Saturday, 14th December 2024

ಬರುತ್ತಿರುವುದು ಬರೀ ಪರೀಕ್ಷೆ, ಅಗ್ನಿ ಪರೀಕ್ಷೆಯಲ್ಲ !

ಪರಿಶ್ರಮ

parishramamd@gmail.com

ಪ್ರೆಂಡ್ಸ್ ಪರೀಕ್ಷೆ ಬರುತ್ತೆ, ಅದು ನಡೆಯುತ್ತೆ, ಮುಗಿಯುತ್ತೆ ಈ ಮೂರು ಹಂತದಲ್ಲಿ ನಿಮ್ಮ ತಯಾರಿ ಹೇಗಿರಬೇಕು ಅಂದ್ರೆ ಪರೀಕ್ಷೆಯ ೨ ತಿಂಗಳ ಮೊದಲೆ ನೀವು ಸಣ್ಣದೊಂದು ಟೈಂಟೇಬಲ್ ರೆಡಿ ಮಾಡಿ ಅದು ನಿಮ್ಮ ರಿವಿಷನ್ ಟೈಂಟೇಬಲ್ ಆಗಿರಲಿ. ಅವತ್ತು ನಡೆಯೋ ಪಾಠದ ಓದು ಅವತ್ತೆ ಆಗೋದರ ಜೊತೆಗೆ ಹಿಂದೆ ಏನಾಗಿತ್ತು ಅನ್ನೋದನ್ನ ರೀಕಾಲ್ ಮಾಡುತ್ತಾ ಬನ್ನಿ.

ಮಾರ್ಚ್ ಬಂತೆಂದರೆ ಪೋಷಕರೆಲ್ಲರಿಗೂ ಒಂದು ಯೋಚನೆ ಶುರುವಾಗುತ್ತೆ ಯಾಕಂದ್ರೆ ಸಾಲು ಸಾಲು ಪರೀಕ್ಷೆಗಳ ಸಮಯ.ಪರೀಕ್ಷೆ ಬರೆಯೋದು ಮಕ್ಕಳೆ ಆದ್ರು ಅಪ್ಪ ಅಮ್ಮ ತಗೋಳ್ಳೊ ಟೆನ್ಷನ್ ನೋಡಿದ್ರೆ ಕೆಲವೊಮ್ಮೆ ಗಾಬರಿ ಯಾಗುತ್ತೆ. ಮನೇಲಿ ಎಂದೂ ಕಾಣಿಸದ ನೀರವ ಮೌನ, ಕೇಬಲ್ ಕಟ್, ಮೊಬೈಲ್‌ನಲ್ಲಿ ನೆಟ್ ಪ್ಯಾಕ್ ಹಾಕಿಸಲ್ಲ, ಸ್ನೇಹಿತರು ಮನೆಗೆ ಬರೋ ಹಾಗಿಲ್ಲ, ಯಾವ ಕಾರ್ಯಕ್ರಮಕ್ಕೂ ಪಾಲಕರು ಹೋಗುವುದಿಲ್ಲ. ಇವರಲ್ಲಿ ಎಲ್ಲಿಲ್ಲದ ಆತುರ-ಆತಂಕ ಇವರ ಸುತ್ತ ಇವರೇ ಸೃಷ್ಟಿಸಿಕೊಳ್ಳುತ್ತಾರೆ.

ಮುಂಬಯಿ ಅನ್ನೋ ಮಹಾನಗರದಲ್ಲಿ ಒಬ್ಬ ಹಾಲುಗಲ್ಲದ ಹುಡುಗ ಇದ್ದ, ಅವನು ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದ್ರೆ ಬೌಲರ್‌ಗಳ ಬೆವರು ಇಳಿದು ಹೋಗೋದು, ಒಂದು ದಿನ ಆ ಹುಡುಗನ ಕೋಚ್ ವಿಕೆಟ್ ಮೇಲೆ ಒಂದೊಂದು ರುಪಾಯಿಯಳ ಕಾಯಿನ್ ಇಟ್ಟು ಯಾರು ಅವನನ್ನ ಔಟ್ ಮಾಡು ತ್ತಾರೋ ಅವರಿಗೆ ಆ ದುಡ್ಡು ಅಂತ ಚಾಲೆಂಜ್ ಮಾಡಿದರೂ, ಒಂದೇ ಒಂದು ದಿನ ಒಬ್ಬ ಬೌಲರ್ ಕೂಡ ಆ ದುಡ್ಡನ್ನ ಮನೆಗೆ ತೆಗೆದುಕೊಂಡು ಹೋಗೋಕೆ ಆಗಲಿಲ್ಲ. ಅದೇ ಸಮಯಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಂತು, ಆ ಹುಡುಗ ಪರೀಕ್ಷೆಯಲ್ಲಿ -ಲಾದ. ಆದ್ರೆ, ಜೀವನ ಅನ್ನೋ ಪರೀಕ್ಷೆಯಲ್ಲಿ ಪಾಸಾದ. ಇವತ್ತು ಅವನ ಜೀವನದ ಕಥೆಯನ್ನು ಓದದೆ ಮುಂಬಯಿಯಲ್ಲಿ ಯಾರೂ ಎಸ್ ಎಸ್‌ಎಲ್‌ಸಿ ಪರೀಕ್ಷೆ ಪಾಸಾಗೋದಕ್ಕೆ ಆಗೋದಿಲ್ಲ, ಆ ಹಾಲುಗಲ್ಲದ ಹುಡುಗನ ಹೆಸರೇ ಸಚಿನ್ ರಮೇಶ್ ತಂಡೂಲ್ಕರ್.

ಪರೀಕ್ಷೆ ಬರೀ ನಿಮ್ಮ ಬೌದ್ಧಿಕ ಜ್ಞಾನ ಅಳೆಯೋ ಮಾನದಂಡ ಅಷ್ಟೆ, ಅದು ಬರೀ ಪರೀಕ್ಷೆ ಆಗಿ ಉಳಿಬೇಕೆ ಹೊರತು ‘ವರೀ ಮತ್ತು ಶಿಕ್ಷೆ’ ಯಾಗಬಾರದು. ಎಲ್ಲ ಪೋಷಕರಿಗೂ ಒಬ್ಬ ಶಿಕ್ಷಕನಾಗಿ ನಿಮಗೆ ಒಂದಿಷ್ಟು ಕಿವಿಮಾತು ಹೇಳೋಕೆ ಇಷ್ಟ ಪಡುತ್ತೇನೆ. ಮೊದಲನೆದಾಗಿ ಮಕ್ಕಳ ಮೇಲೆ ಒತ್ತಡ ಹೇರೋ ದನ್ನ ನಿಲ್ಲಿಸಿ ಯಾಕಂದ್ರೆ ಪ್ರತಿಬಾರಿ ಪರೀಕ್ಷೆ ನೆಡೆದು ಫಲಿತಾಂಶ ಬಂದದಿನ ಮಕ್ಕಳು ಆತ್ಮ ಹತ್ಯೆಗೆ ಶರಣು ಅನ್ನೋದನ್ನ ಪತ್ರಿಕೆಗಳಲ್ಲಿ ಓದಿದಾಗ ಮನಸ್ಸಿಗೆ ಬಹಳ ನೋವಾಗುತ್ತೆ.

ಒಂದು ಪರೀಕ್ಷೆ ಫೆಲಾದ್ರೆ ಏನು ಆಗಲ್ಲ ಜೀವನ ದೊಡ್ಡದಿದೆ ಗೆದ್ದೋನಿಗೆ ಹೇಗೆ ಚಪ್ಪಾಳೆ ತಟ್ಟುತ್ತೇವೋ ಹಾಗೆ ಸೋತವರ ಹೆಗಲಮೇಲೆ ಕೈ ಹಾಕಿ ಧೈರ್ಯ ಹೇಳೋದು ಕೂಡ ಬಹಳ ಮುಖ್ಯ ಆಗುತ್ತೆ. ನಿಮ್ಮ ಮಕ್ಕಳನ್ನ ನಿಮ್ಮ ಅಕ್ಕಪಕ್ಕದ ಸಂಬಂಧಿಕರ ಮಕ್ಕಳ ಜೊತೆ ಕಂಪೇರ್ ಮಾಡಬೇಡಿ. ಯಾಕಂದ್ರೆ, ನೀವು ಹೇಗಿರುತ್ತೀರೋ ನಿಮ್ಮ ಮಕ್ಕಳು ನಿಮ್ಮದೆ ಪ್ರತಿರೂಪ ಅನ್ನೋದನ್ನ ಮರೆಯ ಬೇಡಿ, ನೀವು ಅವರೇಜ್ ಸ್ಟೂಡೆಂಟ್ ಆಗಿ ನನ್ನ ಮಗನೋ ಮಗಳೋ ಸಿ.ವಿ ರಾಮನ್, ವಿಶ್ವೇಶ್ವರಯ್ಯ ಆಗಬೇಕು ಅಂತ ಯೋಚನೆ ಮಾಡೋದು ತಪ್ಪಲ್ವಾ? ಎಲ್ಲದಕ್ಕೂ ಒಂದು ತಯಾರಿ ಮತ್ತು ಸಮಯದ ಪರಿಧಿ ಇರುತ್ತೆ ಹಾಗಾಗಿ ಈ ವಿಷಯವನ್ನ ನಾವು ಗಮನದಲ್ಲಿ ಇಟ್ಟುಕೊಳ್ಳಲೇ ಬೇಕು.

ಪರೀಕ್ಷೆ ಸಮಯ ಬಂದಾಗ ಮಕ್ಕಳಿಗಾಗಿ ಸಮಯಕೊಡುವ ನಾವು, ಪ್ರತಿದಿನ ಅವರ ಜೊತೆ ಕೂತು ಅವರ ವಿದ್ಯಾಬ್ಯಾಸದಲ್ಲಿ ಏನಾಗುತ್ತಿದೆ ಅನ್ನೋದನ್ನ
ಗಮನಿಸುತ್ತ ಇರಬೇಕು. ಪ್ರತಿದಿನ ಮಾಡುವ ತಯಾರಿ ಪರೀಕ್ಷಾ ಸಮಯ ಬಂದಾಗ ಮಾಡಲು ಹೋದರೆ ಅದು ಯಡವಟ್ಟಿಗೆ ದಾರಿ ಮಾಡಿಕೊಡುತ್ತೆ.
ಒಬ್ಬ ಶಿಕ್ಷಕನಾಗಿ ನಾನು ಬಹಳ ಮಕ್ಕಳ ಜೊತೆ ಒಡನಾಟದಲ್ಲಿ ಇರೋದ್ರಿಂದ ಹೇಳುತ್ತಾ ಇದ್ದೇನೆ. ಮಕ್ಕಳೇ ನಿಮಗೆ ಏನಾದರೂ ಡೌಟ್ ಇದ್ರೆ ಆಗಲೇ
ಬಂದು ಕೇಳಿ, ಬದುಕಿನಲ್ಲಿ ಡೌಟ್ ಇರಲಿ ಆದ್ರೆ ಡೌಟ್ ಅಲ್ಲೆ ಬದುಕಬೇಡಿ, ಅಪ್ಪ ಅಮ್ಮ ನಿಮ್ಮ ಮೇಲೆ ಇಟ್ಟ ನಂಬಿಕೇನೆ ಹೊರೆ ಅನ್ನೋರೀತಿ ನೋಡ ಬೇಡಿ, ಅದು ಜವಾಬ್ದಾರಿ ಅಷ್ಟೇ ನೀವದನ್ನ ನಿಭಾಯಿಸೋದನ್ನ ಕಲಿರಿ, ಸಾಯೋತನಕ ಕಲಿಯೋದು ಇದ್ದೇಇದೆ ಎಲ್ಲದಕ್ಕೂ ಸಮಯ ನಿಗದಿ ಮಾಡಿ ಕೊಳ್ಳಿ, ಇಷ್ಟು ವರ್ಷ ಶಿಕ್ಷಕ ವೃತ್ತಿ ಮಾಡಿಕೊಂಡು ಬಂದ ನನಗೆ, ಅನಿಸಿದ್ದು ಒಂದೇ.

ಸಾವಿರ ಸಾರಿ ಓದೋದಕ್ಕಿಂತ ಒಂದು ಸರಿ ಬರೆದು ಓದು, ಯಾಕಂದ್ರೇ ಈಗೆಲ್ಲ ಮೊಬೈಲಿನಲ್ಲಿ ಸಿಗೋದ್ರಿಂದ ನಾವು ಬರೆಯೋದನ್ನ ಬಹಳ ಕಮ್ಮಿ ಮಾಡಿದ್ದೇವೆ, ನೀವೆ ಯೋಚನೆ ಮಾಡಿ ನೀವು ಬರೆದು ಕಲಿತದ್ದನ್ನ, ಪುಸ್ತಕದಲ್ಲಿ ಓದಿ ಕಲಿತಿದ್ದನ್ನ ಬಹಳ ವರ್ಷಗಳಾದ್ರು ಮರೆತಿರೋದಿಲ್ಲ. ಅದೇ ನಮಗೆ ಮೊಬೈಲಿನಲ್ಲಿ ಬರೋ ಒಳ್ಳೊಳ್ಳೆ ಸಂದೇಶಕೂಡ ನಾಳೆ ಬೆಳಿಗ್ಗೆ ನಮ್ಮ ಇನ್ ಬಾಕ್ಸ್ ಇಂದ ಡಿಲೀಟ್ ಆಗೋ ಹಾಗೆ ನಮ್ಮ ಮೆಮೋರಿಯಿಂದ ಕೂಡ ಡಿಲೀಟ್ ಆಗಿರುತ್ತೆ.

ನಮ್ಮ  ತಲಯಲ್ಲಿರೋ ಸ್ಟೋರೇಜ್ ಹತ್ತು ಕಂಪ್ಯೂಟರಿಗಿಂತ ಜಾಸ್ತಿ ಡಾಟಾವನ್ನು ಸ್ಟೋರ್ ಮಾಡಿಕೊಳ್ಳೋ ಕ್ಯಪಾಸಿಟಿ ಅದಕ್ಕೆ ಇರುತ್ತೆ ಆದ್ರೆ ನಾವು ಅದನ್ನ ೧೦೦ ಎಂ.ಬಿ ಅಷ್ಟು ಕೂಡ ಯುಸ್ ಮಾಡಿಕೊಳ್ಳೋದಿಲ್ಲ. ನಿಜವಾಗಲೂ ಹೇಳಬೇಕಂದ್ರೆ ಸೆಲೋನ್ ಅಂದ್ರೆ ಮನುಷ್ಯನನ್ನ ಸೆಲ್‌ನಲ್ಲಿ ಹಾಕಿರೋ ಫೋನೆ, ಈ ಸೆಲ್ ಫೋನ್. ಎಲ್ಲವನ್ನ  ಅಲ್ಲೇ ನೋಡಿ ಅಲ್ಲೇ ಮರೆಯುವಂತೆ ಮಾಡೋ ಕ್ಯಪಾಸಿಟಿ ಅದಕ್ಕೆ ಇದೆ.

ಮೈ ಡಿಯರ್ ಪ್ರೆಂಡ್ಸ್ ಪರೀಕ್ಷೆ ಬರುತ್ತೆ, ಅದು ನಡೆಯುತ್ತೆ, ಮುಗಿಯುತ್ತೆ ಈ ಮೂರು ಹಂತದಲ್ಲಿ ನಿಮ್ಮ ತಯಾರಿ ಹೇಗಿರಬೇಕು ಅಂದ್ರೆ ಪರೀಕ್ಷೆಯ ೨ತಿಂಗಳ ಮೊದಲೆ ನೀವು ಸಣ್ಣದೊಂದು ಟೈಂಟೇಬಲ್ ರೆಡಿ ಮಾಡಿ ಅದು ನಿಮ್ಮ ರಿವಿಷನ್ ಟೈಂಟೇಬಲ್ ಆಗಿರಲಿ. ಅವತ್ತು ನಡೆಯೋ ಪಾಠದ ಓದು ಅವತ್ತೆ ಆಗೋದರ ಜೊತೆಗೆ ಹಿಂದೆ ಏನಾಗಿತ್ತು ಅನ್ನೋದನ್ನ ರೀಕಾಲ್ ಮಾಡುತ್ತಾ ಬನ್ನಿ. ರಾತ್ರಿ ನಿದ್ದೆಗೆಟ್ಟು ಓದೋ ಬದಲು ಬೆಳಿಗ್ಗೆ ಬೇಗ ಎದ್ದು ಓದಿದ್ರೆ ಮನಸ್ಸು ಪ್ರಶಾಂತವಾಗಿರುತ್ತೆ. ಓದ್ದಿದ್ದು ನೇರವಾಗಿ ತಲೆಗೆ ಹೋಗುತ್ತೆ. ಆದಷ್ಟು ನಿಮ್ಮ ಮಿತ್ರ ಏನು ಮಾಡುತ್ತಿದ್ದಾರೆ ಹೇಗೆ ಓದುತ್ತಿದ್ದಾರೆ ಅನ್ನೋ ಗೋಜಿಗೆ ಹೋಗಬೇಡಿ, ನಿಮ್ಮ ದೃಷ್ಟಿ ಬರೀ ಓದಿನ ಮೇಲೆ ಮಾತ್ರ ಇರಲಿ.

ನೀವೇನ್ ಮಾಡ್ತಾ ಇದ್ದೀರ ಅನ್ನೋ ಮಾಹಿತಿ ಊರಿಗೆಲ್ಲ ಕೊಡೋ ಅವಶ್ಯಕತೆ ಇಲ್ಲ. ನಿಮಗೆ ಹೆಚ್ಚಿನ ಮಾಹಿತಿ ಬೇಕು ಅನಿಸಿದ್ರೆ ನೇರವಾಗಿ ನಿಮ್ಮ ಶಿಕ್ಷಕರನ್ನ ಸಂಪರ್ಕಿಸಿ ಅವರು ಕೊಡೋ ಗೈಡ್ ಲೈನ್ಸ್ ಫಾಲೋ ಮಾಡಿ. ನಿಮಗೆ ಮೈಂಡ್ ರಿಲ್ಯಾಕ್ಸ್ ಮಾಡಿಕೊಳ್ಳೋಕೆ ಇರೋ ಹವ್ಯಾಸವನ್ನ ಮಾಡಿ. ನಿಮಗಾಗಿ ನೀವು ಸ್ವಲ್ಪ ಟೈಂಕೊಡಿ ದೇಹಕ್ಕೆ ಜಾಸ್ತಿ ಒತ್ತಡ ತೆಗೆದುಕೊಂಡು ಪರೀಕ್ಷೆ ಸಮಯದಲ್ಲಿ ಮಕ್ಕಳು ಆಸ್ಪತ್ರೆ ಸೇರೋದನ್ನ ನಾನು ಬಹಳ ನೋಡಿದ್ದೇನೆ. ಪರೀಕ್ಷೆ ಮೇಲೆ ನಿಮ್ಮ ನಿಗಾ ಇರಲಿ.

ಪರೀಕ್ಷೆ ಮೇಲೆ ನಿಮಗೆ ಭಯಬೇಡ. ನನಗೆ ಕೆಲವೊಮ್ಮೆ ಅನಿಸೋದು ಒಂದೆ ಕೆಲವರು ಐಎಎಸ್ ಬರೆಯೋದೆ ಕಷ್ಟದ್ದು ಅಂತಾರೆ. ಕೆಲವರು ಐಪಿಎಸ್
ಬರೆಯತೋದೇ.. ಅದು ನಮಗೆಲ್ಲಿ ಆಗುತ್ತೆ ಅಂತಾರೆ. ಕೆಲವರು ನೀಟ್ ಬರೆಯೋಕು ಭಯ ಪಡ್ತಾರೆ ಇದು ಯಾಕಾಗುತ್ತೆ ಅಂದ್ರೆ ಪ್ರೆಂಡ್ಸ್ ನಿಮ ಅಕ್ಕಪಕ್ಕ ಇರೋರು ನಿಮಗಿರೋ ಧೈರ್ಯವನ್ನ ಕುಗ್ಗಿಸಿರೋದ್ರಿಂದ. ಅವರು ಹೇಳಿದ್ದಾರೆ ಅಂದ್ರೆ ಅದು ಅವರು ಕ್ಯಪಾಸಿಟಿನೆ ಹೊರತು ನಿಮ್ಮದಲ್ಲ. ಅವರಿಗೆ ಅದು ಆಗಲ್ಲ ಅಂದ್ರೆ ನಿಮಗೂ ಆಗಲ್ಲ ಅಂತ ಅಲ್ಲ.

ಮೊದಲು ನೀವು ಮಾಡ್ತಿನಿ ಅಂತ ಮನಸ್ಸು ಮಾಡಿ ಆಮೇಲೆ ಏನೋ ಒಂದು ಆಗೆ ಆಗುತ್ತೆ ಯಾಕಂದ್ರೆ ಧೈರ್ಯಂ ಸರ್ವತ್ರ ಸಾಧನಂ ಅಂತ ದೊಡ್ಡರು ಹೇಳಿದ್ದಾರೆ. ಯಾವತ್ತೂ ಒಂದು ನೆನಪಿಡಿ ಪರಿಶ್ರಮಕ್ಕೆ ಬೆಲೆ ಇದ್ದೇ ಇದೆ. ನುಗ್ಗಿ ಹೊಡಿತಿರೋ, ಕಾದು ಹೊಡಿತ್ತಿರೋ ಗೊತ್ತಿಲ್ಲ ಆದ್ರೆ ನಿಮ್ಮ ರಿಸಲ್ಟ್ ಮಾತ್ರ ಕರ್ನಾಟಕ ಕಾದು ಓದೋ ಹಾಗೆ ಇರಬೇಕು ಅಷ್ಟೆ! ಯಾಕಂದ್ರೆ ಇತಿಹಾಸ ಓದಿ ಬೆಳೆಯೋಕ್ಕಿಂತ ಇತಿಹಾಸ ಸೃಷ್ಟಿ ಮಾಡಿದೋನು ಬಹಳ
ದಿನ ನೆನಪಲ್ಲಿ ಇರುತ್ತಾನೆ.

ಯಾಕೆಂದರೆ ನಿಮ್ಮ ಪರಿಶ್ರಮ ಗೆಲ್ಲಬೇಕು