ಮುಖಾಮುಖಿ
ಡಾ.ದಯಾನಂದ ಲಿಂಗೇಗೌಡ
ಆಧುನಿಕ ವೈದ್ಯ ಪದ್ಧತಿಯಲ್ಲಿ, ಯಾವುದಾದರೂ ರೋಗ ಚಿಕಿತ್ಸೆಯ ಮಾರ್ಗದರ್ಶನ ಬೇಕಾಗಿದ್ದಾಗ ಸಾಮಾನ್ಯವಾಗಿ ಅಮೆರಿಕ ಅಥವಾ ಯೂರೋಪ್ ದೇಶಗಳ ವೈದ್ಯಕೀಯ ಸಂಘಗಳ ಶಿಫಾರಸನ್ನು ನೋಡುತ್ತೇವೆ. ಒಂದೇ ರೋಗಕ್ಕೆ, ಕೆಲವೊಮ್ಮೆ ಈ ಎರಡೂ ದೇಶಗಳ ಶಿಫಾರಸಿನಲ್ಲಿ ವ್ಯತ್ಯಾಸವಿರಬಹುದು. ನನ್ನ ವಯಕ್ತಿಕ ಅನುಭವದಲ್ಲಿ ಯೂರೋಪ್ ದೇಶದ ಶಿಫಾರಸಿಗೆ ಹೆಚ್ಚು ತೂಕ.
ಏಕೆಂದರೆ ಕೆಲವೊಮ್ಮೆ ಅಮೆರಿಕದ ವೈದ್ಯಸಂಘಗಳ ಶಿಫಾರಸಿನಲ್ಲಿ ಉದ್ಯಮಗಳ ಪ್ರಭಾವ ಕಂಡುಬರಬಹುದು. ಏಕೆಂದರೆ ಅಮೆರಿಕದಲ್ಲಿ ವೈದ್ಯಕೀಯ ವೆಚ್ಚವನ್ನು ಇನ್ಸೂರೆನ್ಸ್ ಮೂಲಕ ಜನರೇ ಬರಿಸುವುದರಿಂದ, ಇವರದು ಒಂದು ರೀತಿಯ ಉದ್ಯಮ ನಿರ್ದೇಶಿತ ವ್ಯವಸ್ಥೆ. ಆದರೆ, ಯೂರೋಪ್ ದೇಶಗಳಲ್ಲಿ ವೈದ್ಯಕೀಯ ನುಸುಳುವು ದಕ್ಕೆ ಕಷ್ಟ . ಯೂರೋಪ್ ದೇಶಗಳ ಶಿಫಾರಸುಗಳು ಹೆಚ್ಚು ವೈಜ್ಞಾನಿಕ. ಉತ್ಕೃಷ್ಟ ಗುಣಮಟ್ಟದ ಆಧಾರವಿಲ್ಲದೆ ಯಾವುದನ್ನೂ ಇವರು ಅಳವಡಿಕೊಳ್ಳುವುದಿಲ್ಲ. ವೆಚ್ಚ ಸರ್ಕಾರಗಳೇ ಭರಿಸುವುದರಿಂದ, ಇದು ರೋಗಿ ಕೇಂದ್ರಿತವಾಗಿರುತ್ತದೆ. ಅಲ್ಲದೆ ಯೂರೋಪ್ ದೇಶಗಳು ಗುಣಮಟ್ಟದಲ್ಲಿ ಯಾವಾಗಲೂ ಮುಂದು. ಅದು ವೈದ್ಯಕೀಯ ರಂಗವಿರಬಹುದು, ರಸ್ತೆ, ರೈಲು, ಮೂಲಸೌಕರ್ಯ, ಆಡಳಿತ ರಂಗ ವಿರಬಹುದು. ಕೆಲವೊಂದು ಕ್ಷೇತ್ರಗಳ ವಿಚಾರದಲ್ಲಿ ಯೂರೋಪ್ ಗುಣಮಟ್ಟವನ್ನು ಕಣ್ಣು ಮುಚ್ಚಿ ಪಾಲಿಸಿದರೆ ಸಾಕು, ಅದು ಶ್ರೇಷ್ಠವಾಗಿ ರುತ್ತದೆ.
ಅವರು ಅಳವಡಿಸಿಕೊಂಡಿರುವ ವ್ಯವಸ್ಥೆ ಯಾವಾಗಲೂ ಸ್ವಂತ ಆಲೋಚನೆ ಯಾಗದೇ ಇರಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿ ಒಳ್ಳೆಯದು ಸಿಕ್ಕಿದರೆ ತಮ್ಮದಾಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಯೂರೋಪಿನ ಡೆನ್ಮಾರ್ಕ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯಕೀಯ ಸಮ್ಮೇನದಲ್ಲಿ ನನ್ನ ಒಂದು ಅಧ್ಯಯನವನ್ನು ಮಂಡಿಸುವ ಅವಕಾಶ ಒದಗಿಬಂತು. ಇದು ನಮ್ಮ ವೈದ್ಯಕೀಯ ವಿಭಾಗದ ಅತ್ಯುಚ್ಚ ಅಂತಾರಾಷ್ಟ್ರೀಯ ಸಮ್ಮೇಳನ. ಇದರಲ್ಲಿ ಅತ್ಯಾಧುನಿಕ ಚಿಕಿತ್ಸಾ ಕ್ರಮಗಳ ಬಗ್ಗೆ ಚರ್ಚೆಗಳು ಮತ್ತು ಮಂಡನೆಗಳು ನಡೆಯುತ್ತವೆ. ಇಲ್ಲಿ ವೈಜ್ಞಾನಿಕವಲ್ಲದ ಒಂದು ಸಣ್ಣ ಅಂಶವೂ ಸುಳಿಯುವುದಕ್ಕೆ ಅವಕಾಶವಿಲ್ಲ.
ಪಂಚದಾದ್ಯಂತ ದೊಡ್ಡ ಕಂಪನಿಗಳು ತಮ್ಮ ನವ ನವೀನ ವೈದ್ಯಕೀಯ ಉಪಕರಣ ಗಳನ್ನು ಪ್ರದರ್ಶಿಸುತ್ತವೆ. ಒಂದು ಕುತೊಹಲಕಾರಿ ಅಂಶವೆಂದರೇ, ಸಮ್ಮೇಳನದಲ್ಲಿ ದಿನ ಬೆಳಗ್ಗೆ ಒಂದು ಗಂಟೆ ಯೋಗ ಕಾರ್ಯಕ್ರಮಕ್ಕೆ ಬಗ್ಗೆ ಮೀಸಲಿಡಲಾಗಿತ್ತು. ಯೋಗದ ಬಗ್ಗೆ ಮಾಹಿತಿ ಮತ್ತು ನಾನಾ ಆಸನಗಳ ಪರಿಚಯಕ್ಕೆ ಒಂದು ದೊಡ್ಡ ಜಾಗವನ್ನು ಮೀಸಲಿಡಲಾಗಿತ್ತು. ಅಲ್ಲಿ ಯೋಗ ಮಾಡುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಈ ಅವಧಿಯಲ್ಲಿ ಕೆಲವೊಂದು ಆಸನಗಳನ್ನು ಯೋಗ ಶಿಕ್ಷಕರು ಮಾಡಿಸಿದರು. ಪ್ರಪಂಚದ ನಾನಾ ಮೂಲೆಗಳಿಂದ ಬಂದಿದ್ದ ಜನರು ಈ ವಿಷಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರು ಎಂದರೆ, ಸಮ್ಮೇಳನದ ಉಡುಪುಗಳನ್ನು ಶೌಚ ಗೃಹಗಳಲ್ಲಿ ಬದಲಿಸಿಕೊಂಡು, ಯೋಗಕ್ಕಾಗಿಯೇ ನಿಗದಿತ ಉಡುಪಿನಲ್ಲಿ ಬರುತ್ತಿದ್ದರು. ಇವರುಗಳ ಮದ್ಯೆ ಸಮ್ಮೇಳನಕ್ಕೆ ತಯಾರಾಗಿ ಬಂದ ಸೂಟು ಬೂಟಿನಲ್ಲಿ ಯೋಗ ಮಾಡುವಾಗ ಭಾರತೀಯನಾಗಿ ನನಗೆ ಸ್ವಲ್ಪ ನಾಚಿಗೆಯಾಗಿದ್ದು ನಿಜ.
ಯೋಗ ಹೇಳಿ ಕೊಡುತ್ತಿದ್ದವರು ಆಸನಗಳ ಹೆಸರುಗಳನ್ನೂ ಸ್ಪಷ್ಟವಾಗಿ ಹೇಳುವುದಲ್ಲದೆ, ಕ್ರಮಬದ್ಧವಾಗಿ ಯೋಗಾನ ಮಾಡುವ ಕ್ರಮಗಳ ಬಗ್ಗೆ ಹೇಳಿಕೊಡುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವೋ ಆಶ್ಚರ್ಯ. ಆಮೇಲೆ ತಿಳಿದು ಬಂದ ಮತ್ತೊಂದು ವಿಷಯವೇನೆಂದರೆ ಯೋಗ ಹೇಳಿಕೊಟ್ಟವರು ಬೇರೆ ಯಾರೂ ಅಲ್ಲ, ಇದೇ ವೈದ್ಯಕೀಯ ಸಮ್ಮೇಳನ ಅಧ್ಯಕ್ಷರು! ಯೋಗದ ಮಹತ್ವವನ್ನು ಇಲ್ಲಿಯ ಆಧುನಿಕ ವೈದ್ಯರು ಅಽಕೃತವಾಗಿ ಅಳವಡಿಸಿಕೊಂಡಿರುವುದು ಸಾಮಾನ್ಯ ಅಲ್ಲ.
ದೈನಂದಿನ ಕಾರ್ಯಗಳಲ್ಲಿ ಯೋಗದ ಅಳವಡಿಕೆ ವೇಗ ನೋಡಿದರೆ, ಒಂದು ದಿನ ಪಾಶ್ಚಾತ್ಯರಿಂದಲೇ ನಾವು ಯೋಗದ ಬಗ್ಗೆ ತಿಳಿದುಕೊಳ್ಳುವ ದಿನ ದೂರವಿಲ್ಲ.
ಯೋಗದ ತವರು ಭಾರತದಲ್ಲಿಯೇ ಯೋಗದ ಬಗ್ಗೆ ಆಧುನಿಕ ವೈದ್ಯರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಆಧುನಿಕ ವೈದ್ಯ ಪದ್ಧತಿಯಲ್ಲಿ, ಸಂಪೂರ್ಣ ಆರೋಗ್ಯಕ್ಕಾಗಿನ ಒಂದು ಭಾಗವಾಗಿ ಅಧಿಕೃತವಾಗಿ ಅಳವಡಿಸಿಕೊಳ್ಳಲು ಆಗುತ್ತಿಲ್ಲ. ಭಾರತೀಯ ವೈದ್ಯ ಸಂಘ ಇದನ್ನು ಅನಧಿಕೃತವಾಗಿ ಅಳವಡಿಸಿಕೊಳ್ಳಲು ಪ್ರಯತ್ನ ನಡೆಸಿದಾಗ ವಿರೋಧ ಕಂಡು ಬಂದಿತ್ತು. ಆಧುನಿಕ ವೈದ್ಯರ ಒಂದು ಗುಂಪು ಯೋಗ ವಿರೋಧಿಸಲು, ‘ಯೋಗದಿಂದ ಆಗುವ ಉಪಯೋಗದ ಬಗ್ಗೆ ವೈeನಿಕ ಆಧಾರವಿಲ್ಲ’ ಎಂಬ ವಿತಂಡ ವಾದವನ್ನು ಮುಂದಿಡುತ್ತದೆ.
ವಿಜ್ಞಾನದ ಅರಿವಿಗೆ ಸಿಲುಕದ ಬಹಳಷ್ಟು ವಿಷಯಗಳಿವೆ ಎಂಬ ಸಾಮಾನ್ಯ eನ ಇಲ್ಲ. ಈ ಯೋಗ ವಿರೋಧಿ ವೈದ್ಯರ ಗುಂಪುನಲ್ಲಿ ದೂಡ್ಡ ಹೆಸರುಗಳಿವೆ. ಇವರು ಟಿವಿ, ಪೇಪರ್, ಜಾಲತಾಣಗಳಲ್ಲಿ ಸಕ್ರಿಯ. ಈ ಅಂಡೆಪಿರ್ಕಿಗಳು ತಮ್ಮ ವಾದಕ್ಕೆ ವೈಜ್ಞಾನಿಕ ದೃಷ್ಟಿಕೋನ ಕೊಡಲು ಎಷ್ಟೇ ಒದ್ದಾಡಿದರೂ, ಯೋಗ ವಿರೋಧಿಸುವ ಉದ್ದೇಶ ಮೂಲ ಎಲ್ಲರಿಗೂ ಗೊತ್ತಿರು ವಂಥದ್ದೇ. ಭಾರತದ ಸನಾತನ ಪದ್ಧತಿಯಿಂದ ಬಂದ ಎಲ್ಲವನ್ನು ವಿಮರ್ಶಿಸದೇ ವಿರೋಽಸುವ ಮನಃಸ್ಥಿತಿ.
೨ನೇಯದು ಯೋಗಕ್ಕೆ ಅಂತಾರಾಷ್ಟ್ರೀಯ ಪ್ರಚಾರ ಕೊಟ್ಟು , ಯೋಗದ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಮೋದಿ. ಎಲ್ಲಿ ಯೋಗವನ್ನು ಬೆಂಬಲಿಸಿದರೆ ಪರೋಕ್ಷವಾಗಿ ಮೋದಿಯವರನ್ನು ಬೆಂಬಲಿಸಿದಂತೆ ಆಗುತ್ತದೋ ಎಂಬ ಆತಂಕ.
ಇವರ ಇಂಥ ಒಳ ಉದ್ದೇಶ ಮುಚ್ಚಿಟ್ಟು, ಬರಹಗಳಿಗೆ ವೈಜ್ಞಾನಿಕ ಲೇಪನ ಹಾಕಿ ‘ಕತ್ತೆ ಲಾಯ’ ದಲ್ಲಿರುವಂಥವರು ಬರೆದ ಲೇಖನವನ್ನು ಕಣ್ಣಿಗೊತ್ತಿಕೊಂಡು ಅನುಕರಿಸುವ ಓದುಗ ವರ್ಗ ದಾರಿತಪ್ಪುತ್ತಿದೆ. ವೈದ್ಯರು ರಾಜಕೀಯ ಪಕ್ಷಗಳ ಜತೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಗುರುತಿಸಿಕೊಳ್ಳುವುದು ತಪ್ಪಲ್ಲ. ಅದೇ ರಾಜಕೀಯವನ್ನು ವೈದ್ಯಕೀಯ ವೃತ್ತಿಯಲ್ಲಿ ಎಳೆದು ತರುವುದು, ಜನರ ದಾರಿ ತಪ್ಪಿಸುವುದು ಸಲ್ಲ. ‘ಆಯುಷ್’ ಯೋಜನೆಯನ್ನು ವಿರೋದಿಸುವ ನೆಪದಲ್ಲಿ
ಯೋಗವನ್ನು ವಿರೋಽಸುವ ಆಧುನಿಕ ವೈದ್ಯರ ವರ್ಗವಿದೆ. ನಿಜವಾಗಿ ನೋಡುವುದಾದರೆ ಆಧುನಿಕ ವೈದ್ಯ ಪದ್ಧತಿಗೆ ಒಂದು ಚೌಕಟ್ಟು, ಸೀಮೆ ಎಂಬುದಿಲ್ಲ. ಆಧುನಿಕ ವೈದ್ಯ ಪದ್ಧತಿಯ ಮೂಲ ಸಿದ್ಧಾಂತವೇ ‘ವೈಜ್ಞಾನಿಕ ಆಧಾರ’(ಎವಿಡೆನ್ಸ್ ಬೇಸ್ಡ್ ಮೆಡಿಸಿನ್).
ಪ್ರತಿದಿನವೂ ಆ ಕಾಲಕ್ಕೆ ಲಭ್ಯವಿರುವ ಆಧಾರದ ಮೇಲೆ ಬದಲಾವಣೆ ಹೊಂದುತ್ತ ಹೋಗುತ್ತದೆ. ವೈಜ್ಞಾನಿಕ ಆಧಾರವಿರುವ ಚಿಕಿತ್ಸೆಗಳನ್ನು ಆಧುನಿಕ ವೈದ್ಯ ಪದ್ಧ್ದತಿಯಲ್ಲಿ ಸೇರಿಕೊಳ್ಳಲು ಸಾಧ್ಯ. ಸರಳ ಹೋಲಿಕೆ ಮಾಡುವುದಾದರೆ ಇಂಗ್ಲಿಷ್ ಇದ್ದ ಹಾಗೆ. ಇಂಗ್ಲಿಷ್ ದಿನವೂ ಹೊಸ ಹೊಸ ಪದಗಳನ್ನು ಹುಟ್ಟುಹಾಕುತ್ತ, ಆಮದು ಮಾಡಿಕೊಳ್ಳುತ್ತ ಬೆಳೆಯುತ್ತಿದೆಯೋ ಹಾಗೆ, ಆಧುನಿಕ ವೈದ್ಯ ಪದ್ಧತಿಗೆ ಬೆಳೆಯುವ ಗುಣವಿದೆ. ಆದ್ದರಿಂದ ಯಾವುದೇ ಚಿಕಿತ್ಸಾ ಪದ್ಧತಿಯಿಂದ ಉತ್ತಮ ಆಧಾರವಿರುವ ಚಿಕಿತ್ಸೆಗಳು ಬಂದರೆ ಅದನ್ನು ‘ಮಡಿವಂತಿಕೆ’ ತೋರದೇ ಆಧುನಿಕ ಚಿಕಿತ್ಸಾ ಪದ್ಧತಿ ಅಪ್ಪಿಕೊಳ್ಳಬೇಕು.
ಆ ದೃಷ್ಟಿಯಲ್ಲಿ ಯೋಗ ಆಧುನಿಕ ವೈದ್ಯಕೀಯ ಭಾಗವಾವುದಕ್ಕೆ ಎಲ್ಲ ಅರ್ಹತೆ ಪಡೆದಿದೆ. ಇವೆಲ್ಲವನ್ನು ಈಗ ನೆನೆದು ಕೊಳ್ಳಲು ಕಾರಣ ಮಂಡ್ಯ ಜಿಲ್ಲೆಯ ಹಗೆರೆ ಗ್ರಾಮದಲ್ಲಿ ಉದ್ಘಾಟನೆಗೆ ಕಾದಿರುವ ಯೋಗ ಮತ್ತು eನ ಕೇಂದ್ರ. ಇದರ ರುವಾರಿ ಅಮೆರಿಕದ ನಿವಾಸಿ ಡಾ. ವಿವೇಕ್‌ಮೂರ್ತಿ. ಅಮೆರಿಕದಲ್ಲಿರುವ ಡಾ.
ವಿವೇಕ್ ಮೂರ್ತಿಯವರು ಬರಾಕ್ ಒಬಾಮ ಮತ್ತು ಈಗಿನ ಅಧ್ಯಕ್ಷ ಬೈಡೆನ್ ಅವಽಯಲ್ಲಿ ಎರಡು ಬಾರಿ ‘ಯುನೈಟೆಡ್ ಸ್ಟೇಟ್ ಸರ್ಜನ್ ಜನರಲ್ ’ ಆಗಿ ಸೇವೆ ಸಲ್ಲಿಸಿದ್ದಾರೆ.
ಈ ಹುದ್ದೆಗೆ ಏರಿದ ಪ್ರಥಮ ಭಾರತೀಯ ವೈದ್ಯ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಹಗೆರೆ ಗ್ರಾಮದಲ್ಲಿ ತಮ್ಮ ತಂದೆ ಲಕ್ಷ್ಮಿನರಸಿಂಹಮೂರ್ತಿಯವರ ಪಾಲಿಗೆ ಬಂದಿರುವ ಹದಿಮೂರು ಎಕರೆ ಪಿತ್ರಾರ್ಜಿತ ಆಸ್ತಿಯಾದ ಭೂಮಿಯಲ್ಲಿ ಇದೀಗ ತಂದೆ ಮತ್ತು ಮಗ ಇಬ್ಬರೂ ಸೇರಿ ‘ಮದರ್ ಆಫ್ ಅರ್ಥ್’ ಹೆಸರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಯೋಗ ಮತ್ತು ಧ್ಯಾನದ ಕೇಂದ್ರ ತೆರೆಯುತ್ತಿzರೆ. ಇದರ ಉದ್ಘಾಟನೆಗೆ ಬರಾಕ್ ಒಬಾಮ ದಂಪತಿ ಮತ್ತು ಬೌದ್ಧಗುರು
ದಲೈಲಾಮ ಡಿಸೆಂಬರ್ ತಿಂಗಳಿನಲ್ಲಿ ಬರುತ್ತಿದ್ದಾರೆ.
ಅದನ್ನ ನೋಡಿ ಕೆಲವರಿಗೆ ಬೌದ್ಧಿಕ ಅಪಸ್ಮಾರ ಪ್ರಾರಂಭ ವಾಗಿದೆ ‘ಹಳ್ಳಿಯ ಜನರಿಗೆ ಯೋಗ, ಧ್ಯಾನ ಬೇಕಾಗಿಲ್ಲ. ಇವರಿಗೆ ಬೇಕಾಗಿರುವುದು ಆಸ್ಪತ್ರೆಗಳು, ಡಾ ವಿವೇಕ್ ಅವರಿಗೆ ಯೋಗಕೇಂದ್ರದ ಬದಲು ಆಸ್ಪತ್ರೆ ತೆರೆಯಲು ಹೇಳಿ’ ಎಂದು ಆರಂಭಿಸಿzರೆ. ಮೊದಲಿಗೆ ಅವರು ಸರಕಾರದ ಹಣದಿಂದ ಇದನ್ನು ನಿರ್ಮಿಸುತ್ತಿಲ್ಲ. ತಾಯ್ನನೆಲಕ್ಕೆ ನಾದರೂ ಮಾಡಬೇಕೆಂಬ ಆಶಯದೊಂದಿಗೆ ಸ್ವಂತ ಹಣದಿಂದ ಮಾಡುತ್ತಿರುವ ಉಪಕಾರ. ಉಡುಗೊರೆ ತೆಗೆದು ಕೊಳ್ಳುವಾಗ ಆಯ್ಕೆಗೆ ಅವಕಾಶವಿಲ್ಲ. ಹಳ್ಳಿಗರಿಗೆ ಯೋಗ ಮತ್ತು ಧ್ಯಾನ ಕೇಂದ್ರ ಬೇಡ ಎಂದು ಹೇಳಲು ಇವರುಗಳು ಯಾರು? ಇವರ ಗುರಿ ಯೋಗ ಕೇಂದ್ರವೋ ಅಥವಾ
ಸಿದ್ಧಾಂತವೋ? ಬರಾಕ್ ಒಬಾಮರವರಂಥ ಮಾಜಿ ಅಮೆರಿಕ ಅಧ್ಯಕ್ಷರೇ ಯೋಗದಂಥ ಭಾರತೀಯ ಸಂಸ್ಕೃತಿಗೆ ಬೆಂಬಲ ನೀಡುತ್ತಿರುವುದನ್ನು ಇವರು ಸಹಿಸುತ್ತಿಲ್ಲವಾ? ಕೇಂದ್ರ ಹಳ್ಳಿಯಲ್ಲಿ ಇದ್ದರೆ ಏನಾಯಿತು? ಅದನ್ನು ಹಳ್ಳಿಯವರು ಮಾತ್ರ ಉಪಯೋಗಿಸುತ್ತಾರಾ? ನೋಡುತ್ತ ಇರಿ ಹಳ್ಳಿಗರಿಗಿಂತ ಹೆಚ್ಚಾಗಿ ಸುತ್ತ ಮುತ್ತಲಿನ ನಗರದಲ್ಲಿರುವರಿಗೆ ಇದೊಂದು ವಾರಂತ್ಯದ ಸ್ಥಳವಾಗಲಿದೆ. ಅದನ್ನು ನೋಡಿ ವಿರೋಧಿಗಳೂ ಸಹಿಸಲೇಬೇಕು.
ಕೊನೆಮಾತು: ‘ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಅಳೆದರಂತೆ!’ ಎಂಬುದು ಹಳೆಯ ಗಾದೆ. ಈಗ ಪುಕ್ಸಟ್ಟೆ ಕೊಡುಗೆಗೆ ಎಕ್ಸ್‌ಚೇಂಜ್ ಆಫರ್ ಕೂಡಿ ಎನ್ನುವರಿಗೂ
‘ಅಯ್ಯೋ ಪಾಪ’ ಎಂದುಬಿಟ್ಟರೆ , ನಮಗೆ ಅರ್ಧ ಆಯುಸ್ಸು ಅಷ್ಟೇ !
(ಲೇಖಕರು ರೇಡಿಯೊಲೊಜಿಸ್ಟ್, ಹವ್ಯಾಸಿ ಬರಹಗಾರರು)