ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಸ್ಯಾಂಡಲ್‌ವುಡ್‌ನಲ್ಲಿ ಬಹಳ ದಿನಗಳ ನಂತರ ಮತ್ತೆ ಚಿತ್ರಮಂದಿರಗಳು ಗರಿಗೆದರಿವೆ. ಸಲಗ ಮತ್ತು ಕೋಟಿಗೊಬ್ಬ 3 ಚಿತ್ರಗಳು ಬಿಡುಗಡೆ ಆಗಿವೆ. ಇವುಗಳಲ್ಲಿ
ಸಲಗ ಚಿತ್ರ ಹೆಚ್ಚು ಸದ್ದು ಮಾಡುತ್ತಿದೆ. ಆದರೆ ಅದು ನಕಾರಾತ್ಮಕ ವಿಷಯಗಳಿಗೆ. ಚಿತ್ರದ ಕಥೆಯಲ್ಲೂ ಕೂಡ ಸಾಕಷ್ಟು ಗೊಂದಲಗಳಿವೆ. ನಾಲ್ಕು ಜನ ನೋಡಿ
ಕಲಿಯುವಂತೆ ಬದುಕಬೇಕಾಗಿದ್ದ ಮೇಷ್ಟರ ಮಗ, ಮೂರು ಜನದ ಮೇಲೆ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ರೌಡಿ ಆಗಬೇಕಿತ್ತೇ?ಎಂಬ ಪ್ರಶ್ನೆ ಚಿತ್ರಮಂದಿರ
ಬಿಟ್ಟು ಹೊರಬಂದ ಮೇಲೂ ಕಾಡುತ್ತದೆ. ಆದರೆ ನಿಜವಾದ ಸಮಸ್ಯೆ ಇರೋದು ಚಿತ್ರದ ಡೈಲಾಗ್ ಮತ್ತು ಕೆಲವು ದೃಶ್ಯಗಳಲ್ಲಿ.
ಚಿತ್ರಕ್ಕೆ ಅ’ ಸರ್ಟಿಫಿಕೇಟ್ ನೀಡಲಾಗಿದೆ ನಿಜ. ಆದರೆ ಸಿನಿಮಾ ಶುರುವಾಗುತ್ತಿದ್ದಂತೆ ಮಾಸ್ತಿ ಅವರ ಸಂಭಾಷಣೆಯ ಕೆಲವೊಂದು ಪದಗಳನ್ನು ಕೇಳಿದ ಪ್ರೇಕ್ಷಕ ಅ’ನ್ ನಡೀತಾ ಇದೆ ಇಲ್ಲಿ’ ಎಂದು ಕಂಗಾಲಾಗು ತ್ತಾನೆ. ಆ ಮಟ್ಟಕ್ಕೆ ಸೂ.. ಮಗ, ಬೋ..ಮಗ, ಗಾಂಡುಗಳ ಜೊತೆಗೆ, ಇಲ್ಲಿ ಹೇಳಲು ಸಾಧ್ಯವಾಗದ ಮತ್ತು ಸೆನ್ಸಾರ್ ನಲ್ಲಿ ಬ್ಯಾನ್ ಆಗಿವೆ ಎಂದೇ ನಂಬಲಾಗಿದ್ದ ಅನೇಕ ಬೈಗುಳಗಳನ್ನು ಕೇಳಿ, ಏನ್ ರ್ಸಾ, ಈ ಸಿನಿಮಾಕ್ಕೆ ನಿಜಕ್ಕೂ ಸೆನ್ಸಾರ್ ಮಾಡಿzರಾ?’ ಎಂಬ ಅನುಮಾನ ಮೂಡುತ್ತದೆ. ಇದಕ್ಕಿಂತಲೂ ಭಯ ಹುಟ್ಟಿಸುವ ವಿಷಯ ಅಂದ್ರೆ, ಒಬ್ಬ ರೌಡಿ ಇನ್ನೊಬ್ಬ ರೌಡಿಯ ಬಾಯಿಗೆ ಲಾಂಗ್ ಚುಚ್ಚುತ್ತಾನೆ. ಆ ಲಾಂಗ್ ಅವನ ತಲೆಯ ಹಿಂಬದಿಯಿಂದ ಹೊರಗೆ ಬರುತ್ತದೆ. ಆಗ ಮಲ್ಟಿಪ್ಲೆಕ್ಸ ಚಿತ್ರಮಂದಿರದಲ್ಲೂ ಶಿಳ್ಳೆ ಕೇಳಿಬರುತ್ತದೆ.
ಇದನ್ನೆ ನೋಡಿದಾಗ, ಇಂಥ ದೃಶ್ಯಗಳನ್ನು ಎಂಜಾಯ್ ಮಾಡುವಂಥ ಮನಸ್ಥಿತಿಗೆ ಬಂದಿದ್ದಾರೆಯೇ ನಮ್ಮ ಪ್ರೇಕ್ಷಕರು ಅಂತ ಗಾಬರಿ ಆಗೋದು ಸಹಜ. ಚಿತ್ರದಲ್ಲಿ ಸಭ್ಯ ನಾಯಕ ಒಬ್ಬ ವಿಲನ್ ಅನ್ನು ಅವನು ಕೆಟ್ಟವನು ಅನ್ನೋ ಕಾರಣಕ್ಕೆ ಸಾಯಿಸಿದಾಗ, ಅದು ಖುಷಿ ಪಡೋ ವಿಷ್ಯ ಅಂದ್ರೆ ಅದಕ್ಕೊಂದು ಅರ್ಥ ಇದೆ. ಆದರೆ ಇಬ್ಬರು ರೌಡಿಗಳ ನಡುವೆ ಯಾರೋ ಒಬ್ಬ ಇನ್ಯಾರಿಗೋ ಭೀಕರವಾಗಿ ಚುಚ್ಚಿ ಸಾಯಿಸಿದರೆ ಅದರಲ್ಲಿ ಎಂಜಾಯ್ ಮಾಡುವಂಥ್ದದೇನಿದೆ ಎಂಬ ಪ್ರಶ್ನೆ ಕಾಡು ತ್ತದೆ. ಇಂಥ ಪ್ರೇಕ್ಷಕರು ಇzರೆ ಅನ್ನೋ ನಂಬಿಕೆಯ ಸಲಗ ಚಿತ್ರದಲ್ಲಿ ಭೀಕರ ಕೊಲೆಗಳನ್ನೂ, ಅಸಹ್ಯವಾದ ಬೈಗುಳಗಳನ್ನೂ ತುಂಬಿರಬೇಕು ಅನಿಸೋದು ಸುಳ್ಳಲ್ಲ.
ಲೂಸ್ ಟಾಕ್
ಮಹೇಂದ್ರ ಸಿಂಗ್ ಧೋನಿ (ಕಾಲ್ಪನಿಕ ಸಂದರ್ಶನ)
ಅಂತೂ ಇಂತೂ ಮತ್ತೆ ಕಪ್ ಗೆದ್ರಲ್ಲ. ಅ ಅಷ್ಟೊಂದ್ ಕಪ್ ತಗೊಂಡ್ ಏನ್ ಮಾಡ್ತೀರಾ ಅಂತ?
-ಯಾರ್ದಾದ್ರೂ ಮದ್ವೆಗೆ ಹೋದಾಗ ‘ಕಪ್’ ಕಾಣಿಕೆ ಕೊಡೋಕೆ ಯೂಸ್ ಆಗುತ್ತೆ ಬಿಡಿ.
ನೀವ್ ಯಾವತ್ತೂ ನಾವು ಟೂರ್ನಮೆಂಟ್ ಗೆಲ್ತೀವಿ, ಕಪ್ ಹೊಡೀತೀವಿ ಅಂತ ಯಾಕೆ ಮೊದಲೇ ಹೇಳಿಕೊಳ್ಳಲ್ಲ?
-ಮೊದ್ಲೇ ‘ಕಪ್’ ಹೊಡೀತಿವಿ ಅಂತ ಹೇಳ್ಕಂಡು, ಆಮೇಲೆ ಸೋತುಕಪ್ ಬದ್ಲು ‘ಚೊಂಬ್’ ಹಿಡ್ಕೊಂಡ್ ಹೋದ್ರೆ ನಗೆಪಾಟಲಾಗುತ್ತೆ ಅಂತ.
ಸರಿ, ಈಗ ಮುಂದಿನ್ ವರ್ಷ ಐಪಿಎಲ್ ಆಡ್ತೀರೋ ಇಲ್ವೋ?
-ನಾನು ವಿಕೆಟ್ ಕೀಪರ್, ಮುಂದಿನದ್ದು ಯೋಚ್ನೆ ಮಾಡಲ್ಲ, ಹಿಂದಿನಿಂದ ಮಾತ್ರ ಯೋಚನೆ ಮಾಡ್ತೀನಿ.
ಅದೇನು, ರೈನಾ ನಿಮ್ ಶಿಷ್ಯ ಆಗ್ಬಿಟ್ಟಿದ್ದಾರೆ, ಎಲ್ಲದ್ರಲ್ಲೂ ನಿಮ್ಮನ್ನೇ ಫಾಲೋ ಮಾಡ್ತಾರಲ್ಲ ?
-ಹಿ ಈಸ್ ಎ ಸಿಲ್ಲಿ ಫಾಲೋ. ಅದಕ್ಕೇ ಲಾಸ್ಟ್ ೩ ಮ್ಯಾಚ್ ಗಳಲ್ಲಿ ಅವನನ್ನ ಅನ್ ಫಾಲೋ ಮಾಡಿಬಿಟ್ಟೆ
ಅದ್ಸರಿ, ರವೀಂದ್ರ ಜಡೇಜಾ ಅವರನ್ನ ನೀವು ಸರ್ ಜಡೇಜಾ ಅಂತ ಯಾಕೆ ಕರೆಯೋದು?
-ಅದು ನಾವು ಸರ್’ಕಾಸ್ಟಿಕ್ ಆಗಿ ಕರೆಯೋ ಹೆಸರು. ಅವ್ನು ಸೀರಿಯಸ್ಸಾಗಿ ತಗೊಂಡು ಖುಷಿಪಡ್ತಾನೆ.
ನೆಟ್ ಪಿಕ್ಸ್
ಖೇಮು ಹೆಂಡತಿಯ ಮಹಿಳಾ ಸಮಾಜದ ಗೆಳತಿಯರೆ ಸೇರಿಕೊಂಡು ಒಂದು ಕಪಲ್ ಪಾರ್ಟಿ ಏರ್ಪಡಿಸಿದರು. ಪಾರ್ಟಿಯ ದಿನ ಎಲ್ಲರೂ ಗೆಳೆಯರೊಬ್ಬರ
ಮನೆಯಲ್ಲಿ ಸೇರಿದರು. ಅಲ್ಲಿ ಮನರಂಜನೆ, ಊಟ, ಡ್ಯಾನ್ಸ ಎಲ್ಲವೂ ಆದ ನಂತರ ಏನಾದರೂ ಗೇಮ್ ಆಡೋಣ ಅಂತ ಎಲ್ಲರೂ ಮಾತಾಡಿಕೊಂಡರು. ಆಗ
ಖೇಮುಶ್ರೀ ಹೇಳಿದಳು, ನಮ್ಮೆಲ್ಲರ ಗಂಡಂದಿರು ನಮ್ಮನ್ನ ಎಷ್ಟು ಪ್ರೀತಿಸುತ್ತಾರೆ ಅಂತ ತಿಳ್ಕೊಳ್ಳೋದಕ್ಕೆ ಒಂದು ಆಟ ಆಡೋಣ ಅಂದ್ಳು. ಅದರ ಪ್ರಕಾರ ಎಲ್ಲಾ
ಹೆಂಡತಿಯರು ಅವರವರ ಗಂಡಂದಿರಿಗೆ ಉತ್ತರಿಸಲು ಕಷ್ಟ ಆಗುವಂಥ ಪ್ರಶ್ನೆ ಕೇಳಬೇಕು ಎಂದಾಯ್ತು.
ಅದರ ಜೊತೆಗೆ ಆ ಪ್ರಶ್ನೆಯಲ್ಲಿ ಆಯಾ ಗಂಡ ತನ್ನ ಹೆಂಡತಿಯನ್ನು ಎಷ್ಟು ಪ್ರೀತಿಸುತ್ತಾನೆ ಅಂತನೂ ಎಲ್ಲರಿಗೂ ಗೊತ್ತಾಗಬೇಕು ಎಂದು ತೀರ್ಮಾನ ಆಯಿತು. ಸರಿ, ಒಬ್ಬೊಬ್ಬರದ್ದೇ ಸರದಿ ಶುರುವಾಯ್ತು. ಎಲ್ಲರೂ ಗಂಡಂದಿರನ್ನು ಪ್ರಶ್ನೆ ಕೇಳೋಕೆ ಶುರು ಮಾಡಿದ್ರು. ನಿಮಗೆ ನಾನು ಮುಖ್ಯನಾ, ನಿಮ್ಮ ತಾಯಿ ಮುಖ್ಯನಾ?’ ಎಂಬ ಟಿಪಿಕಲ್ ಪ್ರಶ್ನೆಯಿಂದ ಆಟ ಶುರುವಾಯಿತು.
ಎಲ್ಲರೂ ಹೀಗೆ ಕೇಳ್ತಾ ಹೋದರು. ಅದಕ್ಕೆ ತಕ್ಕಂತೆ, ಸತ್ಯನೋ ಸುಳ್ಳೋ, ಒಟ್ಟಿನಲ್ಲಿ ತಮ್ಮ ತಮ್ಮ ಹೆಂಡತಿಯರನ್ನು ಮೆಚ್ಚಿಸುವಂಥ ಉತ್ತರಗಳನ್ನು ಕೊಟ್ಟು ಎಲ್ಲ
ಗಂಡಂದಿರು ತಮಗೆ ಹೆಂಡತಿ ಮೇಲೆ ಪ್ರೀತಿ ಇದೆ ಅಂತ ನಿರೂಪಿಸುತ್ತಾ ಹೋದರು. ಕೊನೆಯಲ್ಲಿ ಪಾರ್ಟಿ ಆಯೋಜಿಸಿ, ಈ ಆಟವನ್ನು ಶುರು ಮಾಡಿದ ಖೇಮುಶ್ರೀ ಸರದಿ ಬಂತು. ಎಲ್ಲರೂ ಬರೀ ಸುಲಭದ ಪ್ರಶ್ನೆ ಕೇಳ್ತಾ ಇದ್ದಾರೆ. ನಾನು ನನ್ನ ಗಂಡನನ್ನು ಸಿಕ್ಕಿ ಹಾಕಿಸುನವಂಥ ಪ್ರಶ್ನೆ ಕೇಳಬೇಕು ಅಂದುಕೊಂಡ ಖೇಮುಶ್ರೀ, ಖೇಮುಗೆ ತನ್ನ ಪ್ರಶ್ನೆ ಕೇಳಿದಳು, ನಿಮಗೆ ಒಂದು ದಿನ ೫ ಕೋಟಿ ಲಾಟರಿ ಹೊಡೆಯುತ್ತೆ. ನೀವು ತುಂಬಾ ಖುಷಿಯಾಗಿ ಆ ದುಡ್ಡು ತಗೊಂಡು ಮನೆಗೆ ಬಂದ ತಕ್ಷಣ, ನಿಮಗೊಂದು ಕಾಲ್ ಬರುತ್ತೆ.
ನಿಮ್ಮ ಹೆಂಡತಿಯನ್ನ ಕಿಡ್ನ್ಯಾಪ್ ಮಾಡಿದ್ದೇವೆ, 5 ಕೋಟಿ ಕೊಟ್ಟು ಕರ್ಕೊಂಡ್ ಹೋಗು ಅಂತ. ಆಗ ನೀವೇನ್ ಮಾಡ್ತೀರಾ?’. ಈ ಪ್ರಶ್ನೆ ಕೇಳಿದ ಮೇಲೆ ಎಲ್ಲರೂ ಖೇಮು ಮುಖ ನೋಡೋಕೆ ಶುರು ಮಾಡಿದ್ರು. ಒಂದು ಕ್ಷಣ ಸುಮ್ಮನಿದ್ದ ಖೇಮು ನಂತರ ಹೇಳಿದ, ಇದೆ ಆಗಲ್ಲ ಬಿಡು. ನನ್ನ ಅದೃಷ್ಠ ಒಂದೇ ದಿನ ಎರಡೆರಡು ಲಾಟರಿ ಹೊಡೆಯುವಷ್ಟು ಚೆನ್ನಾಗಿಲ್ಲ ಅಂತ ನಂಗೊತ್ತು’.
ಲೈನ್ ಮ್ಯಾನ್
ಕ್ವೆಶ್ಚನ್ ಪೇರ್ಪ ಲೀಕ್ ಮಾಡಿ ಸಿಕ್ಕಿ ಹಾಕಿಕೊಂಡವರ ಕಥೆ
-ಪೊಲೀಸ್ನೋರು ಕೇಳೋ ಪ್ರಶ್ನೆಗಳನ್ನೂ ಯಾರಾದ್ರೂ ಲೀಕ್ ಮಾಡಿದ್ದಿದ್ರೆ ಬಚಾವ್ ಆಗ್ತಾ ಇದ್ವಿ
ಮತ್ತೆ ಮತ್ತೆ ಫಾರಿನ್ನಿಗೆ ಟ್ರಿಪ್ ಹೋಗೋ ಹುಚ್ಚು ಇರುವವರು
-ಅಬ್ರಾಡ್ ಮೈಂಡೆಡ್
ವೆಸ್ಟ್ ಬೆಂಗಾಲ್ ನಲ್ಲಿ ಕಸ ಹಾಕುವ ಜಾಗ
-‘ವೇಸ್ಟ್’ ಬೆಂಗಾಲ್
ದುಬೈ ನಲ್ಲಿ ಹಾಲು ಮಾರುವವನು
-ಮಿಲ್ಕ ‘ಶೇಖ್’
ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚಾಗಿ ಉಪಯೋಗಿಸುವ ದೇಶ
-ಉಜ್ಬೇಕಿಸ್ತಾನ್
ಹಳಸಿದ ಆಹಾರ ತಿಂದು ಗಟ್ಟಿಮುಟ್ಟಾಗಿರುವವನ ಮಾತು
-‘ಬೂಸ್ಟ್’ ಈಸ್ ದ ಸೀಕ್ರೆಟ್ ಆಫ್ ಮೈ ಎನರ್ಜಿ
ಪ್ರಾಣಿಗಳು ಯಾರನ್ನಾದರೂ ಕೊಂದರೆ ಅವುಗಳನ್ನೇಕೆ ಜೈಲಿಗೆ ಹಾಕಲ್ಲ?
-ಯಾಕಂದ್ರೆ ಅವು ‘ಬಾಲಾ’ಪರಾಧಿಗಳು
ಗಾಂಧಾರಿಗೆ ನೂರು ಮಕ್ಕಳಾದಾಗ ಆಗಿದ್ದು
-‘ಬಸಿರು’ ಕ್ರಾಂತಿ
ಇಗೋ ಜಾಸ್ತಿ ಇದ್ದು ದುರಹಂಕಾರ ತೋರಿಸುವವರದು
-‘ನಾನ್’ ಸೆನ್ಸ್
ಯಾವಾಗಲೂ ನಾನು, ನಾನು ಅಂತನೇ ಮಾತಾಡೋನು
-‘ಐ’ ಸ್ಪೆಷಲಿಸ್ಟ್