ವಾಣಿಜ್ಯರಂಗ
ಪಿಯೂಶ್ ಗೋಯೆಲ್
ಆಸ್ಟ್ರೇಲಿಯಾಗೆ ಭಾರತ ೭೦೦ಕ್ಕೂ ಅಧಿಕ ಹೊಸ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಇದರ ಒಟ್ಟು ಮೊತ್ತ ೨೦೨೩-೨೪ರ ಮೊದಲ ಹತ್ತು ತಿಂಗಳ ಅವಧಿಯಲ್ಲಿ ೩೩೫ ದಶಲಕ್ಷ ಡಾಲರ್ನಷ್ಟಿತ್ತು. ಆಭರಣ ಮತ್ತು ರತ್ನಗಳು, ಲಘುತೈಲ, ಕೈಗಾರಿಕೇತರ ವಜ್ರ, ರೇಷ್ಮೆಯಿಂದ ತಯಾರಿಸಿದ ಸ್ಕರ್ಟ್ಗಳು ಮತ್ತು ಉಡುಪುಗಳು ಇದರಲ್ಲಿ ಸೇರಿವೆ.
ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ಭಾರತ-ಆಸ್ಟ್ರೇಲಿಯಾ ಇಸಿಟಿ ಒಪ್ಪಂದ) ಒಂದು ವರ್ಷದ ಹಿಂದೆ ಅನುಷ್ಠಾನಕ್ಕೆ ಬಂತು. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದಲ್ಲಿನ ಎಲ್ಲಾ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ ನಂತರ ಪ್ರಮುಖ
ಉಪಕ್ರಮಗಳನ್ನು ಯೋಜಿಸಲಾಗಿದೆ. ಜನಸಾಮಾನ್ಯರಿಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಗಳಿಗೆ ಅನುಕೂಲವಾಗುವಂತೆ ಪರಿಣಾಮಕಾರಿಯಾಗಿ ಇದನ್ನು ಕಾರ್ಯಗತಗೊಳಿಸಲಾದ್ದು, ಇದೊಂದು ಉಜ್ವಲ ನಿದರ್ಶನವಾಗಿದೆ.
ಇಸಿಟಿ ಒಪ್ಪಂದದಿಂದಾಗಿ ಭಾರತ-ಆಸ್ಟ್ರೇಲಿಯಾದಂಥ ಎರಡು ಕ್ರಿಕೆಟ್ ಪ್ರೇಮಿ ದೇಶಗಳಿಗೆ ಪರಸ್ಪರ ಲಾಭವಾಗಿದ್ದು, ಅಮೃತ ಕಾಲದಲ್ಲಿನ ನವ ಭಾರತದ ಆಕಾಂಕ್ಷೆಗಳು ಮತ್ತು ಜಾಗತಿಕ ಮಟ್ಟದಲ್ಲಿನ ವಿಶ್ವಾಸವನ್ನು ಇದು ಪ್ರತಿಬಿಂಬಿಸಿದೆ. ಈ ಒಡಂಬಡಿಕೆಯು ಕಾನೂನಿನ ನಿಯಮವನ್ನು ಬೆಂಬಲಿಸುವ, ಒಂದೇ ರೀತಿಯ ಕಾನೂನು ಸುವ್ಯವಸ್ಥೆ ಹೊಂದಿರುವ, ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನೊಳಗೊಂಡ ಎರಡು ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ಜಪಾನ್ ಮತ್ತು ಅಮೆರಿಕದೊಂದಿಗೆ ಇದು ಕ್ವಾಡ್ನ ಭಾಗವಾಗಿದೆ.
ಎರಡೂ ದೇಶಗಳು ಜಪಾನ್ ಜತೆಗೆ ತ್ರಿಪಕ್ಷೀಯ ಪೂರೈಕೆ ಸರಪಳಿಯಡಿ ಪುಟಿದೇಳುವ ಉಪಕ್ರಮದಲ್ಲಿ (ಎಸ್ಸಿಆರ್ಐ) ಮತ್ತು ೧೪ ಸದಸ್ಯರ ಭಾರತ-ಫೆಸಿಫಿಕ್ ಆರ್ಥಿಕ ಚೌಕಟ್ಟು ವ್ಯಾಪ್ತಿಯಲ್ಲಿ ಸೇರಿವೆ. ಒಂದು ದಶಕದಲ್ಲಿ ಅಭಿವೃದ್ಧಿ ಹೊಂದಿದ ದೇಶದೊಂದಿಗೆ ಭಾರತದ ಮೊದಲ ವ್ಯಾಪಾರ ಒಪ್ಪಂದ
ಇದಾಗಿದ್ದು, ಎಫ್ ಟಿಎ ಅಸಾಧಾರಣ ಸಾಮರ್ಥ್ಯ ಹೊಂದಿದೆ. ಭಾರತವು ಪ್ರಾಥಮಿಕವಾಗಿ ಆಸ್ಟ್ರೇಲಿಯಾದಿಂದ ಕಚ್ಚಾವಸ್ತುಗಳು ಮತ್ತು ಮಧ್ಯಂತರ
ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಪ್ರಾಥಮಿಕವಾಗಿ ಸಿದ್ಧಪಡಿಸಿದ ವಸ್ತುಗಳನ್ನು ರಫ್ತು ಮಾಡುತ್ತದೆ. ಆದ್ದರಿಂದ ಎಫ್ ಟಿಎ ಭಾರತದ
ಉದ್ದಿಮೆದಾರರಿಗೆ ಇನ್ಪುಟ್ ದರಗಳನ್ನು ತಗ್ಗಿಸುತ್ತದೆ ಮತ್ತು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಉತ್ಪನ್ನಗಳನ್ನು ಹೆಚ್ಚು
ಸ್ಪರ್ಧಾತ್ಮಕಗೊಳಿಸುತ್ತದೆ.
ಇದು ಭಾರತೀಯ ನವೋದ್ಯಮಗಳಿಗೆ ಉನ್ನತ ಹಂತಕ್ಕೆ ತಲುಪಲು ಅವಕಾಶ ಕಲ್ಪಿಸಿದೆ.
ರಫ್ತು ವಲಯದಲ್ಲಿ ಬಲಿಷ್ಠ ಬೆಳವಣಿಗೆ
ಆಸ್ಟ್ರೇಲಿಯಾದ ಬೃಹತ್ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳು ಶೇ.೧೦೦ರಷ್ಟು ಸುಂಕಮುಕ್ತ ಪ್ರವೇಶ ಪಡೆಯುವುದರಿಂದ ಕಾರ್ಮಿಕ ಕೇಂದ್ರಿತ ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಜಿಸಲು ನೆರವಾಗುತ್ತದೆ ಎಂಬ ಮೋದಿ ಸರಕಾರದ ನಂಬಿಕೆಯನ್ನು ಇದು ಬಲಗೊಳಿಸುತ್ತದೆ. ಈ ಮೂಲಕ
ಭಾರತ- ಆಸ್ಟ್ರೇಲಿಯಾ ನಡುವಿನ ಇಸಿಟಿಎ ಆರಂಭಿಕ ಭರವಸೆಯನ್ನು ಮೂಡಿಸಿದೆ ಎಂದು ದತ್ತಾಂಶಗಳು ಹೇಳುತ್ತವೆ.
೨೦೨೩-೨೪ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ ಆಸ್ಟ್ರೇಲಿಯಾಗೆ ರಫ್ತಾಗಿರುವ ಭಾರತದ ಸರಕುಗಳ ಪ್ರಮಾಣದಲ್ಲಿ ಶೇ.೧೪ರಷ್ಟು ಏರಿಕೆಯಾಗಿದ್ದು,
ಜಾಗತಿಕ ಸವಾಲಿನ ವಾತಾವರಣದಲ್ಲಿ ವಿಶ್ವದ ಇತರೆ ಭಾಗಗಳೊಂದಿಗಿನ ಭಾರತದ ವ್ಯಾಪಾರಕ್ಕೆ ಹೋಲಿಸಿದರೆ ಇದು ನಿರ್ಣಾಯಕವಾಗಿ ಉತ್ತಮ
ಸಾಧನೆಯಾಗಿದೆ. ಅಭಿವೃದ್ಧಿ ಹೊಂದಿದ ಪ್ರಮುಖ ಆರ್ಥಿಕತೆಗಳಲ್ಲಿ ಬೇಡಿಕೆ ಕುಗ್ಗಿದೆ. ಆಸ್ಟ್ರೇಲಿಯಾದ ಒಟ್ಟಾರೆ ಆಮದು ಶೇ.೪ರಷ್ಟು ಕುಸಿತ ಕಂಡಿದೆ.
ಅದರೆ ಅದು ಭಾರತದಿಂದ ಖರೀದಿಸುವ ಪ್ರಮಾಣ ದಲ್ಲಿ ಏರಿಕೆಯಾಗಿದೆ.
ಆಸ್ಟ್ರೇಲಿಯಾದಿಂದ ಭಾರತಕ್ಕೆ ಆಗಿರುವ ಆಮದು ಶೇ.೧೯ರಷ್ಟು ಕುಸಿದಿದ್ದು, ವ್ಯಾಪಾರ ಕೊರತೆ ಶೇ.೩೯ರಷ್ಟಿದೆ. ಆದ್ಯತಾ ರೇಖೆಗಳಡಿಯಲ್ಲಿ ಆಸ್ಟ್ರೇಲಿ ಯಾಗೆ ರಫ್ತು ಹೆಚ್ಚಿದ್ದು, ಉದ್ಯೋಗ ಸೃಜನೆಯ ವಲಯಗಳಲ್ಲಿ ಬಲವಾದ ಬೆಳವಣಿಗೆಯಾಗಿದೆ. ೨೦೨೩-೨೪ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಆಸ್ಟ್ರೇಲಿಯಾಗೆ ತಾಂತ್ರಿಕ ಸರಕುಗಳ ರಫ್ತು ಪ್ರಮಾಣ ಶೇ.೨೪ರಷ್ಟು ಹೆಚ್ಚಿದ್ದು, ಇಲ್ಲಿನ ಒಟ್ಟಾರೆ ರಫ್ತಿನಲ್ಲಿ ಶೇ.೧ರಷ್ಟು ಏರಿಕೆಯಾಗಿದೆ. ಸಿದ್ಧ ಉಡುಪು, ಸಾಗಣೆಯಲ್ಲಿ ಶೇ.೨೭ರಷ್ಟು ಹೆಚ್ಚಳವಾಗಿದ್ದು, ಒಟ್ಟಾರೆ ರಫ್ತು ಇಳಿಕೆ ಕಂಡಿದೆ.
ವಿದ್ಯುನ್ಮಾನ ಸರಕುಗಳು ಮತ್ತು ಪ್ಲಾಸ್ಟಿಕ್ ಸರಕುಗಳ ಸಾಗಣೆಯು ಈ ಕ್ಷೇತ್ರಗಳಲ್ಲಿ ಒಟ್ಟಾರೆ ರಫ್ತು ಪ್ರಮಾಣವನ್ನು ಮೀರಿಸಲು ಇಸಿಟಿಎ ನೆರವಾಗಿದೆ.
ಆಸ್ಟ್ರೇಲಿಯಾಗೆ ಭಾರತ ೭೦೦ಕ್ಕೂ ಅಧಿಕ ಹೊಸ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಇದರ ಒಟ್ಟುಮೊತ್ತ ೨೦೨೩-೨೪ರ ಮೊದಲ ಹತ್ತು ತಿಂಗಳ ಅವಧಿಯಲ್ಲಿ ೩೩೫ ದಶಲಕ್ಷ ಡಾಲರ್ನಷ್ಟಿತ್ತು. ಆಭರಣ ಮತ್ತು ರತ್ನಗಳು, ಲಘು ತೈಲ, ಕೈಗಾರಿಕೇತರ ವಜ್ರ, ರೇಷ್ಮೆಯಿಂದ ತಯಾರಿಸಿದ ಸ್ಕರ್ಟ್ಗಳು ಮತ್ತು ಉಡುಪುಗಳು ಇದರಲ್ಲಿ ಸೇರಿವೆ.
ಎಫ್ ಡಿಐನಲ್ಲಿ ದೊಡ್ಡ ನೆಗೆತ
ಪ್ರಧಾನಮಂತ್ರಿಯವರು ಭಾರತದ ಆರ್ಥಿಕತೆಯನ್ನು ಶ್ಲಾಘನೀಯ ರೀತಿಯಲ್ಲಿ ಮುನ್ನಡೆಸಿದ್ದಾರೆ ಮತ್ತು ಪ್ರಕ್ಷುಬ್ದ ಜಗತ್ತಿನಲ್ಲಿ ಭಾರತವನ್ನು ಪ್ರಕಾಶ ಮಾನವಾದ ಸ್ಥಳವನ್ನಾಗಿ ಮಾಡಿರುವುದನ್ನು ನಮ್ಮ ವ್ಯಾಪಾರ ಪಾಲುದಾರರು ಗುರುತಿಸಿದ್ದಾರೆ.
ಪ್ರಧಾಮಂತ್ರಿಯವರ ನಾಯಕತ್ವದಡಿ ಭಾರತ ಸೂಕ್ತ ಹಾದಿಯಲ್ಲಿ ಸಾಗುತ್ತಿದ್ದು, ಬರುವ ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಸಾಗಿದೆ. ನಮ್ಮ ವ್ಯಾಪಾರಿ ಪಾಲುದಾರರು ನಮ್ಮ ಶಕ್ತಿಯನ್ನು ಗುರುತಿಸಿದ್ದಾರೆ ಮತ್ತು ಕೃಷಿ ಹಾಗೂ ಹೈನುಗಾರಿಕೆಯಂಥ ನಮ್ಮ ಸೂಕ್ಷ್ಮ ಕ್ಷೇತ್ರಗಳನ್ನು ರಕ್ಷಿಸುವ ಕಾಳಜಿಯನ್ನು ಇವು ಶ್ಲಾಘಿಸುತ್ತವೆ. ಭಾರತ-ಆಸ್ಟ್ರೇಲಿಯಾ ಇಸಿಟಿಎ ಭಾರತದ ಅಭಿವೃದ್ಧಿ ಯಾನದ ಬಗ್ಗೆ ವಿಶ್ವಾಸ ಮೂಡಿಸಿದ್ದು, ಹೂಡಿಕೆ ದಾರ-ಸ್ನೇಹಿ ನೀತಿಗಳು ಮತ್ತು ವ್ಯವಹಾರ ದಲ್ಲಿ ಬದಲಾವಣೆ ತರುವ ಸುಧಾರಣೆಗಳಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ
ವನ್ನು ಆಸ್ಟ್ರೇಲಿಯಾದ ವ್ಯಾಪಾರಿ ಸಮುದಾಯಕ್ಕೆ ಹೆಚ್ಚು ಆಕರ್ಷಣೀಯ ತಾಣವನ್ನಾಗಿ ಮಾಡಿದ್ದಾರೆ.
೨೦೨೩ರ ವರ್ಷದ ಜನವರಿ-ಸೆಪ್ಟೆಂಬರ್ ಅವಧಿಯಲ್ಲಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಆಗಿರುವ ವಿದೇಶಿ ನೇರ ಹೂಡಿಕೆಯಲ್ಲಿ ಏಳುಪಟ್ಟು ಹೆಚ್ಚಾಗಿದೆ.
ಸಲಹಾ ಸೇವಾವಲಯದಲ್ಲಿ ವಿದೇಶಿ ನೇರ ಹೂಡಿಕೆ ೨೦೨೨ರಲ್ಲಿ ೦.೧೫ ದಶಲಕ್ಷ ಡಾಲರ್ ಇತ್ತು. ಇದು ಈಗ ೨೪೮ ದಶಲಕ್ಷ ಡಾಲರ್ಗೆ ಹೆಚ್ಚಳವಾಗಿದೆ.
ಸೇವಾವಲಯ ಅರಳುತ್ತಿದೆ. ಮಾಹಿತಿ ತಂತ್ರ ಜ್ಞಾನ ಮತ್ತು ವ್ಯಾಪಾರ ವಲಯದ ಸೇವೆಗಳಲ್ಲಿ ಭಾರತದ ರಫ್ತು ದೃಢವಾದ ಬೆಳವಣಿಗೆಯತ್ತ ಸಾಗಿದೆ.
ಶಿಕ್ಷಣ, ಧ್ವನಿ-ದೃಶ್ಯ ಸೇವೆಗಳು ಮತ್ತು ಸಾಗಣೆ ವಲಯದಲ್ಲಿ ಆಸ್ಟ್ರೇಲಿಯಾದೊಂದಿಗೆ ಇತರೆ ದ್ವಿಪಕ್ಷೀಯ ಒಪ್ಪಂದಗಳಲ್ಲಿ ಇಸಿಟಿಎ ವೇಗ ಶೇ.೫೦
ಕ್ಕಿಂತ ಹೆಚ್ಚಾಗಿದೆ ಮತ್ತು ಭಾರತೀಯ ವಿದ್ಯಾರ್ಥಿ ಗಳಿಗೆ ಅಧ್ಯಯನದ ನಂತರ ಕೆಲಸದ ವೀಸಾಗಳಲ್ಲಿ ಶೇ.೧೦೦ಕ್ಕಿಂತ ಹೆಚ್ಚು ಬಲವಾದ ಬೆಳವಣಿಗೆಗೆ
ಪರಿಪೂರ್ಣ ಹಿನ್ನೆಲೆ ಒದಗಿಸಿದೆ. ಇಸಿಟಿಎ ಜಾರಿಯಾದ ನಂತರ ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮ ದ್ವಿ-ತೆರಿಗೆ ಪದ್ಧತಿ ಯಿಂದ ಮುಕ್ತವಾಗಿದ್ದು, ಇದೀಗ ಸಮಾನ ಆಟದ ಮೈದಾನದಲ್ಲಿ ಸ್ಪರ್ಧಿಸುತ್ತಿದೆ. ಕೆಲವು ಉದ್ಯಮ ವಲಯದ ಅಂದಾಜಿನ ಪ್ರಕಾರ ಈ ಉಪಕ್ರಮದಿಂದ ಕಳೆದ ವರ್ಷ ಭಾರತ ಹತ್ತು ದಶಲಕ್ಷ ಡಾಲರ್ ಉಳಿತಾಯ ಮಾಡಿದೆ. ಇಸಿಟಿಎ ಯಶಸ್ಸಿನ ನಂತರ ಉತ್ತೇಜನಗೊಂಡಿರುವ ನಾಸ್ಕಾಮ್ ಐಟಿ ಕ್ಷೇತ್ರದ ಎಂಎಸ್ಎಂಇಗಳಿಗೆ ಆಸ್ಟ್ರೇಲಿಯಾದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ತನ್ನ ಕಾರ್ಯವಿಧಾನವನ್ನು ಜಾರಿಗೆ ತರುತ್ತಿದೆ.
ವ್ಯಾಪಾರ ಒಪ್ಪಂದಗಳಿಗೆ ಹೊಸ ವಿಧಾನ
ಭಾರತ-ಆಸ್ಟ್ರೇಲಿಯಾ ಇಸಿಟಿಎ ನಂತರ ಇದೇ ರೀತಿಯ ಒಪ್ಪಂದ ಕಳೆದ ವರ್ಷ ಸಂಯುಕ್ತ ಅರಬ್ ಒಕ್ಕೂಟದ ನಡುವೆ ಆಗಿದ್ದು, ರಾಷ್ಟ್ರೀಯ ಮತ್ತು ಪ್ರಾದೇಶಿಕ ವಾಣಿಜ್ಯ ಮಂಡಳಿಗಳು, ರಫ್ತುದಾರರು, ನಿರ್ದಿಷ್ಟ ಉದ್ಯಮ ಗುಂಪುಗಳು, ಅರ್ಥಶಾಸ್ತ್ರಜ್ಞರು, ವ್ಯಾಪಾರ ತಜ್ಞರು, ವಿವಿಧ ಸಚಿವಾಲಯಗಳು, ಇಲಾಖೆಗಳು ಸೇರಿದಂತೆ ಉದ್ಯಮದ ಪ್ರತಿಯೊಂದು ವಿಭಾಗದೊಂದಿಗೆ ವ್ಯಾಪಕ ಸಮಾಲೋಚನೆ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೈಗಾರಿಕಾ ವಲಯದ ನಾಯಕರು ಎಫ್ ಟಿಎ ಕುರಿತು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದಿನ ವ್ಯಾಪಾರ ಒಪ್ಪಂದಗಳಿಗೆ ಹೋಲಿಸಿದರೆ ಇದು ಅತಿದೊಡ್ಡ ಹೆಜ್ಜೆಯಾಗಿದ್ದು, ಇದು ಅಂಥ ಹೆಚ್ಚಿನ ಸಮಾಲೋಚನೆಗಳಿಗೆ ಒಳಪಟ್ಟಿಲ್ಲ.
ಪ್ರಧಾನಮಂತ್ರಿ ಮೋದಿ ಅವರು ಹೇಳುವಂತೆ ಪ್ರತಿಯೊಂದು ನೀತಿ ಅಥವಾ ಒಪ್ಪಂದಗಳು ದೇಶದ ಹಿತಾಸಕ್ತಿಯನ್ನು ಒಳಗೊಂಡಿರಬೇಕು ಮತ್ತು
ಅದರಿಂದ ದೇಶಕ್ಕೆ ಲಾಭವಾಗಬೇಕು. ಈ ಸ್ಫೂರ್ತಿಯಿಂದ ನಾವು ಮಾರಿಷಸ್, ಆಸ್ಟ್ರೇಲಿಯಾ ಮತ್ತು ಯುಎಇ ಜತೆ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದೇವೆ ಮತ್ತು ಇದೇ ಮಾರ್ಗದರ್ಶಿ ತತ್ವಗಳು ಇತರೆ ದೇಶ ಗಳೊಂದಿಗಿನ ಮಾತುಕತೆಗಳನ್ನು ರೂಪಿಸುತ್ತಿವೆ.
ನಮ್ಮ ವ್ಯಾಪಾರವನ್ನು ಸ್ಪರ್ಧಾತ್ಮಕಗೊಳಿಸಲು, ಹೊಸ ಮಾರುಕಟ್ಟೆಗಳಿಗೆ ತೆರೆದುಕೊಳ್ಳಲು ನ್ಯಾಯಸಮ್ಮತ, ಪಾರದರ್ಶಕ ಮತ್ತು ಪರಸ್ಪರ ಲಾಭ
ದಾಯಕವಾಗುವ ಒಪ್ಪಂದಗಳಿಗೆ ನಾವು ಸಹಿ ಹಾಕುತ್ತಿದ್ದೇವೆ ಮತ್ತು ಅತ್ಯಂತ ಪ್ರಮುಖವಾಗಿ ಈ ಎಫ್ ಟಿಎ, ವ್ಯಾಪಾರ ಮತ್ತು ವಾಣಿಜ್ಯ ವಲಯ
ವನ್ನು ವಿಸ್ತರಿಸಲಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಲಿದೆ.
ಇದು ಉದ್ಯೋಗ ಸೃಷ್ಟಿ ಮತ್ತು ವ್ಯಾಪಾರದ ಅವಕಾಶಗಳನ್ನು ಹೆಚ್ಚಿಸಲಿದೆ. ಆಸ್ಟ್ರೇಲಿಯಾದೊಂದಿಗಿನ ಎಫ್ ಟಿಎ ತನ್ನ ಮೊದಲ ವರ್ಷದಲ್ಲಿ ಇದನ್ನು ಪ್ರದರ್ಶಿಸಿದೆ.
(ಲೇಖಕರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ
ವ್ಯವಹಾರಗಳು ಹಾಗೂ ಜವಳಿ ಖಾತೆಗಳ ಸಚಿವರು)