Thursday, 12th December 2024

ಎಳ್ಳು ಬೆಲ್ಲ ತಿಂದು, ಸುಳ್ಳು ಹೇಳೋದ್ ಕಡಿಮೆ ಮಾಡಿ

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ

ಒಂದೆರಡು ದಶಕಗಳಿಂದ ತೆಲುಗು ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಕಮರ್ಷಿಯಲ್ ಚಿತ್ರಗಳನ್ನು ಆಳಿದ್ದು ಟಾಟಾ ಸುಮೋಗಳು. ಅವಿಲ್ಲ ಅಂದ್ರೆ ಸಿನಿಮಾನೇ ಇಲ್ಲ ಎನ್ನುವ ಮಟ್ಟಕ್ಕೆ ಸುಮೋ ಹಾವಳಿ ಇತ್ತು. ಆದರೆ ಈಗ ಅದಾದ ನಂತರ ಲ್ಯಾಂಡ್ ಮಾಫಿಯಾ ಸಿನಿಮಾಗಳು ಶುರು ಆದಮೇಲೆ ಎಲ್ಲ
ಸಿನಿಮಾಗಳಲ್ಲಿ ಜೆಸಿಬಿ ಮತ್ತು ಲ್ಯಾಂಡ್ ಡಿಗ್ಗರ್‌ಗಳ ಹಾವಳಿ ಜಾಸ್ತಿ ಆಗಿದೆ.

ಅಂದ ಹಾಗೆ ಇದೂ ಹೊಸದೇನಲ್ಲ. ಪುನೀತ್ ಅಭಿನಯದ ಪೃಥ್ವಿ ಸಿನಿಮಾದ ಇದು ಇತ್ತು. ಆದರೆ, ಅಲ್ಲಿ ಬಳ್ಳಾರಿ ಗಣಿಗಳದ್ದೇ ಕಥೆ ಇತ್ತು. ಆದರೆ, ಅದಾದ ನಂತರ ಸುದೀಪ್ ದರ್ಶನ್ ಸಿನಿಮಾದಲ್ಲೂ ಜೆಸಿಬಿ ಡಿಗ್ಗರ್‌ಗಳು ಹೆಚ್ಚು ಕಾಣಿಸಿದ್ದವು. ಸಾರಥಿಯಿಂದ ಶುರುವಾದ ಈ ಟ್ರೆಂಡ್ ಅನ್ನು ಸುದೀಪ್ ಬಚ್ಚನ್‌ನಲ್ಲಿ ಮುಂದು ವರಿಸಿದ್ದರು. ಏಕೆಂದರೆ ಈ ಚಿತ್ರಗಳಲ್ಲೂ ಭೂ ಮಾಫಿಯಾ ಕಥೆ ಇತ್ತು. ಅದು ಮತ್ತೆ ಭೂ ಮಾಫಿಯಾನೆ ಮುಖ್ಯ ವಸ್ತುವಾದ ದರ್ಶನ್‌ರ ಅಂಬರೀಶ ಚಿತ್ರದಲ್ಲಿ ಕಾಣಿಸಿಕೊಂಡಿತ್ತು. ಆದರೆ, ಕೆಲವು ಚಿತ್ರಗಳಲ್ಲಿ ಇಡೀ ಸಿನಿಮಾ ಪೂರ್ತಿ ಹಳದಿ ಹಳದಿ ಎನಿಸುವಷ್ಟರ ಮಟ್ಟಿಗೆ ಜೆಸಿಬಿ ಲ್ಯಾಂಡ್ ಡಿಗ್ಗರ್‌ಗಳು ಸಿನಿಮಾಗಳನ್ನು ಆವರಿಸಿಕೊಳ್ಳುತ್ತಿವೆ. ಇದನ್ನು ನೋಡಿದವರು ಚಿತ್ರರಂಗದವರು ಬುಲ್ಡೋಜರ್ಸ್, ಜೆಸಿಬಿಗಳನ್ನ ಪ್ರಮೋಟ್ ಮಾಡ್ತಾ ಇದಾರೋ ಏನೋ ಗೊತ್ತಿಲ್ಲ ಅಂತಿದಾರೆ.

ಹಾಗಾಗಿ ಅಂಬರಿಷ್, ವಿಷ್ಣುವರ್ಧನ್‌ರಂತೆ ತಾವು ಕುಚಿಕೂ ಗೆಳೆಯರು ಎಂದು ಚಿತ್ರರಂಗದಲ್ಲಿ ಬಿಂಬಿಸಿಕೊಂಡಿದ್ದ ಸುದೀಪ್ ಮತ್ತು ದರ್ಶನ್ ಕೆಲವು ಕಾಲ ‘ಡಿಗ್ಗಜರು’ ಎನಿಸಿಕೊಂಡಿದ್ದರು ಎಂದರೆ ಆಶ್ಚರ್ಯವಿಲ್ಲ. ಮಾರ್ಕೆಟ್ ಇರುವ ಸೂಪರ್ ಸ್ಟಾರ್‌ಗಳು ಏನೆಲ್ಲ ಪ್ರಯೋಗಗಳನ್ನು ಮಾಡಬಹುದು ಎಂಬುದಕ್ಕೆ ಈ ವಿಷಯ ಉದಾಹರಣೆ. ಹೇಳಿ ಕೇಳಿ ಸುದೀಪ್ ಹಿಂದಿ, ತೆಲುಗು ಸಿನಿಮಾಗಳ ಮೂಲಕ ನ್ಯಾಷನಲ್ ಮಾರ್ಕೆಟ್ ಇರೋ ನಟ. ಹಾಗಂತ ದರ್ಶನ್ ಏನೂ ಕಮ್ಮಿ ಇಲ್ಲ, ಅವರ ಅಭಿಮಾನಿಗಳನ್ನು ನೋಡಿದರೆ ಅವರೂ ಒಂಥರಾ ‘ಮೆಜೆಸ್ಟಿಕ್’ ನಲ್ಲಿರುವ ‘ನ್ಯಾಷನಲ್ ಮಾರ್ಕೆಟ್’ ನಟರೇ. ಹಾಗಾಗಿ, ಅವರು ಏನ್ ಮಾಡಿದರೂ ಜನ ನೋಡ್ತಾರೆ. ಈಗಂತೂ ಈ ಜೆಸಿಬಿ ಪರಂಪರೆ ದಕ್ಷಿಣ ಭಾರತದಾದ್ಯಂತ ಹಬ್ಬಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಯಾವ ವಾಹನ ಕ್ರೇಜ್ ಸೃಷ್ಟಿ ಮಾಡಲಿದೆ ಅನ್ನೋದನ್ನ ಕಾದು ನೋಡಬೇಕು.

ಲೂಸ್ ಟಾಕ್
ಸಿದ್ದರಾಮಯ್ಯ (ಕಾಲ್ಪನಿಕ ಸಂದರ್ಶನ)
? ಅಲ್ಲ ಸರ್, ಈ ಕರೋನಾ ಟೈಮಲ್ಲೂ ನೀವು ಪಾದಯಾತ್ರೆ ಮಾಡಿದ್ದು ಸರಿನಾ? 
-ಏನೋ, ಈ ಬಿಜೆಪಿ ಸರಕಾರದಲ್ಲಿ ಏನ್ ಮಾಡಿದ್ರೂ ‘ನಡೆಯುತ್ತೆ’ ಅಂತ ನಾನೂ ಡಿಕೆಶಿ ‘ನಡೆಯೋಕೆ’ ಶುರು ಮಾಡಿದ್ವಪ್ಪ.

? ಆದ್ರೂ, ಪಾದಯಾತ್ರೆ ನಿಲ್ಲಿಸಿ ಉಲ್ಟಾ ಹೊಡೆಯಬೇಕಾಯ್ತು ಅಲ್ವಾ?
-ಏ..ಹಂಗೆಲ್ಲ, ಪಾದಯಾತ್ರೆನಾ ಉಲ್ಟಾ ಅನ್ಬೇಡಪ್ಪ… ಪಾದ ಉಲ್ಟಾ ಆದ್ರೆ, ಅದು ದೆವ್ವ ಅಂತ ತಿಳ್ಕೋತಾರೆ ಜನ.

? ಆದ್ರೂ ಪಾದಯಾತ್ರೆ ನಿಲ್ಲಿಸಿದ್ದಕ್ಕೆ ಕಾರಣ ಏನು?
-ಸರಕಾರ ‘ಬೀಳಿಸೋಕೆ’ ಅಂತ ಪಾದಯಾತ್ರೆ ಹೊರಟ್ವಿ. ಆದ್ರೆ ಕೋರ್ಟ್ ಮಧ್ಯ ಬಂದಿದ್ದರಿಂದ ‘ನಿಲ್ಲಿಸಬೇಕಾಯ್ತು’.

? ನಿಮ್ಮ ಡಿಕೆಶಿ ಅವ್ರು ಓಡಾಡೋದು ನೋಡಿ , ‘ಮೇಕೆ’ ದಾಟು ಪಾದಯಾತ್ರೆಯಲ್ಲಿ ‘ಬ್ಯಾ’ ಲೆನ್ಸ್ ಕಳೆದುಕೊಂಡ ಡಿಕೆಶಿ ಅಂತ ಬಿಜೆಪಿಯವರು ಆಡ್ಕೊಂಡ್ ನಗ್ತಾ
ಇದ್ರಂತೆ? 
-ಅದ್ ಬಿಡಪ್ಪ, ನಾನ್ ಓಡಾಡುವಾಗ, ‘ಜೋಕೆ ಜೋಕೆ‘ ‘ಮೇಕೆ’, ಹೆಬ್ಬುಲಿ ಹಾಕಿದೆ ‘ಕೇಕೆ’ ಅಂತ ‘ಬ್ಯಾ’ಕ್ ಗ್ರೌಂಡಲ್ಲಿ ಪುಷ್ಪ ಸಿನಿಮಾ ಹಾಡು ಬರ್ತಿತ್ತು. ಅದ್
ಕೇಳಿಸ್ಲಿಲ್ವಾ?

? ಹೌದು ಹುಲಿಯಾ… ಸರಿ, ಈ ಪಾದಯಾತ್ರೆ ವಿಷಯದಲ್ಲಿ ಬಿಜೆಪಿಗೆ ಏನು ಹೇಳೋಕ್ ಇಷ್ಟ ಪಡ್ತಿರಾ?
-ಏನಿಲ್ಲ, ಸಿಂಪಲ್ ಅಡ್ಜೆಸ್ಟ್ . ೨ ತಂಡಗಳು ಆಟ ಆಡುವಾಗ ತಾಕತ್ತನ್ನ ಆಟದ ಕೋರ್ಟ್‌ನಲ್ಲಿ ತೋರಿಸ್ಬೇಕು, ಹೈ ಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಅಲ್ಲ.

ನೆಟ್ ಪಿಕ್ಸ್

ಖೇಮು ಮತ್ತು ಖೇಮುಶ್ರೀ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ತಿಂಗಳಲ್ಲಿ ಒಂದ್ ದಿನ ಸರಿ ಇದ್ರ, ಮುಂದೆ ಒಂದ್ ತಿಂಗಳು ಜಗಳ. ಕೊನೆಗೆ, ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಸರಿ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ ಡಿವೋರ್ಸ್‌ಗೆ ಅಪ್ಲೈ ಮಾಡೋದು ಅಂತ ತೀರ್ಮಾನ
ಮಾಡಿದ್ರು. ಹಂಗೇ ಮಾಡಿದ್ರು. ಒಬ್ಬರ ಮೇಲೊಬ್ಬರು, ಇಲ್ಲ ಸಲ್ಲದ ಆರೋಪ ಮಾಡಿ ಡಿವೋರ್ಸ್ ಕೇಳಿದ್ರು. ಕೋರ್ಟ್‌ನಲ್ಲಿ ಇವರ ಕೇಸು ಕೇಳುತ್ತಿದ್ದ ಜಡ್ಜ್ ತುಂಬಾ ಸಂಭಾವಿತರು. ಹಾಗಾಗಿ, ಗಂಡ ಹೆಂಡ್ತಿ ಅಂದ್ಮೇಲೆ ಇವೆಲ್ಲ ಸಹಜ ಅಂತ ಇಬ್ಬರಿಗೂ ಒಳ್ಳೆ ಮಾತಿನಲ್ಲಿ ಜತೆಯಾಗಿ ಬದುಕೋಕೆ ಸಲಹೆ ನೀಡಿದ್ರು. ಆದ್ರೆ, ನೋ ಯೂಸ್, ಖೇಮು, ಖೇಮುಶ್ರೀ ಇಬ್ರೂ ಸುತಾರಾಂ ಒಪ್ಪಲಿಲ್ಲ.

ಅವರು ಯಾರ ಮಾತನ್ನೂ ಕೇಳೋ ಸ್ಥಿತಿಯಲ್ಲಿ ಇರ್ಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ಜಡ್ಜ್ ಇವರಿಬ್ಬರಿಗೂ ಡೈವೋರ್ಸ್ ಕೊಡೋಕೆ ಅನುಮತಿ ಕೊಟ್ರು. ಈಗ ವಿಷಯ ಜೀವನಾಂಶಕ್ಕೆ ಬಂತು. ಖೇಮುಶ್ರೀ ‘ನಂಗೆ ತಿಂಗಳಿಗೆ ೨೦ ಸಾವಿರ ರೂಪಾಯಿ ಜೀವನಾಂಶ ಬೇಕು’ ಅಂತ ಪಟ್ಟು ಹಿಡಿದು ಕೂತಳು. ಖೇಮು ‘ನನ್ ಕೈಲಿ ಸಾಧ್ಯಾನೇ ಇಲ್ಲ’ ಅಂತ ಕೂತ. ಕೊನೆಗೆ ಖೇಮುನ ಒಟ್ಟಾರೆ ಇನ್ ಕಮ, ಖೇಮುಶ್ರೀಯ ಅವಶ್ಯಕತೆ ಎಲ್ಲವನ್ನೂ ಪರಿಶೀಲಿಸಿದ ಜಡ್ಜ್ ತೀರ್ಪು ಕೊಟ್ಟರು ಎಲ್ಲ ದಾಖಲೆಗಳನ್ನು ನೋಡಿ, ‘ಖೇಮುಶ್ರೀಯ ಪರಿಸ್ಥಿತಿಯನ್ನು ಗಮನಿಸಿ ಆಕೆಗೆ ಪ್ರತಿ ತಿಂಗಳು ೨೦ ಸಾವಿರ ರೂಪಾಯಿಗಳ ಜೀವನಾಂಶ ಕೊಡಬೇಕೆಂದು ನಾನು ತೀರ್ಮಾನ ಮಾಡಿದ್ದೇನೆ’ ಎಂದರು.

ಅದನ್ನು ಕೇಳಿದ ಖೇಮು Puಲ್ ಖುಷಿಯಾಗಿ ಹೇಳಿದ ‘ನಿಜ್ವಾಗ್ಲೂ ನಿಮ್ದು ಭಾಳಾ ದೊಡ್ ಮನಸು ಸಾಮಿ, ಸಾಧ್ಯ ಆದ್ರೆ ಅವಳಿಗೆ ನಾನೂ ಅವಾಗವಾಗ ಸ್ವಲ್ಪ ದುಡ್ ಕೊಡೋಕೆ ಟ್ರೈ ಮಾಡ್ತೀನಿ’

ಲೈನ್ ಮ್ಯಾನ್
? ಕರೋನಾ ಅನ್ನೋದೇ ಸುಳ್ಳು. ಇದು ಬರೀ ಮೆಡಿಕಲ್ ಮಾಫಿಯಾ.
-ಹೌದು. ಅನ್ಯಾಯವಾಗಿ ಅಸಿಡಿಟಿ ಬಂದು ಅಷ್ಟೊಂದ್ ಜನ ಸತ್ತೋದ್ರು.
? ಆ ಠಿqಯವರು ಸರಕಾರದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಭರ್ಜರಿ ಗಿಫ್ಟ್ ಅನ್ನೋ ಸುದ್ದಿ ಮಾಡುವಾಗ ಆಂಕರ್ ಯಾರಿರ್ತಾರೆ?
-ದಿವ್ಯ ವ ’santa’
?ಯಾವಾಗಲೂ ಕನ್ನಡದ ಹಳೆಯ ಇತಿಹಾಸದ ಬಗ್ಗೆನೇ ಯೋಚನೆ ಮಾಡುವವನು
-‘ಭೂತ’ ಕನ್ನಡಿಗ
?‘ವಲಯ’ ಮಟ್ಟದಲ್ಲಿ ಕನ್ನಡ ಬೆಳೆಸುವ ಕೆಲಸ ಮಾಡೋನು
-’ಬೂತ್’ ಕನ್ನಡಿಗ
? ಸುಳ್ಳು ನೆಪ ಹೇಳಿ ಆಫೀಸಿಗೆ ರಜಾ ಹಾಕುವವನು
-ಕೆಲಸಕ್ಕೆ ‘ಬಾರದವನು’
? ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವುದು
-ಕನಿಷ್ಠ ಪಕ್ಷ ಬೇರೆ ಮರವನ್ನೂ ಹುಡುಕಲಾಗದ ‘ಆಲ’ಸಿತನ
? ಡ್ಯಾಂಡ್ರಫ್ ವಿರುದ್ಧ ಹೋರಾಡುವವನು
-‘ಹೊಟ್ಟು’ ಹೋರಾಟಗಾರ
? ಸಂಕ್ರಾಂತಿ ಹಬ್ಬಕ್ಕೆ ರಾಜಕಾರಣಿಗಳಿಗೆ ಏನಂತ ವಿಶ್ ಮಾಡಬೇಕು?
– ಎಳ್ಳು ಬೆಲ್ಲ ತಿಂದು, ಸುಳ್ಳು ಹೇಳೋದ್ ಕಡಿಮೆ ಮಾಡಿ
? ರೌಡಿಸಂ ಸತ್ಯ
-ಮಗ ‘ತಲೆ ಎತ್ತಿಕೊಂಡು’ ಓಡಾಡೋ ರೌಡಿ ಆದ್ರೆ, ಅಪ್ಪ ಅಮ್ಮ ‘ತಲೆ ಎತ್ತಿಕೊಂಡು’ ಓಡಾಡೋಕಾಗಲ್ಲ
? ರೌಡಿಸಂನ ಭೂಗತ ಲೋಕ ಅಂತ ಯಾಕಂತಾರೆ?
-ಫೀಲ್ಡ ಗೆ ಇಳಿದ ದಿನನೇ ಮಣ್ಣಿಗೆ ಹೋಗೋದು ಫಿಕ್ಸ್ ಆಗಿರುತ್ತೆ. ಅದಕ್ಕೆ