Thursday, 12th December 2024

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಿಕೆಸು ಲಗ್ಗೆ ?

ಮೂರ್ತಿಪೂಜೆ

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ರಾಜೀನಾಮೆ ನೀಡಲಿದ್ದಾರೆ ಎಂಬ ವರ್ತಮಾನದ ಬೆನ್ನ ಅವರ ಸಹೋದರ ಡಿ.ಕೆ.ಸುರೇಶ್ ಹೆಸರು ಫ್ರಂಟ್ ಲೈನಿಗೆ ಬಂದಿದೆ.  ಅಂದ ಹಾಗೆ ಕಳೆದ ವರ್ಷ ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಹುದ್ದೆಗೆ ಡಿ.ಕೆ.ಶಿವಕುಮಾರ್ ಅವರ ನೇಮಕವನ್ನು ಪ್ರಕಟಿಸಿದ್ದ ವರಿಷ್ಠರು, ಲೋಕಸಭಾ ಚುನಾವಣೆಯ ತನಕ ಡಿ.ಕೆ.ಶಿವಕುಮಾರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದಿದ್ದರು.

ಈಗ ಲೋಕಸಭಾ ಚುನಾವಣೆಯ ಫಲಿತಾಂಶ ಬರಲು ದಿನಗಣನೆ ಆರಂಭವಾಗುತ್ತಿದ್ದಂತೆಯೇ ಹೈಕಮಾಂಡ್ ವರಿಷ್ಠರಾಡಿದ್ದ ಮಾತು ಮುನ್ನೆಲೆಗೆ ಬಂದಿದೆ. ಅಷ್ಟೇ ಅಲ್ಲ ಡಿಕೆಶಿ ಕೆಳಗಿಳಿದರೆ ಆ ಜಾಗಕ್ಕೆ ಬರುವವರು ಯಾರು ಎಂಬ ಪ್ರಶ್ನೆ ಮೇಲೆದ್ದಿದೆ. ಹೀಗೆ ಡಿಕೆಶಿ ಜಾಗಕ್ಕೆ ಬರುವವರು ಯಾರು
ಎಂಬ ಪ್ರಶ್ನೆ ಕೇಳುತ್ತಿದ್ದಂತೆಯೇ ಖುದ್ದು ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರ ಹೆಸರು ಫ್ರಂಟ್ ಲೈನಿಗೆ ಬಂದಿದೆ. ಕುತೂಹಲದ ಸಂಗತಿ ಎಂದರೆ ಈ ರೀತಿ ಡಿ.ಕೆ.ಸುರೇಶ್ ಹೆಸರು ಮುಂಚೂಣಿಗೆ ಬರಲು ಡಿಕೆಶಿ ಅವರ ಲೆಕ್ಕಾಚಾರವೇ ಕಾರಣ ಎಂಬುದು ಕಾಂಗ್ರೆಸ್ ಮೂಲಗಳ ಹೇಳಿಕೆ.

ಅರ್ಥಾತ್, ತಾವು ತೆರವು ಮಾಡುವ ಜಾಗಕ್ಕೆ ತಮ್ಮ ಸಹೋದರ ಡಿ.ಕೆ.ಸುರೇಶ್ ಬಂದು ಕುಳಿತರೆ ಪಕ್ಷದ ಮೇಲೆ ತಮಗೆ ಹಿಡಿತ ಇರುತ್ತದೆ ಎಂಬುದು ಡಿಕೆಶಿ
ಯೋಚನೆ. ಹಾಗಂತಲೇ ಡಿ.ಕೆ.ಸುರೇಶ್ ಪರವಾಗಿ ಅಭಿಪ್ರಾಯ ಮೂಡಿಸಲು ಡಿಕೆಶಿ ವಿದ್ಯುಕ್ತ ಯತ್ನ ಆರಂಭಿಸಿದ್ದಾರೆ. ಸಚಿವರು ಮತ್ತು ಶಾಸಕರ ಮಟ್ಟದಲ್ಲಿ ಈಗಾಗಲೇ ಈ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ ಎಂಬುದು ಕೈ ಪಾಳಯದ ಮಾತು. ಅಂದ ಹಾಗೆ ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿಕೆಶಿ ಅದಕ್ಕೆ ಪವರ್ ತುಂಬಿzರೆ. ಸಂಘಟನೆಗೆ ಅವರು ಕೊಟ್ಟ ಟಾನಿಕ್ ವಿಧಾನಸಭೆ ಚುನಾವಣೆಯಲ್ಲಷ್ಟೇ ಅಲ್ಲ, ಈಗ ನಡೆದಿರುವ ಲೋಕಸಭಾ ಚುನಾವಣೆಯಲ್ಲೂ
ವರ್ಕ್ ಔಟ್ ಆಗಿ ಹದಿನೈದು ಕ್ಷೇತ್ರಗಳಲ್ಲಿ ಕೈಗೆ ಗೆಲುವು ದಕ್ಕಬಹುದು ಎಂಬ ಮಾತು ಕೇಳಿ ಬರುತ್ತಿದೆ.

ಹೀಗಿರುವಾಗ ತಾವು ಬಲಿಷ್ಟಗೊಳಿಸಿದ ಕೆಪಿಸಿಸಿಯ ಪಟ್ಟಕ್ಕೆ ಬೇರೊಬ್ಬರ ಬದಲು ತಮ್ಮ ಸಹೋದರ ಡಿ.ಕೆ.ಸುರೇಶ್ ಬಂದು ಕೂರಲಿ ಅಂತ ಡಿಕೆಶಿ ಬಯಸಿzರೆ. ಯಾವಾಗ ಅವರು ಡಿಕೆಸು ಹೆಸರು ಫ್ರಂಟ್ ಲೈನಿಗೆ ಬರುವಂತೆ ಮಾಡಿದರೋ? ಇದರ ಬೆನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ವಿದ್ಯುಕ್ತವಾಗಿ ರೇಸು ಆರಂಭವಾಗಿದ್ದು ಕೆಲ ನಾಯಕರ ಹೆಸರುಗಳು ರೇಸಿಗೆ ಬಂದು ನಿಂತಿವೆ. ಅಂದ ಹಾಗೆ ಪಕ್ಷದ ಅಧ್ಯಕ್ಷ ಸ್ಥಾನ ದಿಂದ ಡಿಕೆಶಿ ಇಳಿದರೆ ಅವರ ಜಾಗಕ್ಕೆ ಲಿಂಗಾಯತ ನಾಯಕರೊಬ್ಬರನ್ನು ತರಬೇಕು ಅಂತ ಸಿದ್ದರಾಮಯ್ಯ ಕ್ಯಾಂಪು ಯೋಚಿಸಿತ್ತೇನೋ ನಿಜ. ಆದರ ಪ್ರಕಾರ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರ ಹೆಸರು ಈ ಕ್ಯಾಂಪಿನ ಆಯ್ಕೆಯಾಗಿತ್ತು.

ಆದರೆ ಈ ವಿಷಯದಲ್ಲಿ ಸ್ವತಃ ಎಂ.ಬಿ.ಪಾಟೀಲರಿಗೆ ಆಸಕ್ತಿ ಇಲ್ಲ. ಇನ್ನು ಹಿರಿತನವನ್ನು ಮಾನದಂಡವಾಗಿಟ್ಟುಕೊಂಡು ಎಸ್.ಆರ್.ಪಾಟೀಲರ ಹೆಸರು ಪ್ರಸ್ತಾಪವಾಗಿದೆ ಯಾದರೂ ಅದಕ್ಕೆ ತುಂಬ ಬಲ ದೊರಕುತ್ತಿಲ್ಲ. ಇಷ್ಟೆಲ್ಲದರ ಮಧ್ಯೆ ದಲಿತ ನಾಯಕರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಹೆಸರು ಪ್ರಸ್ತಾಪವಾಗು ತ್ತಿದ್ದರೂ ಈ ಇಬ್ಬರು ನಾಯಕರಿಗೆ ಆಸಕ್ತಿ ಇಲ್ಲ. ಕಾರಣ? ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕರ್ನಾಟಕದಲ್ಲಿ ಹೆಚ್ಚುವರಿ ಡಿಸಿಎಂಗಳು ಬೇಕು ಎಂಬ ಕೂಗು ಶುರುವಾಗುತ್ತದೆ. ಈ ಕೂಗಿನ ಮಧ್ಯೆ ಹೇಗಾದರೂ ಮಾಡಿ ಡಿಸಿಎಂ ಹುದ್ದೆಯಲ್ಲಿ ಸೆಟ್ಲಾಗಬೇಕು ಎಂಬ ಯೋಚನೆ ಈ ನಾಯಕರಲ್ಲಿದೆ.

ಇಂತಹ ಹೊತ್ತಿನ ಪರಿಶಿಷ್ಟ ಪಂಗಡದ ಪವರ್ ಫುಲ್ ನಾಯಕ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಪಿಸಿಸಿ ಅಧ್ಯಕ್ಷ ನಾಗಲು ನಾನು ರೆಡಿ ಅಂತ ಮುಂದೆ ಬಂದಿದ್ದು, ಸಹಜವಾಗಿಯೇ ಸಿದ್ದರಾಮಯ್ಯ ಕ್ಯಾಂಪು ಅವರ ಬೆನ್ನಿಗೆ ನಿಲ್ಲುವುದು ಖಚಿತವಾಗಿದೆ. ಅಂದ ಹಾಗೆ ಸರಕಾರ ಅಸ್ತಿತ್ವಕ್ಕೆ ಬಂದ ಕಾಲದಿಂದಲೂ ಸಿದ್ದರಾಮಯ್ಯ ಕ್ಯಾಂಪಿನ ಪ್ರಮುಖ ಶಕ್ತಿಯಾಗಿರುವ ರಾಜಣ್ಣ, ಟೈಮು ಟೈಮಿಗೆ ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದ್ದಾರೆ. ಈ ಅವಧಿ ಮುಗಿಯುವವರೆಗೂ ಸಿದ್ದರಾಮಯ್ಯ ಅವರೇ ಸಿಎಂ, ಅವರು ಕೆಳಗಿಳಿಯುವ ಮಾತೇ ಇಲ್ಲ ಅಂತ ಖಡಕ್ಕಾಗಿ ಹೇಳಿ ವರಿಷ್ಠರೇ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಅಷ್ಟೇ ಅಲ್ಲ, ಪಕ್ಷ ಸಂಘಟನೆಗಾಗಿ ಹೆಚ್ಚುವರಿ ಡಿಸಿಎಂಗಳು ಬೇಕು ಅಂತ ಹೇಳಿ ಸಿದ್ದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ಇವತ್ತು ಕರ್ನಾಟಕದ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತೇ ಅಂತಿಮ. ಹೀಗಾಗಿ ಸಧ್ಯದ ದೆಹಲಿ ಯಾತ್ರೆ ಮಾಡಲಿರುವ ರಾಜಣ್ಣ, ಯಾವ ಕಾರಣಕ್ಕಾಗಿ ತಮ್ಮನ್ನು ಕೆಪಿಸಿಸಿಯ ಪಟ್ಟಕ್ಕೆ ತರಬೇಕು ಅಂತ ವಿವರಿಸಲಿದ್ದಾರಂತೆ.

ರಾಜೇಶ್ ಎತ್ತಂಗಡಿ ರಹಸ್ಯ

ಈ ಮಧ್ಯೆ ರಾಜ್ಯ ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಅವರನ್ನು ಆರೆಸ್ಸೆಸ್ ವಾಪಸ್ಸು ಕರೆಸಿಕೊಂಡಿದೆ. ಅಂದ ಹಾಗೆ ಪ್ರಚಾರಕರೊಬ್ಬರನ್ನು ರಾಜ್ಯ ಬಿಜೆಪಿಗೆ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಕಳಿಸುವುದು ಆರೆಸ್ಸೆಸ್ ಸಂಪ್ರದಾಯ. ಅದರನು ಸಾರ ಬಂದಿದ್ದ ರಾಜೇಶ್ ಪಕ್ಷದ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸುವುದಕ್ಕಿಂತ ಯಡಿಯೂರಪ್ಪ ಕ್ಯಾಂಪಿಗೆ ಹತ್ತಿರವಾಗಿದ್ದರಂತೆ. ವಿಜಯೇಂದ್ರ ರಾಜ್ಯ ಬಿಜೆಪಿಯ ಅಧ್ಯಕ್ಷರಾದ ಮೇಲೆ ಪಕ್ಷದ ಪದಾಧಿಕಾರಿಗಳು ಮತ್ತು ಜಿಧ್ಯಕ್ಷರ ಪಟ್ಟಿ ಬಿಡುಗಡೆ ಆಯಿತಲ್ಲ? ಈ ಪಟ್ಟಿ ಬಿಜೆಪಿ ಪಟ್ಟಿಯಲ್ಲ, ಕೆಜೆಪಿ-೨ ಪಟ್ಟಿ ಅಂತ ಯಡಿಯೂರಪ್ಪ ವಿರೋಽ ಬಣ ಹುಯಿಲೆಬ್ಬಿಸಿತ್ತು.

ಆದರೆ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಅವರು ಇದಕ್ಕೆ ಕ್ಯಾರೇ ಅನ್ನಲಿಲ್ಲ. ಬದಲಿಗೆ ವಿಜಯೇಂದ್ರ ಏನೇ ಹೆಜ್ಜೆ ಇಡಲಿ, ಅದನ್ನು ಒಪ್ಪಿಕೊಳ್ಳುತ್ತಿದ್ದರು. ಹೀಗಾಗಿ ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಆರೆಸ್ಸೆಸ್‌ನ ಅಖಿಲ ಭಾರತ ಪ್ರತಿನಿಧಿ ಸಭೆಯ ಸಂದರ್ಭದಲ್ಲಿ ರಾಜೇಶ್ ಅವರ ಬಗ್ಗೆ
ಅಸಮಾಧಾನ ವ್ಯಕ್ತವಾಗಿತ್ತಂತೆ. ಇವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ನಿಯಂತ್ರಿಸಿ ಪಕ್ಷದ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸುವ ಬದಲು ಅವರ ಜತೆಗೇ ಹೊಂದಿಕೊಂಡಿದ್ದಾರೆ.

ಹೀಗಾಗಿ ಅವರನ್ನು ಕರ್ನಾಟಕ ಬಿಜೆಪಿಯಿಂದ ವಾಪಸ್ ಕರೆಸಿಕೊಳ್ಳಿ ಅಂತ ಆರೆಸ್ಸೆಸ್ ಪ್ರಮುಖರ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಲೋಕಸಭಾ ಚುನಾವಣೆಗಳು ಘೋಷಣೆಯಾಗಿದ್ದರಿಂದ ಮತ್ತು ಏಪ್ರಿಲ್ ೨೬ ಹಾಗೂ ಮೇ ೭ ರಂದು ಕರ್ನಾಟಕದಲ್ಲಿ ಮತದಾನ ನಡೆಯುವುದರಿಂದ,
ನಂತರವೇ ಈ ಪ್ರೊಸೆಸ್ಸು ಮುಗಿಯಲಿ ಅಂತ ಆರೆಸ್ಸೆಸ್ ಪ್ರಮುಖರು ಹೇಳಿದ್ದರಂತೆ. ಪರಿಣಾಮ? ರಾಜೇಶ್ ಅವರನ್ನು ಆರೆಸ್ಸೆಸ್ ವಾಪಸ್ಸು ಕರೆಸಿಕೊಂಡಿದೆ. ಸಹಜವಾಗಿ ಈ ಬೆಳವಣಿಗೆ ಯಡಿಯೂರಪ್ಪ ಅವರ ಕ್ಯಾಂಪಿಗೆ ಬೇಸರ ತಂದಿದ್ದರೆ, ಯಡಿಯೂರಪ್ಪ ವಿರೋಧಿ ಕ್ಯಾಂಪಿಗೆ ಹರ್ಷ ತಂದಿದೆ.

ಬಿಜೆಪಿ ಪಟ್ಟಿಯ ಗತಿ ಏನು?

ಅಂದ ಹಾಗೆ ತಮ್ಮನ್ನು ವಾಪಸ್ಸು ಕರೆಸಿಕೊಳ್ಳುವ ಕೆಲವೇ ಕ್ಷಣಗಳ ಹಿಂದೆ ರಾಜೇಶ್ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಜತೆಗೂಡಿ ಒಂದು ಪಟ್ಟಿ ತಯಾರಿಸಿದ್ದರು. ಜೂನ್ ೬ ರಂದು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಯಾರು ಪಕ್ಷದ  ಅಭ್ಯರ್ಥಿಗಳಾಬೇಕು ಅಂತ ಹೈಕಮಾಂಡ್‌ಗೆ ಶಿಫಾರಸು ಮಾಡಲು ರಚನೆಯಾದ ಪಟ್ಟಿ ಅದು. ಈ ಪಟ್ಟಿಯಲ್ಲಿ ರವಿಕುಮಾರ್, ಮಾರುತಿರಾವ್ ಮುಳೆ, ಮಂಜುಳಾ,ಎಂ. ರಾಜೇಂದ್ರ ಸೇರಿದಂತೆ ಹದಿನೈದು ಮಂದಿಯ ಹೆಸರುಗಳಿದ್ದವು.

ಈಗ ರಾಜೇಶ್ ಅವರನ್ನು ಆರೆಸ್ಸೆಸ್ ಹಿಂದೆ ಕರೆಸಿಕೊಂಡಿರುವುದರಿಂದ ಸದರಿ ಪಟ್ಟಿಯ ಗತಿಯೇನು? ಎಂಬ ಕುತೂಹಲ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದೆ. ಅಂದ ಹಾಗೆ ಬಿಜೆಪಿಯಿಂದ ಮೂರು ಮಂದಿ ಗೆಲ್ಲುವುದು ನಿಚ್ಚಳವಾದ್ದರಿಂದ ಯಾರು ಪಕ್ಷದ ಅಭ್ಯರ್ಥಿಗಳಾಗಬೇಕು ಎಂಬುದನ್ನು ನಿರ್ಧರಿಸಲು ಕಳೆದ ಬುಧವಾರ ಮಶ್ವರದ ಜಗನ್ನಾಥಭವನದಲ್ಲಿ ಕೋರ್ ಕಮಿಟಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ
ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಸಿ.ಟಿ.ರವಿ ಅವರು ತಾವೇ ಅಭ್ಯರ್ಥಿಗಳಾಗುವ ಇಚ್ಚೆ ವ್ಯಕ್ತಪಡಿಸಿದ್ದರಂತೆ.

ಮೂಲಗಳ ಪ್ರಕಾರ, ಪರಿಷತ್ತಿಗೆ ಹೋಗಿ ಪ್ರತಿಪಕ್ಷ ನಾಯಕರಾಗುವ ಆಸೆ ಈ ಇಬ್ಬರಿಗೂ ಇದೆ. ಇದೇ ರೀತಿ ನಿರ್ಮಲ್ ಕುಮಾರ್ ಸುರಾನಾ, ರವಿಕುಮಾರ್, ಚಿತ್ರ ನಟಿಯರಾದ ತಾರಾ, ಶೃತಿ ಸೇರಿದಂತೆ ಹಲವರು ಟಿಕೆಟ್ಟಿಗಾಗಿ ಬೇಡಿಕೆ ಇಟ್ಟಿದ್ದರು. ಹೀಗೆ ಟಿಕೆಟ್ಟಿಗಾಗಿ ಶುರುವಾದ ಪೈಪೋಟಿಯನ್ನು ಕಂಡ ವಿಜಯೇಂದ್ರ ಮತ್ತು ರಾಜೇಶ್ ಅವರು ಯಾರು ಅಭ್ಯರ್ಥಿಗಳಾಬೇಕು ಅಂತ ಶಿ-ರಸು ಮಾಡುವ ಜವಾಬ್ದಾರಿಯನ್ನು ತಾವೇ ಪಡೆದಿದ್ದಾರೆ. ಅಷ್ಟೇ ಅಲ್ಲ, ಇಬ್ಬರೇ ಕುಳಿತು ಹದಿನೈದು ಮಂದಿಯ ಪಟ್ಟಿ ತಯಾರಿಸಿ ಬಿಜೆಪಿ ಹೈಕಮಾಂಡ್‌ಗೆ ಕಳಿಸಿಕೊಟ್ಟಿದ್ದಾರೆ.

ಆದರೆ ಒಂದು ಕಡೆಯಿಂದ ಈ ಪಟ್ಟಿ ದಿಲ್ಲಿಗೆ ರವಾನೆಯಾಗುತ್ತಿದ್ದಂತೆಯೇ ಮತ್ತೊಂದು ಕಡೆಯಿಂದ ಕರ್ನಾಟಕ ಬಿಜೆಪಿಯಿಂದ ರಾಜೇಶ್ ಅವರನ್ನು ವಾಪಸ್ಸು ಕರೆಸಿಕೊಳ್ಳುವ ಆರೆಸ್ಸೆಸ್ ನಿರ್ಧಾರ ಹೊರಬಿದ್ದಿದೆ. ಪರಿಣಾಮ? ವಿಜಯೇಂದ್ರ ಅವರ ಜತೆಗೂಡಿ ರಾಜೇಶ್ ಅವರು ರೆಡಿ ಮಾಡಿದ್ದ ಶಿಫಾರಸು ಪಟ್ಟಿಯ ಕತೆ ಏನಾಗಲಿದೆ?ಎಂಬ ಕುತೂಹಲ ಕಾಣಿಸಿಕೊಂಡಿದೆ. ಕೈ ಪಾಳಯಕ್ಕೆ ತಲೆನೋವು ಇನ್ನು ಪರಿಷತ್ ಚುನಾವಣೆಯ ಟಿಕೆಟ್ ಹಂಚಿಕೆ ವಿಷಯ
ಕೈ ಪಾಳಯಕ್ಕೆ ತಲೆನೋವಾಗಿ ಪರಿಣಮಿಸಿದೆ. ಚುನಾವಣೆ ನಡೆಯುವ ಹನ್ನೊಂದು ಸ್ಥಾನಗಳ ಪೈಕಿ ಏಳು ಸ್ಥಾನಗಳನ್ನು ಗೆಲ್ಲುವ ಶಕ್ತಿ ಕಾಂಗ್ರೆಸ್ಸಿಗೆ ಇದೆಯಾದರೂ, ಆಕಾಂಕ್ಷಿಗಳ ಸಂಖ್ಯೆ ನೂರರ ಗಡಿ ತಲುಪಿದೆ. ಈಗಿನ ವರ್ತಮಾನದ ಪ್ರಕಾರ, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ, ಸಚಿವರಾದ ಭೋಸರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ವಿನಯ್ ಕಾರ್ತಿಕ್ ಅವರಿಗೆ ಟಿಕೇಟು ಸಿಗುವುದು ಬಹುತೇಕ ಪಕ್ಕಾ. ಯಾಕೆಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಂದೆಗಾಗಿ ಯತೀಂದ್ರ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ್ದರು.

ಈ ತ್ಯಾಗಕ್ಕೆ ಪ್ರತಿಯಾಗಿ ನಿಮ್ಮನ್ನು ಎಮ್ಮೆಲ್ಸಿ ಮಾಡುತ್ತೇವೆ ಅಂತ ವರಿಷ್ಠರು ಹೇಳಿದ್ದರು. ಇನ್ನು ಭೋಸರಾಜು ಹೇಳಿಕೇಳಿ ರಾಹುಲ್ ಗಾಂಧಿಯವರ  ಪರ್ಸನಲ್ ಕ್ಯಾಂಡಿಡೇಟು. ಈ ಮಧ್ಯೆ ವಿನಯ್ ಕಾರ್ತಿಕ್ ಅವರನ್ನು ಈ ಸಲ ಪರಿಷತ್ತಿಗೆ ಕಳಿಸಲೇಬೇಕು ಅಂತ ಉಪಮುಖ್ಯಮಂತ್ರಿ ಡಿಕೆಶಿ ಪಟ್ಟು ಹಿಡಿದಿದ್ದಾರೆ. ಪಕ್ಷ ಎದುರಿಸಿರುವ ಚುನಾವಣೆಗಳಿಗಾಗಿ ವಿನಯ್ ಕಾರ್ತಿಕ್ ಹಗಲಿರುಳು ಕೆಲಸ ಮಾಡಿದ್ದಾರೆ. ಹೀಗಾಗಿ ಈ ಸಲ ಅವರಿಗೆ ಅವಕಾಶ ಕೊಡದಿದ್ದರೆ ಇನ್ಯಾವಾಗ? ಅಂತ ಡಿಕೆಶಿ ಕೇಳಿzರಂತೆ. ಇನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಬೆನ್ನಿಗೆ ನಿಂತಿದ್ದರೆ, ಸಚಿವ ಜಮೀರ್ ಅಹ್ಮದ್ ಅವರು ಹುಬ್ಬಳ್ಳಿಯ ಇಸ್ಮಾಯಿಲ್ ತಾಮಟ್‌ಗರ್ ಅವರಿಗೆ ಟಿಕೆಟ್ ಕೊಡಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಮೊನ್ನೆ ಕೆಲ ಮುಸ್ಲಿಂ ಶಾಸಕರ ಜತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಜಮೀರ್ ಅಹ್ಮದ್, ‘ನಾವು ಸಾಬ್ರು ಕಾಂಗ್ರೆಸ್ಸಿಗೆ ಹಂಡ್ರೆಡ್ ಪರ್ಸೆಂಟು ವೋಟ್ ಮಾಡ್ತಿದೀವಿ. ಹೀಗಾಗಿ ಈಗ ನಮಗೆ ಕನಿಷ್ಟ ಎರಡು ಸೀಟುಗಳನ್ನಾದರೂ ಕೊಡಿ’ ಎಂದು ಬೇಡಿಕೆ ಇಟ್ಟರಂತೆ. ಆದರೆ ಅವರ ಮನವಿ ಕೇಳಿದ ಸಿದ್ದರಾಮಯ್ಯ, ನನಗೇನೋ ಕೊಡಬೇಕು ಅಂತ್ಲೇ ಇದೆ ಜಮೀರ್. ಆದರೆ ಪರಿಸ್ಥಿತಿ ಹೇಗಿದೆಯೋ ನೋಡ್ಬೇಕು ಎಂದಿದ್ದಾರೆ. ಉಳಿದಂತೆ ಲಿಂಗಾಯತ ಮತ್ತು ಎಸ್.ಟಿ ಸಮುದಾಯಗಳಿಗೆ, ಮಹಿಳೆಯರಿಗೆ ಟಿಕೆಟ್ ನೀಡುವ ಅನಿವಾರ್ಯತೆ ಇದ್ದೇ ಇದೆ. ಆದರೆ ಇದನ್ನೆಲ್ಲ ಸರಿದೂ ಗಿಸುವುದು ಹೇಗೆ ಎಂಬ ದಾರಿ ಮಾತ್ರ ಯಾರಿಗೂ ಹೊಳೆಯುತ್ತಿಲ್ಲ. ಹೀಗಾಗಿ ದಿಲ್ಲಿಗೆ ಹೋಗಿ ವರಿಷ್ಠರ ಮುಂದೆ ಪಟ್ಟಿ ಫೈನಲೈಸ್ ಮಾಡಿಕೊಂಡು
ಬರಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ.