Sunday, 15th December 2024

ಶಿಸ್ತಿನ ಪಾಠ ಆಗಲಿ ಮನೆಯಲ್ಲೆ !

ಜೀವನ ಕ್ರಮ

ನಿತ್ಯಾನಂದ ಹೆಗಡೆ ಮೂರೂರು

ನಾವು ನಮ್ಮ ಮನೆಯನ್ನು ಚೊಕ್ಕಟವಾಗಿ, ಅಚ್ಚುಕಟ್ಟಾಗಿ ಶಿಸ್ತಿನ ಶ್ರಮವಹಿಸಿ ಒಪ್ಪ ಓರಣ ಮಾಡಿರುತ್ತೇವೆ. ಕ್ರಮೇಣ ಅದು ನಮ್ಮ ಜೀವನದ ಅವಿ ಭಾಜ್ಯ ಅಂಗವಾಗಿ ಬಿಡುತ್ತದೆ.

ಹಜರದಲ್ಲಿರುವ ಟೇಬಲ್‌ನ ಮೇಲೆ ಅವೇನೇನು ಶಿಸ್ತಾಗಿ, ಚೆಂದವಾಗಿ ಕೂಡ್ರಿಸುವೆವೋ ಅದು ಚಾಚೂ ತಪ್ಪ ದಂತೆ ನೀಟಾಗಿಯೇ ಇಡುತ್ತ ಸರಿಪಡಿಸುತ್ತ ಕೊನೆಕೊನೆಗೆ ಅದನ್ನು ಜೋಡಿಸುವಲ್ಲಿ ಒಂದು ನಿರ್ಣಯಕ್ಕೆ ಬಂದುಬಿಡುತ್ತೇವೆ. ಉದಾಹರಣೆಗೆ ಒಂದು ಪುಸ್ತಕ ಚೂರು ಓರೆಕೋರೆ ಆಗಿಬಿಟ್ಟರೆ ಸರಿಯಾದ ಕೋನದಲ್ಲಿ ದನ್ನು ಇಡುವ ತನಕ ಸಮಾಧಾನ ಇರುವುದಿಲ್ಲ. ಕಳಚಿದ ವಾಚನ್ನು ಸಿಕ್ಕಹಾಗೆ ಬಿಸಾಡುವುದಿಲ್ಲ.ಹಜರದಲ್ಲಿ ಇಡುವ ಖುರ್ಚಿ, ಸೋಫಾದಮೇಲೆ ಹಾಕಿದ ಸೋಫಾ ಕವರ್, ನೀರಿನ ಜಗ್ ಪ್ರತಿಯೊಂದೂ ಅದೇನೋ ಮಾನಸಿಕವಾಗಿ ಸೆಟ್ ಆಗಿರುತ್ತದೆ. ಅಡುಗೆ ಮನೆ, ಸ್ನಾನದ ಕೋಣೆ, ಓದುವ ಕೊಠಡಿ ಅದು ಸಹಜವಾಗಿ ಕ್ರಮಬಧ್ಧ ಶಿಸ್ತಿಗೆ ಒಳ ಪಡುತ್ತದೆ.

ಪುಸ್ತಕದ ಕಪಾಟದಲ್ಲಿ ಜೋಡಿಸಿಟ್ಟ ಪುಸ್ತಕಕ್ಕೂ ಅದೇನೋ ಒಂದು ಕ್ರಮವಿರುತ್ತದೆ; ಔಷಧದ ಅಂಗಡಿಯಲ್ಲಿ ಕ್ರಮದಲ್ಲಿ ಪೆಟ್ಟಿಗೆಗಳನ್ನು ಜೋಡಿಸಿದ ಹಾಗೆ. ಇಂತಹ ಕಡೆ ಹುಟ್ಟಿ ಬೆಳೆವ ಮಕ್ಕಳ ಶೂ, ಬೆನ್ನುಚೀಲ, ಅವರ ಓದಿನ ಪುಸ್ತಕ, ಅವರ ಟೂತ್ ಬ್ರಶ್, ಅವರು ಬಳಸುವ ನಲ್ಲಿ- ಬೇಸಿನ್… ಹೀಗೆ ತುಂಬಾ ಕಾಳಜಿ ವಹಿಸಿ ಶಿಸ್ತನ್ನು ಅವರರಿಯದಂತೇ ಕಲಿಸಿ ಬಿಡುತ್ತೇವೆ. ಆಗ ಅದು ಹೇಗೋ ಸಹಜವಾಗಿ ಮಕ್ಕಳು ಸುಲಲಿತವಾಗಿ ಅವನ್ನು ಫಾಲೋ ಮಾಡುತ್ತಾರೆ ಮತ್ತು ಶಿಸ್ತಿನ ಮೊದಲ ಪಾಠವನ್ನು ಅನುಸರಿಸಿ ಹಾಗೆಯೇ ನಡೆಯುತ್ತಾರೆ.

ನಾವು ಹಲವು ಸಲ ಈಗಿನ ನಮ್ಮ ಮಕ್ಕಳ ಗೆಳೆಯರ ಮನೆಗೆ ಹೋಗಬೇಕಿರುತ್ತದೆ. ಅಲ್ಲಿನ ದೃಶ್ಯ ಕಂಗಾಲಾಗಿಸುವಂತಿರುತ್ತದೆ. ಅಲ್ಲಿ ಹಜರದಲ್ಲೇ ಹಳೆಯ ಜಿಡ್ಡು ಹಿಡಿದ ಸೋ- ಮತ್ತು ಅದರ ಕವರ್, ಅ ಒಂದು ಕಡೆ ಅಸಡಾ ಬಸಡಾ ಒಗೆದ ಹಳೆಯ ಶೂ, ನಿನ್ನೆ ಕುಡಿದಿಟ್ಟ ಚಹಾದ ಕಪ್ಪು, ಅದಾವದೋ ತೋಟಕ್ಕೆ ಹೋಗಲು ಬಳಸುವ ಅಂಗಿ, ಪಂಚೆ, ಅ ತಲೆಯ ಮೇಗಡೆ ಕಟ್ಟಿದ ಹಗ್ಗಕ್ಕೆ ಹಾಕಿದ ಯಾವದೋ ಒಳ ಉಡುಪು, ಅಡುಗೆ ಮನೆಯಲ್ಲಿ ಡೈನಿಂಗ್ ಟೇಬಲ್ ಮೇಲೆ ಅರ್ಧ ಒಡೆದಿಟ್ಟ ನೊಣ ಮುತ್ತಿ, ಹಾರಾಡುತ್ತಿರುವ ಬ್ರೆಡ್ ಪ್ಯಾಕೆಟ್, ತೊಳೆಯದ ಮಾಸಲು ಪಾತ್ರೆಗಳು, ಮುಗ್ಗುಲು ಹಿಡಿದ ಖುರ್ಚಿಗಳು ಇವೆಲ್ಲದರ ದರ್ಶನವಾಗುತ್ತದೆ.

ಇನ್ನು ಹಳ್ಳಿಗಾಡಿನ ಮನೆಯಲ್ಲಿ ಕೆಲವೆಡೆ ಜೇಡರಬಲೆ ತುಂಬಿದ ಹಜರ. ಅ ಇಡುವ ಕತ್ತಿಗಳ ಸರ, ತೋಟಕ್ಕೆ ಬಳಸುವ ಪಂಚೆ, ಕೆಲವೊಮ್ಮೆ ಪಿಕಾಸಿ,
ಕೊಬ್ಬರಿ ಬಲೆ… ಇತ್ಯಾದಿ. ಜತೆಗೆ ಮಣ್ಣು ಹಿಡಿದು ಕಪ್ಪಾದ ನಲ್ಲಿ, ಜಿಡ್ಡು ಹಿಡಿದ ಥಡಿ(ಹಾಸಿಗೆ) ಅದರ ಮೇಲೆ ಹಾಕುವ ಬೆಡ್ ಶೀಟ್, ಇವರಿಗೆ ಮಕ್ಕಳಾ ಗಿದ್ದರೂ ಅಪ್ಪನ ಮದುವೆಯ ಥರ್ಮೋಕೋಲ್‌ನ ‘ಶುಭಾ ಮತ್ತು ವಸಂತ’ ಅನ್ನುವ ಬೋರ್ಡಿನ ತುಂಡೂ… ಹೀಗೆ ಇನ್ನೂ ಹಲವಾರು ಎಲ್ಲೆಂದರಲ್ಲಿ ಬಿದ್ದಿರುತ್ತಿದೆ. ಅವರು ಅದೇ ಹಿನ್ನೆಲೆಯಲ್ಲೇ ಮಕ್ಕಳನ್ನು ಬೆಳೆಸಿ ಎಂಜಿನಿಯರೋ, ಡಾಕ್ಟರೋ ಮಾಡಿರುತ್ತಾರೆ.

ನೂರಾರು ಅವರ ದೋಸ್ತರನ್ನೋ, ಗಣ್ಯರನ್ನೋ ಪ್ರೀತಿಯಿಂದ ಕರೆದು ಉಪಚಾರ ಮಾಡಿ ಕಳಿಸಿರುತ್ತಾರೆ. ಒಂದು ಮಜವೆಂದರೆ ಈ ಅಶಿಸ್ತಿನಲ್ಲಿ ಬೆಳೆದವ ಅಥವಾ ಬೆಳೆದವಳು ತನ್ನ ಮನೆಯಲ್ಲಿ ಅತ್ಯಂತ ಸಂತಸದಿಂದ ಅವರನ್ನು ಕರೆದು ಅದೇ ಅಶಿಸ್ತಿನ ಸುಖದಲ್ಲಿ ಕರೆದು ಸತ್ಕಾರ ಮಾಡಿ ಕಳುಹಿಸಿರುತ್ತಾರೆ. ಅವರಾಗಲೀ, ಮಕ್ಕಳಾಗಲಿ ಅದೆಲ್ಲವನ್ನು ಯೋಚನೆ ಮಾಡುವುದೇ ಇಲ್ಲ. ಇಂತಹ ಮಕ್ಕಳು ಅತ್ಯಂತ ಶಿಸ್ತು ಇರುವ ಮನೆಗೆ ಹಲವು ಸಲ ಹೋಗಿ ಬರುತ್ತಾರೆ. ಅಲ್ಲೆಲ್ಲಾ ನೋಡಿ ಬಮದಿರುತ್ತಾರೆ. ಆದರೆ ಅಲ್ಲಿಯದನ್ನು ಅಲ್ಲೇ ಬಿಟ್ಟು ಮನೆಗೆ ಬಂದ ಮೇಲೆ ಪುನಃ ಹಾಗೇ ಬದುಕುತ್ತಾರೆ.

ಇದರಲ್ಲಿ ಒಂದೇ ಸಮಸ್ಯೆ ಏನೆಂದರೆ ಅವರು ಬರಲಿ, ಖುಷಿ ಪಡಲಿ, ಹೋಗಲಿ. ಆದರೆ ನಾವು ಅವರ ಮನೆಗೆ ಹೋದಾಗ ಅದೇನೋ ಕಿರಿಕಿರಿ ಆಗುವುದು ಸಹಜ. ಆಶ್ಚರ್ಯವೆಂದರೆ ನಮ್ಮ ಮಕ್ಕಳು, ಅವರ ಮಕ್ಕಳು ಹೋಗಿಬರುವುದು ಹಲವು ಸಲ.ಆದರೆ ಎಂದೂ ಅಶಿಸ್ತಿನ ತಂದೆ-ತಾಯಿಯ ಮಕ್ಕಳು ಅವರ
ಸಂಸಾರ ಮಾಡುವಾಗಲೂ ಬಾಧಿಸುವುದೇ ಇಲ್ಲ. ಮತ್ತೊಂದಿದೆ, ಅವರು ಹಾಗೇ ಬದುಕಿ ಸುಖಿಸುತ್ತಾರೆ. ನಮಗೆ ಅದರ ಗೊಡವೆ ಏಕೆ? ನಿಜ, ಅವರು ಬಂದಾಗ ಶಿಸ್ತೋ ಅಶಿಸ್ತೋ ನಡೆಯುತ್ತದೆ.

ನಾವುಹೋದಾಗ ಅಂತಹದ್ದನ್ನು ಹೊಂದಿಕೊಳ್ಳಲಾಗುವುದೇ ಇಲ್ಲವಲ್ಲ!. ಈಗ ಯೋಚಿಸುವದೆನೆಂದರೆ ಮಕ್ಕಳಿಗೆ ಪರಿಶುಧ್ಧ ಮತ್ತು ಶಿಸ್ತಿನ ಬದುಕನ್ನು ತಂದೆ ತಾಯಿಯರೇ ಕಲಿಸಲೇ ಬೇಕು..ಅಲ್ಲವಾದರೆ ಕೆಲವೆಡೆ ನಾವು ಮಗುವಿನ ತಂದೆ ತಾಯಿ ಹರಟುವಾಗ ಬಂದ ಮಗು ಮುಂದಿನ ಟೆಬಲ್ಲಿನಮೇಲೆ ನಮಗಭಿಮುಖವಾಗಿ ಕಾಲುಹಾಕಿ ಕುಳಿತು ಅವರz ಮೊಬಾಯ್ಲಿನಲ್ಲಿ ಹರಟಿ ನಮ್ಮ ಗುರುತಿಲ್ಲದಂತೆ ಹೇರಟು ಹೋಗುತ್ತಾರೆ.

ಮಕ್ಕಳಿಗೆ ಸಂಸ್ಕಾರ ಅಥವಾ ಫಾರ್ಮೇಲಿಟಿಯನ್ನು ಅವರ ಬಾಲ್ಯದ ಕಲಿಸಿ. ಲಗೋರಿ: ನನ್ನ ಮಗನದಾವದೋ ಸಣ್ಣ ಪ್ರಾಯದಲ್ಲಿ ನನಗಿದಿರಾಗಿ ಕಾಲನ್ನು ಟೆಬಲ್ಲಿನ ಮೇಲಿಟ್ಟು ಕುಳಿತಾಗ ನೆನಪಿರುವ ಹಾಗೆ ಬಡಿದಿದ್ದಿದೆ..ಆದರೆ ಈಗಲೂ ಬೇಸರಿಸದ ಅವನು ಹಲವಾರು ಶಿಷ್ಟಾಚಾರವನ್ನು ನನಗೆ ಹೆಳುವಷ್ಟು ತಿಳುವಳಿಕೆಯವನಾದುದು ಸಂತಸ.