Sunday, 15th December 2024

ಸೆಗಣಿಯನ್ನು ಬಳಿಯಬೇಕು, ತಿನ್ನಬಾರದು !

ದಾಸ್‌ ಕ್ಯಾಪಿಟಲ್‌

ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ

ಮೋದಿ, ಷಾರು ಮಿಥ್ಯಾವತಾರಿಗಳು, ಇವರಲ್ಲಿ ಮನುಷ್ಯ ಸಂವೇದನಾ ಶೀಲತೆಯಿಲ್ಲ, ಇವರ ಅಧಿಕಾರ ಚಾಲನೆಯ ನರವನ್ನು ಕತ್ತರಿಸಿದರೆ ಇವರಿಗೆ ಕಣ್ಣು ಕಾಣುತ್ತದೆ, ಕಿವಿ ಕೇಳುತ್ತದೆ, ಅದಕ್ಕಾಗಿ ನಮ್ಮ ನಡೆಯಿರಬೇಕು ಎಂದು ಮತದಾರರನ್ನು ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸುವಂತೆ ದೇವನೂರ ಮಹಾದೇವರು ಆಗ್ರಹಿಸಿದ್ಧಾರೆ.

ಹಾಗಂತ ನೇರಾನೇರ ಈ ವಿಚಾರವನ್ನು ಹೇಳಿದರೆ ಆಗಲಿಕ್ಕಿಲ್ಲ ಎಂದು 78 ಐಎಎಸ್ ಅಧಿಕಾರಿಗಳ ರಾಜೀನಾಮೆ ಪತ್ರವನ್ನು, ರಾಜೀನಾಮೆಯ ಹಿಂದಿನ ಕಾರಣಗಳನ್ನು ಹೇಳುತ್ತಾರೆ. ಆ ಮೂಲಕ ಕೃಷಿ ಮಸೂದೆಯನ್ನು ಜಾರಿಗೆ ತಂದ ರೀತಿಯನ್ನು ಪ್ರಶ್ನಿಸುವ ಒತ್ತಡದ ಮನೋಭಾವವನ್ನು ವ್ಯಕ್ತಪಡಿಸುತ್ತಾರೆ. ಕೃಷಿ ಕ್ಷೇತ್ರ ರಾಜ್ಯಗಳಿಗೆ ಸಂಬಂಧಪಟ್ಟಿದ್ದು.

ಮೋದಿ ಸರಕಾರವು ಕೃಷಿ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದು ಯಾಕೆ ಎಂದು ಪ್ರಶ್ನಿಸುತ್ತ ಈ ಕಾನೂನುಗಳು ಭಾರತದ ಸಂವಿಧಾನದ ಫೆಡರಲ್ ಸ್ವರೂಪದ ಮೇಲಿನ ದಾಳಿ ಎಂದು ಆತಂಕ ಪಡುತ್ತಾರೆ. ರಾಜೀನಾಮೆ ನೀಡಿದ ಆ ಅನುಭವಿ ಮಾಜಿ ಉನ್ನತಾಧಿಕಾರಿಗಳು ಈ ಕೃಷಿ ಕಾನೂನುಗಳು ನೇರವಾಗಿ ಬಾಧಿಸುವ ರೈತರ ಜೊತೆ ಸರಕಾರ ಅವುಗಳನ್ನು ಜಾರಿಗೊಳಿ ಸುವ ಮುನ್ನ ಚರ್ಚಿಸಿಲ್ಲ.

ಸಂಸತ್ತಿನಲ್ಲಿ ಕಾನೂನುಗಳ ವಿರುದ್ಧ ಕೇಳಿಬಂದ ಆಕ್ಷೇಪಗಳಿಗೆ ಸರಕಾರ ಕಿವಿಗೊಡದೆ ಮಸೂದೆಗಳ ಕುರಿತ ಚರ್ಚೆಗೆ
ಸಮಯಾವಕಾಶ ನೀಡಲಿಲ್ಲ ಮತ್ತು ಗೊಂದಲಕಾರಿ ವಾತಾವರಣದ ನಡುವೆ ಧ್ವನಿಮತದಿಂದ ರಾಜ್ಯಸಭೆಯಲ್ಲಿ ಅಂಗೀಕರಿ ಸಿದ್ದು ಅನುಮಾನಾಸ್ಪದ ಎನ್ನುವ 78 ಅಧಿಕಾರಿಗಳ ರಾಜೀನಾಮೆ ಪತ್ರವನ್ನು ಸಮರ್ಥಿಸುತ್ತಾ ಹೌದು, ಇದು ದಾಳಿ ಮತ್ತು ಅನುಮಾನಾಸ್ಪದ ಎನ್ನುತ್ತಾರೆ ದೇವನೂರು ಮಹಾದೇವರು.

ಕೋವಿಡ್ ಸಾಂಕ್ರಾಮಿಕದ ಈ ದಯನೀಯ, ದಾರುಣ ಕಾಲಮಾನದಲ್ಲಿ ಯಾರೂ ಉಸಿರೆತ್ತುವುದಿಲ್ಲ, ಇದೇ ಸರಿಯಾದ ಕಾಲ ಅಂದುಕೊಂಡು ಈ ಹಿಂದೆ ಬಿಜೆಪಿ ಸರಕಾರ ಹಿಂತೆಗೆದುಕೊಂಡಿದ್ದ ಕೃಷಿ ಕಾನೂನುಗಳನ್ನು ಈಗ ಜಾರಿಗೊಳಿಸಲು ಹೊರಟಿದ್ದು ಕ್ರೌರ್ಯದ ಪರಮಾವಧಿ. ಇದು ಸಂವಿಧಾನ, ಪ್ರಜಾಪ್ರಭುತ್ವ, ಭಾರತದ ಒಕ್ಕೂಟದ ಸ್ವರೂಪದ ಮೇಲೆ ಅಂದರೆ ಭಾರತ ಸ್ವಾತಂತ್ರ್ಯ ಪಡೆದ ಕನಸಿನ ಮೇಲೆ ನಡೆದ ದಾಳಿಯಾಗಿದೆ ಎನ್ನುತ್ತಾರೆ.

ಜಾಗತಿಕ ಹಸಿವಿನ ಸೂಚ್ಯಂಕ ಅಧ್ಯಯನದ ವಿವರಗಳನ್ನು ನೀಡುತ್ತ ಪಕ್ಕದ ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ
ಗಳಿಗಿಂತ ಭಾರತದ ಪರಿಸ್ಥಿತಿ ಕೆಟ್ಟದ್ದಿದೆಯೆಂದು ದೇವನೂರರು ಹೇಳುತ್ತಾರೆ. ಇದಕ್ಕೆ ಕಾರಣ ಮೋದಿ – ಷಾ ಉಣಬಡಿಸುತ್ತಿರುವ ಮೃಷ್ಟಾನ್ನ ಭೋಜನವೆಂದು ವ್ಯಂಗ್ಯವಾಡುತ್ತಾರೆ. ಕೃಷಿಯ ಕತ್ತು ಹಿಸುಕುವ ಕಾನೂನುಗಳು ಬರಲು ಶಾಂತಾರಾಂ ಕಮಿಟಿಯ ಶಿಫಾರಸ್ಸೆಂದು ಅಂದಾಜಿಸುತ್ತಾ ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ ಅಪೌಷ್ಟಿಕತೆಯಲ್ಲಿ ಭಾರತದ ಪಾಲು 1/3 ಇದೆಯೆಂದೂ, ಅದು ಆಫ್ರಿಕಾಕ್ಕಿಂತ ದುಪ್ಪಟ್ಟು ಎಂದೂ, ರಕ್ತಹೀನತೆಯ ಬಳಲುವಿಕೆಯಲ್ಲಿ ೧೭೦ ಹಾಗೂ ಮಕ್ಕಳ ಬೆಳವಣಿಗೆಯ ಕುಂಠಿತದಲ್ಲಿ ಭಾರತದ ಸ್ಥಾನ 114 ಎಂದು ಸರ್ವೇಗಳು ಹೇಳಿದ್ದನ್ನು ದೇವನೂರರು ದಾಖಲಿಸುತ್ತಾರೆ.

2015-20ರ ಅವಧಿಯಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆಯೆಂದು ವರದಿಯನ್ನು ದಾಖಲಿಸುತ್ತಾ, ಬಡತನದ, ಹಸಿವಿನ, ಅಪೌಷ್ಟಿಕತೆಯ, ರಕ್ತಹೀನತೆಯ ಅಭಿವೃದ್ಧಿ ಮಾಡಿದ್ದು ಸಾಕು, ನಿಲ್ಲಿಸಿ ಎಂದು ಆಗ್ರಹಿಸುತ್ತಾ, ಬೆಲೆಯೇರಿಕೆಗೆ ಕಾರಣ ವಾಗುವ, ಕೃಷಿ ಆಧಾರ ಕಿತ್ತು ಗ್ರಾಮೀಣ ಸಮುದಾಯ ಬೇರು ಕಿತ್ತುಕೊಂಡು ನಗರಕ್ಕೆ ಜೋತು ಬೀಳುವ, ಸ್ಲಂ ಹೆಚ್ಚು ಮಾಡುವ ಸ್ಲಂ ಭಾರತ ನಮಗೆ ಬೇಡ ಎನ್ನಬೇಕು ಎಂದು ಆಗ್ರಹಿಸುತ್ತಾರೆ.

ಆದರೆ ಮೋದಿ – ಷಾರು ಕೇಳಿಸಿಕೊಳ್ಳುತ್ತಿಲ್ಲ. ತಮ್ಮ ಭ್ರಮೆ ಮತ್ತು ಸುಳ್ಳುಗಳಲ್ಲಿ ತಾವೇ ಹೂತು ಹೋಗಿದ್ದಾರೆ. ಇವರು ಮಿಥ್ಯಾವ ತಾರ ಪುರುಷರು. ಇವರಿಗೆ ಕಣ್ಣು ಕಾಣಿಸುತ್ತಿಲ್ಲ. ಕಿವಿಯೂ ಕೇಳಿಸುತ್ತಿಲ್ಲ. ಏನು ಮಾಡಬೇಕು? ಗೊತ್ತುಹೇಗೆ ಗೆದು ಅಂತ ಗೊತ್ತು ಅಹಂಭಾವದಲ್ಲಿ ಅವರು ಇದ್ದಿರುವಂತಿದೆ. ಇಂತಹ ರಾಜಕಾರಣದ ಹಿಮ್ಮಡಿ ನರ ಕತ್ತರಿಸಿ, ಇವರ ಅಧಿಕಾರದ ಚಲನೆ ನಿಲ್ಲಿಸು ವಂತಾದರೆ ಇವರಿಗೆ ಕಣ್ಣು ಕಾಣಿಸಬಹುದು, ಕಿವಿಯೂ ಕೇಳಿಸಬಹುದು.

ಸಂವೇದನಾಶೀಲತೆ ಉಂಟಾಗಲೂಬಹುದು. ಇಂಥವರ ಒಳಗೂ ಮಾನವೀಯತೆ ಉಸಿರಾಡಬಹುದು. ಇದಕ್ಕಾಗಿ ಮತದಾರರ ಎಲ್ಲರ ಚಿತ್ತ ನಡೆಯಬೇಕಾಗಿದೆ ಎಂದು ಹತಾಶರಾಗಿ ನುಡಿಯುತ್ತಾರೆ. ಅವರ ಮಾತಿನ ಒಟ್ಟೂ ಅರ್ಥವನ್ನು ಹೀಗೆಯೇ ಎನ್ನಲು
ಸಾಧ್ಯವಿಲ್ಲ. ಆದರೆ ಮೋದಿ – ಷಾರ ಅಧಿಕಾರದ ಚಲನೆಯನ್ನು ನಿಲ್ಲಿಸಿದರೆ ಭಾರತವನ್ನು ಕಾಡುತ್ತಿರುವ ಸಮಸ್ಯೆ ಗಳೆಲ್ಲವೂ ಸರಿಯಾಗಬಹುದೇನೋ ಎಂಬಂತಿದೆ! ಅಂದರೆ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬಾರದು, ಈಗ ಅಧಿಕಾರದಲ್ಲಿದ್ದರೂ ಅಧಿಕಾರದ ಚಲನೆಯನ್ನು ನಿಲ್ಲಿಸಿದಾಗ ಮಾತ್ರ ಅವರ ಕಣ್ಣು, ಕಿವಿಗಳು ಸರಿಯಾಗಿ ಸಂವೇದನಾ ಶೀಲತೆಯುಂಟಾಗಿ ಮಾನವೀ ಯತೆ ಉಸಿರಾಡಿ ಭಾರತದ ಹಸಿವು, ಅಪೌಷ್ಟಿಕತೆ, ರಕ್ತಹೀನತೆ, ಬೆಲೆಯೇರಿಕೆ ಎಲ್ಲವೂ ಸರಿಯಾಗಿ ಬಿಡುತ್ತದೆ!

ಹೌದೇ ಇದು? ತಮ್ಮ ಮಾತುಗಳಲ್ಲಿನ ಹಾಸ್ಯವನ್ನು ದೇವನೂರರೇ ಗ್ರಹಿಸಬೇಕು. ಮತ್ತೆ ವ್ಯಾಖ್ಯಾನಿಸಬೇಕು. ಹಾಗೆ ವ್ಯಾಖ್ಯಾನಿಸು ವಲ್ಲೂ ಅಥವಾ ಹೇಗೆ ವ್ಯಾಖ್ಯಾನಿಸಿದರೂ ಮೋದಿ – ಷಾರು ಅಧಿಕಾರದಲ್ಲಿರಬಾರದು ಎಂತಲೇ ವ್ಯಾಖ್ಯಾನಿಸುತ್ತಾರೇನೋ?! ಅವರ ಮಾತುಗಳು ಮೋದಿ ವಿರೋಧಿ ವಿಪಕ್ಷಗಳ ನಿಲುವಾಗಿ ಕಾಣುತ್ತದೆ. ಹಾಗಾದರೆ ದೇವನೂರರು ವಿಪಕ್ಷದವರೇ? ಛೆ ಛೆ ಅವರು ಹಾಗಿರಲಾರರು!

ಹಿಂದೊಮ್ಮೆ ಪ್ರಶಾಂತ ಭೂಷಣ ಟ್ವೀಟ್ ವಿಚಾರದಲ್ಲಿ ಬರೆಯುವಾಗ ಇಂದಿರಾ ಗಾಂಧಿಯದ್ದು ವ್ಯಾಘ್ರ ಸರ್ವಾಧಿಕಾರತ್ವ ಆಗಿತ್ತು. ಆಗೆಲ್ಲ ನೇರಾನೇರ ಮತ್ತು ಎದುರು ಬದುರು ಇತ್ತು. ದಮನಿಸಿದರೂ ಪ್ರತಿಭಟನೆಗಳು ಉಕ್ಕುತ್ತಿದ್ದವು. ಈಗ ಇರುವುದು ಗೋಮುಖವ್ಯಾಘ್ರ ತುರ್ತು ಪರಿಸ್ಥಿತಿ. ಮೇಲ್ನೋಟಕ್ಕೆ ನಾಜೂಕಾಗಿ ಕಂಡರೂ ಒಳಗೊಳಗೆ ಮಾಡಬಾರದ್ದನ್ನೆಲ್ಲ ಮಾಡುತ್ತಿರು ತ್ತದೆ ಎಂದಿದ್ದರು ದೇವನೂರರು.

ಎನ್‌ಆರ್‌ಸಿ, ಸಿಎಎ ಸೇರಿ ಅವರ ಸದ್ಯದ ಬರಹಗಳ ಒಟ್ಟು ಸಾರಾಂಶವೇನೆಂದರೆ, ಭಾರತದ ಈಗಿನ ಒಟ್ಟೂ ಪರಿಸ್ಥಿತಿಗೆ ಮೋದಿ, ಷಾ ಮತ್ತು ಮೋದಿ ಸರಕಾರ ಕಾರಣ ಎಂದು ಒಂದಿಷ್ಟು ಮಿಥ್ಯ ನಿದರ್ಶನಗಳಿಂದ ಸಾಬೀತು ಮಾಡಲು ಪ್ರಯತ್ನಿಸುತ್ತಿರುವುದು. ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೆ? ಭಾರತ ಎಂಥ ದೇಶ ಎಂಬುದನ್ನು ಅರ್ಥೈಸಿಕೊಂಡರೆ ಈ
ದೇಶವನ್ನು ಪಾಕಿಸ್ತಾನಕ್ಕೋ, ಬಾಂಗ್ಲಾಕ್ಕೋ, ನೇಪಾಳಕ್ಕೋ, ಶ್ರೀಲಂಕಕ್ಕೋ, ದಕ್ಷಿಣ ಆಫ್ರಿಕಕ್ಕೋ, ಸಿಂಗಪುರಕ್ಕೋ ಅಥವಾ
ಇನ್ನಾವುದೋ ದೇಶಕ್ಕೆ ಹೋಲಿಸುವುದೇ ಶುದ್ಧಾತಿಶುದ್ಧ ಪೆದ್ದುತನ ಮತ್ತು ಮೂರ್ಖತನವೆಂದು ಯಾರಿಗೇ ಆದರೂ  ಅರ್ಥ ವಾಗುತ್ತದೆ. ಯಾಕೆಂದರೆ ಈ ದೇಶದ ಅಸ್ಮಿತೆಯನ್ನು ಹೋಲುವ ಯಾವ ದೇಶವೂ ಈ ಭೂಮಿಯ ಮೇಲಿಲ್ಲ.

ಭೌಗೋಳಿಕತೆ, ಸಂಸ್ಕೃತಿ, ಪರಂಪರೆ, ಆಚಾರ – ವಿಚಾರ, ಉಡುಗೆ – ತೊಡುಗೆ, ಜಾತಿ – ಮತ – ಧರ್ಮ – ಪಂಥಗಳ ವೈಚಿತ್ರ್ಯ, ವೈಶಿಷ್ಟ್ಯ, ವಿಭಿನ್ನತೆಗಳನ್ನು ಬಿಡಿ, ಅವನ್ನೆಲ್ಲ ಹೇಳಿ ಮುಗಿಸಲು ಸಾಧ್ಯವಿಲ್ಲದ್ದು, ಮುಗಿಯುವಂಥದ್ದೂ ಅಲ್ಲ. ಆದರೆ, ಒಬ್ಬನು ರಾಷ್ಟ್ರೀಯತೆಯ ಬಗ್ಗೆ ಮಾತಾಡಿದರೆ ಹತ್ತು ಮಂದಿ ಅರಾಷ್ಟ್ರೀಯತೆಯ ಬಗ್ಗೆ ಅಪದ್ಧವಾಗಿ ಮಾತಾಡುವವರು ಇಲ್ಲಿದ್ಧಾರೆ.

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟುಹೋಗುತ್ತೇನೆಂದು ಹೇಳಿದ ಅತೀ ಬುದ್ಧಿವಂತರೂ ಇಲ್ಲಿದ್ದರು. ಭಾರತ ಮಾತಾ ಕಿ ಜೈ
ಅಂತ ಹೇಳುವುದಿಲ್ಲ ಎನ್ನುವ ಓವೈಸಿಯಂಥ ಜನಪ್ರತಿನಿಧಿಗಳೂ, ಹನುಮಾರಾಧನೆ ಗುಲಾಮಿತನದ ಸಂಕೇತವೆಂದವರೂ, ಬಹುಕೋಟಿ ಹಿಂದೂಗಳ ಆರಾಧ್ಯದೈವ ಶ್ರೀರಾಮನನ್ನು ನಿಂದಿಸುವವರೂ ಇಲ್ಲಿದ್ಧಾರೆ. ಆದ್ದರಿಂದ ದೇವನೂರರು ಆರೋಪಿ ಸುವ ಆಕ್ಷೇಪಿಸುವ ಮೇಲಿನ ವಿಚಾರಗಳಲ್ಲಿ ಅಂಥದ್ದೇನೂ ಹುರುಳಿಲ್ಲ.

ಮೋದಿಯನ್ನು ಆರೋಪಿಸುವ, ಆಕ್ಷೇಪಿಸುವವರ ಸಾಲಿನಲ್ಲಿ ಇವರೂ ಒಬ್ಬರು ಪರಿಗಣಿಸಬೇಕಾಗುತ್ತದೆ. ಅಷ್ಟಕ್ಕೂ ಈ ಸಾಲಿ ನಲ್ಲಿ ಇರುವವರಲ್ಲಿ ಹೆಚ್ಚಿನವರು 2014ರ ಮೊದಲು ಮೋದಿಯನ್ನು ವಿರೋಧಿಸುವವರೇ ಆಗಿದ್ದವರು. ಆದ್ದರಿಂದ ಅದರನೂ ವಿಶೇಷವಿಲ್ಲ. ಮೇಲಾಗಿ ವರ್ತಮಾನದ ಭಾರತ ವಿರೋಧಿ ನೆಲೆಯ ಜಾಗತಿಕ ಮಟ್ಟದ ಹುನ್ನಾರವಿದೆಯೆಂಬುದು ಸೀಕ್ರೆಟ್ಟಾಗಿ ಉಳಿದಿಲ್ಲ. ಬಹುಕಾಲದಿಂದ ನಡೆದುಕೊಂಡ ಬಂದ ಭಾರತದಂಥ ದೇಶದ ವ್ಯವಸ್ಥೆಯಲ್ಲಿ ಒಮ್ಮೆಲೇ ಒಂದಿಷ್ಟು ಬದಲಾವಣೆ
ಯನ್ನು ತರಲು ಮುಂದಾದರೆ ಸಾಧ್ಯವಾಗಲಿಕ್ಕಿಲ್ಲ ಎಂಬ ಪ್ರಜ್ಞೆ ಮೋದಿಯವರಿಗಿಲ್ಲವೆ? ಇದ್ದ ವ್ಯವಸ್ಥೆಯನ್ನೇ ಮುಂದುವರಿಸು, ನೀನೇನೂ ಹೊಸತನ್ನು ಮಾಡಬೇಡ ಎಂಬವರಿಗೆ ಮೋದಿ ವಿಲನ್ ಆಗಲೇಬೇಕಲ್ಲವೆ? ಭಾರತದ ಕುರಿತಾದ ಕಲ್ಪನೆಯನ್ನು ಮೋದಿಯವರು ಜಗತ್ತಿಗೆ ತೋರಿಸಿ ಕೊಡುತ್ತಿರುವ ಈ ಆರು ವರ್ಷದ ಪರಿಯೇ ಭಾರತದೊಳಗೂ ಹಲವರಲ್ಲಿ ಮಾತ್ಸರ್ಯವನ್ನು ಹುಟ್ಟಿಸಿದೆ.

ಜಗತ್ತು ಮೋದಿಯನ್ನು ನೆಚ್ಚಿಕೊಂಡ ಸಂದರ್ಭದಲ್ಲಿ ಮೋದಿಗೆ ಪ್ರಜಾಪ್ರಭುತ್ವದ ಪಾಠವನ್ನು ಹೇಳಿಕೊಡುವ ಸಾಹಸಕ್ಕೆ ಅಂಥವರು ಕೈಹಾಕುತ್ತಿದ್ಧಾರೆ. 1962ರಲ್ಲಿ ಚೀನಾದ ದುರುದ್ದೇಶಗಳನ್ನು ಅರಿಯಲಾಗದೆ ಆಕ್ರಮಣವನ್ನು ಎದುರಿಸಬೇಕಾ ದುದು ನೆಹರೂ ಕಾಲದಯಿತು. ಕಾರಣ, ಅಗತ್ಯಕ್ಕಿಂತಲೂ ಹೆಚ್ಚಾಗಿ ಸ್ನೇಹಿತ, ರಕ್ಷಣಾ ಸಚಿವ ಕೃಷ್ಣ ಮೆನನ್‌ರನ್ನು ನೆಹರೂ ನಂಬಿದ್ದರು. ಪ್ರಾಯಶಃ ಮೋದಿ ಕಾಲದಲ್ಲೂ ಅಂಥದ್ದನ್ನೇ ಸಾಧಿಸಲು ಚೀನಾ ಕುತಂತ್ರ ಹೆಣೆದಿತ್ತು. ಆದರೆ ಸಾಧ್ಯವಾಗಲ್ಲಿಲ್ಲ. ಕಾರಣ ಮೋದಿಯ ವಿದೇಶಿ ನೀತಿಗಳು ಎಂದು ಬೇರೆ ಹೇಳಬೇಕಾಗಿಲ್ಲ.

ಹೊರ ಶತ್ರುಗಳನ್ನು ಮೋದಿ ಗೆಲ್ಲಬಲ್ಲರು; ಒಳಶತ್ರುಗಳನ್ನು ಗೆಲ್ಲಬಲ್ಲರೇ? ಕಾಲವೇ ಉತ್ತರಿಸಬೇಕು! ಕೃಷಿ ತಿದ್ದುಪಡಿ ಮಸೂದೆಯ ವಿಚಾರಕ್ಕೆ ಬರೋಣ. ಯಾಕೆಂದರೆ ದೇವನೂರರು ಪ್ರಸ್ತಾಪಿಸಿದ ವಿಚಾರಗಳ ಮೂಲವಿರುವುದೇ ಇದರಲ್ಲಿ. ದೇಶದ ಯಾವುದೇ ರಾಜ್ಯದ ರೈತರಿಗಿಂತ ಹೆಚ್ಚಿನ ವಿರೋಧವನ್ನು ತೋರಿಸುತ್ತ ದೆಹಲಿಯಲ್ಲಿ ಬೀಡುಬಿಟ್ಟವರು ಪಂಜಾಬ್ ಮತ್ತು
ಹರ್ಯಾಣದ ರೈತರು.

ಯಾಕೆ ಹೀಗೆ? ಅನುಮಾನವಲ್ಲವೆ? ಮಜಾ ಏನೆಂದರೆ, ಇವರ ಪರ ಮಾತನಾಡಿದವ ಕೆನಡಾ ಪ್ರಧಾನಿ ಜಸ್ಟಿನ್ ಟುಡೋ! ಮತ್ತು ಈ ವಿರೋಧದಲ್ಲಿ ಪ್ರತಿಭಟನಕಾರರ ಖಲಿಸ್ತಾನ್ ಒಲವು, ಘೋಷಣೆ ಎಲ್ಲವೂ ವಿರೋಧದ ಒಟ್ಟೂ ಹಿನ್ನೆಲೆಯೇ ಸಂಶಯಾಸ್ಪದ ವಾಗಿದೆ. ಪಂಜಾಬ್ ಉಳಿದ ರಾಜ್ಯಗಳಂತಲ್ಲ. 1947ರ ನಂತರ ಪಂಜಾಬಿನ ರಾಜಕಾರಣ ಕುತೂಹಲಕಾರಿಯಾದದ್ದು.ಕಾರಣ ಅದರ ಗಡಿ ವಿದೇಶದೊಂದಿಗೆ ಹಂಚಿಕೊಂಡಿದೆ.

ಅಲ್ಲಿನ ಶ್ರೀಮಂತಿಕೆ ಕೂಡ ಇತರ ರಾಜ್ಯಗಳಿಗಿಂತ ಭಿನ್ನ. ಪ್ರತ್ಯೇಕ ಖಲಿಸ್ತಾನ್ ಹೋರಾಟದ ಭಿಂದ್ರನ್ ವಾಲೆಯಂಥ ಧರ್ಮಗುರು ಗಳು ಆ ನೆಲವನ್ನು ಮಾನಸಿಕವಾಗಿ ಬೆಳೆಸಿದ ಪರಿಯೇ ಬಹು ದುರಂತಮಯ ಇತಿಹಾಸದಿಂದ ಕೂಡಿದೆ! ಆದರೆ ಪಂಜಾಬಿಗಳು ಬಹು ಶ್ರಮಜೀವಿಗಳು ಎಂಬುದು ನಿಸ್ಸಂದೇಹ! ಇಡಿ ಭಾರತದ ಕೃಷಿಯಲ್ಲಿ ಪಂಜಾಬ್ ಹಿರಿಯಣ್ಣನಂತಿದ್ಧಾನೆ. ಅಲ್ಲಿಯ ರೈತರು ಶ್ರೀಮಂತರು.

ಕಾರಣ ಅವರ ಭೂಮಿಯ ಒಡೆತನ ದೊಡ್ಡದ್ದು. ಇಂದಿರಾ ಕಾಲದ ಹಸಿರು ಕ್ರಾಂತಿಯಡಿಯ ಕೃಷಿಯ ಯೋಜನೆಗಳನ್ನು ಹಾಸಿ ಹೊದೆಯುವಷ್ಟು ಬಳಸಿಕೊಂಡ ರಾಜ್ಯವಿದ್ದರೆ ಅದು ಪಂಜಾಬ್ ಮಾತ್ರ! ಇಂದಿರಮ್ಮನ ಕಾಲದ ಉಳುವವನೇ ಒಡೆಯ ಕಾಯಿದೆ ಅಲ್ಲಿ ಜೀವ ಪಡೆಯಲೇ ಇಲ್ಲ. ಕಾರಣ ಅಲ್ಲಿ ದೇವರಾಜ್ ಅರಸು ಇಲ್ಲವಾಗಿತ್ತು!

ಗೋಧಿಯನ್ನು ಅತೀ ಹೆಚ್ಚು ಬೆಳೆಯುವ ಪಂಜಾಬಿಗೆ ಹೋಲಿಸಿದರೆ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳು ಕಳೆದ ವರ್ಷದಲ್ಲಿ ಅತೀ ಹೆಚ್ಚು ಧವಸ ಧಾನ್ಯಗಳನ್ನು ಬೆಳೆದಿದೆ. ಆದರೆ ಕೃಷಿ ತಿದ್ದುಪಡಿ ಮಸೂದೆ ಆ ರಾಜ್ಯಗಳಿಗೆ ಮಾರಕವಾಗಲೇ ಇಲ್ಲ. ಆದರೆ ಪಂಜಾಬ್ ರೈತರು ಮಾತ್ರ ಆಗಬಾರದ್ದೇನೋ ಆಗಿಯೇ ಹೋಯಿತು ಎಂದು ದೆಹಲಿಯ ರಸ್ತೆಯಲ್ಲಿ ಮಲಗಿದ್ಧಾರೆ. ಇದೆಂಥಾ ಪರಿಯ ವಿರೋಧವೇನೋ!? ವಿರೋಧದ ನೆಲೆಯ ಪ್ರಜ್ಞೆಗಳು ದೆಹಲಿಯ ಪ್ರತಿಭಟನೆಯಲ್ಲಿ ಹಾದಿ ತಪ್ಪಿದ್ದಂತೂ ಸತ್ಯ!

ರೈತರನ್ನು ಕೃಷಿ ಮಸೂದೆಯ ವಿರುದ್ಧ ದಾರಿ ತಪ್ಪಿಸುವ ಕಾರ್ಯ ಆಗುತ್ತಿದೆಯೆಂದು ಪ್ರಧಾನಿ ಹೇಳುತ್ತಿರುವುದು ಈ ಹಿನ್ನೆಲೆ ಯಲ್ಲಿಯೇ! ಅಷ್ಟಕ್ಕೂ ಆ ಮೂರು ಮಸೂದೆಗಳು ಏನು ಹೇಳುತ್ತವೆಯೆಂದರೆ, ಎಪಿಎಂಸಿ ನಿಯಂತ್ರಿತ ಮಂಡಿಗಳನ್ನು ಹೊರತು ಪಡಿಸಿ ರೈತರು ತಮ್ಮ ಉತ್ಪನ್ನಗಳನ್ನು ಯಾರಿಗೂ ಮಾರಬಹುದು. ರೈತರಿಗೆ ತಮ್ಮ ಉತ್ಪನ್ನಗಳ ಮಾರಾಟದ ಆಯ್ಕೆಗಳ ವ್ಯಾಪ್ತಿ ಹೆಚ್ಚಿಸುವತ್ತ ಸರಕಾರ ಒಲವಿದೆಯೇ ಹೊರತು ಎಪಿಎಂಸಿ ಮುಚ್ಚೋದಲ್ಲ.

ಖಾಸಗಿ ಖರೀದಿದಾರರೊಂದಿಗೆ ಉತ್ತಮ ವ್ಯವಹಾರವನ್ನು ರೈತರಿಗೆ ಸಾಧ್ಯಮಾಡೋದು, ಅದಾಗದಿದ್ದರೂ ಎಪಿಎಂಸಿಯಲ್ಲೂ
ನಿಗದಿತ ಬೆಲೆಗೆ ಮಾರಿಕೊಳ್ಳುವುದಕ್ಕೆ ರೈತರಿಗೆ ಸ್ವಾತಂತ್ರ್ಯವಿದೆಯೆಂದು ಸರಕಾರ ಹೇಳಿದೆ. ಕಾನೂನು ಭಯವಿಲ್ಲದೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಮುಕ್ತ ಅವಕಾಶ ಆರ್ಥಿಕ ಏಜೆಂಟರಿಗಿದೆ. ರೈತರಿಗೆ ಗುತ್ತಿಗೆ ಕೃಷಿ ಪ್ರವೇಶಿಸಲು ಅವಕಾಶವಿದೆ. ಕೊಳ್ಳುವವರು ಬಯಸಿದ್ದನ್ನು ಬೆಳೆಯಲು ಲಿಖಿತ ಒಪ್ಪಂದಕ್ಕೆ ಅವಕಾಶವಿದೆ. ಕೃಷಿ ಮಾರುಕಟ್ಟೆಗಳನ್ನು ಉದಾರಿಕರಣ ಗೊಳಿಸುವುದು ಈ ಮೂರೂ ಮಸೂದೆಗಳ ಉದ್ದೇಶ.

ವಿಶೇಷವಾಗಿ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತದೆ. ಕೃಷಿ ಕ್ಷೇತ್ರವನ್ನು ಹೆಚ್ಚಿನ ಆ ದಾಯ ತರುವ ಉದ್ಯಮವನ್ನಾಗಿಸಬಹುದು ಎನ್ನುತ್ತದೆ ಕೇಂದ್ರ ಸರಕಾರ. ಹಾಗಂತ ಈ ಮಸೂದೆಗಳಿಂದ ಪ್ರತಿಕೂಲತೆಯಿಲ್ಲವೆ ಎಂದರೆ ಖಂಡಿತವಾಗಿಯೂ ಇದೆ. ಖಂಡಿತ ವಾಗಿಯೂ ಯಾವುದೇ ಮಸೂದೆಗಳು ಅಸ್ತಿತ್ವಕ್ಕೆ ಬಂದರೂ ಅದರಲ್ಲಿ ನೆಗೆಟಿವ್ ಆದ ಅಂಶಗಳಿರುವುದಿಲ್ಲವೇ? ಸಾಧ್ಯವೇ ಇಲ್ಲ.
ಹಾಗಿದ್ದರೆ ನೆಗೆಟಿವ್ ಅಂಶಗಳೇನು? ಈ ಮಸೂದೆಗಳ ಜಾರಿ ಕುರಿತಾಗಿ ರಾಜ್ಯ ಸರಕಾರಗಳೊಂದಿಗೆ ಮುಕ್ತ ಸಮಾಲೋಚನೆ ನಡೆಯಲಿಲ್ಲ. ಪ್ರಸಕ್ತ ಮುಕ್ತ ವ್ಯಾಪಾರಕ್ಕೆ ಈ ಮಸೂದೆ ಅಡ್ಡಿಪಡಿಸುತ್ತದೆ.

ಎಫ್ಸಿಐ ಮತ್ತು ಕೇಂದ್ರ ಸಂಸ್ಥೆಗಳು ವಾರ್ಷಿಕ ಗೋಧಿ ಮತ್ತು ಅಕ್ಕಿ ಖರೀದಿಯನ್ನು ನಿಲ್ಲಿಸಬಹುದು. ಆಹಾರ ನಿಗಮವು ಸಂಗ್ರಹ ವ್ಯವಸ್ಥೆಗೆ ಅಂತ್ಯ ಹಾಡಬಹುದು. ಮುಕ್ತ ಮಾರುಕಟ್ಟೆಯಿಂದ ರೈತರ ಮೇಲೆ ಜವಾಬ್ದಾರಿ ಹೆಚ್ಚಬಹುದು. ರಾಜ್ಯಗಳು ಎಪಿಎಂಸಿ ಯನ್ನು ಮುಚ್ಚಬಹುದು. ರೈತನ ಬೆಳೆಗೆ ಬೆಲೆ ನಿಗದಿ ಮಾಡುವವರು ಯಾರು? ಯಾವ ಮಾನದಂಡ? ಕಂಪನಿಗಳು ಕೊಡುವ ಬೆಲೆಯ ಮುಂದೆ ಸ್ಥಳೀಯ ಖರೀದಿದಾರರು ಸೋಲಬಹುದು. ಒಂದಿಷ್ಟು ನಿರುದ್ಯೋಗ ಸೃಷ್ಟಿಯಾಗಬಹುದು. ಇಲೆಕ್ಟ್ರಾನಿಕ್ ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್‌ಗೆ ದೇಶದ ಎಲ್ಲ ರೈತರನ್ನು ನೋಂದಾಯಿಸುವಂಥ ಕಾರ್ಯವನ್ನು ಸರಕಾರ ಮಾಡಬೇಕು.

ಹಾಗಂತ ಈಗಿರುವ ಎಪಿಎಂಸಿ ವ್ಯವಸ್ಥೆಯಲ್ಲಿ ರೈತರಿಗೆ ಮೋಸವಿಲ್ಲವೆ? ಖಂಡಿತವಾಗಿಯೂ ಇದ್ದೇ ಇದೆ. ಯಾವ ವ್ಯವಸ್ಥೆಯಲ್ಲಿ ಮೋಸ, ವಂಚನೆ, ಮಧ್ಯವರ್ತಿಗಳ ಕಮಿಷನ್ ದಂಧೆಯಿಲ್ಲ ಹೇಳಿ? ಈ ಮಧ್ಯೆ ಬೆಂಬಲ ಬೆಲೆಯನ್ನು ನಿಲ್ಲಿಸುವುದಿಲ್ಲ ಅಂತ
ಸರಕಾರ ಹೇಳುತ್ತಿದೆ. ನಿಗದಿತ ಬೆಲೆಯನ್ನು ನಿಗದಿ ಮಾಡುತ್ತೇವೆಂದು ಸರಕಾರ ಲಿಖಿತವಾಗಿ ಕೊಟ್ಟರೆ ರೈತರ ಪಾಲಿಗೆ ಅದು ಧೈರ್ಯವನ್ನು ಕೊಡುತ್ತದೆ. ಮುಖ್ಯವಾಗಿ ದಾಸ್ತಾನು ಸಂಗ್ರಹಕ್ಕೆ ರೈತರಿಗೆ ಅವಕಾಶ ಕಲ್ಪಿಸಬೇಕು ಹೇಗೆಂದರೆ, ಉತ್ತಮ ಬೆಲೆ ಬಂದಾಗ ಮಾರಿಕೊಳ್ಳುವಂತೆ.

ಕನಿಷ್ಠ ಬೆಂಬಲ ಬೆಲೆಗೇ ಬೆಳೆಗಳನ್ನು ಖರೀದಿಸಬೇಕೆಂಬ ನಿಯಮವನ್ನು ರಚಿಸಬೇಕು. ಖಾಸಗಿ ಖರೀದಿದಾರರ ಚೌಕಾಸಿಗೆ ಕಡಿವಾಣ ಹಾಕುವಂಥ ನಿಯಮ ರಚನೆಯಾಗಬೇಕು. ಹೀಗೆ ರೈತರಿಗೆ ಉಪಯೋಗವಾಗುವಂಥ ಕ್ರಮಗಳನ್ನು ರೈತರೊಂದಿಗೆ ಸಮಾಲೋಚಿಸಿದರೆ (ಸಮಾಲೋಚನೆಗೆ ಸರಕಾರ ಮುಂದಾಗುವುದಲ್ಲ) ಖಂಡಿತವಾಗಿಯೂ ಸಮಸ್ಯೆಗಳು ಪರಿಹಾರ ಕಂಡೀತು. ಆ ದಿಸೆಯಲ್ಲಿ ದೇವನೂರರಂಥ ಹಿರಿಯ ರೈತರು ಕೇಂದ್ರಕ್ಕೆ ಸಲಹೆ ನೀಡಬಹುದು. ಅದನ್ನು ಬಿಟ್ಟು ಅಪದ್ಧವಾಗಿ ಮಿಥ್ಯಾವತಾರ ಎಂತೆಲ್ಲ ದೂಷಿಸುವುದು ವ್ಯಕ್ತಿಗೌರವಕ್ಕೆ ಕುಂದು!

ಹತಾಶೆಯ ಪರಮಾವಧಿ! ಸಂವಿಧಾನವನ್ನು ಮೂಲೆಗುಂಪು ಮಾಡಿ ಸಂಸದೀಯ ಪ್ರಜಾಪ್ರಭುತ್ವವನ್ನು ಕುಸಿಯುವಂತೆ ಮಾಡಿದವರು ಯಾರು, ಮಿಥ್ಯಾವತಾರ ಯಾರದ್ದು, ಸತ್ಯಾವತಾರ ಯಾರದ್ದು, ಮಿಥ್ಯಾವತಾರಿಗಳು ಯಾರು, ಸತ್ಯಾವತಾರಿಗಳು ಯಾರೆಂಬುದನ್ನು ಸ್ವಾತಂತ್ರ್ಯ ಪೂರ್ವೋತ್ತರ ಭಾರತದ ರಾಜಕಾರಣವನ್ನು ಅವಲೋಕಿಸಿದರೆ ದರ್ಶನವಾಗುತ್ತದೆ. ಬಂಕಿಂಗ್ ಹ್ಯಾಮ್ ಅರಮನೆಯಂತೆ ವಂಶಪಾರಂಪರ್ಯವಾಗಿ ದೇಶವನ್ನು ಆಳಿದವರು ಯಾರು? ಅದು ಪ್ರಜಾಪ್ರಭುತ್ವದಲ್ಲಿ ಹೇಗೆ
ಸಾಧ್ಯವಾಯಿತು? ಅಗೆದಷ್ಟೂ ನಿಗೂಢಗಳೇ ಸಿಕ್ಕೀತಲ್ಲವೆ? ಮೋದಿಯ ಪ್ರತಿ ವರ್ತನೆಯನ್ನು, ಕ್ರಿಯೆಯನ್ನು, ವೈಯಕ್ತಿಕ ಬದುಕನ್ನು, ವೇಷಭೂಷಣವನ್ನು ಗುಮಾನಿಯಿಂದ ನೋಡುತ್ತ, ಟೀಕಿಸುತ್ತ, ವ್ಯಂಗ್ಯ ಮಾಡುತ್ತ ಸಾಧ್ಯವಾದಡೆಡೆ ಉತ್ತಮ ಭಾಷೆಯಲ್ಲಿ ಜರೆಯುತ್ತ, ಎಷ್ಟು ಸಾಧ್ಯವೋ ಅಷ್ಟೂ ಬಗೆಯಲ್ಲಿ ಎಲ್ಲದಕ್ಕೂ ಮೋದಿ ಹೆಸರನ್ನು ತಂದು ಎಳೆದಾಡುತ್ತ ಬೌದ್ಧಿಕ ಮತ್ತು ವೈಚಾರಿಕ ತೀಟೆಯನ್ನು ತೀರಿಕೊಂಡವರನ್ನೂ, ಅದನ್ನೇ ಮುಂದುವರಿಸುತ್ತಿರುವವರನ್ನೂ ನಾವು 24 ಗಂಟೆಯ ಟಿವಿಗಳಲ್ಲಿ ನೋಡುತ್ತಿದ್ದೇವೆ.  ಹಾಗಂತ ಮೋದಿಯಿಂದ ಯಾರಿಗೇನು ಸಮಸ್ಯೆಯಾಯಿತು? ಗೊತ್ತಿಲ್ಲ!

ಕೊನೆಯ ಮಾತು: ಸೆಗಣಿಯನ್ನು ಬಳಿಯಬೇಕು. ತಿನ್ನಬಾರದು, ತಿನ್ನಿಸಲೂ ಬಾರದು. ಸುಖಾಸುಮ್ಮನೆ ಸೆಗಣಿಯನ್ನು ಬಳಿಯು ವುದು ಹಿತವಲ್ಲ, ದೇಶಕ್ಕೆ ಆರೋಗ್ಯಯುತ ವಲ್ಲ. ಬಳಿಯುವಾಗಲೂ ತನ್ನತನವನ್ನು ಕಳೆದುಕೊಳ್ಳಬಾರದೆಂಬ ಎಚ್ಚರ ಬಳಿಯು ವವನಿಗೆ ಇರಬೇಕು. ಅಷ್ಟಕ್ಕೂ ಮಿಥ್ಯಾವತಾರಕ್ಕೆ ಸೆಗಣಿಯನ್ನು ಬಳಿಯುವುದರಿಂದ ಏನು ಪ್ರಯೋಜನ? ಮುಖ್ಯವಾಗಿ,
ಜಾತಿಯೆಂಬ ಕೊಚ್ಚೆಯ ಕೆಚ್ಚಲಿನಿಂದ ಹೊರಬರಲು ಪ್ರಯತ್ನಿಸಬೇಕು, ಜಾತಿಯ ಸಂಕೋಲೆಯಲ್ಲಿದ್ದೂ ಸಾಮಾಜಿಕರಾಗಬೇಕು.

ಸಮೂಹ ವೊಂದು ಸ್ವೀಕರಿಸುವ ಸಹನೆಯ ನೆಲೆಯ ಬದುಕನ್ನು ಸಾಗಿಸಲು ಈ ದೇಶ ಎಲ್ಲರಿಗೂ ಅವಕಾಶ ಕೊಟ್ಟಿದೆ. ಜಗತ್ತಿನ ಯಾವ ದೇಶದಲ್ಲಿಯೂ ಇಂಥ ಅವಕಾಶವನ್ನು ಪಡೆಯಲು ಇಷ್ಟು ಮುಕ್ತ ಸ್ವಾತಂತ್ರ್ಯವಿಲ್ಲವೇನೋ! ಆದ್ದರಿಂದ ರಾಷ್ಟ್ರೀಯತೆ
ಯ ಪ್ರeಯಲ್ಲಿ ಮಾತಾಡಬೇಕು. ಅರಾಷ್ಟ್ರೀಯತೆಯ ಬಗ್ಗೆಯಲ್ಲ! ರಾಜಕೀಯ ಪಕ್ಷಗಳ ವಕ್ತಾರರಂಥಲ್ಲ! ದೇವನೂರರಂಥ ಹಿರಿಯರು ಈ ಚಿಂತನೆಯ ಮಾರ್ಗದಾಯಿಗಳಾಗಬೇಕು.