Saturday, 14th December 2024

ಟುಸ್ ಆಯಿತೇ ರೈತರ ಪ್ರತಿಭಟನೆ 2.0 ?

ವಿಶ್ಲೇಷಣೆ

ಗಣೇಶ್ ಭಟ್, ವಾರಣಾಸಿ

ಫೆಬ್ರವರಿ ತಿಂಗಳಲ್ಲಿ ರೈತರ ಪ್ರತಿಭಟನೆ ೨.೦ ಎಂದು ಕರೆಸಿಕೊಂಡ ಹೋರಾಟವು ಶುರುವಾಯಿತು ಈ ಬಾರಿ ಹರಿಯಾಣಾದ ಪೋಲೀಸರು ಇವರನ್ನು ಹರಿಯಾಣದ ಗಡಿಯೊಳಗೆ ಅಡಿಯಿಡಲು ಬಿಡಲೇ ಇಲ್ಲ. ರೈತರು ಪೋಲಿಸರು ಅಡ್ಡವಾಗಿ ಇಟ್ಟಿದ್ದ ಬ್ಯಾರಿಕೇಡ್ ಗಳನ್ನು, ಕಿತ್ತೆಸದು ಬಲವಂತವಾಗಿ ಹರಿಯಾಣಾದ ಒಳಕ್ಕೆ ನುಗ್ಗಲು ಪ್ರಯತ್ನವನ್ನೂ ಮಾಡಿದ್ದರು.

ಬ್ಯಾರಿಕೇಡ್‌ಗಳನ್ನು ಕಿತ್ತೆಸೆಯಲು ಬುಲ್ಡೋಜರ್ ಹಾಗೂ ಕ್ರೇನ್‌ಗಳನ್ನು ತರುವ ಪ್ರಯತ್ನಗಳನ್ನೂ ಮಾಡಿದ್ದರು. ಆದರೆ ಪೋಲೀಸರು ಇದಾವುದಕ್ಕೂ ಅವಕಾಶವನ್ನೇ ಕೊಟ್ಟಿಲ್ಲ. ಹೀಗಾಗಿ ಹೋರಾಟಗಾರರು ದೆಹಲಿ ಹಾಗೂ ಹರ್ಯಾಣಾಗಳ ಗಡಿಭಾಗಗಳಾದ ಸಿಂಘು ಹಾಗೂ ಖನೌರಿ ಪ್ರದೇಶಗಳಲ್ಲಿ ಬೀಡುಬಿಡಬೇಕಾಯಿತು. ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಹಾಗೂ ವಾಣಿಜ್ಯ ಸಚಿವ ಪಿಯೂಶ್ ಗೋಯೆಲ್ ಎರಡೆರಡು ಬಾರಿ ಚಂಡೀಗಢಕ್ಕೆ ಬಂದು ರೈತ ಸಂಘಟನೆಗಳ ಮುಖಂಡ ರೊದಿಗೆ ಮಾತುಕತೆ ನಡೆಸಿದ್ದರೂ ಕೇಂದ್ರ ಸರಕಾರದ ಮಾತುಕತೆಗಳಿಗೆ ಬಗ್ಗದ ರೈತರು ಫೆಬ್ರವರಿ ೨೧ ರಂದು
ದೆಹಲಿ ಚಲೋ ಯಾತ್ರೆಯನ್ನು ಮುಂದುವರಿಸುವುದಾಗಿ ಘೋಷಿಸಿದರು.

ಆದರೆ ಹರಿಯಾಣ ಪೋಲೀಸರು ಆ ದಿನವೂ ಇವರನ್ನು ಗಡಿಯನ್ನು ದಾಟಲು ಬಿಡಲೇ ಇಲ್ಲ. ಭಗವಂತ್ ಸಿಂಗ್ ಮಾನ್ ಸಿಂಗ್ ನೇತೃತ್ವದ ಪಂಜಾಬಿನ
ಆಮ್ ಆದ್ಮಿ ಪಕ್ಷ ಸರಕಾರವು ಈ ಪ್ರತಿಭಟನಾಕಾರರಿಗೆ ದೆಹಲಿಯೆಡೆಗೆ ನುಗ್ಗಲು ಎ ರೀತಿಯ ನೆರವನ್ನು ಕೊಡುತ್ತಿದ್ದರೂ ಹರಿಯಾಣಾದ ಪೋಲೀಸರು  ಪ್ರತಿಭಟನಾಕಾರರನ್ನು ಗಡಿಯಿಂದ ಒಂದು ಹೆಜ್ಜೆ ಮುಂದಿಡಲೂ ಬಿಟ್ಟಿಲ್ಲ. ಈ ನಡುವೆ ಸರಕಾರವು ಹಿಂಸಾ ನಿರತ ಹೋರಾಟಗಾರರನ್ನು ಗುರುತಿಸಿ ಅವರ ಪಾಸ್ಪೋರ್ಟ್ ಹಾಗೂ ವೀಸಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಹೇಳಿಕೆ ಕೊಟ್ಟೊಡನೆಯೇ ಪಂಜಾಬಿನಿಂದ ಬಂದ
ಹೋರಾಟಗಾರರು ಒಬ್ಬೊಬ್ಬರಾಗಿಯೇ ಹೋರಾಟದಿಂದ ಹಿಂದೆ ಸರಿಯತೊಡಗಿದರು.

ಇದೀಗ ಪಂಜಾಬೀ ಸಿಕ್ಖರಿಗೆ ತಮ್ಮ ಎರಡನೇ ಮನೆಯಂತಿರುವ ಕೆನಡಾಗೆ, ಅಮೆರಿಕಗೆ ಹಾಗೂ ಬ್ರಿಟನ್ನಿಗೆ ಹೋಗದೇ ಇರಲು ಸಾಧ್ಯವೇ ಇಲ್ಲ.
ಹೀಗಿರು ವಾಗ ಪಾಸ್ಪೋರ್ಟ್ ಹಾಗೂ ವೀಸಾಗಳನ್ನು ಮುಟ್ಟುಗೋಲು ಹಾಕಿಕೊಂಡರೆ ಅವರು ಬದುಕುವುದಾದರೂ ಹೇಗೆ? ಈ ಎಲ್ಲಾ ಕಾರಣ ಗಳಿಂದಾಗಿ ಬಹುತೇಕ ಪ್ರತಿಭಟನೆಗಾರರು ಹೋರಾಟವನ್ನು ನಿಲ್ಲಿಸಿ ಪಂಜಾಬಿಗೆ ಹಿಂದಿರುಗಿದ್ದಾರೆ. ಇದೇಗ ಸಿಂಘು, ಟಿಕ್ರಿ, ಘಾಝೀಪುರ್ ಹಾಗೂ ಖನೌರಿ ಗಡಿಗಳ ರಸ್ತೆಗಳನ್ನು ಪೋಲೀಸರು ಪುನಃ ತೆರೆದಿದ್ದಾರೆ.

ಕಳೆದ ಬಾರಿ ಇದೇ ರೀತಿಯ ಹೋರಾಟದ ಹೆಸರಿನಲ್ಲಿ ದೆಹಲಿಯಲ್ಲಿ ಹಿಂಸಾಚಾರವನ್ನು ನಡೆಸಿದರು. ಕೈ ಕಾಲುಗಳನ್ನು ಕತ್ತರಿಸಿ, ನೇತುಹಾಕಿ, ದಲಿತ ಸಿಕ್ಖ ಲಖ್ಬೀರ್ ಸಿಂಗ್‌ನ ಅಮಾನುಷ ಹತ್ಯೆ, ರೈತರ ಹೋರಾಟಕ್ಕೆ ಬೆಂಬಲವಾಗಿ ಬಂದಿದ್ದ ತರುಣಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಮೊದಲಾದ ಅನಾಗರಿಕ ಘಟನೆಗಳಿಗೆ ಅಂದಿನ ರೈತರ ಹೋರಾಟ ಸಾಕ್ಷಿಯಾಗಿತ್ತು. ವಿರೋಧಪಕ್ಷಗಳಾದ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಹಾಗೂ ಎಡ ಪಕ್ಷಗಳು ಕೂಡಾ ರೈತರ ಹೋರಾಟಕ್ಕೆ ಬೆಂಬಲವನ್ನು ಕೊಟ್ಟಿದ್ದವು. ಪ್ರತ್ಯೇಕವಾದೀ ಉಗ್ರ ಸಂಘಟನೆಯಾದ ಖಾಲಿಸ್ತಾನ್ ರೈತರ ಹೋರಾಟದ ನೆಪದಲ್ಲಿ ಭಾರತದಲ್ಲಿ ತನ್ನ ಸಂಘ ಟನೆಯನ್ನು ಬಲಪಡಿಸಿಕೊಳ್ಳಲು ಹವಣಿಸಿತು.

ಕೆನಡಾ , ಅಮೇರಿಕಾ ಹಾಗೂ ಬ್ರಿಟನ್‌ಗಳಲ್ಲಿ ನೆಲೆಸಿರುವ ಪ್ರತ್ಯೇಕತಾ ವಾದೀ ಸಿಕ್ಖರು ರೂಪಿಸಿಕೊಂಡಿರುವ ‘ಸಿಕ್ಖ್ಸ್ ಫಾರ್ ಜಸ್ಟೀಸ್’ ಎನ್ನುವ ಸಂಘಟನೆಯು ಭಾರತದ ವಿರುದ್ಧ ಭಾರತೀಯ ಸಿಕ್ಖರನ್ನು ಎತ್ತಿಕಟ್ಟುವ ಪ್ರಯತ್ನಗಳನ್ನು ರೈತರ ಹೋರಾಟದ ನೆಪದಲ್ಲಿ ಆರಂಭಿಸಿತು. ರೈತ ಹೋರಾಟದ ಹೆಸರಿನಲ್ಲಿ ಖಾಲಿಸ್ತಾನ್ ನುಸುಳುತ್ತಿರುವ ಅಪಾಯವನ್ನು ಮನಗಂಡ ಕೇಂದ್ರ ಸರಕಾರವು ಈ ಬೆಳವಣಿಗೆಯು ದೇಶದ ರಕ್ಷಣೆಗೆ ಅಪಾಯವೆಂದು ಭಾವಿಸಿ ರೈತರ ಹೋರಾಟವನ್ನು ನಿಲ್ಲುವಂತೆ ಮಾಡಲು ಹೊಸ ರೈತರ ಕಾಯಿದೆಯನ್ನು ಹಿಂದೆಗೆದುಕೊಂಡಿತು.

ವಿರೋಧ ಪಕ್ಷಗಳು ಹಾಗೂ ದಲಿಗಳ ನೇತೃತ್ವದ ರೈತಸಂಘಟನೆ ಗಳು ರೈತರ ಆದಾಯ ಹಾಗೂ ಜೀವನ ಮಟ್ಟವನ್ನು ಸುಧಾರಿಸಲೆಂದು ಸರಕಾರವು ಜಾರಿಗೆತಂದ ಕಾಯಿದೆಯನ್ನು ಹಿಂಪಡೆಯುವಂತೆ ಮಾಡಿ ರೈತರ ಬದುಕನ್ನು ಹಾಳು ಮಾಡಿದವು. ಈ ಬಾರಿ ಹೋರಾಟಕ್ಕೆ ಇಳಿದಿರುವ ರೈತ ಸಂಘಟನೆಗಳು ಇರಿಸಿರುವ ಬೇಡಿಕೆಗಳು ವಾಸ್ತವಿಕತೆಯಿಂದ ತುಂಬಾ ದೂರವಾಗಿರುವಂತವು. ರೈತರು ಬೆಳೆದ ಎಲ್ಲಾ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ಸರಕಾರವು ಖರೀದಿಸಬೇಕು ಎನ್ನುವುದು ರೈತ ಸಂಘಟನೆಗಳ ಬೇಡಿಕೆಯಾಗಿದೆ.

ಇದು ಈಡೇರಿಸಲು ಸಾಧ್ಯವೇ ಇಲ್ಲದ ಬೇಡಿಕೆ ಯಾಗಿದೆ. ದೇಶದಲ್ಲಿ ರೈತರು ಸುಮಾರು ನಲುವತ್ತು ಲಕ್ಷ ಕೋಟಿ ರುಪಾಯಿ ಮೌಲ್ಯದ ಕೃಷಿ ಉತನ್ನಗಳನ್ನು ಬೆಳೆಯುತ್ತಿದ್ದಾರೆ. ಇಷ್ಟು ಮೊತ್ತವನ್ನು ಪಾವತಿಸಿ ಖರೀದಿ ಮಾಡಲು ಸರಕಾರಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಈ ವರ್ಷ ಕೇಂದ್ರ ಸರಕಾರವು ಮಂಡಿಸಿರುವ ಬಜೆಟ್‌ನ ಖರ್ಚು ವೆಚ್ಚ ಗಳ ಒಟ್ಟು ಮೊತ್ತ ೪೭.೬ ಲಕ್ಷ ಕೋಟಿ ರುಪಾಯಿಗಳಾಗಿರು ವಾಗ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲೆಂದು ೪೦ ಲಕ್ಷ ಕೋಟಿ ರುಪಾಯಿಗಳನ್ನು ತರುವುದಾದರೂ ಎಲ್ಲಿಂದ? ಇನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿಯವರು ತಮ್ಮ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸರಕಾರವು ಖರ್ಚು ಮಾಡುವ ಪ್ರತೀ ನಾಲ್ಕು ರುಪಾಯಿಗಳಲ್ಲಿ ಒಂದು ರುಪಾಯಿಯನ್ನು ರೈತರಿಗೆ ಬೆಂಬಲ ಬೆಲೆಯಾಗಿ ಕೊಡಲು ಬಳಸುತ್ತೇನೆ ಎಂಬ ವಾಗ್ದಾನವನ್ನು ನೀಡಿದ್ದಾರೆ.

ಅಂದರೆ ಅವರು ಕೇಂದ್ರ ಸರಕಾರವು ವ್ಯಯಿಸುವ ೪೭ ಲಕ್ಷ ಕೋಟಿ ರುಪಾಯಿಗಳಲ್ಲಿ ಸುಮಾರು ೧೧.೫ ಲಕ್ಷ ಕೋಟಿ ರುಪಾಯಿಗಳನ್ನು ಕನಿಷ್ಠ ಬೆಂಬಲ ಬೆಲೆಯಾಗಿ ಕೊಡಲಿದ್ದಾರೆ ಎಂದಾಯಿತು. ಪ್ರಸ್ತುತ ಬಜೆಟ್ ನಲ್ಲಿ ೧೧ ಲಕ್ಷ ಕೋಟಿ ರುಪಾಯಿ ಗಳನ್ನು ಕೇಂದ್ರ ಸರಕಾರವು ರಸ್ತೆ, ನೀರು, ವಿದ್ಯುತ್
ಮೊದಲಾದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಬೇಕಾಗಿ ಮೀಸಲಿಟ್ಟಿದೆ. ಕಾಂಗ್ರೆಸ್ ಪಕ್ಷವು ಭರವಸೆ ನೀಡಿದಂತೆ ೧೧ ಲಕ್ಷ ಕೋಟಿ ರುಪಾಯಿ ಗಳನ್ನು ಕನಿಷ್ಠ ಬೆಂಬಲ ಬೆಲೆಯಾಗಿ ಕೊಟ್ಟಲ್ಲಿ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನವೇ ಇರಲಾರದು!

ಪ್ರತೀ ವರ್ಷ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಪ್ರಮಾಣವನ್ನು ನಿಗದಿಪಡಿಸಿ ಅದನ್ನು ಕಾನೂನಾಗಿ ರೂಪಿಸಿ ಜಾರಿಗೆ ತರಬೇಕು ಎನ್ನುವುದು ಇನ್ನೊಂದು ಬೇಡಿಕೆಯಾಗಿದೆ. ಇದೂ ಕಾರ್ಯಸಾಧ್ಯ ವಲ್ಲದ ಬೇಡಿಕೆಯಾಗಿದೆ. ಕನಿಷ್ಠ ಬೆಂಬಲ ಬೆಲೆಯು ಕಾಲಕಾಲಕ್ಕೆ ಪರಿಷ್ಕರಣೆಯಾಗಬೇಕಾದ ವಿಚಾರವಾಗಿದೆ. ರೈತರು ಬೆಳೆದ ವಸ್ತುವಿನ ಮಾರುಕಟ್ಟೆಯ ಬೆಲೆ ಕುಸಿದಾಗ ರೈತನ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ರೈತರು ಬೆಳೆದ ವಸ್ತುವಿನ ಪೂರೈಕೆ ಹಾಗೂ ಮಾರುಕಟ್ಟೆಯಲ್ಲಿ ಯಾವ ರೀತಿಯ ಬೇಡಿಕೆ ಇದೆ ಎಂಬುದನ್ನು ಅನುಸರಿಸಿ ತಜ್ಞರು ಎಮ್‌ಎಸ್‌ಪಿ ಅನ್ನು ನಿರ್ಧರಿಸುತ್ತಾರೆ.

ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯು ಲಭ್ಯವಾಗುತ್ತಿರುವಾಗ ಬೆಂಬಲ ಬೆಲೆಯ ಅವಶ್ಯಕತೆ ಇರುವುದಿಲ್ಲ. ಉತ್ಪಾದನೆಯು ಬೇಡಿಕೆಗಿಂತ ಹೆಚ್ಚಾದಾಗ ಕೃಷಿ ಉತ್ಪನ್ನದ ಬೆಲೆ ಕುಸಿಯುತ್ತದೆ. ಅಂತಹ ಸಂದರ್ಭಗಳಲ್ಲಿ ಮಾತ್ರ ಬೆಂಬಲ ಬೆಲೆ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ಪ್ರತೀ ವರ್ಷ ಇಷ್ಟೇ ಪ್ರಮಾಣದಲ್ಲಿ ಬೆಂಬಲ ಬೆಲೆಯಲ್ಲಿ ಹೆಚ್ಚಳ ಮಾಡಬೇಕೆಂಬ ಬೇಡಿಕೆಯು ಅವೈಜ್ಞಾನಿಕ ವಾಗಿದೆ. ರೈತರ ಸಾಲವನ್ನೆ ಮನ್ನಾ ಮಾಡಬೇಕೆಂಬು ದು ಇನ್ನೊಂದು ಬೇಡಿಕೆ. ರೈತರ ಸಾಲವನೆ ಮನ್ನಾ ಮಾಡ ಬೇಕಾದರೆ ಸರಕಾರಕ್ಕೆ ೪೦ ಲಕ್ಷ ಕೋಟಿ ರುಪಾಯಿಗಳು ಬೇಕು!

ಈ ಬಾರಿಯೂ ರಾಜಕೀಯ ದುರುದ್ದೇಶದಿಂದಲೇ ರೈತ ಹೋರಾಟವು ಆರಂಭವಾಗಿತ್ತು. ರೈತ ಮುಖಂಡ ಜಗ್ಜಿತ್ ಸಿಂಗ್ ದವಾಲ್ ನರೇಂದ್ರ ಮೋದಿಯ ಹೆಚ್ಚುತ್ತಿರುವ ಜನಪ್ರಿಯತೆಯ ಗ್ರಾಫ್ ಅನ್ನು ಕಡಿತಗೊಳಿಸುವುದೇ ಹೋರಾಟದ ಉದ್ದೇಶ ಎಂದು ಹೇಳಿಕೆ ಕೊಟ್ಟಾಗಲೇ ಈ ಬಾರಿಯ ಹೋರಾಟದ ಉದ್ದೇಶ ಜನತೆಗೆ ಸ್ಪಷ್ಟವಾಗಿತ್ತು. ಈ ಬಾರಿಯ ಹೋರಾಟದಲ್ಲಿ ಪಂಜಾಬ್ ರಾಜ್ಯದ ಹೋರಾಟಗಾರರು ಮಾತ್ರ ಭಾಗವಹಿಸಿದ್ದರು. ಖಾಲಿಸ್ತಾನ್ ಬಾವುಟಗಳ ಪ್ರದರ್ಶನವೂ ಆಗಿತ್ತು. ಮಕ್ಕಳು ಹಾಗೂ ಮಹಿಳೆಯರನ್ನು ಗುರಾಣಿಯಂತೆ ಬಳಸಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದ ಪಂಜಾಬ -ಹರಿಯಾಣಾ ಹೈಕೋರ್ಟ್ ರೈತರ ಹೋರಾಟವನ್ನು ಖಂಡಿಸಿದೆ. ಖಡ್ಗ ಮೊದಲಾದ ಆಯುಧಗಳನ್ನು ಝಳಪಿಸುತ್ತಾ ನಡೆಸುತ್ತಿರುವ ಪ್ರತಿಭಟನೆ ಯಾವ ರೀತಿಯ ರೈತ ಹೋರಾಟ ಎಂದೂ ಹೈಕೋರ್ಟ್ ಪ್ರಶ್ನಿಸಿದೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದ ಜಾಟ್ ಸಮುದಾಯದ ರೈತರು ಈ ಬಾರಿಯ ಹೋರಾಟದಿಂದ ದೂರವೇ ಉಳಿದರು. ಜಾಟ್ ರೈತ ಸಮುದಾಯದ ನಾಯಕರಾಗಿದ್ದ ಚೌಧರಿ ಚರಣ್ ಸಿಂಗ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯು ಘೋಷಣೆಯಾಗಿರುವುದು ಹಾಗೂ ರಾಷ್ಟ್ರೀಯ ಲೋಕ ದಳವು ಈ ಬಾರಿ ಎನ್ ಡಿ ಎ ಯ ತೆಕ್ಕೆಗೆ ಬಂದಿರುವುದರಿಂದ ಜಾಟ್ ಸಮುದಾಯದ ರೈತರಾರೂ ಹೋರಾಟಕ್ಕೆ ಇಳಿಯಲಿಲ್ಲ. ಈ ನಡುವೆ ಕಬ್ಬಿನ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿರುವುದು ಉತ್ತರಪ್ರದೇಶದ ರೈತರು ಸಮಾಧಾನದಿಂದಿರುವಂತೆ ಮಾಡಿತು.

೨೦೧೪ ರ ನಂತರ ಬಹುತೇಕ ಕೃಷಿ ಉತ್ಪನ್ನಗಳ ಎಂ ಎಸ್ ಪಿ ಯನ್ನು ದ್ವಿಗುಣಗೊಳಿಸಲಾಗಿದೆ. ರಸಗೊಬ್ಬರದ ಮೇಲಿನ ಸಬ್ಸಿಡಿ, ಕಿಸಾನ್ ಸಮ್ಮಾನ್ ನಿಧಿ, ಫಸಲ್ ಬೀಮಾ ಯೋಜನೆ, ಕೃಷಿ ಸಿಂಚಾಯೀ ಯೋಜನೆ ಮೊದಲಾದ ಕೃಷಿಕರ ಕಲ್ಯಾಣ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರವು ಕಳೆದ ವರ್ಷ ೬.೫ ಲಕ್ಷ ಕೋಟಿ ರುಪಾಯಿಗಳನ್ನು ಖರ್ಚು ಮಾಡುತ್ತಿದೆ. ಈ ವರ್ಷವೂ ಈ ಎ ರೈತರ ಕಲ್ಯಾಣ ಯೋಜನೆಗಳು ಮುಂದುವರಿಯಲಿವೆ. ಇಂದು ಭಾರತದ ರೈತರು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತರಾಗಿzರೆ. ಪಂಜಾಬ್ ಹೊರತುಪಡಿಸಿ ಬೇರೆ ಯಾವುದೇ ರಾಜ್ಯಗಳ ರೈತರು ಈ ಬಾರಿಯ ರೈತರ ಹೋರಾಟ ದಲ್ಲಿ ಭಾಗವಹಿಸಲೇ ಇಲ್ಲ. ಈ ಎ ಕಾರಣಗಳಿಂದ ರೈತರ ಹೋರಾಟ ೨.೦ ಲಾಂಚ್ ಆಗುವ ಮೊದಲೇ ವಿ-ಲವಾಗಿದೆ ಎನ್ನಬಹುದು.