Saturday, 14th December 2024

ಚನ್ನಪಟ್ಟಣದಲ್ಲಿ ಡಿಕೆಸು ವರ್ಸಸ್ ಅನಿತಕ್ಕ ?

ಮೂರ್ತಿಪೂಜೆ

ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಬಗ್ಗೆ ಅವರು ಪ್ರಸ್ತಾಪಿಸಿದರಂತೆ. ಅಂದ ಹಾಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ, ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಮತ್ತು ಬಳ್ಳಾರಿಯಿಂದ ಕಾಂಗ್ರೆಸ್ಸಿನ ತುಕಾರಾಂ ಗೆದ್ದು ಸಂಸತ್ತಿಗೆ ಹೋಗಿರುವುದರಿಂದ ಅನುಕ್ರಮವಾಗಿ ಅವರು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿದಾನಸಭಾ ಕ್ಷೇತ್ರಗಳಿಗೆ ಸಧ್ಯದ ಉಪಚುನಾವಣೆಗಳು ನಡೆಯಲಿವೆ.

ಹೀಗೆ ಚುನಾವಣೆಗಳು ನಡೆಯಲಿರುವ ಕ್ಷೇತ್ರಗಳ ಪೈಕಿ ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಬೇಕು ಎಂಬ ವಿಷಯದಲ್ಲಿ ಕುಮಾರಸ್ವಾಮಿ ಅವರ ಅಭ್ಯಂತರವೇನೂ ಇಲ್ಲ. ಯಾಕೆಂದರೆ ಹೇಳಿ ಕೇಳಿ ಅವು ಬಿಜೆಪಿಯ ಪವರ್ ಇರುವ ಕ್ಷೇತ್ರಗಳು. ಇದೇ ರೀತಿ ಚನ್ನಪಟ್ಟಣ ಜೆಡಿಎಸ್ ಪವರ್‌ಪುಲ್ ಆಗಿರುವ ಕ್ಷೇತ್ರ. ಆದರೆ ಸಮಸ್ಯೆ ಎಂದರೆ, ಜೆಡಿಎಸ್ ಪವರ್ ಫುಲ್ ಆಗಿದ್ದರೂ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಯಾಗಲು ಮಾಜಿ ಸಚಿವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಬಯಸುತ್ತಿದ್ದಾರೆ. ಬರೀ ಬಯಸುವುದಷ್ಟೇ ಅಲ್ಲ, ತಮ್ಮ ಬಯಕೆಯನ್ನು ನೇರವಾಗಿಯೇ ಕುಮಾರಸ್ವಾಮಿ ಬಳಿ ಹೇಳಿಕೊಂಡಿದ್ದಾರೆ.

ಹೀಗೆ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಲು ಸಿ.ಪಿ.ಯೋಗೇಶ್ವರ್ ಬಯಸುತ್ತಿದ್ದರೂ ಮತ್ತೊಂದು ಕಡೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಇದು ಇಷ್ಟವಿಲ್ಲ. ಹೀಗಾಗಿ ಅವರು ಕುಮಾರಸ್ವಾಮಿ ಅವರ
ಬಳಿ, ಹೇಳಿ ಕೇಳಿ ಚನ್ನಪಟ್ಟಣ ನಿಮ್ಮ ಕ್ಷೇತ್ರ. ಹೀಗಾಗಿ ನೀವು ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಬದಲು ನಿಮ್ಮ ಪಕ್ಷದವರನ್ನೇ ಕಣಕ್ಕಿಳಿಸಿ ಎಂದಿದ್ದಾರೆ. ಇಷ್ಟಾದರೂ ತಮಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಬೇಕು ಎಂದು ಯೋಗೇಶ್ವರ್ ಬಯಸುತ್ತಿರುವ ರೀತಿ ಕುಮಾರಸ್ವಾಮಿ ಅವರಲ್ಲಿ ಧರ್ಮಸಂಕಟ ಮೂಡಿಸಿದೆ. ಯಾಕೆಂದರೆ ಯೋಗೇಶ್ವರ್ ನೇರವಾಗಿಯೇ ಕುಮಾರಸ್ವಾಮಿ ಅವರ ಬಳಿ ಮಾತನಾಡಿ, ಚನ್ನಪಟ್ಟಣದ ಟಿಕೆಟ್ ನನಗೆ ಕೊಡಿಸಿ ಎಂದು ಮನವಿ ಮಾಡಿzರೆ. ಹೀಗಾಗಿ ಇತ್ತೀಚೆಗೆ ಅಮಿತ್ ಶಾ ಅವರು ದೆಹಲಿಯಲ್ಲಿ ಸಿಕ್ಕಾಗ ವಿಷಯವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ‘ಸಾರ್, ಉಪಚುನಾವಣೆಗಳ ವಿಷಯ ಹೀಗಿದೆ. ಒಮ್ಮೆ ನಿಮ್ಮ ಗಮನಕ್ಕೆ ತರೋಣ’ ಎಂದು ಹೇಳುತ್ತಿದ್ದೇನೆ ಎಂದರಂತೆ.

ಹೀಗೆ ಕುಮಾರಸ್ವಾಮಿ ಅವರು ಹೇಳಿದ್ದನ್ನು ಕೇಳಿದ ಅಮಿತ್ ಶಾ: ‘ನೋ,ನೋ, ಉಪಚುನಾವಣೆಗಳ ವಿಷಯದಲ್ಲಿ ಯಾವ ಮುಜುಗರವೂ ಬೇಡ,
ಯಾಕೆಂದರೆ ವಿಷಯ ಕ್ಲಿಯರ್ ಆಗಿದೆ. ಶಿಗ್ಗಾಂವಿ ಮತ್ತು ಸಂಡೂರು ನಮ್ಮ ಕ್ಷೇತ್ರಗಳು. ಹೀಗಾಗಿ ಅಲ್ಲಿ ನಮ್ಮವರು ಅಭ್ಯರ್ಥಿಗಳಾಗಲಿ, ಚನ್ನಪಟ್ಟಣ ನೀವು ಪ್ರತಿನಿಽಸುತ್ತಿದ್ದ ಕ್ಷೇತ್ರ. ಹೀಗಾಗಿ ಅಲ್ಲಿಂದ ನಿಮ್ಮವರೇ ಅಭ್ಯರ್ಥಿಯಾಗಲಿ’ ಎಂದು ನೇರವಾಗಿಯೇ ಹೇಳಿದ್ದಾರೆ.

ಹೀಗೆ ಉಪಚುನಾವಣೆಗಳ ವಿಷಯ ಕ್ಲಿಯರ್ ಆದ ಮೇಲೆ ಅಮಿತ್ ಶಾ ಮತ್ತೊಂದು ವಿಷಯಕ್ಕೆ ತಿರುಗಿಕೊಂಡಿದ್ದಾರೆ. ‘ದೇಖೋ ಕುಮಾರಸೋಮೀಜಿ. ಹಳೆ ಮೈಸೂರು ಭಾಗದಲ್ಲಿ ನಿಮ್ಮ ಪಕ್ಷವನ್ನು ಮತ್ತಷ್ಟು ಬಲಿಷ್ಟವಾಗಿ ಕಟ್ಟಿ. ಹೇಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟಕ್ಕಿರುವ ಶಕ್ತಿ
ಸಾಬೀತಾಗಿದೆ. ರಾಜ್ಯದ ನೂರಾ ನಲವತ್ತೆರಡು ಕ್ಷೇತ್ರಗಳಲ್ಲಿ ನಮಗೆ ಕಾಂಗ್ರೆಸ್ಸಿಗಿಂತ ಹೆಚ್ಚು ಮತಗಳು ಬಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ನುಗ್ಗಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿರಾಯಾಸವಾಗಿ ನಾವು ನೂರೈವತ್ತು ಸೀಟು ಗೆಲ್ಲುತ್ತೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮಿಂದ
ಯಾವ ನೆರವು ಬೇಕೋ ಕೇಳಿ. ಅದನ್ನು ಕೊಡಲು ನಾವು ರೆಡಿ.

ಒಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಪಕ್ಷದಿಂದ ೬೦ ಮಂದಿಯನ್ನು ಗೆಲ್ಲಿಸಿಕೊಂಡು ಬನ್ನಿ. ನಿಮ್ಮಿಂದ ಇದು ಸಾಧ್ಯವಾದರೆ ಅನುಮಾನವೇ ಬೇಡ, ನೀವು ಸಿಎಂ ಆಗುವುದು ಗ್ಯಾರಂಟಿ’ ಎಂದಿದ್ದಾರೆ. ಯಾವಾಗ ಅಮಿತ್ ಶಾ ಈ ಮಾತು ಹೇಳಿದರೋ? ನಂತರ ಕರ್ನಾಟಕಕ್ಕೆ ಬಂದ ಕುಮಾರಸ್ವಾಮಿ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿzರೆ. ಮತ್ತು ಈ ಸಭೆಯಲ್ಲಿ ಮಾತನಾಡುವಾಗ ಕರ್ನಾಟಕದ ನೂರು-ನೂರಾ ಹತ್ತು
ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಸಜ್ಜಾಗುವಂತೆ ನಾಯಕರಿಗೆ ರಣವೀಳ್ಯ ನೀಡಿದ್ದಾರೆ.

ಅಗರ್ವಾಲ್ ರವಾನಿಸಿದ ಆ ರಿಪೋರ್ಟು

ಈ ಮಧ್ಯೆ ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತಿರುವ ರಾಧಾಮೋಹನ ದಾಸ್ ಅಗರ್ವಾಲ್ ಪಕ್ಷದ ವರಿಷ್ಠರಿಗೆ ಮಹತ್ವದ ವರದಿಯೊಂದನ್ನು ರವಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳಿಗೆ ಒಳಮೀಸಲಾತಿ ಕೊಡಬೇಕು ಎಂಬ  ಅಸ್ತ್ರವನ್ನಿಟ್ಟುಕೊಂಡು ಹೋರಾಡಿದರೆ ಮೈತ್ರಿ ಕೂಟಕ್ಕೆ ಲಾಭವಾಗಲಿದೆ ಎಂಬುದು ಈ ವರದಿ. ಅಂದ ಹಾಗೆ ಇದಕ್ಕೆ ಪುಷ್ಟಿ ನೀಡಿರುವುದು ಲೋಕನೀತಿ-ಸಿಎಸ್ ಡಿಎಸ್ ಸರ್ವೇ ವರದಿ. ಅದರ ಪ್ರಕಾರ, ಮೊನ್ನೆಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಹತ್ತೊಂಬತ್ತು ಸ್ಥಾನಗಳನ್ನು ಗೆಲ್ಲಲು ಒಕ್ಕಲಿಗ, ಲಿಂಗಾಯತ ಸಮುದಾಯಗಳು ಮಾತ್ರವಲ್ಲ.

ಹಿಂದುಳಿದ ಸಮುದಾಯ ನೀಡಿದ ಬೆಂಬಲವೂ ಪ್ರಮುಖ ಕಾರಣ. ಸರ್ವೆಯ ಪ್ರಕಾರ, ಹಿಂದುಳಿದ ವರ್ಗಗಳ ಅರವತ್ತು ಪರ್ಸೆಂಟಿಗೂ ಹೆಚ್ಚು ಮತಗಳು
ಮೈತ್ರಿಕೂಟಕ್ಕೆ ಬಂದಿವೆ. ಇತ್ತೀಚಿನವರೆಗೆ ಕಾಂಗ್ರೆಸ್ ಪಕ್ಷದ ಪ್ರಮುಖ ಮತ ಬ್ಯಾಂಕ್ ಆಗಿದ್ದ ಹಿಂದುಳಿದ ವರ್ಗಗಳು ಕೈ ಪಾಳಯದಿಂದ ವಿಮುಖವಾಗಲು ಒಳ ಮೀಸಲಾತಿಯ ಬೇಡಿಕೆಯೇ ಮುಖ್ಯ ಕಾರಣ. ಹಿಂದುಳಿದ ವರ್ಗಗಳ ಮೀಸಲಾತಿಯ ಲಾಭ ಪ್ರಬಲ ಜಾತಿಗಳಿಗೆ ಆಗುತ್ತಿರುವುದರಿಂದ ಪಟ್ಟಿಯಲ್ಲಿರುವ ಇನ್ನೂರಕ್ಕೂ ಹೆಚ್ಚು ಜಾತಿಗಳು ತಲ್ಲಣಗೊಂಡಿವೆ. ಪರಿಣಾಮ? ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೈತ್ರಿಕೂಟದ ಕಡೆ ವಾಲಿಕೊಂಡಿವೆ.

ಈ ಸಮುದಾಯಗಳ ಪರವಾಗಿ ಧ್ವನಿ ಎತ್ತಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟ ದೊಡ್ಡ ಮಟ್ಟದ ಶಕ್ತಿ ಪಡೆಯಲಿದೆ. ಅಂದ ಹಾಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಿನಿಮಮ್ ೭೫ ಸಾವಿರದಷ್ಟಿರುವ ಹಿಂದುಳಿದವರು ಹಂಚಿ ಹೋಗಿzರೇನೋ ನಿಜ. ಆದರೆ ಒಟ್ಟು ಸೇರಿಸಿ ನೋಡಿದರೆ ಪವರ್-ಗಿದ್ದಾರೆ. ಹೀಗಾಗಿ ಇವರ ಒಳಮೀಸಲಾತಿಯ ಬೇಡಿಕೆಗೆ ಧ್ವನಿ ಕೊಟ್ಟರೆ ಮೈತ್ರಿಕೂಟದ ಬತ್ತಳಿಕೆಗೆ ಡೆಡ್ಲಿ ಅಸ್ತ್ರ ಸೇರಲಿದೆ ಎಂಬುದು ಅಗರ್ವಾಲ್ ಅವರ ವರದಿ.

ಚನ್ನಪಟ್ಟಣ:ಡಿಕೆಸು ವರ್ಸಸ್ ಅನಿತಕ್ಕ?

ಇನ್ನು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಕಣಕ್ಕೆ ಯಾರು ಇಳಿಯಲಿzರೆ ಎಂಬ ಚರ್ಚೆ ನಡೆಯುತ್ತಲೇ ಇದೆ. ಡಿಕೆಶಿ ಕ್ಯಾಂಪಿಗೆ ತಲುಪಿರುವ ಮಾಹಿತಿಯ ಪ್ರಕಾರ, ಮೈತ್ರಿಕೂಟದ ಕ್ಯಾಂಡಿಡೇಟ್ ಆಗಲು ಪ್ರಯತ್ನಿಸುತ್ತಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಬಿಜೆಪಿ ವರಿಷ್ಠರು ನೋ ಎಂದಿದ್ದಾರಂತೆ. ನಿಮ್ಮ ವಿಧಾನಪರಿಷತ್ ಸದಸ್ಯತ್ವದ ಅವಧಿ ಇನ್ನೂ ಎರಡು ವರ್ಷ ಬಾಕಿ ಇದೆ. ಹೀಗಿರುವಾಗ ನೀವು ರಾಜೀನಾಮೆ ನೀಡಿ ಮೈತ್ರಿಕೂಟದ ಕ್ಯಾಂಡಿಡೇಟ್ ಆದರೆ ಆ ಸೀಟು ಕಾಂಗ್ರೆಸ್‌ಗೆ ಹೋಗುತ್ತದೆ ಎಂಬುದು ವರಿಷ್ಠರ ಮಾತು.

ಅಲ್ಲಿಗೆ ಮೈತ್ರಿಕೂಟದ ವತಿಯಿಂದ ಜೆಡಿಎಸ್ ಕ್ಯಾಂಡಿಡೇಟ್ ಪಕ್ಕಾ. ಇದೇ ರೀತಿ ಇವತ್ತಿನ ಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸಿ ರಿಸ್ಕು ತೆಗೆದುಕೊಳ್ಳಲು ಕುಮಾರಸ್ವಾಮಿ ತಯಾರಿಲ್ಲ. ಹೀಗಾಗಿ ಅವರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಫೀಲ್ಡಿಗೆ ಇಳಿಸುತ್ತಾರೆ. ಹೀಗೆ ಫೀಲ್ಡಿಗಳಿಯು ವವರು ನಿಖಿಲ್ ಕುಮಾರಸ್ವಾಮಿ ಅದರೂ ಅಚ್ಚರಿಯಿಲ್ಲ. ಹಾಗಾದಾಗ ನಾವು ಪ್ರಬಲ ಕ್ಯಾಂಡಿಡೇಟನ್ನು ನಿಲ್ಲಿಸಲೇಬೇಕು ಎಂಬುದು ಡಿಕೆಶಿ ಕ್ಯಾಂಪಿನ ಮಾತು. ಆದರೆ ಜೆಡಿಎಸ್ ಕ್ಯಾಂಪಿನ ಪ್ರಕಾರ, ಕೈ ಪಾಳಯದ ಅಭ್ಯರ್ಥಿಯಾಗಿ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಸ್ಪಽಸುವುದು ಗ್ಯಾರಂಟಿ. ಹೀಗಾಗಿ ನಾವು ಬಲಿಷ್ಠರನ್ನು ಫೀಲ್ಡಿಗಳಿಸಬೇಕು.

ಆದರೆ ಅವರು ನಿಖಿಲ್ ಕುಮಾರಸ್ವಾಮಿ ಆಗಿರುವುದಿಲ್ಲ. ಜ್ಯೋತಿಷಿಗಳ ಪ್ರಕಾರ ನಿಖಿಲ್ ಅವರಿಗೆ ೨೦೨೭ ರವರೆಗೆ ಗುರು ಬಲವಿಲ್ಲ.ನಿಜ ಸಂಗತಿ ಎಂದರೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದ ಜ್ಯೋತಿಷಿಯೊಬ್ಬರು ಇದನ್ನು ಸ್ಪಷ್ಟವಾಗಿ ಹೇಳಿದ್ದರು. ಈ ಸಲ ನಿಖಿಲ್ ಸ್ಪರ್ಧಿಸಿದರೆ ಸೋಲುವುದು ಶತಸಿದ್ಧ ಎಂದಿದ್ದರು.ಅದು ಹಾಗೇ ಆಯಿತು. ಹೀಗಾಗಿ ಅವರು ಈ ಸಲ ಚನ್ನಪಟ್ಟಣದ ಕಣಕ್ಕಿಳಿಯುವುದಿಲ್ಲ. ಬದಲಿಗೆ ೨೦೨೮ ರಲ್ಲಿ ರಾಮನಗರದ ಕಣಕ್ಕಿಳಿಯುತ್ತಾರೆ. ಪರಿಣಾಮ? ಅಂತಿಮವಾಗಿ ಕಾಂಗ್ರೆಸ್ಸಿನ ಡಿ.ಕೆ.ಸುರೇಶ್ ಅವರ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದು ಅನಿವಾರ್ಯವಾಗಬಹುದು.

ಅಂದ ಹಾಗೆ ಉಪಚುನಾವಣೆಯ ಮಾತು ಶುರುವಾದಾಗ ಚನ್ನಪಟ್ಟಣದಿಂದ ಡಾ.ಮಂಜುನಾಥ್ ಅವರ ಪತ್ನಿ ಅನಸೂಯ ಅವರನ್ನು ಕಣಕ್ಕಿಳಿಸುವ ಯೋಚನೆ ಇತ್ತಾದರೂ ಈಗ ಆ ಯೋಚನೆಯನ್ನು ಕೈ ಬಿಡಲಾಗಿದೆ. ಅರ್ಥಾತ್, ಅನಸೂಯ ಮೇಡಂ ಮುಂದಿನ ವಿಧಾನಸಭಾ ಚುನಾವಣೆ ಯಲ್ಲಿ ಕನಕಪುರ ಕ್ಷೇತ್ರದ ಕಣಕ್ಕಿಳಿಯಲಿದ್ದಾರೆ.

ತ್ರಿಮೂರ್ತಿಗಳ ಪಡೆ ರೆಡಿಯಾಗಿದೆ
ಈ ಬಾರಿ ವಿಧಾನಮಂಡಲ ಅಧಿವೇಶನದಲ್ಲಿ ಸರಕಾರದ ವಿರುದ್ಧ ಹೋರಾಡುತ್ತಿರುವ ಬಿಜೆಪಿ ನಾಯಕರಿಗೆ ಒಂದು ವಿಷಯ ಪಕ್ಕಾ ಆಗಿದೆ. ಅದೆಂದರೆ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣವಿರಲಿ, ಮೂಡಾ ಹಗರಣವಿರಲಿ,  ಮತ್ತೊಂದಿರಲಿ. ಅಂದ ಹಾಗೆ ದಿಲ್ಲಿಯಿಂದ ಬರುವ ಡೈರೆಕ್ಷನ್ನುಗಳ ಹಿಂದೆ ತ್ರಿಮೂರ್ತಿಗಳಿದ್ದಾರಂತೆ. ಅವರೆಂದರೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್. ಈ ಬಾರಿಯ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಬೇಕು. ಅದು ದಲಿತ
ವಿರೋಧಿ ಎಂದು ರಾಷ್ಟ್ರ ಮಟ್ಟದಲ್ಲಿ ಪ್ರಚಾರವಾಗುವಂತೆ ನೋಡಿಕೊಳ್ಳಬೇಕು ಅಂತ ಡೈರೆಕ್ಷನ್ನು ಕೊಡುತ್ತಿರುವ ಈ ತ್ರಿಮೂರ್ತಿಗಳಿಗೆ ಮೊ ಒಂದು ಅನುಮಾನ ಶುರುವಾಯಿತಂತೆ. ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಮೂಡಾ ಹಗರಣದ ವಿಷಯದಲ್ಲಿ ನಮ್ಮವರು ಮೃದುವಾಗಬಹುದು. ಈ ಸಂದರ್ಭವನ್ನು ಬಳಸಿಕೊಂಡು ಅವಧಿಗೂ ಮುನ್ನ ಅಽವೇಶನ ಬರಕಾಸ್ತಾಗುವಂತೆ ಸರಕಾರ ಮಾಡಬಹುದು ಎಂಬುದು ಈ ಅನುಮಾನ.

ಹೀಗಾಗಿಯೇ ಶನಿವಾರ ರಾತ್ರಿ ರಾಜ್ಯದ ನಾಯಕರಿಗೆ ಸಂದೇಶ ರವಾನಿಸಿದ ತ್ರಿಮೂರ್ತಿಗಳ ಪಡೆ, ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ನಡೆಸಿ. ಒಂದು ವೇಳೆ ಸದನ ಕಲಾಪವನ್ನೇ ಅನಿರ್ದಿಷ್ಟಾವಽಯವರೆಗೆ ಮುಂದೂಡುವ ಕೆಲಸವಾದರೆ ಬೀದಿ ಹೋರಾಟಗಳಿಗೆ ಸಜ್ಜಾಗಿ ಎಂದಿದೆಯಂತೆ.