Friday, 20th September 2024

ಮಹಿಳಾ ಸಬಲೀಕರಣಕ್ಕೆ ಒತ್ತಾಸೆಯಾಗುವ ನಮೋ ಡ್ರೋನ್ ದೀದಿ

ಮಹಿಳಾಶಕ್ತಿ

ಡಾ.ಮನ್ಸುಖ್ ಮಾಂಡವೀಯ

‘ನಮೋ ಡ್ರೋನ್ ದೀದಿ’ ಯೋಜನೆಯು ಗ್ರಾಮೀಣ ಮಹಿಳೆಯರ ಕೈಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಇರಿಸುವ ಮೂಲಕ ನಮ್ಮ ಕೃಷಿ ಪದ್ಧತಿಗಳನ್ನು ಆಧುನೀಕರಿಸುತ್ತದೆ ಮತ್ತು ಕೃಷಿ ಉತ್ಪಾದಕತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ. ಇದು ಮಹಿಳೆಯರನ್ನು ಗ್ರಾಮೀಣ ಆರ್ಥಿಕತೆಯ ಕೇಂದ ಬಿಂದುವನ್ನಾಗಿ ಮಾಡುತ್ತದೆ ಮತ್ತು ಹೊಸ ಕೃಷಿ ಕ್ರಾಂತಿಯನ್ನು ಮುನ್ನಡೆಸುತ್ತದೆ.

ಒಂದು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿರ್ಮಾಣಕ್ಕೆ ಮಹಿಳೆಯರ ಸಬಲೀಕರಣವು ನಿಸ್ಸಂದೇಹವಾಗಿಯೂ ಅತ್ಯಂತ ಮುಖ್ಯ ವಾದುದು. ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿದಾಗ ಮತ್ತು ಗ್ರಾಮೀಣ ಸಮೃದ್ಧಿಗೆ ಕೊಡುಗೆ ನೀಡಿದಾಗ, ಅದು ಮತ್ತಷ್ಟು ಅರ್ಥಪೂರ್ಣ ವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ೨೦೨೩ರ ನವೆಂಬರ್ ೩೦ರಂದು ‘ವಿಕಾಸ ಭಾರತ ಸಂಕಲ್ಪ ಯಾತ್ರೆ’ಯಲ್ಲಿ ಫಲಾನು ಭವಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ‘ನಮೋ ಡ್ರೋನ್ ದೀದಿ’ ಯೋಜನೆಯನ್ನು ಘೋಷಿಸಿದರು.

ಕೃಷಿ ಉದ್ದೇಶಗಳಿಗಾಗಿ ರೈತರಿಗೆ ಬಾಡಿಗೆ ಸೇವೆಗಳನ್ನು ಒದಗಿಸಲು ೧೫,೦೦೦ ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಡ್ರೋನ್‌ಗಳನ್ನು ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಗ್ರಾಮೀಣ ಸಮೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸಲು ತಾಂತ್ರಿಕ ನಾವೀನ್ಯವನ್ನು ಬಳಸಿಕೊಳ್ಳುವ ಅತ್ಯುತ್ತಮ ಉದಾಹರಣೆ ಇದಾಗಿದೆ. ಈ ಬಹುಮುಖಿ ಯೋಜನೆಯು ಗ್ರಾಮೀಣ ಮಹಿಳೆಯರ ಕೈಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಇರಿಸುವ ಮೂಲಕ ನಮ್ಮ ಕೃಷಿ ಪದ್ಧತಿಗಳನ್ನು ಆಧುನೀಕರಿಸುತ್ತದೆ ಮತ್ತು ಕೃಷಿ ಉತ್ಪಾದ ಕತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುತ್ತದೆ.

ಇದು ಮಹಿಳೆಯರನ್ನು ಗ್ರಾಮೀಣ ಆರ್ಥಿಕತೆಯ ಕೇಂದ್ರಬಿಂದುವನ್ನಾಗಿ ಮಾಡುತ್ತದೆ ಮತ್ತು ಹೊಸ ಕೃಷಿ ಕ್ರಾಂತಿಯನ್ನು ಮುನ್ನಡೆಸುತ್ತದೆ. ಈ
ಯೋಜನೆಯು ದೇಶದ ಯುವ, ರೋಮಾಂಚಕ, ಕ್ರಿಯಾತ್ಮಕ ಮತ್ತು ಉತ್ಸಾಹಿ ನವೋದ್ಯಮಗಳು ಉದಯೋನ್ಮುಖ ‘ಡ್ರೋನ್ ಏರೋನಾಟಿಕ್ಸ್’ ಕ್ಷೇತ್ರಕ್ಕೆ ಪ್ರವೇಶಿಸಲು ಹೊಸ ಅವಕಾಶಗಳನ್ನು ತೆರೆಯುತ್ತದೆ. ಎಲೆಗಳ ಮೇಲೆ ಸಿಂಪಡಿಸಬಹುದಾದ ‘ನ್ಯಾನೊ ಯೂರಿಯಾ’ ಮತ್ತು ‘ನ್ಯಾನೊ ಡಿಎಪಿ’ಯಂಥ ನವೀನ ದ್ರವರೂಪದ ಗೊಬ್ಬರಗಳ ಆವಿಷ್ಕಾರವು, ಪರಿಣಾಮಕಾರಿ ರಸಗೊಬ್ಬರ ವ್ಯವಸ್ಥೆಯ ಅಭಿವೃದ್ಧಿಯ ಅಗತ್ಯವನ್ನು ಹೆಚ್ಚಿಸಿದೆ.

‘ಸ್ವಸಹಾಯ ಗುಂಪು’ಗಳ ಮಹಿಳಾ ಪೈಲಟ್‌ಗಳ ಕೈಗೆ ಡ್ರೋನ್ ತಂತ್ರಜ್ಞಾನವನ್ನು ಇರಿಸುವ ಇಂಥ ಅದ್ಭುತ ಪರಿಕಲ್ಪನೆಯನ್ನು ಕಲ್ಪಿಸಿಕೊಳ್ಳುವುದು ಪ್ರಧಾನಿಯವರಿಗೆ ಮಾತ್ರ ಸಾಧ್ಯವಾಗಿದೆ ಎನ್ನಬೇಕು. ಭಾರತವು ಎರಡನೇ ಅತಿದೊಡ್ಡ ರಸಗೊಬ್ಬರಗಳ ಉತ್ಪಾದಕ ದೇಶವಾಗಿದ್ದರೂ, ನೈಸರ್ಗಿಕ ಸಂಪನ್ಮೂಲಗಳಾದ ಅನಿಲ, -ಸೇಟಿಕ್ ಮತ್ತು ಪೊಟ್ಯಾಸಿಕ್ ಖನಿಜಗಳು ಇತ್ಯಾದಿಗಳ ಅಸಮರ್ಪಕ ಲಭ್ಯತೆಯಿಂದಾಗಿ ರಸಗೊಬ್ಬರಗಳ ಎರಡನೇ
ಅತಿದೊಡ್ಡ ಆಮದುದಾರ ರಾಷ್ಟ್ರವೂ ಆಗಿದೆ. ಆಮದಿನ ಮೇಲಿನ ಈ ಅವಲಂಬನೆಯನ್ನು ನಿವಾರಿಸಲು ಸರಕಾರವು, ಮುಚ್ಚಲ್ಪಟ್ಟ ಹಲವಾರು ರಸಗೊಬ್ಬರ ಘಟಕಗಳ ಪುನರುಜ್ಜೀವನಕ್ಕೆ ಅನುಕೂಲ ಮಾಡಿಕೊಟ್ಟಿದೆ ಮತ್ತು ‘ಆತ್ಮನಿರ್ಭರ ಭಾರತ್’ ಯೋಜನೆಯಡಿ ಹೊಸ ರಸಗೊಬ್ಬರ ಘಟಕ ಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಿದೆ.

ಈ ಕ್ರಮಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಸಗೊಬ್ಬರಗಳ ಏರಿಳಿತದಿಂದ ಭಾರತೀಯ ರೈತರನ್ನು ಯಶಸ್ವಿಯಾಗಿ ರಕ್ಷಿಸಿವೆ. ರಸಗೊಬ್ಬರಗಳ ಸಬ್ಸಿಡಿಗಳ ಮೂಲಕ ರೈತರಿಗೆ ಸರಿಯಾದ ಸಮಯದಲ್ಲಿ, ಸರಿಯಾದ ಬೆಲೆಯಲ್ಲಿ ಸಾಕಷ್ಟು ಪ್ರಮಾಣದ ರಸಗೊಬ್ಬರಗಳು ಲಭ್ಯವಾಗುವಂತೆ ಮಾಡಲು ಸರಕಾರಕ್ಕೆ ಸಾಧ್ಯವಾಗಿದೆ. ಕೋವಿಡ್ ಸಾಂಕ್ರಾಮಿಕ ಮತ್ತು ಇತ್ತೀಚಿನ ಜಾಗತಿಕ ಭೂರಾಜಕೀಯ ಸನ್ನಿವೇಶಗಳಿಂದಾಗಿ ರಸಗೊಬ್ಬರದ ಬೆಲೆಗಳು
ಹಿಂದೆಂದಿಗಿಂತಲೂ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡವು. ಇದು ನಮಗೆ ಕೆಲವು ಕಠಿಣ ಸವಾಲುಗಳನ್ನು ಒಡ್ಡಿತು. ಈ ಸವಾಲು ಗಳನ್ನು ಅವಕಾಶಗಳಾಗಿ ಪರಿವರ್ತಿಸಲು ನಾವು ನಿರ್ಧರಿಸಿದೆವು.

ಪರ್ಯಾಯ ರಸಗೊಬ್ಬರಗಳ ಅಭಿವೃದ್ಧಿಗಾಗಿ ಸರಕಾರವು ದೇಶೀಯ ಸಂಶೋಧನೆಯನ್ನು ಪ್ರೋತ್ಸಾಹಿಸಿತು. ಇದರ ಫಲವೇ ಹೊಸ ದ್ರವರೂಪದ ನ್ಯಾನೊ ರಸಗೊಬ್ಬರಗಳು. ಈ ಹೊಸ ಆವಿಷ್ಕಾರಕ್ಕೆ ಎದುರಾದ ಸವಾಲೆಂದರೆ, ಪರಿಣಾಮಕಾರಿ ಗೊಬ್ಬರ ಸಿಂಪಡಣೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದು. ಆದರೆ ಉದಯೋನ್ಮುಖ ‘ಡ್ರೋನ್’ ತಂತ್ರಜ್ಞಾನವು ಇದಕ್ಕೆ ಉತ್ತರವನ್ನು ಒದಗಿಸಿತು. ‘ಕಿಸಾನ್-ಡ್ರೋನ್’ಗಳ ಆವಿಷ್ಕಾರವು ಕೃಷಿ ಪದ್ಧತಿಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಅಪಾರ ಸಾಧ್ಯತೆಗಳನ್ನು ತೆರೆದಿವೆ. ಕೀಟನಾಶಕಗಳು ಮತ್ತು ದ್ರವರೂಪದ
ಗೊಬ್ಬರಗಳನ್ನು ಕೈಯಲ್ಲಿ ಹಿಡಿಯುವ ಪಂಪ್‌ಗಳ ಮೂಲಕ ಸಿಂಪಡಿಸುವ ಸಾಂಪ್ರದಾಯಿಕ ವ್ಯವಸ್ಥೆಯು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಅಲ್ಲದೆ, ಇದು ಹಲವು ತೊಡಕುಗಳಿಂದ ಕೂಡಿದೆ. ಸಿಂಪಡಣೆ ವೇಳೆ ವಿಷಕಾರಿ ಹಾವುಗಳು ಮತ್ತು ಹೊಲ ಗಳಲ್ಲಿ ಅಡಗಿರುವ ಕಾಡುಪ್ರಾಣಿಗಳಿಂದ ದಾಳಿಗೊಳಗಾಗುವ ಅಪಾಯಗಳೂ ಇವೆ. ‘ಕೃಷಿ-ಡ್ರೋನ್’ಗಳ ಮೂಲಕದ ಸಿಂಪಡಣೆ ವ್ಯವಸ್ಥೆಯು ಇದಕ್ಕೆ ಯಾಂತ್ರೀಕೃತ ಪರಿಹಾರವನ್ನು ಒದಗಿಸು ತ್ತದೆ. ಜತೆಗೆ ಸಮಯದ ಉಳಿತಾಯಕ್ಕೆ ಮತ್ತು ಪರಿಣಾಮಕಾರಿ ಸಿಂಪಡಣೆಗೂ ಅವಕಾಶ ಒದಗಿಸುತ್ತದೆ. ‘ಕಿಸಾನ್ ಡ್ರೋನ್’ಗಳ ಬೇಡಿಕೆಯು ನವೋದ್ಯ ಮಗಳು ತಮ್ಮ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಸಂಪೂರ್ಣ ಹೊಸ ಅವಕಾಶಗಳನ್ನು ತೆರೆದಿದೆ. ಡ್ರೋನ್ ಉತ್ಪಾದನಾ ಚಟುವಟಿಕೆಯು ದೇಶದ ಯುವಕರಿಗೆ ಅಪಾರ ಉದ್ಯೋಗಾವಕಾಶ ಗಳನ್ನು ಸೃಷ್ಟಿಸಿದೆ. ಈ ಹೊಸ ಕ್ಷೇತ್ರವು ಗ್ರಾಮೀಣ ಮಹಿಳಾ ಪೈಲಟ್‌ಗಳು, ಮೆಕ್ಯಾನಿಕ್‌ಗಳು ಮತ್ತು ಬಿಡಿಭಾಗಗಳ ವಿತರಕರಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ.

‘ವಿಕಸಿತ ಭಾರತ’ ಅಥವಾ ‘ಅಭಿವೃದ್ಧಿ ಹೊಂದಿದ ಭಾರತ’ದ ಪರಿಕಲ್ಪನೆಯನ್ನು ಸಾಽಸಲು ಮಹಿಳಾ ಸಬಲೀಕರಣವು ಪೂರ್ವಾಪೇಕ್ಷಿತವಾಗಿದೆ ಎಂಬುದು ನನ್ನ ದೃಢವಾದ ನಂಬಿಕೆ. ‘ನಮೋ ಡ್ರೋನ್ ದೀದಿ’ ಯೋಜನೆಯು ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಮತ್ತು
ತನ್ಮೂಲಕ ಅವರನ್ನು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬನ್ನಾಗಿ ಮಾಡುತ್ತದೆ. ಇದು ನಮ್ಮ ಕೃಷಿ ಕುಟುಂಬ ಸಂಸ್ಕೃತಿಯಲ್ಲಿ ಸಮಾನತೆ ಹೆಚ್ಚಿಸುವಲ್ಲಿ ಮತ್ತು ಅದನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಕೃಷಿ ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವಲ್ಲಿ ಮಹಿಳಾ ಡ್ರೋನ್ ಪೈಲಟ್‌ಗಳು ಪ್ರಮುಖ ಪಾತ್ರ ವಹಿಸಬಹುದು. ಡ್ರೋನ್‌ಗಳ ಮೂಲಕ ಕೀಟ ನಾಶಕಗಳು ಮತ್ತು ದ್ರವರೂಪದ ರಸಗೊಬ್ಬರಗಳ ಬಳಕೆಯು ರೈತರಿಗೆ ದೈಹಿಕ ಶ್ರಮ ಮತ್ತು ಕಷ್ಟಗಳನ್ನು ತಪ್ಪಿಸುತ್ತದೆ. ಜತೆಗೆ ತ್ವರಿತವಾಗಿ ಸಿಂಪಡಣೆ ಮುಗಿಯುವುದರಿಂದ ಅಮೂಲ್ಯ ಸಮಯವನ್ನು ಉಳಿಸುತ್ತದೆ. ಹೀಗೆ ಉಳಿತಾಯವಾಗುವ ಸಮಯವನ್ನು ಮತ್ತಷ್ಟು ಉತ್ಪಾದಕ ಕೆಲಸಗಳಿಗೆ ಬಳಸ ಬಹುದಾಗಿದೆ. ‘ನಮೋ ಡ್ರೋನ್ ದೀದಿ’ ಯೋಜನೆ ಖಂಡಿತವಾಗಿಯೂ ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಇದು ಮಹಿಳಾ ಸಬಲೀಕರಣದ ಹೊಸ ಅಧ್ಯಾಯಕ್ಕೆ ನಾಂದಿಹಾಡಲಿದೆ.

ಆರ್ಥಿಕ ಚಟುವಟಿಕೆ ಮತ್ತು ಗ್ರಾಮೀಣ ಸಮೃದ್ಧಿಯ ಕೇಂದ್ರ ಸ್ಥಾನದಲ್ಲಿರಲು ಗ್ರಾಮೀಣ ಮಹಿಳೆಯರಿಗೆ ಅವಕಾಶವನ್ನು ಒದಗಿಸುವ ಮೂಲಕ ಅನೇಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ. ಇತ್ತೀಚೆಗೆ ಸ್ಥಾಪಿಸಲಾದ, ಒಂದೇ ಸೂರಿನಡಿ ಕೃಷಿ ಸೇವೆಗಳನ್ನು ಒದಗಿಸುವ ‘ಪ್ರಧಾನಮಂತ್ರಿ ಕೃಷಿ ಸಮೃದ್ಧ ಕೇಂದ್ರ’ಗಳ ಜಾಲದಿಂದ ಈ ‘ನಮೋ ಡ್ರೋನ್ ದೀದಿ’ ಯೋಜನೆ ಬೆಂಬಲಿತವಾಗಿದೆ. ಈ ಯೋಜನೆಯು ಭಾರತದಂಥ ಕೃಷಿ ಪ್ರಧಾನ ದೇಶದಲ್ಲಿ ಆಧುನಿಕ ಕೃಷಿ ಕ್ರಾಂತಿ ಮತ್ತು ಸಮೃದ್ಧಿಯ ಮುನ್ಸೂಚನೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

(ಲೇಖಕರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)