Thursday, 12th December 2024

ಹಿಂದೂಗಳ ಭಾವನೆ ಅರಿಯಲಿ ಚಿತ್ರರಂಗ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಸಾಂಸ್ಕೃತಿಕ ದಾರಿದ್ರ್ಯದಿಂದಲೇ ಹಿಂದಿ ಸಿನಿಮಾಗಳನ್ನು ನೋಡಿಕೊಂಡು ಬಂದವರಿಗೆ ‘ಬಾಹುಬಲಿ’, ‘ಆರ್‌ಆರ್‌ಆರ್’ ಸಿನಿಮಾಗಳನ್ನು ನೋಡಿದ ಮೇಲೆ ತಾವು ನಿಜಕ್ಕೂ ಯಾವುದನ್ನು ನೋಡಬೇಕು ಮತ್ತು ಇಲ್ಲಿಯವರೆಗೂ ನೋಡಬಾರದ್ದನ್ನು ನೋಡಿಕೊಂಡು ಬಂದೆವ ಎನಿಸಿತು.

‘ಕೆಳಗೆ ಬಿದ್ದ ಕತ್ತಿಗಳನ್ನು ಎತ್ತಿಕೊಳ್ಳುವ ರಣಚಾತುರ್ಯವೇ ಗೊತ್ತಿಲ್ಲ, ಹಿಂದೂಗಳನ್ನು ಗೆದ್ದಾಳುವ ಗಂಡಸರೇನೋ ನೀವೆ, ಹೆಂಬೇಡಿಗಳಾ..’ ಹೀಗೆ ಮುಸ್ಲಿಂ ಸೈನ್ಯಕ್ಕೆ ಎಚ್ಚರಿಸುವ ‘ಶ್ರೀಕೃಷ್ಣದೇವರಾಯ’ ಚಿತ್ರದಲ್ಲಿ ಅಣ್ಣಾವ್ರು ಅಮೋಘವಾಗಿ ಅಭಿನಯಿಸಿದ್ದಾರೆ.

ಈ ಚಿತ್ರದ ಸನ್ನಿವೇಶಗಳಲ್ಲಿ ‘ಹಿಂದೂ’ ಪದವನ್ನು ಬಳಸಿ ನೈಜವಾಗಿ ಹೇಳಬೇಕಾದ್ದನ್ನು ನೇರವಾಗಿ ಹೇಳಲಾಗಿದೆ. ವರನಟ ರಾಜಣ್ಣ, ಧೀಮಂತ ನಿರ್ದೇಶಕ ಬಿ.ಆರ್. ಪಂತಲು ಅವರು ಹಂಪಿಯಲ್ಲಿ ಹಲವು ದಿನ ಓಡಾಡಿ ಶ್ರೀಕೃಷ್ಣದೇವರಾಯನ ವಂಶಸ್ಥರಾದ ರಾಜ ಅಚ್ಯುತ ದೇವರಾಯಲು ಬಳಿ ಸಾಕಷ್ಟು ಚರ್ಚಿಸಿ, ಇತಿಹಾಸಕ್ಕೆ ಸಣ್ಣ ಚ್ಯುತಿಯೂ ಬಾರದಂತೆ ಎಚ್ಚರ
ವಹಿಸಿದ್ದರು. ಈ ಚಿತ್ರ ಕನ್ನಡ ಚಿತ್ರರಂಗದ ಒಂದು ಶಾಸನ. ಅದು ಬಿಟ್ಟರೆ ‘ಹಿಂದೂ’ ಪದವನ್ನು ರಾಜಾರೋಷವಾಗಿ ಬಳಸಿದ್ದು ‘ಕಪ್ಪು ಬಿಳುಪು’ ಚಿತ್ರದಲ್ಲಿ.

ಆರ್.ಎನ್. ಜಯಗೋಪಾಲ್ ಅವರ ‘ಇಂದಿನ ಹಿಂದೂದೇಶದ ನವಯುವಕರೇ ನವಯುವತಿಯರೇ….. ಯಾವುದು ಸತ್ಯ ಯಾವುದು ಮಿಥ್ಯ’ ಗೀತೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಚಿತ್ರೀಕರಿಸಿದ್ದಾರೆ ಪುಟ್ಟಣ್ಣ ಕಣಗಾಲ್. ಈ ಗೀತೆ ಇಂದಿಗೂ
ಹಿಂದೂಗಳನ್ನು ರೋಮಾಂಚನಗೊಳಿಸುತ್ತದೆ. ಆದರೆ ಈ ‘ಹಿಂದೂ’ ಎಂಬ ಪದಬಳಕೆಯ ಢೋಂಗಿತನ ಚಿತ್ರರಂಗಕ್ಕೂ ಅಂಟಿರುವುದು ದುರ್ದೈವ.

ಮಹಾವೀರ ಜಯಂತಿ ನಡೆಯುತ್ತಿದೆ. ಅಂದು ಮಾಂಸದಂಗಡಿಗಳನ್ನು ತೆರೆಯದಿರಲು ಬಿಬಿಎಂಪಿಯ ಆದೇಶವಿರುತ್ತದೆ. ಆದರೆ ಅದನ್ನು ಲೆಕ್ಕಿಸದೆ ಅಂಗಡಿಯನ್ನು ತೆರೆದಿದ್ದ ಮುಸಲ್ಮಾನರ ಅಂಗಡಿಗೆ ನುಗ್ಗುವ ಹೀರೋ, ಅವರೊಂದಿಗೆ ಬಡಿದಾಡಿ ಧರ್ಮ ಮತ್ತು ಕಾನೂನು ಕುರಿತು ಸರಿಯಾದ ಪಾಠ ಮಾಡಿ ಅಂಗಡಿಯನ್ನು ಮುಚ್ಚಿಸುತ್ತಾನೆ. ಇಂಥ ‘ನೈಜ’ ಸನ್ನಿವೇಶವನ್ನು ಚಿತ್ರೀಕರಿಸಿ ಸಿನಿಮಾ ತೋರಿಸುವ ಗಂಡೆದೆ ಯಾರಿಗಿದೆ ಹೇಳಿ? ಅದು ಕನ್ನಡದ ರವಿಚಂದ್ರನ್ ಅವರ ಪುತ್ರ ಮನೋ ರಂಜನ್‌ನ ಅರಂಗೇಟ್ರಂ ಚಿತ್ರ ‘ತ್ರಿವಿಕ್ರಮ’ ಚಿತ್ರದಲ್ಲಿದೆ.

ನಿರ್ದೇಶಕ ಸಹನಾಮೂರ್ತಿಯವರ ಸಾಮಾಜಿಕ ಬದ್ಧತೆಯನ್ನು ಮೆಚ್ಚಲೇಬೇಕು. ಉಪೇಂದ್ರ ಅವರ ‘ಶಿವಂ’ ಚಿತ್ರದಲ್ಲಿ ಗೋಕಳ್ಳರನ್ನು ಹಿಡಿದು ಬಾರಿಸುವ ಸನ್ನಿವೇಶವಿದೆ. ಆದರೆ ಹಿಂದುತ್ವದ ನಂಬಿಕೆಗಳನ್ನೇ ಅವಮಾನಿಸುವಂಥ ಸನ್ನಿವೇಶ ಗಳನ್ನು ಚಿತ್ರಿಸಿ ತೋರಿಸುವ ಹೇಡಿಗಳು ವಿಕೃತಿಗಳೇ ಚಿತ್ರರಂಗದಲ್ಲಿ ಹೆಚ್ಚಾಗಿರುವುದು ದೌರ್ಭಾಗ್ಯ. ತೆಲುಗಿನಲ್ಲಿ ರಾಜ ಮೌಳಿಯ ಚಿತ್ರಗಳು, ಬಾಲಕೃಷ್ಣ ಅಭಿನಯದ ‘ಅಖಂಡಾ’ ಚಿತ್ರ ಹಿಂದೂಗಳನ್ನು ಬಡಿದೆಬ್ಬಿಸಿದ್ದವು. ಮಹೇಶ್ ಬಾಬು ಒಪ್ಪಿಕೊಳ್ಳುವುದೇ ಸರಕಾರ-ಸಮಾಜವನ್ನು ತಿದ್ದುವ ಕಥೆಯಾ ಧರಿತ ಚಿತ್ರಗಳನ್ನು.

ಸಾಯಿ ಧರ್ಮತೇಜ ಅಭಿನಯದ ‘ಜವಾನ್’ ಚಿತ್ರದಲ್ಲಿ ಆರ್‌ಎಸ್‌ಎಸ್ ಕುರಿತಾಗಿಯೇ ಒಂದು ಗೀತೆಯನ್ನು ನೀಡಿದ್ದಾರೆ.
ಪವನ್ ಕಲ್ಯಾಣ್ ಅವರು ಅಯೋಧ್ಯೆಯ ಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂಪಾಯಿಗಳನ್ನು ನೀಡಿದ್ದಲ್ಲದೆ,  ದೇವಾಲಯ ಗಳ ಮೇಲಾದ ದಾಳಿಯನ್ನು ಖಂಡಿಸಿ ಸಾಮಾಜಿಕ ಹೊಣೆಗಾರಿಕೆ ತೋರಿದ್ದಾರೆ. ತನ್ನ ರಾಜಕೀಯ ಭವಿಷ್ಯಕ್ಕೂ ಸೌಮ್ಯ ಹಿಂದುತ್ವವೇ ಬಲವೆಂದು ನಂಬಿಕೊಂಡಿದ್ದಾರೆ. ಇನ್ನು ಕೆಲ ತೆಲುಗು ಸಿನಿಮಾಗಳ ದರಿದ್ರವೇನೆಂದರೆ, ಅಲ್ಲಿ ರಾಮಾಯಣ ಚಿತ್ರ ತೆಗೆದರೂ ಅದರಲ್ಲಿಯೂ ರಹೀಮ್, ಮಸೀದಿ, ಮದರ್ ತೆರೇಸಾ, ಜೀಸಸ್ ಅನ್ನು ತುರುಕಿ ಸೌಹಾರ್ದ ತೋರಿಸುತ್ತಾರೆ. ದೇವಾಲಯಗಳ ನಾಡು ತಮಿಳು ಚಿತ್ರರಂಗದಲ್ಲಿ ಬೆರಕೆಗಳೇ ಹೆಚ್ಚು.

ಅಲ್ಲಿ ಹಿಂದುತ್ವ ಪದವೇ ಅಪದ್ಧ. ಕಮಲಹಾಸನ್, ಸೂರ್ಯ, ವಿಜಯ್‌ನಂಥ ಎಡಬಿಡಂಗಿಗಳದ್ದೇ ಪಾರುಪತ್ಯ. ಇದನ್ನೆಲ್ಲ ಹೇಳಲು ಕಾರಣ, ಚಿತ್ರರಂಗವೆಂಬುದು ಕೇವಲ ಮನರಂಜನೆ, ಸಂಪಾದನೆ ಮತ್ತು ಸ್ಟಾರ್‌ಗಿರಿ ಕಟ್ಟಿಕೊಂಡು ಅಭಿಮಾನಿ ಗಳನ್ನು ಗುಡ್ಡೆ ಹಾಕಿಕೊಂಡು ಮೆರೆಯಲಿಕ್ಕಿರುವ ಅಡ್ಡವಲ್ಲ. ಚಲನಚಿತ್ರ ದೃಶ್ಯಮಾಧ್ಯಮ ಜನ್ಮ ತಾಳಿದ್ದೇ ಪೌರಾಣಿಕ, ಐತಿಹಾಸಿಕ ಕಥೆಗಳಿಗೆ ದೃಶ್ಯರೂಪ ನೀಡಿ ನಾಗರಿಕರನ್ನು ಎಚ್ಚರಿಸುವ, ಆ ಮೂಲಕ ತಮ್ಮ ಇತಿಹಾಸ-ಪರಂಪರೆಯನ್ನು ಮೆರೆಸಿ ಜಾಗೃತಗೊಳಿಸಿ ಆರೋಗ್ಯಕರ ಸಮಾಜವನ್ನು ಕಟ್ಟುವ ಉದ್ದೇಶಕ್ಕಾಗಿ. ಬದುಕಿಗಾಗಿ ಚಿತ್ರರಂಗ ವನ್ನು ಅವಲಂಬಿಸಿದ ವರನಟ ರಾಜಣ್ಣನವರು ಮುಂದೆ ನಾಡು-ನುಡಿ-ಸಂಸ್ಕೃತಿಯ ರಕ್ಷಣೆಯಲ್ಲಿ ಇಡೀ ಸರಕಾರವನ್ನೇ ಮೀರಿಸುವಂಥ ಶಕ್ತಿಯಾಗಿ ರೂಪುಗೊಂಡು ಚಿತ್ರರಂಗದ ಪ್ರತಿಯೊಬ್ಬರಿಗೂ ಒಂದು ವಿಶ್ವವಿದ್ಯಾಲಯವೇ ಆಗಿಬಿಟ್ಟರು.

ಸ್ಟಾರ್ ಗಿರಿಗೆ ಏರಿದ್ದರೂ ತಾನು ನಿಂತಿರುವ ಸಮಾಜ, ಸಂಸ್ಕೃತಿಯನ್ನುಗೌರವಿಸಿ ಸಾಗುವುದೇ ಅಸಲಿ ಸ್ಟಾರ್ ಗಿರಿ. ಅದನ್ನೇ ಅಣ್ಣಾವ್ರು ಮತ್ತು ಅಪ್ಪು ಮಾಡಿದ್ದು. ಹುಟ್ಟು ಕಲಾವಿದರು, ಅಭಿಮಾನಿಗಳ ಸ್ಟಾರ್ ಗಳು, ದಿಢೀರ್ ಸ್ಟಾರ್‌ಗಳು, ರೆಡಿಮೇಡ್
ಸ್ಟಾರ್‌ಗಳು, ಸ್ವಯಂಘೋಷಿತ ಸ್ಟಾರ್‌ಗಳು, ರಾಜಕಾರಣದ ಭವಿಷ್ಯಕ್ಕೆ ತಯಾರಾದ ಐಟಂ ಸ್ಟಾರ್‌ಗಳು ಇವರಾರೇ ಇರಲಿ,
ಚಿತ್ರರಂಗವೆಂಬುದು ದೇಶದ ಒಂದು ಭಾವನಾತ್ಮಕ ಕ್ಷೇತ್ರ.

ನಾನೊಬ್ಬ ಸ್ಟಾರ್, ನಾನು ಏನೇ ಮಾಡಿದರೂ ಎಂಥ ಸಿನಿಮಾ ಕೊಟ್ಟರೂ ಜನ ಮುಚ್ಕೊಂಡು ಬಂದು ನೋಡ್ತಾರೆ, ನನ್ನ ಸಮ
ಯಾರಿಲ್ಲ ನಂಗೆ ಯಾರ ಹಂಗಿಲ್ಲ ಎಂದು ವರ್ತಿಸಿದರೆ ಅದು ಧೀಮಾಕು. ಆದರೆ ಈ ಆಮಿರ್ ಖಾನ್ ಇದ್ದಾನ, ಇವನೊಳ ಗಿರುವ ಪರಮ ಅಸಹಿಷ್ಣುತೆ, ದುರಂಹಕಾರವನ್ನು ಅರಿಯಲು ಭಾರತೀಯರಿಗೆ ಮೂರು ದಶಕಗಳೇ ಬೇಕಾದವು. ತನ್ನೊಳಗೆ ಅತೃಪ್ತ ಜಿಹಾದಿಯನ್ನು ಸಾಕಿಕೊಂಡೇ ಬಂದಿದ್ದ ಈತ ಹಿಂದೂಧರ್ಮದ ಮೌಲ್ಯಗಳ ಕುರಿತು ಸದಾ ಕೆಡುಕುಬುದ್ಧಿ ಯನ್ನೇ
ಹೊಂದಿದ್ದ. ಅವಕಾಶ ಸಿಕ್ಕಾಗೆಲ್ಲ ಅವ ಮಾನಿಸುತ್ತಲೇ ಬರುತ್ತಿದ್ದ.

‘ಪಿಕೆ’ ಸಿನಿಮಾದಲ್ಲಿ ಹಿಂದೂ ದೇವರನ್ನುಅವಹೇಳನ ಮಾಡಿ ಬಹುಸಂಖ್ಯಾತರ ಭಾವನೆಗಳಿಗೆ ಕೊಳ್ಳಿ ಇಟ್ಟರೂ ಈತನ ಸಿನಿಮಾವನ್ನು ಮಾನಗೇಡಿ ಹಿಂದೂಗಳೇ ಗೆಲ್ಲಿಸಿದರು. ಹಾಲನ್ನು ದೈವಮೂರ್ತಿಗಳ ಮೇಲೆ ಚೆಲ್ಲಬೇಡಿ ಎಂದ ಈತ,
ಜಾಹೀರಾತೊಂದರಲ್ಲಿ ‘ರಸ್ತೆಯಲ್ಲಿ ನಮಾಜ್ ಮಾಡಬೇಡಿ’ ಎನ್ನುವುದನ್ನುಬಿಟ್ಟು ‘ದೀಪಾವಳಿ ಹಬ್ಬದಲ್ಲಿ ರಸ್ತೆಯಲ್ಲಿ ಪಟಾಕಿ ಹೊಡೆಯಬೇಡಿ’ ಎಂದು ನೂರು ಕೋಟಿ ಹಿಂದೂಗಳಿಗೆ ನೀತಿ ಹೇಳಿದ.

ಸಾಲದೆಂಬಂತೆ ತನ್ನ ಚಿತ್ರಕ್ಕಾಗಿ ಭಾರತವಿರೋಧಿ ಟರ್ಕಿ ದೇಶದ ಅಧ್ಯಕ್ಷೆಯನ್ನು ಭೇಟಿಮಾಡಿ ದೇಶಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ. ಹಿಂದೂ ಸಂಸ್ಕೃತಿಯ ವಿರುದ್ಧದ ಈತನ ಜಾಣ ತನದ ಉಪದೇಶಗಳಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಲೇ ಬಂದರು. ಹಿಂದೂಗಳು ಅದೆಂಥಾ ಮುಗ್ಧರೋ, ಮನರಂಜನೆಯ ದಾರಿದ್ರ್ಯವೋ, ಅಮಿತಾಬ್ ಬಚ್ಚನ್‌ನಿಂದ ಹಿಡಿದು ಈ ಖಾನ್‌ಗಳ ತನಕ ಸ್ವಾಭಿಮಾನ, ದೇಶಾಭಿಮಾನ ಮರೆತು ಆರಾಧಿಸಿಕೊಂಡೇ ಬಂದರು.

ಇಂಥ ಮನಸ್ಥಿತಿಗೆ ಬಾಲಿವುಡ್ ಗೊಬ್ಬರ ಸುರಿದು ಇವರ ಸ್ಟಾರ್‌ಗಿರಿಯ ಕಾಲ್‌ಶೀಟ್ ಪಡೆದು ಇವರ ‘ಅಭಿರುಚಿಗೆ’ ತಕ್ಕಂತೆ ಸಿನಿಮಾ ಮಾಡಿಕೊಂಡೇ ಬಂದಿತು. ಮುಂಬಯಿಯಲ್ಲಿ ಬಾಳ ಠಾಕ್ರೆಯ ಶಿವಸೇನೆಯಂಥ ಹಿಂದುತ್ವ ಹೋರಾಟದ
ಸಂಘಟನೆಗಳಿದ್ದರೂ ಇವರುಗಳನ್ನು ಪ್ರಶ್ನಿಸುವವರು ಽಕ್ಕರಿಸುವವರು ಇರಲಿಲ್ಲ. ಎಲ್ಲಿಯವರೆಗೆ ಎಂದರೆ ಕನ್ನಡಿಗ ಎಸ್.ಎಸ್. ರಾಜಮೌಳಿ ಮತ್ತು ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರು ಪಕ್ಕಾ ಹಿಂದೂ ಪರಂಪರೆಯ ವೈಭವದ ‘ಬಾಹುಬಲಿ’
ಚಿತ್ರವನ್ನು ಹಿಂದಿಗೆ ಡಬ್ ಮಾಡಿ ಬಾಲಿವುಡ್ ಚಿತ್ರಪ್ರೇಮಿಗಳಿಗೆ ತೋರಿಸುವ ತನಕ..!

ಸಾಂಸ್ಕೃತಿಕ ದಾರಿದ್ರ್ಯದಿಂದಲೇ ಹಿಂದಿ ಸಿನಿಮಾಗಳನ್ನು ನೋಡಿಕೊಂಡು ಬಂದ ಚಿತ್ರರಸಿಕರಿಗೆ ‘ಬಾಹುಬಲಿ’, ‘ಆರ್‌ಆರ್‌ಆರ್’ ಸಿನಿಮಾಗಳನ್ನು ನೋಡಿದ ಮೇಲೆ ತಾವು ನಿಜಕ್ಕೂ ಯಾವುದನ್ನು ನೋಡಬೇಕು ಮತ್ತು ಇಲ್ಲಿಯವರೆಗೂ ನೋಡಬಾರದ್ದನ್ನು ನೋಡಿಕೊಂಡು ಬಂದೆವ ಎನಿಸಿತು. ದೇಶದ್ರೋಹಿ ಮನಸ್ಥಿತಿಯ ‘ಖಾನ್‌ದಾನ್’ಗಳಿಗೆ ಸರಿಯಾದ ಪಾಠ ಕಲಿಸಲು ತೀರ್ಮಾನಿಸಿದರು.

ಅದಕ್ಕಾಗಿ ಪ್ರತಿಭಟನೆ, ಕಲ್ಲುತೂರಾಟ, ಗಲಭೆ, ದೊಂಬಿ, ಚಿತ್ರಮಂದಿರದ ಮೇಲೆ ದಾಳಿ ಮಾಡಲಿಲ್ಲ; ಆಮಿರ್ ಖಾನ್‌ನ ಸಿನಿಮಾವನ್ನು ನೋಡುವುದಿಲ್ಲ ಎಂದು ತೀರ್ಮಾನಿಸಿ ಮನರಂಜನಾ ಬಹಿಷ್ಕಾರ ಹಾಕಿದರಷ್ಟೇ..! ಈ ಆಮಿರ್ ಖಾನ್ ಎಷ್ಟು ಕಂಗೆಟ್ಟಿದ್ದನೆಂದರೆ ತನ್ನ ‘ಲಾಲ್‌ಸಿಂಗ್ ಚಡ್ಡಾ’ ಸಿನಿಮಾವನ್ನು ತೆಲುಗಿನ ಖ್ಯಾತನಾಮರಿಗೆ ತೋರಿಸಿ ಮೈಲೇಜ್ ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ. ತನ್ನ ಸಿನಿಮಾ ಬಹುಸಂಖ್ಯಾತ ಹಿಂದೂಗಳ ಅವಕೃಪೆಗೆ ಒಳಗಾಗುತ್ತ ದೆಂದು ವಿಲವಿಲ ಒzಡಿದ. ‘ಆಗಿದ್ದು ಆಯ್ತು ಕ್ಷಮಿಸಿಬಿಡಿ, ನನ್ನ ಚಿತ್ರವನ್ನು ನನ್ನನ್ನು ಕಾಪಾಡಿ’ ಎಂದು ಅಂಗಲಾಚಿದ.

ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಈತ ಅಂದುಕೊಂಡಿದ್ದಕ್ಕಿಂತ ರೌದ್ರವಾಗಿ ಹಿಂದೂಗಳು ಈತನ ‘ಚಡ್ಡಾ’ ಸಿನಿಮಾದ ‘ಚಡ್ಡಿ’ ಉದುರುವಂತೆ ಮಾಡಿಬಿಟ್ಟರು. ಬಿಡುಗಡೆಗೊಂಡ ಮೊದಲ ದಿನವೇ 1300ಕ್ಕೂ ಹೆಚ್ಚು ಪ್ರದರ್ಶನಗಳು ರzಗಿ ಚಿತ್ರಮಂದಿರಗಳಲ್ಲಿದ್ದ ಸೊಳ್ಳೆಗಳಿಗೂ ಕೆಲಸವಿಲ್ಲದಾಯ್ತು! ಪರಿಣಾಮ, ಈತನ ವೃತ್ತಿಜೀವನದ ಅದು ಸೂಪರ್ -ಪ್
ಚಿತ್ರವೆಂಬ ದಾಖಲೆ ಬರೆಯಿತು. ಈತನ ಈ ದುಸ್ಥಿತಿಯನ್ನು ಕಂಡ ಚಿತ್ರದ ನಾಯಕಿ ಕರಿನಾ ಕಪೂರ್ ‘ದಯಮಾಡಿ ಬಾಯ್ಕಾಟ್ ಮಾಡಬೇಡಿ’ ಎಂದು ಸತಿ ಸಾವಿತ್ರಿಯಂತೆ ಆಮಿರ್ ಖಾನ್ ಪರವಾಗಿ ಸೆರಗೊಡ್ಡಿದಳು.

ರಣಬೀರ್ ಕಪೂರ್‌ನ ‘ಶಂಷೇರ’ ಚಿತ್ರದಲ್ಲಿ ಹಿಂದೂ ದೈವಭಕ್ತ ಗುಣಸಿಂಗ್ ಎಂಬ ಪಾತ್ರವನ್ನು ಖಳನಾಯಕನನ್ನಾಗಿ ತೋರಿಸಿದ್ದರು. ಆ ಚಿತ್ರವನ್ನೂ ಪ್ರೇಕ್ಷಕರು ಬೀದಿನಾಯಿಯನ್ನು ಅಟ್ಟಿದಂತೆ ಚಿತ್ರಮಂದಿರಗಳಿಂದ ಓಡಿಸಿದರು. ಬಿಡುಗಡೆಯಾ ಗಲಿರುವ ಅಕ್ಷಯ್ ಕುಮಾರ್‌ನ ‘ರಕ್ಷಾಬಂಧನ್’ ಚಿತ್ರ ದಲ್ಲೂ ಇಂಥದ್ದೇ ವಿಕಾರಗಳಿವೆ ಎಂಬ ಅನುಮಾನ ಈಗಾಗಲೇ ಪ್ರೇಕ್ಷಕರಲ್ಲಿ ಮೂಡಿದೆ. ಒಟ್ಟಿನಲ್ಲಿ ಸಿನಿಮಾಕ್ಕಿಂತ ದೇಶದ ಬಹುಸಂಖ್ಯಾತ ಹಿಂದೂಗಳ ನಂಬಿಕೆ ಭಾವನೆಗಳೇ ಮಿಗಿಲೆಂದು ಅರಿತು ನಡೆದರೆ ಬಾಲಿವುಡ್‌ಗೆ ಭವಿಷ್ಯ.

ಅದನ್ನು ಬಿಟ್ಟು ಇಂಥ ಅಸಹ್ಯಗಳ ಬೆಂಬಲಕ್ಕೆ ನಿಂತರೆ ಈಗಾಗಲೇ ಆಮಿರ್ ಖಾನ್‌ನ ಚಡ್ಡಿ ಉದುರಿದೆ; ಮುಂದೆ ಇವರ
ಪುಟಗೋಸಿಯನ್ನೂ ಪ್ರೇಕ್ಷಕ ಕಿತ್ತೆಸೆದರೆ ಆಶ್ಚರ್ಯವಿಲ್ಲ! ಇದು ಬದಲಾಗಬೇಕಾದ ಭಾರತೀಯ ಚಿತ್ರರಂಗಕ್ಕೆ ದಿಕ್ಸೂಚಿ ಮತ್ತು ಎಚ್ಚರಿಕೆ. ಒಬ್ಬ ನಟ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಮೇಲೆ ಆತನ ಮೇಲೆ ಸಹಜವಾಗಿ ಸಾಮಾಜಿಕ ಬದ್ಧತೆ ಸೃಷ್ಟಿಯಾಗುತ್ತದೆ. ಆತ ಒಬ್ಬ ರಾಜಕಾರಣಿ, ಮಠಾಽಶನಿಗಿಂತಲೂ ಹೆಚ್ಚು ಹೊಣೆಗಾರಿಕೆ ತೋರಬೇಕಾಗುತ್ತದೆ.

ಅದಕ್ಕೆ ತಕ್ಕಂತೆ ಸಮಾಜದ ಆಗುಹೋಗುಗಳಿಗೆ, ನಾಡಿನ, ದೇಶದ ಸಾರ್ವಭೌಮತೆ, ಘನತೆಯ ವಿಚಾರಗಳ ಪ್ರಶ್ನೆ ಬಂದಾಗ ಅದಕ್ಕೆ ಸ್ಪಂದಿಸಬೇಕಾಗುತ್ತದೆ. ಭೂಕಂಪ, ನೆರೆ, ಬರ ಪ್ರವಾಹವಿರಲಿ, ಭಯೋತ್ಪಾದನೆ, ಕೋಮು ಪ್ರಚೋದನೆ ಇಂಥ ಸಮಾಜಗೇಡಿ ವಿಚಾರಗಳಿಗೆ ಸ್ಪಂದಿಸಬೇಕಾಗುತ್ತದೆ. ಕನ್ನಡದ ವಿಚಾರಕ್ಕೆ ಬಂದರೆ, ನಮ್ಮ ಕ್ಯಾಪ್ಟನ್ ಗೋಪಿನಾಥ್ ಅವರ ಬಯೋಪಿಕ್ ಅನ್ನು ತಮಿಳಿ ನಲ್ಲಿ ಸಿನಿಮಾ ಮಾಡಿ ರಾಷ್ಟ್ರಪ್ರಶಸ್ತಿ ಗಳಿಸಿರುವಾಗ ನಮ್ಮ ಕನ್ನಡ ಚಿತ್ರರಂಗಕ್ಕೇನಾಗಿದೆ ಎಂಬ ಪ್ರಶ್ನೆ ಮೂಡುತ್ತದೆ.

ಶಿವಣ್ಣ ‘ಓಂ’ನಂಥ ಹತ್ತು ಚಿತ್ರ ಮಾಡಲಿ; ಆದರೆ ಭಕ್ತ ಅಂಬರೀಷ, ನೃಪತುಂಗ, ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರಗಳ ಚಿತ್ರಗಳನ್ನೂ ಮಾಡಲಿ. ಸುದೀಪ್ ‘ವಿಕ್ರಾಂತ ರೋಣ’ದಂಥ ಹತ್ತು ಚಿತ್ರ ಮಾಡಲಿ; ಆದರೆ ನೇತಾಜಿ, ಸರ್.ಎಂ. ವಿಶ್ವೇಶ್ವರಯ್ಯ ಜೀವನಾಧಾರಿತ ಕಥೆಗಳನ್ನೂ ಮಾಡಿತೋರಿಸಲಿ. ಯಶ್ ‘ಕೆಜಿಎಫ್’ನಂಥ ಹತ್ತು ಚಿತ್ರ ಮಾಡಲಿ; ಆದರೆ ಛತ್ರಪತಿ ಶಿವಾಜಿ, ಉಧಮ್ ಸಿಂಗ್, ಚಂದ್ರಶೇಖರ್ ಆಜಾದ್ ತಾನಾಗಿಯೂ ತೋರಿಸಲಿ.

ಒಟ್ಟಾರೆ ಕನ್ನಡ ಚಿತ್ರರಂಗ ರಾಮಾಯಣ, ಮಹಾಭಾರತ, ಕುರುಕ್ಷೇತ್ರ, ಒಟ್ಟಾರೆ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತು ಭಾಗಗಳಾಗಿ ಸಿನಿಮಾ ಮಾಡುವ ಪ್ರಯತ್ನ ಮಾಡಲಿ. ಇಂಥ ಚಿತ್ರಗಳು ಚರಿತ್ರೆಯೊಂದಿಗೆ ಕಲಾವಿದನನ್ನುಬೆಸೆದು
ನಿಲ್ಲಿಸುತ್ತವೆ. ‘ನಾವು ಕಲಾವಿದರು, ನಮಗೆ ಧರ್ಮ- ಜಾತಿ-ಭಾಷೆಗಳಿಲ್ಲ’ ಎನ್ನುವ ಕಾಲ ಇದಲ್ಲ. ಆದರೆ ದೇಶಕ್ಕೆ ಬಹುಸಂಖ್ಯಾತ ಹಿಂದೂಗಳಿಗೆ ಹೆಮ್ಮೆಯ ಪರಂಪರೆ, ಸಂಸ್ಕೃತಿ, ಸ್ವಾಭಿಮಾನ, ಘನತೆ, ಗೌರವವಿದೆ. ಅದರೊಳಗೆ ಚಿತ್ರರಂಗವೂ ಇದೆ, ನೆನಪಿರಲಿ.

ಕೊನೆಯದಾಗಿ- ಹೆಂಡ ಬಸಿಯುವ ಕುಲಕಸುಬು ಹೊಂದಿದ್ದ ಈಡಿಗ ಸಮುದಾಯದ ನಟರು ಕುಡಿತದ ವಿರುದ್ಧವೇ ದಂಗೆ ಏಳುವಂತೆ ಚಿತ್ರ ನಿರ್ಮಿಸಿದರ, ಅಂಥ ಗಂಡೆದೆ, ಸಾಮಾಜಿಕ ಬದ್ಧತೆ, ನೈತಿಕತೆ ಯಾವ ‘ಮನುಷ್ಯ’ನಿಗಿದೆ? ಅದುವೇ
ರಾಜ್ ಮತ್ತು ಆ ಚಿತ್ರವೇ ‘ಜೀವನಚೈತ್ರ’….