Tuesday, 17th September 2024

ಅಸಮಬಲರ ಸೆಣಸಾಟದ ಅಖಾಡವಾಗಿಬಿಟ್ಟಿದೆ ಈ ಬಾರಿಯ ಚುನಾವಣೆ !

ದೇಶದ ಪ್ರತಿಪಕ್ಷಗಳು ಗೊಂದಲದಲ್ಲಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟವು ತನ್ನೊಳಗೆ ತುಂಬಿಕೊಂಡಿರುವ ಹತ್ತು ಹಲವು ವಿರೋಧಾಭಾಸಗಳನ್ನು ನಿಭಾಯಿಸಲು ಇನ್ನಿಲ್ಲದಂತೆ ಹೆಣಗಾಡುತ್ತಿದೆ.

ಇದು ನಿಮಗೆ ಗೊತ್ತಿರದ ಸಂಗತಿಯೇನೂ ಅಲ್ಲ ಅಥವಾ ನಾನಿದನ್ನು ಹೊಸದಾಗೇನೂ ಹೇಳಬೇಕಾಗಿಲ್ಲ- ದೇಶದ ವಿಪಕ್ಷಗಳು ಗೊಂದಲದಲ್ಲಿವೆ; ಅದೀಗ ಜಗಜ್ಜಾಹೀರಾಗಿರುವ ಸಂಗತಿ. ಆದಾಗ್ಯೂ, ಸಾರ್ವತ್ರಿಕ ಚುನಾವಣೆ ಎಂಬ ಸೆಣಸಾಟವು ಸಮಬಲರ ನಡುವೆ ನಡೆದರೇನೇ ಚೆನ್ನ; ಹೀಗಾಗಿ, ಈ ಚುನಾವಣಾ ಪರ್ವದಲ್ಲಿ ಇಂಥ ಸೆಣಸಾಟದ ಅಖಾಡವೂ ಸಮತಟ್ಟಾಗಿರಬೇಕಾದ್ದು ಅಪೇಕ್ಷಣೀಯವಲ್ಲವೇ? ಆದರೆ, ೨೦೨೪ರ ಲೋಕಸಭಾ ಚುನಾವಣೆಗೆ ರಣಕಹಳೆಯನ್ನು ಊದಿ ಆಗಿದ್ದರೂ, ಇಷ್ಟೊತ್ತಿಗೆ ಕೇಳಿಸ ಬೇಕಿದ್ದ ಸಾಂಪ್ರದಾಯಿಕ ‘ಬ್ಯಾಂಡ್-ಬಾಜಾ-ಬಜಂತ್ರಿ’ಯ ಸದ್ದು ಅದ್ಯಾಕೋ ಕೇಳಿಬರುತ್ತಿಲ್ಲ.

‘ಸ್ಪ್ರಿಂಟ್’ ಅಥವಾ ‘ಪೂರ್ಣವೇಗದ ಓಟ’ದ ರೀತಿಯಲ್ಲಿರಬೇಕಿದ್ದ ಈ ಸಾರ್ವತ್ರಿಕ ಚುನಾವಣೆಯು, ಬೇಸಗೆಯ ಅಸಹನೀಯ ಧಗೆಯ ನಡುವೆ ಬರೋಬ್ಬರಿ ಎರಡೂವರೆ ತಿಂಗಳವರೆಗೆ ಮೈಚೆಲ್ಲಿಕೊಂಡು ಅಕ್ಷರಶಃ ಒಂದು ‘ಮ್ಯಾರಥಾನ್’ ಪಂದ್ಯವೇ ಆಗಿ ಬಿಟ್ಟಿರುವುದು ಪ್ರಾಯಶಃ ಇದಕ್ಕಿರುವ ಕಾರಣವಿರ
ಬಹುದು. ಜತೆಗೆ, ಈ ಚುನಾವಣೆಯ -ಲಿತಾಂಶವೂ ಬಹುತೇಕ ‘ಪೂರ್ವನಿರ್ಧಾರಿತ’ ಆಗಿಬಿಟ್ಟಿರುವುದು ಕೂಡ ಇಂಥದೊಂದು ‘ಹಿಗ್ಗಿನ ಬುಗ್ಗೆ’ ಚಿಮ್ಮದಿರು
ವುದಕ್ಕೆ ಕಾರಣವಾಗಿರಬಹುದು; ಅಂದರೆ, -ಲಿತಾಂಶದ ಅನಿವಾರ್ಯತೆಯ ಬಗ್ಗೆ ಹಿಂದೆಂದೂ ಇಂಥ ‘ಒಮ್ಮತ’ ಮೂಡಿದ್ದು ನನಗೆ ನೆನಪಿಲ್ಲ.

ಇಂಥ ಶುಕ್ರದೆಸೆಯಲ್ಲಿ ಒದಗಬಹುದಾದ ಪವಾಡಸದೃಶ ತಿರುವು ಅದೇನೇ ಇರಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ‘ಸೈದ್ಧಾಂತಿಕ ಕಡುವಿರೋಽ’ ಹಾಗೂ ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರಂತೆಯೇ ನಿರಂತರ ಮೂರನೇ ಅವಽಗೂ ಗೆದ್ದು ಮತ್ತೆ ೫ ವರ್ಷಗಳವರೆಗೆ ಪ್ರಧಾನಿ ಗದ್ದುಗೆಯನ್ನು ಅಲಂಕರಿಸಲು ಸಜ್ಜಾಗಿದ್ದಾರೆ. ಇದೆಲ್ಲಾ ಸರಿಯೇ, ಆದರೆ ಇಲ್ಲೊಂದು ಪ್ರಶ್ನೆ ಅಪ್ರಯತ್ನವಾಗಿ ಹೊಮ್ಮುತ್ತದೆ. ಈ ಚುನಾವಣೆಯ
-ಲಿತಾಂಶವು ಒಂದು ‘ಪೂರ್ವನಿರ್ಧರಿತ’ ತೀರ್ಮಾನದಂತೆಯೇ ಕಂಡರೂ, ಈ ಪ್ರಜಾಸತ್ತಾತ್ಮಕ ಸಮರವು ‘ಮುಕ್ತ ಹಾಗೂ ನ್ಯಾಯಸಮ್ಮತ’ ರೀತಿ ಯಲ್ಲಿ ನಡೆಯಲು ಅಗತ್ಯವಿರುವಂಥ ಸಮತಟ್ಟಾದ ಅಖಾಡವಿಲ್ಲಿ ರೂಪುಗೊಂಡಿದೆಯೇ? ಎಂಬುದೇ ಆ ಪ್ರಶ್ನೆ.

ಇಲ್ಲಿ ಇನ್ನೊಂದು ಸಂಗತಿಯನ್ನು ಪುನರುಚ್ಚರಿಸ ಲೇಬೇಕು- ದೇಶದ ಪ್ರತಿಪಕ್ಷಗಳು ಗೊಂದಲದಲ್ಲಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯೇತರ
ವಿಪಕ್ಷಗಳು ಕಟ್ಟಿಕೊಂಡ ‘ಇಂಡಿಯ’ ಮೈತ್ರಿಕೂಟ ಈಗಾಗಲೇ ಸಾಕಷ್ಟು ಒಡಕಿನ ದನಿಗೂ, ವಿಘಟನೆಗಳಿಗೂ ಸಾಕ್ಷಿಯಾಗಿದ್ದು, ತನ್ನೊಳಗೆ ತುಂಬಿಕೊಂಡಿರುವ ಹತ್ತು ಹಲವು ವಿರೋಧಾಭಾಸಗಳನ್ನು ನಿಭಾಯಿಸಲು ಇನ್ನಿಲ್ಲದಂತೆ ಹೆಣಗಾಡುತ್ತಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡನ್ನು ಹೊರತುಪಡಿಸಿದರೆ, ಮಿಕ್ಕಾವ ಪ್ರಮುಖ ರಾಜ್ಯಗಳಲ್ಲೂ ಈ ಮೈತ್ರಿ ಕೂಟವು ತುಂಬಾ ಗಟ್ಟಿಯಾಗಿ ಕಚ್ಚಿಕೊಂಡಿರುವಂತೆ ಕಾಣುತ್ತಿಲ್ಲ.

ಮೈತ್ರಿಕೂಟದ ಸಹಭಾಗಿಗಳಲ್ಲಿ ಕಾಣಬರುತ್ತಿರುವ ‘ಸ್ಥಾನ ಪಲ್ಲಟಗಳನ್ನು’ ನಿಭಾಯಿಸಲು ಅದರ ಅಧ್ವರ್ಯು ಕಾಂಗ್ರೆಸ್ ಪಕ್ಷವು ಹೆಣಗಾಡುತ್ತಿರುವ  ವಿಷಮಘಟ್ಟ ದಲ್ಲೇ ಅದರ ನಾಯಕ ರಾಹುಲ್ ಗಾಂಽಯವರು ರಾಷ್ಟ್ರವ್ಯಾಪಿ ಯಾತ್ರೆ ಯೊಂದನ್ನು ಹಮ್ಮಿಕೊಂಡುಬಿಟ್ಟರು; ಇದು ಚುಕ್ಕಾಣಿ ಯಿಲ್ಲದ ಪ್ರತಿಪಕ್ಷಗಳ ದುಸ್ಥಿತಿಗೆ ಹಿಡಿದ ಕೈಗನ್ನಡಿ ಯಲ್ಲವೇ?! ಹಾಗೆಂದ ಮಾತ್ರಕ್ಕೆ, ‘ವಿಪಕ್ಷಗಳು ತಿರಸ್ಕಾರಕ್ಕೆ ಯೋಗ್ಯವಾಗಿರುವಂಥವು’ ಎಂಬ ಭರತವಾಕ್ಯ ನುಡಿಯುವ ಅಗತ್ಯವಿಲ್ಲ; ಈ ವಿಪಕ್ಷಗಳು ತಮ್ಮ ಎಡಬಿಡಂಗಿತನದ ನಡುವೆಯೂ ಈ ಚುನಾವಣೆಯಲ್ಲಿ ಸಮತಟ್ಟಾದ ಅಖಾಡದ ಪ್ರಯೋಜನವನ್ನು ಪಡೆಯುವಂತಾಗಬೇಕು. ಅದಕ್ಕೆ ಅವು ಅರ್ಹವಾಗಿವೆ ಕೂಡ. ಭಾರತದ ಚುನಾವಣಾ ಆಯೋಗವನ್ನೇ ಈ ನಿಟ್ಟಿನಲ್ಲಿ ಪರಿಗಣಿಸಿ ನೋಡಿ; ನ್ಯಾಯಸಮ್ಮತವಾದ ಹಾಗೂ ಪಕ್ಷಪಾತಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಚುನಾವಣೆಯನ್ನು ನಡೆಸುವ ಕಾನೂನುಬದ್ಧ ಅಽಕಾರವನ್ನು ಈ ಆಯೋಗವು ಹೊಂದಿದೆಯಷ್ಟೇ.

ತಟಸ್ಥ ಅಂಪೈರ್ ಎನಿಸಿಕೊಂಡವರು ಕೇವಲ ಉತ್ಕಟವಾಗಿ ತಟಸ್ಥ ರೀತಿಯಲ್ಲಿರುವಂತೆ ತಮ್ಮನ್ನು ಭಾವಿಸಿಕೊಂಡುಬಿಟ್ಟರೆ ಸಾಲದು, ‘ವಸ್ತುತಃ’ ಹಾಗೆಯೇ
ವರ್ತಿಸಬೇಕಾಗುತ್ತದೆ. ಆದರೆ ದುಃಖಕರ ಸಂಗತಿ ಯೆಂದರೆ, ಸಾಂವಿಧಾನಿಕವಾಗಿ ನಿರ್ದೇಶಿಸಲ್ಪಟ್ಟಿರುವ ಆಯೋಗದ ಈ ಪಾತ್ರವನ್ನೀಗ ಸೂಕ್ಷ್ಮ ಪರಿಶೀಲನೆಗೆ
ಒಳಪಡಿಸಬೇಕಾಗಿ ಬಂದಿದೆ. ೨೦೧೯ರಲ್ಲಿ, ಪ್ರಧಾನ ಮಂತ್ರಿಯವರು ಮಾಡಿದ್ದರೆನ್ನಲಾದ ‘ಒಡಕುಂಟು ಮಾಡುವ’ ಭಾಷಣಗಳಿಗೆ ಚುನಾವಣಾ ಆಯೋಗವು
ನೀಡಿದ್ದ ಸರಣಿ ಕ್ಲೀನ್‌ಚಿಟ್‌ಗಳ ಕುರಿತಾಗಿ ಅಂದಿನ ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರಿಂದ ಹೊಮ್ಮಿದ್ದ ‘ಭಿನ್ನಾಭಿಪ್ರಾಯದ ಟಿಪ್ಪಣಿ’ಯು
ಅಽಕೃತವಾಗಿ ದಾಖಲಾಗಲೂ ಇಲ್ಲ ಮತ್ತು ಅಂತಿಮ ವಾಗಿ ಅವರನ್ನು ಸದರಿ ಚುನಾವಣಾ ಸಂಸ್ಥೆಯಿಂದ ಹೊರಗಿಡಲಾಯಿತು.

ಈಗ ೨೦೨೪ರಲ್ಲಿ, ಚುನಾವಣಾ ಆಯುಕ್ತರನ್ನು ನೇಮಿಸುವ ವಿಷಯದಲ್ಲಿ ತನಗಿರುವ ಸಂಪೂರ್ಣ ಪರಮಾಽಕಾರವನ್ನು ಖಾತ್ರಿಪಡಿಸಿ ಕೊಳ್ಳುವ ಮೂಲಕ ಸರಕಾರವು ಸುಪ್ರೀಂ ಕೋರ್ಟ್‌ನ ಆದೇಶವೊಂದನ್ನು ನಿರಾಕರಿಸಿದೆ. ಅಷ್ಟೇಕೆ, ಸುದೀರ್ಘವಾಗಿರುವ ಚುನಾವಣಾ ವೇಳಾಪಟ್ಟಿಯೂ ಒಂದಷ್ಟು ಗೊಂದಲ/ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಉದಾಹರಣೆಗೆ, ಚುನಾವಣಾ ಹಿಂಸಾಚಾರದ ಇತಿಹಾಸವಿಲ್ಲದ ಮಹಾರಾಷ್ಟ್ರದಲ್ಲಿ ೫ ಹಂತದ ಚುನಾವಣೆಯನ್ನು ಹಮ್ಮಿಕೊಂಡಿ ರುವುದೇಕೆ? ಬಿಜೆಪಿಯ ‘ತಾರಾ-ಪ್ರಚಾರಕ’ರಾಗಿ ಚುನಾವಣೆಯ ಪ್ರತಿ ಹಂತದಲ್ಲೂ ಮಹಾರಾಷ್ಟ್ರದ ಉದ್ದಗಲಕ್ಕೂ ಸುತ್ತಲು ಪ್ರಧಾನಿ ಮೋದಿಯವರಿಗೆ ಅನುವು ಮಾಡಿಕೊಡುವುದಷ್ಟೇ ಇದರ ಉದ್ದೇಶ ವಾಗಿದೆಯೇ? ಚುನಾವಣಾ ಆಯೋಗದ ಕ್ಷೀಣಿಸುತ್ತಿರುವ ವಿಶ್ವಾಸಾರ್ಹತೆಯು ದೊಡ್ಡಮಟ್ಟದಲ್ಲಿ ಸಾಂಸ್ಥಿಕ ಸವೆತ ವಾಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ, ಹೀಗಾಗಿ ಅದರ ಅಽಕೃತ ನಡವಳಿಕೆಯ ನಿಯಮ ಗಳನ್ನು ಪರೀಕ್ಷಿಸಬೇಕಾದ ಅಗತ್ಯವೀಗ  ಎದುರಾಗಿದೆ.

ಇದಕ್ಕೊಂದು ಉದಾಹರಣೆ ನೀಡುವುದಾದರೆ, ಕಳೆದ ವರ್ಷ ‘ವಿಕಸಿತ ಭಾರತ ಯಾತ್ರೆ’ಯೊಂದರ ಸಂದರ್ಭದಲ್ಲಿ ರಥಪ್ರಭಾರಿಗಳಾಗಿ ಮೋದಿ ಸರಕಾರದ
ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಉನ್ನತಾಽಕಾರಿಗಳ ಸೇವೆಯನ್ನು ಪಡೆಯಲೆಂದು ಕೇಂದ್ರವು ಇಟ್ಟ ಹೆಜ್ಜೆಯು, ‘ಅಽಕಾರಿಶಾಹಿಯ ನಿರ್ಲಜ್ಜ
ರಾಜಕೀಯೀಕರಣ’ ಅಥವಾ ಅಽಕಾರಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ನಿರ್ಲಜ್ಜ ನಡೆಯಾಗಿ ಬಿಂಬಿತವಾಗಿ ವಿವಾದವನ್ನು ಹುಟ್ಟುಹಾಕಿತು. ರಕ್ಷಣಾ
ಸಚಿವಾಲಯದ ಮತ್ತೊಂದು ಆದೇಶವು, ಸೈನಿಕ- ರಾಯಭಾರಿಗಳಾಗಿ ಸರಕಾರಿ ಯೋಜನೆಗಳ ಕುರಿತು ಪ್ರಚಾರ ಮಾಡುವಂತೆ ರಜೆಯ ಮೇಲಿದ್ದ ಸೈನಿಕರಿಗೆ
ಸೂಚಿಸಿದ್ದಿದೆ.

ಇಂಥ ನಡೆಗಳ ಪರಿಣಾಮವಾಗಿ, ಒಂದು ಆಡಳಿತಾರೂಢ ಪಕ್ಷ ಹಾಗೂ ಸರಕಾರದ ನಡುವಿನ ಗೆರೆಗಳು ಮಸುಕಾಗುತ್ತವೆ, ಅಂದರೆ ಇವೆರಡರ ನಡುವಿನ ವ್ಯತ್ಯಾಸವು ಅಸ್ಪಷ್ಟವಾಗುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇನ್ನು ಕೇಂದ್ರೀಯ ತನಿಖಾ ಸಂಸ್ಥೆಗಳ ಕಡೆಗೊಮ್ಮೆ ಕಣ್ಣು ಹಾಯಿಸೋಣ. ನಿರ್ದಿಷ್ಟವಾಗಿ ಹೇಳುವುದಾ ದರೆ, ಜಾರಿ ನಿರ್ದೇಶನಾಲಯದಂಥ ಸಂಸ್ಥೆಗಳನ್ನು ರಾಜಕೀಯದ ಅಸಗಳಾಗಿ ಬಳಸಿಕೊಳ್ಳುವ ಪರಿಪಾಠದಿಂದಾಗಿ ವಿಪಕ್ಷಗಳ ನಾಯಕರು ತಲ್ಲಣಿಸುವಂತಾಗಿದೆ.

ನಡೆದಿದೆ ಎನ್ನಲಾಗಿರುವ ದೆಹಲಿ ಮದ್ಯ ಹಗರಣಕ್ಕೆ ಸಂಬಂಽಸಿ ಅಲ್ಲಿನ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ರನ್ನು ಗುರುವಾರ ತಡರಾತ್ರಿ ಬಂಽಸಿದ್ದು ಈ ಮಾದರಿಯ ಒಂದು ಭಾಗವೇ. ಸಾಲದೆಂಬಂತೆ, ಮದ್ಯ ಪ್ರಕರಣದಲ್ಲಿ ಭಾರತ ರಾಷ್ಟ್ರ ಸಮಿತಿ ಪಕ್ಷದ ನಾಯಕಿ ಕೆ.ಕವಿತಾರನ್ನೂ ಬಂಽಸಲಾಗಿದ್ದು, ಜಾರಿ ನಿರ್ದೇಶನಾಲಯದ ಇಂಥ ಆಕ್ರಮಣಕಾರಿ ಹೆಜ್ಜೆಯು ವಿಪಕ್ಷಗಳ ನಾಯಕರಲ್ಲಿ ಒಂದು ತೆರನಾದ ಆತಂಕವನ್ನು ಹರಡುತ್ತಿರುವುದು ಸುಳ್ಳಲ್ಲ. ಇನ್ನು ಆದಾಯ ತೆರಿಗೆ ಇಲಾಖೆಯೂ ಇಂಥದೇ ‘ಪೂರ್ವ ನಿಯಾಮಕ’ ಚಿತ್ತಸ್ಥಿತಿಯನ್ನು ಹೊಂದಿದೆ; ಇದು ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸಿರುವುದರ ಜತೆಗೆ, ೨೦೧೮-೧೯ರ ತೆರಿಗೆ ರಿಟರ್ನ್ಸ್‌ನಲ್ಲಿ ಕಂಡುಬಂದಿದೆ ಎನ್ನಲಾದ ವ್ಯತ್ಯಾಸಗಳು ಅಥವಾ ಅಸಾಂಗತ್ಯಗಳನ್ನು ಮುಂದುಮಾಡಿಕೊಂಡು ಕಾಂಗ್ರೆಸ್‌ನಿಂದ ೧೦೦ ಕೋಟಿ ರುಪಾಯಿಗಳನ್ನು ವಸೂಲಿ ಮಾಡಲು ಯತ್ನಿಸಿದೆ.

ಎಲ್ಲಕ್ಕಿಂತ ಮಿಗಿಲಾಗಿ, ಚುನಾವಣಾ ಬಾಂಡ್‌ಗಳ ವಿವರಗಳು ಇಲ್ಲಿಯವರೆಗೆ ಬಹಿರಂಗಪಡಿಸಿರುವಂತೆ, ಕೇಂದ್ರೀಯ ಸಂಸ್ಥೆಗಳು ಕೈಗೊಂಡಿರುವ ‘ಬಲವಂತದ
ಕ್ರಮ’ ಮತ್ತು ದಾನಿಗಳಿಂದ ಆಗಿರುವ ಬಾಂಡ್ ದೇಣಿಗೆಗಳ ನಡುವೆ ಒಂದು ಪರಸ್ಪರ ಸಂಬಂಧವಿರುವಂತೆ ತೋರುತ್ತಿದೆ; ಇದು ಅನೈತಿಕ ‘ಡೀಲ್-ಮೇಕಿಂಗ್’ನಿಂದಾಗಿ ದಕ್ಕಿದ ಪ್ರತಿ-ಲವನ್ನು ಧ್ವನಿಸುತ್ತದೆಯಷ್ಟೇ. ಇಂಥ ಅಗ್ರಗಣ್ಯ ೩೦ ದಾನಿಗಳ ಪೈಕಿ ೧೪ ಕಂಪನಿಗಳಿವೆ. ಇವು ಬಾಂಡ್‌ಗಳನ್ನು
ಖರೀದಿಸಿದ ಅವಽಯಲ್ಲಿ ತನಿಖಾ ಕ್ರಮವನ್ನು ಎದುರಿಸಿದ್ದು, ಕಾನೂನು ಕ್ರಮ ಜರುಗದಂತೆ ‘ರಕ್ಷಣೆ ಪಡೆಯಲು’ ಈ ಹಣವನ್ನು ಅವು ಪಾವತಿಸಿರ
ಬಹುದು ಎಂಬುದನ್ನು ಈ ಘಟನೆ ಸೂಚಿಸುತ್ತದೆ.

ಅಷ್ಟೇ ಅಲ್ಲ, ಈ ಬಾಂಡ್ ಹಣದಲ್ಲಿ ಶೇ.೫೦ಕ್ಕಿಂತ ಹೆಚ್ಚು ಭಾಗವು ಬಿಜೆಪಿಯ ಜೇಬನ್ನು ಸೇರಿರುವುದು ಅಚ್ಚರಿದಾಯಕ ಸಂಗತಿ; ರಾಷ್ಟ್ರೀಯ ಮಟ್ಟದಲ್ಲಿ
ಪ್ರಬಲ ಪಕ್ಷವಾಗಿರುವ ಬಿಜೆಪಿಯು, ಅದು ನಗದಿ ನಲ್ಲಿರಲಿ ಅಥವಾ ಬಾಂಡ್‌ಗಳ ಸ್ವರೂಪದಲ್ಲಿರಲಿ, ಅಗಾಧ ಸಂಪನ್ಮೂಲಗಳನ್ನು ಹೊಂದಿದೆ. ಆದರೆ,
ಉಳಿದೆಲ್ಲ ಪಕ್ಷಗಳನ್ನು ಒಗ್ಗೂಡಿಸಿದಾಗ ಕಾಣಬರುವುದಕ್ಕಿಂತಲೂ ಹೆಚ್ಚಿನ ‘ಖರ್ಚುಮಾಡುವ ಶಕ್ತಿ ಯನ್ನು’ ಪಕ್ಷವೊಂದು ಹೊಂದಿರುವಾಗ, ಅದು
ಪರಸ್ಪರರ ಆರ್ಥಿಕಬಲದಲ್ಲಿ ಒಂದು ಅಸಾಮರಸ್ಯ ವನ್ನೇ ಸೃಷ್ಟಿಸುತ್ತದೆ. ಒಟ್ಟಾರೆ ಪ್ರಚಾರಕಾರ್ಯವನ್ನು ತನಗಿಷ್ಟ ಬಂದಂತೆ ತಿರುಚಲಿಕ್ಕೆ ಪ್ರಬಲ ಪಕ್ಷಕ್ಕೆ
ನೆರವಾಗುವುದು ಈ ಅಂಶವೇ, ಈ ಅಗಾಧ ದುಡ್ಡಿನ ಬಲವೇ!

ಮೋದಿ ಸರಕಾರದ ಕುರಿತಾಗಿ ವಿವಿಧ ಮಾಧ್ಯಮಗಳಲ್ಲಿ ಹಮ್ಮಿಕೊಳ್ಳಲಾಗಿರುವ ‘ಪ್ರಚಾರದ ಮಿಂಚುದಾಳಿ’ಯನ್ನೊಮ್ಮೆ ನೀವು ಗಮನಿಸಿದರೆ ಈ
ಗ್ರಹಿಕೆ ಸ್ಪಷ್ಟವಾಗುತ್ತದೆ. ಇದಕ್ಕೆ ನಿಮಗೊಂದು ಸಾಕ್ಷಿಯನ್ನು ನೀಡುತ್ತೇನೆ. ಕಳೆದ ಸಾರ್ವತ್ರಿಕ ಚುನಾವಣೆ ವೇಳೆ, ‘ಬ್ರಾಡ್‌ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್’ (ಬಾರ್ಕ್) ಎಂಬ ಸಂಸ್ಥೆಯು (ಇದು ಟಿವಿ ವೀಕ್ಷಣೆಯ ಅಂಕಿ-ಅಂಶಗಳ ಮೇಲ್ವಿಚಾರಣೆಯಲ್ಲಿ ತೊಡಗಿಸಿಕೊಂಡಿರುವ ಒಂದು ಅಗ್ರಗಣ್ಯ ಸಂಸ್ಥೆ) ೨೦೧೯ರ ಏಪ್ರಿಲ್‌ನಲ್ಲಿ ನಡೆಸಿದ ಸಮೀಕ್ಷೆಯೊಂದು, ಪ್ರಧಾನಿ ಮೋದಿಯವರು ತಮ್ಮ ರಾಜಕೀಯ ಎದುರಾಳಿಗಳಿಂತ ಮೂರು ಪಟ್ಟು ಹೆಚ್ಚಿನ ಟಿವಿ ಪ್ರಸಾರಾವಽಯನ್ನು ಪಡೆದಿದ್ದುದನ್ನು ತೋರಿಸುತ್ತದೆ. ಈ ಬಾರಿಯಂತೂ, ಅವರ ಪರ ವಾಗಿಯೇ ಪ್ರಚಾರದ ತಕ್ಕಡಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಾಲುವುದನ್ನು ನೀವು ನಿರೀಕ್ಷಿಸ
ಬಹುದು!

ಅಡಿಯಾಳಾಗಿ ವರ್ತಿಸುವ ಒಂದು ಮಾಧ್ಯಮ ವಿಲ್ಲದೆಯೇ ಮೋದಿ ಗೆಲ್ಲುವುದಿಲ್ಲ ಎಂದಲ್ಲ, ಅಥವಾ ಸರಕಾರವನ್ನು ಸಾಂಸ್ಥಿಕವಾಗಿ ವಶಪಡಿಸಿಕೊಳ್ಳದಿದ್ದರೆ ಅವರು ಸೋಲುತ್ತಾರೆ ಎಂದಲ್ಲ. ಇಲ್ಲಿರುವ ವಾಸ್ತವವೆಂದರೆ, ಪ್ರಧಾನ ಮಂತ್ರಿಯ ವರದ್ದು ಉನ್ನತ ಸ್ಥಾನದಲ್ಲಿರುವ ಮತ್ತು ಅತಿಶಯಿಸಿದ ಒಂದು ವ್ಯಕ್ತಿತ್ವವಾಗಿದ್ದು, ಅವರ ಪ್ರಬಲ ಉಪಸ್ಥಿತಿ ಹಾಗೂ ಸದೃಢ ನಾಯಕತ್ವವು, ಒಂದು ಉಪಖಂಡದಷ್ಟು ಗಾತ್ರದಲ್ಲಿರುವ ಈ ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಜನಬಾಹುಳ್ಯ ದೊಂದಿಗೆ ಸುಲಭವಾಗಿ ಸಂಪರ್ಕ ಸಾಽಸಿಬಿಡುತ್ತದೆ. ಇವರು ಕೆಲವರ ಪಾಲಿಗೆ ‘ವಿಶ್ವಗುರು’ ಆಗಿದ್ದರೆ, ಮತ್ತಿತರರಿಗೆ ಹಿಂದುತ್ವದ ಆರಾಧಕರಾಗಿದ್ದಾರೆ, ಅದರ ಪ್ರತಿಪಾದಕ ರಾಗಿದ್ದಾರೆ; ‘ನಿಗದಿತ ಕಾರ್ಯಭಾರವನ್ನು ಕ್ಷಿಪ್ರವಾಗಿ ಮತ್ತು ಪರಿಣಾಮಕಾರಿಯಾಗಿ ಸಂಪನ್ನಗೊಳಿಸುವ ಓರ್ವ ಆಡಳಿತಗಾರ’ ಎಂಬುದರಿಂದ ಮೊದಲ್ಗೊಂಡು ‘ಓರ್ವ ರಾಷ್ಟ್ರೀಯವಾದಿ ಐಕಾನ್’ ಎಂಬಲ್ಲಿಯವರೆಗಿನ ಹಲವು ವ್ಯಾಖ್ಯೆಗಳು ಅವರನ್ನು ಸುತ್ತುವರಿದಿವೆ.

ಹೀಗಾಗಿ, ‘ಮೋದಿ ಮಾತ್ರವೇ ಗೆಲ್ಲುತ್ತಾರೆ’ (ಆಯೇಗಾ ತೋ ಮೋದಿ ಹಿ) ಎಂಬ ಘೋಷಣೆಯು ಕೇವಲ ಒಂದು ಜಪವಾಗಿ ಉಳಿಯದೆ, ಎಲ್ಲಾ ಭಿನ್ನಾಭಿಪ್ರಾಯದ ದನಿಗಳನ್ನೂ ಹಿಂಡಿ ಹೊರಗೆಸೆದುಬಿಡುವ ಒಂದು ರಾಜಕೀಯ ವ್ಯವಸ್ಥೆಯನ್ನೂ ಅದು ಸಂಕೇತಿಸುತ್ತದೆ. ಹಾಗೆಂದ ಮಾತ್ರಕ್ಕೆ ರಾಜಕೀಯದಾಟದ ಅಖಾಡವು ಏಕ
ಪಕ್ಷೀಯವಾಗಿ ಇರಬೇಕು ಎಂದೇನಿಲ್ಲ, ಅದು ಸಮಬಲದ ಹೋರಾಟಕ್ಕೆ ತಕ್ಕಂತಿರಬೇಕು. ವಿಜಯಶಾಲಿ ಯಾರು ಎಂಬ ಸಂಗತಿಯು ಬಹುತೇಕ ನಿಶ್ಚಿತ
ವಾಗಿರುವ ಪಂದ್ಯದಲ್ಲೂ, ಅದರ ಎದುರಾಳಿ ತಂಡವು ಅಖಾಡದಲ್ಲಿ ಸಮಾನ ಅವಕಾಶಕ್ಕೆ ಅರ್ಹ ವಾಗಿರುತ್ತದೆ ಎಂಬುದನ್ನು ನಾವು ಮರೆಯಬಾರದು.
ಒಂದೊಮ್ಮೆ ರಾಜಕೀಯ ಎದುರಾಳಿಗಳಿಗೆ ಅಂಥ ಮೂಲಭೂತ ಅವಕಾಶವನ್ನು ನಿರಾಕರಿಸಿದ್ದೇ ಆದಲ್ಲಿ, ಅದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗಿದ
ಘೋರ ಅಪಚಾರವೇ ಆಗುತ್ತದೆ ಎಂಬುದನ್ನು ಸಂಬಂಧಪಟ್ಟವರು ಮರೆಯಬಾರದು.

ಕೊನೇಹನಿ: ಭಾರತದ ಚುನಾವಣಾ ಆಯೋಗವು ಇತ್ತೀಚೆಗೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮರುಭರವಸೆಯನ್ನು ಹುಟ್ಟಿಸುವ ಟಿಪ್ಪಣಿಯೊಂದು
ಕೇಳಿಬಂತು. ದ್ವೇಷ ಭಾಷಣಗಳ ವಿಷಯದಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರು ವುದರ ಕುರಿತು ಪ್ರತಿಕ್ರಿಯಿಸುವಂತೆ ಪತ್ರಕರ್ತರು
ಕೇಳಿದಾಗ, “ಹಾಗೆ ನೀತಿ ಸಂಹಿತೆಯನ್ನು ಉಲ್ಲಂಸಿದವರು ‘ಅದೆಷ್ಟೇ ಹೆಸರಾಂತ ರಾಜಕಾರಣಿ ಯಾಗಿದ್ದರೂ ಲೆಕ್ಕಿಸದೆ’ ಕ್ರಮ ಕೈಗೊಳ್ಳಲಾಗುವುದು”
ಎಂದು ಮುಖ್ಯ ಚುನಾವಣಾ ಆಯುಕ್ತರು ಭರವಸೆ ನೀಡಿದರು!

ಆಯೋಗವು ತನ್ನ ಮಾತಿನಂತೆ ನಡೆದು ಕೊಳ್ಳುತ್ತದೆಯೇ?

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *