ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಪ್ರಾಚೀನ ಈಜಿಪ್ಷಿಯನ್ ವೈದ್ಯಕೀಯವು ಕ್ರಿ.ಪೂ. 4000-ಕ್ರಿ.ಪೂ.545ರವರೆಗೆ, ಸುಮಾರು 3500 ವರ್ಷಗಳವರೆಗೆ ನಿರಂತರವಾಗಿ ಬೆಳೆಯಿತು. ಈಜಿಪ್ಷಿಯನ್ ಸಂಸ್ಕ ತಿಯಲ್ಲಿ ಎಲ್ಲೆಲ್ಲಿ ಪ್ರಧಾನ ದೇವಾಲಯಗಳಿದ್ದವೋ, ಅಲ್ಲಿ, ದೇವಾಲಯದ ಒಂದು ಭಾಗದಲ್ಲಿ ವೈದ್ಯಕೀಯ ವಿದ್ಯಾಲಯಗಳೂ ಇದ್ದವು. ಈ ವಿದ್ಯಾಲಯಗಳನ್ನು ಜೈವಿಕ ಗೃಹಗಳು (ಹೌಸ್ ಆಫ್ ಲೈಫ್) ಎಂದು ಕರೆಯುತ್ತಿದ್ದರು.
ಈ ಜೈವಿಕ ಗೃಹಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಅಧ್ಯಾಪಕ ವರ್ಗದವರು ಹಾಗೂ ವೈದ್ಯಕೀಯವನ್ನು ಕಲಿಯಲು ಬಂದಿರುವ ವಿದ್ಯಾರ್ಥಿ ಗಳು ವಾಸಿಸುತ್ತಿದ್ದರು. ಈಜಿಪ್ಟಿನಲ್ಲಿ ಸೂರ್ಯನಗರಿ ಎಂಬರ್ಥದ ಹೀಲಿಯಾ ಪೊಲೀಸ್ ಎಂಬ ಸ್ಥಳವಿದೆ. ಇಲ್ಲಿ ಸೂರ್ಯನ ಆರಾಧನೆಯನ್ನು ಮಾಡಲು ವಿಶೇಷ ಆಲಯವಿದೆ. ಇದರ ಒಂದು ಭಾಗದಲ್ಲಿ ಐನ್ ವಿದ್ಯಾಲಯವಿತ್ತು.
ಇದು ಈಜಿಪ್ಷಿಯನ್ ಸಂಸ್ಕೃತಿಯ ಅತ್ಯಂತ ಪ್ರಾಚೀನ ವಿದ್ಯಾಲಯ. ಬಹುಶಃ ಇದನ್ನು ಈಜಿಪ್ಟ ಅನ್ನು ಆಳಿದ ಮೊದಲನೆಯ ರಾಜವಂಶವು (ಕ್ರಿ.ಪೂ. 3100ಕ್ರಿ.ಪೂ.2900) ಸ್ಥಾಪಿಸಿರಬಹುದು. ಈ ವೈದ್ಯಕೀಯ ವಿದ್ಯಾಲಯದಲ್ಲಿ ಧಾರ್ಮಿಕ ಶಿಕ್ಷಣದ ಜತೆಯಲ್ಲಿ ಮಂತ್ರ-ತಂತ್ರಗಳಿಂದ ರೋಗ ಗಳನ್ನು ಗುಣಪಡಿಸುವುದನ್ನೂ ಕಲಿಸುತ್ತಿದ್ದರು. ಈಜಿಪ್ಟನ್ನು ಆಳಿದ ಮೂರನೆಯ ರಾಜವಂಶದವರ ಸೇವೆಯಲ್ಲಿದ್ದ ಇಮ್‌ಹೋಟೆಪ್ ಎಂಬ ಹೆಸರಿನ ವೈದ್ಯ. ಇದೇ ಶಾಲೆಯಲ್ಲಿ ಕಲಿತವನು. ಇಡೀ ಈಜಿಪ್ಷಿಯನ್ ಸಂಸ್ಕ ತಿಯಲ್ಲಿ ಇವನಷ್ಟು ಪ್ರಖ್ಯಾತನಾಗಿದ್ದ ವೈದ್ಯ ಮತ್ತೊಬ್ಬ ನಿಲ್ಲ. ಫ್ಯಾರೋ ಜೋಸರ್ ಸೇವೆಯಲ್ಲಿ ಇದ್ದವನು.
ಪ್ರಾಚೀನ ಈಜಿಪ್ಟಿನ ಎರಡನೆಯ ಮುಖ್ಯ ವೈದ್ಯಕೀಯ ವಿದ್ಯಾಲಯವು ಅಬಿಡಾಸ್ ಶಾಲೆ ಎಂದು, ಮೂರನೆಯ ಪ್ರಧಾನ ವಿದ್ಯಾಲಯವು ತಾಲ್ ಬಸ್ತಾ ಶಾಲೆ ಎಂದು, ನಾಲ್ಕನೆಯದು ಸಾವೋ ಅಥವಾ ಸಾಯಿಸ್ ಶಾಲೆ. ಇಲ್ಲಿ ಪ್ರಸೂತಿ ತಂತ್ರ ಹಾಗೂ ಸೀರೋಗಕ್ಕೆ ಸಂಬಂಧಪಟ್ಟ ಹಾಗೆ ವಿಶೇಷ ಶಿಕ್ಷಣವು ದೊರೆಯುತ್ತಿತ್ತು. ಐದನೆಯದು ಥೀಬ್ಸ್ ಶಾಲೆ. ಹೆರಡೋಟಸ್ ಈ ಶಾಲೆಗಳಲ್ಲಿ ಅಧ್ಯಯನ ಮಾಡಿ ಬಂದವರು ಅತ್ಯುತ್ತಮ ವೈದ್ಯರಾಗಿರುತ್ತಿದ್ದರು ಎಂದಿದ್ದಾನೆ. 26ನೆಯ ವಂಶವು ಈಜಿಪ್ಟನ್ನು ಆಳುತ್ತಿದ್ದಾಗ, ಈ ಶಾಲೆಗಳಲ್ಲಿ ವೈದ್ಯಕೀಯವನ್ನು ಕಲಿಯಲು ದೇಶೀಯ ರಿಗೆ ಅವಕಾಶವು ದೊರೆಯಿತು. ಹಾಗಾಗಿ ಗ್ರೀಸಿನ ಪ್ಲೇಟೋ ಮತ್ತು ಹಿಪ್ರೋಕ್ರೇಟ್ಸ್ ಇಲ್ಲಿ ಅಧ್ಯಯನವನ್ನು ಮಾಡಲು ಸಾಧ್ಯವಾಯಿತು.
ಹಿಪ್ರೋಕ್ರೇಟ್ಸ್‌ನನ್ನು ಆಧುನಿಕ ವೈದ್ಯಕೀಯದ ಪಿತಾಮಹ ಎಂದು ಕರೆದು ಗೌರವಿಸಿದ್ದೇವೆ. ಈಜಿಪ್ಷಿಯನ್ ಭಾಷೆಯಲ್ಲಿ ವೈದ್ಯರು ಎನ್ನುವುದಕ್ಕೆ
ಸೋನು ಎಂಬ ಪದವಿತ್ತು. ಇವರನ್ನು ಸೆಖ್ಮತ್ ದೇವತೆಯ ಪುರೋಹಿತರು (ಪ್ರೀಸ್ಟ್ಸ್ ಆ- ಸೆಖ್ಮತ್) ಎಂದು ಕರೆಯುತ್ತಿ ದ್ದರು. ಶಸವೈದ್ಯರ ಪ್ರಸ್ತಾಪವು ಮೂರನೆಯ ರಾಜವಂಶದ ಕಾಲದಿಂದ ಕಂಡುಬರುತ್ತದೆ. ವೈದ್ಯರಲ್ಲಿ ಪುರೋಹಿತರು, ವೈದ್ಯರು, ತಜ್ಞವೈದ್ಯರು ಮತ್ತು ವೈದ್ಯಕೀಯ ಸಹಾಯಕರು ಎಂಬ ಬಗೆಗಳಿದ್ದವು. ಈ ವೈದ್ಯರ ಹುದ್ದೆಗಳು ಭಿನ್ನವಾಗಿರು ತ್ತಿದ್ದವು. ವೈದ್ಯರು, ಪ್ರಧಾನ ವೈದ್ಯರು, ಪರಿಶೀಲನಾಧಿಕಾರಿ (ಇನ್‌ಸ್ಪೆಕ್ಟರ್) ಹಾಗೂ ನಿರ್ದೇಶಕ (ಡೈರೆಕ್ಟರ್) ಇತ್ಯಾದಿ. ಪುರೋಹಿತರು, ಹೆಸರೇ ಸೂಚಿಸುವ ಹಾಗೆ ತಮ್ಮ ಧಾರ್ಮಿಕ ಕೆಲಸ ಕಾರ್ಯಗಳ ಜತೆಯಲ್ಲಿ ಮಂತ್ರ-ತಂತ್ರಗಳ ಮೂಲಕ ಮಾನಸಿಕ ಚಿಕಿತ್ಸೆಯನ್ನು ನೀಡುತ್ತಿದ್ದರು. ಅಂತರ ಪಿಶಾಚಿಗಳು ರೋಗಗಳಿಗೆ ಕಾರಣ ಎಂಬ ನಂಬಿಕೆಯಿದ್ದ ಕಾಲದಲ್ಲಿ ಇವರ ಸೇವೆಯು ನಿಜಕ್ಕೂ
ಉಪಯುಕ್ತವಾಗಿತ್ತು. ಈ ಪುರೋಹಿತರು ಮೂಲಿಕೆಗಳಿಂದ ತಯಾರಿಸಿದ ಕೆಲವು ಔಷಧಗಳನ್ನೂ ಕೊಡುತ್ತಿದ್ದರು. ಈ ಪುರೋಹಿತರು ಈಜಿಪ್ಷಿಯನ್ ಸಂಸ್ಕೃತಿಯಲ್ಲಿ ವೈದ್ಯಕೀಯ, ಆರೋಗ್ಯ ಹಾಗೂ ಉಪಶಮನಕ್ಕೆ ಅಧಿದೇವತೆಗಳಾಗಿದ್ದ ಥೊತ್, ಹಾಥೋರ್, ಹೋರಸ್, ಐಸಿಸ್, ಖೋನ್ಸು,
ಸೆಖ್ಮೆತ್ ಮುಂತಾದವರನ್ನು ಆರಾಧಿಸುತ್ತಿದ್ದರು.
ಸೋನು ಅಥವ ಸೈನು ಎಂದು ಹೆಸರಾಗಿದ್ದ ವೈದ್ಯರಲ್ಲಿ ಮೂರು ವರ್ಗಗಳಿದ್ದವು. ಮೊದಲನೆಯ ವರ್ಗ ವೈದ್ಯರದ್ದು. ಇವರು ವೈದ್ಯಕೀಯ ವೃತ್ತಿಯ ಜೊತೆಯಲ್ಲಿ ಇತರ ಕೆಲಸಗಳನ್ನೂ ಮಾಡುತ್ತಿದ್ದರು. ಸರಕಾರದ ಅಧಿಕಾರಿಗಳಾಗಿ, ಸೇನಾಧಿಕಾರಿಗಳಾಗಿ, ರಾಜನಿಗೆ ಪ್ರಧಾನ ವೈದ್ಯರಾಗಿರುತ್ತಿದ್ದರು. ಉಳಿದವರು ಈಜಿಪ್ಟ್ ದೇಶದ ವಿವಿಧ ಪ್ರಾಂತಗಳಲ್ಲಿ, ಸೈನ್ಯದಲ್ಲಿ, ಕಲ್ಲುಗಣಿಗಳಲ್ಲಿ, ಕಾರ್ಖಾನೆಗಳಲ್ಲಿ, ಸೈನ್ಯದಲ್ಲಿ, ಸ್ಮಶಾನದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಲು ಅವಕಾಶವಿತ್ತು. ಎರಡನೆಯ ವರ್ಗದಲ್ಲಿ ತಜ್ಞವೈದ್ಯರಿದ್ದರು. ಇವರು ತಜ್ಞ ವೈದ್ಯರಾಗಿ (ಫಿಸಿಶಿಯನ್) ಸೀರೋಗ ಮತ್ತು ಪ್ರಸೂತ ತಂತ್ರದ ತಜ್ಞರಾಗಿ, ನೇತ್ರವೈದ್ಯರಾಗಿ, ದಂತವೈದ್ಯರಾಗಿ, ಮೂಲಿಕಾ ತಜ್ಞರಾಗಿ (ಹರ್ಬಲಿಸ್ಟ್) ಹಾಗೂ ಪಶುವೈದ್ಯ ರಾಗಿ ಕೆಲಸವನ್ನು ಮಾಡುತ್ತಿದ್ದರು. ಈಜಿಪ್ಷಿಯನ್ ಸಂಸ್ಕೃತಿ ಯಲ್ಲಿ ಪಶುವೈದ್ಯಕೀಯಕ್ಕೆ ತುಂಬಾ ಪ್ರಾಶಸ್ತ್ಯವಿತ್ತು.
ಮೂರನೆಯ ವರ್ಗದಲ್ಲಿ ಸಹಾಯಕ ವೈದ್ಯಕೀಯ ಸಿಬ್ಬಂದಿ ಯಿರುತ್ತಿತ್ತು. ದಾದಿಯರು, ಭೌತಚಿಕಿತ್ಸೆಯನ್ನು ನೀಡುವ ವರು, ಪ್ರಥಮ ಚಿಕಿತ್ಸೆಯನ್ನು ನೀಡುವವರು ಹಾಗೂ ಮಮ್ಮಿ ತಯಾರಿಕೆಯಲ್ಲಿ ನೆರವಾಗುವ ಸಹಾಯಕರಿದ್ದರು. ಈಜಿಪ್ಷಿಯನ್ ಸಂಸ್ಕೃತಿಗೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ವೈದ್ಯರ ಹೆಸರುಗಳು ತಿಳಿದುಬಂದಿವೆ. ಅವರಲ್ಲಿ ಮುಖ್ಯರಾದ ಕೆಲವರನ್ನು ಪರಿಶೀಲಿಸೋಣ. ಹೆಸಿ-ರಾ (ಕ್ರಿ.ಪೂ.2670) ಎಂಬ ಪ್ರಾಚೀನ ಈಜಿಪ್ಷಿಯನ್
ವೈದ್ಯನು, ಈಜಿಪ್ಟನ್ನು ಮೂರನೆಯ ವಂಶವು ಆಳುತ್ತಿದ್ದ ಕಾಲದಲ್ಲಿ, ಅಂದರೆ ಸುಮಾರು ಕ್ರಿ.ಪೂ.2670ರಲ್ಲಿ ಬದುಕಿದ್ದ.
ಈತನು ಮೂಲತಃ ದಂತವೈದ್ಯನಾಗಿದ್ದ. ಇವನು ಬಹುಶಃ ಜಗತ್ತಿನ ಮೊದಲ ದಂತವೈದ್ಯನಾಗಿದ್ದಿರಬಹುದು. ಹೆಸಿ-ರಾ ಸಮಾಧಿಯು ಸಕ್ಕಾರದಲ್ಲಿ ದೊರೆತಿದೆ. ಸಮಾಧಿಯ ದ್ವಾರದ ಬಳಿ ಸಿಡರ್ ಮರದ ವರ್ಣಚಿತ್ರವಿದೆ. ಇದರಲ್ಲಿ ಹೆಸಿ-ರಾ, ಅವನ ತ್ರುಣಾವಸ್ಥೆಯಲ್ಲಿ, ಪ್ರೌಢಾವಸ್ಥೆಯಲ್ಲಿ ಹಾಗೂ ವೃದ್ಧಾಪ್ಯ ದಲ್ಲಿ ಹೇಗಿದ್ದ ಎನ್ನುವುದನ್ನು ತೋರುವ ವರ್ಣ ಚಿತ್ರಗಳಿವೆ. ಇಮ್‌ಹೋಟೆಪ್ (ಕ್ರಿ.ಪೂ.2650-ಕ್ರಿ.ಪೂ.2600) ಜೋಸೆರ್ -ರೋವಿನ ಹಿರಿಯ ಅಧಿಕಾರಿಯಾಗಿದ್ದ. ಜೋಸೆರ್ ಅರಸನ ಮೆಟ್ಟಿಲು ಪಿರಮಿಡ್ಡಿನ ಕಟ್ಟಿಸಿದ.
ಕುಲೀನ ಮನೆತನದಲ್ಲಿ ಜನಿಸಿದ್ದ ಇವನು ರಾ ದೇವತೆಯ ಪ್ರಧಾನ ಅರ್ಚಕನಾಗಿದ್ದ. ಇವನು ಹೆಸರಾಂತ ವೈದ್ಯನೂ ಆಗಿದ್ದ ಎನ್ನುವುದು ಇವನು ಸತ್ತ 2000 ವರ್ಷಗಳ ನಂತರದ ದಾಖಲೆಗಳಲ್ಲಿ ತಿಳಿದುಬರುತ್ತದೆ. ಸಾಮಾನ್ಯ ಮನುಷ್ಯನಾಗಿದ್ದ ಇಮ್‌ಹೋಟೆಪ್ ದೈವವಾಗಿ ವೈದ್ಯವಿಜ್ಞಾನ ಹಾಗೂ
ಉಪಶಮನದ ಪಟ್ಟವನ್ನು ಅಲಂಕರಿಸಿದ. ಥೊತ್ ದೇವ ತೆಯ ಸಮಾನ ಸ್ಥಾನಕ್ಕೇರಿದ. ಇವನು ಎಷ್ಟು ಪ್ರಖ್ಯಾತನಾಗಿದ್ದನು ಎಂದರೆ ಗ್ರೀಕ್ ಸಂಸ್ಕೃತಿ ಯು ತನ್ನ ವೈದ್ಯಕೀಯ ದೈವವಾದ ಅಸ್ಕ್ಲೆಪಿಯಸ್ ಜೊತೆ ಈತನನ್ನು ಸಮೀಕರಿಸಿದರು. ಆಸ್ಕ್ಲೆಪಿಯಸ್ ಸಹ ಮನುಷ್ಯನಾಗಿದ್ದು ದೈವತ್ವಕ್ಕೇರಿದ್ದನ್ನು ಸಾಂದರ್ಭಿಕವಾಗಿ ಇಲ್ಲಿ ಸ್ಮರಿಸಿಕೊಳ್ಳಬಹುದು.
ಮೆಡಿನೆ-ರ್ (ಕ್ರಿ.ಪೂ.2500) ಎಂಬ ನೇತ್ರವೈದ್ಯನು ಪ್ರಾಚೀನ ಈಜಿಪ್ಟಿನಲ್ಲಿದ್ದ ಎಂಬ ವಿಚಾರವು ನಮಗೆ ಗಿeದಲ್ಲಿರುವ ಮಸ್ತಬದಿಂದ (ನೆಲದಾಳ ದೊಳಗೆ ಹುದುಗಿರುವ ಸಮಾಧಿ) ತಿಳಿದುಬಂದಿದೆ. ಈ ಸಮಾಧಿ ಸರಳವಾಗಿದೆ. ಇರುವುದು ಒಂದು ಕೋಣೆ. ಬಾಗಿಲ ಮೇಲೆ ಮೆಡಿನೆ-ರ್ ಕುಳಿತಿರುವ ಚಿತ್ರವಿದೆ. ಅದರ ಕೆಳಗೆ ಇರುವ ಒಕ್ಕಣೆಯ ಅನ್ವಯ ಇವನು ಅರಮನೆಯ ವೈದ್ಯನಾಗಿದ್ದ. ಜತೆಯಲ್ಲಿ ನೇತ್ರವೈದ್ಯರುಗಳ ನಾಯಕನಾಗಿದ್ದ ಎಂದು
ತಿಳಿದುಬರುತ್ತದೆ.
ಪೆಸೆಶೆತ್ (ಕ್ರಿ.ಪೂ.2500) ಪ್ರಾಚೀನ ಈಜಿಪ್ಟಿನ ಪ್ರಖ್ಯಾತ ಮೊದಲ ಮಹಿಳಾ ವೈದ್ಯೆಯಾಗಿದ್ದಿರಬಹುದು. ಮೆರಿಟ್ ಪ್ತಾ ಎಂಬ ಮಹಿಳಾ ವೈದ್ಯೆಯು ಕ್ರಿ.ಪೂ.2700ರಲ್ಲಿ ಬದುಕಿದ್ದಿರಬಹುದು ಎನ್ನುವ ಮಾಹಿತಿಯನ್ನು ಇದ್ದರೂ ಸಹ, ಇತ್ತೀಚಿನ ದಿನಗಳಲ್ಲಿ ಆಕೆಯು ಕೇವಲ ಕಾಲ್ಪನಿಕ ವ್ಯಕ್ತಿ ಎಂದು ಪರಿಗಣಿಸಿರುವರು. ಪೆಸೆಶೆತ್ ಪ್ರಾಚೀನ ಈಜಿಪ್ಟಿನ ಪ್ರಥಮ ಮಹಿಳಾ ವೈದ್ಯಳೆಂದು ಕಾಣುತ್ತದೆ. ಈಕೆಯು ಈಜಿಪ್ಟಿನ ನಾಲ್ಕನೆಯ ವಂಶದ ಆಳ್ವಿಕೆಯಲ್ಲಿ ಬದುಕಿದ್ದಳು. ಈಜಿಪ್ಟಿನ ಸಾಯಿಸ್ ಶಾಲೆಯಲ್ಲಿ ಈಕೆಯು ಸೂಲಗಿತ್ತಿಯ ಕಲಿತಿರಬಹುದು ಎನ್ನಲಾಗಿದೆ.
ಖರ್ (ಕ್ರಿ.ಪೂ.2350-ಕ್ರಿ.ಪೂ.2180) ಎಂಬ ವೈದ್ಯನು ಆರನೆಯ ರಾಜವಂಶದ ರಾಜ ವೈದ್ಯನಾಗಿದ್ದನು. ಈತನ ಮಮ್ಮೀಕೃತ ದೇಹವು ಈಜಿಪ್ಟಿನ ಸಕ್ಕಾರ ಪ್ರದೇಶದಲ್ಲಿ ಒಂದು ಸುಣ್ಣದ ಶಿಲಾ ಶವಸಂಪುಟದಲ್ಲಿ (ಸಾರ್ಕೋ -ಗಸ್) ದೊರೆತಿದೆ. ಈತನ ಶವದ ಜೊತೆಯಲ್ಲಿ, ಈತನು ಬಳಸುತ್ತಿದ್ದ ಶಸ್ತ್ರ ವೈದ್ಯಕೀಯ ಉಪಕರಣಗಳ ಮಾದರಿಗಳು ದೊರೆತಿವೆ. ಬಹುಶಃ ಇವು ಜಗತ್ತಿನ ಅತ್ಯಂತ ಪ್ರಾಚೀನ ಶಸ್ತ್ರವೈದ್ಯಕೀಯ ಉಪಕರಣಗಳು ಎನ್ನಬಹುದು. ಈಗ ಈ ಉಪಕರಣಗಳನ್ನು ಈಜಿಪ್ಟಿನ ಇಮ್‌ಹೋಟೆಪ್ ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಲಾಗಿದೆ.
ಪೆಂಥು (ಕ್ರಿ.ಪೂ.1350) ಎಂಬ ಈಜಿಪ್ಟಿನ ೧೮ನೆಯ ವಂಶದ ಆಳ್ವಿಕೆಯ ಕಾಲದಲ್ಲಿ ಪ್ರಧಾನ ವೈದ್ಯನಾಗಿದ್ದ. ಅಖೇನೇತನ್ ಅರಸನ ಖಾಸ ಗೆಳೆಯನೂ ಆಗಿದ್ದ ಈತನು, ಈಜಿಪ್ಟಿನ ಪ್ರಖ್ಯಾತ ಯುವ ಅರಸನಾಗಿದ್ದ ಟೂಟನ್ಕಾಮುನ್‌ನ ಮಂತ್ರಿಯೂ ಆಗಿದ್ದ. ಈ ಯುವ ಅರಸನ ಹಠಾತ್ ಮರಣದಿಂದ ಅಧಿಕಾರಕ್ಕೆ ಬಂದ ಐ (ಕ್ರಿ.ಪೂ.1300) ಎಂಬ ಹೆಸರಿನ -ರೋವಿನ ಬಳಿ ತನ್ನ ವೈದ್ಯಕೀಯ ಸೇವೆಯನ್ನು ಮುಂದುವರೆಸಿದ. ಈಜಿಪ್ಟಿನ 19ನೆಯ ವಂಶವು ಕ್ರಿ.ಪೂ.1291 ರಿಂದ 1189ರವರೆಗೆ ಆಳಿತು. ಈ ಅವಧಿಯಲ್ಲಿ ಇವತಿ ಎಂಬ ಪ್ರಧಾನ ವೈದ್ಯನಿದ್ದ. ಈತನು ಬಹುಶಃ ಮೆಂಫಿಸ್ ನಗರದಲ್ಲಿ ವೃತ್ತಿನಿರತ ನಾಗಿರಬೇಕು ಎನಿಸುತ್ತದೆ. ಈತನದೆಂದು ಹೇಳಲಾದ ಒಂದು ವಿಗ್ರಹವು ಲೀಡನ್ ನಲ್ಲಿರುವ ಈಜಿಪ್ಷಿಯನ್ ವಸ್ತುಸಂಗ್ರಹಾಲಯದಲ್ಲಿದೆ.
ಸಮ್ತಿಕ್‌ಸೆನೆಬ್ ಈಜಿಪ್ಟಿನ 26ನೆಯ ಹಾಗೂ ಕೊನೆಯ ರಾಜವಂಶದ ಅವಧಿಯಲ್ಲಿದ್ದ ವೈದ್ಯ ಹಾಗೂ ದಂತವೈದ್ಯನಾಗಿದ್ದ. ಚೇಳಿನ ವಿಷವನ್ನು ಇಳಿಸು ವುದರಲ್ಲಿ ಸಿದ್ಧಹಸ್ತನಾಗಿದ್ದ. ಹಾಗಾಗಿ ಈತನನ್ನು ಚೇಳು ಮೋಡಿಗಾರ (ಸ್ಕಾರ್ಪಿಯನ್ ಚಾರ್ಮರ್) ಎಂದು ಕರೆಯುತ್ತಿದ್ದರು. ಜೊತೆಗೆ ಈತನನ್ನು ಈಜಿಪ್ಟಿನ ಚೇಳಿನ ದೈವವಾದ ಸೆಲ್ಕೆತ್ ನ ಮಗ ಎಂದೂ ಕರೆಯುತ್ತಿದ್ದರು. ಈತನ ಸಮಾಧಿಯು ಹೀಲಿಯೋಪೊಲೀಸಿನಲ್ಲಿ ದೊರೆತಿದೆ. ಇಮ್ಮಡಿ ಅಮಾಸಿಸ್ (ಕ್ರಿ.ಪೂ.570-ಕ್ರಿ.ಪೂ.526) ಈಜಿಪ್ಟಿನ ಕೊನೆಯ -ರೊ ಆಗಿದ್ದ. ಈತನ ಬಳಿ ಹೆರ್ಸಿಯಸ್ ಎಂಬ ಪ್ರಧಾನ ರಾಜವೈದ್ಯನಿದ್ದ.
ಕ್ರಿ.ಪೂ.525ರಲ್ಲಿ ಪರ್ಷಿಯ ದೇಶದವರು ಈಜಿಪ್ಟಿನ ಮೇಲೆ ದಂಡೆತ್ತಿ ಬಂದರು. ಪೆಲೂಸಿಯಮ್ ಎಂಬ ಸ್ಥಳದಲ್ಲಿ ಯುದ್ಧವು ನಡೆಯಿತು. ಯುದ್ಧದಲ್ಲಿ ಈಜಿಪ್ಷಿಯನ್ಸ್ ಸೋತರು. ಪರ್ಷಿಯದ ಅರಸ ಇಮ್ಮಡಿ ಕ್ಯಾಂಬೆಸಿಸ್ ಈಜಿಪ್ಟಿನ -ರೋ ಆದ. ಕ್ಯಾಂಬೆಸಿಸ್ ನಂತರ ಡೇರಿಯಸ್, ದಿ ಗ್ರೇಟ್ (ಕ್ರಿ.ಪೂ.523-ಕ್ರಿ.ಪೂ.486) ಬ್ಯಾಬಿಲೋನಿಯನ್ ಸಾಮ್ರಾಜ್ಯ, ಪರ್ಷಿಯನ್ ಸಾಮ್ರಾಜ್ಯ ಹಾಗೂ ಈಜಿಪ್ಷಿಯನ್ ಸಾಮ್ರಾಜ್ಯಗಳ ಅರಸನಾಗಿ, ರಾಜಾಧಿರಾಜ (ಕಿಂಗ್
ಆ- ಕಿಂಗ್ಸ್) ಎಂದು ಹೆಸರಾದ. ಇಮ್ಮಡಿ ಅಮಾಸಿಸ್ ನ ಪ್ರಧಾನ ವೈದ್ಯನಾಗಿದ್ದ ಹೆರ್ಸಿಯಸ್, ಡೇರಿಯಸ್, ದಿ ಗ್ರೇಟ್‌ಗೂ ಸಹ ವೈದ್ಯನಾಗಿ ಸೇವೆಯನ್ನು ಸಲ್ಲಿಸಿದ.
ಇವನೊಡನೆ ಈಜಿಪ್ಷಿಯನ್ ಮಹಾನ್ ವೈದ್ಯರ ಸಂತತಿ ಕೊನೆಗೊಂಡಿತು.
(ಈಜಿಪ್ಟ್ ಸಂಸ್ಕೃತಿಯ ಪ್ರಧಾನ ವೈದ್ಯ ಹೆಸಿ-ರಾ.)