Saturday, 16th November 2024

Dr Jagadish Maane Column: ನೆಗೆಟಿವ್‌ ಆಲೋಚನೆಗಳಿಂದ ಹೊರಬರಲು ಹೀಗೆ ಮಾಡಬೇಕು

ಬಿ ಪಾಸಿಟಿವ್‌

ಡಾ.ಜಗದೀಶ್‌ ಮಾನೆ

ಈ ಜಗತ್ತಿನಲ್ಲಿ ಮನುಷ್ಯನಿಗೆ ಅರ್ಥವಾಗದ ವಿಷಯ ಅಂದರೆ, ಅದು ನಮ್ಮ ಮಿದುಳು. ಒಬ್ಬ ವಯಸ್ಕನ ಮೆದುಳಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಬಿಲಿಯನ್‌ನಷ್ಟು ನ್ಯೂರಾಗಳಿರುತ್ತವೆ ಮತ್ತು ಇವುಗಳಲ್ಲಿ ಪ್ರತಿ ನ್ಯೂರಾನ್ ಹತ್ತು ಸಾವಿರದಷ್ಟು ಜೀವಕೋಶಗಳೊಂದಿಗೆ ಸಂಪರ್ಕ ಹೊಂದಿರುತ್ತವೆ. ಈ ಸಂಪರ್ಕಗಳ ಮೂಲಕ ನಮ್ಮ ಮಿದುಳು ಸಿಗ್ನಲ್ ಗಳಲ್ಲಿ ಆಲೋಚನೆಗಳನ್ನು ಸಂದೇಶಗಳ ರೂಪದಲ್ಲಿ ಕಳುಹಿಸುತ್ತದೆ. ಇದನ್ನು ಸಿನ್ಯಾ ಎಂದು ಕರೆಯುತ್ತಾರೆ.

ಇವುಗಳನ್ನು ಸರಿಯಾಗಿ ಲೆಕ್ಕ ಹಾಕಿದರೆ ಅವು ನೂರು ಟ್ರಿಲಿಯನ್ ಕನೆಕ್ಷನ್ ಗಳಾಗುತ್ತವೆ. ಇವು ನಮ್ಮ ಗ್ಯಾಲಕ್ಸಿಯಲ್ಲಿರುವ ನಕ್ಷತ್ರಗಳ ಸಂಖ್ಯೆ
ಯನ್ನೂ ಮೀರಿಸುತ್ತವೆ. ಒಂದು ಅಧ್ಯಯನದಿಂದ ತಿಳಿಯದು ಬಂದಂತೆ ಈ ಸಂಪರ್ಕಗಳ ನಡುವಿನ ಸಿನ್ಯಾ ಒಂದು ಎಲೆಕ್ಟ್ರಿಸಿಟಿಯನ್ನು ಜನರೇಟ್
ಮಾಡುತ್ತದೆ. ನಮ್ಮ ಮೆದುಳಿಗೆ ಸುಮಾರು 70 ಗಂಟೆಗಳ ಕಾಲ ಒಂದು ಸ್ಮಾರ್ಟ್ ಫೋನನ್ನು ಕನೆಕ್ಟ್‌ ಮಾಡಿದಾಗ ಅದು ಸಂಪೂರ್ಣವಾಗಿ ಚಾರ್ಜ್ ಆಗುವಷ್ಟು ಕರೆಂಟನ್ನು ಉತ್ಪಾದಿಸುವಷ್ಟು ಸಾಮರ್ಥ್ಯ ಅದಕ್ಕಿದೆ. ಸಾಮಾನ್ಯವಾಗಿ ನಮ್ಮ ಮೆದುಳು 2.5 ಮಿಲಿಯನ್ ಗೀಗಾ ಬೈಟ್‌ ನಷ್ಟು ಮೆಮೊರಿ ಸಂಗ್ರಹಣೆಯ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಮೆಮೊರಿಯ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಈ ಮೆಮೊರಿಯನ್ನು ಟಿವಿಯಲ್ಲಿ ಪ್ರದರ್ಶಿಸಿದರೆ ಅದನ್ನು ಸಂಪೂರ್ಣವಾಗಿ ನೋಡುವುದಕ್ಕೆ ಸುಮಾರು 300 ವರ್ಷಗಳಷ್ಟು ಸಮಯ ಬೇಕಾಗುತ್ತದೆ. ಅದು ಅಷ್ಟೊಂದು ಪವರ್ ಫುಲ್ ಆಗಿದೆ.

ಸಾಮಾನ್ಯವಾಗಿ ಮನುಷ್ಯನು ಯಾವುದೇ ಒಂದು ಅಭ್ಯಾಸವನ್ನು ಸತತವಾಗಿ 21 ದಿನಗಳ ಕಾಲ ಅನುಸರಿಸಿದರೆ ಅದು ನಮ್ಮ ಮೆದುಳು ಆ ಅಭ್ಯಾಸವನ್ನು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತದೆ. ಆ 21 ದಿನಗಳ ಅಭ್ಯಾಸವನ್ನು ಅನುಸರಿಸುವ ಮೂಲಕ 6 ಬ್ರೈನ್ ಹ್ಯಾಬಿಟ್ಸ್ ಗಳನ್ನು ನಮ್ಮ ಮೆದುಳು ಸೂಪರ್ ಬ್ರೈನ್ ಗೆ ಪರಿವರ್ತಿಸುತ್ತದೆ. ಅದಕ್ಕೆ ಅಷ್ಟೊಂದು ಸಾಮರ್ಥ್ಯವಿದೆ. ‘Habits to increase brain
health‌ ’: ನಮ್ಮ ವಯಸ್ಸು ಹೆಚ್ಚಾಗುತ್ತಾ ಹೋದಂತೆ ನಾವು ಸಾವಿರಾರು ಬ್ರೈನ್ ಸೆಲ್ಸ್‌ಗಳನ್ನು ಕಳೆದುಕೊಳ್ಳುತ್ತೇವೆ. ಒತ್ತಡ, ಡ್ರಗ್ಸ್ ಮತ್ತು ಮದ್ಯಪಾನದಂತಹ ಮುಂತಾದ ದುಷ್ಚಟಗಳಿಗೆ ಒಳಗಾಗುವವನು ಈ ಬ್ರೈನ್ ಸೆಲ್ಸಗಳನ್ನು ಕಳೆದುಕೊಳ್ಳುತ್ತಾನೆ. ಹೀಗೆ ಕಳೆದುಕೊಂಡ ಬ್ರೈನ್ ಸೆಲ್ಸಗಳನ್ನು ಪುನಃ ತಿರುಗಿ ರಿಪ್ಲೇಸ್ ಮಾಡಲು ಸಾಧ್ಯವಿಲ್ಲ ಅಂತ ವಿಜ್ಞಾನಿಗಳು ಹೇಳುತ್ತಾರೆ.

ಆದರೆ, ಇತ್ತೀಚೆಗೆ ನಡೆದ ಸಂಶೋಧನೆಯಿಂದ 60 ರಿಂದ 80 ವರ್ಷ ವಯಸ್ಸಿನಲ್ಲಿಯೂ ಹೊಸ ಬ್ರೈನ್ ಸೆಲ್ಸಗಳನ್ನು ಅಭಿವೃದ್ಧಿ ಪಡಿಸಬಹು ದೆಂಬುದು ತಿಳಿದು ಬಂದಿದೆ. ಆದರೆ ಈ ಹೊಸ ಸೆಲ್ಸಗಳನ್ನು ಬೆಳೆಯಲು ನಮ್ಮ ಮೆದುಳಿಗೆ ಬೆಂಬಲ ನೀಡುವುದು ಅಗತ್ಯವಾಗಿದೆ. ನಮ್ಮ ದೇಹದ ತೂಕದಲ್ಲಿ ಕೇವಲ ಎರಡು ಪರ್ಸೆಂಟ್ ಮಾತ್ರ ನಮ್ಮ ಬ್ರೇನಿನ ತೂಕವಿದೆ. ಹಾಗಿದ್ದರೂ ಅದಕ್ಕೆ ಬ್ಲಡ್ ಸರ್ಕ್ಯುಲೇಷನ್ ಶೇಕಡಾ 20ರಷ್ಟು ಅಂದ್ರೆ, ನಮ್ಮ ದೇಹದಲ್ಲಿ ಸಪ್ಲೈ ಆಗುವ ಬ್ಲಡ್ ಸರ್ಕ್ಯೂಲೇಶನ್ನಲ್ಲಿ ಶೇಕಡಾ 20ರಷ್ಟು ನಮ್ಮ ಮೆದುಳಿಗೆ ಬೇಕಾಗುತ್ತದೆ.

ನಮ್ಮ ರಕ್ತದಲ್ಲಿ ಆಕ್ಸಿಜನ್ ಗ್ಲುಕೋಸ್ ನಮ್ಮ ಬ್ರೈನ್‌ಗೆ ರಕ್ತವು ಸರ್ಕೂಲೇಷನ್ ಆಗುವುದರಿಂದ ಮತ್ತು ಈ ಎರಡೂ ನಮ್ಮ ಮೆದುಳಿಗೆ ತುಂಬಾ
ಅವಶ್ಯಕವಾಗಿರುತ್ತದೆ. ಹೀಗೆ ಬ್ಲಡ್ ಸರ್ಕ್ಯುಲೇಶನ್ ಆಗುವುದರಿಂದ ಬ್ರೈನಿನಲ್ಲಿರುವ ನ್ಯೂರಾ ಫೈರ್ ಆಗುತ್ತಿರುತ್ತವೆ. ಹೀಗೆ ನಿರಂತರವಾಗಿ ರಕ್ತದ – ಕರೆಕ್ಟಾಗಿ ಇದ್ದರೆ ಯಾವುದೇ ರೀತಿಯ ಮೆರೆಯುವಿಕೆ, ‘ಅಲ್ ಝೈಮರ್’ ನಂತಹ ಕಾಯಿಲೆಗಳು ಮೆದುಳಿನಿಂದ ದೂರ ಇರುತ್ತವೆ. ಹಾಗಾಗಿ ರಕ್ತದ ಚಲನವು ಸರಾಗವಾಗಿರಬೇಕೆಂದರೆ ನಿತ್ಯ ವಾಕಿಂಗ್, ವ್ಯಾಯಾಮಗಳನ್ನು ಮಾಡಬೇಕು. ಹಾಗಾದಾಗ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಅದರಿಂದ ಕ್ರಿಯೇಟಿವ್ ಐಡಿಯಾಗಳು ಬರುತ್ತವೆ.

’Habit to increase brain memory’: ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ 65 ಜನರಲ್ಲಿ ಒಬ್ಬರಲ್ಲಿ ಬುದ್ಧಿಮಾಂದ್ಯತೆ ಎಂಬ ಆರೋಗ್ಯ ಸಮಸ್ಯೆ ಇರುತ್ತದೆ. ಹಾಗೆ ಸಂಶೋಧನೆಯೊಂದರ ಪ್ರಕಾರ ಈ ಸಂಖ್ಯೆಯ ಪ್ರಮಾಷ 2050ರ ವೇಳೆಗೆ ಈಗಿರುವ ಮೂರರಷ್ಟು
ಹೆಚ್ಚಾಗುವ ಸಾಧ್ಯತೆಗಳಿವೆ. ಈ ಬುದ್ಧಿಮಾಂದ್ಯತೆಗೆ ಯಾವುದೇ ಉತ್ತಮ ಚಿಕಿತ್ಸೆ ಗಳಿಲ್ಲದೆ ಇರುವುದರಿಂದ ನಮ್ಮ ಆಹಾರ ಪದ್ಧತಿಯನ್ನು
ಬದಲಾಯಿಸುವುದಷ್ಠೆ ಇದಕ್ಕಿರುವ ಪರಿಹಾರವೆಂಬುದು ವೈದ್ಯರ ಸಲಹೆ. ನಮ್ಮ ಮೆದುಳಿನ ಜ್ಞಾಪಕ ಶಕ್ತಿಯನ್ನು ಉತ್ತಮವಾಗಿಸಲು
ನಾವು ತೆಗೆದುಕೊಳ್ಳಬೇಕಾದ ಉತ್ತಮ ಆಹಾರಗಳೆಂದರೆ ಅವು ಬೆರ್ರಿ ಹಣ್ಣುಗಳು.

ಸ್ಟ್ರಾಬೆರಿ, ಬ್ಲೂಬೆರಿ, ಬ್ಲಾಕ್ಬೆರಿ ಇತ್ಯಾದಿ ಹಣ್ಣುಗಳು. ಆದರೆ ನಮ್ಮ ದೇಶದಲ್ಲಿ ಇವುಗಳಲ್ಲಿ ಕೆಲವೊಂದು ಹಣ್ಣುಗಳು ಸಿಗುವುದು ಬಹಳ ಕಷ್ಟಸಾಧ್ಯ. ಸ್ಟ್ರಾಬೆರಿ ಕೆಲಸ ಸ್ಥಳಗಳಲ್ಲಿ ಸಿಗುತ್ತದೆ. ನಮ್ಮಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿ ಕೂಡಾ ಉತ್ತಮ ಆಹಾರ. ಹಾಗೆ ಇಲ್ಲಿ ಹೆಚ್ಚಾಗಿ ಸಿಗುವ ನೆರಳೆಹಣ್ಣಿನ ಜೊತೆಗೆ ಚಿಯಾಸಿಕ್ಸ್, ಸನ್‌ ಫ್ಲವರ್ ಸೀಡ್ಸ್ ಹಾಗೂ ಪಂಪ್ಕಿನ್ ಸೀಡ್ಸ್ ಇವುಗಳು ನಮ್ಮ ಮೆದುಳಿನ‌ ಆರೋಗ್ಯವನ್ನು ಉತ್ತಮಗೊಳಿಸಲು ಹೆಚ್ಚು
ಸಹಕಾರಿಯಾಗಿದೆ. ನಮ್ಮ ಮೆದುಳಿನಲ್ಲಿ ಶೇಕಡ 60ರಷ್ಟು ಫ್ಯಾಟ್ ಇರುತ್ತದೆ. ಆದ್ದರಿಂದ ಮೆದುಳಿಗೆ ಒಮೆಗಾತ್ರಿ ಫ್ಯಾಟಿ ಆಸಿಡ್‌ನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದು ಹೆಚ್ಚಾಗಿ ಸಿಹಿ ಫುಡ್ ಹಾಗೂ ಮೊಟ್ಟೆಯಲ್ಲಿ ದೊರೆಯುತ್ತದೆ. ಈ ಎಲ್ಲ ಆಹಾರಗಳನ್ನು ನಮ್ಮ ಡಯಟ್‌ನಲ್ಲಿ 21 ದಿನಗಳ ಕಾಲ ಉಪಯೋಗಿಸಿದರೆ ನಂತರ ಅದರ ಪರಿಣಾಮ ನಮಗೆ ಸರಳವಾಗಿ ಅರಿವಾಗುತ್ತದೆ.

’Habit to increase brain hydration ’: ಒಂದು ಕಾರು ಉತ್ತಮವಾಗಿ ಚಲಾಯಿಸಬೇಕಾದರೆ ಅದಕ್ಕೆ ಇಂಧನ ತುಂಬುವುದು ಅಗತ್ಯ. ಹಾಗೆಯೇ ನಮ್ಮ ಮೆದುಳು ಕೂಡ ಪವರ್ ಫುಲ್ ಆಗಿ ಕಾರ್ಯ ನಿರ್ವಹಿಸಲು ಬೇಕಾದ ಪ್ಯುಲ್ ಅಂದರೆ ಅದು ‘ನೀರು’. ನಮ್ಮ ದೇಹದಲ್ಲಿ ಸುಮಾರು ಶೇ.75ರಷ್ಟು ನೀರಿರುತ್ತದೆ.

ಆದರೆ ಈ ಮಟ್ಟದಲ್ಲಿ ಒಂದೇ ಒಂದು ಪರ್ಸೆಂಟ್ ಕಡಿಮೆಯಾದರೂ ಅದು ದೇಹದ ಆರೋಗ್ಯದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಇದರಿಂದ
ಬೇಗನೆ ಸುಸ್ತು ಬರುತ್ತದೆ ಹಾಗೂ ನಿಧಾನವಾಗಿ ಪ್ರತಿಸ್ಪಂದಿಸುತ್ತೇವೆ. ಅಂದ್ರೆ ನಮ್ಮ ಬ್ರೇನಿಗೆ ಬೇಕಾದ ಪ್ಯುಲ್ ಸರಿಯಾಗಿ ದೊರಕುತ್ತಿಲ್ಲ
ಎಂಬುದೇ ಇದರ ಅರ್ಥ. ನಮ್ಮ ಮೆದುಳು ಸಂಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಬೇಕಾದರೆ ಅದಕ್ಕೆ ಅಗತ್ಯವಾದಷ್ಟು ನೀರನ್ನು
ನಿತ್ಯ ಪೂರೈಸಬೇಕು. ನಾವೆ ಪ್ರತಿನಿತ್ಯ ಉಸಿರಾಡುವ ಉಸಿರಿನಿಂದಲೇ ನಮ್ಮ ದೇಹದಲ್ಲಿ ಒಂದು ಗ್ಲಾಸ್ ನೀರು ನಮಗೆ ತಿಳಿಯದೆ ಖರ್ಚಾಗಿ
ಹೋಗುತ್ತದೆ. ಹಾಗೆ ನಿತ್ಯ ನಮ್ಮ ದೇಹದಿಂದ ಹೊರಬರುವ ಕಲ್ಮಶಗಳಿಂದ ಆರು ಗ್ಲಾಸನಷ್ಟು ನೀರು ಹೊರ ಹೋಗುತ್ತದೆ.

ಅಂದ್ರೆ ನಾವು ಪ್ರತಿ ದಿನ ಎರಡು ಲೀರ್ಟ ನಷ್ಟು ನೀರನ್ನು ಬದುಕಿರಲು ಖರ್ಚು ಮಾಡುತ್ತೇವೆ. ನಮ್ಮ ದೇಹಕ್ಕೆ ಅಗತ್ಯವಾದ ನೀರನ್ನು ನೀಡದೇ ಇದ್ದರೆ ಡಿ ಹೈಡ್ರೇಶನ್ ಆಗಲು ಪ್ರಾರಂಭವಾಗುತ್ತದೆ. ಇದು ಕಾಲ ಕ್ರಮೇಣ ಶಾರ್ಟ್ ಮೆಮೊರಿ ಲಾಸ್, ತಲೆನೋವು ಹಾಗೂ ದೃಷ್ಟಿ ದೋಷ ಗಳನ್ನು ಉಂಟುಮಾಡುತ್ತದೆ. ಆದ್ದರಿಂದ ನಾವು ಆರೋಗ್ಯವಾಗಿರಲು ಹೆಚ್ಚು ನೀರನ್ನು ಕುಡಿಯಬೇಕು. ಪುರುಷರು ಕನಿಷ್ಠ 3.7 ಲೀಟರ್ ಮಹಿಳೆಯರು 2.7 ಲೀಟರ್‌ನಷ್ಟು ನೀರನ್ನು ನಿತ್ಯ ಕುಡಿಯಬೇಕು ಹೀಗಾದಾಗ ನಮ್ಮ ಮೆದುಳು ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ.

’’Habit to increase brain strength ’:ನಿತ್ಯ ನಾವು ಈಜುವುದರಿಂದ ನಮ್ಮ ಹೊಟ್ಟೆಯ ಕೆಳಭಾಗದಲ್ಲಿರುವ ಮಜಲ್ಸ ಗಳು
ಗಟ್ಟಿಯಾಗುತ್ತವೆ. ಹೆಚ್ಚು ತೂಕ ಎತ್ತಿದಾಗ ಮಜಲ್ಸ್ ಗಳು ವೃದ್ಧಿಯಾಗುತ್ತವೆ. ರನ್ನಿಂಗ್ ಮಾಡುವು ದರಿಂದ ತೊಡೆಯ ಖಂಡಗಳು ಬೆಳೆಯುತ್ತವೆ.
ಹೀಗಾಗಿ ನಾವು ಮಾಡುವ ಪ್ರತಿಯೊಂದು ವ್ಯಾಯಾಮವು ದೇಹದ ಶಕ್ತಿಯೊಂದಿಗೆ ದೇಹದ ಪ್ರತ್ಯೇಕ ಸ್ತರಗಳನ್ನು ವೃದ್ಧಿಸುತ್ತದೆ. ಆದ್ದರಿಂದ
ನಮ್ಮ ಬ್ರೈನಿನ ಶಕ್ತಿಯನ್ನು ಹೆಚ್ಚಿಸುವ ವ್ಯಾಯಾಮಗಳನ್ನು ನಾವು ಮಾಡಬೇಕು. ಅದರಲ್ಲಿ ಸಾಮಾನ್ಯವಾಗಿ ಮೂರು ರೀತಿಯ ವ್ಯಾಯಾ
ಮಗಳು ಅವಶ್ಯಕವಾಗಿವೆ. ’Crystallized intelligence’ಅಂದ್ರೆ ಓದಿರುವುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಜ್ಞಾನ ವೃದ್ಧಿಸುವಿಕೆ.
’Fluid intelligence’ ಅಂದ್ರೆ ಇದು ಹೊಸ ಸಮಸ್ಯೆಗಳನ್ನು ಪರಿಹರಿಸುವ ವಿಧಾನವಾಗಿದೆ.

ಇನ್ನು ’Emotional intelligence’ ನಿಮ್ಮ ಸಾಮಾಜಿಕ ಜೀವನದಲ್ಲಿ ಹೊರಗಿನವರೊಂದಿಗೆ ಉತ್ತಮ ಸಂಬಂಧ ಬೆಳೆಸಲು ಉಪಯೋಗ ವಾಗುವ ಸಾಮಾಜಿಕ ಇಂಟಲಿಜೆನ್ಸ್ ಗಳೆಲ್ಲದಕ್ಕೂ ಬೇಕಾದ ಮತ್ತು ಅದಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಬೇಕು. ಈ ಮೂರು ಇಂಟಲಿಜೆನ್ಸ್‌ ಗಳನ್ನು ಬೂಸ್ಟ್ ಮಾಡಲು ಉತ್ತಮವಾದ ವ್ಯಾಯಾಮ ಅಂದ್ರೆ, ಅದು ಕಲ್ಪಿತ, ಕಾಲ್ಪನಿಕ ಕಥೆಗಳ ಪುಸ್ತಕಗಳನ್ನು ಓದುವುದು. ಯಾಕಂದ್ರೆ, ಒಂದು ಕಲ್ಪಿತ ಕಥೆಯಲ್ಲಿ ಎಲ್ಲ ಇಂಟಲಿಜೆನ್ಸ್ ಗಳಿರುತ್ತವೆ. ’ಮುಖ್ಯಪಾತ್ರ’, ತನಗೆ ಬರುವ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು, ಬೇರೆಯವರೊಂದಿಗೆ ಹೇಗೆ ಮಾತನಾಡಬೇಕು ಹೀಗೆ ಎಲ್ಲಾ ರೀತಿಯ ಇಂಟಲಿಜೆ‌ನ್ಸ್ ಗಳಿರುತ್ತವೆ. ಆದ್ದರಿಂದ ಕಾಲ್ಪನಿಕ‌ ಕಥೆಯ ಪುಸ್ತಕಗಳನ್ನು ತೆಗೆದುಕೊಂಡು ಅದರಲ್ಲಿಯ ಯಾವುದಾದರೂ ಒಂದು ಉತ್ತಮ ಕಥೆಯ ಪುಸ್ತಕವನ್ನು ಪ್ರತಿದಿನ ಓದಬೇಕು. ಇದು ನಮ್ಮ ಮೆದುಳಿಗೆ ಬಹಳ ಉಪಯುಕ್ತವಾಗುತ್ತದೆ.

’’Habit to decrease brain‌ stress’ಒಂದು ನಿರ್ಣಾಯಕ ಹಂತ ಬಂದಾಗ ಸಾಮಾನ್ಯವಾಗಿ ನಮಗೆಲ್ಲ ’ಟ್ರಸ್ಟ್’ ಎಂಬುದಿರುತ್ತದೆ. ಒಂದಿಷ್ಟು ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ನಮ್ಮ ಮೆದುಳು ಒತ್ತಡಕ್ಕೆ ಗುರಿಯಾಗುವ ಹಂತ ಬ್ರೇನಿನಲ್ಲಿ ಬಯೋಕೆಮಿಕಲ್ ಉತ್ಪತ್ತಿಯಾಗುತ್ತದೆ. ಇವುಗಳು ನಮ್ಮ ಸರ್ವೈವಲ್ ಗೆ ಬಹಳಷ್ಟು ಉಪಯೋಗಕಾರಿ. ಇವುಗಳು ಬಿಡುಗಡೆಯಾಗುವುದರಿಂದ ಒತ್ತಡದ ಕಾರ್ಯ ಗಳನ್ನು ಸರಳವಾಗಿ ಮಾಡಲು ಸಹಾಯವಾಗುತ್ತವೆ.

ನಮ್ಮಲ್ಲಿ ಒತ್ತಡಗಳು ಹೆಚ್ಚಾದಾಗ ಹೊಸ ಆಲೋಚನೆಗಳು ಬರುವುದಿಲ್ಲ, ಮರೆಯುವಿಕೆ ಹೆಚ್ಚಾಗುತ್ತದೆ. ಹೀಗೆ ಹೆಚ್ಚು ಟ್ರಸ್ಟ್ ಆದಾಗ ಅದಕ್ಕೆ
ಉಸಿರಾಟದ ವ್ಯಾಯಾಮವು ಬಹಳ ಉಪಯುಕ್ತ. ಈ ವ್ಯಾಯಾಮವನ್ನು ಪ್ರತಿದಿನ 10 ರಿಂದ 15 ಬಾರಿ ಮಾಡಬೇಕು. ಇದರಿಂದ ಮೆದುಳಿ ನಲ್ಲಿರುವ ಗೊಂದಲಗಳು ಶಾಂತವಾಗಿ ಒತ್ತಡಗಳು ಕಡಿಮೆಯಾಗುತ್ತವೆ.

’Habits to decrease negative thoughts ’: ಸಂಶೋಧನೆಯೊಂದರ ಪ್ರಕಾರ ಪ್ರತಿನಿತ್ಯ ಮನುಷ್ಯನಿಗೆ ಸುಮಾರು 40000 ದಷ್ಟು ಆಲೋಚನೆಗಳು ಬರುತ್ತದೆ. ಅವುಗಳಲ್ಲಿ ಹೆಚ್ಚಾಗಿ ನೆಗೆಟಿವ್ ವಿಚಾರಗಳು ಹೆಚ್ಚಾಗಿ ಬರುತ್ತವೆ. ಇವುಗಳನ್ನು ಕಡಿಮೆ ಮಾಡಬೇಕಾದರೆ ಒಂದು ನೋಟ್ ಬುಕ್‌ನಲ್ಲಿ ನಮ್ಮ ಮೆದುಳಿನಲ್ಲಿ ಬರುವ ನೆಗೆಟಿವ್ ಆಲೋಚನೆಗಳೆಲ್ಲವನ್ನು ಬರೆಯಬೇಕು. ಸ್ವಲ್ಪ ಸಮಯದ ನಂತರ ನಾವು ಬರೆದಿದ್ದ ಎಲ್ಲವನ್ನೂ ಓದಬೇಕು. ನಂತರ ಅದು ಸರಿಯೋ ತಪ್ಪೊ ಎಂಬುದನ್ನು ನಾವೇ ಪ್ರಶ್ನಿಸಬೇಕು. ನಂತರ ಉತ್ತರವನ್ನು ಕೆಳಗೆ ಬರೆಯಬೇಕು ಹೀಗೆ ನಿತ್ಯ ಮಾಡುತ್ತಾ ಹೋದಷ್ಟು ನಮ್ಮಲ್ಲಿ ಬರುವ ನೆಗೆಟಿವ್ ಆಲೋಚನೆಗಳು ಕಡಿಮೆಯಾಗುತ್ತಾ ಹೋಗುತ್ತವೆ.

ಹೀಗೆ ಬರುವ ಬಹಳಷ್ಟು ಆಲೋಚನೆಗಳು ಮಾನಸಿಕ ತೀವ್ರತೆ ಮತ್ತು ಭಾವನೆಗಳಿಂದ ಬರುತ್ತವೆ. ಈ ಎಲ್ಲ ನ್ಯೂನ್ಯತೆಗಳಿಂದ ನಮ್ಮ ಮೆದುಳು ಮುಕ್ತವಾಗಿ ಕೆಲಸ ಮಾಡಬೇಕೆಂದರೆ ಅದಕ್ಕೆ ಸಂಬಂಧಿಸಿದ ಈ ಎಲ್ಲಾ ಅಭ್ಯಾಸಗಳನ್ನು ನಾವು ಪ್ರತಿನಿತ್ಯ ಮಾಡಬೇಕು. ನಂತರ ಅದರಿಂದ ಆಗುವ ಉಪಯೋಗಗಳು ನಮಗೆ ಸ್ಪಷ್ಟವಾಗಿ ತಿಳಿಯುತ್ತವೆ. ಈ ಮೇಲಿನ ಎಲ್ಲಾ ಅಂಶ ಹಾಗೂ ಸಲಹೆಗಳನ್ನು ’ಆಐuಏಅಇಓ uಖ್ಕಿ ಆಅಐಘೆ’ ಎಂಬ ಕೃತಿಯಲ್ಲಿ ಲೇಖಕರು ಬಹಳ ಅದ್ಭುತವಾಗಿ ಉಲ್ಲೇಖಿಸಿದ್ದಾರೆ.

(ಲೇಖಕ: ರಾಜ್ಯಶಾಸ್ತ್ರ ಪ್ರಾಧ್ಯಾಪಕರು
ಹಾಗೂ ವಿಶ್ಲೇಷಕರು)