Thursday, 12th December 2024

ಕನಸುಗಳ ಪ್ರಪಂಚದಲ್ಲಿ ಕನಸೇರಿ ಹೊರಟವರಿಗೆ

ಪರಿಶ್ರಮ

parishramamd@gmail.com

ಪ್ರತಿಯೊಬ್ಬರ ಜೀವನದಲ್ಲಿ ಹಲವು ಕನಸುಗಳು ಇರುತ್ತದೆ. ಆ ಕನಸ್ಸಿನ ಬೆನ್ನತ್ತುವ ಬಯಕೆ, ಕನಸನ್ನು ನನಸು ಮಾಡಿಕೊಳ್ಳ ಬೇಕೆಂಬ ಹಠವೂ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ಕನಸು ಇರುತ್ತದೆ. ವ್ಯಾಪಾರದಲ್ಲಿ ಯಶಸ್ಸನ್ನು ಗಳಿಸಿ
ಶ್ರೀಮಂತನಾಗಬೇಕೆಂಬ ಕನಸು. ದಿನ ನಿತ್ಯದ ಗಂಜಿಯನ್ನು ಸಂಪಾದಿಸಿ ಕೊಳ್ಳುವುದೇ ಮತ್ತೊಬ್ಬನ ಕನಸು. ೩ಜಿ, ೪ಜಿ, ೫ಜಿ ಯಲ್ಲಿ ಮುಳುಗಿ ಹೋಗಿ ತಂತ್ರಜ್ಞಾನದಲ್ಲಿ ಬೆಳೆಯಬೇಕೆಂಬುದು ಇನ್ನೊಬ್ಬನ ಕನಸ್ಸಾದರೆ.

ಕೆಲಸದಲ್ಲಿ ಎಲ್ಲರಿಗಿಂತ ಮೇಲಿರಬೇಕೆಂಬುದೂ ಒಬ್ಬನ ಕನಸೇ. ಬರೆದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ರ‍್ಯಾಂಕ್ ಬರಬೇಕೆಂದು, ಇಷ್ಟಪಟ್ಟವಳು ಒಪ್ಪಿಕೊಂಡರೆ ಪ್ರೀತಿಯ ನೈವೇದ್ಯವನ್ನು ಸಲ್ಲಿಸಿಬಿಡುವೆನೆಂಬುದು. ಬದುಕಿನಲ್ಲಿ ಸ್ಥಿರವಾಗಿ ನಿಂತು ಏನಾದರೂ ಸಾಧಿಸೋಣ ನಾಲ್ಕು ಮಂದಿ ಮೆಚ್ಚುವ ರೀತಿ ಬದುಕೋಣ, ಪ್ರಪಂಚಕ್ಕೆ ನನ್ನ ತಾಕತ್ತೇನೆಂದು ತೋರಿಸೋಣ ಎಂಬ ಕನಸು ಕೆಲವರದಾದ್ದರೆ.

ಜೀವನದಲ್ಲಿ ಅವರನ ಇವರನ ಇಂಪ್ರೆಸ್ ಮಾಡಲು ತನ್ನ ಬದುಕನ್ನು ಮತ್ತಷ್ಟು ಹತ್ತಿಕ್ಕಿಕೊಳ್ಳುವುದು ಕೆಲವಷ್ಟು ಮಂದಿಗೆ, ಕನಸೇನು ಒಂದಾ ಎರಡಾ! ಕನಸು ಕನಸಾಗಿ ಹುಟ್ಟುತ್ತದೆ. ಆದರೆ, ಅದು ಎಷ್ಟೋ ಜೀವನದಲ್ಲಿ ಹಾಗೆಯೇ ಉಳಿದು ಬಿಡುತ್ತದೆ. ಕನಸು ನನಸಾಗ ಬೇಕೆಂದರೆ ಬೇಕಾಗಿರುವುದು ಪರಿಶ್ರಮ. ಯಶಸ್ಸಿಗೆ ರಹದಾರಿ ಮುನ್ನಡೆಸು ವುದೇ ಕನಸು. ಯಾವುದೇ ಒಂದು ಪ್ರಯತ್ನಕ್ಕೆ ಸಾಹಸಕ್ಕೆ ಕೈ ಹಾಕಿದಾಗ. ತಮ್ಮ ಕನಸ್ಸಿನ ಬಗ್ಗೆ ಸಾಧಿಸಬೇಕಾದ ದಾರಿಯ ಬಗ್ಗೆ ಸ್ಪಷ್ಟತೆ ಇರಬೇಕು, ತಾಕತ್ತಿನ ಅಂದಾಜು ಇಲ್ಲಿದೆ ಸುಮ ಸುಮ್ಮನೆ ಪ್ರಯತ್ನ ಪಟ್ಟರೆ ಸೋಲು ಕಂಡಿತವಾಗಿಯೂ ಅತಿಥಿಯಾಗಿ ಮನೆಯ ಬಾಗಿಲನ ತಟ್ಟುತ್ತದೆ.

ಬದುಕಿನಲ್ಲಿ ಸಾಧಿಸೋದು ಏನು ತುಂಬಾ ಕಷ್ಟ ಅಲ್ಲ. ಅವರ ಅವರು ಕ್ಷೇತ್ರದಲ್ಲಿ ರಾಜರೇ, ಯಾರುಬೇಕಾದರೂ
ಏನು ಬೇಕಾದರೂ ಸಾಽಸಬಹುದು, ಏನುಬೇಕಾದರೂ ಸಾಧಿಸಬಹುದು. ಆದರೆ ದೃಢ ಸಂಕಲ್ಪ, ನಿಶ್ಚಯತೆ ಇರಬೇಕು. ಅಂದುಕೊಂಡಿದ್ದು ಈಡೇರಬೇಕಾದರೆ ಅದರ ಹಿಂದೆ ಪ್ರಯತ್ನ ಬಿಡದೇ ಮಾಡುತ್ತಲೇ ಇರಬೇಕು. ಒಬ್ಬ ಹುಡುಗ ಪರೀಕ್ಷೆಯಲ್ಲಿ ರ‍್ಯಾಂಕ್ ಏನೋ ಕಂಡು ಬಿಡುತ್ತಾನೆ.

ಆದರೆ ೧೦ನೇ ತರಗತಿಗೆ ಬಂದಾಗ ಮೊದಲನೇ ದಿನ ಪಠ್ಯ ಪುಸ್ತಕಗಳನ್ನು ತಂದು ಅದಕ್ಕೆ ಬೈನ್ಡ್ ಹಾಕಿ, ಮೊದಲನೆ ದಿನ ಉಪನ್ಯಾಸಕರು ಹೇಳುವ ಪಾಠವನ್ನು ಶ್ರದ್ಧೆಯಿಂದ ಕೇಳಿ, ನೋಟ್ಸ್ ಮಾಡಿಕೊಳ್ಳುತ್ತಾನೆ. ನಂತರ ನಾಲ್ಕು ಐದು ತಿಂಗಳು ಹರಟೆ, ಆಟ, ಪಾಠ ಇಂತದರಲ್ಲೇ ಕಳೆದು ಹೋಗುತ್ತಾನೆ. ಆದರೆ ಏಕಾಗ್ರತೆ ಕೊರತೆಯಿಂದ ೧೦ನೇ ತರಗತಿ ಫಲಿತಾಂಶ ಬಂದಾಗ ಅವನ ಕನಸು ಕನಸ್ಸಾಗೆ ಉಳಿಯುತ್ತದೆ. ೯೫% ಬರಬೇಕೆಂದ ಕನಸು ಪಟ್ಟವನು ೬೫% ತೃಪ್ತಿಗೆ ಒಳಾಗಾಬೇಕಾಗುತ್ತದೆ.

ಅದಕ್ಕಂತ ಒಂದು ಮಾತಿದೆ,”education is only for those who pay for it’. . ಪ್ರೀತಿಸಿದ ಹುಡುಗಿಯನ್ನು ಜೀವಂತಪರಿಯಂತ ಚೆಂದವಾಗಿ ನೋಡಿಕೊಳ್ಳುತ್ತೇನೆಂದು ಕನಸು ಕಂಡ ಹುಡುಗ ದಾಂಪತ್ಯಕ್ಕೆ ಕಾಲು ಇಟ್ಟಾಗ ದಿನನಿತ್ಯದ
ಜಂಜಾಟ, ಬಾಸ್‌ನ ಬೈಗುಳ, ಕೆಲಸದ ವಿಪರೀತ ಒತ್ತಡ, ಸಂಜೆ ಟ್ರಾಫಿಕ್ ಜಾಮ್ ಸಿಲುಕಿ, ತಿಂಗಳಾಂತ್ಯದಲ್ಲಿ ಕಟ್ಟೋದಕ್ಕೂ ಆಗದ ಇಎಂಐ…. ಇಂತಹದರಲ್ಲಿಯೇ ಕಳೆದು ಹೋಗುತ್ತಾನೆ, ಅವನ ಕನಸು ಕನಸಾಗೆ ಉಳಿಯುತ್ತದೆ.

ಹೊಸ ವ್ಯಾಪಾರಕ್ಕೆ ಕೈ ಹಾಕಿ ಉದ್ಯಮದಲ್ಲಿ ಕೋಟ್ಯಾಂತರ ರುಪಾಯಿ ಸಂಪಾದಿಸಿ ಬಿಡುತ್ತೀನಿ, ನನ್ನ ತಾಕತ್ತು ಏನಿದರೂ ಸಮಾಜಕ್ಕೆ ತೋರಿಸುತ್ತೀನಿ, ನನ್ನ ಸಂಬಂಧಿಕರಿಗೆ ಅರ್ಥ ಮಾಡಿಸುತ್ತೀನಿ ಅಂತ ಹಠ ಮಾಡಿ ವ್ಯಾಪಾರ ಶುರು ಮಾಡಿ ಮೊದಲನೇ ದಿನ ಅದ್ಭುತವಾದ ಪೂಜೆ ಮಾಡಿ, ವ್ಯಾಪಾರವನ್ನು ಪ್ರಾರಂಭಿಸಿ. ಸಂಜೆ 5 ಘಂಟೆ ಆದರೆ ಪಾರ್ಟಿ, ಹರಟೆ ಅಂತ ಹೊರಟ ವ್ಯಕ್ತಿ, ಯಾವ ವ್ಯಾಪಾರದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ? ನಂತರ ಒಂದು-ಎರಡು ವರ್ಷಕ್ಕೆ ವ್ಯಾಪಾರ
ಕುಸಿದು ಹೋಗುತ್ತದೆ, ಕೊನೆಗೆ ಅವನ ಕನಸು ನನಸಾಗುವುದಿಲ್ಲ.

ಗೆಲುವಿನ ಹೊಸ್ತಿಲಿನಲ್ಲಿ
ಕಷ್ಟ-ಸುಖ ಸಾಧಿಸಬೇಕೆಂಬ ಹಠ, ಸೋಲುತ್ತೇವೆಂಬ ಭಯ, ಗೆದ್ದೆ ಗೆಲ್ಲುತ್ತೇವೆಂಬ ಭರವಸೆ, ಒಂದಲ್ಲ ಒಂದು ದಿನ ಈ ಪ್ರಪಂಚ ನಮ್ಮ ಕಡೆ ನೋಡುವಂತೆ ಮಾಡಿಕೊಳ್ಳುವ ಉತ್ಸಾಹ, ಸೋತು ಪಾತಳಕ್ಕೆ ಬಿದ್ದಿ ಬಿಡುತ್ತೇವೆಂಬ ಆತಂಕ. ಇಷ್ಟರ ನಡುವೆ ಬದುಕಿನ ಬಂಡಿ ನಡೆಯುತ್ತಿರುತ್ತದೆ, ಸಾಗುತ್ತಿರುತ್ತದೆ.

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಉನ್ನತ ಮಟ್ಟದ ಗೆಲ್ಲುವನ್ನು ಪಡೆಯಬೇಕೆಂಬ ಆಸೆ ಇರುತ್ತದೆ. ಗೆದ್ದೆ ಗೆಲ್ಲಬೇಕೆಂಬ
ಭರವಸೆಯಿರುತ್ತದೆ. ಆದರೂ ಯಾವುದೊಂದು ಸೋಲು, ಒಂದು ಹತಾಶೆ, ಒಂದು ಕೆಟ್ಟ ಘಳಿಗೆ, ಸುರಿಸಿದ ಕಣ್ಣೀರು, ಸಾಗಬೇಕಾದ ಹಾದಿಯನ್ನ ಮಧ್ಯದಲ್ಲೇ ನಿಲ್ಲಿಸಿಬಿಡುತ್ತದೆ. ಗೆಲುವಿನ ದೀರ್ಘ ಪ್ರಯಾಣವನ್ನ ಅಲ್ಪಕ್ಕೆ ನಿಲ್ಲಿಸಿ ಬಿಡುತ್ತದೆ.
ಇಷ್ಟಕ್ಕೂ ಸಾಧನೆಯೆಂದರೇನು ಸಂತೋಷವಾ? ಗಳಿಸುವ ದುಡ್ಡಾ? ಅಭಿಮಾನಿಗಳನ್ನು ಬೆಳೆಸಿಕೊಳ್ಳುವುದಾ?
ಇದ್ಯಾವುದೂ ಅಲ್ಲ!

ಜೀವನದಲ್ಲಿ ತಾವು ಯಾವುದೇ ಪ್ರಯತ್ನಕ್ಕೆ ಕೈ ಹಾಕಿ, ಮೊದಲು ಸೋಲನ್ನು ಸ್ವೀಕರಿಸುವ ದೊಡ್ಡ ಗುಣವಿರಲಿ, ಗೆದ್ದಾಗ ಅಹಂಕಾರ ನೆತ್ತಿಗೆರದಿರಲಿ, ಸೋತಾಗ ಆತ್ಮ ವಿಶ್ವಾಸ ಪಾತಳಕ್ಕೂ ಕುಸಿಯದಿರಲಿ, ಜೀವನದಲ್ಲಿ ಎಷ್ಟೇಷ್ಟೋ ಕಳೆದು ಕೊಂಡವರು ಏನೇನೂ ಸಾಧಿಸಿದನ್ನ ನೋಡಿದೀವಿ.

ಬಡತನದಲ್ಲಿ ಬೆಳೆದವರು, ಮಹಲ್‌ಗಳಲ್ಲಿ ಮಿಂಚಿದನ್ನ ನೋಡಿದೀವಿ. ಕಣ್ಣೀರಿನಲ್ಲಿ ತಮ್ಮ ಜೀವನವನ್ನು ಸಾಧಿಸಿದವರು ಜಗತ್ತಿನಲ್ಲಿ ಸಾವಿರಾರು ಜನರ ಕಣ್ಣೀರನ್ನು ಒರೆಸಿದ್ದನ್ನು ನೋಡಿದ್ದೀವಿ. ಒಂಟಿತನದಲ್ಲೇ ಕಳೆದಂತಹ ಎಷ್ಟೋ ಜೀವಗಳು
ಆಸರೆಯಾಗಿದನು ನೋಡಿದ್ದೀವಿ. ಜೀವನದಲ್ಲಿ ಇನೇನೋ ಸಾಧಿಸಲು ಸಾಧ್ಯವೇ ಇಲ್ಲ. ಈ ಪ್ರಪಂಚವನ್ನು ಬಿಟ್ಟು ಹೋಗಬೇಕು ಎಂಬ ತೀರ್ಮಾನ ತೆಗೆದುಕೊಂಡಂತಹ ಅದೇಷ್ಟು ಮಂದಿ.

ಈ ಪ್ರಪಂಚಕ್ಕೆ ಸೂರ್ತಿದಾಯಕರಾಗಿ ನಿಂತಿದ್ದನ್ನು ನೋಡಿದ್ದೀವಿ. ಕಾಸಿಲ್ಲದಿದ್ದರೇನು ಆತ್ಮವಿಶ್ವಾಸ ಇದ್ದಾಗ,
ದುಡ್ಡು ಇಲ್ಲದಿದ್ದರೇನು ಧೈರ್ಯ ಇದಾಗ, ಹಿನ್ನೆಲೆ ಇಲ್ಲದಿದ್ದರೇನು ಗುಂಡಿಗೆಯನ್ನ ನೆಲೆಯಲ್ಲಿ ಗೆಲ್ಲಬೇಕೆಂಬ ಹಠವಿದ್ದಾಗ.
ಕನಸ್ಸಿನ ಬೆನ್ನೇರಿ, ಗೆಲುವಿನ ಬೆನ್ನೇರಿ ಹೊರಟಂತವರಿಗೆ ಸಾಗರದ ಅಲೆಗಳು ಬಂದರೂ ಅಡೆತಡೆಯಾಗಲಾರದು.
ಗೆಲುವಿನ ಶಿಖರವನ್ನ ಏರಬೇಕೆಂಬ ಪ್ರಯತ್ನ ಪಟ್ಟವರಿಗೆ, ಚಿಕ್ಕ ಸೋಲು, ಹತಾಶೆ ಅವರನ್ನು ನಿಲ್ಲಿಸಲಾಗದು.

ಗೆಲ್ಲಬೇಕೆಂಬ ಹಠವಿದ್ದರೆ, ಯಾರು ಏನು ಬೇಕಾದರೂ ಸಾಧಿಸಬಹುದು. ಅದಕ್ಕೆ ಒಂದಲ್ಲ ಎರಡಲ್ಲ ಜಗತ್ತಿನಲ್ಲಿ ಸಾವಿರಾರು
ನಿದರ್ಶನಗಳಿವೆ, ಉದಾಹರಣೆಗಳಿವೆ, ಗೆಲ್ಲಲು ಹೊರಟ ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕಾದ ಒಂದು ಕೆಲವು ಸೂತ್ರ ಗಳಿವೆ. ಮೊದಲನೆಯದು ನಿಮ್ಮ ಗೆಲುವಿನ ಬಗ್ಗೆ ಸ್ಪಷ್ಟ ಗುರಿಯಿರಲಿ, ಎರಡನೆಯದು ನಿಮ್ಮ ಬಗ್ಗೆ ಆದಷ್ಟೋ ಹೆಚ್ಚು ಯೋಚಿಸಿ, ಮೂರನೆಯದು ಸಮಾಜದ ಬಗ್ಗೆ ಕಾಳಜಿಯಿರಲಿ, ಆದರೆ ನಿಮ್ಮ ಜೀವನದ ಬಗ್ಗೆ ಶ್ರದ್ಧೆ ವಹಿಸಿ, ನಾಲ್ಕನೆಯದು ದುಡ್ಡೆಯಿಲ್ಲವಲ್ಲ ಎಂದು ಕೊಂಡು ಕೂತರೆ ಜೀವನ ಸಾಗುವುದಿಲ್ಲ, ಐದನೆಯದು ಸಂಬಂಧಗಳೇ ಶ್ರೇಷ್ಠ, ಅದಕ್ಕಿಂತ ಮಿಗಿಲಾಗಿದ್ದು ಸಾಧನೆಯೂ ಕೂಡ ಮುಖ್ಯವೇ!

ಆರನೆಯದು ಒಳ್ಳೆಯತನವಿದರೆ ಏನೂ ಬೇಕಾದರೂ ಆಗುತ್ತದೇನೆಂದು ಭಾವಿಸಬೇಡಿ, ಬುದ್ಧಿವಂತಿಕೆಯಿಂದಿರಬೇಕೆಂದು ಮರೆಯಬೇಡಿ, ನಾಲ್ಕು ಜನಕ್ಕೆ ಸಹಾಯ ಬಯಸುವುದು ತಪ್ಪಲ್ಲ, ನಾಲ್ಕು ಜನರು ತುಳಿದಾಗಲೂ ಎದ್ದು ನಿಲ್ಲುವುದು ನಿಜವಾದ
ಸ್ಪಿರಿಟ್. ಪ್ರೀತಿಯಲ್ಲಿ ಗೆದ್ದರೆ ಪ್ರೇಯಸಿಯನ್ನು ಗೆಲ್ಲಬಹುದು. ಸೋತರೇ ಜಗತ್ತನ್ನೇ ಗೆಲ್ಲಬಹುದೆಂಬ ಸತ್ಯವನ್ನು ಮರೆಯದಿರಿ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಕ್ಕಿಕೊಂಡಾಗ ಹತಾಶರಾಗಬೇಡಿ. ಆತ್ಮ ವಿಶ್ವಾಸವಿದ್ದಾಗ, ಆರ್ಥಿಕ ಸ್ಥಿರತೆ ಬರುವುದು ಅಷ್ಟೇನೂ ಕಷ್ಟವಿಲ್ಲ. ಎಲ್ಲವನ್ನು ನೆನಪಿಟ್ಟುಕೊಂಡು ಬದುಕಿನ ಬಂಡಿಯನ್ನ ಸಾಧಿಸಿ.