Friday, 20th September 2024

ಎಲೆಕ್ಷನ್ ಬತ್ತಿದ್ದಂಗೆ ಬಣ್ಣ ಬದಲಿಸಿದ ಗ್ವಾಪಾಲಣ್ಣ!

ಹಳ್ಳಿಕಟ್ಟೆೆ

ವೆಂಕಟೇಶ ಆರ್.ದಾಸ್ 

ಏನ್ಲಾಾ ಸೀನ, ಎಲೆಕ್ಷನ್ ಭರಾಟೇಲಿ ಹೆಂದ್ರ ಮಕ್ಳನ್ನೆೆ ಮರ್ತಿಿರಂಗಿದ್ದೀಯಾ, ಆಳೆ ಕಾಣ್ತಿಿಲ್ಲ ಮೂರ್ನಾಾಲ್‌ಕ್‌ ದಿನ್ದಿಿಂದ ಏನ್ ಸಮಾಚಾರ. ಎಲ್‌ಡ್‌ ಕ್ವಾಾಟ್ರು ಎಣ್ಣೆೆ, ಬಾಡೂಟ ಇದ್ದತ್ತು ಅಂದ್ರೆೆ ಕೈಗೆ ಸೊಗಕಿಲ್ವಲ್ಲೋೋ ಆಸಾಮಿ ಅಂತ ಅರಳೀಕಟ್ಟೆೆ ಕಡಿಕ್ ಬಂದ ಪಟೇಲಪ್ಪ.

ಬಾ ದೊಡ್ಡಪ್ಪೋೋ, ಈ ಎಲೆಕ್ಷನ್ನು ಅಂದ್ರೆೆ ಸುಮ್ನೆೆನಾ, ಇದು ಎಲ್ರ ಹಣೆ ಬರಹಾನೂ ಬರೆಯೋ ಎಲೆಕ್ಸನ್ನು ಕಣ್ ದೊಡ್ಡಪ್ಪ, ಅದ್ಕೆೆ ಬಲೇ ಉಸಾರಿಂದ ಕೆಲ್ಸ ಮಾಡ್ಬೇಕು. ನಮ್ಗೆೆ ಕೊಟ್ಟಿಿರೋ ಕೆಲ್ಸನಾ ಅಚ್ಚಕಟ್ಟಾಾಗ್ ಮಾಡ್ಬೇಕು ಅಂತ ಕಟ್ಟಪ್ಪಣೆ ಆಗ್ಯದೆ ಮ್ಯಾಾಲಿಂದ ಕಣ್ ಬಾ ಅಂದ ಕಟ್ಟೆೆ ಮ್ಯಾಾಲ್ ಕುತ್ತಿಿದ್ ಸೀನ.
ಅದ್ಸರಿ ಕಣ್ಲಾಾ, ಬಿಜೆಪಿ ಲೀಡ್ರುಗೋಳ್ಗೂ ಮ್ಯಾಾಲಿಂದ ಹಿಂಗೆಯಾ, ಏನಾರ ಆಗ್ಲಿಿ ಜಂಪಿಂಗ್ ಸ್ಟಾಾರ್ ಎಮ್ಮೆೆಲ್ಲೆೆಗಳಿಗೆ ನೀವ್ ಕೆಲ್ಸ ಮಾಡ್ಬೇಕು. ಯಡ್ಯೂರ್ ಗೌರ್ಮೆಂಟ್ ಉಳ್ಕಬೇಕ್ ಅಂದ್ರೆೆ ಹಂಗೆ ಕೆಲ್ಸ ಮಾಡ್ನಿಿಲ್ಲ ಅಂದ್ರೆೆ ಆಗಾಕುಲ್ಲ. ಅವ್ರು ಹಿಂದೆ ನಿಮ್ಗೆೆ ಎಷ್ಟೇ ಕಾಟ ಕೊಟ್ಟಿಿದ್ರೂ ಪರ್ವಾಾಗಿಲ್ಲ, ಈ ಸಲ ಮಾತ್ರ ಅವ್ರುನ್ನಾಾ ಗೆಲ್ಲಿಸ್ಬೇಕು ಅಂತ ಹೇಳ್ಯಾಾವ್ರಂತೆ ಅಂದ ಪಟೇಲಪ್ಪ.

ಊ ಕಣ್ ದೊಡ್ಡಪ್ಪ, ಜನ ಮತ್ತೇ ಬಿಜೆಪಿ ಕಾರ್ಯಕರ್ತರು ಸೇರ‌್ಕಂಡು ಅವ್ರುನ್ನೇನಾರ ಸೋಲ್ಸಿಿದ್ರೆೆ, ಯಡ್ಯೂರಪ್ಪ ಮತ್ತು ಬಿಜೆಪಿನೋರ್ಗೆೆ ಕೈಗೆ ಬಂದಿದ್‌ದ್‌ ತುತ್ತು ಬಾಯಿಗ್ ಬರ್ನಿಿಲ್ಲಾಾ ಅನ್ನಂಗೆ ಆಗಲ್ವೇ, ಇನ್ನೇನ್ ಅಧಿಕಾರ ಸಿಕ್ಯದೆ, ಒಂದಷ್ಟು ಏನಾರ ಮಾಡ್ಕಳುಮಾ ಅಂದ್ಕೊೊಂಡಿರೋದೆಲ್ಲ ಆಸೆ ಮಣ್ಣಾಾಯ್ತದೆ., ಅದ್ಕೆೆ ಸರಕಾರ ಉಳೀಸ್ಕೊೊಳ್ಳೇ ಬೇಕು ಅಂತ ಹೇಳವ್ರೆೆ ಕಣ್ ತಕಾ ಅಂದ ಸೀನ.

ಅದ್ಸರಿ ಕಣ್ಲಾಾ, ಮ್ಯಾಾಲ್‌ನೋರು ಹೇಳವ್ರೆೆ ಅಂತಿದ್ದಂಗೆ, ಹಿಂದೆ ಈ ಸ್ವಾಾಮ್ಗಳು ಕೊಟ್ಟ ಕಾಟನೆಲ್ಲ ತಡ್ಕೊೊಂಡಿದ್ದ ಜನ ಈಗ ಅದೆಂಗ್ಲಾಾ ಸುಮ್ಕಿಿರ್ತಾಾರೆ. ಜತ್ಗೆೆ ಅವ್ರ ಪರ್ವಾಾಗೇ ಹೋಗಿ ಓಟಾಕ್ರಪ್ಪ ಅಂತ ಯಾವ್ ಬಾಯಿಂದ ಕೇಳ್ಯಾಾರ್ ಹೇಳು ಅಂದ ಪಟೇಲಪ್ಪ.

ಯಾವ್ ಬಾಯಿಂದ ಕೇಳ್ಯಾಾರು, ಇರೋದ್ ಒಂದೇ ಬಾಯಿ ತಾನೆ. ಅದ್ರಲ್ಲೇ ಕೇಳ್ತಾಾರೆ. ದೊಡ್ಡಪ್ಪ, ಬಿಜೆಪಿ ಅಂದ್ರೆೆ ಹಿಂದನ್ಗಲ್ಲ, ಈಗ ಮೇಲ್ನಿಿಂದ ಹಾಏಳ್ದಂಗೆ ಕೇಳ್ಬೇಕು ಅಷ್ಟೇಯಾ. ಕೇಳ್ನಿಿಲ್ಲ ಅಂದ್ರೆೆ ಯಾವ್ ಮುಲಾಜು ಇಲ್ದೆೆ ಮನೀಗ್ ಕಳಿಸ್ತಾಾರೆ. ಅದ್ಕೆೆ ಎಲ್ಲ ಲೀಡ್ರುಗೋಳು ಸುಮ್ಕೆೆ ಹೇಳ್ದಂಗೆ ಕೇಳ್ಕಂಡ್ ಕೆಲ್ಸ ಮಾಡ್ತಾಾವ್ರೆೆ ಗೊತ್ತಾಾ ಅಂದ ಸೀನ.

ಕೇಳ್ತಾಾವ್ರೆೆ ಕಣ್ಲಾಾ, ಆದ್ರೆೆ, ಮ್ಯಾಾಲೆ ಓಡಾಡ್ಕಂಡು ನಗಾಡ್ಕಂಡು ಚೆನ್ನಾಾಗ್ ಮಾತಾಡೋರು, ವೋಟಾಕ ದಿನ ಬೂತ್‌ವೊಳ್ಗೆೆ ಅದೇನ್ ಮಾಡುಗ್ತಾಾರೆ ಅನ್ನೋೋದ್ರು ಮ್ಯಾಾಲ್ ಅನ್ವೇನ್ಲಾಾ ಗೊತ್ತಾಾಗದು, ಪಕ್ಸದ್ ಮ್ಯಾಾಲೆ ಎಷ್ಟೇ ಪ್ರೀತಿ ಇದ್ರೂ ಹಿಂದಿನ್ ಕಾಟ ಮರೆಯಾಕ್ ಆಗಾಕುಲ್ಲ, ಜತ್ಗೆೆ ಈ ಸಲ ಇವ್ರಿಿಗೆ ಕೊಟ್ಟು ಜಾಗ ಮಾಡ್ಕೊೊಟ್ರೆೆ ಮುಂದೆ ನಮ್ಗೆೆ ಎಲೆಕ್ಸನ್ಗೆೆ ನಿಂತ್ಕಳ್ಳಕ್ಕೆೆ ಅಂತ ಒಂದು ಕ್ಷೇತ್ರಾಾನೂ ಸಿಗಾಕಿಲ್ಲ ಅಂತ ಬಿಜೆಪಿ ಲೀಡ್ರುಗೋಳ್ಗೆೆ ಅನ್ಸಿಿಲ್ವೇನ್ಲಾಾ, ಆದ್ರೂ ಅದೆಂಗೆ ಗೆಲ್ಲಿಸ್ಬುಡ್ತಾಾರೇಳು ಇವ್ರನ್ನಾಾ ಅಂದ ಪಟೇಲಪ್ಪ.

ದೊಡ್ಡಪ್ಪೋೋ, ನೀನಿನ್ನು ಅಡ್ವಾಾಣಿ ಕಾಲ್ದಾಾಗೆ ಇದ್ದೀಯಾ, ಇದು ಅಮಿತ್ ಶಾ ಕಾಲ. ಈಗ ಏನಿದ್ರೂ ಅಲ್ಲಿ ಹೇಳ್ದಂಗೆ ನಡಿಯಾದು. ಹಿಂದೆ ನಿಮ್ ಇಂದ್ರಾಾಗಾಂಧಿ ಮಾಡ್ತಿಿತ್ತಲ್ಲ ಹಂಗೆ. ‘ ನಾ ಮಾಟೇ ಶಾಸನಂ’ ಅಂತ ಅಮಿತ್ ಶಾ ಗುಜರಾತಿ ಭಾಷೆನಾಗ್ ಹೇಳ್ತಾಾದೆ ಗೊತ್ತಾಾ ನಿಂಗೆ. ಅದ್ರು ಮಾತ್ನಾಾ ಯಾವನಾರ ಮೀರಿದ್ರೆೆ ಗೊತ್ತಾಾಲ್ಲ, ಈಟಿ ರೆಡಿನೇ ಮಾಡ್ಕಂಡ್ ಇತ್ರದೆ ಅಂದ ಸೀನ.

ಊ ಕಣ್ ಬುಡಪ್ಪ, ಇದೇ ಆಗೋಯ್ತು. ಓಳ್ಳೇದ್ಕೂ ಅದೇಯಾ ಕೆಟ್ಟುದ್ಕೂ ಅದೇಯಾ, ಆದ್ರೆೆ ಇದು ಎಸ್‌ಟ್‌ ದಿಸಾ ನಡೀತದ್ಲಾಾ, ಕೊನೆಗೊಂದಿನಾ ಎಲ್ರೂ ಮಣ್ ಮುಕ್ನೇ ಬೇಕಾಯ್ತದೆ ಕಣ್ಲಾಾ, ಈಗ್ಲೇ ನೋಡ್ನಿಿಲ್ವಾಾ ಮಹಾರಾಷ್ಟ್ರದಲ್ಲಿ ನಮ್ ಚಾಣುಕ್ಯಾಾ ಏನೋ ದಬಾಕ್ತದೆ ಅಂತಿದ್ರು ಭಕ್ತರೆಲ್ಲಾಾ, ಏನೂ ಮಾಡಾಕಾಗಿಲ್ಲ. ಹಂಗೆ ಬತ್ತಾಾ ಬತ್ತ ನಸೀಬು ಹಳ್ಳ ಹಿಡಯಾಕ್ ಹತ್ತತದೆ. ಉಷಾರಾಗಿರ್ಬೇಕು ಕಣ್ಲಾಾ ಅಂದ ಪಟೇಲಪ್ಪ.

ಅದೆಲ್ಲಾಾ ಗೊತ್ತು ಕಣ್ ಬಾ ದೊಡ್ಡಪ್ಪ, ಬಿಜೆಪಿಗೆ ಹೆಂಗಾರಾ ಮಾಡಿ ಅನರ್ಹರನ್ನೆೆಲ್ಲ ಗೆಲ್ಲಿಸ್ಕಂಡ್ ಬಂದು ಅಧಿಕಾರ ಉಳಿಸ್ಕಬೇಕು ಅನ್ನೋೋ ಹಠ ಇದೆ. ಅದ್ಕೆೆ ಒದ್ದಾಾಡ್ತಾಾ ಅವ್ರೆೆ. ಒಂದ್ವೇಳೆ ಆಗ್ನಿಿಲ್ಲ ಅಂದ್ರೆೆ ತೆನೆ ಹೊತ್ತಾಾ ಮಹಿಳೆ ಜತ್ಗೆೆ ‘ಕೂಡಾವಳಿ’ ಮಾಡ್ಕಳ್ಳಕ್ಕೆೆ ರೆಡಿಯಾದ್ರೆೆ ಆಯ್ತು ಅನ್ನೋೋದ್ ಬಿಜೆಪಿನೋರ್ ಪ್ಲ್ಯಾಾನು ಅಂದ ಸೀನ.

ಅವ್ರು ಬುಡಪ್ಪಾಾ ಮೂರ್ ಕೊಟ್ರೆೆ ಮಾವನ್ ಕಡಿಕೆ, ಆರ್ ಕೊಟ್ರೆೆ ಅತ್ತೆೆ ಕಡಿಕೆ ಅನ್ನಂಗೆ ಎತ್ತಾಾಗ್ ಬೇಕಾದ್ರೂ ಹೋಯ್ತಾಾರೆ. ನಾಳೆ ಏನಾರ ಹೆಚ್ಚು ಕಡ್ಮೆೆ ಆಯ್ತು ಅಂದ್ರೆೆ ಯಡ್ಯೂರಪ್ಪಂಗೆ ಇನ್ನೊೊಂದ್ ಕಿತ ಇಸ್ವಾಾಸ ದ್ರೋಹ ಮಾಡಕ್ಕಿಿಲ್ಲ ಅನ್ನದಕ್ಕೆೆ ಏನ್ಲಾಾ ಸಾಕ್ಷಿಿ

ಬುಡು ದೊಡ್ಡಪ್ಪ, ಆದಂಗ್ ಆಗ್ಲೀ ಮಾದಪ್ಪನಮ್ ಜಾತ್ರೆೆ ಅನ್ನಂಗೆ ಬಿಜೆಪಿನೋರ್ಗು ಗೌರ್ಮೆಂಟು ಇಷ್ಟೇ ದಿಸಾ ಇರ್ಬೇಕು ಅಂತೇನು ಇಲ್ಲ. ನಡೆದಷ್‌ಟ್‌ ದಿನ ನಡೀಲಿ ಅಂತಾನೆ ಇರೋದು. ಜೆಡಿಎಸ್‌ನೋರು ಹಂಗೆನಾರ ಕೈ ಕೊಟ್ರೆೆ ಅಮ್ಯಾಾಲ್ ನೋಡ್ಕಂಡ್ರೆೆ ಆಯ್ತು. ಅಲ್ಲಿಗಂಟ ಹೆಂಗ್ ಓಡ್ತದೆ ಓಡ್ಲಿಿ ನಮ್ ಕುಂಟು ಕುದ್ರೆೆ ಅನ್ನೋೋದಷ್ಟೇ ಲೀಡ್ರುಗೋಳ್ ಟೆಕ್ನಿಿಕ್ಕು ಅಂದ ಸೀನ.

ಏನ್ ಟೆಕ್ನಿಿಕ್ಕೋೋ ಏನೋ, ಹೋದ್ ಕಡೇನೆಲ್ಲ ಅನರ್ಹರಿಗೆ ಜನ ಮಖಕ್ಕುಗಿತಾವ್ರಂತೆ.‘ಏನೋ ಹೋಗ್ಲಿಿ ಅಂತ ಗೆಲ್ಸಿಿ ಕಳಿಸಿದ್ರೆೆ, ಒಂದೂವರೆ ವರ್ಷಕ್ಕೆೆ ರಾಜೀನಾಮೆ ಕೊಟ್ಟು, ಬಾಂಬೆಗ್ ಓಡೋಗಿದ್ರಿಿ, ಈಗ್ ತಿರ್ಗಾಾ ಬಂದಿದ್ದೀರಾ ವೋಟ್ ಹಾಕಿ ಅಂತ, ನಿಮ್ ಬಾಯಿಗ್ ಮಣ್ಣಾಾಕ ಅಂತ ಜನ ಎಲ್ಲ ಓಡಾಡಿಸ್ಕಂಡ್ ಬತ್ತಾಾರಂತೆ. ಕೆ.ಆರ್. ಪೇಟೆನಲ್ಲಿ ನಾರಾಯಣ್ ಗೌಡ್ರುನ್ನಾಾ ‘ಲೇ ಬಾಂಬೆ ಕಳ್ಳ‘ ಅಂತೇನೋ ಕೂಗಿದ್ರು ಅಂತಿದ್ರಲ್ಲ ನಿಜ್ವೇ ಅಂದ ಪಟೇಲಪ್ಪ.

ದೊಡ್ಡಪ್ಪ, ವಿರೋಧ ಮಾಡೋ ಜನ ಎಲ್ಲಿರಕುಲ್ಲ ಹೇಳು. ಅವ್ರೆೆಲ್ಲ ಇದ್ದೇ ಇರ್ತಾಾರೆ. ಈಗ ಪಾರ್ಟಿ ಬುಟ್ಟು ಬಿಜೆಪಿ ಸೇರಿರೋದ್ರಿಿಂದ ಬಿಜೆಪಿ ವೋಟು ಅವ್ರಿಿಗೆ ಬೀಳ್ತಾಾವೆ, ಜತ್ಗೆೆ ಈಗ ಅಲ್ಲಿ ಮೋದಿ ಗೌರ್ಮೆಂಟ್ ಇದೆ. ಇಲ್ಲಿ ಯಡ್ಯೂರ್ ಗೌರ್ಮೆಂಟ್ ಅದೆ. ಇದೆಲ್ಲ ನೋಡ್ಕಂಡು ಜನ ನಮ್ಗೆೆ ವೋಟ್ ಹಾಕ್ತರೆ ಅನ್ನೋೋದು ಅವ್ರ ನಂಬ್ಕೆೆ ಅಂದ ಸೀನ.

ಅದ್ಕೆೆ ಅನ್ನೂ ಎಲ್ಲರೂ ನಾಮಪತ್ರ ಸಲ್ಲಿಕೆ ಮಾಡೋವಾಗ ಬಿಜೆಪಿನಲ್ಲೇ ಹುಟ್ಟಿಿ ಬೆಳ್ದೋೋರ್ ಥರಾ ಬಟ್ಟೆೆ ಹಾಕೊಂಡು ಹೋಗಿದ್ರೂ, ಅದ್ರಲ್ಲೂ ಗೌಡ್ರು ಪಕ್ಸದ್ ಗ್ವಾಾಪಲಣ್ಣ, ಹೆಂಡಿಗೂ ಕೇಸ್ರಿಿ ಬಣ್ಣದ್ ಸೀರೆ ಉಡಿಸ್ಕೊೊಂಡು, ತಾನು ಸೇಮ್ ಬಿಜೆಪಿ ಬಣ್ಣದ್ ಶರ್ಟ್ ಹಾಕೊಂಡು ಹೋಗಿ ನಾಮಪತ್ರ ಸಲ್ಸೈತಂತೆ. ಹಿಂಗಾದ್ರ ಬಿಜೆಪಿನೋರ್ಗೆೆ ಗೊತ್ತಾಾಗ್ಲಿಿ ನಾನು ನಿಮ್ಮವನು ಅಂತಾವ, ಇದೆಲ್ಲ ಕೆಲ್ಸ ಮಾಡ್ತದಾ ಇಲ್ವಾಾ ಕಾದ್ ನೋಡ್ಬೇಕು ಕಣ್ ತಗಳ್ಲಾಾ ಅಂದ ಪಟೇಲಪ್ಪ.

ದೊಡ್ಡಪ್ಪ, ಲ್ಲದ್ ಗಂಡಂಗೆ ಮೊಸ್ರಲ್ಲಿ ಕಲ್ಲು ಅನ್ನಂಗೆ ಇಲ್ಲದ್ ಸಲ್ಲದ್ಕೆೆಲ್ಲ ಇನ್ನೊೊಂದು ಅರ್ಥ ಕೊಡ್ಬೇಡ. ಗ್ವಾಾಪಾಲಣ್ಣಂಗೆ ಮನೇಲ್ ಹೊಗ್‌ದ್‌ ಹಾಕಿದ್ ಅದೊಂದು ಶೆಲ್‌ಟ್‌ ಅಂತೆ ಅದ್ಕೆೆ ಅದನ್ನಾಾ ಹಾಕೊಂಡ್ ಬಂದೈತೆ. ಅದ್ರಲ್ಲೇನ್ ತಪ್ಪೈತೆ ತಗಾ ಅಂದ ಸೀನ. ನೀನ್ ಬುಡ್ಲಾಾ ಬಿಜೆಪಿನೋರ್ನಾಾ ಬುಟ್ಟಕೊಡಾಕಿಲ್ಲ. ಒಂಥರಾ ಭಕ್ತಾಾನೆ. ಭಕ್ತಿಿ ಪ್ರದರ್ಶನ ಮಾಡಿದ್ರೆೆ ಯಾರು ಹೊಟ್ಟಿಿಗ್ ಹಿಟ್ಟಾಾಕಕುಲ್ಲಾಾ ಕ್ಯಾಾಮೆ ನೋಡಾನ, ಹೊಲ್ತಾಾಕೋಗಿ ಯಡಮಟ್ಟೆೆ ಹೊತ್ಕಂಡ್ ಬರಾನ.

ನಾಳೆ ಬೇಕಾದ್ರೆೆ ಹೋಗಿವಂತೆ ಕ್ಯಾಾನ್ವಸ್‌ಗೆ ಇವತ್ತೊೊಂದಿನಾ ಆದ್ರೂ ಮನೆ ಕ್ಯಾಾಮೆ ಮಾಡು ಅಂತ ಹೊಲದ್ ಕಡಿಕ್ ಹೊಂಟ ಪಟೇಲಪ್ಪ.
ಹೋಗ್ ದೊಡ್ಡಪ್ಪೋೋ, ಅಪೂಪ್ರಕ್ ಬರೋ ಎಲೆಕ್ಸನ್ನು, ಇದನ್ನೆೆಲ್ಲ ಕಳ್ಕಳಕ್ ಆಯ್ತದಾ, ನಂಗೆ ಇಸ್ವನಾಥು ಕರೀತಾವ್ರೆೆ ಹುಣಸೂರ್ಗೆೆ ಬಾ ಅಂತ, ಉದಯರಂಗ ಬಸ್ಸತ್ಕಂಡ್ ಹೊಂಡ್ಬೇಕು ಸಂಜೆವತ್ತಗೆ ಅಂತೇಳಿ ಬಸ್ ಸ್ಟಾಾಂಡ್ ಕಡಿಕ್ ಹೊಂಟ ಗುಡ್ದಳ್ಳಿಿ ಸೀನ.