Sunday, 15th December 2024

ನಮ್ಮಲ್ಲಿರುವುದನ್ನೆಲ್ಲಾ ಜಾರಿಗೊಳಿಸಿ ಬರಿದಾಗುತ್ತಾ ಇರಬೇಕು !

ಇದೇ ಅಂತರಂಗ ಸುದ್ದಿ

vbhat@me.com

ದುಬೈನಲ್ಲಿರುವ ಸ್ನೇಹಿತರಾದ ದೇವ್ ಗೌಡ ಅವರು ಇತ್ತೀಚೆಗೆ ನನಗೆ ಟಾಡ್ ಹೆನ್ರಿ ಬರೆದ ಒಂದು ಪುಸ್ತಕವನ್ನು ಕಳಿಸಿದ್ದರು. ಆ ಕೃತಿಯ ಹೆಸರು Die Empty. ನನಗೆ ಟಾಡ್ ಹೆನ್ರಿ ಇಷ್ಟದ ಲೇಖಕ.

The Accidental Creative: How to Be Brilliant at a Moment’s Notice, Louder Than Words: Harness the Power of Your Authentic Voice, The Motivation Code: Discover the Hidden Forces That Drive, Daily Creative: A Practical Guide for Staying Prolific, Brilliant, and Healthy ಮುಂತಾದ ಪುಸ್ತಕಗಳನ್ನು ನಾನು ಓದಿದ್ದೇನೆ. ಬದುಕಿನ ನೈಜ ಘಟನೆಗಳನ್ನು ನಿದರ್ಶನವಾಗಿ ನೀಡುವುದು ಆತನ ವೈಶಿಷ್ಟ್ಯ. ಹೀಗಾಗಿ ಆತನ ಕೃತಿಗಳನ್ನು ಓದಬೇಕೆನಿಸುತ್ತದೆ.

ಕೆಲ ದಿನಗಳ ಹಿಂದೆ ವಾಟ್ಸಾಪ್‌ನಲ್ಲಿ ಹೆನ್ರಿ ಬರೆದ Die Empty ಕೃತಿಯ ಬಗ್ಗೆ ಒಂದು ಪೋ ಬಂದಿದ್ದನ್ನು ಓದಿದ್ದೆ. ಆ ಕೃತಿ ಯನ್ನು ಓದಬೇಕೆನಿಸಿ ದಾಗಲೇ ದೇವ್ ಗೌಡ ಅವರು ಆ ಪುಸ್ತಕವನ್ನು ಕಳಿಸಿದ್ದು ಸಂತೋಷ ವಾಯಿತು. ಒಂದು ಬಿಜಿನೆಸ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದಾಗ, ಟಾಡ್ ಹೆನ್ರಿಗೆ ಈ ಪುಸ್ತಕವನ್ನು ಬರೆಯುವ ವಸ್ತು ಸಿಕ್ಕಿತಂತೆ.

‘ಈ ಜಗತ್ತಿನಲ್ಲಿ ಅತಿ ಶ್ರೀಮಂತವಾದ ಭೂಮಿ ಅಥವಾ ನೆಲ ಅಂದ್ರೆ ಯಾವುದು?’ ಎಂದು ಉಪನ್ಯಾಸಕಾರನೊಬ್ಬ ಪ್ರೇಕ್ಷಕ ರನ್ನು ಕೇಳಿದ. ಅದಕ್ಕೆ ಒಬ್ಬ ಎದ್ದು ನಿಂತು, ‘ತೈಲದ ಬಾವಿಗಳನ್ನು ಹೊಂದಿರುವ ಗಲ ದೇಶಗಳು’ ಎಂದ. ಮತ್ತೊಬ್ಬ ಎದ್ದು ನಿಂತು, ‘ವಜ್ರದ ನಿಕ್ಷೇಪಗಳು ಮತ್ತು ಗಣಿಗಳನ್ನು ಹೊಂದಿರುವ ಆಫ್ರಿಕಾ ಭೂಖಂಡ’ ಎಂದ.

ಇನ್ನೊಬ್ಬ, ‘ಬಂಗಾರದ ಗಣಿಗಳಿರುವ ದೇಶ’ ಎಂದ. ಹೀಗೆ ಒಬ್ಬೊಬ್ಬರು ಒಂದೊಂದು ದೇಶದ ಹೆಕ್ಸರನ್ನು ಹೇಳುತ್ತಿದ್ದರು.
ಕೊನೆಗೆ ಉಪನ್ಯಾಸಕ, ‘ನೀವು ಹೇಳಿದ ಉತ್ತರಗಳೆ ತಪ್ಪು. ಜಗತ್ತಿನ ಅತಿ ಶ್ರೀಮಂತ ನೆಲ ಯಾವುದೆಂದರೆ, ಸ್ಮಶಾನ. ಹಾಳು
ಸ್ಮಶಾನ ಹೇಗೆ ಶ್ರೀಮಂತ ನೆಲವಾಗಬಹುದು ಎಂದು ನಿಮಗೆ ಆಶ್ಚರ್ಯವಾಗಬಹುದಲ್ಲ?’ ಎಂದ. ಯಾರೂ ಮಾತಾಡಲಿಲ್ಲ.
ಇಡೀ ಸಭೆಯಲ್ಲಿ ಮೌನ. ಎಲ್ಲರೂ ಆತನ ಮುಂದಿನ ಮಾತುಗಳಿಗೆ ಕಾಯುತ್ತಿದ್ದರು.

ಉಪನ್ಯಾಸಕ ಮಾತು ಮುಂದುವರಿಸಿದ – ‘ಹೌದು, ಸ್ಮಶಾನದಷ್ಟು ಶ್ರೀಮಂತ ನೆಲ ವಜ್ರದ ಗಣಿಗಳಲ್ಲ, ತೈಲ ಬಾವಿಗಳಿರುವ ದೇಶವಲ್ಲ. ಸ್ಮಶಾನದಲ್ಲಿ ಲಕ್ಷಾಂತರ ಮೃತ ದೇಹಗಳನ್ನು ಹೂಳಲಾಗಿದೆ. ಅವರ ತಲೆಯಲ್ಲಿ ಅಮೂಲ್ಯವಾದ ಯೋಚನೆ ಗಳಿದ್ದವು. ಅವೆಲ್ಲವನ್ನೂ ಅವರಿಗೆ ಜಾರಿಗೊಳಿಸಲು ಸಾಧ್ಯವಾಗಲಿಲ್ಲ. ಅವುಗಳಲ್ಲಿ ಎಷ್ಟೋ ಯೋಚನೆಗಳು ಬೆಳಕಿಗೆ ಬರಲೇ ಇಲ್ಲ. ಅವರ ಯೋಚನೆಗಳೆಲ್ಲ ಸ್ಮಶಾನದಲ್ಲಿ ಮಣ್ಣು ಮಾಡಲಾಗಿದೆ.

ಹೀಗೆ ಮಣ್ಣುಪಾಲಾದ ಒಬ್ಬೊಬ್ಬರ ಒಂದೊಂದು ಐಡಿಯಾವನ್ನು ಜಾರಿಗೊಳಿಸಿದ್ದೇ ಆದಲ್ಲಿ, ಈ ಜಗತ್ತು ಇನ್ನೂ ಶ್ರೀಮಂತವಾ ಗಿರುತ್ತಿತ್ತು. ಆದರೆ ಅವೆ ಸ್ಮಶಾನದ ಬಿದ್ದಿವೆ. ಹೀಗಾಗಿ ಸ್ಮಶಾನದಂಥ ಶ್ರೀಮಂತ ಮತ್ತು ಬೆಲೆ ಬಾಳುವ ತಾಣ ಭೂಮಿಯ ಮೇಲೆ ಇರಲು ಸಾಧ್ಯವೇ ಇಲ್ಲ’.

ಹೆನ್ರಿ ಹೇಳುತ್ತಾನೆ – ‘ನಿಮ್ಮ ತಲೆಯಲ್ಲಿ ಅದ್ಭುತ ಐಡಿಯಾಗಳನ್ನು ಇಟ್ಟುಕೊಂಡು ಸ್ಮಶಾನಕ್ಕೆ ಹೋಗಬೇಡಿ. ನೀವು ಬದುಕಿ ದ್ದಾಗಲೇ ನೀವು ಅಂದುಕೊಂಡಿರುವುದನ್ನೆಲ್ಲ ಬರಿದು ಮಾಡಿಬಿಡಿ. ನಿಮ್ಮ ಆಲೋಚನೆಗಳನ್ನೆಲ್ಲ ಖಾಲಿ ಮಾಡಿಬಿಡಿ. ನೀವು ಯಾವುದನ್ನು ಉಳಿಸಿರುತ್ತೀರೋ, ಅವೆಲ್ಲ ವ್ಯರ್ಥ, ನಿರರ್ಥಕ. ಆದ್ದರಿಂದ Die empty.’ ಕೊನೆಯಲ್ಲಿ ಹೆನ್ರಿ ಹೇಳುತ್ತಾನೆ – ‘ನಿಮ್ಮಲ್ಲಿ ಐಡಿಯಾಗಳಿದ್ದರೆ, ಅವನ್ನು ಅನುಷ್ಠಾನಗೊಳಿಸಿ. ನಿಮ್ಮಲ್ಲಿ eನಗಳಿದ್ದರೆ, ಅದನ್ನು ಬೇರೆಯವರಿಗೆ ಹಂಚಿ. ನಿಮ್ಮಲಿ ಅದ್ಭುತ ಸಾಧನೆ ಮಾಡುವ ಸಂಕಲ್ಪವಿದ್ದರೆ, ಅವನ್ನು ಜಾರಿಗೊಳಿಸಿ. ನಿಮ್ಮಲ್ಲಿ ಏನಿದೆಯೋ, ಸಾಯುವ ಮುನ್ನ ಅವನ್ನು ನಿಮ್ಮಲ್ಲಿ ಇಟ್ಟುಕೊಳ್ಳಬೇಡಿ.’

ಪಿ.ಸುಶೀಲ ಹಾಡು ಹೊರಗಡೆ ಧಾರಾಕಾರ ಮಳೆ. ಎಡೆ ಹಸುರು ಹೊದ್ದ ಪ್ರಕೃತಿ. ನನ್ನ ಥಾರ್ ಜೀಪಿನ ಮ್ಯೂಸಿಕ್ ಸಿಸ್ಟಮ್ ನಲ್ಲಿ ಪಿ.ಸುಶೀಲ ಎಂದೇ ಪ್ರಸಿದ್ಧರಾದ ಪುಲಪಾಕ ಸುಶೀಲ ಹಾಡಿದ ಹಳೆ ಚಲನಚಿತ್ರ ಗೀತೆಗಳು. ಒಂದಕ್ಕಿಂತ ಮತ್ತೊಂದು ಮಧುರವಾದ ಹಾಡುಗಳು. ‘ರತ್ನಗಿರಿ ರಹಸ್ಯ’ ಚಿತ್ರದ ‘ಅಮರಾ ಮಧುರಾ ಪ್ರೇಮ, ಬಾ ಬೇಗ ಚಂದಮಾಮ’ ಹಾಡನ್ನು (ಟಿ.ಜಿ.ಲಿಂಗಪ್ಪ ಸಂಗೀತ, ಕಣಗಾಲ್ ಪ್ರಭಾಕರ ಶಾಸ್ತ್ರೀ ಗೀತರಚನೆ) ಮತ್ತೆ ಮತ್ತೆ ಕೇಳುತ್ತಿದ್ದೆ.

ಪಿ.ಸುಶೀಲ ಅವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟ ಹಾಡಿದು. ಬಿ.ಆರ್.ಪಂತುಲು ಅವರೇ ನಿರ್ಮಿಸಿದ, ನಿರ್ದೇಶಿಸಿದ, ನಟಿಸಿದ ಚಿತ್ರವಿದು. ನಾನು ಚಿಕ್ಕವನಾಗಿದ್ದಾಗ, ‘ರತ್ನಗಿರಿ ರಹಸ್ಯ’ ನೋಡಿz. ಆದರೆ ನನಗೆ ಆ ಚಿತ್ರದ ವಿವರಗಳು ಮರೆತು ಹೋಗಿದ್ದವು. ಕರೋನಾ ಕಾಲದಲ್ಲಿ ಈ ಚಿತ್ರವನ್ನು ನಾನು ಮತ್ತೊಮ್ಮೆ ನೋಡಿ ಆನಂದಿಸಿದ್ದೆ. ಈ ಚಿತ್ರವನ್ನು ನೆನಪಿಸಿಕೊಂಡಾಗಲೆ ನನಗೆ ‘ಅಮರಾ ಮಧುರಾ ಪ್ರೇಮ, ಬಾ ಬೇಗ ಚಂದಮಾಮ’ ಹಾಡು ಮತ್ತು ಉದಯಕುಮಾರ್ ಮತ್ತು ಜಮುನಾ ಅವರ ಮುಖಗಳೇ ಕಣ್ಮುಂದೆ ಬರುತ್ತದೆ.

ಪಿ.ಸುಶೀಲ ಅವರು ಹಾಡಿದ ‘ಚೆಲುವಾಂತ ಚೆನ್ನಿಗನೇ ನಲಿದಾಡು ಬಾ’ (ಅಮರಶಿಲ್ಪಿ ಜಕಣಾಚಾರಿ), ‘ವಿರಹಾ ನೂರು
ನೂರು ತರಹಾ’ (ಎಡಕಲ್ಲು ಗುಡ್ಡದ ಮೇಲೆ), ‘ಹೂವು ಚೆಲುವೆಲ್ಲ ನಂದೆಂದಿತು’ (ಹಣ್ಣೆಲೆ ಚಿಗುರಿದಾಗ), ‘ಬೆಳ್ಳಿಮೋಡದ ಆಚೆಯಿಂದ’ (ಬೆಳ್ಳಿಮೋಡ), ‘ಬಿಳಿಗಿರಿ ರಂಗಯ್ಯಾ, ನೀನೇ ಕೇಳಯ್ಯಾ’ (ಶರಪಂಜರ), ‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ’ (ಬಂಗಾರದ ಹೂವು), ‘ಓ ನಲ್ಲನೆ ಸವಿ ಮಾತೊಂದ ನುಡಿವೆಯಾ ನಾನೇನಲು ನುಡಿಯಲೆ ನ ತಿಳಿಸೆಯಾ’ (ಸಹೋದರರ ಸವಾಲ), ‘ಎಲ್ಲೇ ಇರು ಹೇಗೇ ಇರು’ (ಕಸ್ತೂರಿ ನಿವಾಸ), ‘ತುಟಿಯ ಮೇಲೆ ತುಂಟ ಕಿರುನಗೆ’ (ಮನ ಮೆಚ್ಚಿದ ಮಡದಿ) … ಮುಂತಾದ ಹಾಡುಗಳನ್ನು ಕೇಳುವಾಗ ನಾನು ಅಕ್ಷರಶಃ ನನ್ನ ಯವ್ವನಕ್ಕೆ ಜಾರಿದ್ದೆ.

ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡುಗಳಿವು. ಪ್ರತಿ ಹಾಡು ಒಂದಿಂದು ನೆನಪಿಗೆ, ಘಟನೆಗೆ, ಪ್ರಸಂಗಕ್ಕೆ connect ಆಗುತ್ತಿದ್ದವು. ಪಿ.ಸುಶೀಲ ಮೂಲತಃ ಆಂಧ್ರಪ್ರದೇಶದ ವಿಜಯನಗರಂ ದವರು. ಅವರು ಓದಿದ್ದು ಎಂಟನೇ ತರಗತಿವರೆಗೆ ಮಾತ್ರ. 1950ರ ಆರಂಭದಲ್ಲಿ ಅವರು ಹಿನ್ನೆಲೆ ಗಾಯನ ಆರಂಭಿಸಿದರು. ಮುಂದಿನ ಆರು ದಶಕಗಳ ಕಾಲ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆ ಸೇರಿದಂತೆ, ಭಾರತದ ಹನ್ನೆರಡು ಭಾಷೆಗಳಲ್ಲಿ ಅವರು ಸುಮಾರು ಹದಿನೆಂಟು ಸಾವಿರ ಹಾಡುಗಳನ್ನು ಹಾಡಿದ್ದಾರೆ. ಅವರ ಕಂಠಸಿರಿ ಅಮರತ್ವವನ್ನು ಪಡೆದಿದೆ.

ಅವರ ಹೆಸರು ಗಿನ್ನೆಸ್ ದಾಖಲೆ ಪುಸ್ತಕವನ್ನು ಸೇರಿದೆ. ಪದ್ಮಭೂಷಣ ಸೇರಿದಂತೆ, ಅವರಿಗೆ ಹದಿನಾರು ರಾಷ್ಟ್ರ ಪ್ರಶಸ್ತಿಗಳು
ಪ್ರಾಪ್ತವಾಗಿವೆ. ಘಂಟಸಾಲ, ಪಿ.ಬಿ.ಶ್ರೀನಿವಾಸ, ಡಾ. ರಾಜಕುಮಾರ, ಎಸ್.ಪಿ.ಬಾಲಸುಬ್ರಮಣ್ಯಂ, ಜೇಸುದಾಸ್ ಸೇರಿದಂತೆ ಕನ್ನಡದಲ್ಲಿ ಐದು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿzರೆ.

ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡುಗಳು.. ಅವರು ನಮ್ಮ ಕನ್ನಡವರೇ ಎಂಬ ಆಪ್ತ ಭಾವ.. ಈ ಸಲದ
ಪ್ರಯಾಣದಲ್ಲಿ ನಾಲ್ಕು ದಿನ ನನ್ನೊಂದಿಗೆ ಪಿ.ಸುಶೀಲ ಹಾಡುಗಳು, ಹಾದಿಯನ್ನು ಸುಗಮಗೊಳಿಸಿದ್ದು ಸುಳ್ಳಲ್ಲ.

ಕೊನೆಯ ಕೃತಿ 
ಇತ್ತೀಚೆಗೆ ನ್ಯೂಯಾರ್ಕರ್ ಮ್ಯಾಗಜಿನ್ ರಷ್ಯಾದ ಪ್ರಸಿದ್ಧ ನಾಟಕಕಾರ ಮತ್ತು ಕಥೆಗಾರ ಅಂಟೋನ್ ಚೆಕೋವ್ ಕುರಿತು
ಪ್ರಕಟಿಸಿದ ದೀರ್ಘ ಲೇಖನವೊಂದನ್ನು ಓದುತ್ತಿz. ಇಂದಿಗೂ ‘ಸಾಹಿತ್ಯದಲ್ಲಿ ಶ್ರೇಷ್ಠತೆ ಸಾಧಿಸಿದವರು’ ಪಟ್ಟಿಯಲ್ಲಿ ಚೆಕೋವ್
ಸ್ಥಾನ ಪಡೆಯುತ್ತಾನೆ. ಆತ ಬದುಕಿದ್ದು ಕೇವಲ ನಲವತ್ನಾಲ್ಕು ವರ್ಷ. ಆತ ನಿಧನನಾಗಿಯೇ ನೂರಾ ಹದಿನೆಂಟು ವರ್ಷಗ ಳಾದವು. ಆತನ ಕೆಲವು ಸಣ್ಣಕತೆಗಳು ಇಂದಿಗೂ ಶ್ರೇಷ್ಠ ಕೃತಿ ಎಂದು ಕರೆಯಿಸಿಕೊಂಡಿವೆ. ಆತನ ನಾಲ್ಕು ನಾಟಕಗಳಿಗ ‘ಕ್ಲಾಸಿಕ್’ ಪಟ್ಟ ಸಿಕ್ಕಿದೆ.

ಹಾಗಂತ ಚೆಕೋವ್‌ಗೆ ಬರಹ ಪ್ರವೃತ್ತಿಯಾಗಿತ್ತು. ಆತ ಮೂಲತಃ ವೈದ್ಯನಾಗಿದ್ದ. Medicine is my lawful wife
and literature is my mistress. (ವೈದ್ಯಕೀಯ ಕ್ಷೇತ್ರವೆನ್ನುವುದು ನನ್ನ ಅಧಿಕೃತ ಪತ್ನಿ ಮತ್ತು ಸಾಹಿತ್ಯ ನನ್ನ
ಪ್ರೇಯಸಿ) ಎಂದು ಆತ ಹೇಳುತ್ತಿದ್ದ. ಆತ ಆರಂಭದಲ್ಲಿ ಹಣಕ್ಕಾಗಿ ಬರೆಯುತ್ತಿದ್ದ. ನಂತರ ಅವನ ಕೃತಿಯಲ್ಲಿನ ಸಾಹಿತ್ಯ
ಶ್ರೇಷ್ಠತೆಯನ್ನು ವಿಮರ್ಶಕರು ಗುರುತಿಸಿದಾಗ, ಆತ ತನ್ನ ಬರಹದ ಗತಿಯನ್ನು ಬದಲಿಸಿದ. ಆದರೆ ಆತ ಅಪ್ರಜ್ಞಾ ಪೂರ್ವಕವಾಗಿ ಬರೆದ ಆರಂಭಿಕ ಕೃತಿಗಳೇ ಹೆಚ್ಚು ಮೌಲಿಕವಾದವು ಎಂಬುದನ್ನು ಇಂದಿಗೂ ಪರಿಗಣಿಸಲಾಗುತ್ತದೆ.

ಚೆಕೋವ್ ಬರೆದ ಕಟ್ಟ ಕಡೆಯ ಸಾಲೆಂದರೆ, It’s been a long time since I’ve had champagne. 1904ರಲ್ಲಿ ಚೆಕೋವ್ ಜರ್ಮನಿಯಲ್ಲಿ ನಿಧನನಾದ. ಆತನ ಮೃತದೇಹವನ್ನು ಮಾಸ್ಕೋದಿಂದ ರೆಫ್ರಿಜರೇಟರ್ಡ್ ರೈಲ್‌ಕಾರ್‌ನಲ್ಲಿ ತರಲಾಯಿತು. ಆತನ ಪಾರ್ಥಿವ ಶರೀರವಿರುವ ಪೆಟ್ಟಿಗೆಯ ಮೇಲೆ Fresh Oysters ಎಂದು ಬರೆದಿತ್ತಂತೆ! ಅಂದ ಹಾಗೆ, The Oysters ಚೆಕೋವ್ ಬರೆದ ಕೊನೆಯ ಕೃತಿ!

ಪತ್ರಿಕಾ ವಿನ್ಯಾಸಕಾರ
ಒಬ್ಬ ಸಂಪಾದಕನ ಯಶಸ್ಸಿಗೆ ಒಳ್ಳೆಯ, ಪಕ್ಕಾ ಕಸುಬಿಗಳಂತೆ, ವೃತ್ತಿನಿಷ್ಠ ಪತ್ರಕರ್ತರಂತೆ, ಒಳ್ಳೆಯ ಡಿಸೈನರ್‌ಗಳು ಬೇಕು.
ಪತ್ರಿಕೆಗೆ ಮಾಂತ್ರಿಕ ಸ್ಪರ್ಶ ನೀಡುವ ಸೊಬಗುಗಾರರು ಬೇಕು. ಪತ್ರಿಕೆಯನ್ನು ಯಾವತ್ತೂ ಸುಂದರ ನೆನಪಾಗಿಸುವ
ಕನಸುಗಾರರು ಬೇಕು. ಕನಸನ್ನು ಮಾರಾಟ ಮಾಡುವ ಸಗಟುದಾರರು ಬೇಕು. ಅವೆಲ್ಲವುಗಳನ್ನು ಪಳಗಿದ ವಿನ್ಯಾಸಕಾರ
ಮಾಡಬಲ್ಲ. ‘ನೋಟವೇ ಪತ್ರಿಕೆಯ ಮಾಟ’ ಎಂದು ಸಂಪಾದಕನನ್ನು ನಂಬಿಸುವ, ಆತನ ಮನಪರಿವರ್ತನೆ ಮಾಡುವ ಪಾಂಗಿತ ಡಿಸೈನರ್ ಮಾಡಬಲ್ಲ. ಆತ ಸಿನಿಮಾ ನಿರ್ದೇಶಕನಿಗೆ ಆರ್ಟ್ ಡೈರೆಕ್ಟರ್ ಇದ್ದಂತೆ. ನಿರ್ದೇಶಕನ ಕಲ್ಪನೆಗಳನ್ನು ಇನ್ನಷ್ಟು ಅರಳಿಸಿ, ಕೊನೆಯಲ್ಲಿ ಅವನಲ್ಲಿಯೇ ಬೆರಗು ಮೂಡಿಸುವ ಚೆಲುವನಾತ.

ಡಿಸೈನ್‌ಗಳಿಂದ ಆಕರ್ಷಿತವಾಗಿ ಗೆದ್ದ ಎಲ್ಲ ಪತ್ರಿಕೆಗಳ ಸಂಪಾದಕರ ಕೋಟಿನೊಳಗೆ ಇಂಥ ಒಬ್ಬ ವಿನ್ಯಾಸಕಾರ ಇದ್ದೇ
ಇರುತ್ತಾನೆ. ಖ್ಯಾತ ಸಂಪಾದಕ ವಿನೋದ ಮೆಹತಾ ಜತೆ ಮೊಯುದ್ದೀನ್ ಇದ್ದ. ಮೆಹತಾ ಯಾವುದೇ ಪತ್ರಿಕೆ ಅಥವಾ
ಮ್ಯಾಗಜಿನ್‌ಗೆ ಹೋಗಲಿ, ಮೊಯುದ್ದೀನ್ ಅವರನ್ನು ಜತೆಯ ಕರೆದುಕೊಂಡು ಹೋಗುತ್ತಿದ್ದರು. ಮೊಯುದ್ದೀನ್ ಗೆ ಕಿವಿ ಕೇಳುತ್ತಿರಲಿಲ್ಲ. ಆದರೆ ಆತನಿಗೆ ಅದ್ಭುತ ಕಣ್ಣುಗಳು (ಸೌಂದರ್ಯ ದೃಷ್ಟಿ) ಇದ್ದವು. ಆತನ ಕಣ್ಣುಗಳ ಮೂಲಕವೇ ಮೆಹತಾ ಪತ್ರಿಕೆಯನ್ನು ರೂಪಿಸಿದರು. ತಮ್ಮ ಯಶಸ್ಸಿನಲ್ಲಿ ಒಂದಷ್ಟು ಪಾಲನ್ನು ಅವರು ಮೊಯುದ್ದೀನ್‌ಗೆ ನೀಡಿದ್ದಾರೆ.

ಇದು ವಿನ್ಯಾಸಕಾರರ ಸುವರ್ಣಯುಗ. ಕಂಪ್ಯೂಟರ್ ತಂತ್ರಜ್ಞಾನ, ಮುದ್ರಣ ತಂತ್ರಜ್ಞಾನದದ ಸ್ಫೋಗಳಿಂದ ಹೊಸ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ಅಮೆರಿಕದ ಪತ್ರಿಕೆಯ ಓದುಗನ ಮುಂದೆ, ಶಿರಸಿಯ, ಜಮಖಂಡಿಯ ಓದುಗ ಯಾವ ಪಾಪ ಮಾಡಿzನೆ? ಆತ ಓದುವ ಪತ್ರಿಕೆಯ ವೈಶಿಷ್ಟ್ಯಗಳನ್ನೆಲ್ಲ ಇವನಿಗೂ ನೀಡುವುದು ಸಾಧ್ಯವಿದೆ. ಒಂದು ಪತ್ರಿಕೆ ಸುದ್ದಿಯ ಜತೆಗೆ ಮಾತಾಡುವಂತೆ, ವಿನ್ಯಾಸದಂಥ ಕಾರಣದಿಂದ ಪತ್ರಿಕೆಯೇ ಸುದ್ದಿಯಾಗುವುದು ಸಾಧ್ಯವಿದೆ. ಆಗ ಓದುಗನಿಗೆ ಪತ್ರಿಕೆಗಳ ಓದು ಒಂದು ಅನುಪಮ, ಅನೂಹ್ಯ ಅನುಭವ ನೀಡುವುದು ಸಾಧ್ಯವಿದೆ.

ಈ ಕಾರಣಗಳಿಂದ ನನಗೆ ಕ್ಯೂಬಾ ಮೂಲದ ಅಮೆರಿಕನ್ ಡಿಸೈನರ್ ಮಾರಿಯೋ ಗಾರ್ಸಿಯ ಇಷ್ಟವಾಗುತ್ತಾನೆ. ಜಗತ್ತಿನ
ಸುಮಾರು ಏಳು ನೂರು ಪತ್ರಿಕೆಗಳು, ನಿಯತಕಾಲಿಕಗಳ ಜತೆ ಒಂದಿಂದು ರೀತಿಯಲ್ಲಿ ಸಂಬಂಧ ಇಟ್ಟುಕೊಂಡ ಲೋಕ ವಿಖ್ಯಾತ ವಿನ್ಯಾಸಕಾರನೀತ. ದಿ ವಾಲ್ ಸ್ಟ್ರೀಟ್ ಜರ್ನಲ್, ವಾಷಿಂಗ್ಟನ್ ಪೋ, ಮಿಯಾಮಿ ಹೆರಾಲ್ಡ್, ಗಲ್ಫ್ ನ್ಯೂಸ್, ಪ್ಯಾರಿಸ್ ಮ್ಯಾಚ್, ನಾರ್ವೆಯ ಆಫನ್ ಪೋಸ್ಟನ್, ಡೈ ಜಿಯ್ಟ, ಭಾರತದ ದಿ ಹಿಂದೂ, ಮಲಯಾಳಂ ಮನೋರಮಾ, ತೆಲುಗಿನ ಸಾಕ್ಷಿ ಪತ್ರಿಕೆಗಳನ್ನೆ ರೀಡಿಸೈನ್ ಮಾಡಿದವ. ಇಂದು ಮಾರಿಯೋ ಗಾರ್ಸಿಯ ಡಿಸೈನ್ ಮಾಡಿದ ಪತ್ರಿಕೆಯೆಂದರೆ
ಅದರ ತೂಕ, ಕಿಮ್ಮತ್ತೇ ಬೇರೆ.

ಅಪ್ಪ – ಮಗನ ಯೋಚನೆ
ನನಗೆ ಮಾಡಲು ವಿಪರೀತ ಕೆಲಸಗಳಿದ್ದವು. ಸಾಲು, ಸಾಲು ಮೀಟಿಂಗುಗಳಿದ್ದವು. ಮೂರು ದಿನ ಬಿಟ್ಟು ವಿದೇಶ ಪ್ರಯಾಣಕ್ಕೆ
ಅಣಿಯಾಗಬೇಕಿತ್ತು. ಸೆಕ್ರೆಟರಿಗೆ ಮಾಡಬೇಕಾದ ಕೆಲಸಗಳ ಬಗ್ಗೆ ಡಿಕ್ಟೇಷನ್ ಕೊಡಬೇಕಿತ್ತು. ಹತ್ತಾರು -ನ್ ಕರೆಗಳನ್ನು
ಮಾಡಬೇಕಿತ್ತು. ಆದರೂ ಮಗನ ಒತ್ತಡ, ಒತ್ತಾಯ ತಾಳಲಾರದೇ ನಾನು ಒಂದು ದಿನ ರಜಾ ಹಾಕಿದೆ.

ನಾವಿಬ್ಬರೇ ಕಾರಿನಲ್ಲಿ ಡ್ರೈವ್ ಹೋಗಲು ನಿರ್ಧರಿಸಿದೆವು. ಮಗ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದ. ನನಗೆ ಡೆಡ್ ಲೈನ್,
ಮೀಟಿಂಗ್, -ನ್ ಕಾಲ, ಪ್ರೆಸೆಂಟೇಷನ್,… ಅವುಗಳ ಮೇಲೆಯೇ ಲಕ್ಷ್ಯ. ನಾವಿಬ್ಬರೂ ಅಂದು ಬ್ಯಾಡ್ಮಿಂಟನ್, ವಾಲಿಬಾಲ್ ಆಡಿದೆವು. ಮೀನು ಹಿಡಿದೆವು. ಪಕ್ಷಿಗಳ ಫೋಟೋ ತೆಗೆದೆವು. ಕೆರೆಯಲ್ಲಿ ಈಜಿದೆವು. ಜೋಕಾಲಿಯಲ್ಲಿ ಜೀಕಿದೆವು. ಹಾಡು ಕೇಳಿದೆವು. ಒಳ್ಳೆಯ ರೆಸ್ಟೋರೆಂಟಿನಲ್ಲಿ ಊಟ ಮಾಡಿದೆವು. ಆ ದಿನ ವಿಭಿನ್ನವಾಗಿ ಕಳೆದೆವು. ಆ ದಿನವನ್ನು ಹೇಗೆ ಕಳೆದೆವು ಎಂಬುದನ್ನು ನಾನು ನನ್ನ ಡೈರಿಯಲ್ಲಿ ಬರೆದಿಟ್ಟಿದ್ದೆ. ನನ್ನ ಮಗನೂ ಆ ದಿನದ ಅನುಭವವನ್ನು ಬರೆದಿಡಬಹುದು ಎಂದು ಅಂದುಕೊಂಡಿರಲಿಲ್ಲ.

ಬಹಳ ವರ್ಷಗಳ ನಂತರ, ಆ ಎರಡೂ ಡೈರಿಗಳನ್ನು ನನ್ನ ಹೆಂಡತಿ ತಂದು ತೋರಿಸಿದಳು. ನಾನು ಬರೆದಿಟ್ಟಿದ್ದು ಮರೆತು ಹೋಗಿತ್ತು. ನಾನು ಬರೆದಿದ್ದೆ – ‘ಮಗನ ಜತೆ ಸುತ್ತಲು ಹೋಗಿದ್ದೆ. ಇಡೀ ದಿನ ನಿಷ್ಪ್ರಯೋಜಕವಾಗಿ ಕಳೆದಿದ್ದಕ್ಕೆ ವ್ಯಥೆಯಾ ಯಿತು’ ಮಗ ತನ್ನ ಡೈರಿಯಲ್ಲಿ ಬರೆದಿದ್ದ – ‘ಇಡೀ ದಿನವನ್ನು ಅಪ್ಪನ ಜತೆ ಕಳೆದೆ. ಅಪ್ಪ ಎಂಥ ಅದ್ಭುತ, ಆಪ್ತ ವ್ಯಕ್ತಿ. ಆತ ನಿಜಕ್ಕೂ ಗ್ರೇಟ್. ನನಗಾಗಿ ಟೈಮ್ ಮಾಡಿಕೊಂಡ. ಇಂದು ನನ್ನ ಜೀವನದ ಸ್ಮರಣೀಯ ದಿನ’

ಸತ್ತರೂ ಬದುಕಿದ್ದಾರೆ!

ಒಮ್ಮೆ ಲಾರ್ಡ್ ಆಲ್ರೆಡ್ ಟೆನ್ನಿಸನ್, ಇಂಗ್ಲಿಷಿನ ಅತ್ಯಂತ ಮಹತ್ವದ, ರೋಮ್ಯಾಂಟಿಕ್ ಕಾಲದ ಪ್ರತಿಷ್ಠಿತ ಕವಿ ಲಾರ್ಡ್
ಬೈರನ್ ಬಗ್ಗೆ ಒಂದು ಮಾತನ್ನು ಹೇಳಿದ್ದರು – ಲಾರ್ಡ್ ಬೈರನ್ ಅವರು ನಿಧನರಾದಾಗ, ನನಗೆ ಹದಿನಾಲ್ಕು ವರ್ಷ. ಇದು ನನಗೆ ಭಯಂಕರ ವಿಪತ್ತಿನಂತೆ ಗೋಚರಿಸಿತು. ನನಗೆ ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ನಾನು ಅತ್ತಿಂದಿತ್ತ,
ಇತ್ತಿಂದತ್ತ ಅಲೆದಾಡುತ್ತಿದ್ದೆ. ಹುಚ್ಚನಂತೆ ತಿರುಗುತ್ತಿದ್ದೆ. ಊಟ-ಆಹಾರ ಸೇರುತ್ತಿರಲಿಲ್ಲ. ನಾನು ಜೋರಾಗಿ ಕೂಗುತ್ತಿದ್ದೆ.
ಆದರೂ ಲಾರ್ಡ್ ಬೈರನ್ ಸತ್ತಿದ್ದಾನೆ ಎಂದು ನಂಬಿಕೆ ಬರಲಿಲ್ಲ.

ನಂತರ ಕಲ್ಲಿನ ಮೇಲೆ BYRON IS DEAD ಎಂದು ಕೆತ್ತಿದೆ. ನಂತರ, ಅವರು ಸತ್ತಿರಬಹುದು ಎಂದು ನನ್ನನ್ನೇ ನಾನೇ
ನಂಬಿಸಿಕೊಳ್ಳಲು ಪ್ರಯತ್ನಿಸಿದೆ. ಅದಾದ ಬಳಿಕ ಲಾರ್ಡ್ ಬೈರನ್ ಕೃತಿಗಳನ್ನು ಹೆಚ್ಚು ಹೆಚ್ಚು ಓದಲಾರಂಭಿಸಿದೆ. ಆಗ
ದೃಢವಾಯಿತು, ಲಾರ್ಡ್ ಬೈರನ್ (BYRON IS NOT DEAD) ಸತ್ತಿಲ್ಲ ಎಂದು. ನಾನು ಸಾಯುವ ತನಕವೂ ಅವರು
ನನ್ನಲ್ಲಿ ಬದುಕಿದ್ದರು.