ಜಗದಗಲ
ಡಾ.ಜಗದೀಶ್ ಮಾನೆ
ಆಗ ಇನ್ನೂ ಎರಡನೇ ಜಾಗತಿಕ ಮಹಾಯುದ್ಧ ಸಂಪೂರ್ಣ ಅಂತ್ಯವಾಗಿರಲಿಲ್ಲ. ಪೆಸಿಫಿಕ್‌ನಲ್ಲಿ ಜಪಾನ್ ಯುದ್ಧ ಮಾಡುತ್ತಿದ್ದ ವೇಳೆ ಅಮೆರಿಕವು ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳಮೇಲೆ ಅನುಬಾಂಬ್ ಹಾಕಿತ್ತು. ಜಪಾನ್‌ಗೆ ಬಹಳ ದೊಡ್ಡ ಪೆಟ್ಟು ಬೀಳುವ ಮೂಲಕ ಅದು ತನ್ನ ಸೋಲೊಪ್ಪಿಕೊಂಡಿತ್ತು.
ಆ ಸಂದರ್ಭದ 1945 ಅಕ್ಟೋಬರ್ 24ರಂದು ಅಧಿಕೃತವಾಗಿ ವಿಶ್ವ ಸಂಸ್ಥೆಯಕಾರ್ಯ ಆರಂಭವಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಈ ರೀತಿಯ ಯಾವುದೇ ಜಾಗತಿಕ ಸಮರಗಳು ನಡೆಯದಂತೆ ತಡೆಯುವುದೇ ಇದರ ಮೂಲ ಉದ್ದೇಶವಾಗಿತ್ತು. ಆಗ ಎರಡನೇ ಮಹಾಯುದ್ದವನ್ನು ಗೆದ್ದ ಕೂಟದಲ್ಲಿದ್ದ ಆ ಐದು ದೇಶಗಳೇ ವಿಶ್ವಸಂಸ್ಥೆ
ಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆದುಕೊಂಡವು. ಬೇರೆ ಯಾವ ದೇಶಗಳಿಗೂ ಖಾಯಂ ಸದಸ್ಯತ್ವ ವನ್ನು ನೀಡದೆ ಕೇವಲ ತಾತ್ಕಾಲಿಕ ಸದಸ್ಯತ್ವವನ್ನು ಮಾತ್ರ ನೀಡಿದ್ದವು. ಹಾಗಾಗಿ ಆ ರಾಷ್ಟ್ರಗಳಿಗೆ ವಿಟೊ ಅಧಿಕಾರವಿಲ್ಲ.
ಆದರೆ, ಇದೀಗ ಕಳೆದ ಏಳು ದಶಕಗಳಲ್ಲಿ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಅವತ್ತಿನ ಶಕ್ತಿವಂತ ದೇಶ ಗಳಿಗ ಅಶಕ್ತಗೊಂಡಿವೆ. ಅನೇಕ ರಾಷ್ಟ್ರಗಳು ತಮ್ಮ ಶಕ್ತಿ ಸಾಮರ್ಥ್ಯದಿಂದ ಇದೀಗ ಮೇಲೆದ್ದು ನಿಂತಿವೆ. ಆದರೆ
ಭದ್ರತಾ ಮಂಡಳಿಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗಿಲ್ಲ! ಅಂದು ಕೇವಲ ಐವತ್ತು ಸದಸ್ಯ ರಾಷ್ಟ್ರ ಗಳೊಂದಿಗೆ ಪ್ರಾರಂಭವಾದ ವಿಶ್ವಸಂಸ್ಥೆ ಇಂದು 193 ಸದಸ್ಯ ರಾಷ್ಟ್ರಗಳು ಹಾಗೂ ಎರಡು ಅಬ್ಸರ್ವರ್ ದೇಶಗಳಿವೆ. ಈಗ ವಿಶ್ವ ಸಂಸ್ಥೆಯಲ್ಲಿ ಅದರ ಶಕ್ತಿ ಹೆಚ್ಚಾಗಿದೆ.
ಆದರೆ ಅದನ್ನು ಕಂಟ್ರೋಲ್ ಮಾಡುತ್ತಿರುವುದು ಮಾತ್ರ ಕೇವಲ ಆ ಐದೇ ರಾಷ್ಟ್ರಗಳು ಮಾತ್ರ. ಜಗತ್ತಿನ ರಕ್ಷಣೆಗೆ ಶಾಂತಿಯನ್ನು ಕಾಪಾಡುವುದಕ್ಕೆ ಮತ್ತು ಯಾವುದೇ ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಭದ್ರತಾ ಮಂಡಳಿಗೆ ಒಪ್ಪಿಗೆ ಬೇಕು. ಅದನ್ನೂ ಕೂಡಾ ಅರವಿಂದ ಮಾಲಗತ್ತಿಯವರ ಸರಿಯಾಗಿ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ‘ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆದಂತೆ’ ಈ ಐದೂ ದೇಶಗಳಲ್ಲಿ ಮೂರು ಬಣಗಳಾಗಿ ವಿಭಜಿಸಿವೆ. ಬ್ರಿಟನ್ ಹಾಗೂ ಅಮೆರಿಕ ಒಂದೆಡೆ ನಿಂತರೆ, ರಷ್ಯಾ ಮತ್ತು ಚೀನಾ ಒಂದೆಡೆಯಾದರೆ ಪ್ರಾನ್ ತಟಸ್ಥ ವಾಗಿದೆ. ಬೇರೆ ರಾಷ್ಟ್ರಗಳ ಮೂಗಿಗೆ ತುಪ್ಪ ಸವರಲು ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವವನ್ನು ನೀಡಲಾಗಿದೆ.
ಇಲ್ಲಿ ಜಗತ್ತಿನ ಹಲವಾರು ರಾಷ್ಟ್ರಗಳು ಇಂತಿಷ್ಟು ವರ್ಷಗಳ ಅವಧಿಯವರೆಗೆ ಸದಸ್ಯತ್ವವನ್ನು ಪಡೆದುಕೊಂಡಿವೆ ಆದರೆ, ಆ ದೇಶಗಳಿಗೆ ವಿಟೊ ಅಧಿಕಾರ ಇಲ್ಲದೆ ಇರುವುದರಿಂದ ಅವುಗಳ ಪ್ರಾತಿನಿತ್ಯಕ್ಕೂ ಅಂತಹ ಯಾವುದೇ ಶಕ್ತಿ ಇರುವುದಿಲ್ಲ. ಒಂದು ವೇಳೆ ಅವರು ಅಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿದ್ದೇ ಆದಲ್ಲಿ ಖಾಯಂ ಸದಸ್ಯರಾಷ್ಟ್ರಗಳ ಒಂದು ವಿಟೊ ಅದೆಲ್ಲವನ್ನೂ ತಲೆಕೆಳಗಾಗಿಸುತ್ತದೆ. ಹೀಗಾಗಿ ಭಾರತ ಎಂದಿನಿಂದಲೂ ತನ್ನ
ಖಾಯಂ ಸದಸ್ಯತ್ವ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಲೇ ಇದೆ.
ಜಪಾನ್, ಬ್ರೆಜಿಲ್ ಜರ್ಮನ್ ದೇಶಗಳು ಕೂಡ ಸಾಕಷ್ಟು ಬಲಿಷ್ಠವಾಗಿದೆ ಹಾಗಾಗಿ ಈ ರಾಷ್ಟ್ರಗಳಿಗೂ ವಿಶ್ವ ಸಂಸ್ಥೆಯ
ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಸ್ಥಾನ ಸಿಗಬೇಕೆಂಬುದು ಕೂಡಾ ಭಾರತದ ಒತ್ತಾಸೆಯಾಗಿದೆ. ಈ
ನಾಲ್ಕೂ ರಾಷ್ಟ್ರಗಳು ಸಾಕಷ್ಟು ಬಲಿಷ್ಠವಾಗಿವೆ ಆದರೆ ಬೇರೆ ರಾಷ್ಟ್ರಗಳ ಒತ್ತಡದಿಂದಾಗಿ ಅದು ಸಾಧ್ಯವಾಗುತ್ತಿಲ್ಲ.
ಇಟಲಿಯ ನೇತೃತ್ವದಲ್ಲಿ ಹತ್ತು ರಾಷ್ಟ್ರಗಳು ಒಂದು ಕೂಟವನ್ನು ಮಾಡಿಕೊಂಡಿವೆ. ಈ ಗುಂಪಿನಲ್ಲಿ ಇಟಲಿ ಮತ್ತು
ಸ್ಪೇನ್, ಜರ್ಮನಿಗೆ ಸದಸ್ಯತ್ವಸ್ಥಾನ ಸಿಗಬಾರದು ಅಂತ ವಿರೋಧಿಸುತ್ತಿದ್ದರೆ, ದಕ್ಷಿಣ ಕೋರಿಯಾ ಜಪಾನಿನ ಸದಸ್ಯತ್ವ ಸ್ಥಾನಕ್ಕೆ ಕಲ್ಲು ಹಾಕುತ್ತಿದೆ. ಹಾಗೆ ಭಾರತ ಯಾವುದೇ ಕಾರಣಕ್ಕೂ ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ರಾಷ್ಟ್ರವಾಗ ಬಾರದು ಅಂತ ಪಾಕಿಸ್ತಾನ ವಿರೋಧಿಸುತ್ತದೆ.
ಕೊಲಂಬಿಯಾ ಮೆಕ್ಸಿಕೋ ಹಾಗೂ ಅರ್ಜೆಂಟೀನಿಯಾಗಳು ಬ್ರೆಜಿಲ್ ಯಾವುದೇ ಕಾರಣಕ್ಕೂ ಖಾಯಂಸದಸ್ಯ ರಾಷ್ಟ್ರವಾಗಬಾರದು ಅಂತ ಬಿಗಿಪಟ್ಟು ಹಿಡಿದಿವೆ. 1992 ರಿಂದಲೂ ಇಟಲಿ ಹಾಗೂ ಅದರ ತಂಡಗಳು ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ನಮಗೂ ಬೇಡ ಹಾಗೂ ಇನ್ಯಾರಿಗೂ ಬೇಡ ಅನ್ನೋ ಮೊಂಡ ಸಿದ್ಧಾಂತ ವನ್ನು ಮಂಡಿಸುತ್ತಾ ಬಂದಿವೆ. ಇಷ್ಟೆ ಅವಾಂತರಗಳ ಮಧ್ಯೆಯೂ ಕೂಡಾ ಭಾರತಕ್ಕೆ ಮಾತ್ರ ಖಾಯಂ ಸದಸ್ಯತ್ವ ಸ್ಥಾನವನ್ನು ಕೊಡಬೇಕು ರಷ್ಯಾ ಹೇಳುತ್ತಿತ್ತು. ಮತ್ತು ಕೆಲವೊಮ್ಮೆ ಇದಕ್ಕೆ ಅಮೆರಿಕ ಕೂಡಲೇ ಬೆಂಬಲವನ್ನು ನೀಡುತ್ತಿತ್ತು.
ಇದೀಗ ಪ್ರಾಅಧ್ಯಕ್ಷರು ಈ ಬಗ್ಗೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ ನಾವೀಗ ಭದ್ರತಾ ಮಂಡಳಿ
ಯನ್ನು ಹೊಂದಿದ್ದೇವೆ ಆದರೆ ಅದು ಪರಿಪೂರ್ಣವಾಗಿಲ್ಲ, ಆದ್ದರಿಂದ ಎ4 ದೇಶಗಳ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸ್ಥಾನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಅದರ ಪ್ರಥಮ ಆಗ್ರ್ಯವನ್ನು ನಾವು ಭಾರತಕ್ಕೆ ನೀಡುತ್ತೇವೆ ಅಂತ ಹೇಳಿದ್ದಾರೆ.
ಅವರ ಈ ಹೇಳಿಕೆಯ 24 ಗಂಟೆಗಳಲ್ಲಿ ಬ್ರಿಟನ್ ಪ್ರಧಾನಿ ‘ಕೀಯರ್ ಸ್ಟಾರ್ಮರ್’ ಕೂಡಾ ಭಾರತವನ್ನು ಬೆಂಬಲಿಸಿ ದ್ದಾರೆ. ಭದ್ರತಾ ಮಂಡಳಿಯ ಎರಡು ಖಾಯಂ ಸದಸ್ಯ ದೇಶಗಳೀಗ ಭಾರತದ ಸೇರ್ಪಡೆಗೆ ತಮ್ಮ ಒಪ್ಪಿಗೆ
ಸೂಚಿಸಿವೆ. ಇನ್ನು ರಷ್ಯಾ, ಚೀನಾ ಅಮೆರಿಕಾಗಳ ಪೈಕಿ ರಶಿಯಾ ಒಪ್ಪಿಕೊಳ್ಳಬಹುದು ಆದರೆ ಚೀನಾ ಎಂದೆಂದಿ
ನಿಂದಲೂ ಪಾಕಿಸ್ತಾನದಂತೆ ಭಾರತದ ಶತ್ರೂವಾಗಿದೆ.
ಅಮೆರಿಕದ ಎಲ್ಲ ನಿಲುವುಗಳನ್ನು ಭಾರತ ಎಂದಿಗೂ ಬೆಂಬಲಿಸಿಲ್ಲ ಮತ್ತು ಅದರ ಗುಲಾಮನಂತೆ ಯಾವತ್ತೂ
ವರ್ತಿಸಿಲ್ಲ. ಆದ್ದರಿಂದ ಅಮೇರಿಕಾಗೆ ಭಾರತ ಎಷ್ಟೇ ಹತ್ತಿರವಾದರೂ ಅದು ಕೆಲ ವಿಷಯಗಳಲ್ಲಿ ಭಾರತವನ್ನು
ದೂರವಿಡಲೇ ಬಯಸುತ್ತದೆ. ಈಗ ಭಾರತಕ್ಕೆನಾದರೂ ಖಾಯಂ ಸದಸ್ಯತ್ವ ಸ್ಥಾನವನ್ನು ಕೊಟ್ಟುಬಿಟ್ಟರೆ ಮುಂದೆ
ಅದು ರಷ್ಯಾದಪರ ನಿಲ್ಲಬಹುದು ಮತ್ತು ಈಗಿರುವಂತೆ ತನ್ನ ತಟಸ್ಥ ನಿಲುವುಗಳನ್ನು ಹೊಂದುವ ಮೂಲಕ ತನ್ನ ಮೂಗಿನ ನೇರಕ್ಕೆ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿರುತ್ತವೆ ಎಂಬ ಭಯ ಅಮೆರಿಕಕ್ಕಿದೆ. ಇಲ್ಲಿವರೆಗೂ ಅಮೆರಿಕ ಈ ವಿಷಯದಲ್ಲಿ ಭಾರತದ ಬಗ್ಗೆ ಏನನ್ನೂ ಹೇಳಿಲ್ಲ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯೋದಕ್ಕೆ ಭಾರತಕ್ಕೆ ನಾಲ್ಕಾರು ಅಡೆತಡೆಗಳಿವೆ. ಅದರಲ್ಲಿ ಮುಖ್ಯವಾಗಿ ಚೀನಾ. ಈ ವಿಷಯದಲ್ಲಿ ಚೀನಾ ಭಾರತವನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವು ದಿಲ್ಲ. ಕಾರಣ, ಭಾರತವು ಇಡೀ ಏಷ್ಯಾದಲ್ಲಿ ಚೀನಾಗೆ ಪರ್ಯಾಯವಾಗಿ ಬೆಳೆದು ನಿಂತಿದೆ. ಹೀಗಾಗಿ ಚೀನಾ ಭಾರತ ವನ್ನು ಬೆಂಬಲಿಸುವುದಿಲ್ಲ. ಆದರೆ ಚೀನಾ ಇತ್ತೀಚಿಗೆ ಹೊಸ ನವರಂಗಿ ಆಟ ಶುರು ಮಾಡಿದಂತೆ ಕಾಣುತ್ತಿದೆ. ಅದು, ಎ೪ ದೇಶಗಳಲ್ಲಿ ಭಾರತವು ಜಪಾನ್ ಅನ್ನು ಹೊರತುಪಡಿಸಿ ಬರುವುದಾದರೆ ಭಾರತವನ್ನು ಬೆಂಬಲಿಸುವ ಬಗ್ಗೆ ಚೀನಾ ಯೋಚಿಸುತ್ತದೆ ಅಂತ ಹೇಳುತ್ತಿದೆ.
ಕಾರಣ ಜಪಾನ್ 1930-1940 ದಶಕದಲ್ಲಿ ಚೀನಾಗೆ ಕೊಟ್ಟಿರುವ ಆ ಹೊಡೆತವನ್ನು ಚೀನಾ ಇವತ್ತಿಗೂ ಮರೆತಿಲ್ಲ. ಜಪಾನ್ ವಿರುದ್ಧ ಚೀನಾ ಸದಾ ಕತ್ತಿ ಮಸೆಯುತ್ತಲೇ ಇದೆ. ಒಂದು ವೇಳೆ ಭಾರತ ಜಪಾನನ್ನು ಬಿಟ್ಟಿದ್ದೇ ಆದಲ್ಲಿ ಎ4 ದೇಶಗಳ ಒಗ್ಗಟ್ಟು ಹೊಡೆದು ಹೋಗುತ್ತದೆ ಅನ್ನೋದು ಚೀನಾದ ಲೆಕ್ಕಾಚಾರ. ಆದರೆ ಭಾರತದ ವಿದೇಶಾಂಗ ಸಚಿವರು ಯಾವುದೇ ಕಾರಣಕ್ಕೂ ಎ೪ ದೇಶಗಳನ್ನು ನಾವು ಬಿಟ್ಟುಕೊಡುವುದಿಲ್ಲ ಅಂತ ಹೇಳಿದೆ. ಹೀಗಾಗಿ ಚೀನಾ ಭಾರತದ ಸದಸ್ಯತ್ವಕ್ಕೆ ಒಪ್ಪಿಗೆ ಕೊಡುವುದು ಕಷ್ಟ. ಭಾರತ ಹಾಗೂ ಜಪಾನ್ ಎರಡು ರಾಷ್ಟ್ರಗಳು ಏಷ್ಯಾದಲ್ಲಿ ಇವೆ.
ಪೂರ್ವ ಏಷ್ಯಾದಿಂದ ಚೀನಾ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ. ಇನ್ನು ಜರ್ಮನಿ ಯುರೋಪ್ ಖಂಡದಲ್ಲಿದೆ ಅಲ್ಲಿ – ಹಾಗೂ ಬ್ರಿಟನ್‌ಗಳ ಜೊತೆ ಜರ್ಮನಿ ಕೂಡ ಸೇರಿಕೊಳ್ಳುತ್ತದೆ. ಹಾಗಾಗಿ ಏಷ್ಯಾ ಹಾಗೂ ಯುರೋಪ್ ದೇಶಗಳೇ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವವನ್ನು ಪಡೆಯುವು ದರಿಂದ ಇದು ರೀಜನಲ್ ಕಾನ್‌ಫ್ಲಿಟ್‌ಗಳಿಗೆ ಕಾರಣವಾಗುತ್ತದೆ. ಹಾಗಾಗಿ ಇದು ಎ4 ದೇಶಗಳ ಖಾಯಂ ಸದಸ್ಯತ್ವ ಕ್ಕಿರುವ ಬಹುದೊಡ್ಡ ಅಡ್ಡಿಯೂ ಆಗಿದೆ.
ಪಶ್ಚಿಮದ ದೇಶಗಳು ಹಾಗೂ ಅಮೆರಿಕ ತನ್ನ ಮಾತನ್ನು ಕೇಳದ ಭಾರತಕ್ಕೆ ತನ್ನ ಬೆಂಬಲವನ್ನು ಕೊಡಬಹುದಾ ಎನ್ನುವ ಅನುಮಾನವಂತೂ ಇದ್ದೇ ಇದೆ. ಆದರೆ ಬ್ರಿಟನ್ ಹಾಗೂ ಪ್ರಾಗಳು ಭಾರತದ ಸದಸ್ಯತ್ವಕ್ಕೆ ಜೈಕಾರ ಹಾಕಿವೆ. ಸದ್ಯಕ್ಕೆ ಭದ್ರತಾ ಮಂಡಳಿಯಲ್ಲಿ ಸ್ಥಾನವನ್ನು ಪಡೆದಿರುವ ಈ ಐದೂ ದೇಶಗಳು ಕೇವಲ ಮೂರು ಖಂಡಗಳಿಗೆ ಮಾತ್ರ ಸೀಮಿತವಾಗಿವೆ. ಇಲ್ಲಿ ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ ಖಂಡಗಳಿಂದ ಯಾವುದೇ ದೇಶಗಳನ್ನು ಭದ್ರತಾ ಮಂಡಳಿಗೆ ತೆಗೆದುಕೊಂಡಿಲ್ಲ. ಎ೪ ದೇಶಗಳಲ್ಲಿ ಬ್ರೆಜಿಲ್ ಇರುವುದರಿಂದ ಆ ಕೊರತೆಗಳನ್ನು ಒಂದಿಷ್ಟರ ಮಟ್ಟಿಗೆ ನಿವಾರಣೆ ಯಾಗುತ್ತದೆ. ಇವುಗಳ ಜೊತೆಗೆ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾಗಳಿಗೂ ಕೂಡಾ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವವನ್ನು ಕಲ್ಪಿಸಿಕೊಡುವ ಮೂಲಕ ಈಗಾಗಿರುವ ಅನ್ಯಾಯವನ್ನು ಸರಿಪಡಿಸ ಬೇಕು ಎಂಬ ಚರ್ಚೆಗಳು ನಡೆದಿವೆ. ಇದಕ್ಕೆ ಆ ಐದೂ ದೇಶಗಳು ಅದಕ್ಕೆ ಹೇಗೆ ಸ್ಪಂದಿಸುತ್ತವೆ ಎಂಬುದು ನಮ್ಮ ಮುಂದಿರುವ ಸದ್ಯದ ಪ್ರಶ್ನೆ.
(ಲೇಖಕ: ರಾಜ್ಯಶಾಸ್ತ್ರ ಅಧ್ಯಾಪಕರು ಹಾಗೂ ವಿಶ್ಲೇಷಕರು)
ಇದನ್ನೂ ಓದಿ: Aamir Khan : ಅನುರಾಗ್ ಬಸು ನಿರ್ದೇಶನದ ಕಿಶೋರ್ ಕುಮಾರ್ ಬಯೋಪಿಕ್‌ನಲ್ಲಿಆಮೀರ್ ಖಾನ್!