Saturday, 14th December 2024

ಮತ್ತೆ ಹುಟ್ಟಲಿದೆ ನಶಿಸಿ ಹೋದ ಡೋಡೋ ಹಕ್ಕಿ

ಶಿಶಿರ ಕಾಲ

shishirh@gmail.com

ಇಪ್ಪತ್ತನೇ ಶತಮಾನದ ಕೆಲವು ಆವಿಷ್ಕಾರಗಳು ಶಾಶ್ವತ, ಅನನ್ಯ ಬದಲಾವಣೆಗಳಿಗೆ ಕಾರಣವಾದವು. ಅಲ್ಬರ್ಟ್ ಐನ್ಸ್‌ಟೈನ್ ೧೯೦೫ರಲ್ಲಿ ಸಾಪೇಕ್ಷತೆ ಮತ್ತು ಕ್ವಾಂಟಮ್ ಸಿದ್ಧಾಂತ ಮಂಡಿಸಿದ ನಂತರದ ಐದು ದಶಕದಲ್ಲಿ ಭೌತಶಾಸ್ತ್ರದಲ್ಲಿ ಕ್ರಾಂತಿಯೇ ನಡೆದು ಹೋಯಿತು. ಅಣು
ಬಾಂಬ್, ಅಣು ಶಕ್ತಿ, ಟ್ರಾನ್ಸಿಸ್ಟರ್‌ಗಳು, ಅಂತರಿಕ್ಷ ನೌಕೆ, ಲೇಸರ್, ರೇಡಾರ್ ಇವೆಲ್ಲ ಆತನ ಸಿದ್ಧಾಂತದ ಉತ್ಪನ್ನಗಳು.

ಟ್ರಾನ್ಸಿಸ್ಟರ್‌ಗಳು ಮಾಡಿದ ಕ್ರಾಂತಿ ಸಣ್ಣದಲ್ಲ. ಇಂದು ನಾವು ಬಳಸುವ ಎಲ್ಲ ಎಲೆಕ್ಟ್ರಾನಿಕ್ ಸಲಕರಣೆಗಳಲ್ಲಿ ಇದು ಇರಲೇ ಬೇಕು. ಕೈಯಲ್ಲಿ ಹಿಡಿಯುವ ಫ್ರಾನ್‌ನಲ್ಲಿ ಒಂದರಿಂದ ಒಂದೂವರೆ ಸಾವಿರ ಕೋಟಿ ಟ್ರಾನ್ಸಿಸ್ಟರ್‌ಗಳಿರುತ್ತವೆ. ಇನ್ನು ಇಪ್ಪತ್ತನೇ ಶತಮಾನದ ದ್ವಿತೀಯಾರ್ಧ. ಅದು ಮಾಹಿತಿ ತಂತ್ರಜ್ಞಾನ ಬೆಳೆದ ಸಮಯ. ಮಾಹಿತಿಯನ್ನು ಸೊನ್ನೆ ಮತ್ತು ಒಂದು ಎಂಬ ಬೈನರಿ ರೂಪದಲ್ಲಿ ಶೇಖರಿಸಿಡಬಹುದು ಎನ್ನುವ ಆವಿಷ್ಕಾರ. ೧೯೫೦ರ ದಶಕದಲ್ಲಿ ಆವಿಷ್ಕರಿಸಲ್ಪಟ್ಟ ಮೈಕ್ರೋ ಚಿಪ್‌ಗಳು ನಂತರದಲ್ಲಿ ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಇವೆಲ್ಲವುಗಳ ಅಭಿವೃದ್ಧಿಗೆ ಕಾರಣ
ವಾಯಿತು.

ಇದೆಲ್ಲ ಬೆಳೆದು ಗೂಗಲ್ ಯುಗ ದಾಟಿ ಈಗ eZಠಿಎPS ಯವರೆಗೆ ಬಂದು ನಿಂತಿದ್ದೇವೆ. ಇದೆಲ್ಲ ಒಂದು ಕಡೆಯಾದರೆ ಇನ್ನೊಂದು ಕಡೆ, ೧೯೯೦ರಿಂದ ಈಚೆ ಜೀವ ವಿಜ್ಞಾನದಲ್ಲಿ, ಅದರಲ್ಲಿಯೂ ಆನುವಂಶಿಕ (ಜೆನೆಟಿಕ್ಸ್)ದ ಆವಿಷ್ಕಾರ ಮತ್ತು ಸಾಧ್ಯತೆಯಲ್ಲಿ ಬಹಳಷ್ಟು ಬೆಳವಣಿಗೆಗಳು ನಡೆದಿವೆ. ಮೊದಲಿಗೆ ವಂಶವಾಹಿನಿ, ಈಘೆಅ, ಘೆಅ, ಇವೆಲ್ಲ ಏನು ಮತ್ತು ಡಿಎನ್‌ಎ ಹೇಗೆ ತಂದೆ ತಾಯಿಯಿಂದ ಮಗುವಿಗೆ ಆನುವಂಶ ವರ್ಗಾಯಿಸು ತ್ತದೆ ಎಂಬುದರ ಅಭ್ಯಾಸವಾಯಿತು. ಕೇವಲ ವಂಶವಾಹಿನಿಯ ಹರಿವಿನ ಆಂತರ್ಯ ತಿಳಿದುಕೊಂಡು ತೆಪ್ಪಗಿದ್ದರೆ ಅದರ ಉಪಯೋಗವೇನು? ನಮಗೆ ಬೇಕಾದಂತೆ, ಬೇಡದ್ದನ್ನು ಬದಲಿಸಲು, ನಿರ್ದೇಶಿಸಲು ಸಾಧ್ಯವಾಗದಿದ್ದಲ್ಲಿ ತಿಳಿದು ಪ್ರಯೋಜನವೇನು? ಬೇರೆ ಜೀವಿಯ ಜೆನೆಟಿಕ್ಸ್ – ಆನುವಂಶಿಕವನ್ನು ನಿರ್ದೇಶಿಸುವ ಮನುಷ್ಯನ ಕೆಲಸ ತೀರಾ ಇತ್ತೀಚಿನದ್ದೇನೂ ಅಲ್ಲ.

ಪ್ರಕೃತಿಯಲ್ಲಿ – ನೈಸರ್ಗಿಕ ಆಯ್ಕೆ (ಘೆZಠ್ಠ್ಟಿZ ಖಛ್ಝಿಛ್ಚಿಠಿಜಿಟ್ಞ) ಯಲ್ಲಿ ನಾವು ಕೆಲವು ಬದಲಾವಣೆಗಳನ್ನು ಬಹಳ ಹಿಂದಿನಿಂದಲೇ ತಂದಿದ್ದೇವೆ. ನಾವು ಸಾಕುವ ಆಕಳು, ನಾಯಿ, ಬೆಕ್ಕು ಇವೆಲ್ಲ ಹಾಗೆ ನೋಡಿದರೆ ಪ್ರಕೃತಿ ಸಹಜ ವನ್ಯಜೀವಿಗಳಾಗಿ ಉಳಿದಿಲ್ಲ. ಅವು ಕಾಡು ಪ್ರಾಣಿಗಳಂತೆ ಬದುಕುವುದಿಲ್ಲ. ಅವುಗಳದು ನಿರ್ಬಂಧಿತ ವಂಶವಾಹಿನಿ. ಅದರಲ್ಲಿ ಬದಲಾವಣೆ ಈ ಕಾರಣಕ್ಕೆ ಅಷ್ಟಾಗಿ ಆಗುವುದೇ ಇಲ್ಲ. ಏಕೆಂದರೆ ಅವು ಕಾಡಿನಲ್ಲಿ
ಅನ್ಯ ಪ್ರಾಣಿಗಳು ಸೇರುವಂತೆ ಸೇರಿ ಅವುಗಳ ಮುಂದಿನ ಸಂತತಿಗೆ ಕಾರಣವಾಗುವುದಿಲ್ಲ. ಇನ್ನು ತೋಳ ಪಳಗಿ ನಾಯಿ ಯಾದದ್ದು. ಮನುಷ್ಯ ನಾಯಿಯನ್ನು ಸಾಕುತ್ತ ಇಂದು ಸಾವಿರದೆಂಟು ತಳಿಯ ನಾಯಿಗಳಿಗೆ ಕಾರಣವಾಗಿದ್ದಾನೆ.

ಇಂದಿರುವ ಎಲ್ಲ ಸಾಕು ನಾಯಿಗಳ ತಳಿಯೂ ಮಾನವ ಮಧ್ಯಸ್ಥಿಕೆಯಲ್ಲಿಯೇ ಹುಟ್ಟಿದ್ದು. ಇವುಗಳ ಸಂತಾನೋತ್ಪತ್ತಿಯ ನಿಯಂತ್ರಣವನ್ನು ಮನುಷ್ಯ ನಿಲ್ಲಿಸಿಬಿಟ್ಟರೆ, ಇವು ಕಾಲ ಕಳೆದಂತೆ ಇನ್ನಷ್ಟು ಅಲ್ಪಾಯುಷಿಗಳಾಗುತ್ತ ಹೋಗುತ್ತವೆ. ಬೆಕ್ಕು, ಎಮ್ಮೆ, ಕುರಿ ಇವೆಲ್ಲವೂ ಹಾಗೆಯೇ. ಮನುಷ್ಯ
ನಿರ್ದೇಶಿಸಿದಂತೆ ಅವುಗಳ ವಂಶವಾಹಿನಿ. ಆ ಕಾರಣಕ್ಕೇ ಈ ಸಾಕು ಪ್ರಾಣಿಗಳು ಪ್ರೀತಿ ವಿನಿಮಯ ಮಾಡಿಕೊಳ್ಳುವಷ್ಟು ಸಾಮೀಪ್ಯ ಮನುಷ್ಯನ ಜತೆ ಹೊಂದಿರುವುದು. ಇವೆಲ್ಲ ದೀರ್ಘ ಸಮಯದಲ್ಲಿ ನಡೆದ ಬದಲಾವಣೆ, ದಿನ ಒಪ್ಪತ್ತಿನಲ್ಲಿ ಆದದ್ದಲ್ಲ. ಇಲ್ಲಿಯೂ ಸ್ವಲ್ಪವಾದರೂ ಸಹಜತೆ ಇದೆ ಎಂದೆನಿ
ಸುವುದು ಇಂದಿನ ಸಾಧ್ಯತೆಗಳ ಬಗ್ಗೆ ತಿಳಿದಾಗ.

ಡಿಎನ್‌ಎ, ಹೀಲಿಕ್ಸ್ ಇವನ್ನೆಲ್ಲ ವಿವರಿಸಿ ನಿಮ್ಮ ತಲೆ ಚಿಟ್ಟು ಹಿಡಿಸುವುದಿಲ್ಲ. ಡಿಎನ್‌ಎ ಒಳಗಡೆ ವಂಶವಾಹಿನಿಯ ಎಲ್ಲ ವಿಚಾರಗಳು, ಮಾಹಿತಿ ಅಡಗಿಕೊಂಡಿರುತ್ತವೆ ಎನ್ನುವುದು ನಿಮಗೆ ಗೊತ್ತು. ಇದು ಇಂದು ನಿನ್ನೆ ತಿಳಿದುಕೊಂಡದ್ದಲ್ಲ, ನಮಗೆ ೧೯೫೦ರ ದಶಕದಲ್ಲಿಯೇ ವಂಶವಾಹಿನಿಯು ಡಿಎನ್‌ಎ ಒಳಗಡೆ ಅಡಗಿದೆ ಎನ್ನುವ ವಿಚಾರ ಗೊತ್ತಾಗಿತ್ತು. ಅಲ್ಲಿಂದ ನಾಲ್ಕು ದಶಕ ವಿeನಿಗಳು ಈ ಡಿಎನ್‌ಎ ಒಳಗಿರುವುದನ್ನು ಓದುವುದು, ಅರ್ಥೈಸುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದರು.

ನಂತರದಲ್ಲಿ ಅದನ್ನು ತಿಳಿಯುವ ತಂತ್ರಧಿನ ಅಭಿವೃದ್ಧಿಯಾಯಿತು. ಡಿಎನ್‌ಎ ಒಳಗಿರುವುದನ್ನು, ಹೇಗೆ ವಂಶವಾಹಿನಿ ಸಮಸ್ತ ವಿಚಾರ ಅಡಕವಾಗಿದೆ ಎಂದು ತಿಳಿಯಲು ನಡೆಸಿದ ಮೊದಲ ಪ್ರಾಜೆಕ್ಟ್ ೧೯೯೦ರಲ್ಲಿ ಶುರುವಾಗಿ ೧೩ ವರ್ಷ ನಡೆಯಿತು. ಇದಕ್ಕೆ ತಗುಲಿದ ವೆಚ್ಚ ಮೂರು ಬಿಲಿಯನ್
ಡಾಲರ್(೧೯೯೦ರಲ್ಲಿ ೧೨ಸಾವಿರ ಕೋಟಿ ರೂಪಾಯಿ). ಇದರಿಂದ ತಿಳಿದದ್ದೇನೆಂದರೆ ಮನುಷ್ಯನ ಡಿಎನ್‌ಎ ಒಳಗೆ ನಾಲ್ಕೇ ಅಕ್ಷರ ಬಳಸಿ – ೩೦ ಕೋಟಿ ಶಬ್ದಗಳಿವೆ ಎನ್ನುವುದು.

ಇದು ಹೋಲಿಕೆಗೆ. ಒಬ್ಬ ವ್ಯಕ್ತಿಯ ಒಂದು ಜೀನ್ಸ್‌ನ ಒಳಗೇನಿದೆ ಎಂದು ತಿಳಿಯಲು ಇಷ್ಟು ಕಾಲ ಮತ್ತು ಹಣ ವ್ಯಯಿಸುವುದು ವ್ಯಾವಹಾರಿಕವಾಗಿ ಒಪ್ಪುವಂಥದ್ದಲ್ಲ. ಹಾಗಾಗಿ ನಂತರದಲ್ಲಿ ಡಿಎನ್‌ಎ ಸರಪಳಿಯನ್ನು ಓದುವ ಅನ್ಯ ಸರಳ ಮಾರ್ಗಗಳು ಕಂಡುಹಿಡಿಯಲ್ಪಟ್ಟವು. ಇವತ್ತು ಒಬ್ಬ ವ್ಯಕ್ತಿಯ
ಡಿಎನ್‌ಎ ಸೀಕ್ವೆನ್ಸ್ ತಿಳಿಯಲು ಎರಡು ದಿನ ಸಾಕು – ಅದಕ್ಕೆ ತಗಲುವ ವೆಚ್ಚ ಒಂದು ಲಕ್ಷ ರೂಪಾಯಿಗಿಂತ ಕಡಿಮೆ. ಇಂದು ನಮಗೆ ವಂಶವಾಹಿನಿ ಯಲ್ಲಿ ಆನುವಂಶಿಕವಾಗಿ ಬರುವ ಹಲವಾರು ರೋಗಗಳಿಗೆ ಕಾರಣವಾಗುವ ಡಿಎನ್‌ಎ ತುಣುಕು, ಅದರ ಅನುಕ್ರಮ ಯಾವುದು ಎನ್ನುವುದೂ ಗೊತ್ತು.
ಆದರೆ ರೋಗ ತರುವ ಡಿಎನ್‌ಎ ಭಾಗವನ್ನು ಸರಿಮಾಡಲು ಸಾಧ್ಯವಾದರಷ್ಟೇ ಈ ಆವಿಷ್ಕಾರದಿಂದ ಏನೋ ಒಂದು ಪ್ರಯೋಜನವಲ್ಲವೇ? ಅದರ ಅವಿಷ್ಕಾರವೂ ಆಯಿತು.

ನಂತರದಲ್ಲಿ ಡಿಎನ್‌ಎ ವಂಶವಾಹಿನಿಯ ನಿರ್ದೇಶಿತ ಭಾಗ ದೊಳಗಿನ ಅಕ್ಷರಗಳನ್ನು (ಅನುಕ್ರಮ) ಬದಲಾಯಿಸುವ ಬೇರೆ ಬೇರೆ ತಂತ್ರಜ್ಞಾನಗಳು ಚಾಲ್ತಿಗೆ ಬಂದವು. ಅವು ಕೂಡ ಬಹಳ ವೆಚ್ಚದ್ದಾಗಿತ್ತು. ಆದರೆ ೨೦೧೨ರಲ್ಲಿ ಕ್ರಿಸ್ಪಿರ್ (ಇಏಐಖP / ಇಅಖ೯) ತಂತ್ರಜ್ಞಾನವೆನ್ನುವ ಒಂದು ಹೊಸ ಆವಿಷ್ಕಾರದಿಂದ ಈ ಡಿಎನ್‌ಎ ಅನುಕ್ರಮ ಬದಲಾಯಿಸುವುದು ಕೂಡ ಬಹಳ ಅಗ್ಗ, ಸುಲಭವಾಯಿತು. ಈ ತಂತ್ರeನದ ಮೂಲಕ ಡಿಎನ್‌ಎ ಯ ಒಂದು ಭಾಗ ಕತ್ತರಿಸಿ ತೆಗೆದು ಆ ಭಾಗದಲ್ಲಿ ನಮಗೆ ಬೇಕಾದ ಅನುಕ್ರಮವನ್ನು ಕರಾರುವಕ್ಕಾಗಿ ಜೋಡಿಸಬಹುದು. ಇದನ್ನೆಲ್ಲ ಮಾಡಲು ವಿಜ್ಞಾನಿಯೇ ಆಗಿರಬೇಕೆಂದೇನಿಲ್ಲ, ಸುಸಜ್ಜಿತ ಪ್ರಯೋಗಾಲಯವಿದ್ದರೆ ಒಬ್ಬ ಸಾಧಾರಣ ಲ್ಯಾಬ್ ಅಸ್ಸಿಸ್ಟೆಂಟ್ ಕೂಡ ಇದನ್ನು ಮಾಡಬಹುದು.

ಇದು ತೀರಾ ವೈeನಿಕ ವಿಧಾನವಾದದ್ದರಿಂದ ಅದು ಹೇಗೆ ಮಾಡಲಾಗುತ್ತದೆ ಎನ್ನುವ ವಿಚಾರವನ್ನು ಇಲ್ಲಿ ತೆಗೆದುಕೊಳ್ಳುವುದಿಲ್ಲ. ಬದಲಿಗೆ ಅದರ ಸಾಧ್ಯತೆಗಳನ್ನು ನೋಡೋಣ. ಮೊದಲನೆಯದಾಗಿ ಮನುಷ್ಯನನ್ನು ಅತಿಹೆಚ್ಚು ಕಾಡುವ ಕ್ಯಾನ್ಸರ್ ಚಿಕಿತ್ಸೆಗೆ ಈ ತಂತ್ರಜ್ಞಾನವನ್ನು ಬಳಸುವುದು.
ವ್ಯಕ್ತಿಯ ಕ್ಯಾನ್ಸರ್ ಸೆಲ್ ಅನ್ನು ಪಡೆದು, ಅದರ ಡಿಎನ್ ಎಯನ್ನು ಬದಲಿಸಿ, ಆ ಜೀವಕೋಶವನ್ನು ರೋಗಗ್ರಸ್ತ ಭಾಗದ ಕ್ಯಾನ್ಸರ್ ಜೀವಕೋಶಗಳ ಜತೆ ಬಿಡುವುದು. ಆ ಬದಲಾಯಿಸಿದ ಜೀನ್ ಹೊಂದಿರುವ ಕ್ಯಾನ್ಸರ್ ಜೀವಕೋಶವು ರೋಗಕ್ಕೆ ಕಾರಣವಾದ ಉಳಿದ ಕ್ಯಾನ್ಸರ್ ಜೀವಕೋಶವನ್ನು ಕೊಲ್ಲುವುದು. ಇದು ಸರಳ ವಿವರಣೆ. ಈಗ ಏಐ– ಏಡ್ಸ್‌ನ ಶುಶ್ರೂಷೆಗೂ ಇದೇ ಜೀನ್ ಎಡಿಟಿಂಗ್ ಅನ್ನು ಬಳಸುವತ್ತ ಸಾಕಷ್ಟು ಸಂಶೋಧನೆ ನಡೆಯುತ್ತಿವೆ, ಕೆಲವು ಕೊನೆಯಹಂತದಲ್ಲಿವೆ.

ಇದೇನೆಂದರೆ, ರೋಗಿಯ ಸ್ಟೆಮ್ ಜೀವಕೋಶದ ಜೀನ್ಸ್ ಅನ್ನು ಬದಲಿಸಿಬಿಡುವುದು. ಇದರಿಂದ ಆ ಸ್ಟೆಮ್ಸ್ ಜೀವಕೋಶ ಉತ್ಪಾದಿಸುವ ಪ್ರತಿರಕ್ಷಣಾ ಕೋಶಗಳು ಏಐ ವೈರಸ್‌ಗೆ ಪ್ರತಿರೋಧ ಹೊಂದಿರುತ್ತವೆ. ಕ್ರಮೇಣ ರೋಗಿಯ ದೇಹದಲ್ಲಿರುವ ಏಐ ವೈರಸ್‌ಗಳು ನಾಶವಾಗುತ್ತ ಹೋಗುತ್ತವೆ. ರೋಗಿ ಗುಣಮುಖನಾಗುತ್ತಾನೆ. ಇದೇನಾದರೂ ಸಂಪೂರ್ಣ ಬಳಕೆಗೆ ತಯಾರಾದರೆ ವಾರ್ಷಿಕ ಎಂಟುಲಕ್ಷ ಮಂದಿಯನ್ನು ಕೊಲ್ಲುತ್ತಿರುವ ಏಡ್ಸ್‌ನ ಕೊನೆ ಸಾಧ್ಯ.

ನೀವು ಎIu (ಎಛ್ಞಿಛಿಠಿಜ್ಚಿZqs Iಟbಜ್ಛಿಜಿಛಿb uಜZಜಿoಞo) ಶಬ್ದ, ಉತ್ಪನ್ನಗಳ ಬಗ್ಗೆ ಕೇಳಿಯೇ ಇರುತ್ತೀರಿ. ಇಲ್ಲಿ ಕೂಡ ಅಷ್ಟೇ. ಜಿಎಂಒ ಹತ್ತಿಯೆಂದರೆ ಅವು ಮನುಷ್ಯ ಮೂಲ ಡಿಎನ್‌ಎಯನ್ನು ಬದಲಿಸಿರುವ ಗಿಡಗಳು. ಈ ಬದಲಾವಣೆ ಕೀಟಗಳು ಹತ್ತಿ ಗಿಡವನ್ನು ತಿನ್ನದಂತೆ ಮಾಡುತ್ತವೆ,
ಜತೆಯಲ್ಲಿ ಹೆಚ್ಚಿನ -ಸಲು. ಕಬ್ಬು, ಕಿತ್ತಳೆ, ದ್ರಾಕ್ಷಿ ಮೊದಲಾದವುಗಳ ಜೀನ್ಸ್ ಬದಲಿಸಿ ಅವು ಅಸಹಜವೆನ್ನುವಷ್ಟು ಸಿಹಿ ಯಾಗುವಂತೆ, ಕೊಂಕಿಲ್ಲ ದಂತೆ, ಅತ್ಯಂತ ಕಡಿಮೆ ಸಮಯದಲ್ಲಿ ಬೆಳೆಯುವಂತೆ, ಅಂಗಡಿಯಲ್ಲಿ ಜಾಸ್ತಿ ದಿನ ಬಾಳುವಂತೆ ಮಾಡಿಕೊಂಡಿದ್ದೇವೆ. ಇಂದು ಜಿಎಂಒ ಕಬ್ಬಿನ ಮಟ್ಟಿಗೆ ‘ಕಬ್ಬು ಡೊಂಕಾದರೆ ಸಿಹಿ ಡೊಂಕೇ’ ಎನ್ನುವಂತೆ ಇಲ್ಲ. ಏಕೆಂದರೆ ನೇರ ಬೆಳೆಯುವ ಜಿಎಂಒ ಕಬ್ಬುಗಳಿವೆ.

ಅಲ್ಲದೇ ಇಂದು ಕೃಷಿ ಭೂಮಿಯ ಮಣ್ಣಿನಲ್ಲಿರುವ ಬೆಕ್ಟೇರಿಯಾದ ಜೀನ್ಸ್ ಅನ್ನು ಬದಲಿಸಿ ಅವು ಅಲ್ಲಿನ ಬೆಳೆಗೆ ಸಹಾಯಕವಾಗುವಂತೆ ಮಾಡುವುದು ಕೂಡ ಚಾಲ್ತಿಯಲ್ಲಿದೆ. ಅಮೆರಿಕಾದಲ್ಲಿ ಸಾಲ್ಮನ್ ಮೊದಲಾದ ಮೀನುಗಳು ಕೂಡ ಇಂದು ಜಿಎಂಒ. ಅವು ಸಹಜವಾಗಿ ಪೂರ್ಣ ಬೆಳೆಯಲು ಮೂರು
ವರ್ಷ ಬೇಕು. ಆದರೆ ಜಿಎಂಒ ಸಾಲ್ಮನ್ ಎಂಟೇ ತಿಂಗಳಲ್ಲಿ ಅಷ್ಟು ಬೆಳೆದುಬಿಡುತ್ತವೆ. ಇವೆಲ್ಲ ಶಾಶ್ವತ ಬದಲಾವಣೆ. ಹಾಗೆ ಬದಲಿಸಿದ ಜೀವಿ ಅಥವಾ ಸಸ್ಯದ ಮುಂದಿನ ಸಂತತಿ ಹಾಗೆಯೇ ಮುಂದುವರಿದುಕೊಂಡು ಹೋಗುತ್ತದೆ.

೧೯೯೬ರ ಡಾಲಿ ಕ್ಲೋನ್ ಕುರಿಯ ಬಗ್ಗೆ ಕೇಳಿಯೇ ಇರುತ್ತೀರಿ. ಅದು ಕೇವಲ ಇನ್ನೊಂದು ಕುರಿಯ ಜೈವಿಕ ಪ್ರತಿ ಅಚ್ಚನ್ನು ಹುಟ್ಟಿಸಿದ್ದು. ಆದರೆ ಇಲ್ಲಿ ವಂಶವಾಹಿನಿ ಕೃತಕವಾಗಿ ಯಾದರೂ ಯಥಾವತ್ತು ವರ್ಗಾವಣೆಯಾಗಿತ್ತು. ಆದರೆ ಈಗ ಬೇರೆ ಬೇರೆ, ಸಂಬಂಧವೇ ಇಲ್ಲದ ಜೀವಿಗಳ ಮಿಶ್ರತಳಿ ಈ
ಜೀನ್ ಎಡಿಟಿಂಗ್‌ನಿಂದ ಸಾಧ್ಯ. ಕುರಿಯ ಡಿಎನ್‌ಎ ಪಡೆದು ಅದಕ್ಕೆ ಜೇಡರ ಹುಳದ ಜೀನ್ಸ್‌ನ ತುಂಡನ್ನು ಅಳವಡಿಸಿ ಹೊಸ ನಮೂನೆಯ ಕುರಿಯನ್ನು ಇಂಗ್ಲೆಂಡಿನಲ್ಲಿ ಹುಟ್ಟಿಸಲಾಗಿದೆ. ಖmಜಿbಛ್ಟಿ ಎಟZಠಿ ಎಂದು ಗೂಗಲ್‌ನಲ್ಲಿ ಹುಡುಕಿದರೆ ವಿವರಣೆ ಸಿಗುತ್ತದೆ. ಹೀಗೆ ಎಲ್ಲ ಅಪದ್ಧ ಪ್ರಯೋಗಗಳೂ ಇಂದು ನಡೆಯುತ್ತಿವೆ.

ಮನುಷ್ಯ ಕಾರಣದಿಂದ ಅಥವಾ ಸ್ವಾಭಾವಿಕವಾಗಿ ಕೆಲವು ಜೀವಿಗಳು ನಾಮಾವಶೇಷವಾಗಿವೆ. ಅಂತಹ ನಶಿಸಿ ಹೋದ ಜೀವಿಯ ಒಂದೇ ಒಂದು ಜೀವಕೋಶ ಪಡೆದು ಅದರ ಡಿಎನ್‌ಎ ಸೀಕ್ವೆನ್ಸಿಂಗ್ ತಿಳಿದು, ಕೃತಕವಾಗಿ ತಯಾರಿಸಿ ಅಂಥದ್ದೇ ಪ್ರಾಣಿಯನ್ನು ಇಂದು ಹುಟ್ಟಿಸಬಹುದು. ನಿನ್ನೆ
ತಾನೆ ಪತ್ರಿಕೆಗಳಲ್ಲಿ ಈ ಬಗ್ಗೆ ಒಂದು ಸುದ್ದಿ ವರದಿಯಾಗಿತ್ತು. ‘ಡೋಡೋ’ ಇದು ೧೭ನೇ ಶತಮಾನದಲ್ಲಿ ನಶಿಸಿ ಹೋದ ಹಕ್ಕಿ. ಪಳೆಯುಳಿಕೆಯಲ್ಲಿ ಸಿಕ್ಕ ಅದರ ಡಿಎನ್‌ಎಯ ಅನುಕ್ರಮಣಿಕೆ ಅರಿಯಲಾಗಿ ಅವು ಪಾರಿವಾಳಕ್ಕೆ ಅತ್ಯಂತ ಹತ್ತಿರದ ಸಂಬಂಧಿ ಎನ್ನುವುದು ತಿಳಿಯಿತು. ಈಗ ನಶಿಸಿದ ಮಾರಿಷಸ್‌ನ ಡೋಡೋ ಹಕ್ಕಿಯ ವಿಶೇಷ ದೇಹರಚನೆಗೆ ಕಾರಣವಾದ ಡಿಎನ್‌ಎ ಭಾಗವನ್ನು ಗುರುತಿಸಿ ಅದನ್ನು ಪಾರಿವಾಳದ ಜೀನ್ಸ್ ನಲ್ಲಿ ಬದಲಿಸುವುದು.

ನಂತರ ಅದನ್ನು ಪಾರಿವಾಳದ ಗರ್ಭಕ್ಕೆ ಸೇರಿಸಿ, ಆ ಮೂಲಕ ಮೊಟ್ಟೆ ಪಡೆಯುವುದು. ಆ ಮೊಟ್ಟೆಗೆ ಕಾವು ಕೊಟ್ಟು ಡೋಡೋ ಹಕ್ಕಿಯನ್ನು ಮತ್ತೆ ಹುಟ್ಟಿಸುವುದು. ಈ ಪ್ರಯೋಗವನ್ನು ಈಗ ಇಟ್ಝಟooZ ಆಜಿಟoಜಿಛ್ಞ್ಚಿಛಿo ಎನ್ನುವ ಕಂಪನಿ ನಡೆಸುತ್ತಿದೆ. ಇದು ಹಕ್ಕಿಯ ಮೇಲೆ ಪ್ರಯೋಗಿಸುವ,
ಮೊಟ್ಟೆಯ ಮೂಲಕ ತಾಯಿ ದೇಹದಿಂದ ಹೊರಗಡೆ ವಂಶವಾಹಿನಿಯನ್ನು ಬದಲಿಸಿ ಅನ್ಯ ಜೀವಿಯನ್ನು ಪಡೆಯುವ ಮೊದಲ ಸಾಹಸ. ಇದು ಫಲಕಾರಿಯಾಗುವುದರಲ್ಲಿ ಅನುಮಾನ ಉಳಿದಿಲ್ಲ. ಇದಷ್ಟೇ ಅಲ್ಲ, ನಶಿಸಿಹೋದ ಮ್ಯಾಮತ್ (ಮಹಾಗಜ), ತಾಸ್ಮೆನಿಯಾ ಹುಲಿ ಹೀಗೆ ಹಲವು ಪ್ರಾಣಿಗಳನ್ನು ಮತ್ತೆ ಜೀವಕ್ಕೆ ತರುವ ಕೆಲಸ ಕೂಡ ನಡೆಯಲು ವೇದಿಕೆ ಸಿದ್ಧವಾಗಿದೆ.

೧೯೯೩ ರಲ್ಲಿ ಬಿಡುಗಡೆಯಾದ ಜುರಾಸಿಕ್ ಪಾರ್ಕ್ ಚಿತ್ರದಲ್ಲಿ ಡೈನಾಸಾರಸ್‌ನ ಹುಟ್ಟು ಮತ್ತು ಕಥೆಯ ಹಿಂದಿನ ಕಲ್ಪನೆ ಇಂದು ಸಾಧ್ಯವೆನ್ನುವಷ್ಟು ಈ ತಂತ್ರeನ ಬೆಳೆದಿದೆ. ಡೈನಸಾರಸ್ ಅನ್ನು ಹುಟ್ಟಿಸುವುದೂ ಅಸಾಧ್ಯವೇನಲ್ಲ. ಇಂದು ಯಾವುದೇ ಜೀವಿಯ ಒಂದು ಕೋಶವನ್ನು ಪಡೆದು ಅದಕ್ಕೆ ಕೃತಕವಾಗಿ ಎಲ್ಲ ಪೋಷಕಾಂಶ ಒದಗಿಸಿ ಪ್ರಯೋಗಾಲಯದ ಗ್ಲಾಸುಗಳೊಳಗೆ ಮಾಂಸವನ್ನು ಹೇರಳವಾಗಿ ಉತ್ಪಾದಿಸಲಾಗುತ್ತಿದೆ. ಜೀವಂತ ಪ್ರಾಣಿಯೇ ಇಲ್ಲದೆ ಮಾಂಸೋತ್ಪಾದನೆ. ಇಂದು ಅಮೆರಿಕದ ಉದ್ದಗಲಕ್ಕೂ ಈ ರೀತಿಯ ಕೃತಕ ಮಾಂಸದ ಹೋಟೆಲ್‌ಗಳು ಸಾವಿರದ ತಲೆಯೆ
ತ್ತಿವೆ. ಇದು ಅಹಿಂಸಾ ಮಾಂಸ. ಇದನ್ನು ‘ಇಂಪೋಸ್ಸಿಬಲ್ ಮೀಟ್’ ಎಂದು ಕರೆಯೋದು. ಈಗ ಜೀನ್ ಎಡಿಟಿಂಗ್ ನಿಂದಾಗಿ ಅದೆಂದೋ ನಶಿಸಿದ ಪ್ರಾಣಿಯ ಮಾಂಸವನ್ನು ಆ ಜೀವಿಯನ್ನು ಹುಟ್ಟಿಸದೇ ತಯಾರಿಸಿ ತಿನ್ನುವುದು ಸಾಧ್ಯ.

ಪ್ರಾಣಿ ಯಾವುದೇ ಇರಲಿ, ಅದು ನಶಿಸಿಹೋಗಿದ್ದಾಗಿರಲಿ, ಅದರ ಒಂದು ಜೀವಕೋಶ ಸಿಕ್ಕರೆ ಅದರ ಮಾಂಸ ಪ್ರಯೋಗಾಲಯದಲ್ಲಿಯೇ ಸಿದ್ಧ. ಈ ರೀತಿಯ ಮಾಂಸ ಉತ್ಪಾದನೆ ಇಂದು ಕೋಟಿಗಟ್ಟಲೆ ಡಾಲರ್ ವ್ಯವಹಾರವಾಗಿದ್ದು, ಈಗಾಗಲೇ ಸಾಂಪ್ರದಾಯಿಕ ಮಾಂಸ ಬಳಕೆಯ ಶೇ.೪ರಷ್ಟು ವ್ಯಾಪಿಸಿದೆ. ಮೊದಲು ಹೇಳಿದಂತೆ ಮನುಷ್ಯನ ವಂಶವಾಹಿ ರೋಗಗಳಿಗೆ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳುವುದು ಜೀನ್ ಎಡಿಟಿಂಗ್‌ನಿಂದ ಸಾಧ್ಯ. ಅಷ್ಟೇ ಅಲ್ಲ, ಜೀನ್ ಎಡಿಟಿಂಗ್ ನಿಂದ ಹುಟ್ಟುವ ಮಗುವಿನ ಕಣ್ಣಿನ ಬಣ್ಣ, ಕೂದಲಿನ ಬಣ್ಣ, ಉಗುರು, ಹೀಗೆ ಯಾವ ಅಂಗಾಂಗವನ್ನೂ ಬೇಕಾ ದಂತೆ ಬದಲಿಸಿ ಮಗು ಪಡೆಯಬಹುದು.

ಅತಿಮಾನುಷರನ್ನು ಕೂಡ ಇದರಿಂದ ಹುಟ್ಟಿಸಬಹುದು, ಅದು ಸದ್ಯ. ಹೇಗೆ ಅಮೆರಿಕದ ಸಾಲ್ಮನ್ ಮೀನಿನ ಜೀನ್ಸ್ ಅನ್ನು ಬದಲಿಸಿ ಅದು ಬೇಗ,
ದೊಡ್ಡದಾಗುವಂತೆ, ಸಹಜ ಅಳತೆಗಿಂತ ಜಾಸ್ತಿ ಬೆಳೆಯುವಂತೆ ಮಾಡಬಹುದೋ ಅದೇ ರೀತಿ ಮನುಷ್ಯನ ಜೀನ್ಸ ಅನ್ನು ಬದಲಿಸಿ ಬೇಗ ಮತ್ತು ಜಾಸ್ತಿ ಬೆಳೆಯುವಂತೆ ಮಾಡಬಹುದು. ಹುಟ್ಟುವ ಮಗುವಿನ ಗಾತ್ರ, ಎತ್ತರ, ಬಣ್ಣ ಎಲ್ಲವನ್ನೂ ಬದಲಿಸಲಿಕ್ಕೆ ಸಾಧ್ಯ. ಜೀನ್ಸ್ ಬದಲಾಗುವುದರಿಂದ ಈ
ಬದಲಾವಣೆ ಆ ವ್ಯಕ್ತಿಯಲ್ಲಷ್ಟೇ ಉಳಿಯುವುದಿಲ್ಲ, ವಂಶವಾಹಿನಿಯಾಗಿ ಇವೆಲ್ಲವೂ ಮುಂದುವರಿಯುತ್ತದೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ, ನಾವೆಲ್ಲ ಒಪ್ಪಿದರೆ ಇದರಿಂದ ಹಲವಾರು ಕೃತಕ ಮನುಷ್ಯ ತಳಿಗಳು ಸಾಧ್ಯ.

ಕೆಲವು ತಳಿಗಳು ಏಳೆಂಟು ಅಡಿ ತ್ತರದವರಿರಬಹುದು, ಇನ್ನು ಕೆಲವರು ಇಂಥದ್ದೊಂದಿಷ್ಟು ರೋಗ ಬಾರದ ಮನುಷ್ಯ ತಳಿಗಳಾಗಬಹುದು.
ಇದು ಸಮಾಜವನ್ನು ಹೇಗೆ ಬದಲಿಸುತ್ತದೆ ಎಂಬಿತ್ಯಾದಿ ಹಲವು ನೈತಿಕ ಪ್ರಶ್ನೆಗಳು ಹುಟ್ಟುತ್ತವೆ. ಇದೆಲ್ಲ ನಮ್ಮ ಮುಂದಿರುವ ಈ ತಂತ್ರಜ್ಞಾನದ, ಬೆಳವಣಿಗೆ ಯ ಕೇವಲ ಒಂದು ಝಲಕ್ ಮಾತ್ರ. ಸಾಧ್ಯತೆಗಳು ಊಹೆಯಷ್ಟೇ ಅಸಂಖ್ಯ. ಈ ತಂತ್ರಜ್ಞಾನದ ಬಳಕೆ ಇನ್ನಷ್ಟು ಸುಲಭವಾಗುತ್ತ ಹೋದಂತೆ, ಇದಕ್ಕೆ ಅಂಕುಶವಿಲ್ಲದಿದ್ದರೆ ದುರ್ಬಳಕೆ ಬಹಳ ಸುಲಭದಲ್ಲಿ ಸಾಧ್ಯ. ಇಂತಹ ತಂತ್ರಜ್ಞಾನ ಯಾರ ಕೈಯಲ್ಲಿ, ದೇಶದವರ ಬಳಿ, ಎಂಥಹ ನಾಯಕರಿಗೆ ಸಿಕ್ಕರೆ ಏನೇನು ಆಗಬಹುದು ಎನ್ನುವುದರ ಊಹೆಯನ್ನು ಕೂಡ ನಿಮಗೇ ಬಿಡುತ್ತೇನೆ.

ಹೇಳಬೇಕಾಗಿರುವುದು ಇಷ್ಟೇ, ಇದು ಅಂತಿಂಥ ಅವಿಷ್ಕಾರವಲ್ಲ. ತೀರಾ ಹೊಸತು, ಕೆಲವೇ ವರ್ಷಗಳೂ ಕಳೆದಿಲ್ಲ. ಅಲ್ಲದೇ ಈ ಡಿಎನ್‌ಎ ಬದಲಾವಣೆಯಲ್ಲಿ ಪ್ರಮಾದವಾಗುವ ಸಾಧ್ಯತೆಯೂ ಇದೆ. ಹಾಗೇನಾದರೂ ಆದರೆ ಅಂತಹ ಬದಲಾವಣೆ ಮುಂದಿನ ತಲೆಮಾರಿಗೆ ಶಾಶ್ವತ.
ಆ ಕಾರಣಕ್ಕೇ ಇದೆಲ್ಲದರತ್ತ ಬಹಳ ಹಿಂಜರಿಕೆಯಿದೆ. ಆದರೆ ನಾವು ಸುಮ್ಮನೆ ಕೂರುವುದಿಲ್ಲವಲ್ಲ !