ಯಶೋ ಬೆಳಗು
ಯಶೋಮತಿ ಬೆಳಗೆರೆ
ಆಲಾಪವಾಗಿ ಮೋಡಿ ಮಾಡಿದ ಗಂಡುದನಿ… ಆಗಿನ್ನೂ ಮೊಬೈಲುಗಳ ಹೆಸರೂ ಕೇಳಿರದ ಕಾಲ. ಕಲರ್ಸ್ ಕನ್ನಡವಾಗಿ ಬದಲಾಗುವ ಮುನ್ನ ETV ಆಯೋ ಜಿಸಿದ್ದ ಸಂಗೀತ ದಿಗ್ಗಜರ ರಸಸಂಜೆಯಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ, ಚಿತ್ರಾ, ಹರಿಹರನ್, ಗುರುಕಿರಣ್, ಅರ್ಚನಾ ಉಡುಪರ ನಡುವೆ ತುಂಬುತೋಳಿನ ರವಿಕೆ ತೊಟ್ಟು, ಝರಿ ಸೀರೆಯುಟ್ಟು, ತಲೆ ತುಂಬ ಹೂ ಮುಡಿದು, ಓಲೆ ಜುಮುಕಿಯೊಂದಿಗೆ ಕೆನ್ನೆಸರ ತೊಟ್ಟು, ತಾವೇ ಶ್ರದ್ಧೆಯಿಂದ ವಿಶೇಷವಾಗಿ ಮಾಡಿಸಿ ಕೊಂಡ ಕಾಸಗಲದ ಕುಂಕುಮದ ನಡುವೆ ಗಲಗಲನೆ ಎಲ್ಲರೊಡನೆ ಮಾತನಾಡುತ್ತ ವಿಶೇಷ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ನಮ್ಮ ಉಷಾ ಉತ್ತುಪ್, ಮನೆಯಲ್ಲಿ ಸಣ್ಣ ಮಗುವನ್ನು ಬಿಟ್ಟು ಬಂದಿದ್ದೇನೆ.
Missing her so much ಅಂದ ಯಂಗ್ ಮದರ್ ಅರ್ಚನಾ ಉಡುಪರಿಗೆ, Don’t worry. She will be ok. I am also an Young grand mother left my grandchild at home… ಅಂದು cheer up ಮಾಡಿ ದೊಡ್ಡ ದನಿಯಲ್ಲಿ ನಗುತ್ತ ಮಾತನಾಡಿದ ಮುಖವಿನ್ನೂ ಕಣ್ಣ ಸ್ಪಷ್ಟವಾಗಿ ಅಚ್ಚೊತ್ತಿದೆ. ನಮ್ಮ ಶಾಲಾ ದಿನಗಳಲ್ಲಿ ರೇಡಿಯೋಗಳಲ್ಲಿ ಕೇಳಿಬರುತ್ತಿದ್ದ ‘ಕೋಯಿ ಯಹಾ ನಾಚೆ ನಾಚೆ’ ಎಂದು ಹುಚ್ಚೆದ್ದು ಕುಣಿಯುವಂತೆ ಹಾಡುತ್ತಿದ್ದ ಅವರ ವಿಶೇಷವಾದ ದನಿಗೆ ಮನಸೋಲದವರು ಅಪರೂಪ. ಅಚಾನಕ್ಕಾಗಿ ಒಮ್ಮೆ ನಮ್ಮ ಮನೆಯ ಕಪ್ಪು-ಬಿಳುಪಿನ ಟಿವಿಯಲ್ಲಿ ಕಂಡ ಅವರ ಮುಖ ಮನಸ್ಸಿನ ಸ್ಥಾಪಿತಗೊಂಡು ಬಿಟ್ಟಿತ್ತು. ಕಾರಣ, ಅವರ ದನಿ ಕೇಳಿ ನಮ್ಮದೇ ಕಲ್ಪನೆಯಲ್ಲಿದ್ದ ಅವರ ಚಿತ್ರಕ್ಕೆ ತದ್ವಿರುದ್ಧವಾಗಿದ್ದ ಅವರ ಉಡುಗೆ- ತೊಡುಗೆಗಳು.
ಎಲ್ಲಕ್ಕಿಂತ ಇಷ್ಟವಾದದ್ದು ನಗುವಿ ನೊಂದಿಗೆ ಬೆರೆತ ಅವರ stage energy. ನಾನು ಮೊದಲ ಬಾರಿಗೆ ಕಂಡ QUEEN OF POP SINGER ಉಷಾ ಉತ್ತುಪ್ ಇಂದಿಗೂ ಹಾಗೇ ಇzರೆ. ವಯಸ್ಸಿನ ಹೊರತು ಚೂರೂ ಬದಲಾಗಿಲ್ಲ. ಮೂಲತಃ ತಮಿಳು ಬ್ರಾಹ್ಮಣ ಕುಟುಂಬದವರಾದ ವೈದ್ಯನಾಥ ಸೋಮೇಶ್ವರ ಸಾಮಿ ಹಾಗೂ ಮಾಧವಿ ದಂಪತಿಯ ಆರು ಜನ ಮಕ್ಕಳಲ್ಲಿ ಐದನೆಯವರಾಗಿ ಮಹಾಲಕ್ಷ್ಮೀಯಂತೆ ಶುಭ ಶುಕ್ರವಾರದಂದು 07 07 ನವೆಂಬರ್ 1947ರಂದು ಹುಟ್ಟಿದ ಉಷಾ ಸಾಮಿ ಹುಟ್ಟಿ ಬೆಳೆದ್ದೆಲ್ಲ ಮುಂಬೈನ. ತಂದೆ ಪೊಲೀಸ್ ಕಮೀಷನರ್ ಆಗಿದ್ದರಿಂದ ಬಾಲ್ಯವೆಲ್ಲ ಪೊಲೀಸ್ ಕ್ವಾರ್ಟರ್ಸ್‌ನ ಕಳೆಯುವಂತಾಗಿತ್ತು.
ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಬೆಂಗಾಲಿ, ಪಂಜಾಬಿ, ಅಸ್ಸಾಮೀ, ಒರಿಯಾ, ಗುಜರಾತಿ, ಮರಾಠಿ, ಕೊಂಕಣಿ, ಮಲಯಾಳಂ, ಸೇರಿದಂತೆ
ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ಸಿಂಹಳಿ, ಸ್ವಾಹಿಲಿ, ರಷ್ಯಾನ್, ನೇಪಾಳಿ,ಅರಾಬಿಕ್, ಝುಲು, ಸ್ಪಾನಿಷ್ ಹಾಗೂ ಮಿಶ್ರ ಭಾಷೆಗಳು… ಹೀಗೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿರುವ ಉಷಾ ಕಲಿಕೆಯಲ್ಲಿ ಸದಾ ಮುಂದು. ಉಷಾರಂತೆಯೇ ಅವರ ಮೂವರು ಅಕ್ಕಂದಿರೂ ಕೂಡ ಗಾಯಕಿಯರು. ಮನೆಯಲ್ಲಿ ಸಂಗೀತದ ವಾತಾವರಣವಿದ್ದುದರಿಂದ ಸಹಜವಾಗಿಯೇ ಸಂಗೀತದೆಡೆಗೆ ಆಸಕ್ತಿ ಬೆಳೆದಿದೆ. ರೇಡಿಯೋಗಳಲ್ಲಿ ಬಿತ್ತರ ವಾಗುತ್ತಿದ್ದ ಕಿಶೋರಿ ಅಮೋನ್ಕರ್, ಬಡೇ ಗುಲಾಮ್ ಅಲಿ ಖಾನ್‌ರ ಸಂಗೀತವನ್ನು ಆಲಿಸುತ್ತ, ಅದರೊಂದಿಗೆ ದನಿಗೂಡಿಸಲು ಪ್ರಯತ್ನಿಸುತ್ತಿದ್ದರಂತೆ ಉಷಾ ಸಾಮಿ.
ಹಿಂದೂಸ್ತಾನಿ, ಕರ್ನಾಟಿಕ್ ಅಷ್ಟೇ ಅಲ್ಲದೆ ಪಾಶ್ಚಾತ್ಯ ಸಂಗೀತಗಳನ್ನೂ ಆಲಿಸುತ್ತಾ ಬೆಳೆದ ಉಷಾ ಸಾಮಿಯನ್ನು ಅದೊಂದು ದಿನ ಶಾಲೆಯ ಸಂಗೀತ
ತರಗತಿಯಿಂದ ಹೊರಹಾಕಿದ್ದರಂತೆ. ಕಾರಣ, ಅವರಿಗೆ ಸಂಗೀತಕ್ಕೆ ಅವಶ್ಯಕವಾಗಿರಬೇಕಾದಂತಹ ದನಿಯಿಲ್ಲ ಎಂದು. ಆದರೆ ಉಷಾರಲ್ಲಿದ್ದ ಸಂಗೀತದೆಡೆಗಿನ ಆಸಕ್ತಿಯನ್ನು ಗಮನಿಸಿದ ಅವರ ಸಂಗೀತ ಶಿಕ್ಷಕಿ, ತಾಳವಾದ್ಯ ಕೊಟ್ಟು ತರಗತಿಯಲ್ಲಿ ಕೂರಲು ಅನುಮತಿಸಿದ್ದರಂತೆ. ಹೀಗಾಗಿ ಅವರಿಗೆಂದೂ ಶಾಸ್ತ್ರೀಯವಾಗಿ ಸಂಗೀತ ಕಲಿಯುವ ಅವಕಾಶವೇ ಸಿಗಲಿಲ್ಲ.
ಅಷ್ಟರಗಲೇ ಅಕ್ಕಂದಿರಾದ ಉಮಾ ಪೊಚ, ಇಂದಿರಾ ಶ್ರೀನಿವಾಸನ್ ಹಾಗೂ ಮಾಯಾ ಸಾಮಿ ಸಂಗೀತ ಕ್ಷೇತ್ರದ ನೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ಗಳಿಗೆ ಹೋಗುವಾಗ ಅವರೊಂದಿಗೆ ತಾವೂ ಜತೆಯಾಗುತ್ತಿದ್ದರಂತೆ ಉಷಾ ಸಾಮಿ. ಪಕ್ಕದ ಮನೆಯಲ್ಲಿದ್ದ ಡೆಪ್ಯುಟಿ ಕಮೀಷನರ್‌ರ ಮಗಳಾದ ಜಮೀಲಾರಿಂದ ಪ್ರೇರಿತರಾಗಿ ಹಿಂದಿಯನ್ನು ಕಲಿತು ಸಾಂಪ್ರದಾಯಕ ಉಡುಗೆಯಾದ ಸಲ್ವಾರ್ ಕಮೀಝ್ ತೊಟ್ಟು ಶಾಸೀಯ ಸಂಗೀತ ಕಲಿಯಲಾರಂಭಿಸುತ್ತಾರೆ. ತಮ್ಮ ದನಿಯಲ್ಲಿ ವಿಭಿನ್ನವಾಗಿ ಹೊಮ್ಮುತ್ತಿದ್ದ ಶಾಸ್ತ್ರೀಯ ಸಂಗೀತದ fusion music ಉಷಾರಿಗೆ ವರವಾಗಿ ಒಲಿಯುತ್ತದೆ. ತಮ್ಮ ಒಂಬತ್ತನೆಯ ವಯಸ್ಸಿನಲ್ಲಿಯೇ ಸಾರ್ವಜನಿಕವಾಗಿ ಹಾಡಲಾರಂಭಿಸಿದ ಉಷಾರನ್ನು ಅಮೀರ್ ಸಯಾನಿ ಯವರಿಗೆ ಪರಿಚಯಿಸಿಕೊಡುತ್ತಾರೆ ಅವರ ಸಹೋದರಿಯರು. ಅವರ ಮೂಲಕ ಸಿಲೋನ್ ರೇಡಿಯೋದಲ್ಲಿ ಮೊಟ್ಟ ಮೊದಲ ಬಾರಿಗೆ ’’overtine music hour’ ಎಂಬ ಕಾರ್ಯಕ್ರಮದಲ್ಲಿ ಸಾಕಷ್ಟು ಹಾಡುಗಳನ್ನು ಹಾಡುವ ಮೂಲಕ ಎಲ್ಲರ
ಮನಗೆಲ್ಲುತ್ತಾರೆ.
ನಂತರ ಅವಕಾಶಗಳು ಸಾಲುಗಟ್ಟಿ ಅವರನ್ನು ಹುಡುಕಿ ಕೊಂಡು ಬರಲಾರಂಬಿಸುತ್ತದೆ. ನಂತರ 1969ರಲ್ಲಿ ಮದರಾಸಿನಲ್ಲಿ Nine gems ಎನ್ನುವ ಪುಟ್ಟ ನೈಟ್ ಕ್ಲಬ್ಬಿನಲ್ಲಿ ಹಾಡಲು ಆರಂಭಿಸಿದಾಗ, ಸೀರೆ ಯುಟ್ಟು ಪಾಪ್ ಹಾಡುಗಳನ್ನು ಹಾಡುವ ರೀತಿ ಬಹಳ ಜನರನ್ನು ಸೆಳೆಯುತ್ತದೆ. ಹೀಗಾಗಿ ಉಷಾರಿಗೆ ಸಣ್ಣಪುಟ್ಟ ನೈಟ್ ಕ್ಲಬ್‌ಗಳಲ್ಲಿ ಬಹಳ ಬೇಡಿಕೆ ಉಂಟಾಗಿ ತಮ್ಮ ಆಪ್ತವಲಯದಲ್ಲಿ ಸಾಕಷ್ಟು ಪ್ರಸಿದ್ಧರಾಗುತ್ತಾರೆ. ಮುಂದೆ ಕೊಲ್ಕತ್ತದ ನೈಟ್‌ಕ್ಲಬ್‌ಗಳಲ್ಲಿ ಹಾಡುವಾಗ ಪರಿಚಯ ವಾದವರೇ ಜಾನಿ ಚೆಕೊ ಉತ್ತುಪ್. ರಾಮು ಅಯ್ಯರ್ ಎಂಬುವವರನ್ನು ವಿವಾಹ ವಾದರೂ ಅದು ಹೆಚ್ಚಿನ ದಿನ ಉಳಿ ಯದೇ ರಾಮು ಅವರ ಅನಿರೀಕ್ಷಿತ ನಿರ್ಗಮನದ ನಂತರ ಕೇರಳ ಮೂಲದವರಾದ ಜಾನಿ ಚೆಕೊ ಉತ್ತುಪ್‌ರನ್ನು ವಿವಾಹವಾಗಿ, ಉಷಾ ಸಾಮಿ- ಉಷಾ ಉತ್ತುಪ್ ಆಗಿ ಬದಲಾಗುತ್ತಾರೆ.
ಅಂಜಲಿ ಹಾಗೂ ಸನ್ನಿ ಎನ್ನುವ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಾಯಿಯಾಗಿ ತುಂಬು ಕುಟುಂಬದ ಸಂತೋಷವನ್ನು ಅನುಭವಿಸುತ್ತ, ಕೊಲ್ಕತ್ತದ ನೆಲೆಗೊಳ್ಳುತ್ತಾರೆ. ಇಂದು ಕೊಲ್ಕತ್ತಾದ ಐಕಾನಿಕ್ ಇಮೇಜ್ ಆಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ ನಮ್ಮ ಉಷಾ ಉತ್ತುಪ್. ಒಮ್ಮೆ ದೆಹಲಿಯ ಒಬೆರಾಯ್ ಹೊಟೇಲಿನಲ್ಲಿ ಹಾಡುವಾಗ ನವಕೇತನ್ ಚಿತ್ರತಂಡದೊಂದಿಗೆ ಆಗಮಿಸಿದ್ದ ಶಶಿಕಪೂರ್ ಇವರ ಗಾಯನ ಶೈಲಿಯ
ನ್ನು ಕಂಡು, ‘ತಾವೇಕೆ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಬಾರದು?’ ಎಂದು ಅವರನ್ನು ಚಲನಚಿತ್ರಗಳಲ್ಲಿ ಹಾಡುವಂತೆ ಪ್ರೇರೇಪಿಸುತ್ತಾರೆ.
ಅದರ ಫಲವಾಗಿ ಮೊತ್ತ ಮೊದಲ ಬಾರಿಗೆ 1971ರಲ್ಲಿ ದೇವ್ ಆನಂದ್ ನಿರ್ದೇಶಿಸಿ, ತಾವೇ ಸ್ವತಃ ನಟಿಸಿದ ‘ಹರೇ ರಾಮ ಹರೇ ಕೃಷ್ಣ’ ಎಂಬ ಹಿಪ್ಪೀ ಕಥೆಯುಳ್ಳ
ಹಿಂದಿ ಚಲನಚಿತ್ರದ ಪ್ರಖ್ಯಾತ ಗೀತೆಯಾದ ‘ದಮ್ ಮಾರೋ ದಮ’ ನಲ್ಲಿ ಆಶಾ ಭೋಸ್ಲೆ ಜತೆಗೆ ಹಾಡುವ ಅವಕಾಶ ಒದಗಿ ಬರುತ್ತದೆ. ಅದಕ್ಕಾಗಿ ಆಶಾರ ಜತೆಯಲ್ಲಿ ಸಾಂಗ್ ರಿಹರ್ಸಲ್ ಕೂಡ ಮಾಡಿರುತ್ತಾರೆ. ಆದರೆ ರೆಕಾರ್ಡಿಂಗ್ ದಿನ ಉಷಾಗೆ ಎಷ್ಟು ಹೊತ್ತು ಕಾದರೂ ಕರೆಯೇ ಬರುವುದಿಲ್ಲ. ಕೊನೆಗೆ ಆರ್. ಡಿ. ಬರ್ಮನ್‌ರವರಿಗೆ ಫೋನು ಮಾಡಿ ಕೇಳಿದಾಗ, ಇಲ್ಲ ಅದನ್ನು ಸಂಪೂರ್ಣವಾಗಿ ಆಶಾ ಭೋಸ್ಲೆಯವರೇ ಹಾಡುತ್ತಾರೆ ಎಂದು ಹೇಳುತ್ತಾರೆ.
ಅಲ್ಲಿಯ ಒಳ ರಾಜಕಾರಣಗಳಿಂದಾಗಿ ಆಶಾ ಭೋಸ್ಲೆಯ ದನಿಯ ನಡುವಿನ ಆಲಾಪವಾಗಿಯಷ್ಟೇ ಅವರ ದನಿಯನ್ನು ಬಳಸಿಕೊಳ್ಳಲಾಗುತ್ತದಾದರೂ, ಸಿನಿಮಾದ ಟೈಟಲ್ ಸಾಂಗಾದ ‘ಹರೇ ರಾಮ ಹರೇ ಕೃಷ್ಣ’ ವನ್ನು ಉಷಾರ ದನಿಯಲ್ಲಿ ರೆಕಾರ್ಡ್ ಮಾಡಲಾಗುತ್ತದೆ. ಮುಂದೆ ಅದು ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತದೆ. ಇದರಿಂ ದಾಗಿ ಬೆಳ್ಳಿತೆರೆಯಲ್ಲೂ ಅವರನ್ನು ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿ ಗಾಯನ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಎತ್ತರೆತ್ತರವಾಗಿ
ಬೆಳೆಯುತ್ತಾ ಹೋಗುತ್ತಾರೆ ಉಷಾ ಉತ್ತುಪ್.
‘Rockstar in Saree’ ಎಂದು ವರ್ಣಿಸುತ್ತಾರೆ ಹೆಸರಾಂತ ನಿರ್ದೇಶಕರಾದ Farhan Akhtar. ಆದರೆ ಸಾಮಾನ್ಯ ಮಧ್ಯಮ ವರ್ಗದ ಮನೆಯಲ್ಲಿ ತುಂಬು ಕುಟುಂಬದ ನಡುವೆ ಬೆಳೆದ ಉಷಾರವರಿಗೆ ಮೊದಮೊದಲು ಕಾರ್ಯಕ್ರಮಗಳಿಗೆ ಹೋಗುವಾಗ ಉಡುತ್ತಿದ್ದ ಅಮ್ಮನ ಸೀರೆಗಳು ಕ್ರಮೇಣ ಅದು ಶಾಶ್ವತವಾಗಿ ಅವರ ಐಡೆಂಟಿಟಿಯಾಗಿ ಪರಿವರ್ತಿತಗೊಂಡಿದ್ದು ಹಾಗೂ ಎಷ್ಟೆಲ್ಲ ಹೆಸರು ಮಾಡಿ, ದೇಶ-ವಿದೇಶಗಳನ್ನು ತಿರುಗಾಡಿದರೂ ಬದಲಾಗದೆ ಅದನ್ನು ಅವರು
ಹಾಗೆಯೇ ಉಳಿಸಿಕೊಂಡಿರುವುದು ಪರೋಕ್ಷವಾಗಿ ನಮ್ಮ ಸಂಪ್ರದಾಯದ ಉಡುಗೆ ತೊಡುಗೆಗೆ ನೀಡಿದ ಗೌರವವೆಂದರೆ ತಪ್ಪಾಗಲಾರದು.
ಆದರೆ 1983ರಲ್ಲಿ ಪಶ್ಚಿಮ ಬಂಗಾಳದ ಸಾಂಸ್ಕೃತಿಕ ಉಡುಗೆ- ತೊಡುಗೆಯನ್ನು ತೊಟ್ಟು ಚೀಪ್ ಡಿಸ್ಕೋ ಹಾಡುಗಳನ್ನು ಹಾಡುವ ಮೂಲಕ ನಮ್ಮ ನಾಡಿಗೆ
ಅವಮರ್ಯಾದೆ ತೋರುತ್ತಿzರೆ. ಹೀಗಾಗಿ ಅವರ ಸಂಗೀತ ಕಾರ್ಯಕ್ರಮಗಳನ್ನು ಬ್ಯಾನ್ ಮಾಡಬೇಕೆಂದು ಆಗಿನ Public works Minister of West Bengal ಆಗಿದ್ದ ಜತಿನ್ ಚಕ್ರಬೊರ್ತಿ ಉಷಾ ಉತ್ತುಪ್‌ರ ಮೇಲೆ ಆರೋಪ ಮಾಡಿ ಕಾನೂನಿನ ಮೂಲಕ ಒತ್ತಡ ತರುತ್ತಾರೆ. ಆದರೆ ಅಲ್ಲಿಯ ಕೋರ್ಟು ಅವರಿಗೆ ‘ಅವರಿಚಯ ಉಡುಪನ್ನುಟ್ಟು ಹಾಡುವ ಎಲ್ಲ ಹಕ್ಕಿದೆ’ ಎಂದು ಉಷಾರ ಪರವಾಗಿ ತೀರ್ಪನ್ನಿತ್ತು ಅವರ ಮೇಲೆ ಮಾಡಿದ್ದ ಆರೋಪವನ್ನು ತಳ್ಳಿಹಾಕಿತ್ತು.
ಕೇವಲ ಗಾಯನ ಕ್ಷೇತ್ರದಲ್ಲಷ್ಟೇ ಅಲ್ಲದೆ ನಟನೆಯಲ್ಲಿಯೂ ಕೆಲಕಾಲ ತಮ್ಮನ್ನು ತೊಡಗಿಸಿಕೊಳ್ಳುತ್ತಾರಾದರೂ ಅದು ಬೆರಳೆಣಿಕೆ ಯಷ್ಟು ಮಾತ್ರ. ಚಲನಚಿತ್ರ ಗಳಲ್ಲಿ ಹಾಡಿದ್ದಕ್ಕಿಂತಲೂ ಹೆಚ್ಚಾಗಿ ಅವರ ಆಲ್ಬಮ್ ಗೀತೆಗಳು ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದೆ. ಅವರ ಮೊತ್ತ ಮೊದಲ ಆಲ್ಬಮ್ ಗೀತೆಯ ರೆಕಾರ್ಡಿಂಗಿಗೆ ಸಂಭಾವನೆಯಾಗಿ ದೊರೆತ ಹಣ ಕೇವಲ ಮೂರು ಸಾವಿರದ ಐದುನೂರು ರುಪಾಯಿಗಳು ಮಾತ್ರ!
ಮೈಕೆಲ್ ಜಾಕ್ಸನ್‌ರ ’Don’t Stop Till you Get Enough’ ಅನ್ನು ಹಿಂದಿ ಭಾಷೆಗೆ ಚುಪ್ಕೆ ಕೌನ್ ಆಯಾ? ಅನ್ನುವ ಹಾಡನ್ನು Don’t Stop Till you
Get Enough’ ಎಂಬ ಆಲ್ಬಮ್ ನಲ್ಲಿ ಕಾಣಬಹುದು. ಹಾಗೆಯೇ ಮಕ್ಕಳಿಗಾಗಿ Don’t Stop Till you Get Enough’ ಅನ್ನುವ ಆಲ್ಬಮ್ ನಲ್ಲಿ ಕೂಡ ಹಾಡಿzರೆ. ಅಷ್ಟೇ ಅಲ್ಲದೆ ಮದರ್ ಥೆರೆಸಾರೊಂದಿಗಿನ ಒಡನಾಟದಿಂದಾಗಿ ಅವರ ಮೂರು ಆಶ್ರಮಗಳಲ್ಲೂ ಸಾಕಷ್ಟು ಹಾಡಿ ಮನರಂಜಿಸಿದ್ದಾರೆ. 2011ರಲ್ಲಿ ಮೊದಲ ಬಾರಿಗೆ filmfare awardತೆಗೆದುಕೊಳ್ಳುವಾಗ, ನಾನು ಗಮನಿಸುತ್ತಲೇ ಇದ್ದೆ. ಇಲ್ಲಿರುವವರೆಲ್ಲ ಇದು ನನ್ನ ಐದನೇಯ ಫಿಲ್ಮ ಫೇರ್ ಅವಾರ್ಡು, ಆರನೆಯ ಅವಾರ್ಡು ಅಂತ ಹೇಳುತ್ತಲೇ ಇದ್ದರು. ಆದರೆ ಸಇದು ನನ್ನ ನಲವತ್ತೆರಡು ವರ್ಷಗಳಲ್ಲಿ ನನಗೆ ದೊರೆಯುತ್ತಿರುವ ಮೊತ್ತಮೊದಲ ಫಿಲ್ಮ ಫೇರ್ ಅವಾರ್ಡು ಎಂದು ಕಣ್ಣೀರಾದ ಉಷಾ ಉತ್ತುಪ್‌ರಿಗೆ ಲೈ- ಟೈಮ್ ಅಚೀವ್ ಮೆಂಟ್ ಅವಾರ್ಡು ಹಾಗೂ ಪದ್ಮಶ್ರೀ ದೊರೆತಿವೆ.
ಸಂಗೀತ ಜಗತ್ತನ್ನು ಹತ್ತಿರಾಗಿಸುತ್ತದೆ. ಅಪರಿಚಿತರನ್ನು ಪರಿಚಿತರನ್ನಾಗಿಸುತ್ತದೆ. ಸಂಗೀತ ಎಲ್ಲವನ್ನೂ ಕೊಟ್ಟಿದೆ ನನಗೆ. ಹೆಸರು, ಗಂಡ, ಮಕ್ಕಳು, ಮೊಮ್ಮಕ್ಕಳು, ಇಷ್ಟೆಲ್ಲ ಜನರ ಪ್ರೀತಿ, ಯಾರೋ ನಿನ್ನ ದನಿ ಸಂಗೀತದ್ದಲ್ಲ ಎಂದು ದೂರ ತಳ್ಳಿದರೆ ಅದನ್ನೊಂದು ಸವಾಲನ್ನಾಗಿ ಸ್ವೀಕರಿಸಿ ಅದರ ಬೆಳೆದು ಗಟ್ಟಿಯಾಗಿ ನೆಲೆಯೂರಿ ಎಲ್ಲರಿಗೂ ಮಾದರಿಯಾಗಿ ನಿಂತ ಉಷಾ ಉತ್ತುಪ್ ಎಲ್ಲ ಬದಲಾದರೂ ತಾವು ಮಾತ್ರ ಬದಲಾಗದೇ ಅದೇ ಉತ್ಸಾಹದೊಂದಿಗೆ ಹಾಡುತ್ತಲೇ ಇzರೆ ಇಂದಿಗೂ. ಅವರ ದನಿಗೆಂದೂ ಮುಪ್ಪು ಬಾರದಿರಲಿ.