Thursday, 12th December 2024

ಉಳಿದವರು ಕಂಡಂತೆ: ಕುಗ್ಗಿನಿಲ್ಲಬೇಡಿ ಮುನ್ನುಗ್ಗಿ

ಪರಿಶ್ರಮ 

ಪ್ರದೀಪ್ ಈಶ್ವರ‍್

parishramamd@gmail.com

ನಿಮ್ಮ ಯಶಸ್ಸಿಗೆ ನೀವೇ ಕಾರಣ ಕರ್ತರು. ಭವಿಷ್ಯದ ಬಗ್ಗೆ ಸ್ಪಷ್ಟತೆ ಇರಲಿ ನಡೆಯುವ ಹಾದಿಯ ಬಗ್ಗೆ ಸ್ಪಷ್ಟತೆ ಇರಲಿ, ಒಂದಲ್ಲ ಒಂದು ದಿನ ಗೆದ್ದೇಗೆಲ್ಲುತ್ತೆನೆಂಬ
ಧೈರ್ಯವಿರಲಿ ನೀವು ಸೋತ ತಕ್ಷಣ ಸೋತು ಬಿಟ್ಟೆ ಎಂದು ಹೆದರಬೇಡಿ. ಜೀವನದಲ್ಲಿ ಎಷ್ಟೇ ಸಂಕಷ್ಟಗಳು ಬರಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆ ಇರಲಿ.

ಅಭಿಪ್ರಾಯ ಭಿನ್ನಾಭಿಪ್ರಾಯಗಳು, ಹೊಗಳಿಕೆ – ತೆಗಳಿಕೆಗಳು, ಗೆಲುವು-ಸೋಲು, ಆಕಾಶಕ್ಕೆ ಎತ್ತಿಬಿಡುವ ಅಭಿಮಾನ, ಪಾತಾಳಕ್ಕೆ ತಳ್ಳಿಬಿಡುವ ಅವಮಾನ, ಸಂಪಾದನೆ ಚೆಂದವಿದ್ದಾಗ ಸನಿಹಕ್ಕೆ ಬರುವ ಸಂಬಂಧಿಕರು, ಆರ್ಥಿಕವಾಗಿ ಕುಸಿದು ಹೋದಾಗ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುವವರು, ಸಂತೋಷ ದಸಂಭ್ರಮದ ಕ್ಷಣಗಳಲ್ಲಿ ಜತೆಯಾಗುವ ಸ್ನೇಹಿತರು, ಕಷ್ಟಕ್ಕೆ ಸಿಲುಕಿ ನಲುಗಿಹೋದಾಗ ಯಾರೂ ಇಲ್ಲವೇನೋ ಎಂಬಂತೆ ಕಾಡುವ ಅನಾಥ ಕ್ಷಣ ಗಳು, ಬದುಕಿನ ಪಯಣದಲ್ಲಿ ಎಲ್ಲವನ್ನು ಮಾಡಬೇಕಾಗುತ್ತದೆ.

ಇಷ್ಟವಿದ್ದರು ಇಲ್ಲದಿದ್ದರೂ ಸಹಿಸಿಕೊಳ್ಳಬೇಕಾಗುತ್ತದೆ. ಬದುಕೆಂದರೆ ನಿಲ್ಲುವ ನಿಲ್ದಾಣವಲ್ಲ, ನಿರಂತರವಾಗಿ ಸಾಗುವಪಯಣ. ಏನಾದರೂ ಅದ್ಭುತವಾದದ್ದನ್ನು ಸಾಧಿಸಲು ಹೊರಟವರು ಸಾಮಾನ್ಯವಾಗಿ ಮಾಡಿಕೊಳ್ಳುವ ಎಡವಟ್ಟೇ ನೆಂದರೆ ಅವರೇನು ಅಂದುಕೊಳ್ತಾರೆ, ಇವರೇನು ಅಂದುಕೊಳ್ತಾರೆ ಎಂಬ ಅಭಿಪ್ರಾಯ ಗಳಿಗೆ ಕಿವಿಕೊಟ್ಟು ಯಶಸ್ಸಿನ ಘರ್ಜನೆಯನ್ನು ಕಳೆದುಕೊಳ್ಳುತ್ತಾರೆ.

ನೆನಪಿರಲಿ, ಸಾಧಿಸಲು ಹೊರಟಾಗ ಕಿವಿಮುಚ್ಚಿಕೊಳ್ಳಬೇಕು, ಸಾಧಿಸಿದ ನಂತರಬಾಯಿ ಮುಚ್ಚಿಕೊಳ್ಳಬೇಕು. ಸಾಧನೆಯ ಹಾದಿಯಲ್ಲಿರುವ ಯಾರೇ ಆಗಲಿ ಗೆಲುವಿನ ಅಆಇಈ ತಿಳಿದಿರಬೇಕು. ಕಷ್ಟಗಳ ತೀವ್ರತೆ, ತಟ್ಟು ಕೊಳ್ಳುವ ಸಾಮರ್ಥ್ಯ ಪ್ರತಿಯೊಬ್ಬರ ಬದುಕಿನಲ್ಲೂ ವಿಭಿನ್ನವಾಗಿರುತ್ತದೆ. ಅಪ್ಪ ಬೈದರು ಅಂತ ಕಣ್ಣೀರು ಹಾಕುವ ಕಾಲೇಜಿನ ಹುಡುಗಿಗೆ ಕೆಲಸಕ್ಕೆ ಸೇರಿದಾಗ ಬಾಸ್ ಕೊಡುವ ಕಾಟ ನೆನಪಿಗೆ ಬರೋದೇ ಇಲ್ಲ. ಸರಿ ಯಾಗಿ ಓದು ಎಂದು ಪದೇಪದೇ ಹೇಳುವ ಅಮ್ಮನ ಮಾತಿಗೆ ಮುನಿಸಿಕೊಳ್ಳುವ ಪ್ರಾಯದ ಹುಡುಗನಿಗೆ ಮುಂದೆ ಎದುರಾಗುವ ದರಿದ್ರ ದಿನಗಳು ನೆನಪೇ ಆಗುವುದಿಲ್ಲ.

ಬರೆದ ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದರೆ ಹೈಸ್ಕೂಲ್ ವಿದ್ಯಾರ್ಥಿಗೆ ಅದೇ ದೊಡ್ಡಕಷ್ಟ. ಇಷ್ಟಪಟ್ಟ ಹುಡುಗ ಸರಿಯಾದ ಸಮಯದಲ್ಲಿ ಫೋನ್ ಮಾಡಲಿಲ್ಲ
ಅಂದರೆ ಅದೇ ದೊಡ್ಡಕಷ್ಟ. ವಯಸ್ಸಿನ ಹುಡುಗನಿಗೆ ಆಸೆಪಟ್ಟ ಹುಡುಗಿ ಮತ್ತೊಬ್ಬರೊಂದಿಗೆ ನಗುತ್ತಾ ಮಾತನಾಡಿದರೆ ಅದೇ ದೊಡ್ಡಕಷ್ಟ. ಬರುವ ಹಬ್ಬಕ್ಕೆ
ಗಂಡಬಟ್ಟೆ ಕೊಡಿಸಲಿಲ್ಲ ಅಂದರೆ ಮಧ್ಯಮ ವರ್ಗದ ಗೃಹಿಣಿಗೆ ಅದೇ ದೊಡ್ಡ ಕಷ್ಟ. ಕಷ್ಟ, ಕಷ್ಟ,ಕಷ್ಟ. ಕೆಲವು ಕಷ್ಟಗಳು ಅವೇ ಬರುತ್ತವೆ. ಕೆಲವು ಕಷ್ಟಗಳು ನಾವೇ
ಸೃಷ್ಟಿಮಾಡಿಕೊಳ್ತೇವೆ.

ಅಂಕಗಳು ಕಡಿಮೆ ಬಂತು ಎಂದು ನರುಳುವ ಹುಡುಗನಿಗೆ ಬುದ್ಧಿಮಾಂಧ್ಯ ಹುಡುಗರ ಬದುಕನ್ನ ತೋರಿಸಿ. ಇಷ್ಟಪಟ್ಟ ಹುಡುಗ ಸರಿಯಾದ ಸಮಯಕ್ಕೆ ಫೋನ್ ಮಾಡಲಿಲ್ಲ ಅಂತ ಬೇಸರ ಪಡುವ ಹುಡುಗಿಗೆ, ಅಪ್ಪಾ – ಅಮ್ಮನಿಲ್ಲದೇ ತಿನ್ನಲು ಗತಿಯಿಲ್ಲದೆ ಮನೆಯ ಮೂಲೆಯಲ್ಲಿ ಕೂತು ಕಣ್ಣೀರಾಕುವ ಹುಡುಗಿಯ
ನೋವನ್ನು ತೋರಿಸಿ. ಆಸೆಪಟ್ಟ ಹುಡುಗಿ ಬೇರೆಯವ ರೊಂದಿಗೆ ನಗುತ್ತಾ ಮಾತನಾಡ್ತಾಳೆ ಅಂತ ಬೇಸರ ಪಡುವ ಹುಡುಗರಿಗೆ, ಪ್ರೀತಿಸಿದ ಹುಡುಗಿಸಿಗಲಿಲ್ಲ ಅಂತ ಬದುಕನ್ನೇ ನಾಶಮಾಡಿಕೊಂಡು ನರಳುತ್ತಿರುವ ಜೀವಗಳ ಕಷ್ಟತೋರಿಸಿ.

ಕಷ್ಟ ಇರೋದೇ ಬರೋದಿಕ್ಕೆ. ಬರಲಿಬಿಡಿ. ಎಷ್ಟೇ ಕಷ್ಟಬರಲಿ ಹೆದರಬೇಡಿ, ಧೈರ್ಯವಾಗಿರಿ. ಧೈರ್ಯ ವಂತನ ಮುಂದೆ ಯಾವ ಕಷ್ಟವು ನಿಲ್ಲುವುದಿಲ್ಲ. ಏಕೆಂದರೆ
ಕೊನೆಗೆ ಗೆಲ್ಲುವುದೇ ಒಳ್ಳೆತನ. ಆಸ್ಟ್ರೇಲಿಯಾ ದೇಶದ ಸಿಡ್ನಿಯಿಂದ ಮೇಲ್ಬರ್ನ್‌ಗೆ ಸುಮಾರು 400 ಕಿ. ಮೀದೂರ. ಸಿಡ್ನಿಯಿಂದ ಮೇಲ್ಬರ್ನ್ ನ 400 ಕಿ. ಮೀ ದೂರಕ್ಕೆ ಒಂದು ಮ್ಯಾರಾಥಾನ್ ಸರ್ಧೆ ಏರ್ಪಾಡಾಗಿರುತ್ತದೆ.

ಇಪ್ಪತ್ತು, ಇಪ್ಪತೈದು, ಮೂವತ್ತು, ವರ್ಷದ ಯುವಕರೆ ಓಡಿಬಂದು ಮ್ಯಾರಥಾನ್‌ನಲ್ಲಿ ಸ್ಪರ್ಧಿಸುತ್ತಾರೆ. ಇನ್ನೇನು 5 ನಿಮಿಷಗಳಲ್ಲಿ ಮ್ಯಾರಥಾನ್‌ಗೆ ಚಾಲನೆ
ಕೊಡಬೇಕು. ಅನ್ನುವಷ್ಟರಲ್ಲಿ ಕ್ಲಿಮ್ಜಂಗ್ ಅಂತ ಒಬ್ಬ 61 ವರ್ಷದ ರೈತ, ಆಲೂಗಡ್ಡೆ ಬೆಳೆಗಾರ, ಕುರಿ ಮೇಯಿಸುವವನು ಬಂದು ಮ್ಯಾರಥಾನ್‌ನಲ್ಲಿ ಸಽಸುತ್ತೀನಿ
ಅಂತಾನೆ. ಎಲ್ಲರೂ ನಗುತ್ತಾರೆ. ಯೋ 400 ಕಿ.ಮೀ. ಓಟ ನಿನ್ನ ಕೈಯಿಂದ ಆಗುತ್ತಾ ಎಂಬ ಪ್ರಶ್ನೆ ಎಲ್ಲರೂ ಕೇಳಿದಾಗ, ಆವಾಗ ಕ್ಲಿಮ್ ಜಾಂಗ್ ಹೇಳ್ತಾನೆ ಇಲ್ಲ ಇಲ್ಲ ನಾನು ಸಽಸುತ್ತೀನಿ ಅಂತ. ಸರಿ ಎಲ್ಲರು ಓಡಕ್ಕೆ ಪ್ರಾರಂಭಿಸುತ್ತಾರೆ.

ಮ್ಯಾರಥಾನ್ ಪ್ರಾರಂಭವಾಗುತ್ತದೆ. ಆಟ ಶುರುವಾಗುತ್ತದೆ. ಓಟಕ್ಕೆ ಚಾಲನೆ ಸಿಗುತ್ತೆ. ಈತನೂ ಓಡಲು ಪ್ರಾರಂಭಿಸುತ್ತಾನೆ. ನಿರಂತರವಾಗಿ ನೂರಾರು ಮಂದಿ
ಓಡುತ್ತಲೇ ಇರುತ್ತಾರೆ. ಬಹಳಷ್ಟು ಜನ ಓಡ್ತಾನೆ ಇರುತ್ತಾರೆ. ಆದರೆ ಈ 61 ವರ್ಷದ ಮುದುಕ 5 ದಿನ 15 ಗಂಟೆಗಳಲ್ಲಿ 400 ಕಿ.ಮೀ ಓಡಿ ಮ್ಯಾರಥಾನ್ ಗೆದ್ದು ಬಿಡ್ತಾನೆ. ಆಸ್ಟೇಲಿಯಾದಲ್ಲಿರುವ ಜನರೆ ದಿಗ್ಭ್ರಮೆ ಆಗ್ತಾರೆ. ಯಾಕೆಂದರೆ ಮಿಕ್ಕ ಎಲ್ಲಾ ಸಽಕರು ದಿನಕ್ಕೆ16, 17 ಗಂಟೆ ಓಡುತ್ತಿದ್ದರೆ. ಈತ ಐದುವರೆ ದಿನ ನಾನ್ ಸ್ಟಾಪ್ ಆಗಿಓಡುಬಿಡುತ್ತಾನೆ. ಎಲ್ಲರಿಗೂ ಆಶ್ಚರ್ಯ ಕೊನೆಯಲ್ಲಿ ರೈತನನ್ನ ಕೇಳ್ತಾರೆ ಸತ್ತು ಹೋಗಿದ್ದರೆ ಏನು ಮಾಡ್ತಿದ್ದೆ. Rest ತಗೋ ಅಂತ ಅದಕ್ಕೆ ನಾನು 400 ಕಿ.ಮೀ ಓಡಿಬಿಟ್ಟೆ. ಕಡೆಗೂ ಕ್ಲಿಮ್ಜಂಗ ಆಸ್ಟ್ರೇಲಿಯಾದಲ್ಲಿ Famous ಆಗ್ತಾನೆ. ಮನೆ ಮಾತಾಗುತ್ತಾನೆ.

ಮ್ಯಾರಥಾನ್ ಸರ್ಧೆ ಅಂದರೆ ಆ ರೈತ ನೆನಪಾಗುತ್ತಾನೆ. 61 ವರ್ಷದ ಮುದುಕ ಕುರಿ ಮೇಯಿಸುತ್ತಿದ್ದ. ಆಲೂಗಡ್ಡೆ ಬೆಳಿತ್ತಿದ್ದ, ಚಾಂಪಿಯನ್ ಆದ. ಇದರ ಅರ್ಥ ಏನೆಂದರೆ ಯಶಸ್ಸು ಯಾವತ್ತು ಯಾರಪ್ಪನ ಸ್ವತ್ತಲ್ಲ. ಯಾರಿಗೂ ಕೇರ್ ಆಫ್ ಅಡ್ರೆಸ್ ಅಲ್ಲ, ಯಾರಿಗೂ ಅಷ್ಟು ಸುಲಭವಾಗಿ ಒಲಿಯೋದಿಲ್ಲ. ಯಶಸ್ಸು Back ground ಯಿಂದ ಬರಲ್ಲ, ಗುಂಡಿಗೆ ಅನ್ನೋ Ground ನಲ್ಲಿ ಧಮ ಇದ್ರೆ ಬರುತ್ತೆ. ಜೀವನದಲ್ಲಿ ಏನು ಬೇಕಾದರು ಸಾಧಿಸಬಹುದು ಅದಕ್ಕೆ ಚಾಂಪಿಯನ್ ಶಿಪ್, ಪ್ರೊಫೆಷನಲಿಸಮ್ ಬೇಕು ಅಂತಲ್ಲ, ಮಾಡಬೇಕು ಅನ್ನೋ ಉದ್ದೇಶ ಸ್ಪಷ್ಟವಾಗಿದ್ದರೆ ನಿಮ್ಮನ್ನ ತಡೆಯುವ ತಾಕತ್ತು ಪ್ರಾಯಶಃ ಆತನಿಗೂ ಅಂದರೆ
ದೇವರಿಗೂ ಇರಲ್ಲ.

ಜೀವನದಲ್ಲಿ ಎಷ್ಟೇ ಸಂಕಷ್ಟಗಳು ಬರಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆ ಇರುವವರನ್ನ ಜಗತ್ತಿನ ಯಾವ ಶಕ್ತಿಯೂ ಸೋಲಿಸಲು ಸಾಧ್ಯವಿಲ್ಲ. ಸಾಕಷ್ಟು ಉದಾಹರಣೆಗಳು, ಸಾಕಷ್ಟು ನಿದರ್ಶನಗಳು, ಗೆದ್ದ ಜೀವಗಳ ಭರವಸೆಯ ಕಥೆಗಳು, ನಮ್ಮನ್ನ ಸೂರ್ತಿಗೊಳಿಸುತ್ತವೆ. ಗೆಲುವಿಗೆ ಇರುವುದೇ ಒಂದೇ ದಾರಿ, ಅದು ನಿಮ್ಮ ಪರಿಶ್ರಮ, ನಿಮ್ಮ ಏಕಾಗ್ರತೆ, ನಿಮ್ಮ ತಪಸ್ಸು, ನಿರಂತರ ಹೋರಾಟ. ಚಿಕ್ಕ ಸೋಲಿಗೆ ಹೆದರಿದ್ರೆ ದೊಡ್ಡ ಸಾಮ್ರಾಜ್ಯವನ್ನ ಕಟ್ಟುವ ಅವಕಾಶವನ್ನ ಕಳೆದುಕೊಳ್ತೀರಾ, ಚಿಕ್ಕ ಚಿಕ್ಕತಪ್ಪುಗಳನ್ನ ಮಾಡಿದ್ರೂ ಪರವಾಗಿಲ್ಲ ಆದ್ರೆ ಸಾಧ್ಯವಾದಷ್ಟು ಕಡಿಮೆ ತಪ್ಪುಗಳನ್ನ ಮಾಡಿದಾಗಲೇ ಜೀವನದಲ್ಲಿ ಮತ್ತೊಂದು
ಹಂತಕ್ಕೆ ಹೋಗಲು ಸಾಧ್ಯ. ಖಟ ನಿಮ್ಮ ಯಶಸ್ಸಿಗೆ ನೀವೇ ಕಾರಣ ಕರ್ತರು. ಭವಿಷ್ಯದ ಬಗ್ಗೆ ಸ್ಪಷ್ಟತೆ ಇರಲಿ ನಡೆಯುವ ಹಾದಿಯ ಬಗ್ಗೆ ಸ್ಪಷ್ಟತೆ ಇರಲಿ, ಒಂದಲ್ಲ ಒಂದು ದಿನ ಗೆದ್ದೇಗೆಲ್ಲುತ್ತೆನೆಂಬ ಧೈರ್ಯವಿರಲಿ ನೀವು ಸೋತ ತಕ್ಷಣ ಸೋತು ಬಿಟ್ಟೆ ಎಂದು ಹೆದರಬೇಡಿ. U are not failed just your success postponed ಅಷ್ಟೇ ನಿಮ್ಮ ಬದುಕು ಯಶಸ್ವಿಯಾಗಲಿ.