Thursday, 19th September 2024

ಎಲ್ಲರ ಮನೆ ದೋಸೆನೂ ತೂತೇ – ತೇಜಸ್ವಿ ಸೂರ್ಯ

ತುಂಟರಗಾಳಿ

ಸಿನಿಗನ್ನಡ

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಬಿಡುಗಡೆ ಆಗುತ್ತಿರುವ ಎರಡನೇ ಚಿತ್ರ ಲಕ್ಕಿ ಮ್ಯಾನ್ ನಿನ್ನೆ ಅದ್ಭುತ ಓಪನಿಂಗ್ ಕಂಡಿದೆ. ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಆದರೂ ಈ ಚಿತ್ರ ಪುನೀತ್ ಅವರ ಕಾರಣಕ್ಕೆ
ಜನಸಾಗರವನ್ನೇ ಚಿತ್ರಮಂದಿರಕ್ಕೆ ಎಳೆದು ತರುತ್ತಿದೆ. ಈ ಅವಕಾಶ ಬಿಟ್ಟರೆ ಮತ್ತೆ ಪುನೀತ್ ಅವರನ್ನು ನೋಡಲು ಸಾಧ್ಯ ಆಗೋದು ಅವರ ಕಟ್ಟ ಕಡೆಯ ಚಿತ್ರ ಆಗಲಿರುವ ಗಂಧದಗುಡಿಯಲ್ಲಿ ಮಾತ್ರ ಅನ್ನೋದನ್ನು ಕನ್ನಡ ಸಿನಿ ಪ್ರೇಮಿಗಳು ಅರಿತಿದ್ದಾರೆ.

ಹಾಗಾಗಿ, ಲಕ್ಕಿ ಮ್ಯಾನ್ ನೋಡಲು ಇಡೀ ರಾಜ್ಯದ ಕನ್ನಡ ಸಿನಿಮಾ ಪ್ರಿಯರು ಕಾದು ಕುಳಿತಿದ್ದರು. ಈಗ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಅತಿ ಭಾವುಕರಾಗಿ ಸಿನಿಮಾ ಮಾತನಾಡುತ್ತಿರುವುದು ಎಡೆ ಕಾಣಬರುತ್ತಿದೆ. ತಮಿಳು ಚಿತ್ರದ ರಿಮೇಕ್ ಆಗಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಪ್ರಭುದೇವ ಅವರು ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರಿಗಂತ ಹೆಚ್ಚು ಎಲ್ಲರಿಗೂ ಇಷ್ಟ ಆಗುತ್ತಿರುವುದು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರುವ ಪುನೀತ್.

ಈಗ ಬಾರದ ಊರಿನ ಅತಿಥಿಯಾಗಿ ಹೋಗಿರುವ ಪುನೀತ್ ಅವರನ್ನು ತೆರೆಯ ಮೇಲೆ ಮತ್ತೆ ನೋಡಿ ಪ್ರೇಕ್ಷಕರು ಮನಸ್ಸು ಮತ್ತು ಕಣ್ಣು ಎರಡನ್ನೂ ತುಂಬಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅಪ್ಪು ದೇವರ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳ ಭಾವುಕತೆ ಇನ್ನಷ್ಟು ಹೆಚ್ಚಾಗಿದೆ. ನಮ್ಮನ್ನೆ ಅಗಲಿ ದೇವರಾಗಿ ಹೋಗಿರುವ ಅಪ್ಪು, ಮತ್ತೆ ದೇವರಾಗಿ ನಮ್ಮ ಮುಂದೆ ಬಂದಿzರೆ ಅನ್ನೋದೇ ಸಿನಿಮಾ ನೋಡಿದ ಎಲ್ಲ ಪ್ರೇಕ್ಷಕರ ಭಾವುಕ ಮಾತು.

ಕಣ್ಣಂಚಿನಲ್ಲಿ ನೀರಿಟ್ಟುಕೊಂಡೇ ಚಿತ್ರಮಂದಿರಗಳಿಂದ ಹೊರಬರುತ್ತಿರೋ ಪ್ರೇಕ್ಷಕರು, ಅಪ್ಪು ಅವರನ್ನು ತೆರೆ ಮೇಲೆ ನೋಡಿ
ರೋಮಾಂಚಿತರಾಗಿದ್ದಾರೆ. ಇನ್ನು ಸಿನಿಮಾ ಬಗ್ಗೆ ಕೂಡ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಅಪ್ಪು ಜೊತೆ ಈ ಸಿನಿಮಾ ಮಾಡಿ ಡಾರ್ಲಿಂಗ್ ಕೃಷ್ಣ ಅವರು ಲಕ್ಕಿ ಮ್ಯಾನ್ ಎನಿಸಿಕೊಂಡಿದ್ದರೂ, ಈ ಚಿತ್ರ ನೋಡಿದ ನಾವೇ ಲಕ್ಕಿ ಮ್ಯಾನ್ ಅನ್ನೋದು ಅಪ್ಪು ಅಭಿಮಾನಿಗಳನ್ನು ಸೇರಿದಂತೆ ಎಲ್ಲ ಕನ್ನಡ ಸಿನಿಮಾ ಪ್ರೇಕ್ಷಕರ ಅನುಭವ.

ಲೂಸ್ ಟಾಕ್
ತೇಜಸ್ವಿ ಸೂರ್ಯ (ಕಾಲ್ಪನಿಕ ಸಂದರ್ಶನ)
ಏನ್ ಸೂರ್ಯ ಅವರೇ, ದೋಸೆ ತಿನ್ನೋಕೆ ಅಂತ ಹೊರಗೆ ಬಂದಿದ್ದಕ್ಕೆ, ಜನ ನಿಮ್ಮನ್ನ ಟೀಕೆ ಮಾಡಿ ಹಲ್ವಾ ತಿನ್ನಿಸಿಬಿಟ್ರಲ್ಲಾ?
-ಮಳೆ ಬರ್ತಾ ಇರೋದಕ್ಕೆ ‘ಸೂರ್ಯ’ ಹೊರಗೆ ಬರದೇ ಇರೋದೇ ಕಾರಣ ಅಂತ ನನ್ನ ಟೀಕೆ ಮಾಡದೇ ಇರ್ಲಿ ಅಂತ ಬಂದೆ. ಹಿಂಗಾಗೋಯ್ತು ನೋಡಿ

ಆದ್ರೂ, ಏನಾದ್ರೂ ಮಾಡಿ ಸುದ್ದಿಯಲ್ಲಿ ಇರ್ತೀರಾ ಅಲ್ವಾ ನೀವು?

ನಂಗೆ ಟ್ಯಾಲೆಂಟ್ ಇದೆ ಕಣ್ರೀ, ಅದಕ್ಕೇ ಹೆಸರು ಮಾಡಿದ್ದೀನಿ. ಮೋದಿಜಿ ಹೇಳಿರೋ ವಿಡಿಯೋ ನೋಡಿಲ್ವಾ ನೀವು? ‘ಕಿತ್ನೇ ‘ತೇಜಸ್ವಿ’ ಲೋಗ್ ಹೈ ಹಮಾರೇ ಪಾಸ್’ ಅಂತ

ಓಹೋ, ಹೌದು ಬಿಡಿ, ಆದ್ರೂ, ನಿಮ್ಮ ಸರಕಾರ ಮಳೆ ಬಂದ್ರೆ ಹಳ್ಳ ಹಿಡಿಯೋ ರಸ್ತೆ ಮಾಡಿದ್ದಾರೆ ಅಂಥ ಟೈಮಲ್ಲಿ ದೋಸೆ ಪ್ರಚಾರ ಮಾಡಬಹುದಾ? 
-ಏನ್ ಮಾಡೋದು, ಹೋಗ್ಲಿ ಬಿಡಿ ಎಲ್ಲರ ಮನೆ ‘ದೋಸೆ’ನೂ ತೂತೇ

ಅದ್ಸರಿ ಬಿಡಿ, ಅಂದಂಗೆ, ನೀವು ಏನೇ ಮಾಡೋಕೋದ್ರು ಅದು ಉಲ್ಟಾ ಹೊಡೆದು ನಿಮ್ಮ ತಲೆಗೇ ಸುತ್ಕೊಳ್ಳುತ್ತೆ, ನಿಮ ಕಾಲ್ಗುಣ, ಸಾರಿ, ಬಾಯ್ಗುಣ ಸರಿ ಇಲ್ಲ ಅಂತ ನಿಮ್ಮ ಪಕ್ಷದವರೇ ಮಾತಾಡ್ತಾ ಇದ್ದಾರಂತೆ, ಇದಕ್ಕೆ ನಿಮ್ಮ ಉತ್ತರ?
-ನೋಡಿ, ನಾನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ. ಇಂಥ ಪ್ರಶ್ನೆಗಳಿಗೆ ಉತ್ತರ ಕೊಡೊಲ್ಲ.

ಆದ್ರೂ ಜವಾಬ್ದಾರಿಯುತ ಜಾಗದಲ್ಲಿ ಇರೋರು ಯೋಚನೆ ಮಾಡಿ ಬುದ್ಧಿವಂತಿಕೆಯಿಂದ ಮಾತಾಡ್ಬೇಕಲ್ವಾ, ಜೊತೆಗೆ ನಮ್ಮ ಕುವೆಂಪು ಅವರ ಮಗ ತೇಜಸ್ವಿ ಅವರ ಹೆಸರು ಬೇರೆ ಇಟ್ಕೊಂಡಿದ್ದೀರಾ..
-ರೀ ಸ್ವಾಮಿ, ನಾನು ಅವರ ಥರ ಹೆಂಗ್ ಇರೋಕ್ ಆಗುತ್ತೆ? ಅವರು ಪೂರ್ಣಚಂದ್ರ ತೇಜಸ್ವಿ, ನಾನು ತೇಜಸ್ವಿ ಸೂರ್ಯ. ‘ಚಂದ್ರ’ನೂ ‘ಸೂರ್ಯ’ನೂ ಒಂದೇನಾ?

ನೆಟ್ ಪಿಕ್ಸ್
ಕಬ್ಬಿಣದ ಅದಿರು ಸಿಗುವ ಬಳ್ಳಾರಿಯಲ್ಲಿ ಅಕ್ಷಯ ತೃತೀಯದ ದಿನ ನೆಲ ಅಗೆದರೆ ಅಲ್ಲಿ ಸಿಗುವ ಕಬ್ಬಿಣದ ಅದಿರು ಬಂಗಾರದ ಅದಿರಾಗುತ್ತದೆ ಎಂಬುದು ಸೋಮು ಮತ್ತು ಖೇಮು ಅವರ ನಂಬಿಕೆ, ಹಂಗಾಗಿ ಹಿಂದಿನ ದಿನ ರಾತ್ರಿನೇ ಹೋಗಿ ಮೈನಿಂಗ್
ಏರಿಯಾದಲ್ಲಿ ಬೀಡು ಬಿಟ್ಟು ರಾತ್ರಿ ೧೨ ಗಂಟೆಯಿಂದ ನೆಲ ಅಗೆದು ಒಂದಿಷ್ಟು ಅದಿರನ್ನು ಶೇಖರಿಸಿ ಬೆಳಗ್ಗೆ ಅದನ್ನು ಬೆಂಗಳೂರಿಗೆ ಸಾಗಿಸಲು ಕಾದು ಕುಳಿತಿದ್ದರು ಸೋಮು, ಖೇಮು.

ಬೆಳಗ್ಗೆ ಅ ಲೋಕಲ್ ಹೆಲಿಕಾಪ್ಟರ್ ಒಂದನ್ನು ಕರೆಸಿ, ಅದಿರನ್ನು ಅದಕ್ಕೆ ಲೋಡ್ ಮಾಡಲು ಆರಂಭಿಸಿದರು. ಹೆಲಿಕಾಪ್ಟರ್ ಪೈಲಟ್ ‘ಸಾರ್, ಇಷ್ಟೊಂದ್ ಭಾರ ಹಾಕಿದರೆ ನಮ್ ಹೆಲಿಕಾಪ್ಟರ್ ತಡ್ಕೊಳ್ಳೋದಿಲ್ಲ ಅಂದ. ಅದಕ್ಕೆ ಖೇಮು ನೀನು ನಾವ್
ಹೇಳಿದ ಮಾಡು ಸಾಕು, ಲಾ ಇಯರ್ ನಾವು ಇಂಥದ್ದೇ ಹೆಲಿಕಾಪ್ಟರ್‌ನಲ್ಲಿ ಇಷ್ಟೇ ಅದಿರು ಸಾಗಿಸಿದ್ವಿ ಗೊತ್ತಾ, ಆ ಪೈಲೆಟ್ಟೂ ಹಿಂಗೇ ಹೇಳಿದ ನಿಮ್ಗೆ ಏನೂ ಗೊತ್ತಾಗಲ್ಲ’ ಎಂದು ದಬಾಯಿಸಿದ.

ಸರಿ ಅಂತ ಪೈಲಟ್ ಸುಮ್ಮನಾದ, ಸರಿ, ಎಲ್ಲ ಹೇರಿಕೊಂಡು ಹೆಲಿಕಾಪ್ಟರ್ ಹೊರಟಿತು. ಆದರೆ ಒಂದೆರಡು ನಿಮಿಷಗಳ ಹೆಲಿಕಾಪ್ಟರ್ ಕ್ರಾಷ್ ಆಗಿ ಜನ ನಿಬಿಡ ಜಾಗವೊಂದರಲ್ಲಿ ನೆಲಕ್ಕೆ ಅಪ್ಪಳಿಸಿತು. ಆದರೆ ಅದೃಷ್ಟ ವಶಾತ್ ಮೂರೂ ಜನ
ಬದುಕಿಕೊಂಡರು. ಬಿದ್ದ ಜಾಗದಿಂದ ಸೋಮು ಮೈ ಕೊಡವಿಕೊಂಡು ಮೆಲ್ಲನೆ ಏಳುತ್ತಾ ಕೊಂಚ ಗಾಬರಿಯಿಂದ ಕೇಳಿದ ‘ನಾವೆಲ್ಲಿದೀವಿ?’, ಅದಕ್ಕೆ ಖೇಮು ಹೇಳಿದ ‘ಗಾಬರಿ ಆಗ್ಬೇಡ, ಈ ಜಾಗ ನಂಗೆ ಎಲ್ಲೋ ನೋಡಿದಂಗೆ ಅನ್ನಿಸ್ತಿದೆ. ಹೋದ್ ವರ್ಷ ಆ ಪೈಲೆಟ್ ಬ್ಯಾಡ ಬ್ಯಾಡ ಅಂತ ಎಲ್ಲಾ ಹೇಳಿದ್ರೂ ಕೇಳದೇ ಇಷ್ಟೇ ಲೋಡ್ ಹಾಕ್ಕೊಂಡ್ ಹೋಗುವಾಗ ಕ್ರಾಷ್ ಆಗಿ ಬಿದ್ದಿದ್ವಲ್ಲ, ಮೋಸ್ಟ್ಲೀ ಅದೇ ಜಾಗದ ಹತ್ರನೇ ಎಲ್ಲೋ ಇದೀವಿ ಅನ್ಸುತ್ತೆ.

ಲೈನ್ ಮ್ಯಾನ್
ಮತ್ತೆ ಭಾರೀ ಮಳೆ, ಮುಂದುವರಿಯಲಿದೆ ಅನಾಹುತ- ಕೋಡಿ ಮಠದ ಸ್ವಾಮಿ
– ಕೋಡಿ ಮಠ ಅಲ್ವಾ, ಅದಕ್ಕೇ, ಎಲ್ಲಿ ಮಳೆ ಬಂದು ಕೆರೆ ಕೋಡಿ ಬೀಳುತ್ತೆ ಅಂತ
ಮೊದ್ಲೇ ಹೇಳ್ತಾರೆ.

ಎಟಿಎಂ ಗೆ ಅಷ್ಟೇ ಅಲ್ಲ, ಚೆಕ್ ಬುಕ್, ಪಾಸ್ ಬುಕ್, ಮೊಬೈಲ್ ನಂಬರ್ ಬದಲಿಸೋಕೂ ಹಣ ಕೊಡಬೇಕು
-ಬ್ಯಾಂಕ್ ದರೋಡೆ ಕೇಳಿದ್ವಿ. ಇದು ಬ್ಯಾಂಕ್ ನಿಂದಲೇ ದರೋಡೆ

ಒಳ್ಳೆ ಕೆಲಸಕ್ಕೆ ಒಳ್ಳೆ ದಿನ, ಒಳ್ಳೆ ಘಳಿಗೆ ನೋಡೋದು ಮೂಢನಂಬಿಕೆ ಅಲ್ಲ. ಯಾಕಂದ್ರೆ, ಒಳ್ಳೆ ಕೆಲಸ ಮಾಡೋದು ಮುಖ್ಯ ಅಲ್ಲ, ಸರಿಯಾದ ಟೈಮಲ್ಲಿ ಮಾಡಬೇಕು. ಇಂದ್ರೆ ಉಪಯೋಗ ಇಲ್ಲ.

-ಬೇಕಿದ್ರೆ, ವಿರಾಟ್ ಕೊಹ್ಲಿ ಸೆಂಚುರಿ ಹೊಡೆದ ದಿನ ನಾಲ್ಕು ಓವರ್‌ಗೆ ೪ ರನ್ ಕೊಟ್ಟು ೫ ವಿಕೆಟ್ ತೆಗೆದರೂ ಮ್ಯಾನ್ ಆ- ದಿ ಮ್ಯಾಚ್ ಸಿಗದ ಭುವನೇಶ್ವರ್ ಅವರನ್ನೇ ಕೇಳಿ.

ಬೆಂಗಳೂರಲ್ಲಿ ಮಳೆಯ ಆರ್ಭಟಕ್ಕೆ ಜನರ ರಿಯಾಕ್ಷನ್

-ಶೀಘ್ರದ, ಬೆಂಗಳೂರಲ್ಲಿ ಮೆಟ್ರೋ ಟ್ರೈನ್ ಮಾದರಿಯಲ್ಲಿ ಮೆಟ್ರೋ ಬೋಟ್ ಆರಂಭ ಆಗಬೇಕಿದೆ.
– ಮುಖ್ಯಮಂತ್ರಿಗಳೇ ಗಣೇಶನ ಹಬ್ಬದ ಸಮಯದಲ್ಲಿ ಗಣೇಶನ ಮೂರ್ತಿಯನ್ನ ನೀರಲ್ಲಿ ಮುಳುಗಿಸೋದು, ಜನರನ್ನಲ್ಲ.

ಫೇಸ್ ಬುಕ್ ಪ್ರಾಬ್ಲಂ
ಸ್ವಲ್ಪ ಕಷ್ಟ ಇದೆ ದುಡ್ಡು ಬೇಕಿತ್ತು ಕೊಡ್ತೀರಾ ಅಂತ ಮೆಸೇಜ್ ಮಾಡಿದೆ. ರೀ, ನಿಮ್ಮ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿzರೆ ಅಂತ ರಿಪ್ಲೈ ಮಾಡಿದ್ರು.

ಸುದೀಪ್ ಪುಣ್ಯಕೋಟಿ ಯೋಜನೆಯ ರಾಯಭಾರಿ
ಪುಣ್ಯಕೋಟಿ – ‘ಹೆಬ್ಬುಲಿ’ನ ತಗೊಂಡೋಗಿ ಪುಣ್ಯಕೋಟಿ ಮಾಡಿ, ನನ್ ಕಥೆನೇ ಉಲ್ಟಾ ಮಾಡಿಬಿಟ್ರ.

ಚರ್ಚ್ ಗಳಲ್ಲಿ ಕೆಲವರು ಮೈಮೇಲೆ ಕೈ ಇಟ್ಟು ಕಿಡ್ನಿ ಸ್ಟೋನ್ ಕರಗಿಸ್ತಾರಂತೆ.
-ಇದನ್ನು ನೋಡಿನೇ ಲಂಕೇಶ್ ಅವ್ರು ‘ಕಲ್ಲು ಕರಗುವ ಸಮಯ’ ಪುಸ್ತಕ ಬರೆದಿದ್ದು ಅನ್ಸುತ್ತೆ.

ಪೊಲೀಸರು ಅರೆ ಮಾಡಿದ ತಕ್ಷಣ ಬರೋ ಎದೆ ನೋವು
-ಕಾರ್ಡಿಯಾಕ್ ಅರೆ

ಬಿಜೆಪಿಯ ಆಪರೇಶನ್ ಕಮಲಕ್ಕೆ ಪ್ರಚಾರ
-ಯಾರ್ರ‍ೀ ಹೇಳಿದ್ದು, ಬಿಜೆಪಿ ಸರಕಾರ ಎಲ್ಲವನ್ನೂ ಮಾರುತ್ತೆ ಅಂತ?

-ಇದುವರೆಗೂ ೨೭೭ ಎಂಎಲಎಗಳನ್ನ ಖರೀದಿನೂ ಮಾಡಿದೆ ಗೊತ್ತಾ?