Monday, 11th November 2024

ಜಮೀರ್ ಭಾಯಿ, ಬಡ ಮುಸಲ್ಮಾನರ ಮೇಲೂ ಇರಲಿ ಪ್ರೀತಿ

ವೀಕೆಂಡ್ ವಿಥ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಜಮೀರ್ ಅಹ್ಮದ್ ಖಾನ್ ಕಾಂಗ್ರೆಸ್ಸಿನ ಶಿಸ್ತಿನ ಶಾಸಕ, ಪಾದರಾಯನಪುರದ ಪರೋಡಿಗಳ ಪಾಲಿನ ದೇವರು, ಕಾಡುಗೊಂಡನಹಳ್ಳಿಯ ಕಿರಾತಕರಿಗೆ ಆಪತ್ಬಾಂಧವ. ಬೆಂಗಳೂರಿನ ಮುಸಲ್ಮಾನರನ್ನು ತನ್ನ ಹಣ ಬಲದಿಂದಲೇ ಒಗ್ಗೂಡಿಸಿದ ಜಮೀರ್ ಅಹ್ಮದ್ ಖಾನ್ ನ ಗುರುಗಳು ದೇವೇಗೌಡರು. ದೇವೇ ಗೌಡರ ಗರಡಿಯಲ್ಲಿ ಬೆಳೆದ ಜಮೀರ್‌ಗೆ ಮುಸಲ್ಮಾನರ ಅಭಯಹಸ್ತ ತನ್ನ ರಾಜಕೀಯ ಜೀವನ ಶುರುವಾದ ದಿನದಿಂದಲೂ ಇದೆ.

ಜಾತ್ಯತೀತ ಜನತಾದಳದೆಡೆಗೆ ಮುಸಲ್ಮಾನರ ಮತಗಳು ಗುಂಪು ಗುಂಪಾಗಿ ವಾಲಲು ಮುಖ್ಯ ಕಾರಣ ಜಮೀರ್. ಬೆಂಗಳೂರಿನ ಮುಸಲ್ಮಾನರ ವೋಟುಗಳು ದೇವೇಗೌಡರ ಪಕ್ಷದ ಪಾಲಾ ಗಿದ್ದು ಜಮೀರ್ ಅಹ್ಮದ್ ಖಾನ್‌ನ ಪ್ರಯ_ತ್ನದಿಂದೆಂದರೆ ಅತಿಶಯೋಕ್ತಿಯಲ್ಲ.ಆದರೆ ಯಥಾಪ್ರಕಾರ ದೇವೇಗೌಡರು ಇತರರಿಗೆ ಕೈ ಕೊಟ್ಟಂತೆ ಜಮೀರ್ ಗೂ ಸಹ ಕೈ ಕೊಟ್ಟಿದ್ದರು. ತಮ್ಮ ಕುಟುಂಬದಲ್ಲದವರನ್ನು ರಾಜಕೀಯವಾಗಿ ಬೆಳೆಸಲು ಇಚ್ಛಿಸದ ದೇವೇಗೌಡರು ಹಾಗು ಕುಮಾರ ಸ್ವಾಮಿ, ಜಮೀರ್ ಅಹ್ಮದ್ ಖಾನ್‌ಗೂ ಕೂಡ ಅದೇ ಕೆಲಸವನ್ನು ಮಾಡಿದ್ದರು. ಜಮೀರ್ ಜಾತ್ಯ ತೀತ ಜನ_ತಾದಳದಲ್ಲಿ ಮುಸಲ್ಮಾನರ ಪರಮೋಚ್ಚ ನಾಯಕನಾಗಿದ್ದರು.

ಜಮೀರ್ ಹೇಳಿದಂತೆ ಮುಸಲ್ಮಾನರು ಕೇಳುತ್ತಿದ್ದರು, ಸಾರ್ವಜನಿಕವಾಗಿ ತನ್ನ ಕ್ಷೇತ್ರದಲ್ಲಿ ಕೇಳಿದವರಿಗೆಲ್ಲ ಹಣವನ್ನು ನೀಡುವುದು ಜಮೀರ್‌ಅಹ್ಮದ್‌ಖಾನ್‌ಗೆ ಅಭ್ಯಾಸವಾಗಿ ಹೋಗಿತ್ತು. ದೇವೇಗೌಡರ ಶಿಸ್ತಿನ ಶಿಷ್ಯ ನಾಗಿದ್ದಂತಹ ಜಮೀರ ನನ್ನು ಸಿದ್ದರಾಮಯ್ಯ ಆಪರೇಷನ್ ಮಾಡಿ ಕಾಂಗ್ರೆಸ್ಸಿಗೆ ಕರೆ ತಂದರು. ದೇವೇಗೌಡರು ತನಗೆ ಮಾಡಿದ ಅವಮಾನದ

ಸೇಡನ್ನು ಸಿದ್ದರಾಮಯ್ಯನವರು ಜಮೀರ್ ಆಪರೇಷನ್ ಮಾಡುವ ಮೂಲಕ ತೀರಿಸಿಕೊಂಡಿ ದ್ದರು. ಜಮೀರ್ ಕಾಂಗ್ರೆಸ್ಸಿಗೆ ಬಂದಿದ್ದೆ ತಡ ದೇವೇಗೌಡರ ಮುಸಲ್ಮಾನ್ ವೋಟ್ ಬ್ಯಾಂಕ್ ಕೂಡ ಜಮೀರನ ಜತೆಯಲ್ಲಿಯೇ ಕಾಂಗ್ರೆಸ್ಸಿಗೆ ನೀರಿನಂತೆ ಹರಿದು ಬಂತು. ಮುಸಲ್ಮಾನ್ ಮತದಾರರು ಜಮೀರ್ ಹಿಂದೆ ಬಂದ ಕಾರಣ ದೇವೇಗೌಡರ ಪಕ್ಷ ಕಳೆದ ಚುನಾವಣೆಯಲ್ಲಿ ಹೀನಾಯ ವಾಗಿ ಸೋತಿತ್ತು. ಸ್ವತಃ ಕುಮಾ_ರಸ್ವಾಮಿಯವರು ರಾಮನಗರದಲ್ಲಿ ಸೋಲುವ ಭೀತಿಯಲ್ಲಿದ್ದರು, ತನ್ನ ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುಮಾರು 70000 ಮತಗಳನ್ನು ಪಡೆದಿದ್ದ. ಚನ್ನಪಟ್ಟಣದಲ್ಲಿ ಯೋಗೀಶ್ವರ್ ಸೋಲಲು ಕಾರಣವಾದದ್ದು ಜಮೀರ್ ಅಹ್ಮದ್ ಹಿಂದೆ ಬಂದಿದ್ದಂತಹ ಮುಸ್ಲಿಂ ಮತದಾರರು. ಜಾತ್ಯತೀತ ಜನತಾದಳ ಬಿಟ್ಟು ಕಾಂಗ್ರೆಸ್ ಸೇರಿಕೊಂಡಂತಹ ಘಟಾನುಘಟಿ ನಾಯಕರುಗಳಾದ ಚಲುವರಾಯ ಸ್ವಾಮಿ, ಬಾಲಕೃಷ್ಣರಂತವರೇ ಸೋತರು, ಆದರೆ ಜಮೀರ್ ಮಾತ್ರ ಸೋಲಲಿಲ್ಲ. ದೇವೇಗೌಡರು ಮುಂದಿನ ಜನ್ಮದಲ್ಲಿ ತಾನು ಮುಸಲ್ಮಾನನಾಗಿ ಹುಟ್ಟಬೇಕೆಂದು ಕಣ್ಣೀರು ಹಾಕಿದರೂ ಸಹ ಮುಸಲ್ಮಾನ್ ಮತದಾರ ’ತೆನೆ ಹೊತ್ತ ಮಹಿಳೆ’ಯ ಕೈ ಹಿಡಿಯಲಿಲ್ಲ, ಕುಮಾರಸ್ವಾಮಿ ಕಣ್ಣೀರ ಕೋಡಿ ಹರಿಸಿದರೂ ಸಹ ಮುಸಲ್ಮಾನರು ಜಾತ್ಯತೀತ ಜನತಾದಳಕ್ಕೆ ಮತ ಹಾಕಲಿಲ್ಲ.

ಪಕ್ಷ ಬಿಟ್ಟು ಹೊರಬಂದ ನಂತರ ಜಮೀರ್ ಕುಮಾರಸ್ವಾಮಿಯ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದನ್ನು ಇಡೀ ಕರ್ನಾಟಕದ ಜನತೆಯೇ ನೋಡಿದೆ, ಕುಮಾರಸ್ವಾಮಿ ಅಳಲು ತಮ್ಮ ಟವೆಲ್‌ಗೆ ವಿಕ್ಸ್ ಹಚ್ಚಿಕೊಂಡಿರುತ್ತಾರೆಂದು ಹೇಳಿದ್ದು ಜಮೀರ್, ಕುಮಾರಸ್ವಾಮಿಯ ಲುಂಗಿಯ ಬಗ್ಗೆ ಮಾತನಾಡಿದ್ದು ಜಮೀರ್,

ಆದರೆ ಅವರ ಲುಂಗಿ ಭದ್ರವೋ ಅಥವಾ ಸಡಿಲವೋ ಹೇಳಲಿಲ್ಲವಷ್ಟೇ. ಜಮೀರ್ ಕಾಂಗ್ರೆಸ್ಸಿಗೆ ಬಂದನಂತರ ಸಿ.ಎಂ. ಇಬ್ರಾಹಿಂ, ತನ್ವಿರ್ ಸೇಠ್, ರೋಷನ್‌ ಬೇಗ್ ನಂತಹ ದೊಡ್ಡ ದೊಡ್ಡ ನಾಯಕರು ಕೈ ಕಟ್ಟಿ ಕೂರಬೇಕಾಯಿತು. ಮುಸಲ್ಮಾನರಿಗೆ ಕೇವಲ ಜಮೀರ್ ಮುಖಚರ್ಯೆ ಮಾತ್ರ ಕಾಣಿಸುತ್ತಿತ್ತು. ಕೋಮು ವಾದಕ್ಕೆ ಸದಾ ಪ್ರೇರಣೆ ನೀಡಿ ಮುಸಲ್ಮಾನ್ ದಂಗೆಕೋರರ ಪರವಾಗಿ ನಿಲ್ಲುವ ಜಮೀರನಂತಹ ನಾಯಕ ಮುಸ್ಲಿಂ ಯುವ ಸಮುದಾಯಕ್ಕೆ ಬೇಕಿತ್ತೆಂಬುದನ್ನು ಸಿದ್ದರಾಮಯ್ಯ ಚೆನ್ನಾಗಿಯೇ ತಿಳಿದಿದ್ದರು.ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಂತಹ ಸಿ.ಎಂ.ಇಬ್ರಾಹಿಂ ಮುಸ್ಲಿಮರ ನಾಯ_ಕನಾಗುವುದು ಅವರಿಗೆ ಇಷ್ಟವಿರ ಲಿಲ್ಲ.

ಸಿದ್ದರಾಮಯ್ಯನವರಿಗೂ ಸಹ ಮುಸಲ್ಮಾನ್ ಮತಬ್ಯಾಂಕನ್ನು ಒಗ್ಗೂಡಿಸುವ ಸಲುವಾಗಿ ಕೋಮುವಾದವನ್ನು ಬಿತ್ತುವ ಜಮೀರನಂತಹ ನಾಯಕ ಬೇಕಿತ್ತು, ಹಾಗಾಗಿ ಪಕ್ಷದಲ್ಲಿ ಹಿರಿಯ ಮುಸ್ಲಿಂ ನಾಯಕರನ್ನು ಬದಿಗೊತ್ತಿ ಜಮೀರನ ಪರವಾಗಿ ನಿಂತರು.ಮುಸ್ಲಿಂ ಗಲಭೆಕೋರರ ಮೇಲಿನ ಜಮೀರ್ ಅಹ್ಮದ್ ಖಾನ್ ನ ಅಂಧ ಪ್ರೇಮ ಅದೆಷ್ಟಿತ್ತೆಂದರೆ, ಕರೋನ ಸಮಯದಲ್ಲಿ ಪಾದರಾಯನಪುರದಲ್ಲಿ ಮನೆ ಮನೆಗೆ ತೆರಳುತ್ತಿದ್ದಂತಹ ಆಶಾ ಕಾರ್ಯಕರ್ತೆಯರ ಮೇಲೆ ಅಲ್ಲಿನ ಪುಂಡರು ಹಲ್ಲೆ ಮಾಡಿದರೂ ಸಹ ಅವರ ಪರವಾಗಿ ಜಮೀರ್ ನಿಂತಿದ್ದರು.

ಪಾದರಾಯನಪುರದಲ್ಲಿ ’ಗಾಂಜಾ’ ಮಾರಿ ಮುಸ್ಲಿಂ ಯುವಕರನ್ನು ಗಲಭೆಗೆ ಪ್ರಚೋದಿಸಿದ್ದಂತಹ ಮಹಿಳೆಯನ್ನು ಜಾಮೀನು ನೀಡಿ ಬಿಡಿಸಿಕೊಂಡು ಬಂದದ್ದು ಇದೇ ಜಮೀರ್ ಅಹ್ಮದ್ ಖಾನ್, ಗಾಂಜಾ ಸೇವನೆ ಮಾಡಿ ಕರೋನ ಸಮಯದಲ್ಲಿ ರಾತ್ರೋ ರಾತ್ರಿ ಪೋಲೀಸರ ಮೇಲೆ ನಿರಂತರವಾಗಿ ಹಲ್ಲೆ ಮಾಡಲು ಮುಂದಾಗಿದ್ದಂತಹ ಗಲಭೆಕೋರರನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದದ್ದು ಇದೇ ಜಮೀರ್ ಅಹ್ಮದ್ ಖಾನ್.

ತಮ್ಮದೇ ಪಕ್ಷದ ’ದಲಿತ ಶಾಸಕ’ ಅಖಂಡ ಶ್ರೀನಿವಾಸ ಮೂರ್ತಿ ಯವರ ಮನೆಗೆ ಬೆಂಕಿ ಇಟ್ಟಂತಹ ಮುಸ್ಲಿಂ ಗಲಭೆಕೋರರ ಪರವಾಗಿ ನಿಂತದ್ದು ಇದೇ ಜಮೀರ್ ಅಹ್ಮದ್ ಖಾನ್. ದಲಿತ ಹಾಗು ಮುಸ_ಲ್ಮಾನರ ನಡುವೆ ಆಯ್ಕೆ ಬಂದಾಗ ಕಾಂಗ್ರೆಸ್ ಪಕ್ಷ ನಿಂತಿದ್ದು ಮುಸಲ್ಮಾನರ ಜತೆಗೆ ಹೊರತು ದಲಿತರೊಂದಿಗಲ್ಲ. ಇಷ್ಟಾದರೂ ತನ್ನನ್ನು ತಾನು ದಲಿತೋದ್ಧಾರಕ ಪಕ್ಷವೆಂದು ಹೇಳಿ_ಕೊಳ್ಳುತ್ತದೆ. ಸಿದ್ದರಾಮಯ್ಯ ಅಷ್ಟೆಲ್ಲಾ ಕಷ್ಟಪಟ್ಟು ಜಮೀರನ ಮೂಲಕ ಮುಸಲ್ಮಾನ್ ವೋಟ್ ಬ್ಯಾಂಕನ್ನು ಕಾಂಗ್ರೆಸ್ಸಿಗೆ ತಂದ ಮೇಲೆ, ಇತ್ತೀಚಿಗೆ ದೇಶಾದ್ಯಂತ ಕಾಂಗ್ರೆಸ್ಸಿನ ಮೇಲೆ

ನಂಬಿಕೆ ಕಳೆದುಕೊಂಡಂತಹ ಮುಸಲ್ಮಾನರು ನಿಧಾನವಾಗಿ ಇತರ ಪಕ್ಷಗಳೆಡೆಗೆ ವಾಲುವಂತೆ ಬೆಂಗಳೂರಿನಲ್ಲಿ ಎಸ್.ಡಿ.ಪಿ.ಐ ಪಕ್ಷದೆಡೆಗೆ ವಾಲುತ್ತಿದ್ದಾರೆ. ಇದರಿಂದ ಗಾಬರಿಗೊಂಡಿರುವ ಕಾಂಗ್ರೆಸ್,ಮುಸ್ಲಿಮರು ಮಾಡಿದ್ದೆಲ್ಲವನ್ನೂ ಸರಿಯೆಂದು ಹೇಳಿ ಅವರ ಪರವಾಗಿ ಎಲ್ಲಾ ಗಲಭೆಗಳಲ್ಲಿಯೂ ನಿಲ್ಲುತ್ತಿದೆ. ಜಮೀರ್ ಅಹ್ಮದ್ ಖಾನ್ ಮನೆಯ ಮೇಲೆ ’ಈ.ಡಿ’ ನಡೆಸಿದ ದಾಳಿಗೂ ಸಹ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ’ಡಿ.ಕೆ.ಶಿವಕುಮಾರ್’ ಧರ್ಮದ ಬಣ್ಣ ಬಳೆದು, ಒಂದು ಧರ್ಮ ವನ್ನು ಟಾರ್ಗೆಟ್ ಮಾಡಲಾಗುತ್ತಿದೆಯೆಂದು ಹೇಳಿದ್ದಾರೆ.

ಮುಸ್ಲಿಂ ಮತಬ್ಯಾಂಕನ್ನು ಕಾಂಗ್ರೆಸ್ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕೆಂದರೆ ಜಮೀರ್ ಅಹ್ಮದ್ ಖಾನ್ ಬೆಂಬಲಕ್ಕೆ ನಿಲ್ಲಲೇಬೇಕಿದೆ. ಮುಸಲ್ಮಾನ್ ಗಲಭೆ ಕೋರರ ಪರವಾಗಿ ನಿಂತು ಅವ ರೊಂದಿಗೆ ಸದಾ ಕಾಲ ನಾನಿದ್ದೇನೆಂಬ ಸಂದೇಶವನ್ನು ಜಮೀರ್ ಆಗಾಗ ರವಾನಿಸುತ್ತಲೇ ಇರುತ್ತಾರೆ. ಇತ್ತೀಚಿಗೆ ’ಬೆಡ್ ಬ್ಲಾಕಿಂಗ್’ ದಂಧೆಯಲ್ಲಿ ಕೆಲಸ ಕಳೆದು ಕೊಂಡಂತಹ ಮುಸ್ಲಿಂ ಯುವಕರಿಗೆ ತನ್ನ ಜೇಬಿನಿಂದ ಕಂತುಗಟ್ಟಲೆ ಹಣವನ್ನು ಎಣಿಸಿ ಎಣಿಸಿ ನೀಡುವ ಮೂಲಕ

ಜಮೀರ್ ಹೆಸರು ಮಾಡಿದ್ದರು,ತನ್ನ ಕ್ಷೇತ್ರದಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸಿಕೊಂಡು ಹೋಗುವಾಗ ಅಡ್ಡ ಬಂದಂತಹವರಿಗೆ ಮತ್ತದೇ ಜೇಬಿನಿಂದ ಕಂತುಗಟ್ಟಲೆ ಹಣವನ್ನು ಎಣಿಸಿ ಎಣಿಸಿ ನೀಡುವ ದೃಶ್ಯ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿತ್ತು,

ತನ್ನ ಹುಟ್ಟು ಹಬ್ಬದ ನಿಮಿತ್ತ ಬಾಲಿವುಡ್ ನಟರನ್ನು ಕರೆಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿಸುವ ಮೂಲಕ ತನ್ನ ಮತದಾರರಿಗೆ ಮಾಯಾಲೋಕವನ್ನೇ ಸೃಷ್ಟಿಸಿದ್ದು ಮತ್ತದೇ ಜಮೀರ್ ಅಹ್ಮದ್ ಖಾನ್.ಗಲಭೆಕೋರರಿಗೆ ಜಾಮೀನಿನ ಹಣ, ಗಲಭೆಕೋರರಿಗೆ ಊಟ ಉಪಚಾರಕ್ಕೆ ಬೇಕಿರುವ ಹಣ, ಸಾರ್ವಜನಿಕವಾಗಿ ಜೇಬಿ ನಿಂದ ಎಣಿಸಿ ಎಣಿಸಿ ಕೊಡುವ ಹಣಕ್ಕೆ ಸರಿಯಾದಂತಹ ಆದಾಯ ವಾದರೂ ಇರಬೇಕಲ್ಲ. ನ್ಯಾಷನಲ್ ಟ್ರಾವೆಲ್ಸ್ ಮೂಲಕ ದೊಡ್ಡ ವ್ಯವಹಾರಸ್ತರಾಗಿದ್ದಂತಹ ಜಮೀರ್, ನಂತರ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಮಾಡಿರಬಹುದು. ಆದರೆ ತನ್ನ ಆದಾಯ, ಖರ್ಚು ಹಾಗು ಆಸ್ತಿಯು ಸರಿಯಾಗಿ ತಾಳೆ ಹೊಂದಲಿಲ್ಲ ವೆಂದರೆ ಅಧಿಕಾರಿಗಳು ಮನೆಯ ಮೇಲೆ ದಾಳಿ ಮಾಡೇ ಮಾಡುತ್ತಾರೆ.

ಕೋಟ್ಯಂತರ ರುಪಾಯಿ ಖರ್ಚು ಮಾಡಿ ಐಷಾರಾಮಿ ಬಂಗಲೆಯನ್ನು ಕಟ್ಟಿಸಿರುವ ಜಮೀರ್ ಅಹ್ಮದ್ ಖಾನ್ ಅಸ್ತಿ 2018 ಹಾಗು 2021 ರ ನಡುವೆ ಆದಾಯಕ್ಕನುಗುಣವಾಗಿ ಏರಿಕೆ ಯಾಗಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ.

ಶ್ರೀಲಂಕಾದಲ್ಲಿ ಜಮೀರ್ ಅಹ್ಮದ್ ಖಾನ್ ಜೂಜಾಟ ನಡೆಸಲು ’ಕ್ಯಾಸಿನೊ’ಗಳಲ್ಲಿ ಹೂಡಿಕೆ ಮಾಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಕಟ್ಟರ್ ಇಸ್ಲಾಂ ಧರ್ಮದ ಅನುಯಾಯಿ ಯೆಂದು ತನ್ನನ್ನು ತಾನು ಬಿಂಬಿಸಿಕೊಳ್ಳುವ ಜಮೀರ್ ಅಹ್ಮದ್ ಖಾನ್‌ಗೆ ಇಸ್ಲಾಂನಲ್ಲಿ ಜೂಜಾಟವು ಹರಾಂ ಎಂಬ ಸತ್ಯ ತಿಳಿದಿಲ್ಲವೇ ? ಸಾಮಾಜಿಕ ಕಾರ್ಯ_ ಕರ್ತನೊಬ್ಬ ಕಳೆದ ಕೆಲವು ತಿಂಗಳುಗಳ ಹಿಂದೆ ಜಮೀರ್ ಶ್ರೀಲಂಕಾದ ಕ್ಯಾಸಿ ನೋವೊಂದರಲ್ಲಿ ಕೋಟ್ಯಂತರ ರುಪಾ_ಯಿ ಹಣವನ್ನು ಜೂಜಿನಲ್ಲಿ ಕಳೆದುಕೊಂಡಿದ್ದಾರೆಂಬ ಆರೋಪವನ್ನು ಮಾಡಿ ದ್ದ, ಹಾಗಾದರೆ ಜಮೀರ್ ಜೂಜಿನಲ್ಲಿ ಬಂದಂತಹ ಹಣ ವನ್ನು ಬಡ ಮುಸಲ್ಮಾನರಿಗೆ ಹಂಚುತ್ತಿದ್ದರೇ ? ಈ ಸಂಶಯ ಖಂಡಿತವಾಗಿಯೂ ಎಲ್ಲರಿಗು ಸಹಜವಾಗಿಯೇ ಬರುತ್ತದೆ.

ಜಮೀರ್ ಅಹ್ಮದ್ ಖಾನ್ ಹೆಸರು ಬಹುಕೋಟಿ ಐIಅ ಹಗರಣದಲ್ಲಿ ಕೇಳಿ ಬಂದಿತ್ತು. ಅಲ್ಲಾಹುವಿನ ಹೆಸರಿನಲ್ಲಿ ಲಕ್ಷಾಂತರ ಬಡ ಮುಸಲ್ಮಾನರಿಂದ ಹಣ ವಸೂಲಿ ಮಾಡಿ ಹೆಚ್ಚಿನ ಬಡ್ಡಿ ನೀಡುವುದಾಗಿ ಭರವಸೆ ನೀಡಿದಂತಹ ಸಂಸ್ಥೆಯಿದು. ’ಮನ್ಸೂರ್ ಅಲಿ ಖಾನ್’ ಇದರ ಸಂಸ್ಥಾಪಕ. ಈ ಸಂಸ್ಥೆಯು ಮುಸ್ಲಿಂ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ನಡೆಯುತ್ತಿತ್ತು. ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದಂತಹ ಬಡ ಮುಸಲ್ಮಾನರು ಲಕ್ಷಾಂತರ ರುಪಾಯಿಯ ಹಣವನ್ನು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ಈ ಸಂಸ್ಥೆಯಡಿಯಲ್ಲಿ ಶಾಲೆಗಳು, ಚಿನ್ನದ ಅಂಗಡಿಗಳು, ಆಸ್ಪತ್ರೆಗಳು, ದಿನಪತ್ರಿಕೆ ಶುರುವಾದವು. ಮೊದಮೊದಲು ಸರಿಯಾದ ಸಮಯಕ್ಕೆ ಬಡ್ಡಿ ನೀಡಿದ್ದನ್ನು ನೋಡಿದ ಜನರು ಮೇಲೆ ಬಿದ್ದು ತಾಮುಂದು ನಾಮುಂದು ಎಂದು ಹಣ ಹೂಡಿಕೆ ಮಾಡಿದ್ದರು.ನಂತರದ ದಿನಗಳಲ್ಲಿ ಇದೊಂದು 420 ಸಂಸ್ಥೆ ಯೆಂಬುದು ಜನರಿಗೆ ಮನವರಿಕೆಯಾಯಿತು, ಸುಮಾರು 4000 ಕೋಟಿಯ ಬಹುದೊಡ್ಡ ಹಗರಣವೊಂದು ಈ ಸಂಸ್ಥೆಯಿಂದ ಹೊರಬಿದ್ದಿತ್ತು. ಬಡ ಮುಸಲ್ಮಾ ನರು ತಾವು ಕಷ್ಟಪಟ್ಟು ಇಟ್ಟಿದ್ದಂತಹ ಹಣವೆಲ್ಲವೂ ಮನ್ಸೂರ್ ಅಲಿ ಖಾನ್‌ನ ಪಾಲಾಗಿತ್ತು. ಈ ಹಗರಣದ ತನಿಖೆಯನ್ನು ಕೈಗೆತ್ತುಕೊಂಡಂತಹ ಕೇಂದ್ರ ತನಿಖಾ ತಂಡಕ್ಕೆ ಮನ್ಸೂರ್ ಅಲಿ ಖಾನ್ ಹಲವಾರು ರಾಜಕೀಯ ನಾಯಕರ ಹೆಸರು ತಳುಕು ಹಾಕಿಕೊಂಡಿದ್ದನ್ನು ಹೇಳಿದ್ದ, ಆಗ ಕೇಳಿಬಂದಂತಹ ದೊಡ್ಡ ಹೆಸರು ಕಾಂಗ್ರೆಸ್ಸಿನ ನಾಯಕ ರೋಷನ್ ಬೇಗ್.

ಸುಮಾರು 400 ಕೋಟಿಯಷ್ಟು ಹಣವನ್ನು ಮನ್ಸೂರ್ ಅಲಿ ಖಾನ್ ರೋಷನ್ ಬೇಗ್‌ಗೆ ಚುನಾವಣೆಯ ಖರ್ಚಿಗೆ ನೀಡಿರು_ವುದಾಗಿ ಹೇಳಿದ್ದ. ಪ್ರಕರಣದ ತನಿಖೆ ಮಾಡಿದ ತನಿಖಾ ಸಂಸ್ಥೆಯು ರೋಷನ್ ಬೇಗ್‌ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಬಡ ಮುಸಲ್ಮಾನರು ತಮ್ಮ ಹಣವನ್ನು ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾಗ ಜಮೀರ್ ಅಹ್ಮದ್ ಖಾನ್ ಅವರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದ. ಅತ್ತ ಮನ್ಸೂ ರ್ ಅಲಿ ಖಾನ್ ತನ್ನ ಮನೆ ಬಾಗಿಲಿಗೆ ಬಂದು ಹಣದ ಚೀಲವನ್ನು ತೆಗೆದುಕೊಂಡು ಹೋದ ರಾಜಕೀಯ ನಾಯಕರುಗಳನ್ನು ತನಿಖೆಗೊಳಪಡಿಸಿದರೆ ಹಗರಣದ ಹಿಂದಿನ ದೊಡ್ಡ ದೊಡ್ಡ ನಾಯಕರ ಬಣ್ಣ ಬಯಲಾಗುತ್ತದೆ ಯೆಂದು ಅಽಕಾರಿಗಳ ಮುಂದೆ ಹೇಳಿದ್ದ. ವಿಚಾರಣೆಯ ಸಂದರ್ಭದಲ್ಲಿ ಮನ್ಸೂರ್ ಅಲಿಖಾನ್, ತಾನು ಹಾಗು ಜಮೀರ್ ಅಹ್ಮದ್ ಖಾನ್ ನಡುವೆ ನಡೆದಿದ್ದಂತಹ ಭೂಮಿ ಖರೀದಿಯ ವಿಷಯವೊಂದನ್ನು ’ಈ.ಡಿ’ ಅಧಿಕಾರಿಗಳ ಬಳಿ ಬಾಯಿ ಬಿಟ್ಟಿದ್ದ.

ಸುಮಾರು 92 ಕೋಟಿ ಮೊತ್ತದ ಭೂಮಿಯನ್ನು ಜಮೀರ್ ಅಹ್ಮದ್ ಖಾನ್‌ಗೆ ಮಾರಾಟ ಮಾಡಿರುವುದಾಗಿ ಆತ ಹೇಳಿದ್ದ, ಇದರ ಜಾಡು ಹಿಡಿದಿದ್ದಂತಹ ಅಽಕಾರಿಗಳು ಮೊನ್ನೆ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ನಿರಂತರವಾಗಿ 23 ಘಂಟೆಗಳ ಕಾಲ ದಾಳಿ ಮಾಡಿದ್ದಾರೆ. ಸರಕಾರಿ ನೋಂದಣಿ ಪತ್ರಗಳಲ್ಲಿ ಭೂಮಿಯ ಬೆಳೆಯನ್ನು ಕೇವಲ 12 ಕೋಟಿಯಷ್ಟು ಮಾತ್ರ ತೋರಿಸಲಾಗಿದ್ದು, ಉಳಿದ ಹಣ ವನ್ನು ನಗದು ರೂಪದಲ್ಲಿ ನೀಡಲಾಗಿದೆಯೆಂಬ ಆರೋಪ ಜಮೀರ್ ಅಹ್ಮದ್ ಖಾನ್ ಮೇಲೆ ಕೇಳಿ ಬಂದಿದೆ.

ಮನ್ಸೂರ್ ಅಲಿ ಖಾನ್ ಹೇಳಿದ ಹಾಗೆ ’ಐ.ಎಂ.ಎ’ ಹಗರಣದ ತನಿಖೆಯ ಆಳಕ್ಕೆ ಹೋದಷ್ಟು, ದೊಡ್ಡ ದೊಡ್ಡ ನಾಯಕರ ಅವ್ಯವಹಾರಗಳು  ಹೊರಬರಬಹುದು.   IMA   ಯಾವ ಮಟ್ಟದ ’ಮಾಸ್ಟರ್ ಪ್ಲಾನ್’ ಮಾಡಿತ್ತೆಂದರೆ ತನ್ನಲ್ಲಿ ಠೇವಣಿ ಇಟ್ಟವರನ್ನು ’ಠೇವಣಿದಾರ’ರ ಬದಲಿಗೆ ’ಪಾಲುದಾರರನ್ನಾಗಿ’ ಮಾಡಿಕೊಂಡಿತ್ತು, ಪಾಲುದಾರರು ಸಂಸ್ಥೆಯ ಮೇಲೆ ಅಷ್ಟುಸುಲಭವಾಗಿ ಕೇಸು ಹಾಕಲಾಗುವುದಿಲ್ಲ ವೆಂಬುದು ಅವರ ಆತ್ಮವಿಶ್ವಾಸವಾಗಿತ್ತು,

ಠೇವಣಿದಾರರಾಗಿದ್ದರೆ ಕೇಸು ಹಾಕುವುದು ಸುಲಭವಾಗಿ ಬಿಡುತ್ತಿತ್ತು. ಹಾಗಾದರೆ ಬಡ ಮುಸಲ್ಮಾನರ ಪರವಾಗಿ ನಿಲ್ಲುವೆನೆಂದು ಹೇಳುವ ಜಮೀರ್ ಅಹ್ಮದ್ ಖಾನ್‌ಗೆ ಈ ಸತ್ಯ ತಿಳಿದಿರ ಲಿಲ್ಲವೇ ? ಒಂದೆಡೆ ಬಡ ಮುಸಲ್ಮಾನರಿಂದ ಸಂಗ್ರಹಿಸಿದ ಹಣಕ್ಕೆ ಪಂಗನಾಮ ಹಾಕಿರುವ ಸಂಸ್ಥೆಯೊಂದರ ಜತೆ ಒಪ್ಪಂದ ಮಾಡಿಕೊಳ್ಳುತ್ತಾರೆ, ಮತ್ತೊಂದೆಡೆ ಸಿಕ್ಕ ಸಿಕ್ಕಲ್ಲಿ ಜೇಬಿನಿಂದ ಹಣವನ್ನು ಎಣಿಸಿ ಎಣಿಸಿ ತನ್ನ ಕ್ಷೇತ್ರದ ಜನತೆಗೆ ನೀಡುತ್ತಾರೆ. ಹಾಗಾದರೆ ಜಮೀರ್ ಅಹ್ಮದ್ ಖಾನ್‌ಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ ಯೆಂಬ ಅನುಮಾನ ಬರುವುದು ಸಹಜ ಪ್ರಕ್ರಿಯೆ ಯಲ್ಲದೆ ಮತ್ತೇನು ? ತನ್ನ ಮಗಳ ಮದುವೆಗೆ ಸುಮಾರು 4 ಕೋಟಿಯಷ್ಟು ಹಣವನ್ನು ಖರ್ಚು ಮಾಡಿ_ರುವ ಜಮೀರ್ ಅಹ್ಮದ್ ಖಾನ್ ತೆರಿಗೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವುದು ಸಹಜ. ತನಿಖಾಧಿಕಾರಿಗಳು ಕೊಟ್ಟಂತಹ ನೋಟಿಸಿಗೆ ಸರಿಯಾದ ಸಮಯದಲ್ಲಿ ಉತ್ತರಿ_ಸದಿದ್ದರೆ, ಅಧಿಕಾರಿಗಳು ಮನೆಗೆ ಬರಲೇ ಬೇಕಾಗುತ್ತದೆ.

ಡಿ.ಕೆ.ಶಿವಕುಮಾರ್ ಹೇಳಿದ ಹಾಗೆ ಕೇವಲ ಒಂದು ಧರ್ಮವನ್ನು ಟಾರ್ಗೆಟ್ ಮಾಡಿದ್ದರೆ, ಅವರ ಮೇಲೆ ಯಾವ ಧರ್ಮದ ಆಧಾರದ ಮೇಲೆ ಅಧಿಕಾರಿಗಳು ದಾಳಿಯನ್ನು ಮಾಡಿದ್ದರು ? ತಾನೊಬ್ಬ ಅಸಾಮಾನ್ಯ ಮುಸ್ಲಿಂ ನಾಯಕನೆಂದು ಕೊಂಡಿ ದ್ದಂತಹ ಜಮೀರ್ ಅಹ್ಮದ್ ಖಾನ್ ಗೆ ತನಿಖಾಧಿಕಾರಿಗಳು ಸರಿಯಾದ ಗುನ್ನವನ್ನೇ ಕೊಟ್ಟಿದ್ದಾರೆ. ಸದಾ ಗಲಭೆಕೋರರ ಪರವಾಗಿ ನಿಲ್ಲುವಂತಹ ಜಮೀರ್ ಅಹ್ಮದ್ ಖಾನ್ ‘ಐIಅ’ ಹಗರಣದಲ್ಲಿ ಬಡ ಮುಸ್ಲಿಂ ಕುಟುಂಬದವರ ಪರ ವಾಗಿ ಮಾಡಿದ್ದಾದರೂ ಏನು ? ರಸ್ತೆಯಲ್ಲಿ ನಿಂತು ಹಣ ಹಂಚಿದರೆ ತಾನು ಬಡವರ ಪರ ನಿಂತಂತಲ್ಲ, ಗಲಭೆಕೋರರನ್ನು ಜೈಲಿನಿಂದ ಬಿಡಿಸಿಕೊಂಡು ಬಂದಾಕ್ಷಣ ಜಮೀರ್ ಮುಸ್ಲಿಂ ನಾಯಕನಾಗುವುದಿಲ್ಲ,

IMA ಹಗರಣದಲ್ಲಿ ಹಲವು ಮುಸ್ಲಿಂ ಕುಟುಂಬಸ್ಥರು ತಮ್ಮ ಠೇವಣಿಯನ್ನು ತೆಗೆಯಲಾಗದೆ ಮಕ್ಕಳ ಮದುವೆಯನ್ನು ಮೂರು ವರ್ಷಗಳ ಕಾಲ ಮುಂದೂಡಿ ದ್ದಾರೆ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಇಟ್ಟಿದಂತಹ ಹಣವನ್ನು ಕಳೆದುಕೊಂಡಿದ್ದಾರೆ. ಬಡ ಮುಸ್ಲಿಂ ಠೇವಣಿದಾರರ ಪರವಾಗಿ ನಿಂತಾಗ ಮಾತ್ರ ಜಮೀರ್ ನಿಜವಾದ ಮುಸ್ಲಿಂ ನಾಯಕನಾಗಬಲ್ಲ. ಆದರೆ ಜಮೀರ್ ಮಾಡುತ್ತಿರುವುದಾದರೂ ಏನು ? ನಡುರಸ್ತೆಯಲ್ಲಿ ಗಲಭೆ ಮಾಡುತ್ತಿರುವ ಕೋಮುವಾದಿ ಗುಂಪುಗಳ ಗಲಭೆ ಕೋರರ ಪರವಾಗಿ ನಿಲ್ಲುವುದು. ಇದನ್ನೆಲ್ಲಾ ನೋಡಿದರೆ ಜಮೀರ್ ಅಹ್ಮದ್ ಖಾನ್ ಗೆ ಗಲಭೆಕೋರರ ಮೇಲಿರುವ ಪ್ರೀತಿ ‘ IMA  ’ ಹಗರಣ ದಲ್ಲಿ ಹಣ ಕಳೆದುಕೊಂಡಿರುವ ಬಡ ಮುಸಲ್ಮಾನರ ಮೇಲಿಲ್ಲವೆಂಬುದು ಸ್ಪಷ್ಟವಾಗುತ್ತದೆ.