ಡಾ.ಕರವೀರಪ್ರಭು ಕ್ಯಾಲಕೊಂಡ
ಕರೊನಾ ಭಯದೊಂದಿಗೆ 2020ನೇ ವರ್ಷ ಆರಂಭಗೊಳ್ಳುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ. 2019 ಕೋವಿಡ್ -19 ಜನಿಸಿದ ವರ್ಷ.
ಅಲ್ಲಿಂದ ಸತತ ಇದೀಗ ಮೂರನೇ ವರ್ಷ ಕರೋನಾ ಕರಿನೆರಳಲ್ಲಿ ಬದುಕಲಾರಂಭಿಸಿ.
ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ 2021ರ ಅಂತ್ಯದವರೆಗೆ ಕೋವಿಡ್ ಸೋಂಕಿತರ ಸಂಖ್ಯೆ 29 ಕೋಟಿಯಾದರೆ ಮೃತ ರಾದವರ ಸಂಖ್ಯೆ ಸುಮಾರು 54 ಲಕ್ಷ. ‘ದಿ ಎಕೋನಮಿಸ್ಟ್’ ನ ಸ್ವತಂತ್ರ ಸಮೀಕ್ಷೆಯ ಪ್ರಕಾರ ವಿಶ್ವದಾದ್ಯಂತ ಸೋಂಕಿನಿಂದ ಸತ್ತವರು ಸುಮಾರು 1 ಕೋಟಿ 12 ಲಕ್ಷದಿಂದ 1ಕೋಟಿ 80ಲಕ್ಷ ಇರಬಹುದೆಂದು ಅಂದಾಜು ಮಾಡಿದೆ. 2021ರ ಸಾವಿನ ಸಂಖ್ಯೆ 2020ರ ಸಾವಿನ ಸಂಖ್ಯೆಯನ್ನು ಮೀರಿಸಿದೆ ಎಂಬುದನ್ನು ಗಮನಿಸಿದಾಗ ಸರಕಾರಗಳ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತದೆ.
ಕೋವಿಡ್ ಭಾರತಕ್ಕೆ ಕಾಲಿಡುವುದು ಹೊತ್ತಿನಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹೀನಾಯ ಘಟ್ಟ ತಲುಪಿತ್ತು ಎಂಬುದು ಹಲವಾರು ಆರ್ಥಿಕ ತಜ್ಞರ ಅಭಿಪ್ರಾಯ. ಲಾಕ್‌ಡೌನ್‌ನಿಂದಾಗಿ ಇದು ಮತ್ತಷ್ಟು ಬಿಗಡಾಯಿಸಿತ್ತು. ಆರೋಗ್ಯವೊಂದೇ ಅಲ್ಲ… ಜೀವ, ಜೀವನ, ಬಂಧ, ಅನುಬಂಧ, ಉದ್ಯೋಗ ಅವ್ಯವಸ್ಥೆ ಒಂದೇ ಎರಡೇ… ಹತ್ತಾರು ಸಮಸ್ಯೆ, ಸಂಕಟ, ಹಸಿವು, ನಿರುದ್ಯೋಗದ ಭಯಾನಕ ವಾತಾವರಣ ತಲೆದೋರಿ ಬದುಕು ಜರ್ಜರಿತ ಗೊಳಿಸಿತು. ಈಗ ಎಲ್ಲರ ಬಯಕೆ ಒಂದೇ; ಕರೊನಾ ವೈರಸ್ ನಮ್ಮಿಂದ ತೊಲಗಿದಾಗಲೇ ಮನಃಶ್ಶಾಂತಿ. ನಿಜವಾಗಿಯೂ ಇದು ಸಾಧ್ಯವೇ? ಯಾವಾಗ ? ಇದು ನಮ್ಮೆಲ್ಲರ ಯಕ್ಷ ಪ್ರಶ್ನೆ.
ಇದಕ್ಕೆ ಪರಿಹಾರ ನಮ್ಮಲ್ಲಿಯೇ ಇದೆ. Keep safe distance for Covid resistance, clean hands and face mask Corona will leav before you ask ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವಿeನಿಗಳ ಮಾತು ನೂರಕ್ಕೆ ನೂರು ಸತ್ಯ.
೧. ನಿಮ್ಮೊಳಗಿನ ಭಯ ತಗ್ಗಿಸಿಕೊಳ್ಳಿ ಜನರು ಭಯ ಜಯಿಸಿದಾಗ ಕರೊನಾವನ್ನು ಜಯಿಸಿದಂತೆ! ಭಯ ಪಡುತ್ತಿರುವಾಗ ಸರಿಯಾದ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗದು. ಸಾರ್ಸ- ಕೋವಿ 2 ಇನ್ನೂ ಹತ್ತು ವರ್ಷ ನಮ್ಮೊಂದಿಗೆ ಇರುತ್ತದೆಂದು ವಿಜ್ಞಾನಿಗಳೇ ಹೇಳುತ್ತಿದ್ದಾರೆ. ಅಪಘಾತಕ್ಕೆ ಭಯಪಟ್ಟು ಪ್ರಯಾಣ ನಿಲ್ಲಿಸುತ್ತೇವಾ ? ಬೆಂಕಿಗೆ ಹೆದರಿ ಅಡುಗೆ ಮಾಡುವುದು ಬಿಡುತ್ತೆವೆಯೇ? ಮುಂಜಾಗ್ರತೆಯಿಂದ ಸಾಗಿದರೆ ಕರೊನಾ ಖಚಿತವಾಗಿ ನಮ್ಮಿಂದ ದೂರವಾಗುತ್ತದೆ. ಕೋವಿಡ್‌ನಿಂದ ಗುಣಮುಖರಾದವರ ಪ್ರಮಾಣ ಶೇ.95ರಷ್ಟು. ಈ ಪ್ರಮಾಣದಲ್ಲಿ ಪ್ರಾಣಾಪಾಯದಿಂದ ಪಾರಾದವರಿಗೆ ಇತರ ಯಾವುದೇ ರೋಗಗಳು ಇರಲಿಲ್ಲ. ನಮ್ಮ ದೇಶದಲ್ಲಿ ಕ್ಷಯದಿಂದ ಪ್ರತಿವರ್ಷ 4.74 ಲಕ್ಷ, ಸಿಒಪಿಡಿಯಿಂದ 8 ಲಕ್ಷ ಜನ ಸಾಯುತ್ತಿದ್ದಾರೆ. ಇದಕ್ಕೆ ಹೋಲಿಸಿ ದರೆ ಕರೊನಾ ಮರಣ ಕಡಿಮೆ! ಇದರರ್ಥ ಇಷ್ಟಬಂದಂತೆ ಬೇಕಾಬಿಟ್ಟಿ ತಿರುಗಬಹುದೆಂದು ಅಲ್ಲ. ಅಲಕ್ಷ್ಯ ಖಂಡಿತ ಸಲ್ಲದು. ಎಚ್ಚರಿಕೆ, ಸುರಕ್ಷತಾ ನಿಯಮ ಪಾಲಿಸಬೇಕು. ಭಯದಿಂದ ನೆಮ್ಮದಿ ಹಾಳಾಗುತ್ತದೆ. ಭಯದಿಂದ ಅಡ್ರಿನಲ್ ಮತ್ತು ನಾರ್ ಅಡ್ರಿನಲಿನ್ ಹಾರ್ಮೋನುಗಳ ಉತ್ಪತ್ತಿ ಅಧಿಕವಾಗಿ ಹೃದ್ರೋಗಕ್ಕೆ ನಾಂದಿ ಯಾಗಬಹುದು. ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು.
೨.ರೋಗ ಹತೋಟಿಯಲ್ಲಿಟ್ಟುಕೊಳ್ಳಿ ಕರೊನಾ ವೈರಸ್ ತೀವ್ರಗೊಂಡಿರುವವರಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಅಸ್ತಮಾದಂತಹುಗಳಿಂದ ಬಳಲುತ್ತಿದ್ದರೆ ಹೆಚ್ಚು ಸಮಸ್ಯೆ. ದೀರ್ಘಕಾಲಿಕ ರೋಗಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಕರೊನಾ ಅಪಾಯವನ್ನುಂಟು ಮಾಡದು. ಆಸ್ತಮಾ ಇರುವವರು ಧೂಳು, ಗಾಷ್ಟ, ಸುಂಕ, ವಾಯುಮಾಲಿನ್ಯದಿಂದ ದೂರವಿರಬೇಕು. ಅಲರ್ಜಿ ಇರುವವರು ‘ಅಲರ್ಜನ್ಸ್’ ಗಳ ಸಮೀಪ ಸುಳಿಯಬಾರದು. ಸಿಒಪಿಡಿ, ಅಸ್ತಮಾ ಇರುವವರು, ೬೦ ವರ್ಷ ಮೇಲ್ಪಟ್ಟವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಪ್ಲೂ , ನ್ಯುಮೋನಿಯಾ ಲಸಿಕೆ ತೆಗೆದು ಕೊಳ್ಳಲು ಮರೆಯಬಾರದು. ಸ್ವಾರ್ಥ, ಅತಿ ವ್ಯಾಮೋಹ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿ ಕುಗ್ಗಿಸುವುದು. ರೋಗದ ಹತೋಟಿ ಕೈ ತಪ್ಪುವುದು.
೩.ವರ್ತನೆ ಬದಲಾಯಿಸಿಕೊಳ್ಳಿ
The secret of change is to focus all your energy, not on fighting the old ,But on Building the new -Socrates ನೆನಪಿಡಿ, ಮನೆಯೇ ಮಂತ್ರಾಲಯ. ಅನವಶ್ಯಕ ತಿರುಗಾಟಕ್ಕೆ ವಿದಾಯ ಹೇಳಿ. ಅತೀ ಅವಶ್ಯವಿದ್ದಾಗ, ಅನಿವಾರ್ಯವಿದ್ದಾಗ ಸೂಕ್ತ ಎಚ್ಚರಿಕೆಯೊಂದಿಗೆ ಹೋಗಿ. ಮೂಗು, ಬಾಯಿ ಸಂಪೂರ್ಣ ಮುಚ್ಚುವಂತೆ ಮಾಸ್ಕ ಧರಿಸಿ. ಕೈಗಳನ್ನು ಪದೇಪದೆ ತೊಳೆದುಕೊಳ್ಳಿ. ಸ್ಯಾನಿಟೈಸರ್ ಬಳಸಿ. ಗುಂಪು ಗೂಡುವುದನ್ನು ನಿಲ್ಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ.ಯಾವುದೇ ರೂಪಾಂತರಿ ವೈರಸ್ ಬಂದರೂ ಭಯಪಡುವ ಅಗತ್ಯವಿಲ್ಲ. ಕರೊನಾದೊಡನೆ ಸಹಬಾಳ್ವೆ ಅನಿವಾರ್ಯ. ನಮ್ಮ ವರ್ತನೆ ಬದಲಾಯಿಸಿಕೊಂಡರೆ ಕರೊನಾಕ್ಕೆ ವಿದಾಯ ಹೇಳಿರ ಬಹುದು. ಕರೊನಾ ಪ್ರಸಾರದಲ್ಲಿ ವೈರಸ್ ಪ್ರಭಾವಕ್ಕಿಂತ ನಮ್ಮ ವರ್ತನೆಯೇ ಮುಖ್ಯ ಪಾತ್ರವಹಿಸುತ್ತದೆ.
೪.ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ವೈರಸ್ ಏನೂ ಮಾಡದು. ಸತ್ವಯುತ, ಶಕ್ತಿಯುತ ಆಹಾರ ಸೇವನೆ, ದ್ರವ ಆಹಾರದ ಹೇರಳ ಸೇವನೆ, ಶುದ್ಧ ಕುಡಿ
ಯುವ ನೀರು, ಕ್ರಮಬದ್ಧ ವ್ಯಾಯಾಮ, ದುಶ್ಚಟಗಳಿಂದ ದೂರ ಇರುವುದು, ಸತ್ಸಂಗ, ಯೋಗ, ಧ್ಯಾನ, ಪ್ರಾಣಾಯಾಮ , ಮಾನಸಿಕ ನೆಮ್ಮದಿ ಮತ್ತು ಆಧ್ಯಾತ್ಮಿಕ ಶಕ್ತಿ ರೋಗ ನಿರೋಧಕ ಶಕ್ತಿ ಬೆಳೆಯಲು ಸಹಕರಿಸುತ್ತವೆ. ರೋಗ ನಿರೋಧಕ ವ್ಯವಸ್ಥೆ ದುರ್ಬಲವಾದಾಗ ಮಾತ್ರ ಅಸ್ವಸ್ಥ ಸ್ಥಿತಿ ನಿರ್ಮಾಣ ವಾಗುತ್ತದೆ. ಸಂಜಾತ ನ್ಯೂನತೆಗಳು, ದುಶ್ಚಟಗಳು, ಅತಿಯಾದ ಮಾನಸಿಕ ಒತ್ತಡಗಳು ಮತ್ತು ಸೋಂಕುಗಳು ನಿರೋಧಕ ಶಕ್ತಿಯನ್ನು ದುರ್ಬಲ ಗೊಳಿಸುತ್ತವೆ. ನಿದ್ರೆ ಮಾನವನಿಗೆ ದೈವದತ್ತ ವರ. ಮನಸ್ಸಿಗೆ ನೆಮ್ಮದಿ ನೀಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
೫.ಲಸಿಕೆಯೆಂಬ ಬ್ರಹ್ಮಾಸ್ತ್ರ…
Vaccination is the single most important step people can take to protect themselves from Corona &W.H.O. ಎಲ್ಲರೂ ಕೋವಿಡ್ ಲಸಿಕೆ ತೆಗೆದುಕೊಂಡರೆ ಕರೊನಾ ಕಥೆ ಮುಗಿದಂತೆ. ದೇಶದಲ್ಲಿ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ನೀಡಿಕೆಯಲ್ಲಿ ದಾಖಲೆ ನಿರ್ಮಿಸಿದ್ದೇವೆ. ಕರೊನಾ ವಾರಿಯರ್ಸ್, ಅಪಾಯದ ಅಂಚಿನಲ್ಲಿರುವ ವಯೋವೃದ್ದರು, ವಯಸ್ಕರು, ಹದಿಹರೆಯದವರಿಗೆ ಲಸಿಕೆ ನೀಡಿದ್ದಾರೆ. ನೀಡುತ್ತಿದ್ದಾರೆ. ಮಕ್ಕಳಿಗೂ ಲಸಿಕಾ ನೀಡಿಕೆ ಪ್ರಗತಿಯಲ್ಲಿದೆ. ಜನ ಮೂಢನಂಬಿಕೆ, ಊಹಾಪೋಹಗಳಿಂದ ಹೊರಬಂದು ಲಸಿಕಾ ಕಾರ್ಯಕ್ರಮಕ್ಕೆ ಬೆಂಬಲಿಸಿ.
ಕೊನೆಯ ಮಾತು : Be safe,be smart, be kind ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೆಶಕರಾದ ಡಾ ಅದಾನಮ್ ಗೆಬ್ರಿಯೋಸಿಸ್ ಹೇಳಿರುವುದು ಅರ್ಥ ಪೂರ್ಣ. ಕರೊನಾ ಎಷ್ಟೇ ರೂಪಾಂತರ ಹೊಂದಲಿ ಅದಕ್ಕೆ ಅಂಜುವ ಅವಶ್ಯಕತೆ ಇಲ್ಲ. ಆದರೆ, ಕರೊನಾ ನಿಯಮಗಳನ್ನು ಅಲಕ್ಷಿಸಿದಲ್ಲಿ ಅಪಾಯ ತಪ್ಪಿದ್ದಲ್ಲ. ಕರೊನಾ ಕಲಿಸಿದ ಪಾಠಗಳನ್ನು ನೆನಪಿಟ್ಟುಕೊಂಡು, ಬಾಳಿನಲ್ಲಿ ಬದಲಾವಣಿ ಗಳನ್ನು ಅಳವಡಿಸಿಕೊಂಡಲ್ಲಿ ಕರೊನಾಕ್ಕಷ್ಟೇ ಅಲ್ಲ, ಅದರಪ್ಪನಿಗೂ ಅಂಜುವ ಅಗತ್ಯವಿಲ್ಲ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು.
ನೆನಪಿಡಿ :Better to wear the mask than a ventilator, better to stay at home than in an ICUಎಂದಿರುವ ವಿಶ್ವ ಆರೋಗ್ಯ ಸಂಸ್ಥೆಯ ವಿeನಿಗಳ ಮಾತು ಭವಿಷ್ಯದ ಬಾಳಿಗೆ ಬುತ್ತಿಯಾಗಬೇಕು.