Saturday, 12th October 2024

ಎಲ್ಲವೂ ನಕಲಿ…ನಕಲಿ…ನಕಲಿ

ಅಭಿಮತ

ನಂ.ಶ್ರೀಕಂಠ ಕುಮಾರ್‌

ಸುಮಾರು ೭೦ರ ದಶಕದ ಕಾಲದಲ್ಲಿ ಭಾರತದ ಆಯ್ದ ನಗರ ಪ್ರದೇಶಗಳಲ್ಲಿನ ಬಜಾರ್‌ಗಳಲ್ಲಿ ವಿದೇಶಿ ವಸ್ತು ಗಳಾದ ಟೇಪ್ ರೆಕಾರ್ಡರ್, ಕ್ಯಾಸೆಟ್, ಕ್ಯಾವೆರಾ, ಟಾರ್ಚ್ ಹೆಂಗಳೆಯರ ಲಿಫ್ಟಿಕ್, ನೈಲ್ ಪಾಲಿಷ್, ಸಿದ್ದಗೊಳಿಸಿದ ಮಕ್ಕಳ ಉಡುಪುಗಳು ಹೀಗೆ ಹಲವಾರು ವಸ್ತುಗಳು ನಿಗದಿತ ನಿಗೂಢ ಸ್ಥಳಗಳಲ್ಲಿ ನಂಬಿಕಸ್ಥ ವ್ಯಕ್ತಿಗಳ ಮುಖಾಂತರವಷ್ಟೆ ಗ್ರಾಹಕನಿಗೆ ತಲಪುತಿದ್ದವು.

ಆದರೆ ಅವೆಲ್ಲವೂ ವಿದೇಶಿ ಕಂಪನಿಗಳ ಮೂಲ ವಸ್ತುಗಳೇ ಆಗಿದ್ದವು. ಆದರೆ ಭಾರತದ ಗಡಿ ಒಳಕ್ಕೆ ನುಸುಳು ತ್ತಿದ್ದುದು ಕಳ್ಳ ದಾರಿಯಲ್ಲಿ ಸುಂಕ ರಹಿತವಾಗಿ ಗ್ರಾಹಕನಿಗೆ ದೊರಕುತ್ತಿತ್ತು. ಇದೆಲ್ಲವನ್ನೂ ನಿಯಂತ್ರಿಸುತ್ತಿದ್ದ ವ್ಯಕ್ತಿ ಮುಂಬೈಯ ಡಾನ್ ಹಾಜಿ ಮಸ್ತಾನ್ ಎಂಬುದು ಎಡೆ ಪುಕಾರಿತ್ತು. ಈತನ ಅಂದಿನ ಚಟುವಟಿಕೆಗಳನ್ನು ಆಧರಿಸಿದ ಹಿಂದಿ ಭಾಷೆಯ ಚಲನ ಚಿತ್ರವೊಂದು ಬಾಕ್ಸ್ ಆಫೀಸಲ್ಲಿ ದಾಖಲೆ ನಿರ್ಮಿಸಿ ನಟನಿಗೆ ಹಾಲಿವುಡ್ ಸ್ಟಾರ್ ಪಟ್ಟ ದೊರಕಿಸಿತ್ತು.

ಕಾಲಾನಂತರ ಪ್ರಾರಂಭವಾದದ್ದು ಬಹು ಬೇಡಿಕೆ ಇದ್ದ ತದ್ರೋಪಿಯ ಡೆಲ್ಲಿ ಸೆಟ್ ಎಂಬ ನಕಲಿ ವಸ್ತುಗಳ ಹಾವಳಿ. ಈ ದಂಧೆ ದೆಹಲಿ ಆಸು ಪಾಸಿನಲ್ಲಿ ಪ್ರಾರಂಭವಾಗಿ ಮೇಡ್ ಇನ್ ಯುಎಸ್‌ಎ ಎಂಬ ಲೋಗೋ ದೊಂದಿಗೆ ದೇಶಾದ್ಯಂತ ಮಾರುಕಟ್ಟೆಗೆ ತಲಪಿದವು. ಇಂತಹ ನಕಲಿ ಡೆಲ್ಲಿ ಸೆಟ್ ವಸ್ತುಗಳು ಸಹ ತಯಾರಾಗುತ್ತಿದ್ದುದು ಉಸ್ ನಗರ್ ಸಿಂಧ್ ಅಸೋಸಿಯೇಶನ್ (ಯುಎಸ್‌ಎ) ಎಂಬ ನಕಲಿ ಸಂಸ್ಥೆಯ ಜಾಲವಾಗಿತ್ತು.

ಇಂದು ಯಾವ ಕ್ಷೇತ್ರವೂ ನಕಲಿಯಿಂದ ಹೊರತಾಗಿಲ್ಲ. ವಿದ್ಯಾ ಕ್ಷೇತ್ರದಲ್ಲಿನ ನಕಲಿ ಅಂಕಪಟ್ಟಿಯಿಂದ ಹಿಡಿದು ಮನುಷ್ಯನಿಗೆ ಮೂಲಭೂತವಾಗಿ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಔಷಧದವರೆಗೆ ನಕಲಿಯು ತನ್ನ ಕದಂಬ ಬಾಹುಗಳನ್ನು ವಿಸ್ತರಿಸಿದೆ.

ಇಂದಿಗೂ ಒಂದಿಂದು ತದ್ರೂಪಿ ನಕಲಿ ವಸ್ತುಗಳು ಮಾರುಕಟ್ಟೆಯನ್ನು ಆವರಿಸಿ ತಿಳಿದೋ ತಿಳಿಯದೆಯೋ ಗ್ರಾಹಕನಿಗೆ ತಲುಪುತ್ತಿದೆ. ಇದೊಂದು ನಿರಂತರ ವ್ಯವಹಾರ. ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇದು ಅಲ್ಪ ಸಮಯದಲ್ಲಿ ಹೆಚ್ಚು ಹಣ ಸಂಪಾದನೆಗೆ ಸುಲಭ ಮಾರ್ಗ. ಹಾಗೆಯೇ ಕಡಿಮೆ ದರಕ್ಕಾಗಿ ಗ್ರಾಹಕ ಮಹಾಶಯ ಮುಗಿ ಬಿದ್ದವರೋ ಬಹಳಷ್ಟು ಮಂದಿ. ಕೊಂಡುಕೊಳ್ಳುವ ವಸ್ತು ಮೂಲ ವಸ್ತುವೇ ಅಥವಾ ನಕಲಿಯೋ ಎಂಬುದಾಗಿ ಪರಿಶೀಲಿಸುವ ವ್ಯವಧಾನ ಯಾರಿಗೂ ಇರುವುದಿಲ್ಲ.

ಕೆಲವೊಮ್ಮೆ ನಕಲಿ ಎಂದು ಗೊತ್ತಿದ್ದರೂ ಮುಗಿಬಿದ್ದವರೂ ಇದ್ದಾರೆ. ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಯನ್ನು
ಹೆಚ್ಚಿಸಿಕೊಳ್ಳುವ ನಂಬಿಕೆ ಇಂತಹವರಿಗೆ. ಇತ್ತೀಚೆಗೆ ಮೈಸೂರು ನಗರದ ಡಿಸಿಪಿಎಎನ್ ಪ್ರಕಾಶ್ ಗೌಡರವರು ಭೇದಿಸಿದ ಅಂತರ ರಾಜ್ಯ ನಕಲಿ ಡಾಕ್ಟರೇಟ್ ಪದವಿ ಪ್ರಕರಣ ಇನ್ನೂ ಕಣ್ಣ ಮುಂದೆ ಉದಾಹರಣೆಯಾಗಿದೆ. ಹಾಗೂ ಮತ್ತೊಮ್ಮೆ ಮೈಸೂರು ನಗರದ ಪೊಲೀಸರು ಸೂಕ್ತಸಮಯದಲ್ಲಿ ಬಹು ಬೇಡಿಕೆಯ ರೆಮ್‌ಡಿಸಿವಿರ್ ಹೆಸರಿನ ನಕಲಿ ಔಷಽ ತಯಾರಿಸುತ್ತಿದ್ದ ಜಾಲವನ್ನು ಭೇದಿಸಿರುವುದು ಹೆಮ್ಮೆಯ ಸಂಗತಿ.

ಈ ನಿಟ್ಟಿನಲ್ಲಿ ಇಲಾಖೆಯ ಆಯುಕ್ತ ಡಾ.ಚಂದ್ರ ಗುಪ್ತ, ರವರ ನೇತೃತ್ವದ ಡಿಸಿಪಿಗಳಾದ ಎ.ಎನ್. ಪ್ರಕಾಶ್ ಗೌಡ, ಗೀತಾ ಪ್ರಸನ್ನ ರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿದ ಎಲ್ಲಾ ಸಿಬ್ಬಂದಿಗಳು ಅಭಿನಂದನಾರ್ಹರು. ಹಾಗೆಯೇ ಬೇಧಿಸಿದ ಯಾವುದೇ ಪ್ರಕರಣಗಳನ್ನು ತಾರ್ಕಿಕವಾಗಿ ಅಂತ್ಯ ಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಇಂತಹ ಪ್ರಕರಣಗಳಲ್ಲಿ ಅಪರಾಧಿಗೆ ಸೂಕ್ತ ಶಿಕ್ಷೆ ಆಗದಿದ್ದಲ್ಲಿ ಮುಂದೆಯೂ ಅಪರಾಧಗಳು ವಿವಿಧ ರೀತಿಯಲ್ಲಿ ಮರುಕಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಹಾಗೂ ಸರಕಾರ ಯಾವುದೇ ನಕಲಿ ಹಾವಳಿ ತಡೆಯಲು ಕಾನೂನನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾಗಿದೆ. ಅದಕ್ಕಾಗಿಯೇ ಇಲಾಖೆಗಳಲ್ಲಿ ಪ್ರಾಮಾಣಿಕರನ್ನು ಒಳಗೊಂಡ ಸ್ಕ್ವಾಡ್ ರಚಿಸಿ ವ್ಯವಸ್ಥೆ ಯನ್ನು ಬಿಗಿಗೊಳಿಸಬೇಕಾಗಿದೆ. ಸಾಧ್ಯವಾದರೆ ಪ್ರತ್ಯೇಕ ನಿರ್ದೇಶನಾಲಯದ ಅವಶ್ಯಕತೆಯನ್ನು ಸಹ
ಮನಗಾಣಬೇಕು.