ಅಭಿಮತ
ಪ್ರಕಾಶ್ ಶೇಷರಾಘವಾಚಾರ್
ಏಪ್ರಿಲ್ ೧೯ರಂದು ಆರಂಭಗೊಂಡ ಮೊದಲ ಹಂತದ ಚುನಾವಣೆಯು ಇದೀಗ ಅಂತಿಮ ಚರಣ ತಲುಪಿದೆ. ಚುನಾವಣೆಯು ಯಾವುದೇ ಸಾವು ನೋವು ಸಂಭವಿಸದಂತೆ ಶಾಂತಿಯುತವಾಗಿ ಕೈಗೊಂಡಿರುವುದಕ್ಕೆ ಚುನಾವಣಾ ಆಯೋಗವು ಎಲ್ಲರ ಅಭಿನಂದನೆಗೆ ಅರ್ಹವಾಗಿದೆ. ದೇಶದಲ್ಲಿ ಐದು ವರ್ಷಕ್ಕೂಮ್ಮೆ ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆಯುತ್ತದೆ. ಸ್ವಾತಂತ್ರ ಬಂದ ನಂತರ ೧೯೭೧ರಲ್ಲಿ ಮೊದಲ ಬಾರಿಗೆ ಅವಧಿಗೆ ಮುನ್ನ ಚುನಾವಣೆಯು ನಡೆದಿದ್ದು ಮತ್ತು ೧೯೭೭ ರಲ್ಲಿ ಅವಽ ಮುಗಿದು ಒಂದು ವರ್ಷದ ತರುವಾಯ ಚುನಾವಣೆ ನಡೆಯಿತು.
೨೦೦೪ ರಲ್ಲಿ ಆರು ತಿಂಗಳ ಮುನ್ನ ಲೋಕಸಭೆಯ ಚುನಾವಣೆಯು ನಡೆಯಿತು. ಚುನಾವಣಾ ಆಯೋಗದ ನೇತೃತ್ವದಲ್ಲಿ ಪ್ರತಿಯೊಂದು ಚುನಾವಣೆಗಳು ನಡೆಯುವುದು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯು ರಾಜ್ಯ ಚುನಾವಣಾ ಆಯೋಗದ ಮೂಲಕ ನಡೆಯುತ್ತದೆ. ಸಂವಿಧಾನದಲ್ಲಿ ಆ ವ್ಯವಸ್ಥೆ ಯನ್ನು ಯಾವ ಗೊಂದಲವು ಇಲ್ಲದೆ ರೂಪಿಸಿರುವುದು ನಮ್ಮ ಸಂವಿಧಾನ ರಚಿಸಿದವರ ಜಾಣ್ಮೆಗೆ ಸಾಕ್ಷಿಯಾಗಿದೆ. ೧೯೮೯ರ ತನಕ ಚುನಾವಣಾ ಆಯೋಗ ಏಕ ಸದಸ್ಯ
ಪೀಠವಾಗಿತ್ತು ತದನಂತರ ಅದನ್ನು ಮೂರು ಸದಸ್ಯರ ಪೀಠವಾಗಿ ಬದಲಾವಣೆಯಾಯಿತು ಆದರೆ ಈ ನೇಮಕವನ್ನು ರಾಷ್ಟ್ರಪತಿಗಳು ರದ್ದು ಪಡಿಸಿದರು.
ಮೊದಲ ಬಾರಿಗೆ ಟಿ.ಎನ್.ಶೇಷನ್‌ರವರು ಚುನಾವಣಾ ಆಯೋಗಕ್ಕೂ ಹಲ್ಲು ಇದೆ ಎಂದು ತೋರಿಸಿ ಕೊಟ್ಟರು. ದಿಕ್ಕು ದೆಸೆಯಿಲ್ಲದೆ ನಡೆಯುತ್ತಿದ್ದ ಚುನಾವಣೆಗೆ ಅಂಕುಶ ಹಾಕಿದರು. ಚುನಾವಣಾ ನೀತಿ ಸಂಹಿತೆಯನ್ನು ಕಠಿಣ ಕ್ರಮಗಳ ಮೂಲಕ ಜಾರಿಗೆ ತಂದರು. ಅಲ್ಲಿಯತನಕ ನಾಮಕಾವಸ್ಥೆಗಾಗಿ ಇದ್ದ ನೀತಿ ಸಂಹಿತೆಯನ್ನು ಎಲ್ಲರೂ ಗಂಭೀರವಾಗಿ ಅನುಸರಿಸ ತೊಡಗಿದರು. ಟಿ.ಎನ್ ಶೇಷನ್ ರವರ ಚುನಾವಣಾ ಸುಧಾರಣೆಯಿಂದ ಮತ್ತು ಅವರ ಏಕಚಕ್ರಾಧಿಪತ್ಯ ದಿಂದ ನಲುಗಿ ಹೋದ ಕಾಂಗ್ರೆಸ್ ಸರ್ಕಾರ ಅವರಿಗೆ ಮೂಗುದಾರ ಹಾಕಲು ೧೯೯೩ರಲ್ಲಿ ಸಂಸತ್ತಿನಲ್ಲಿ ಕಾಯಿದೆಗೆ ತಿದ್ದುಪಡಿ ತಂದು ಆಯೋಗವನ್ನು ತ್ರಿ ಸದಸ್ಯರ ಪೀಠ ಮಾಡಿ ಬಹುಮತದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳುವಂತೆ ನಿಯಮಾವಳಿಯನ್ನು ಬದಲಾಯಿಸಿ ಶೇಷನ್ ರವರ ರಭಸಕ್ಕೆ ಬ್ರೇಕ್ ಹಾಕಿದರು.
ಪ್ರತಿ ಚುನಾವಣೆಯಲ್ಲಿಯೂ ಚುನಾವಣಾ ಆಯೋಗವು ಒಂದ ಒಂದು ಆರೋಪವನ್ನು ಪ್ರತಿಪಕ್ಷಗಳಿಂದ ಎದುರಿಸುವುದು ಸಾಮಾನ್ಯ. ಇದರಲ್ಲಿ ಬಿಜೆಪಿ ಮತ್ತು
ಕಾಂಗ್ರೆಸ್ ಸಮಾನ ಪಾಲುದಾರರು. ೨೦೧೪ ರ ನಂತರ ಇವಿಎಂ ಹ್ಯಾಕ್ ಮಾಡಲಾಗುತ್ತಿದೆ ಎಂಬ ಆರೋಪ ಮಾಡುವುದು ಸಾಮಾನ್ಯವಾಗಿದೆ. ಈ
ಬಾರಿಯು ಇವಿಎಂ ವಿರುದ್ದ ಸರ್ವೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ವಿವಿಪಾಟ್ ನ ಪ್ರತಿಯೊಂದು ಚೀಟಿಯ ಎಣಿಕೆ ಮಾಡಬೇಕು ಇಲ್ಲ ಹಳೆಯ ಬ್ಯಾಲೆಟ್
ಪೇಪರ್ ಪದ್ಧತಿ ಬರಲಿ ಎಂದು ಕೋರುತ್ತಾರೆ. ನ್ಯಾಯಾಲಯ ಹಾಲಿ ವ್ಯವಸ್ಥೆಗೆ ಅಡ್ಡಿ ಬರಲಾಗುವುದಿಲ್ಲ ಎಂದು ಅರ್ಜಿ ವಜಾ ಮಾಡುತ್ತದೆ.
೨೦೨೪ ರ ಚುನಾವಣೆಯಲ್ಲಿ ವಿರೋಧ ಪಕ್ಷವು ಮತ್ತು ಮೋದಿ ವಿರೋಧಿಗಳು ಚುನಾವಣಾ ಆಯೋಗದ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ಚುನಾವಣಾ ಆಯೋಗ ಕೇವಲ ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸುತ್ತಿದೆ, ನಮ್ಮ ದೂರುಗಳ ವಿರುದ್ಧ ಕ್ರಮ ಜರುಗಿಸುತ್ತಿಲ್ಲ, ಶೇಕಡಾವಾರು ಮತದಾನದ ವಿವರವನ್ನು ತಡವಾಗಿ ಪ್ರಕಟ ಮಾಡಿ ಮತದಾನದ ಸಂಖ್ಯೆ ಹೆಚ್ಚಿಸುತ್ತಿದ್ದಾರೆ ಮತ್ತು ಫಾರಂ ೧೭ ವೆಬ್ ಸೈಟ್ಟಿನಲ್ಲಿ ಅಪಲೋಡ್ ಮಾಡದೆ ಸಂಶಯಾಸ್ಪದವಾಗಿ ನಡೆದುಕೊಳ್ಳುತ್ತಿದೆ ಎಂದೆ ಮಾಡಿದ್ದಾರೆ.
ಎಡಿಆರ್ ಎಂಬ ಸರಕಾರೇತರ ಸ್ವಯಂಸೇವ ಸಂಸ್ಥೆ ಫಾರಂ ೧೭ ಆಯೋಗವು ಬಹಿರಂಗ ಮಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರುತ್ತದೆ.
ಚುನಾವಣೆಯ ಐದು ಹಂತ ಮುಗಿದಿರುವಾಗ ಈಗ ವ್ಯವಸ್ಥೆಯ ಮಧ್ಯಪ್ರವೇಶ ಮಾಡಲಾಗುವುದಿಲ್ಲ ಎಂದು ಅರ್ಜಿ ತಿರಸ್ಕೃತವಾಗುತ್ತದೆ. ಧರ್ಮದ ಆಧಾರದ ಮೇಲೆ ಮುಸ್ಲಿಂ ಮೀಸಲಾತಿ ನೀಡಿ ಕಾಂಗ್ರೆಸ್ ಹಿಂದುಳಿದವರ ಮೀಸಲಾತಿಗೆ ಕನ್ನಹಾಕಿದೆ, ಅಂಬೇಡ್ಕರ್ ಬರೆದಿರುವ ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಗೆ ಆಸ್ಪದವಿಲ್ಲ ಕೇವಲ ವೋಟು ಬ್ಯಾಕ್ ರಾಜಕೀಯದ ಸಲುವಾಗಿ ಇದನ್ನು ನೀಡಿದೆ ಎಂದು ಮೋದಿಯವರು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.ಮೋದಿ ವಿರುದ್ದ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡುತ್ತದೆ.
ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಗಿ ಮೀಸಲಾತಿ ರದ್ದು ಮಾಡುತ್ತದೆ ಮತ್ತು ಜಾತಿಯ ಆಧಾರದ ಮತದಾರರನ್ನು ಪ್ರಚೋದಿಸುವ ಕಾಂಗ್ರೆಸ್ ನಾಯಕರ ಪ್ರಚಾರದ ವಿರುದ್ದ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತದೆ. ಈ ದೂರುಗಳ ಹಿನ್ನಲೆಯಲ್ಲಿ ಆಯೋಗವು ಎರಡೂ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದು ಸಾಮಾಜಿಕ ಪರಿಸರವನ್ನು ಚುನಾವಣೆಗೆ ಬಲಿಪಶು ಮಾಡಬೇಡಿ, ಜಾತಿ, ಸಮು ದಾಯ, ಭಾಷೆ ಮತ್ತು ಧಾರ್ಮಿಕ ರೇಖೆಗಳಲ್ಲಿ ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನಿರ್ದೇಶಿಸುತ್ತದೆ.
ಕಾಂಗ್ರೆಸ್ ತಮ್ಮ ದೂರಿನ ಆಧಾರದ ಮೇಲೆ ಮೋದಿಯವರ ಪ್ರಚಾರ ಸಭೆಗಳಿಗೆ ನಿರ್ಬಂಧ ಹೇರಬೇಕು ಎಂಬ ಒತ್ತಾಯವಿತ್ತು ಆದರೆ ಎರಡೂ ಪಕ್ಷದ ಪ್ರಚಾರದ
ವಿರುದ್ದ ನೀಡಿದ ನಿರ್ದೇಶನ ಅರಗಿಸಿಕೊಳ್ಳಲಾಗದೆ ಆಯೋಗದ ವಿರುದ್ದ ಕೆಳಮಟ್ಟದಲ್ಲಿ ಟೀಕೆ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರ ಪುತ್ರ ಸಚಿವ ಪ್ರಿಯಾಂಕ
ಖರ್ಗೆಯವರು ತಮ್ಮ ಎಕ್ಸ್ ಖಾತೆಯಲ್ಲಿ ಚುನಾವಣಾ ಆಯೋಗವನ್ನು ಜೀ ಹುಜೂರ್ ದರ್ಬಾರಿಗಳು ನಡೆಸುತ್ತಿದ್ದಾರೆ. ನರವಿಲ್ಲದ ಹಾಸ್ಯಗಾರರು ಪ್ರಜಾ ಪ್ರಭುತ್ವವನ್ನು ಕೊಲ್ಲುತ್ತಿzರೆ. ಒಂದೊಂದು ಪಕ್ಷಕ್ಕೆ ಒಂದೊಂದು ನಿಲುವು ಎಂದು ಆಯೋಗದ ವಿರುದ್ದ ಆಕ್ಷೇಪಾರ್ಹ ಭಾಷೆಯನ್ನು ಪ್ರಯೋಗಿಸುತ್ತಾರೆ.
ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಯವರು ಇದನ್ನು ಭಾರತದ ಚುನಾವಣಾ ಆಯೋಗ ಎಂದು ಏಕೆ ಕರೆಯಲಾಗುತ್ತದೆ? ಇದು ಪ್ರಧಾನ ಮಂತ್ರಿ ಚುನಾವಣಾ ಕುಶಲ ಯೋಜನೆ ಅಲ್ಲವಾ? ಉಇಐ = Iಟoಠಿ ಇಟಞmಟಞಜಿoಛಿb ಐoಠಿಜಿಠ್ಠಿಠಿಛಿ ಎಂದು ಅವಹೇಳನಾಕಾರಿಯಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆಯುತ್ತಾರೆ.
೨೦೦೨ ರ ಗುಜರಾತ್ ವಿಧಾನಸಭಾ ಪ್ರಚಾರ ಸಭೆಯಲ್ಲಿ ಸೋನಿಯಾ ಗಾಂಽಯವರು ಮೋದಿಯವರನ್ನು ಸಾವಿನ ವ್ಯಾಪಾರಿ (IZಠಿ hZ ಖZbZಜZ) ಎಂದು ಕರೆಯುತ್ತಾರೆ. ಇದರ ವಿರುದ್ದ ಆಯೋಗಕ್ಕೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಆಗ ಮೋದಿಯವರು ಮುಖ್ಯಚುನಾವಣಾಧಿಕಾರಿ ಲಿಂಗ್ಡೋ ರವರು ಸೋನಿಯಾ ಗಾಂಧಿಯವರ ವಿರುದ್ದ ಕ್ರಮ ಜರುಗಿಸುವುದಿಲ್ಲ ಎಂದು ಕಟುವಾಗಿ ಟೀಕಿಸುತ್ತಾರೆ. ಸಾಂವಿಧಾನಿಕ ಹುದ್ದೆಗೆ ಅಗೌರವ ತೋರಿಸಿದ್ದಾರೆ ಎಂದು ಮನಮೋಹನ ಸಿಂಗ್ ಆದಿಯಾಗಿ ಕಾಂಗ್ರೆಸ್ ನಾಯಕರು ಮೋದಿಯವರ ವಿರುದ್ದ ವಾಗ್ದಾಳಿ ಮಾಡುತ್ತಾರೆ.
ಕಾಂಗ್ರೆಸ್ಸಿಗರು ಸಂವಿಧಾನದ ರಕ್ಷಕರು ಎಂದು ಹೇಳಿಕೊಳ್ಳುವವರು ಆದರೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಹೀನಾಯವಾಗಿ ಟೀಕಿಸಿ
ಮತ್ತು ಅದರ ವಿಶ್ವಾಸಾರ್ಹತೆಗೆ ಪೆಟ್ಟು ಕೊಡುತ್ತಿದ್ದಾರೆ. ೨೦೦೨ರಲ್ಲಿ ಮೋದಿವರಿಗೆ ಹೇಳಿಕೊಟ್ಟ ಪಾಠ ಮರೆತು ಹೋಗಿದ್ದಾರೆ! ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಇಬ್ಬಗೆ ನೀತಿಯನ್ನು ಅನುಸರಿಸುವುದು ಇವರಿಗೆ ಸಾಮಾನ್ಯ ಸಂಗತಿಯಾಗಿದೆ. ಕಾಂಗ್ರೆಸ್ ಪಾರ್ಟಿಯು ದೇಶಕ್ಕೆ ನಾವು ಸ್ವಾತಂತ್ರ‍್ಯ ತಂದು ಕೊಟ್ಟ ಪಕ್ಷದವರು ಆದ್ದರಿಂದ ನಾವು ಮಾಡಿದ್ದು ನೀವು ಮಾಡಬಾರದು ಎಂಬ ಧೋರಣೆಯನ್ನು ಅನುಸರಿಸುವುದು ಅವರ ಹಕ್ಕು ಎಂದು ಭಾವಿಸಿರುವಂತಿದೆ.
ಮೋದಿಯವರು ಚುನಾವಣಾ ಆಯೋಗವನ್ನು ರಾಜಕೀಯಕರಣ ಗೊಳಿಸುತ್ತಿzರೆ ಎಂದು ಮತ್ತೊಂದು ಗಂಭೀರ ಆರೋಪ ಮಾಡುತ್ತಾರೆ. ಆದರೆ ಕೊಂಚ
ಇತಿಹಾಸ ಕೆದಕಿದರೆ ಆಯೋಗದಲ್ಲಿ ರಾಜಕೀಯದ ಬೀಜ ಬಿತ್ತಿರುವ ಅಪರಾಧ ಕಾಂಗ್ರೆಸ್ಸಿಗೆ ಬಡಿಯುತ್ತದೆ. ೧೯೯೧ರಿಂದ ೧೯೯೬ರವರಗೆ ಚುನಾವಣಾ ಮುಖ್ಯ
ಆಯುಕ್ತರಾಗಿದ್ದ ಟಿ.ಎನ.ಶೇಷನ್ ರವರು ೨೦೦೯ ರಲ್ಲಿ ಕಾಂಗ್ರೆಸ್ಸಿನಿಂದ ಗಾಂಽನಗರ ಕ್ಷೇತ್ರದಿಂದ ಎಲ್. ಕೆ. ಆಡ್ವಾಣಿ ಎದುರು ಸ್ಪರ್ಧಿಸಿರುತ್ತಾರೆ.
೧೯೯೬ರಿಂದ ೨೦೦೧ರತನಕ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಂಎಸ್ ಗಿಲ್ ರವರನ್ನು ಕಾಂಗ್ರೆಸ್ ಪಾರ್ಟಿ ೨೦೦೪ ರಿಂದ ೨೦೧೬ ರತನಕ ರಾಜ್ಯಸಭಾ ಸದಸ್ಯ ನನ್ನಾಗಿ ಮಾಡುತ್ತದೆಯಲ್ಲದೆ ಯುವ ಮತ್ತು ಕ್ರೀಡಾ ಸಚಿವರಾಗಿ ನೇಮಕ ಮಾಡುತ್ತಾರೆ. ಆಯೋಗವನ್ನು ರಾಜಕೀಯಕರಣ ಮಾಡುವುದು ಎಂದರೆ ನಿವೃತ್ತ ಆಯುಕ್ತರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿಕೊಂಡು ಅವರಿಗೆ ಉನ್ನತ ಹುz ಕೊಡುವುದು ಎಂಬುದು ತಿಳಿಯದ ಹಾಗೆ ಅಮಾಯಕರಂತೆ ವರ್ತಿಸುತ್ತಿದ್ದಾ.
ಕಾಂಗ್ರೆಸ್ ಸರಕಾರದ ಅವಽಯಲ್ಲಿ ಪ್ರಧಾನ ಮಂತ್ರಿಗಳು ವಿರೋಧ ಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಚುನಾವಣಾ ಆಯುಕ್ತರ ನೇಮಕವನ್ನು ಕೈಗೊಳ್ಳುತ್ತಿದ್ದರು. ನೇಮಕವಾದ ಬಹುತೇಕರು ಪಕ್ಷದ ನಿಕಟವರ್ತಿಗಳಾಗಿದ್ದರು. ೨೦೨೩ ರಲ್ಲಿ ಮೋದಿ ಸರಕಾರವು ಚುನಾವಣಾ ಆಯೋಗದ ಕಾಯಿದೆಗೆ ತಿದ್ದುಪಡಿ ತಂದು ಮುಖ್ಯಚುನಾವಣಾ ಆಯುಕ್ತರ ನೇಮಕ ಮಾಡಲು ಸಮಿತಿಯೊಂದು ರಚನೆ ಮಾಡುತ್ತಾರೆ. ಈ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಕ್ಯಾಬಿನೆಟ್ ಸಚಿವರೊಬ್ಬರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರು ಸದಸ್ಯರಿರುತ್ತಾರೆ.ಸಮಿತಿಯು ಪಾರದರ್ಶಕವಾಗಿ ಚುನಾವಣಾ ಆಯುಕ್ತರನ್ನು ನೇಮಿಸುವ ಪದ್ದತಿಯು ಇಂದು ಜಾರಿಯಲ್ಲಿದೆ.
ಪಾರದರ್ಶಕವಾಗಿ ವಿರೋಧ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವ್ಯವಸ್ಥೆಯಲ್ಲಿಯೂ ವಿರೋಧ ಪಕ್ಷಗಳು ಜೀ ಹುಜೂರ್‌ಗಳನ್ನು ಸರಕಾರ ನೇಮಕ ಮಾಡುತ್ತಿದೆ ಎಂದು ಹುರಳಿಲ್ಲದ ಆರೋಪವು ಅವರ ಪೂರ್ವಾಗ್ರಹ ಪೀಡಿತ ಮನಸ್ಸಿಗೆ ಕನ್ನಡಿ ಹಿಡಿದಿದೆ. ೨೦೦೮ರಲ್ಲಿ ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲ ಅವರು ಆಯೋಗದ ಗೌಪ್ಯ ಮಾಹಿತಿಯನ್ನು ಕಾಂಗ್ರೆಸ್ ಪಾರ್ಟಿಗೆ ತಿಳಿಸುತ್ತಿzರೆ ಎಂದು ಆರೋಪಿಸಿ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಗೋಪಾಲ ಸ್ವಾಮಿಯವರು ಚಾವ್ಲರವರನ್ನು ವಜಾ ಮಾಡಬೇಕು ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿರುತ್ತಾರೆ.
೨೦೦೯ರಲ್ಲಿ ಕಾಂಗ್ರೆಸ್ ಅಂತಹ ವ್ಯಕ್ತಿಯನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡುತ್ತಾರೆ. ಐದು ದಶಕಗಳ ಕಾಲ ದೇಶವಾಳಿದ ಪಕ್ಷದ
ಆಡಳಿತದಲ್ಲಿಯೇ ರಚನೆಯಾದ ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಹಾಳು ಮಾಡುವ ಕೆಲಸ ಕಾಂಗ್ರೆಸ್ ಮಾಡಬಾರದು. ಸಂವಿಧಾನದ ಪಾಠ ಹೇಳುವವರು ಸಂವಿಧಾನ ಪೀಠಕ್ಕೆ ಅವಹೇಳನ ಮಾಡಬಾರದು. ಚುನಾವಣೆ ಗೆಲ್ಲುವುದು ಜನರ ವಿಶ್ವಾಸ ಗಳಿಸಿಯೇ ವಿನಹ ಚುನಾವಣಾ ಆಯೋಗವನ್ನು ರಾಜಕೀಯ ದಾಳವಾಗಿ ಉಪಯೋಗಿಸಿಕೊಂಡಲ್ಲ ಎಂದು ಅರಿತುಕೊಳ್ಳಬೇಕಾಗಿದೆ.