭೌತಿಕವಾಗಿ ಬ್ಯಾಂಕು ಗಳಿಗೆ ಹೋಗಿ ಖಾತೆ ತೆರೆಯಲು ಕನಿಷ್ಠ ಹತ್ತು ತಿಂಗಳು ಬೇಕಾಗುತ್ತಿತ್ತು. ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಅನ್ನುವುದು ಬೇರೆಯದೇ ಲೋಕದ ಪರಿಕಲ್ಪನೆಯಾಗಿತ್ತು. 2021ಕ್ಕೆ ಬಂದರೆ, ನೀವು ಬ್ಯಾಂಕ್ ಶಾಖೆಗೆ ಹೋಗಿ ಇಕೆವೈಸಿ ಮತ್ತು ಬಯೋಮೆಟ್ರಿಕ್ ನೊಂದಿಗೆ ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು. ಕಾಯುವ ಸಮಯವನ್ನು ತಿಂಗಳು ಗಳಿಂದ ನಿಮಿಷಗಳಿಗೆ ಕಡಿಮೆ ಮಾಡುವ ಮೂಲಕ, ಡಿಜಿಟಲ್ ರೂಪಾಂತರವು ಒಂದು ಮಾದರಿ ಬದಲಾವಣೆಗೆ ಕಾರಣವಾಗಿದೆ.
ಆರು ವರ್ಷಗಳನ್ನು ಪೂರೈಸಿರುವ ಡಿಜಿಟಲ್ ಇಂಡಿಯಾ ಉಪಕ್ರಮದ ಬಗ್ಗೆ ಪ್ರಧಾನಿಯವರು, ಇದು ಭಾರತದ ಟೆಕ್ ಎಡ್ (ತಂತ್ರಜ್ಞಾನ ದಶಕ) ಎಂದು ಸೂಕ್ತವಾಗಿ ಬಣ್ಣಿಸಿದ್ದಾರೆ. ತಾಂತ್ರಿಕ ಪ್ರಗತಿ ಮತ್ತು ಅಂತರ್ಜಾಲದ ತ್ವರಿತ ಲಭ್ಯತೆಯು ಭಾರತದಾದ್ಯಂತ ಒಂದು ಶತಕೋಟಿ ನಾಗರಿಕರನ್ನು ಸಾಮಾನ್ಯ ಹಣಕಾಸು, ಆರ್ಥಿಕ ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಯೊಂದಿಗೆ ಸಂಯೋಜಿಸಿದೆ. ವಿಶ್ವದ ಅಗ್ಗದ ಡೇಟಾ ದರಗಳು ಮತ್ತು ೭೦ ಕೋಟಿ ಅಂತರ್ಜಾಲ
ಬಳಕೆದಾರರೊಂದಿಗೆ – ಪ್ರತಿ 3 ಸೆಕೆಂಡಿಗೆ ಹೊಸ ಭಾರತೀಯ ಬಳಕೆದಾರರು ಇಂಟರ್ನೆಟ್ ಪಡೆಯುತ್ತಿದ್ದಾರೆ.
ಹದಿನಾರು ರಾಜ್ಯಗಳಲ್ಲಿ ಎಲ್ಲಾ ಜನವಸತಿ ಗ್ರಾಮಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಅಧಿಕೃತ ಫೈಬರ್ ಸಂಪರ್ಕ ಕಲ್ಪಿಸುವ ಭಾರತ್ ನೆಟ್ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಒಂದು ಬಿಲಿಯನ್ ಗೂ ಹೆಚ್ಚು ಬಯೋಮೆಟ್ರಿಕ್ಸ್, ಒಂದು ಬಿಲಿಯನ್‌ಗೂ ಹೆಚ್ಚು ಮೊಬೈಲ್ ಮತ್ತು ಸುಮಾರು ಒಂದು ಬಿಲಿಯನ್ ಬ್ಯಾಂಕ್ ಖಾತೆಗಳನ್ನು ಹೊಂದಿರುವ ನಾವು ಭಾರತದ ಇಡೀ ಜನಸಂಖ್ಯೆಯನ್ನು ಮ್ಯಾಪಿಂಗ್ ಮಾಡುವ ವಿಶ್ವದ ಅತಿದೊಡ್ಡ ಗುರುತಿನ ವ್ಯವಸ್ಥೆಯನ್ನು ನಿರ್ಮಿಸಿದ್ದೇವೆ. ಇಲ್ಲಿಯವರೆಗೆ, 1.29 ಬಿಲಿಯನ್ ಆಧಾರ್ ಐಡಿಗಳನ್ನು ಸೃಷ್ಟಿಸಲಾಗಿದೆ ಮತ್ತು 55.97 ಬಿಲಿಯನ್ ದೃಢೀಕರಣ ಗಳನ್ನು ಕೈಗೊಳ್ಳಲಾಗಿದೆ. ಸರಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ನಿವಾರಿಸುವುದು ಭಾರತದ ಡಿಜಿಟಲೀಕರಣ ಪ್ರಯತ್ನಗಳ ಮೂಲ
ಉದ್ದೇಶ ವಾಗಿದೆ.
ಗುಜರಾತ್ ಕರಾವಳಿಯಾದ್ಯಂತ ವ್ಯಾಪಿಸಿರುವ ಲಕ್ಷಾಂತರ ಭಾರತೀಯರನ್ನು ಉತ್ತರ ಪ್ರದೇಶದ ಕೃಷಿಭೂಮಿಗಳು ಮತ್ತು ಸಿಕ್ಕಿಂ ಪರ್ವತಗಳೊಂದಿಗೆ
ಸಂಪರ್ಕಿಸುವ ಪಾವತಿ ವ್ಯವಸ್ಥೆ, ಯುಪಿಐ ಅನ್ನು ಡಿಜಿಟಲ್ ಪಾವತಿಗಳಲ್ಲಿ ಜಾಗತಿಕಗೊಳಿಸಲು ಅಪಾರ ಅವಕಾಶವಿದೆ. ದೊಡ್ಡ ಕಾರ್ಪೊರೇಟ್ ವ್ಯಕ್ತಿಗೆ ಬಲ ನೀಡುವುದರಿಂದ ಹಿಡಿದು ತರಕಾರಿ ಮಾರಾಟಗಾರನನ್ನು ಸಬಲೀಕರಣಗೊಳಿಸುವವರೆಗೆ, ತ್ವರಿತ, ನೈಜ ಸಮಯದ ಮೊಬೈಲ್ ಪಾವತಿಗಳಿಗೆ ಅನುಕೂಲ ವಾಗುವಂಥ ಭಾರತದ ಡಿಜಿಟಲ್ ಯಶೋಗಾಥೆಯು ಜಗತ್ತನ್ನು ಬೆರಗುಗೊಳಿಸಿದೆ. ಜೂನ್ 2021ರಲ್ಲಿ, ಯುಪಿಐ 47 5.47 ಟ್ರಿಲಿಯನ್ ಮೌಲ್ಯದ 2.8 ಬಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ.
ಯುಪಿಐ ವಹಿವಾಟು ಈಗ ಜಾಗತಿಕವಾಗಿ ಅಮೆರಿಕನ್ ಎಕ್ಸ್ ಪ್ರೆಸ್ ಮಾಡುವ ವಹಿವಾಟುಗಳಿಗಿಂತ ದ್ವಿಗುಣವಾಗಿದೆ. ಇತ್ತೀಚೆಗೆ, ಗೂಗಲ್ ಯುಎಸ್ ಫೆಡರಲ್ ರಿಸರ್ವ್‌ಗೆ ಪತ್ರ ಬರೆದಿದ್ದು, ಭಾರತದಲ್ಲಿ ಯುಪಿಐ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದನ್ನು ಶ್ಲಾಸಿದೆ ಮತ್ತು ಅಮೆರಿಕಾದ ಫೆಡರಲ್ ರಿಸರ್ವ್ ಸಿಸ್ಟಮ್ ಭಾರತದಿಂದ ಸ್ಫೂರ್ತಿ ಪಡೆಯಬೇಕು ಎಂದು ಶಿಫಾರಸ್ಸು ಮಾಡಿದೆ. ಡಿಜಿಟಲ್ ಇಂಡಿಯಾದ ಗಮನಾರ್ಹ ಆವಿಷ್ಕಾರವೆಂದರೆ ಜಿ 2 ಬಿ (ಗವರ್ನಮೆಂಟ್ ಟು ಬ್ಯುಸಿನೆಸ್) ಸರಕಾರಿ ಇ – ಮಾರ್ಕೆಟ್ ಪ್ಲೇಸ್. ಜಿಇಎಂ – ಜೆಮ್ ಪೋರ್ಟಲ್ ಸಾರ್ವಜನಿಕ ಖರೀದಿ ವ್ಯವಸ್ಥೆಯನ್ನು ಪರಿವರ್ತಿಸಲು ತಂತ್ರಜ್ಞಾನವನ್ನು ಯಶಸ್ವಿ ಯಾಗಿ ಬಳಸಿಕೊಂಡಿದೆ.
ಇಲ್ಲಿಯ ವರೆಗೆ, ಪೋರ್ಟಲ್ 19.17 ಲಕ್ಷ ಮಾರಾಟಗಾರರ ನೋಂದಣಿಯನ್ನು ಮಾಡಿ ಹೊಸ ಮೈಲಿಗಲ್ಲನ್ನು ದಾಟಿದೆ, ಇದು ಕಳೆದ ವರ್ಷಕ್ಕಿಂತ ಸುಮಾರು 5 ಪಟ್ಟು ಹೆಚ್ಚು. ಜಾರ್ಖಂಡ್‌ನಿಂದ ಬುಡಕಟ್ಟು ಆಭರಣಗಳು, ಕಾಶ್ಮೀರದಿಂದ ಒಣ ಹಣ್ಣು, ಚೆನ್ನೈನಿಂದ ನೃತ್ಯ ಪಾಠಗಳು, ಒಡಿಶಾದ ಜವಳಿ, ಎಲ್ಲವೂ ಇ-ಕಾಮರ್ಸ್ ಮತ್ತು ಅಂತರ್ಜಾಲದಿಂದಾಗಿ ಎಲ್ಲಿಂದೆಲ್ಲಿಗೂ ತಲುಪುವ ಸಾಧ್ಯತೆಯನ್ನು ಹೊಂದಿದೆ. ಅಂತರ್ಜಾಲ ವ್ಯವಸ್ಥೆಯು ಭಾರತೀಯ ಉತ್ಪನ್ನಗಳು ಮತ್ತು ವ್ಯವಹಾರ ಅಭಿವೃದ್ಧಿ ಹೊಂದಲು ಬಲವಾದ ಪರಿಸರ ಸೃಷ್ಟಿಸಿವೆ. ಲಕ್ಷಾಂತರ ಭಾರತೀಯರು ತಮ್ಮ ಕಾರ್ಯಕ್ಷೇತ್ರ ವನ್ನು ವಿಸ್ತರಿಸಿಕೊಳ್ಳಲು ಹಾಗೂ ವ್ಯವಹಾರಗಳಲ್ಲಿ ತೊಡಗಲು ಮತ್ತು ಜಾಗತಿಕವಾಗಿ ಗ್ರಾಹಕರೊಂದಿಗೆ ಸಂವಹನ ನಡೆಸಲು ಅಂತರ್ಜಾಲವು ಅತ್ಯುತ್ತಮ ಮಾರ್ಗವಾಗಿದೆ.
ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ಭಾರಿ ಪ್ರೋತ್ಸಾಹ ಪಡೆದ ಎರಡು ಪ್ರಮುಖ ಕ್ಷೇತ್ರಗಳೆಂದರೆ ಆರೋಗ್ಯ ಮತ್ತು ಶಿಕ್ಷಣ. ಭಾರತೀಯ ನಾಗರಿಕರ ಒಟ್ಟಾರೆ
ಜೀವನದ ಗುಣಮಟ್ಟವನ್ನು ಸುಧಾರಿಸಲು ಇವು ಸಮಗ್ರವಾಗಿವೆ ಮತ್ತು ಸಮಗ್ರ ಬೆಳವಣಿಗೆಯ ಪಥವನ್ನು ವಿವರಿಸುತ್ತವೆ. ಭಾರತದ ಒಳನಾಡಿನಲ್ಲಿ, ಚಿನ್ನದ ಬಣ್ಣದ ಫಲಾನುಭವಿ ಕಾರ್ಡ್‌ಗಳನ್ನು ಅನೇಕರು ಜೀವ ರಕ್ಷಕ ಎಂದು ಪರಿಗಣಿಸುತ್ತಾರೆ. ಆರೋಗ್ಯ ರಕ್ಷಣೆಗೆ ಸಮಾನ ಪ್ರವೇಶಕ್ಕಾಗಿ ಅಲೆದಾಡುವ ವ್ಯವಸ್ಥೆಯನ್ನು ಇದು ದೂರಮಾಡಿದೆ.
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಆರೋಗ್ಯ ಮತ್ತು ತಂತ್ರಜ್ಞಾನದ ಒಂದು ವಿಶಿಷ್ಟ ಸಂಯೋಜನೆಯಾಗಿದೆ. ಇದು ಭಾರತದಲ್ಲಿ ಯುರೋಪಿನ ಜನಸಂಖ್ಯೆಗೆ ಸಮಾನವಾದ 500 ಮಿಲಿಯನ್ ನಾಗರಿಕರನ್ನು ಒಳಗೊಳ್ಳುವ ವಿಶ್ವದ ಅತ್ಯಂತ ವ್ಯಾಪಕವಾದ ನಗದು ರಹಿತ, ಸಂಪರ್ಕ ರಹಿತ, ಕಾಗದರಹಿತ ಮತ್ತು ಡಿಜಿಟಲ್ ಆರೋಗ್ಯ ವಿಮಾ ಯೋಜನೆಯಾಗಿದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಅಭಿಯಾನ (ಎನ್‌ಡಿಎಚ್ ಎಂ) ಜತೆಗೆ ಪಿಎಂಜೆಎ ಭಾರತದಲ್ಲಿ ಆರೋಗ್ಯ ವಿತರಣೆ ಯನ್ನು ಬೃಹತ್ ಪ್ರಮಾಣದಲ್ಲಿ ಸುಧಾರಿಸುತ್ತಿದೆ, ದತ್ತಾಂಶ – ಏಕೀಕರಣ ಮತ್ತು ಪ್ರಮಾಣೀಕರಣದ ಮೂಲಕ ಸಂಪೂರ್ಣವಾಗಿ ತಂತ್ರಜ್ಞಾನ – ಶಕ್ತಗೊಂಡಿರುವ ವ್ಯವಸ್ಥೆಯತ್ತ ಸಾಗುತ್ತಿದೆ.
ಸಂಪರ್ಕಿತ ಆರೋಗ್ಯ ವ್ಯವಸ್ಥೆಯ ದೃಷ್ಟಿಕೋನದ ಮಾದರಿ ಉದಾಹರಣೆಯೊಂದು ಪಶ್ಚಿಮ ಉತ್ತರ ಪ್ರದೇಶದ ಮಹತ್ವಾಕಾಂಕ್ಷೆಯ ಜಿಲ್ಲೆಯಿಂದ ಹೊರಹೊಮ್ಮು ತ್ತದೆ. ಚಿತ್ರಕೂಟ ಜಿಯು, ಅಭಿವೃದ್ಧಿ ಸವಾಲುಗಳ ನಡುವೆಯೂ, ಜಿಲ್ಲೆಯ ಎಲ್ಲಾ ನಿವಾಸಿಗಳಿಗೆ ಪರಿಣಾಮಕಾರಿಯಾದ ಟೆಲಿಮೆಡಿಸಿನ್ ವ್ಯವಸ್ಥೆಯನ್ನು ನಿರ್ಮಿಸಲು ಸಾಮಾನ್ಯ ಸೇವಾ ಕೇಂದ್ರಗಳು, ಗ್ರಾಮ ಮಟ್ಟದ ಉದ್ಯಮಿಗಳು ಮತ್ತು ಆಶಾ ಕಾರ್ಯಕರ್ತರನ್ನು ಅತ್ಯದ್ಭುತವಾಗಿ ಬಳಸಿಕೊಂಡಿದೆ. ಈ ಕ್ರಮದ ಅಡಿಯಲ್ಲಿ, ದೂರದ ಪ್ರದೇಶಗಳಲ್ಲಿನ ರೋಗಿಗಳು ಆಸ್ಪತ್ರೆಗಳಿಗೆ ಪ್ರಯಾಣಿಸದೆ ತಮ್ಮ ಮನೆಗಳಿಂದಲೇ ತಜ್ಞರ ಆರೈಕೆಯನ್ನು ಪಡೆಯಬಹುದು. ಸಾಕಷ್ಟು ಸಮಯ ಮತ್ತು ಹಣವನ್ನು ಉಳಿಸಬಹುದು.
ಡಿಜಿಟಲೀಕರಣ ಮತ್ತು ಇಂಟರ್ನೆಟ್ ಲಭ್ಯತೆಯು ಭಾರತದಾದ್ಯಂತದ ವಿದ್ಯಾರ್ಥಿಗಳಿಗೆ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಅಸಾಧಾರಣ ಕೊಡುಗೆ ನೀಡಿದೆ. ಬಿಹಾರದ ದೂರದ ಮಹತ್ವಾಕಾಂಕ್ಷೆಯ ಜಿಲ್ಲೆಯಾದ ನವಾಡಾದಲ್ಲಿನ ಪ್ರಾಥಮಿಕ ಶಾಲೆಗಳು ಸ್ಮಾರ್ಟ್ ತರಗತಿಗಳಾಗಿವೆ. ಇವು ಸಂಪೂರ್ಣವಾಗಿ ಡಿಜಿಟಲ್ ಪರಿಕರಗಳು ಮತ್ತು ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದು, ಭಾರತದ ಹಳ್ಳಿಗಳಿಗೆ ಪ್ರಪಂಚದಾದ್ಯಂತದ ಜ್ಞಾನವನ್ನು ತರುತ್ತಿವೆ. ಸ್ಮಾರ್ಟ್ ತರಗತಿ ಕೊಠಡಿಗಳು ಮತ್ತು ಇ- ಕಲಿಕೆಯ ಮಾದರಿಯನ್ನು ರಾಜ್ಯಗಳಾದ್ಯಂತ ವೇಗವಾಗಿ ಕಾರ್ಯಗತಗೊಳಿಸಲಾಗುತ್ತಿದ್ದು ಇದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಲಿಕೆಯ ಸಂಪೂರ್ಣ ಹೊಸ ಜಗತ್ತನ್ನು ಪರಿಚಯಿಸಿದೆ.
ಸಾಂಕ್ರಾಮಿಕ ಸಮಯದಲ್ಲಿ, ಸರಕಾರವು ನಿಯೋಜಿಸಿರುವ ಹಲವಾರು ಆನ್‌ಲೈನ್ ಕಲಿಕಾ ಉಪಕ್ರಮಗಳಾದ – ದೀಕ್ಷಾ, ಇ ಪಾಠಶಾಲ, ಸ್ವಯಂ – ದೇಶದ ಅತ್ಯಂತ ದೂರದ ಪ್ರದೇಶದ ವಿದ್ಯಾರ್ಥಿಗಳಿಗೂ ನಿರಂತರ ಶಿಕ್ಷಣವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವನ್ನು ಡಿಜಿಟಲ್ ಸಮಾಜವಾಗಿ ಮತ್ತು ಜ್ಞಾನ ಆರ್ಥಿಕತೆಯಾಗಿ ಪರಿವರ್ತಿಸಿರುವುದರಿಂದ ನಾಗರಿಕರ ಜೀವನವು ಸುಲಭವಾಗಿದೆ. ವಿಶ್ವದ ಅತಿದೊಡ್ಡ ಗಣಕೀಕೃತ ಮತ್ತು ನೆಟ್ವರ್ಕ್ ಮಾಡಲಾದ ಅಂಚೆ ವ್ಯವಸ್ಥೆಯಾದ ಇಂಡಿಯಾ ಪೋಸ್ಟ್‌ನಂಥ ಸಾರ್ವತ್ರಿಕವಾಗಿ ಪ್ರವೇಶಿಸಬಹುದಾದ ಡಿಜಿಟಲ್ ಸಂಪನ್ಮೂಲಗಳು, ಆಯುಷ್ ಸಂಜೀವಿನಿ ಅಪ್ಲಿಕೇಶನ್, ಡಿಜಿಲಾಕರ್, ಉಮಂಗ್ ಅಪ್ಲಿಕೇಶನ್, ಕಾನೂನು ಸಲಹೆಗಾಗಿ ಟೆಲಿ ಲಾ, ಬೀದಿ ಬದಿ ಮಾರಾಟಗಾರರಿಗೆ ಸ್ವನಿಧಿ ಯೋಜನೆ ಮತ್ತು ಅನಿಲ ಸಿಲಿಂಡರ್‌ಗಳನ್ನು ಸುಲಭವಾಗಿ ಕಾಯ್ದಿರಿಸಲು 10000 ಬಿಪಿಸಿಎಲ್ ಸಿಎಸ್ಸಿ ಪಾಯಿಂಟ್‌ಗಳು ಗರಿಷ್ಠ ಆಡಳಿತ, ಕನಿಷ್ಠ ಸರಕಾರದ ಕೆಲವು ಸಾಧನಗಳಾಗಿವೆ.
ಡಿಜಿಟಲ್ ಇಂಡಿಯಾದ ಮತ್ತೊಂದು ಕ್ರಾಂತಿಕಾರಿ ಉತ್ಪನ್ನವೆಂದರೆ MyGov ಪ್ಲಾಟಾರ್ಮ್, ಇದು ನಾಗರಿಕರು ಆಡಳಿತದಲ್ಲಿ ಭಾಗವಹಿಸುವುದನ್ನು ಉತ್ತೇಜಿ ಸುವ ವಿಶ್ವದ ಅತಿದೊಡ್ಡ ಪ್ರಜಾಸತ್ತಾತ್ಮಕ ಸಂವಾದ ಡಿಜಿಟಲ್ ಪೋರ್ಟಲ್ ಆಗಿದೆ. ಭಾರತವು ಸಮೃದ್ಧ ದತ್ತಾಂಶದಿಂದ ದತ್ತಾಂಶ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಡೆಗೆ ಸಾಗುತ್ತಿರುವಾಗ ತನ್ನ ಹಲವಾರು ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ – ನೀರಿನ ಲಭ್ಯತೆ, ಕಲಿಕೆಯ ಫಲಿತಾಂಶಗಳು, ಆರೋಗ್ಯ ಸುಧಾರಣೆ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ವಿಶ್ವ ದರ್ಜೆಯ ತಂತ್ರಜ್ಞಾನ ಉತ್ಪನ್ನಗಳ ಅಭಿವೃದ್ಧಿಗೆ ಯುವ ಉದ್ಯಮಿಗಳಿಂದ ವಿಮರ್ಶಾತ್ಮಕ ಒಳಹರಿವು ಹಾಗೂ ಕೃತಕ ಬುದ್ಧಿಮತ್ತೆ ಶಕ್ತಗೊಳಿಸುವ ನೀತಿ ನಿರೂಪಣೆಯ ವಾತಾವರಣದ ಅಗತ್ಯವಿದೆ ಎಂಬುದು ನನ್ನ ನಂಬಿಕೆ. ಹಾಗೂ ಸಾಮಾಜಿಕ ಪ್ರಜ್ಞೆ ಮತ್ತು ಅಭಿವೃದ್ಧಿ ಆಧಾರಿತ ಉತ್ಪನ್ನ ವ್ಯವಸ್ಥಾಪಕರು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವಿಜ್ಞಾನಿಗಳು, ಉತ್ಪನ್ನಗಳ ವಿನ್ಯಾಸಕರು ಮತ್ತು ಸಾಫ್ಟ್ವೇರ್ ಎಂಜಿನಿಯರ್‌ಗಳ ಹೊಸ ಪೀಳಿಗೆಯನ್ನು ಭಾರತ ಪೋಷಿಸಬೇಕು.
ಅಂತರ್ಗತ ತಂತ್ರಜ್ಞಾನ ಪರಿಹಾರಗಳನ್ನು ನಿರ್ಮಿಸುವುದು ಕಡಿಮೆ ವೆಚ್ಚದಲ್ಲಿ ಸೇವೆಗಳ ಲಭ್ಯತೆ ಮತ್ತು ಸ್ಥಳೀಯ ಭಾಷೆಗಳಲ್ಲಿ ವಿಡಿಯೋ ಮತ್ತು ಧ್ವನಿಯ
ಅನುಕೂಲತೆಗಳನ್ನು ಕಲ್ಪಿಸುವುದು ಇಂದಿನ ಅಗತ್ಯವಾಗಿದೆ. ಇದಕ್ಕೆ ದೇಶದ ಮೂಲೆಮೂಲೆಯಲ್ಲಿ ವಾಸಿಸುವ ಜನರ ಅವಶ್ಯಕತೆಗಳಿಗೆ ವಿಶೇಷ ಒತ್ತು ನೀಡಿ ಭಾರತದ ವೈವಿಧ್ಯಮಯ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಯನ್ನು ವಿನ್ಯಾಸಗೊಳಿಸುವ ಅಗತ್ಯವಿದೆ. ಡಿಜಿಟಲ್ ರೂಪಾಂತರದ ಅಭೂತಪೂರ್ವ ಯಶೋಗಾಥೆಯನ್ನು ಮುಂದುವರಿಸುವುದು, ಭಾರತದ ಗ್ರಾಮೀಣ ಮತ್ತು ಸಂಪರ್ಕವೇ ಇಲ್ಲದ ಪ್ರದೇಶಗಳಲ್ಲಿ ವಾಸಿಸುವವರ ಆಕಾಂಕ್ಷೆಗಳು ಮತ್ತು ಸಾಮರ್ಥ್ಯ ವನ್ನು ಸಂಪೂರ್ಣವಾಗಿ ರಿತುಕೊಳ್ಳುವುದು ಇಂದಿನ ತುರ್ತು. ಜತೆಗೆ ಅವರಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ನಾವು ಹೇಗೆ ಶಕ್ತಗೊಳಿಸುತ್ತೇವೆ
ಮತ್ತು ಅವರನ್ನು ಸಬಲಗೊಳಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ.
ಇದು ಕೇವಲ ಭಾರತದ ಜನರಿಗೆ ಮಾತ್ರವಲ್ಲದೆ ಬಡತನದಿಂದ ಮಧ್ಯಮ ವರ್ಗದತ್ತ ಸಾಗಲಿರುವ ವಿಶ್ವದ 5 ಶತಕೋಟಿ ಜನರಿಗೆ ಪರಿಹಾರಗಳನ್ನು ಒದಗಿಸಲು ತಂತ್ರಜ್ಞಾನ ಸಾಮರ್ಥ್ಯಗಳು ಮತ್ತು ದತ್ತಾಂಶಗಳು ಪ್ರಭಾವ ಬೀರುತ್ತವೆ. ಇದು ಮುಂದಿನ ಡಿಜಿಟಲ್ ಇಂಡಿಯಾ ತಂತ್ರಜ್ಞಾನ ದಶಕದ ಮೂಲಾಧಾರವಾಗಿದೆ.