Sunday, 15th December 2024

ಕಡತ ಯಜ್ಞ ಎಂಬ ವಿಲೇವಾರಿ ಪ್ರಹಸನ

ಅಭಿವ್ಯಕ್ತಿ

ರಮಾನಂದ ಶರ್ಮಾ

ಕಡತಯಜ್ಞ ಎನ್ನುವ ಪರಿಕಲ್ಪನೆ ಆಡಳಿತ ಸುಧಾರಣೆಯ ಮತ್ತು ಕಡತಗಳ ಶೀಘ್ರ ವಿಲೇವಾರಿ ನಿಟ್ಟಿನಲ್ಲಿ ಹೊಸ ಪ್ರಹಸನ ಏನಲ್ಲ. ಈ ಪ್ರಹಸನಕ್ಕೆ ಸುದೀರ್ಘ ಇತಿಹಾಸ ಇದ್ದು, ಇದನ್ನು ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ
ಮೊದಲ ಬಾರಿ ಚಲಾವಣೆಗೆ ತರಲಾಗಿತ್ತು.

ಆಡಳಿತ ಯಂತ್ರ ಸ್ತಬ್ಧವಾಗಿದೆ, ಸರಕಾರದಲ್ಲಿ ಕೆಲಸಗಳು ಅಗುತ್ತಿಲ್ಲ, ಸರಕಾರಿ ಕಚೇರಿ ಗಳಲ್ಲಿ ಕಡತಗಳು ಮೂವ್ ಅಗುತ್ತಿಲ್ಲ, ಸರಕಾರ ನಿಸ್ತೇಜವಾಗಿದೆ ಎಂದು ಜನತೆ ಅಕ್ರೋಶ ವ್ಯಕ್ತ ಮಾಡಿದಾಗ, ಮಾಧ್ಯಮಗಳು ಈ ಪರಿಸ್ಥಿಯನ್ನು ಮುಖಪುಟಕ್ಕೆ ತಂದಾಗ ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು, ಆಡಳಿತದ ವೇಗವನ್ನು ಹಚ್ಚಿಸಲು, ಸರಕಾರಿ ಕಚೇರಿಗಳಲ್ಲಿ ಕೆಲಸಗಳು ಪೆಂಡಿಂಗ್ ಆಗದಿರಲು ಕಡತಗಳನ್ನು ದಿಢೀರ್ ವಿಲೇವಾರಿಗೊಳಿಸಲು ಕಡತ ಯಜ್ಞವನ್ನು
ಹಮ್ಮಿ ಕೊಂಡಿದ್ದರು. ಅವರ ಈ ಡ್ರೈವ್ ಸಾರ್ವಜನಿಕವಾಗಿ ಸಾಕಷ್ಟು ಟೀಕೆ ಮತ್ತು ಲೇವಡಿಗೆ ಒಳಗಾಗಿತ್ತು.

ಹಾಗೆಯೇ ಕೆಲವರು ಹಾಡಿ ಹೊಗಳಿದ್ದರು. ಗುಂಡೂರಾಯರು ಈ ಪ್ರಹಸನಕ್ಕೆ ಚಾಲನೆ ನೀಡಿದವರಾದರೆ, ಮುಂದಿನ ಮುಖ್ಯ ಮಂತ್ರಿಗಳು ತಮ್ಮ ಕಾಲಘಟ್ಟದಲ್ಲಿ ಬಾಕಿ ಇರುವ ಕಡತಗಳ ಬಗೆಗೆ ಜನತೆಯ ಅಕ್ರೋಶ ಮುಗಿಲುಮುಟ್ಟಿದಾಗ ಇದನ್ನು ಆಗಾಗ ಮುಂದು ವರೆಸಿಕೊಂಡು ಹೋದರು. ಕಳೆದ ವರ್ಷ ಗಾಂಧಿ ಜಯಂತಿ ದಿನದಿಂದ ಒಂದು ತಿಂಗಳ ಕಾಲ ಕಡತ ಯಜ್ಞ ಮಾಡು ವಂತೆ ಮೋದಿ ಸರಕಾರ ಸೂಚಿಸಿತ್ತು.

ಹಲವು ರಾಜ್ಯ ಸರಕಾರಗಳು ಇಂಥ ಕಡತ ಯಜ್ಞಗಳನ್ನು ನಡೆಸಿದ ಉದಾಹರಣೆಗಳು ಸಾಕಷ್ಟು ಇವೆ. ಆಡಳಿತ ಯಂತ್ರ ಹೇಗೆ ಚಲಿಸುತ್ತದೆ ಮತ್ತು ಸರಕಾರ ಎಷ್ಟು ಚುರುಕಾಗಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಕಡತಗಳ ವಿಲೆವಾರಿಯೇ ಅಳತೆಗೋಲು. ಅಂತೆಯೇ ಮುಖ್ಯಮಂತ್ರಿಗಳು ವಾರಾಂತ್ಯ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಬಾಕಿ ಕಡಿತಗಳ ವಿಲೇವಾರಿಗೆ ಮೀಸಲಿರಿಸಿzರೆ. ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಹಲವು ತಿಂಗಳಿನಿಂದ ಸಾವಿರಾರು ಕಡತಗಳು ವಿಲೇವಾರಿಗೆ ಕಾಯತ್ತಿದ್ದು ಅದರೊಂದಿಗೆ ವಿವಿಧ ಇಲಾಖೆಗಳಲ್ಲೂ ಇದೇ ರೀತಿ ಕಡತಗಳು ಮಾಳಿಗೆಯನ್ನು ಮುಟ್ಟುತ್ತಿವೆ ಎಂದು ಹೇಳಲಾಗುತ್ತಿದೆ.

ಇಂಥ ಕಡತ ಯಜ್ಞದಿಂದ ಬಾಕಿ ಉಳಿದಿರುವ ಕಡತಗಳಿಗೆ ಮುಕ್ತಿ ದೊರಕಿ, ಅಡಳಿತ ಚುರುಕುಗೊಂಡು ಅಭಿವೃದ್ದಿ ಅಭಿಯಾನ
ಟಾಪ್ ಗೇರ್‌ಗೆ ಏರಿ ಸರಕಾರದ ಸೌಲಭ್ಯಗಳು ವಿಧಾನ ಸೌಧದಿಂದ ಗ್ರಾಮಪಂಚಾಯಿತಿವರೆಗೆ ಮತ್ತು ಕಟ್ಟಕಡೆಯ ಫಲಾನುಭವಿ ಗಳಿಗೆ ಸಕಾಲದಲ್ಲಿ ತಲುಲಪುತ್ತದೆ ಎನ್ನುವ ಆಶಾಭಾವನೆ ಇದರಲ್ಲಿ ಅಡಕವಾಗಿದೆ. ಕಡತ ಯಜ್ಞಗಳಿಂದ ಕಡತಗಳ ಸಂಖ್ಯೆ ಕಡಿಮೆಯಾಗಬಹುದು. ಆದರೆ ಸಂಬಂಧಪಟ್ಟವರಿಗೆ ನ್ಯಾಯ ದೊರಕಬಹುದೇ ಎನ್ನುವುದು ಮುಖ್ಯ ಪ್ರಶ್ನೆ. ತರಾತುರಿಯಲ್ಲಿ
ಮಾಡುವ ಈ ಪ್ರಕ್ರಿಯೆಯಲ್ಲಿ ಸಮಸ್ಯೆಗಳ ಆಳ, ಉದ್ದ ಮತ್ತು ಅಗಲವನ್ನು ಕೂಲಂಕಷವಾಗಿ ಪರೀಶೀಲಿಸಲಾಗುವುದೇ? ಈ ಪ್ರಹಸನದಲ್ಲಿರುವುದು ಕೇವಲ ಕಡತಗಳ ವಿಲೆವಾರಿಯೇ ಅಥವಾ ಸಮಸ್ಯೆಗಳ ಪರಿಹಾರವೇ ಎನ್ನುವ ಜಿಜ್ಞಾಸೆ ಜನತೆಯನ್ನು ಕಾಡುತ್ತಿದೆ.

ವರ್ಷಗಳಿಂದ, ದಶಕಗಳಿಂದ ಮೋಕ್ಷ ಕಾಣದ ಕಡತಗಳು ಒಂದೆರಡು ದಿನಗಳಲ್ಲಿ ಪರಿಹಾರ ಕಾಣುವುದಾದರೂ ಹೇಗೆ? ಕೆಲವು ಕಡತಗಳು ಸಂಬಂಧಪಟ್ಟ ಅಧಿಕಾರಿಯು ಒಮ್ಮೆ ನೋಟ ಹರಿಸಿದರೆ ಇತ್ಯರ್ಥವಾಗಬಹುದು. ಅದರೆ, ಬಹುತೇಕ ಪ್ರಕರಣಗಳು
ಸಂಕೀರ್ಣವಾಗಿದ್ದು , ಪ್ರಕರಣ ಹಿನ್ನೆಲೆ, ಮುನ್ನೆಲೆಯನ್ನು ಶೋಧಿಸಬೇಕಾಗುತ್ತದೆ, ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ, ಸಂಬಂಧಪಟ್ಟ ಇನ್ನೊಂದು ಇಲಾಖೆಯನ್ನು ಸಂಪರ್ಕಿಸಬೇಕಾಗುತ್ತದೆ.

ಇಂಥ ಕಡತಗಳು ಒಂದೆರಡು ದಿನದಲ್ಲಿ ದಿಢೀರ್ ಎಂದು ಈ ಯಜ್ಞದಿಂದ ಹೊರಬರಬಹುದೇ? ಕಡತ ಯಜ್ಞಗಳಿಂದ ಕಡತ ಗಳಿಗೇನೋ ಮುಕ್ತಿ ದೊರಕುತ್ತದೆ. ಅದರೆ ಕಡತಗಳು ಗುಡ್ಡೋಪಾದಿಯಲ್ಲಿ ಬೆಳೆಯುವುದರ ಹಿಂದಿನ ಕಾರಣವನ್ನು ಪತ್ತೆ ಹಚ್ಚಿ
ಪರಿಹಾರ ಕಂಡು ಹಿಡಿಯದಿದ್ದರೆ, ಕಡತ ಯಜ್ಞಗಳು ನಿರಂತರ ಪ್ರಕ್ರಿಯೆಯಾಗುತ್ತದೆ ಮತ್ತು ಜನತೆಯ ಗೋಳು ಎಂದಿನಂತೆ ಮುಂದುವರೆಯುತ್ತದೆ. ಹಲವು ಕಡತಗಳು ಮುಕ್ತಿ ಕಾಣದಿರಲು ಸಂಬಂಧಪಟ್ಟ ಅಧಿಕಾರಿಗಳನ್ನು ಸರಿಯಾಗಿ  ನೋಡಿಕೊಳ್ಳ ದಿರುವುದು ಎನ್ನುವುದು ತೀರಾ ಸಾಮಾನ್ಯವಾದ ಆರೋಪ. ಇದರ ಸತ್ಯಾಸತ್ಯತೆ ಬೇರೆ ಮಾತು.

ಆನೆಯೂ ಐದು ಜನ ಕುರುಡರೂ ಎನ್ನುವಂತೆ ಈ ಸರಿಯಾದ ಪದದ ಅರ್ಥವನ್ನು ಜನರು ತಮಗೆ ತಿಳಿದಂತೆ ಮಾಡಿ ಕೊಳ್ಳುತ್ತಾ ರೆ. ಹಾಗೆಯೇ ಅಧಿಕಾರಿಗಳ ನಿರಂತರ ವರ್ಗಾವರ್ಗಿ ಕಡತಗಳಿಗೆ ಮೋಕ್ಷ ಕೊಡುವ ನಿಟ್ಟಿನಲ್ಲಿ ಇನ್ನೊಂದು ಅಡೆತಡೆ. ಒಬ್ಬ ಅಧಿಕಾರಿ ಒಂದು ಕಡತವನ್ನು ನೋಡುತ್ತಿರುವಂತೆ, ಆತನಿಗೆ ವರ್ಗ ಆಗುತ್ತದೆ ಮತ್ತು ಅವರ ಸ್ಥಳಕ್ಕೆ ಬರುವವರು ಇನ್ನೊಮ್ಮೆ ಕಡತದ ಬುಡದಿಂದ ಕೈಹಾಕಿ ನೋಡಬೇಕಾಗುತ್ತದೆ.

ಎಷ್ಟೋ ಬಾರಿ ನಿಯಮಾವಳಿ ಇಲ್ಲದಿರುವುದು ಮತ್ತು ನಿಯಮಾವಳಿಯ ಅಸ್ಪಷ್ಟತೆ ಕಡತ ಮುಂದೆ ಹೋಗದಂತೆ ತಡೆಯುತ್ತದೆ.
ಒಂದು ಇಲಾಖೆಯಲ್ಲಿ ಮೂರು ಆಧಿಕಾರಿಗಳು ಒಂದು ಕಡತವನ್ನು ನೋಡಿದರೆ, ಅವರು ಅದನ್ನು ಅರ್ಥೈಸುವ ಪರಿಯೇ ಬೇರೆಯಾಗಿ ಕಡತ ಮುಂದೆ ಸಾಗುವುದಿಲ್ಲ. ಒಂದು ಕಡತವನ್ನು ಇನ್ನೊಂದು ಇಲಾಖೆಯ ಕ್ಲಿಯರೆನ್ಸ್‌ಗೆ ಕಳಿಸಿದರೆ ಅದು ಒಂದು ಸಮಯ ಪರಿಮಿತಿಯೊಳಗೆ ಹಿಂತಿರುಗಿ ಬರುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಮಧ್ಯೆ ಸಮನ್ವಯದ ಕೊರತೆಯಿಂದಾಗಿ ಕಡತಗಳು ಮುಂದೋಡುವುದಿಲ್ಲ.

ಕಡತಗಳು ಕ್ಲಿಷ್ಟವಾಗಿದ್ದು, ಹೊಣೆಗಾರಿಕೆ ಹೆಚ್ಚು ಇದ್ದರೆ, ಬೇರೆ ಯಾರಾದರೂ ನಿರ್ಣಯಿಸಲಿ ಎಂದು ಕಡತವನ್ನು ಬಾಕಿ ಇಡುವ ಉದಾಹರಣೆಗಳು ಇಲ್ಲದಿಲ್ಲ. ಬಹುತೇಕ ಕಚೇರಿಗಳಲ್ಲಿ ಹೊಸತಾಗಿ ಸೇರಿದವರು ಮತ್ತು ನಿವೃತ್ತಿ ಹೊಸ್ತಿಲಲ್ಲಿ ಇರುವವರು ಕಡತಗಳನ್ನು ನಿರ್ಣಯಿಸದೇ ಕಾಲ ತಳ್ಳುತ್ತಾರೆ. ಹೊಸಬರಿಗೆ ಸ್ವಲ್ಪ ಅಳುಕು ತಡೆಯೊಡ್ಡಿದರೆ, ನಿವೃತಿ ಅಂಚಿನಲ್ಲಿ ಇರುವವರಿಗೆ ಸುಮ್ಮನೇ ಏಕೆ ರಿಸ್ಕ್ ಎನ್ನುವ ಭಯ ಇರುತ್ತದೆಯಂತೆ. ಸೇವೆಯ ಮುಸ್ಸಂಜೆಯಲ್ಲಿ ಎಡವಟ್ಟಾಗಿ ನಿವೃತ್ತಿ ಜೀವನ ಹೊಯ್ದಾಡ ದಿರಲಿ ಎನ್ನುವ ದೂರದೃಷ್ಟಿಯ ಯೋಚನೆಯಂತೆ.

ಕೆಲವು ಕಡತಗಳ ವಿಲೇವಾರಿಯು ಪ್ರಭಾವಿಗಳ ಕೈವಾಡದಿಂದಾಗಿ ನಿಂತು ಹೋಗುತ್ತವೆಯಂತೆ. ಇನ್ನು ಸಾಹೇಬರು ರಜೆಯಲ್ಲಿzರೆ, ವರ್ಗವಾಗಿದೆ, ಬದಲಿ ಇನ್ನೂ ಬಂದಿಲ್ಲ, ಅದು ನನ್ನ ಟೇಬಲ್ ಅಲ್ಲ, ಸಿಬ್ಬಂದಿ ತರಬೇತಿಯಲ್ಲಿದ್ದಾರೆ, ಸಂಬಂಧಪಟ್ಟ ಸಿಬ್ಬಂದಿ ಎರವಲು ಸೇವೆಗೆ ಹೋಗಿದ್ದಾರೆ ಇವು ಕಡತಗಳ ಚಲನೆಗೆ ನಿರಂತರವಾಗಿ ಸಿಲುಕುವ ಅಡೆತಡೆಗಳು. ಬ್ಯಾಂಕುಗಳಲ್ಲಿ ಹೊಸಬರಿಗೆ ಬ್ಯಾಂಕಿಂಗ್ ಜ್ಞಾನ ಇಲ್ಲ, ಹಳಬರಿಗೆ ಕಂಪ್ಯೂಟರ್ ತಿಳಿಯದು ಎನ್ನುವ ಮಾತು ಕೇಳಿ ಬರುತ್ತಿದ್ದು, ಇದೇ ಪರಿಸ್ಥಿತಿ ಬಹುತೇಕ ಎಲ್ಲ ಸರಕಾರಿ ಕಚೇರಿಗಳಲ್ಲೂ ಇದೆ.

ಕಂಪ್ಯೂಟರ್ ಅಳವಡಿಕೆಯಿಂದಾಗಿ ಕಚೇರಿಗಳಲ್ಲಿ ಕೆಲಸದ ಲಯ ತಪ್ಪಿದೆ. ತಂತ್ರಜ್ಞಾನದ ಬಳಕೆ ನಿರೀಕ್ಷೆಯಷ್ಟು ಅಗಲು
ಇನ್ನೂ ಸಮಯ ಬೇಕಾಗಿದೆ. ಇತ್ತೀಚೆಗಷ್ಟೆ ಈ ನಿಟ್ಟಿನಲ್ಲಿ ಸರಕಾರ ಗಂಭೀರತೆ ಮತ್ತು ಅರ್ಜೆನ್ಸಿ ಯನ್ನು ತೋರಿಸುತ್ತಿದೆ. ಎಷ್ಟೋ ಕಚೇರಿಗಳಲ್ಲಿ ಸಿಬ್ಬಂದಿಗಳು ಓಬಿರಾಯನ ಕಾಲದ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಬಹುತೇಕ ಕಚೇರಿಗಳಲ್ಲಿ ಕೆಲಸದ ಭಾರ ಹೆಚ್ಚುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚುತ್ತಿಲ್ಲ. ಹೆಚ್ಚುತ್ತಿರುವ ಕೆಲಸದ ಅನುಪಾತಕ್ಕೆ ಸರಿಯಾಗಿ ಸಿಬ್ಬಂದಿಗಳ ಪ್ರಮಾಣ ಹೆಚ್ಚುವುದು ಹೋಗಲಿ, ನಿಧನ ಹೊಂದಿದವರು, ನಿವೃತ್ತಿಯಾದವರು ಮತ್ತು ಸ್ವಯಂ ನಿವೃತ್ತಿ ಹೊಂದಿದವರ ಸ್ಥಾನಕ್ಕೂ ಹೊಸಬರ ನಿಯುಕ್ತಿಯಾಗುತ್ತಿಲ್ಲ.

ಎಷ್ಟೋ ಕಚೇರಿಗಳಲ್ಲಿ skeleton staff ಕಾಣುತ್ತಾರೆ. ಕಚೇರಿಗಳಲ್ಲಿ ಕಡತಗಳು ಮುಗಿಲು ಮುಟ್ಟಲು ಇವು ಸಾಲದೆನ್ನು ವಂತೆ ಕಚೇರಿಗಳಿಗೆ ಸಾರ್ವಜನಿಕ ರಜಾದಿನಗಳು ಬೇರೆ. ಭಾರತದಲ್ಲಿ ಇರುವಷ್ಟು ರಜಾದಿನಗಳು ಇನ್ನು ಯಾವುದೇ ದೇಶದಲ್ಲಿ ಇರುವುದಿಲ್ಲ. ಹಬ್ಬ ಹರಿದಿನಗಳು ಬಂದರಂತೂ ಕಚೇರಿಗಳಿಗೆ ಸಾಲು-ಸಾಲು ರಜೆ. ಸಾರ್ವಜನಿಕ ರಜೆಗಳು, ವಾರಾಂತ್ಯದ ರಜೆಗಗಳನ್ನು ಬಿಟ್ಟು ಅವರಿಗೆ ಗಳಿಸಿದ ರಜೆಗಳು ಬೇರೆ ಇರುತ್ತವೆ. ಈ ಪರಿಸ್ಥಿಯಲ್ಲಿ ಅವರಿಂದ ಏನಾದರೂ productivity ಯನ್ನು ನಿರೀಕ್ಷಿಸಲು ಸಾಧ್ಯವೇ? ಇದಕ್ಕೆ ಹೊರತಾಗಿ ಕಚೇರಿಗಳಲ್ಲಿ ಸಿಬ್ಬಂದಿಗಳ ಗೈರು ಹಾಜರಿ, ಸಮಯ ಪರಿಪಾಲನೆ ಇಲ್ಲದಿರುವುದು, ಅಶಿಸ್ತು, ಜನತೆಯೊಂದಿಗೆ ಅವರ ಸ್ಪಂದನೆ ಬಗ್ಗೆಯೂ ಆರೋಪಗಳಿವೆ.

ಬ್ಯಾಂಕುಗಳಲ್ಲಿ ನಿರ್ದಿಷ್ಟ ಕೆಲಸಗಳಿಗೆ ನಿರ್ದಿಷ್ಟ ಸಮಯ ಪರಿಮಿತಿ ಇರುತ್ತದೆ . ಅದರೆ, ಸರಕಾರಿ ಕಚೇರಿಗಳಲ್ಲಿ ಅಂಥ ಕಟ್ಟು ಪಾಡು, ಸಮಯದ ಪರಿಮಿತಿ ಮತ್ತು ಹೊಣೆಗಾರಿಕೆ ಇದ್ದಂತೆ ಕಾಣುವುದಿಲ್ಲ. ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಸಿಬ್ಬಂದಿಗಳನ್ನು ಎರವಲು ನೀಡುವ(deputation) ಪದ್ಧತಿ ಎಷ್ಟೋ ಕಚೇರಿಗಳನ್ನು ಬಿಕೋ ಎನಿಸುತ್ತವೆ. ಸರಕಾರಿ ನೌಕರರಲ್ಲಿ ಸೇವಾ ಮನೋಭಾವನೆ ಕಡಿಮೆ ಎನ್ನುವ ದೂರು ಮತ್ತು ಆರೋಪ ಇದ್ದು, ಕಚೇರಿಗಳಲ್ಲಿ ಕಡತಗಳ ಸಂಖ್ಯೆ ಬೆಳೆಯಲು ಕಾರಣ ಎನ್ನಲಾಗುತ್ತದೆ.

ಸರಕಾರಿ ನೌಕರರ ಅಟಿಟ್ಯೂಡ್ ಬದಲಾಗಬೇಕು ಎನ್ನುವುದು ಸಾರ್ವಜನಿಕ ಅಭಿಪ್ರಾಯ. ಎಲ್ಲಾ ಕಚೇರಿಗಳನ್ನು ಒಂದೇ ಬ್ರಾಕೆಟ್‌ನಲ್ಲಿ ನೋಡಲಾಗದು. ಅದರೆ, ಒಂದೆರಡು ಕಚೇರಿಗಳಲ್ಲಿ ಕಂಡುಬಂದರೂ, ಅನ್ನ ಬೆಂದಿರುವುದನ್ನು ನೋಡಲು ಒಂದೇ ಕಾಳು ಸಾಕು ಎನ್ನುವಂತೆ ಈ ಆರೋಪವನ್ನು ಜೆನರಲೈಸ್ ಮಾಡುವುದು ತೀರಾ ಸಾಮಾನ್ಯ. ಬಾಕಿ ಇರುವ ಕಡತಗಳಿಗೆ ಮೋಕ್ಷ ನೀಡಲು ಕಡತ ಯಜ್ಞ ಪರಿಹಾರ ಅಲ್ಲ. ಹಾಗೆಯೇ ಉತ್ತರವೂ ಅಲ್ಲ.

ಇದೊಂದು ತತ್ಕಾಲದ ರಿಲೀಫ್ ಎನ್ನಬಹುದು ಅಷ್ಟೆ. ಕಡತ ಯಜ್ಞಕ್ಕೆ ಕಾರಣವಾದ ಈ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ದೂರಗಾಮಿ ಪರಿಹಾರ ಕಂಡು ಹಿಡಿದಾಗಲೇ ಕಡತ ಯಜ್ಞ ರಿಪೀಟ್ ಆಗುವುದನ್ನು ತಪ್ಪಿಸಬಹುದು. ಜನತೆ ನಿಟ್ಟುಸಿರು ಬಿಡಬಹುದು.