Sunday, 13th October 2024

ಅವಮಾನಗಳನ್ನು ಸಂಯಮದಿಂದ ಎದುರಿಸುವುದು ಹೇಗೆ ?

ಶ್ವೇತಪತ್ರ

shwethabc@gmail.com

ಬ್ರಿಟಿಷ್ ಬರಹಗಾರ್ತಿ ಮ್ಯಾಲನಿ ಚಾಲೆಂಜರ್‌ಳ ಮಾತುಗಳು ನೆನಪಾಗುತ್ತಿವೆ. ಆಕೆ ಹೇಳುವುದೇ ನೆಂದರೆ ಜನರನ್ನು ಅವಮಾನಿಸುವ ಮೂಲಕ ಎದುರಿನವರನ್ನು ಅರ್ಥ ಮಾಡಿಕೊಳ್ಳುವ ನಮ್ಮೊಳಗಿನದೇ ಸಾಮರ್ಥ್ಯ ಕಳೆದುಕೊಂಡು ಬಿಡುತ್ತೇವೆ. ಬೇರೆಯವರನ್ನು ಅವಮಾನಿಸುವುದು, ಕೀಳಾಗಿ ಕಾಣುವುದು, ಸಹಜವೆನಿಸುವಷ್ಟು ಸಾಮಾನ್ಯ ವರ್ತನೆ ಯಾಗಿದೆ.

ಮೂರ್ಖ, ತಲೆ ಇಲ್ಲದವನೇ, ಹೆಡ್ಡ, ನಿರ್ಲಜ್ಜ, ನಾಚಿಗೆಗೆಟ್ಟವನೆ… ಹೀಗೆ ಸಾಗುತ್ತದೆ ನಮ್ಮ ಅವಮಾನಿಸುವ ಭಾಷೆ. ಫೇಸ್ಬುಕ್, ಟ್ವೀಟರ್, ಇನ್‌ಸ್ಟಾಗ್ರಾಮ್ ಖಾತೆಗಳ ಕಮೆಂಟ್ ವಿಭಾಗ ತೆರೆದರಂತೂ ಯಾರೋ ಹಾಕಿರುವ ಪೋಸ್ಟ್‌ಗಳಿಗೆ ಇನ್ಯಾರದ್ದೋ ಅವಮಾನಿಸುವ ಕಮೆಂಟು. ಶಾಲೆಗಳಲ್ಲಿ ಓದಿನ ಕಾರಣಕ್ಕೋ, ನಮ್ಮ ವೇಷ-ಭೂಷಣಗಳ ಕಾರಣಕ್ಕೋ, ನಮ್ಮ ಮಾತಿನ ಧಾಟಿಯ ಕಾರಣಕ್ಕೋ, ಮನಃ ಸ್ಥಿತಿಯ ಕಾರಣಕ್ಕೋ… ಹಾಗೆಯೇ ಮುಂದೆ ಬೆಳೆದಂತೆ ಬಾಸ್ ಎದುರಿಗೆ ಕಾರಣಗಳೇ ಇಲ್ಲದೆ, ಇಲ್ಲವೇ ಸ್ನೇಹಿತನೊಬ್ಬ ಬದುಕಲ್ಲಿ ಚೆನ್ನಾಗಿ ಸೆಟ್ಲ್ ಆಗಿ ಕಾರಲ್ಲಿ ಬರುವಾಗ ನಾವಿನ್ನು ಅದೇ ಬಿಎಂಟಿಸಿ ಬಸ್‌ನಲ್ಲಿ ಸೀಟಿಗಾಗಿ ಪರದಾಡುವಾಗ ಹೀಗೆ ಬದುಕಿನ ಬೇರೆ ಬೇರೆ ಸ್ತರಗಳಲ್ಲಿ ನಾವೆಲ್ಲ ಒಂದಿಂದು ವಿಷಯಕ್ಕೆ ಅವಮಾನಕ್ಕೆ ಒಳಗಾಗುವವರೇ. ಎದುರಿಗಿರುವ ಕಣ್ಣುಗಳಲ್ಲಿ ಕೀಳಾಗಿ ಕಾಣಿಸಿಕೊಂಡವರೇ.

ಅವಮಾನವೆಂಬುದು ಮಾನಸಿಕವಾಗಿ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳು ಎದುರಿಗಿರುವ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ನಿಂದಿಸು ವುದು. ಈ ಮಾನಸಿಕ ನಿಂದನೆಯೆಂದರೆ ನಮಗಿಂತ ಆತ್ಮವಿಶ್ವಾಸದಿಂದಿರುವ ಎದುರಿಗಿನ ವ್ಯಕ್ತಿಯ ಧ್ವನಿಯನ್ನು ಸದ್ದಿಲ್ಲದೆ ಅಡಗಿಸುವುದು. ಮನುಷ್ಯ ಬೇರೆಯವರ ಮನಸ್ಸನ್ನು ತನಿಖೆ ಮಾಡುತ್ತಲೇ, ಆತನ ವ್ಯಕ್ತಿತ್ವವನ್ನು ನಿರ್ಣಯಿಸುತ್ತಲೇ, ಒಬ್ಬರಿಗೊಬ್ಬರು ಹೊಂದಿಕೊಂಡು ಸಮನ್ವಯದಿಂದ ಬದುಕ ಹೊರಡುತ್ತೇವೆ. ಸಮನ್ವಯದ ಕೊರತೆಯಾದರೆ ಹೊಂದಾಣಿಕೆ ಗಿಂತ ಅವಮಾನವೇ ಪ್ರಧಾನವಾಗಿ ನಿಲ್ಲುತ್ತದೆ.

ಐದನೇಯ ವಯಸ್ಸಿನ ಹೊತ್ತಿಗೆ ಮತ್ತೊಬ್ಬರ ಮನಃಸ್ಥಿತಿಯ ಬಗ್ಗೆ ನಮ್ಮೊಳಗೆ ಊಹೆಗಳು ಬೇರುಬಿಟ್ಟಿರುತ್ತವೆ. ಮುಂದೆ ಈ ಊಹೆಗಳೇ ನಮ್ಮಲ್ಲಿ ಅವಮಾನಿಸುವ ಮನಃಸ್ಥಿತಿಯನ್ನು ಬೆಳೆಸುತ್ತವೆ. ಅವಮಾನಗಳು ಬೇರೆಯವರ ಮನಸ್ಸನ್ನು ಕುಟುಕಲಿ, ಇರಿಯಲಿ, ಚುಚ್ಚಲಿ ಎಂಬ ಮನಸ್ಥಿತಿಯಿಂದಲೇ ಹುಟ್ಟಿಕೊಳ್ಳುವ ವರ್ತನೆಗಳು. ಉದಾಹರಣೆಗೆ ನಿಮ್ಮ ತಂದೆ ಅವರ ಅಕ್ಕ-ತಂಗಿ, ಅಣ್ಣ -ತಮ್ಮ ಇತ್ಯಾದಿ ಎಲ್ಲರ ಎದುರಿಗೆ ನಿಮ್ಮನ್ನು ಕೆಲಸಕ್ಕೆ ಬಾರದವನು/ಳು ಎಂದುಬಿಟ್ಟರು ಎಂದಿಟ್ಟುಕೊಳ್ಳೋಣ, ಅವರೆಲ್ಲರ ಎದುರಿಗೆ ನಿಮಗೆ ಅವಮಾನವಾಗುತ್ತದೆ.

ಅಲ್ಲದೇ ಅಲ್ಲಿದ್ದವರು ನಿಮ್ಮನ್ನು ನೋಡಿ ನಕ್ಕುಬಿಟ್ಟರಂತೂ ಗಂಟಲು ಕಟ್ಟಿ ‘ಭೂಮಿಯೆ ಬಾಯಿ ತೆರೆಯಬಾರದೆ’ ಎನ್ನುವಷ್ಟು ಸಂಕಟ, ಅವಮಾನ ಎಲ್ಲರೆದುರಿಗೆ ಆಗುತ್ತದೆ. ಈ ತೆರನಾದ ಅವಮಾನದ ಅನುಭವಗಳು ಮತ್ತಷ್ಟು ಆತ್ಮಗೌರವಕ್ಕೆ ಧಕ್ಕೆಯನ್ನು ಉಂಟು ಮಾಡುತ್ತವೆ. ಮಾತಿನ ಮೂಲಕ ಅವಮಾನಿಸುವುದು ಹೆಚ್ಚು ಸಾರ್ವತ್ರಿಕ. ಅವಮಾನಗಳು ಪ್ರತಿಯೊಬ್ಬ ರಿಗೂ ಕಡ್ಡಾಯವಾಗಿ ಹಾನಿಯನ್ನುಂಟು ಮಾಡದಿದ್ದರೂ ಒಬ್ಬರ ಮುಖಭಂಗಕ್ಕೂ, ಖ್ಯಾತಿಗೂ ಭಂಗವನ್ನುಂಟು ಮಾಡುತ್ತವೆ.

ಎಷ್ಟೋ ಸಲ ನಮ್ಮಷ್ಟಕ್ಕೆ ನಾವೇ ಹೇಳಿಕೊಳ್ಳುವುದುಂಟು, ದೊಣ್ಣೆ ಮತ್ತು ಕೋಲಿನೇಟುಗಳು ನನ್ನ ಮೂಳೆ ಮುರಿದಿರಬಹುದು. ಆದರೆ ಮಾತಿನ ಏಟು ಎಂದಿಗೂ ನನ್ನ ಮನಸ್ಸನ್ನು ಮುಟ್ಟಲಾರದು ಎಂದು. ಇದು ನಮ್ಮ ಷ್ಟಕ್ಕೆ ನಾವು ಸಮಾಧಾನ ಪಡಿಸಿಕೊಳ್ಳುವ ಯೋಚನೆಯಾದರೂ ಇದು ನಿಜವಲ್ಲ. ಮಾತಿನ ಏಟು ನಮ್ಮನ್ನು ತಲ್ಲಣಿಸುತ್ತದೆ. ಕನಿಷ್ಠ ಪಕ್ಷ ಒಂದು ಕಾರಣಕ್ಕಾದರೂ ಪರಸ್ಪರ ಸಂಬಂಧಗಳ ನಡುವೆ ಅವಮಾನ ಇಣುಕಿದಾಗ ಮನಸ್ಸು ಖಂಡಿತ ನೋಯುತ್ತದೆ.

ಪ್ರತಿನಿತ್ಯ ನಮಗಾಗುವ ಅವಮಾನದ ಅನುಭವಗಳು ನಮ್ಮೊಳಗೆ ಹೆಚ್ಚಿನ ನಕಾರಾತ್ಮಕ ಭಾವದ ಹೊರೆಯನ್ನು ತುಂಬಿಸು ತ್ತವೆ. ಅವಮಾನಗಳನ್ನು ಮನಸ್ಸಿನವರೆಗೂ ತರದೇ ಮುಂದೆ ಸಾಗಿಬಿಡಬೇಕು. ಇಲ್ಲವಾದರೆ ಅವು ನಮ್ಮ ಇಡೀ ದಿನವನ್ನು ಮತ್ತು ಅದರ ಆಚೆಗೂ ನಮ್ಮ ಮನಃಸ್ಥಿತಿಯನ್ನು ನುಂಗಿ ಹಾಕಿ ಬಿಡುತ್ತವೆ. ಅವಮಾನದ ಬಗ್ಗೆ ಜೆನ್ ಕಥೆಯೊಂದಿದೆ. ಒಂದು ಕಾಲದಲ್ಲಿ ಒಬ್ಬ ಶ್ರೇಷ್ಠ ಯೋಧ ಗುರುವಿದ್ದ. ಆತನಿಗೆ ವಯಸ್ಸಾಗಿದ್ದರೂ ಎಂತಹುದೇ ಸವಾಲನ್ನು ಆತ ಎದುರಿಸಬಲ್ಲವ ನಾಗಿದ್ದ. ಅನೇಕ ವಿದ್ಯಾರ್ಥಿಗಳು ಅವನ ಬಳಿ ವಿದ್ಯೆ ಕಲಿಯಲು ಧಾವಿಸುತ್ತಿದ್ದರು. ಆ ಶ್ರೇಷ್ಠ ಯೋಧ ಗುರುವಿದ್ದ ಹಳ್ಳಿಗೆ ಒಂದು ದಿನ ಅಪಖ್ಯಾತಿ ಹೊಂದಿರುವ ಯೋಧನೊಬ್ಬ ಬರುತ್ತಾನೆ.

ಶ್ರೇಷ್ಠ ಯೋಧ ಗುರುವನ್ನು ಸೋಲಿಸಿಯೇ ತೀರುತ್ತೇನೆ ಎಂಬುದು ಅವನ ಪಣವಾಗಿತ್ತು. ತನ್ನ ಶಕ್ತಿ ಪರಾಕ್ರಮದ ಜತೆಗೆ, ತನ್ನ ವಿಲಕ್ಷಣ ವರ್ತನೆಯ ಮೂಲಕ ಎದುರಿಗಿರುವ ವ್ಯಕ್ತಿಯನ್ನು ಕುಗ್ಗಿಸುವ ತಂತ್ರಗಾರಿಕೆ ಅವನದ್ದಾಗಿತ್ತು. ಆತನ ಎದುರಿಗಿರುವ ವ್ಯಕ್ತಿಯ ಯಾವುದಾದರೂ ಒಂದು ದೌರ್ಬಲ್ಯವನ್ನು ಗುರುತಿಸಿ ಶೋಷಣೆ ಮಾಡುವುದು ಆತನ ವಿಚಿತ್ರ ವರ್ತನೆಗಳಂದಾಗಿತ್ತು. ತನ್ನ ಎದುರಿಗಿರುವ ವ್ಯಕ್ತಿಗೆ ಮೊದಲ ಹೆಜ್ಜೆಯಿಡಲು ಅನುವು ಮಾಡಿಕೊಟ್ಟು ಅಲ್ಲಿ ಅವನ ದೌರ್ಬಲ್ಯದ ಎಳೆಯನ್ನುಹಿಡಿದು ಯಾವುದೇ ದಯ-ದಾಕ್ಷಿಣ್ಯವಿಲ್ಲದೆ ಶಕ್ತಿಯುತವಾಗಿ ಆತನೆದುರಿಗೆ ಮುಂದುವರಿಯುತ್ತಿರುತ್ತಾನೆ.

ಆವರೆಗೂ ಯಾರೂ ಈತನೆದುರು ಗೆದ್ದವರಿರಲಿಲ್ಲ. ತನ್ನ ವಿದ್ಯಾರ್ಥಿಗಳು ಎಷ್ಟು ಬೇಡವೆಂದರೂ ಶ್ರೇಷ್ಠ ಯೋಧ ಗುರು, ಅಪಖ್ಯಾತಿಯ ಯೋಧನ ಸವಾಲನ್ನು ಸ್ವೀಕರಿಸುತ್ತಾನೆ. ಇಬ್ಬರ ನಡುವೆಯೂ ಸವಾಲು ಏರ್ಪಟ್ಟ ಕೆಲವೇ ಕ್ಷಣಗಳಲ್ಲಿ ಅಪಖ್ಯಾತಿ ಹೊಂದಿರುವ ಯೋಧ ಅನೇಕ ಅವಮಾನಗಳನ್ನು ಶ್ರೇಷ್ಠ ಗುರುವಿನೆಡೆಗೆ ತೂರತೊಡಗುತ್ತಾನೆ. ಜತೆಯ ಕಸ ಕಡ್ಡಿಯನ್ನು ಗುರುವಿನ ಮುಖಕ್ಕೆ ಎಸೆಯುತ್ತಾನೆ. ಗಂಟಾನುಗಂಟೆಗಟ್ಟಲೆ ಮಾರ್ಮಿಕ ಮಾತುಗಳಿಂದ ದಾಳಿ ಮಾಡುತ್ತಾನೆ. ಇಷ್ಟಾದರೂ ಶ್ರೇಷ್ಠ ಯೋಧ ಗುರು ಮಾತ್ರ ಶಾಂತಿ, ಸಮಾಧಾನ ಚಿತ್ತದಿಂದಲೇ ನಿಂತಿರುತ್ತಾನೆ.

ಆತನಲ್ಲಿ ಯಾವುದೇ ಭಾವನೆಗಳ ಏರಿಳಿತಗಳೂ ಉಂಟಾಗುವುದಿಲ್ಲ. ತನ್ನೆಲ್ಲ ಕುತಂತ್ರಗಳ ಮೂಟೆ ಖಾಲಿಯಾದ ನಂತರ ಅಪಖ್ಯಾತಿ ಹೊಂದಿರುವ ಯೋಧ ದಣಿಯುತ್ತಾನೆ. ತನ್ನ ವಿಲಕ್ಷಣ ವರ್ತನೆಯಿಂದ ಗುರುವನ್ನು ಸೋಲಿಸಲಾಗದಿದ್ದಕ್ಕೆ
ಅವನಿಗೆ ಅವಮಾನವಾಗುತ್ತದೆ. ಅಲ್ಲಿಂದ ಕಾಲು ಕೀಳುತ್ತಾನೆ. ಇಷ್ಟೆಲ್ಲ ಅಹಂಕಾರದಿಂದ ನಡೆದುಕೊಂಡ ಯುವಕನನ್ನು ತಮ್ಮ
ಗುರುಗಳು ಏನೂ ಮಾಡಲಿಲ್ಲವಲ್ಲ ಎಂಬ ಪ್ರಶ್ನೆ ವಿದ್ಯಾರ್ಥಿ ಗಳಲ್ಲಿ ಮೂಡುತ್ತದೆ ನೆರೆಯುತ್ತಾರೆ.

‘ಇಷ್ಟೆಲ್ಲ ಅವಮಾನ ಅವನಿಂದಾದರೂ ಯಾಕೆ ತಾವು ಸುಮ್ಮನಿದ್ದೀರಿ’ ಎಂದು ವಿದ್ಯಾರ್ಥಿ ಪ್ರಶ್ನಿಸುತ್ತಾನೆ. ಗುರುಗಳು ಉತ್ತರಿಸುತ್ತಾರೆ. ‘ಯಾರಾದರೂ ನಿಮಗೆ ಉಡುಗೊರೆಯನ್ನು ನೀಡಲು ಬಂದರೆ ಅದನ್ನು ತಿರಸ್ಕರಿಸಲಾದೀತೆ? ಆದರೆ ಉಡುಗೊರೆಯನ್ನು ಯಾರಿಂದ ಹೇಗೆ ಸ್ವೀಕರಿಸಬೇಕು ಎಂಬುದನ್ನು ನಾವು ಅರಿಯಬೇಕಷ್ಟೇ’. ಈ ಕಥೆ ರಬ್ಬರ್ ಮತ್ತು ಗಮ್‌ನ ನಡುವಿನ ಸಂಬಂಧದಂತೆ. ಗಮ್ ಬಂದು ರಬ್ಬರ್ ಮೇಲೆ ಸಿಡಿದರೆ ಅದು ಪುಟಿದು ಮತ್ತೆ ಹೋಗಿ ಗಮ್ ಅಂಟಿಕೊಳ್ಳುತ್ತದೆ. ಮೌನವಾಗಿ ಕಡೆಗಣಿಸುವುದು ಅವಮಾನದ ವಿರುದ್ಧದ ದೊಡ್ಡ ಜಯ.

ಮೇಲಿನ ಝೆನ್ ಕತೆಯಲ್ಲಿ ಶ್ರೇಷ್ಠ ಯೋಗ ಗುರು ತನ್ನದಾಗಿಸಿಕೊಂಡ ಉಡುಗೊರೆ ವಿಜಯ. ಅಪಖ್ಯಾತಿಯ ಯೋಧನ ಎದುರು ಶ್ರೇಷ್ಠ ಗುರು ಎದುರು ನಿಂತದ್ದು ಕೇವಲ ವಿಜಯಕ್ಕೋಸ್ಕರ. ಅವಮಾನದ ಉಡುಗೊರೆಯನ್ನು ಶ್ರೇಷ್ಠ ಗುರುವಿಗೆ ನೀಡುತ್ತಲೇ ಅಪಖ್ಯಾತಿಯ ಯೋಧ ಪರಾಜಯನಾಗಿದ್ದ. ಅವಮಾನಿಸುವ ಮೂಲಕ ತನ್ನ ದೌರ್ಬಲ್ಯಗಳನ್ನೇ ಜಗತ್ತಿಗೆ ತೋರಿಸಿಕೊಟ್ಟಿದ್ದ. ಅವಮಾನವೆಂಬುದು ಗ್ಲಾಸಿನೊಳಗಿರುವ ವೈನಿನಂತೆ.

ಅದನ್ನು ಒಪ್ಪಿಕೊಂಡರಷ್ಟೇ ಅದು ನಮ್ಮನ್ನು ಬಾಧಿಸುತ್ತದೆ. ಕಾಡಿನಲ್ಲಿ ಮರವೊಂದು ಬೀಳುತಲಿತ್ತು. ಅದು ಯಾವುದೇ
ಸದ್ದು ಮಾಡದೇ ಹೋದರೆ ಮರ ಬಿದ್ದದ್ದು ಅಲ್ಲಿ ಯಾರಿಗೂ ಗೊತ್ತಾಗಿರುವುದೇ ಇಲ್ಲ. ಅಂತೆಯೇ ಅವಮಾನಗಳಿಗೆ ನಾವು
ಕಿವುಡಾಗಿಬಿಟ್ಟರೆ ಎಲ್ಲಿಯದು ಅವಮಾನ? ಝೆನ್ ಕಥೆ ತೆರೆದಿಟ್ಟ ಸತ್ಯವೆಂದರೆ, ನಾವೇನು ಉಡುಗೊರೆ ನೀಡುತ್ತೇವೆಯೋ ಅದು ಪುನಃ ನಮಗೇ ಬಂದು ಸೇರುತ್ತದೆ. ಅವಮಾನಿಸುವ ಮುನ್ನ ಈ ವಾಸ್ತವದ ನೆನಪು ನಮಗಿರಲಿ. ನೋವಿನ
ಅವಮಾನದ ಹಿನ್ನೆಲೆಯಿಂದ ಬಂದ ಅನೇಕರು ಚರಿತ್ರೆ ಸೃಷ್ಟಿಸಿದ ಉದಾಹರಣೆಗಳಿವೆ.

ಅವಮಾನಗಳು ಸೃಜನಶೀಲತೆಯನ್ನು ಸೃಷ್ಟಿಸಿಬಿಡುತ್ತವೆ. ಅಕ್ಷರದ ಬೆಳಕೇ ಇರದ ಅವಮಾನದ ಕತ್ತಲೆಯಲ್ಲಿ ಸ್ವಾಭಿಮಾನದ ಬದುಕು ನಡೆಸಿ, ಅನುಭವಿಸಿದ ನೋವು ತುಂಬಿದ ಅಂತರಂಗ ಮತ್ತು ಬಹಿರಂಗ ಗಾಯಗಳ ಅರಿವು ಅನೇಕ ಕಾವ್ಯಗಳನ್ನು ಸೃಷ್ಟಿಸಿದೆ. ಬಣ್ಣಗಳನ್ನು ಬದುಕಿಗೆ ತುಂಬಿಸಿದೆ. ಶ್ರೇಷ್ಠ ಸಂಗೀತಗಾರನೊಬ್ಬ, ಆಫೀಸರ್, ನೃತ್ಯಗಾರ್ತಿ, ಸಿನಿಮಾ ನಟ.. ಹೀಗೆ ಎಲ್ಲರ ಬದುಕಿನ ಹಿಂದೆಯೂ ಅವಮಾನದ ನೋವಿದೆ. ಆದರೆ ಅದನ್ನು ಸಕಾರಾತ್ಮಕವಾಗಿಸಿಕೊಂಡು ಬದುಕನ್ನು ಹೆಣೆಯು ವುದು ನಮ್ಮ ಕೈಯ ಇದೆ.

ಅವಮಾನಕ್ಕೆ ಸಾಮಾನ್ಯವಾಗಿ ಪ್ರತಿಕ್ರಿಯಿಸುವುದು ಕೋಪ ಅಥವಾ ಮರು ಅವಮಾನದ ಮೂಲಕ. ಅವಮಾನವನ್ನು ನಿಭಾಯಿಸಲು ಇದೊಂದು ಅತ್ಯಂತ ದುರ್ಬಲ ವಿಧಾನ. ಅವಮಾನದ ಸಂದರ್ಭದಲ್ಲಿ ನಕ್ಕು ಬಿಡಬೇಕು, ಇಲ್ಲವೇ ಅದನ್ನು ಕಡೆಗಣಿಸಬೇಕು. ಅವಮಾನದ ಮೂಲಕ ಆಗುವ ಅನೇಕ ಪ್ರತಿರೋಧಗಳಿಗೆ ನಮ್ಮ ಪ್ರತಿಕ್ರಿಯೆಗಳೇ ಕಾರಣವಾಗಿರುತ್ತವೆ.
ನಿಮಗೆಲ್ಲ ಗ್ರೀಕ್ ತತ್ವಜ್ಞಾನಿ ಕ್ಲೆನ್ ಥೆಸ್ ಆಫ್ ಅಸೋಸ್ ಗೊತ್ತಿರಲೇಬೇಕು.

ಆತನೊಬ್ಬ ಕುಸ್ತಿಪಟು ಜತೆಗೆ ಸ್ಟಾಯಿಕ್ (ಸಮಾಧಾನದ) ತತ್ವಜ್ಞಾನಿ. ಆತ ಅಥೆಸ್ಸ್‌ಗೆ ಬಂದದ್ದು ಕೆಲವು ಚಿನ್ನ ಬೆಳ್ಳಿಯ ನಾಣ್ಯಗಳ ಹೊತ್ತು. ಆತ ಮೊದಲು ಅಧ್ಯಯನ ನಡೆಸಿದ್ದು ಗ್ರೀಕ್ ದೇಶದ ತತ್ವಜ್ಞಾನಿ ಕ್ರೇಟ್ಸ್‌ನ ಬಳಿ. ನಂತರ ಅಧ್ಯಯನ ಕೈಗೊಂಡಿದ್ದು, ಪ್ರಪಂಚದ ಉತ್ಕೃಷ್ಟ ತತ್ವಜ್ಞಾನಿ ಗಣಿತಜ್ಞ ಜಿನೋನ ಬಳಿ. ತನ್ನ ಗುರುಗಳು ಹೇಳಿಕೊಡುತ್ತಿದ್ದ ಪಾಠಗಳನ್ನು ಕ್ಲೆಂಥೆಸ್ ಚಿಪ್ಪುಗಳ ಮೇಲೂ ಹಾಗೂ ತನ್ನ ಭುಜದ ಮೂಳೆಗಳ ಮೇಲೂ ದಾಖಲಿಸುತ್ತಿದ್ದ. ಏಕೆಂದರೆ ಪಾಪಿರಸ್ (ಬರೆಯುವ ಸಾಧನ)ವನ್ನು ಕೊಂಡುಕೊಳ್ಳುವ ಸಾಮರ್ಥ್ಯ ಆತನಲ್ಲಿರಲಿಲ್ಲ.

ಅವನ ಸ್ನೇಹಿತರೆಲ್ಲ ಆತನನ್ನು ‘ಹೇಸರಗತ್ತೆ’ ಎಂದೇ ಸಂಬೋಽಸುತ್ತಿದ್ದರು. ಈ ಟೀಕೆ ಅವಮಾನವನ್ನು ಕ್ಲೆಂಥೋಸ್ ಬಹಳ ಹೆಮ್ಮೆಯ ವಿಚಾರವಾಗಿ ತೆಗೆದುಕೊಳ್ಳುತ್ತಿದ್ದ. ಏಕೆಂದರೆ ತನ್ನ ಗುರು ಜೀನೋ ನೀಡುತ್ತಿದ್ದ ಎಂತಹುದೇ ಭಾರವನ್ನು ಹೊರಲು ನಾನು ಹೇಸರಗತ್ತೆಯೇ ಆಗಿರಬೇಕು ಎನ್ನುವುದು ಅವನ ವಿಚಾರ. ತನ್ನ ಹೊಟ್ಟೆ ತುಂಬಿಸಿಕೊಳ್ಳಲು ರಾತ್ರಿಯೆಲ್ಲ ಗುಣಿ ತೋಡುವ ಗಿರಣಿಯಲ್ಲಿ ಹಿಟ್ಟು ರುಬ್ಬುವ, ನೀರು ತುಂಬಿಸುವ ಕೆಲಸವನ್ನು ಮಾಡುತ್ತಲಿದ್ದ ಕ್ಲೆಂಥೆಸ್. ಏಕೆಂದರೆ ಬೆಳಗಿನ ಸಮಯದಲ್ಲಿ ತತ್ವ eನದ ಅಧ್ಯಯನಕ್ಕೆ ಆತ ಸಂಪೂರ್ಣ ತನ್ನನ್ನು ಮುಡಿಪಿಟ್ಟಿದ್ದ.

ಶಾಲೆಯ ಮುಖ್ಯಸ್ಥನಾದರೂ ತನ್ನ ಪ್ರವಚನ ಬರಹಗಳ ನಡುವೆ ಮತ್ತೂ ದುಡಿಯುತ್ತಿದ್ದ. ಎಲ್ಲರೂ ಆತನನ್ನು ಎರಡನೇಯ ಹರ್ಕುಲಸ್ ಎಂಬ ಅಡ್ಡ ಹೆಸರಿನಿಂದಲೇ ಕರೆಯುತ್ತಿದ್ದರು. ಆತನಿಗೆ ಕವಿತೆ ಎಂದರೆ ಪ್ರೀತಿ. ತನ್ನ ಉಸಿರನ್ನು ಕಾವ್ಯ ವಾಗಿಸುತ್ತಿದ್ದ.