ಬಿಜೆಪಿ ಕಾರ್ಯಕರ್ತನ ಹತ್ಯೆಗೆ ರಾಜಾದ್ಯಂತ ನಮ್ಮ ಆಕ್ರೋಶದಿಂದ ಏನಾದರೂ ಬದಲಾವಣೆ ಆಗಬಹುದೇ?
ಚಕ್ರವರ್ತಿ ಸೂಲಿಬೆಲೆ
ಅತ್ಯಂತ ದುಃಖಕರ ಸಂಗತಿ ನಮ್ಮ ಮುಂದೆ ನಡೆದು ಹೋಗಿದೆ. ಪ್ರವೀಣ ನೆಟ್ಟಾರ್ ಅವರನ್ನು ಜಿಹಾದಿಗಳು ಮಚ್ಚು ಬೀಸಿ ಹತ್ಯೆ ಮಾಡಿ, ಪರಾರಿ ಯಾಗಿದ್ದಾರೆ. ನಮಗಿಂತ ಹೆಚ್ಚು ನೋವು ಪ್ರವೀಣ್ ಮನೆಯವರಿಗೆ ಆಗಿರುತ್ತದೆ. ಯಾವ ಮಾತುಗಳೂ ಸಮಾಧಾನ ನೀಡಲಾರವು. ಅವರ ದುಃಖದ ಜತೆ ನಾವೂ ಪಾಲುದಾರರಾಗಬಹುದಷ್ಟೇ.
ಪ್ರವೀಣ್ ಹತ್ಯೆಯಾದ ಮಂಗಳವಾರ ಸಂಜೆ ಅದೇ ದಿಕ್ಕಿನಲ್ಲಿ ಅಂದರೆ ಸುಳ್ಯ, ಸುಬ್ರಮಣ್ಯ ಮತ್ತು ಪುತ್ತೂರಿನ ನಡುವೆ ಕಾರ್ಯಕ್ರಮಕ್ಕೆಂದು ಅಲ್ಲಿಯೇ ಸಂಚರಿಸಿದ್ದೆ. ಸಂಜೆ ನಾಲ್ಕು ಘಂಟೆಗೆ ಅದೇ ಜಾಗದಲ್ಲಿದ್ದೆ, ರಾತ್ರಿ 9 ಘಂಟೆಗೆ ಪ್ರವೀಣ್ ಕೊಲೆ ನಡೆದ ವಿಚಾರ ತಿಳಿದು ಖಿನ್ನನಾಗಿದ್ದೇನೆ, ಗಂಟಲು ಕಟ್ಟಿಕೊಂಡಿದೆ.
ಬಿಜೆಪಿ ಕಾರ್ಯಕರ್ತನ ಹತ್ಯೆ ಆಗಿರುವುದಕ್ಕೆ ಆ ಪಕ್ಷದ ಪದಾಽಕಾರಿಗಳೆಲ್ಲ ತುಂಬಾ ಆಕ್ರೋಶದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಅದರಿಂದ ಏನಾದರೂ ಬದಲಾವಣೆ ಆಗಬಹುದೇ ಎಂಬ ಅನುಮಾನ ನನ್ನಲ್ಲಿದೆ, ಇರಲಿ. ಅದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ. ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲೇ ಕೆಲ ಸಂಗತಿಗಳನ್ನು ಹಂಚಿಕೊಳ್ಳಲು ಬಯಸುವೆ. ಅದು 2020ರ ಡಿಸೆಂಬರ್ ಸಮಯ, ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬಿಜೆಪಿಯ ರ‍್ಯಾಲಿ ಹೋಗುತ್ತಿತ್ತು. ಇದ್ದಕ್ಕಿದ್ದಂತೆ ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿದರು. ನೋಡನೋ ಡುತ್ತಲೇ ಉಲೆನ್ ರಾಯ್ ಎಂಬ ಯುವಕನ ಕೊಲೆ ಆಗಿಹೋಯಿತು.
ಕಳೆದ ವರ್ಷ ಒಂದೇ ದಿನ, ಅಂದರೆ 24 ಘಂಟೆಗಳಲ್ಲಿ ಬಂಗಾಳದ ಬೇರೆ ಬೇರೆ ಸ್ಥಳಗಳಲ್ಲಿ ಬಿಜೆಪಿಯ 10 ಕಾರ್ಯಕರ್ತ ರನ್ನು ಕಗ್ಗೊಲೆ ಮಾಡಲಾಯಿತು. ಟಿಎಂಸಿ ಕಾರ್ಯಕರ್ತರ ಕೃತ್ಯ ಎಂದು ಎಲ್ಲರೂ ಹೇಳುತ್ತಾರೆ. ಅದೇನೇ ಇದ್ದರೂ ಆ ಬಗ್ಗೆ ಈವರೆಗೂ ಯಾವುದೇ ಕಾರ್ಯಾಚರಣೆ ನಡೆದಿಲ್ಲ ಎಂಬುದು ಅಷ್ಟೇ ಕಟು ಸತ್ಯ.
ಯಾರು ಬಿಜೆಪಿಯನ್ನು ಬೆಂಬಲಿಸಿದ್ದರೋ ಅಂಥವರನ್ನೇ ಹುಡುಕಿ ಅತ್ಯಾಚಾರ ಎಸಗಲಾಯಿತು, ಕೊಲೆ ಮಾಡಲಾಯಿತು. ಅವರ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಅತ್ಯಂತ ದಾರುಣ ಸ್ಥಿತಿಗೆ ಅವರನ್ನು ತಳ್ಳಲಾಯಿತು. ಒಟ್ಟಾರೆಯಾಗಿ ಬಂಗಾಳದಲ್ಲಿ ಕಳೆದ ಕೆಲವು ವರ್ಷಗಳಿಂದ 150 ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ ಎಂಬ ಅಂಕಿ ಅಂಶಗಳಿವೆ. ಇದನ್ನು ಹೇಳಿದ್ದು ಬೇರೆ ಯಾರೂ ಅಲ್ಲ. ಸ್ವತಃ ಡಾರ್ಜಲಿಂಗ್‌ನ ಬಿಜೆಪಿ ಸಂಸದ ರಾಜು ಬ್ರಿಷ್ಟಾ !
ಪಶ್ಚಿಮ ಬಂಗಾಳದಲ್ಲಿ ಇರೋದು ಬೇರೆ ಸರಕಾರ. ಅಲ್ಲಿ ಪ್ರತಿಭಟನೆ ಅಷ್ಟೇ ಮಾಡಬಹುದು, ಬೇರೆನೂ ಮಾಡಲಿಕ್ಕಾಗಲ್ಲ
ಎಂಬುದು ರಾಜು ತೋರಿದ ಅಸಹಾಯಕತೆ. ಹಾಗಿದ್ದರೆ, ಕರ್ನಾಟಕದಲ್ಲಿ ಕಳೆದ ಅನೇಕ ದಿನಗಳಿಂದ ಹತ್ಯೆಗಳು ನಡೆಯು ತ್ತಲೇ ಇವೆ. ಹರ್ಷನ ಕೊಲೆ ಇತ್ತೀಚಿಗೆ ನಡೆಯಿತು. ಹರ್ಷನ ಕೊಲೆ ನಂತರವೂ ಶಿವಮೊಗ್ಗದಲ್ಲಿ ಮತ್ತಷ್ಟು ಕೊಲೆಗಳು ನಡೆದಿವೆ. ಅದಾದ ನಂತರ ಈಗ ಈ ಭಯಾನಕ ಹತ್ಯೆಯೂ ನಡೆದಿದೆ. ಪ್ರವೀಣ್ ತನ್ನ ಅಂಗಡಿ ಬಾಗಿಲನ್ನು ಮುಚ್ಚಬೇಕಾದರೆ ಬೈಕ್‌ನಲ್ಲಿ ಬಂದಂತಹ ಇಬ್ಬರು ಹಿಂದಿನಿಂದ ಬಂದು ತಲ್ವಾರ್‌ನಿಂದ ತಲೆಯ ಮೇಲೆ ಬೀಸಿ ಕೊಂದು ಹಾಕಿದ್ದಾರೆ.
ಇದಕ್ಕೆ ಕರ್ನಾಟಕ ಸಿಎಂ ಹೇಳಿದ್ದು, ಅವರೆಲ್ಲ ಕೇರಳದಿಂದ ಬಂದವ್ರು, ಕೇರಳಕ್ಕೆ ವಾಪಾಸ್ ಹೋಗಿಬಿಟ್ರು. ಹೀಗಾಗಿ,
ನಾವೆಲ್ಲರು ಕೇರಳಕ್ಕೆ ಹೋಗಿ ಹುಡುಕಾಡಬೇಕು ಎಂಬ ಬಾಲಿಷ ಮಾತಾಡಿರುವುದು ಆಶ್ಚರ್ಯ ಉಂಟು ಮಾಡಿದೆ.
ಮಂಗಳೂರು-ಕೇರಳ ಪಕ್ಕದಲ್ಲೇ ಇರೋದ್ರಿಂದ ಯಾವಾಗ ಬೇಕಾದರೂ ಕೇರಳದಿಂದ ಬರಬಹುದು ಎಂಬುದು ತಿಳಿದ
ಸಂಗತಿಯೇ, ಅದನ್ನೇ ಸಿಎಂ ಕೂಡ ಹೇಳುತ್ತಾರೆ ಎಂದರೆ ಏನು ಹೇಳಬೇಕೋ ತಿಳಿಯದು.
ಸಿದ್ದರಾಮಯ್ಯನವರ ಕಾಲದಲ್ಲಿ ಶಿವಮೊಗ್ಗದ ಗಾಜನೂರ ಬಳಿ ಹತ್ಯೆ ಆಗಿತ್ತು. ಅಲ್ಲಿಯೂ ಇಬ್ಬರು ಹಿಂದು ಕಾರ್ಯಕರ್ತನ
ಕಗ್ಗೊಲೆ ನಡೆದಿತ್ತು. ಅದನ್ನು ಮಾಡಿದವರೂ ಕೇರಳದವರು, ಪಿಎಫ್ ಐನ ಕಾರ್ಯಕ್ರಮಕ್ಕೆ ಬಂದವರು ಕೊಲೆ ಮಾಡಿ ಓಡಿ
ಹೋಗಿದ್ದರು. ಅಂದೂ ಬಿಜೆಪಿ ಕಾರ್ಯಕರ್ತರಿಗೆ ಏನೂ ಮಾಡಲಾಗದ ಸ್ಥಿತಿ, ಇಂದೂ ಕೂಡ ಅದೇ ದುಃಸ್ಥಿತಿ. ಮಿತ್ರರೇ, ಬಿಜೆಪಿಯ ಯುವಮೋರ್ಚಾದ ಸಿಲುಗುರಿಯ ಆರ್ಗನೈಸಿಂಗ್ ಡಿಸ್ಟಿಕ್ಟ್ ಜೆನರಲ್ ಸೆಕ್ರೆಟರಿಯಾದ ಸೌರವ್ ಬಸುನ ಹತ್ಯೆಗೆ ಪ್ರಯತ್ನ ನಡೆದಿತ್ತು ಎಂದು ನೆನಪಿಸಲು ಬಯಸುವೆ.
ಆದರೆ, ಯಾರೂ ಯಾವತ್ತೂ ಪ್ರತೀಕಾರವಾಗಿ ಅಥವಾ ಸರಕಾರದ ಮತ್ತು ಪೊಲೀಸರ ದೃಷ್ಟಿಯಿಂದ ಅಗ್ತಯವಾದ ಪ್ರಯತ್ನ ವನ್ನೂ ಮಾಡಲಿಲ್ಲ ಎಂಬುದನ್ನು ನಾವ್ಯಾರೂ ಮರೆಯಬಾರದು. ಒಂದು ಸಮಾಧಾನಕರ ಸುದ್ದಿ ಎಂದರೆ, ಹತ್ಯೆಯ ಕಾರಣ ಕ್ಕಾಗಿ ಬಿಜೆಪಿಯಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ ಮಾಡಲಾಯಿತು.
ಊಸರವಳ್ಳಿಯ ಕತೆ: ಬಿಜೆಪಿ, ಕಾಂಗ್ರೆಸ್ ಸರಕಾರವಿದ್ದಾಗ ಬೇರೆಯದ್ದೇ ರೀತಿ ವರ್ತಿಸುತ್ತೆ. ತನ್ನದೇ ಸರಕಾರವಿದ್ದಾಗ ಬೇರೆ ರೀತಿ ವರ್ತಿಸುತ್ತೆ. ಒಂದು ಉದಾಹರಣೆಗೆ , 2017ರ ಜುಲೈನಲ್ಲಿ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರು-ಉಡುಪಿಯ ಎಂಪಿ ಆಗಿದ್ದರು. 28 ವರ್ಷದ ಶರತ್ ಮಡಿವಾಳರ ಹತ್ಯೆ ಆದಾಗ, ಅದರ ಮರುದಿನವೇ ಒಂದು ಪತ್ರವನ್ನು ಆಗಿನ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್‌ಗೆ ಬರೆದಿದ್ದರು. ಅದರಲ್ಲಿ, 23 ಹಿಂದೂ ಕಾರ್ಯಕರ್ತರು ಅದರಲ್ಲೂ ಬಿಜೆಪಿ ಮತ್ತು ಸಂಘದ ಕಾರ್ಯಕರ್ತರ ಹತ್ಯೆ ಕರ್ನಾಟಕದಲ್ಲಿ ಆಗಿದೆ. ಇದನ್ನುಪಿಎಫ್ ಐ ಮತ್ತು ಫಾರಂ ಫಾರ್ ಡಿಗ್ನಿಟಿಯ ಕಾರ್ಯ ಕರ್ತರು ಮಾಡಿ ದ್ದಾರೆ. ಕರ್ನಾಟಕದಲ್ಲಿ ಬ್ಲಡ್ ಪಾಥ್, ರಕ್ತದ ಓಕುಳಿ ಸೃಷ್ಟಿ ಮಾಡಿದ್ದಾರೆ ಎಂದು ಉಲ್ಲೇಖ ಮಾಡಿದ್ದರು.
ಮುಂದುವರಿದು, ಪ್ರತಿ ಬಾರಿ ಹತ್ಯೆ ಆಗುವಾಗ ಕರ್ನಾಟಕದ ಸಿಎಂ ಮತ್ತು ಗೃಹ ಸಚಿವರಾಗಿದ್ದ ಸಿದ್ದರಾಮಯ್ಯನವರು,
ಇದು ಲೋಕಲ್ ಘಟನೆ ಎಂದು ಕ್ಲಾರಿಫೈ ಮಾಡುತ್ತಾರೆ, ಪಕ್ಕಕ್ಕೆ ತಳ್ಳುತ್ತಾರೆ. ಹೀಗಾಗಿ, ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಎಂದು ಆಗ್ರಹಿಸಿದ್ದರು. ಶೋಭಾ ಅವರ ವಾಕ್ಯಗಳನ್ನೇ ಉಲ್ಲೇಖಿಸಿವುದಾದರೆ, ‘ಹತ್ಯೆಗಳನ್ನು ಪೈಶಾಚಿಕವಾಗಿ ಡಿಸೈನ್
ಮಾಡಿದ್ದಾರೆ. ಅತ್ಯಂತ ನೀಚವಾದಂತ ಇಂಟೆಂಷನ್ ಹೊಂದಿದ, ನಿಗೂಢವಾದ ಮೋಟಿವ್ ಇರುವ, ಕ್ರೌರ್ಯವಾಗಿ ಕೊಲೆ ಗಳನ್ನು ಮಾಡುತ್ತಿದ್ದಾರೆ’ ಎಂದೆಲ್ಲ ಭಾರಿ ಪದಗಳನ್ನು ಬಳಸಿ ಪತ್ರ ಬರೆಯಲಾಗಿತ್ತು.
ಆ ಇಡೀ ಪತ್ರದಲ್ಲಿ ತುಂಬಾ ಆಕರ್ಷಕವಾಗಿ ಕಾಣುತ್ತಿದ್ದದ್ದು, ಕೇಂದ್ರ ಗೃಹ ಸಚಿವಾಲಯ ಆದಷ್ಟು ಬೇಗ ಮಧ್ಯ ಪ್ರವೇಶಿಸಿ
ಇಲ್ಲಿ ನಡೆಯುತ್ತಿರುವ ಕೃತ್ಯಗಳನ್ನು ಎನ್‌ಐಎಗೆ ವಹಿಸಬೇಕು. ಏಕೆಂದರೆ, ಇಲ್ಲಿನ ಎಲ್ಲ ಘಟನೆಗಳು ಇಂಟರ್‌ಕನೆಕ್ಟೆಡ್
ಆದಂತಿವೆ. ಆದ್ದರಿಂದ ಎನ್‌ಐಎ ತನಿಖೆ ಬೇಕೆಂಬ ಮೊದಲ ಮನವಿ. ಎರಡನೆದು ಪಿಎಫ್ಐ, ಕರ್ನಾಟಕ ಫಾರಂ ಫಾರ್
ಡಿಗ್ನಿಟಿ ಇವೆರಡೂ ಈ ಹತ್ಯೆಯ ಹಿಂದೆ ಭಾಗವಹಿಸಿರುವುದು ಗೊತ್ತಾಗಿದ್ದು, ಇವೆರಡರನ್ನು ಬ್ಯಾನ್ ಮಾಡಬೇಕು. ಮೂರನೇ
ಯದಾಗಿ. ಇವರಿಗೆ ಬರೀ ಈ 2 ಸಂಘಟನೆಗಳಲ್ಲದೇ ಓವರ್ ಗ್ರೌಂಡ್ ಸಪೋರ್ಟ್ ಹಲವರಿದ್ದು, ಇವರನ್ನೆಲ್ಲ ಜೈಲಿಗೆ ತಳ್ಳ
ಬೇಕಾದ ಅಗತ್ಯವಿದೆ ಎಂದು ತುಂಬಾ ಗಟ್ಟಿ ಧ್ವನಿಯಲ್ಲಿ ಅಂದು ಶೋಭಾ ಅವರು ವಿನಂತಿ ಮಾಡಿಕೊಂಡಿದ್ದರು.
ಮೇಡಂ ಶೋಭಾ ಕರಂದ್ಲಾಜೆ ಅವರೇ, ರಾಜ್ಯದಲ್ಲಿ ಸರಕಾರ ನಿಮ್ಮದೇ ಇದೆ, ಸೆಂಟ್ರಲ್ ಅಲ್ಲೂ ನೀವೇ ಇದ್ದೀರಿ, ನೀವು ಎನ್
ಐಎ ತನಿಖೆಗೆ ಯಾವಾಗ ವಹಿಸ್ತೀರಿ? ನೀವು ಪಿಎಫ್ ಐ ಮತ್ತು ಕೆಎಫ್ಡಿ ಯನ್ನು ಬ್ಯಾನ್ ಮಾಡಬಲ್ಲೀರಾ? ಓವರ್ ಗ್ರೌಂಡ್
ಅಲ್ಲಿ ಇವರಿಗೆ ಯಾರ‍್ಯಾರು ಸಪೋರ್ಟ್ ಮಾಡ್ತಿದ್ರೋ ಅವರಿಗೆ ಜೈಲಿಗೆ ಕಳಿಸಿಬಲ್ಲೀರಾ? ನೀವೇ ಅಽಕಾರದಲ್ಲಿಎಉವ ಕಾರಣ
ಉತ್ತರ ನೀವೇ ಕೊಡಬೇಕು ಎಂಬುದಷ್ಟೇ ನಮ್ಮ ಆಗ್ರಹ.
2018ರ ಫೆಬ್ರುವರಿಯಲ್ಲಿ ಚುನಾವಣೆ ವೇಳೆ ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು, ಸಿದ್ದರಾಮಯ್ಯ ಅವರು ಕೊಲೆಗಡುಕರಿಗೆ ಪ್ರೊಟೆಕ್ಷನ್ ನೀಡ್ತಿದ್ದಾರೆ, ಅವರಿಗೆ ರಕ್ಷಣೆಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗಿ ನಿಮಗೆ ಮಾತು ಕೊಡುತ್ತಿದ್ದೀನಿ. ಬಿಎಸ್‌ವೈ ಸರಕಾರ ಬಂದ ತಕ್ಷಣವೇ, ಇವರೆಲ್ಲರನ್ನೂ ಕೂಡ ಹಿಡಿದು ಜೈಲಿಗಾಕುತ್ತೀವಿ, ಇವರಿಗೆ ಕಠಿಣವಾದ ಶಿಕ್ಷೆ ಕೊಡ್ತೀವಿ ಎಂದು ಘಂಟಾಘೋಷವಾಗಿ ಹೇಳಿದ್ದರು, ನಾವೆಲ್ಲ ಅದನ್ನೇ ನಂಬಿಕೊಂಡಿದ್ದೆವು.
ಅಮಿತ್ ಶಾ ಹೊನ್ನಾವರದ ಪರೇಶ್ ಮೇಸ್ತಾ ಮನೆಗೆ ಹೋಗಿ, ತಂದೆಗೆ ಸಾಂತ್ವನವನ್ನೂ ಹೇಳುತ್ತಾರೆ. ಅವರನ್ನು ಬಿಜೆ
ಪಿಯ ಸದಸ್ಯನನ್ನಾಗಿಯೂ ಮಾಡುತ್ತಾರೆ. ಆದರೆ, ಮೇಸ್ತಾನ ಕೊಲೆಗಡುಕರು ಮಾತ್ರ ಯಾರು ಎಂದು ಇಂದಿಗೂ ಪತ್ತೆ ಮಾಡಲಾಗಿಲ್ಲ. ಶಾ ಭಾಷಣದ ಕೆಲವೇ ದಿನಗಳಲ್ಲಿ ಬಿಜೆಪಿಯಿಂದ ಯಾತ್ರೆ ಕೈಗೊಳ್ಳಲಾಯಿತು. ಅಂಕೋಲದಿಂದ ಕುಶಾಲ ನಗರದವರೆಗೂ, ಎಲ್ಲಿ ಈ ಥರಹದ ಹತ್ಯೆ ಆಗಿದೆಯೋ ಅಲ್ಲೆಲ್ಲ ಜನಜಾಗೃತಿ ಮಾಡಲಾಯಿತು. ಕರಾವಳಿ ಮತ್ತು ಮಡಿಕೇರಿ ಕುರಿತಂತೆ ಜನ ಜಾಗೃತಿ ಯಾತ್ರೆ ಮಾಡಲಾಗಿತ್ತು.
ಉತ್ತರ ಕನ್ನಡದ ಎಂಪಿ ಅನಂತ್ ಕುಮಾರ್ ಹೆಗಡೆ ಅವರ ಭಾಷಣದ ತುಣುಕನ್ನು ವೈರಲ್ ಮಾಡಲಾಗಿತ್ತು. ಅದರಲ್ಲಿ
ಅವರು, ನಾಲ್ಕೂವರೆ ವರ್ಷದ ಸಿದ್ದರಾಮಯ್ಯನವರ ತುಘಲಕ್ ಸರಕಾರದಲ್ಲಿ 23 ಕಾರ್ಯಕರ್ತರನ್ನು ಹಿಂದೂ ಸಮಾಜ ಕಳೆದುಕೊಂಡಿದೆ. ಈ ಕಾರಣಕ್ಕೋಸ್ಕರ ಜಾಗೃತಿ ಮೂಡಿಸಿ, ನಾವು ಈಗ ಯಾತ್ರೆ ಮಾಡುತ್ತಿದ್ದೇವೆ. ಇದಕ್ಕೆ ಸೂಕ್ತವಾದ ಪರಿಹಾರ ಕಲ್ಪಿಸುತ್ತೇವೆ. ಒಮ್ಮೆ ನಮ್ಮ ಸರಕಾರ ಬಂದರೆ, ಇನ್ಮುಂದೆ ಈ ತರ ಆಗದಿರೋ ರೀತಿ ನೋಡ್ಕೊತೀವಿ ಎಂದು ಅಬ್ಬರಿಸಿದ್ದರು. ಇದೆ ಯಾತ್ರೆಯಲ್ಲೇ ಬಿಜೆಪಿಯ ಈಗಿನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತುಂಬಾ ಜೋರ್ ಆಗಿ ಹೇಳಿದ್ರು.
ಈ ಹತ್ಯೆ ಆಗಿದೆಯಲ್ಲ, ಇನ್ಮುಂದೆ ಒಂದು ಹತ್ಯೆ ಆಗದಂತೆ ನಮ್ಮ ಸರಕಾರ ಮಾಡಲಿದೆ. ಇನ್ಮುಂದೆ ನಮ್ಮ ಹಿಂದೂ ಕಾರ್ಯಕರ್ತರನ್ನು ಯಾರಾದರೂ ಮುಟ್ಟಿ ನೋಡಿ, ಕಾದಿದೆ ನಿಮಗೆಲ್ಲ ಎಂದು ಗರ್ಜಿಸಿದ್ದರು. ಆದರೆ, ಮುಂದೆ ಏನಾಯ್ತು?
ದೀಪಕ್ ತೀರಿಕೊಂಡಾಗ, ಅವರ ಮನೆಗೆ ಹೋಗಿದ್ದಂತಹ ಸುನೀಲ್ ಕುಮಾರ ಕಾರ್ಕಳ, ದೀಪಕ್ ತಂಗಿಗೆ ಕೆಲ್ಸ ಕೊಡುಸ್ಬೇಕು, ಅದು ಸರಕಾರದ ಆದ್ಯತೆ ಆಗಬೇಕು ಎಂದಿದ್ದರು. ಈಗ ಸರಕಾರ ಅವರದ್ದೇ ಬಂದಿದ್ದರೂ ಏನು ಮಾಡ್ತಿದ್ದಾರೆ ಎಂಬುದು ಜನರು ನೋಡುತ್ತಿದ್ದಾರೆ.
ಪರೇಶ್ ಮೇಸ್ತಾ ತೀರಿಕೊಂಡಾಗ, ಅವನ ಅಂತ್ಯ ಸಂಸ್ಕಾರ ಆಗುವುದಕ್ಕಿಂತ ಮುಂಚೆ ಬಿಜೆಪಿಯ ಎಲ್ಲ ನಾಯಕರು ಬೆಂಕಿ ಯಂಥ ಭಾಷಣ ಮಾಡಿದ್ದರು. ಸಮಾಜವನ್ನು ಜಾಗೃತಿಗೊಳಿಸುವ ನೆಪದಲ್ಲಿ ಕೇವಲ ತಮ್ಮ ವೋಟ್ ಬ್ಯಾಂಕ್ ಗಟ್ಟಿಮಾಡಿ ಕೊಳ್ಳುವ ಪ್ರಯತ್ನ ಮಾಡಿದರಷ್ಟೇ ಎಂಬುದು ಈಗ ನಮಗೆ ಅರಿವಾಗುತ್ತಿದೆ. ದಿನಕರ್ ಶೆಟ್ಟಿ ಹೊನ್ನಾವರ- ಕುಮಟಾ ಕ್ಷೇತ್ರ ದಿಂದ ಗೆದ್ದು ಬಂದರು. ಅವತ್ತಿನ ಎಂಪಿ ಆಗಿ ಅನಂತ್ ಕುಮಾರ್ ಹೆಗಡೆ ಆಯ್ಕೆಯಾಗಿದ್ದು ಕೂಡ ಪರೇಶ್ ಮೇಸ್ತಾರ ಶವದ ಕಾರಣದಿಂದಲೇ ಎಂಬುದು ಕಟು ಸತ್ಯ.
ಪರೇಶ್ ಮೆಸ್ತಾನ ಕೊಲೆ ವಿಚಾರದಲ್ಲಿ ಇಮ್ತಿಯಾಜ್, ಆಜಾದ್, ಅಮೀನ್, ಸಲೀಂ, ಆಸೀಫ್ ಎಂಬ ಐವರ ವಿರುದ್ಧ ರಿಪೋರ್ಟ್ ಅಗಿತ್ತು. ಅದರಲ್ಲಿ ಇಬ್ಬರ ಬಗ್ಗೆ ಏನೂ ಹೇಳಲಿಲ್ಲ. ಇನ್ನೂ ಮೂರು ಜನರನ್ನು ಕಾಲಕ್ರಮದಲ್ಲಿ ಬಿಡಲಾಯಿತು. ಪೊಲೀಸರು ಇದನ್ನು ಸಾಮಾನ್ಯ ಸಾವು ಎಂದು ಹೇಳಿ ಸುಮ್ಮನಾಗಿಬಿಟ್ಟರು. ಆತನ ಸಾವೇಕೆ ಆಯಿತು ಎಂದು ತನಿಖೆ ನಡೆಯಲೇ ಇಲ್ಲ. ಸಾಮಾನ್ಯ ಸಾವಾಗಿದ್ದರೂ ಆತ್ಮಹತ್ಯೆಯೇ, ಒತ್ತಡವೇನಾದರೂ ಇತ್ತೇ ಎಂದು ತನಿಖೆ ಮಾಡುವಾಗ, ಒಂದು ಕೊಲೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.
ಶಿವಮೊಗ್ಗದಲ್ಲಿ ಹೆಣವಾದ ವಿಶ್ವನಾಥ್ ಶೆಟ್ಟಿ ಅವರ ತಾಯಿ ಇಂದಿಗೂ ಕಣ್ಣೀರಿಡುತ್ತಾರೆ, ಬಡತನದಲ್ಲಿ ಕೈತೊಳೆದುಕೊಳ್ಳು
ತ್ತಿದ್ದಾರೆ. ಇನ್ನೂ ಕೂಡ ಆತನ ಕೊಲೆಗಡುಕರ ಬಗ್ಗೆ ಸುಳಿವಿಲ್ಲ. ಅವರು ಓಡಿ ಹೋಗಿ ಕೇರಳ ಸೇರಿಕೊಂಡರು ಎಂದು ಸುಮ್ಮ ನಾದೆವು. ಕೇರಳ ಎಂಬುದೇನು ಪಾಕಿಸ್ತಾನವೇ, ಬಾಂಗ್ಲಾದೇಶವೇ, ಚೀನಾ ದೇಶವೇನು? ಓಡಿ ಹೋದವರು ತಪ್ಪಿಸ್ಕೊಂಡ್ರು ಹಿಡಿಯಲು ಆಗದು ಎಂದು ಹೇಳಲು.
ಕಾಶ್ಮೀರದಿಂದ ಕರ್ನಾಟಕ್ಕೆ ಬಂದು ಇಲ್ಲಿ ಅಡಗಿರುವಂತಹ ಮುಸಲ್ಮಾರನ್ನು ಪೊಲೀಸರು ಎಳೆದುಕೊಂಡು ಹೋಗ್ತಾರೆ.
ತೆಲಂಗಾಣ ಪೊಲೀಸರು ನಮ್ಮಲ್ಲಿ ಅಡಗಿದ್ದ ಅಲ್ಲಿನ ಕೊಲೆಗಡುಕರನ್ನು ಹಿಡಿಯುತ್ತಾರೆ. ಆದರೆ, ನಮ್ಮ ಪೊಲೀಸರು ಮಾತ್ರ
ಪಕ್ಕದ ಕೇರಳಕ್ಕೆ ಹೋಗಿ ಹುಡುಕಲು ಅಸಾಧ್ಯ ಎನ್ನುತ್ತಾರೆ. ಇವರನ್ನು ಕಟ್ಟಿ ಹಾಕಿದ ಕಾರಣವೇನು ಎಂಬುದು ಇನ್ನೂ
ಅರ್ಥವಾಗದ ಸಂಗತಿ.
ಇನ್ನೊಂದು ದುಃಖದ ಸಂಗತಿ ಎಂದರೆ ಪ್ರಶಾಂತ್ ಪೂಜಾರಿ ಹತ್ಯೆ. ಪ್ರಶಾಂತ್ ತಂದೆ ಬದುಕಿದ್ದ ತನಕ ಕೋರ್ಟಿಗೆ ಹೋಗಿ
ನಾನೇ ವಿಟ್ನೆಸ್ ಎಂದು ಹೇಳಿಕೊಂಡರೂ ಅಪರಾಧಿಗಳನ್ನು ಹಿಡಿಯಲಾಗಲಿಲ್ಲ. ಆ ಕೇಸು ಏನಾಯಿತು ಯಾರಿಗೂ ಗೊತ್ತಿಲ್ಲ.
ಯಾರನ್ನೆಲ್ಲ ಕೊಲೆ ಗಡುಕರು ಅಂತ ಅವರು ಹೇಳಿದ್ದರೋ, ಅವರೇ (9 ಜನ) ಜಾಮೀನು ಪಡೆದು ಪ್ರಶಾಂತ್ ಪೂಜಾರಿ
ಮನೆಯ ಮುಂದೆ ಗಡ್ಡ ನೀವಿಕೊಂಡು ಓಡಾಡಿದರೆ, ಪ್ರವೀಣ್ ತಾಯಿಗೆ ಎಷ್ಟು ಸಂಕಟ ಆಗಬೇಡ? ಈ ಬಗ್ಗೆ ಅಧಿಕಾರ ದಲ್ಲಿರುವರು ಯೋಚನೆ ಮಾಡಿದ್ದಾರೇನು? ಶರತ್ ಮಡಿವಾಳ ಹತ್ಯೆ ಕಾರಣರಾದ 15 ಜನ ಬೇಲ್‌ನಲ್ಲಿ ಹೊರಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಅವರೆಲ್ಲರೂ ರಾಜಾರೋಷವಾಗಿ ತಿರುಗಾಡುತ್ತಾರೆ. ಹರ್ಷನನ್ನು ನಡು ಬೀದಿಯಲ್ಲಿ ಹತ್ಯೆ ಮಾಡಿದವರೆಲ್ಲ ಜೈಲಿನಲ್ಲಿ ವಿಡಿಯೋ ಕಾಲ್ ಮಾಡಿಕೊಂಡು ನಕ್ಕು ನಲಿದು ಮನೆಯವರ ಜತೆ ಮಾತನಾಡುತ್ತಾರೆ. ಆ ವಿಡಿಯೋಗಳು ವೈರಲ್ ಆಗುತ್ತವೆ, ಆಗಲೂ ‘ನಮ್ಮ’ ಸರಕಾರ ಮಾತ್ರ ನಿರ್ಲಜ್ಜವಾಗಿ ‘ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದಷ್ಟೇ ಹೇಳುತ್ತದೆ.
ಈಗ ಅಧಿಕಾರದಲ್ಲಿ ಇರುವವರಿಗೆ ನೇರವಾಗಿ ಒಂದು ಮಾತನ್ನು ಹೇಳಲು ಬಯಸುವೆ.
ನೀವು ಅಧಿಕಾರ ಹಿಡಿದಿರುವುದು ಸಾಮಾನ್ಯ ಹಿಂದು ಕಾರ್ಯಕರ್ತನ ಬೆವರಿನ ಫಲವಾಗಿ, ತನ್ನ ಸಿದ್ಧಾಂತಕ್ಕೆ ಕಟಿ ಬದ್ಧರಾಗಿ ಇರುವುದರಿಂದಲೇ ನಿಮಗಿಂದು ಅಧಿಕಾರ ಸಿಕ್ಕಿದೆ. ನೀವೆಲ್ಲ ಅಽಕಾರ ಅನುಭವಿಸುತ್ತಿರುವುದು ನಿಮ್ಮ ಸ್ವಂತ ಬಲದಿಂದ ದೇವರಾಣೆಗೂ ಅಲ್ಲ. ಅದು ಸಾಮಾನ್ಯ ಕಾರ್ಯಕರ್ತರ ತ್ಯಾಗ, ಬಲಿದಾನದಿಂದ. ಆದರೆ, ಅದೇ ಕಾರ್ಯಕರ್ತರು ಒಬ್ಬಬ್ಬ ರಾಗಿ ಹೆಣವಾಗಿ ಬೀಳುವುದನ್ನು ನೋಡಿಯೂ ಸುಮ್ಮನಿದ್ದೀರಲ್ಲ, ನಿಮಗೇನೂ ಅನಿಸುವುದಿಲ್ಲವೇ? ನಿಮಗೆ ಹೇಳಿ ಪ್ರಯೋ ಜನವಿಲ್ಲ. ನಾನು ಬಿಜೆಪಿ ಕಾರ್ಯಕರ್ತರಿಗೇ ನೇರವಾಗಿ ಒಂದು ಪ್ರಶ್ನೆ ಕೇಳುವೆ.
ಹರ್ಷ ತೀರಿಕೊಂಡಾಗ ನೀವ್ಯಾರೂ ಸರಕಾರಕ್ಕೆ ಪ್ರಶ್ನೆ ಮಾಡಲಿಲ್ಲ, ರಾಜೀನಾಮೆಯನ್ನೂ ಕೊಡಲಿಲ್ಲ. ಶಿವಮೊಗ್ಗದಲ್ಲಿ ಅನೇಕ ಹತ್ಯೆ ಆದಾಗಲೂ ನಿಮಗೆ ರಾಜೀನಾಮೆ ಕೊಡಬೇಕು ಅನಿಸಲಿಲ್ಲ. ಆದರೆ ನಿಮ್ಮ(ಬಿಜೆಪಿ) ಕಾರ್ಯಕರ್ತ ತೀರಿಕೊಂಡಾಕ್ಷಣ ರಾಜೀನಾಮೆ ಕೊಡಬೇಕು ಅನ್ನಿಸುತ್ತದೆ ಅಲ್ಲವೇ? ಸರಿ, ನಿಮ್ಮ ರಾಜೀನಾಮೆಯು ಸರಕಾರಕ್ಕೆ ಒತ್ತಡ ತರಬಹುದು ಎಂದು ನಾನು ನಂಬುವೆ.
ಆದರೆ, ಬಿಜೆಪಿ ಎಂದರೆ, ಬರೀ ಬಿಜೆಪಿಯ ಕಾರ್ಯಕರ್ತರಷ್ಟೇ ಅಲ್ಲ. ನೆನಪಿಟ್ಟುಕೊಳ್ಳಿ, ಬಿಜೆಪಿ ಅಂದರೆ ಹಿಂದುತ್ವದ ಸಿದ್ಧಾಂತದ ಆಧಾರದಲ್ಲಿ ಹಿಂದೂಗಳು ಒಟ್ಟಾಗಿ ಕಟ್ಟಿರುವ ಶಕ್ತಿ. ಬಿಜೆಪಿ ಕಾರ್ಯಕರ್ತನಲ್ಲದ ಹಿಂದೂ ಕಾರ್ಯಕರ್ತನ ಶವ
ಬಿದ್ದಾಗಲೂ ಇಷ್ಟೇ ಕಠಿಣ ಪ್ರತಿಕ್ರಿಯೆ ಕೊಡಲು ನಿಮಗೆ ಸಾಧ್ಯವೇ? ಉತ್ತರಿಸಿ. ಚಿಕ್ಕಮಗಳೂರಿನವರು ಬರೆದಿರುವ ಪತ್ರಕ್ಕೆ ನನ್ನ ಸಹಮತವಿದೆ.
ಈವರೆಗೂ ಆದ ಹತ್ಯೆಗಳಿಗೆ ಬಿಜೆಪಿ ಸರಕಾರ ಕೊಟ್ಟ ಶಿಕ್ಷೆ ಎಂತಾದ್ದು ಎಂದು ನಮಗೆ ಗೊತ್ತಾಗಿದೆ. ಅದಕ್ಕೋಸ್ಕರ ನಾವು ರಾಜೀನಾಮೆ ಕೊಡುತ್ತಿದ್ದೇವೆ ಎಂಬ ಕಾರಣ ಸರಿಯಾಗಿದೆ. ಕೇಂದ್ರ ಮತ್ತು ಕರ್ನಾಟಕ ಸರಕಾರ ಈಗಾದರೂ ಎಚ್ಚೆತ್ತು ಕೊಂಡರಷ್ಟೇ ಕಾರ್ಯಕರ್ತರ ಬದುಕಿಗೆ ಗೌರವ ಕೊಟ್ಟಂತೆ. ಇಲ್ಲದಿದ್ದರೆ, ಹಿಂದೂಗಳ ವಿರುದ್ಧದ ಪಕ್ಷಗಳ ಸರಕಾರವನ್ನು ಹೇಗೆ ಕಿತ್ತು ಬಿಸಾಡಿದ್ದಾರೋ, ಹಾಗೆ ನಿಮ್ಮನ್ನೂ ಮುಲಾಜಿಲ್ಲದೇ ಹಿಂದೂ ಸಮಾಜ ಕಿತ್ತು ಬಿಸಾಡುತ್ತದೆ.
ಕಾಂಗ್ರೆಸ್‌ಗೆ ಕಾರ್ಯಕರ್ತರು ಅಂತ ಯಾರೂ ಇಲ್ಲ. ಇವತ್ತಿದ್ದವರು ಇನೈದು ವರ್ಷ ಕಾಣೋದೇ ಇಲ್ಲ. ಸರಿಯಾಗಿ, ಚುನಾವಣೆ ವೇಳೆಗೆ ಪ್ರತ್ಯಕ್ಷ ಆಗ್ತಾರೆ. ಆದರೆ, ಬಿಜೆಪಿ ಕೇಡರ್ ಆಧಾರಿತ ಪಕ್ಷ. ಒಂದೊಮ್ಮೆ ಕೇಡರ್ ಬೇಸರಿಸಿಕೊಂಡರೆ, ನೀವ್ಯಾರು
ಅಽಕಾರದ ಕನಸು ಕಾಣಲು ಅಸಾಧ್ಯ. ಈಗಲೇ ಎಚ್ಚೆತ್ತುಕೊಳ್ಳಿ. ನಿಮ್ಮ ಅವಿವೇಕತನದಿಂದಲೇ ಹಿಂದೂ ಕಾರ್ಯಕರ್ತರನ್ನು ಮನೆಯಲ್ಲಿ ಅಡಗಿ ಕುಳಿತು ಕೊಳ್ಳುವಂತಾಗಿದೆ. ಈ ಜಿಹಾದಿ ಆತಂಕಿಗಳು ತಮ್ಮ ಹೇಡಿ ಕೃತ್ಯವನ್ನೆ ಸಂಭ್ರಮಿಸುವಂತಾಗಿದೆ. ಅದೆಲ್ಲದರ ಪರಿಣಾಮ ನಿಮಗೆ ತಟ್ಟುವುದು ತುಂಬಾ ದೂರವಿಲ್ಲ, ಎಚ್ಚೆತ್ತು ಹೆಜ್ಜೆಯಿಡಿ.
ಸಿಎಂ ಮತ್ತು ಹೋಂ ಮಿನಿಸ್ಟರ್ ಮಾತು ಕೇಳುವುದೇ ಸಂಕಟ ಅನಿಸುತ್ತದೆ. ನೀವು ಅಧಿಕಾರದಲ್ಲಿದ್ದೀರಿ, ಹಿಂದೂಗಳ ಮಾರಣ
ಹೋಮ ನಿಲ್ಲಿಸಿ ಎಂದು ಕಾರ್ಯಕರ್ತರೇ ನಿಮಗೆ ಬೇಡುವ ಪರಿಸ್ಥಿತಿ ಬಂದಿದೆ. ಹಿಂದೂ ಕಾರ್ಯಕರ್ತ ಸತ್ತರೆ ಅವನಿಗೊಸ್ಕರ
ಹಣ ಕಲೆಕ್ಟ್ ಮಾಡುತ್ತೇವೆ. ಅದೇ ರೀತಿ, ಪ್ರವೀಣ್ ಮನೆಯವರಿಗೂ ಹಣ ಸಂಗ್ರಹ ನಡೆದಿದೆ. ಬಿಜೆಪಿ ನಾಯಕರು ಪ್ರವೀಣ್ ಮನೆಗೆ ಬಂದು, ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳುತ್ತೀವಿ ಎಂದಷ್ಟೇ ಹೇಳಿ ನುಣುಚಿಕೊಂಡರೆ ನಿಮ್ಮ ಅಂತ್ಯಕ್ಕೆ
ನೀವೇ ನಾಂದಿ ಹಾಡಿದಂತೆ. ಪ್ರವೀಣ್ ಸಾವು ಬಲಿದಾನ ಎಂದೇ ನಾನು ಭಾವಿಸುವೆ.
ಏಕೆಂದರೆ, ಬಲಿದಾನದ ಕಾರಣದಿಂದಾರೂ ಸಮಾಜದಲ್ಲಿ ಹಿಂದೂಗಳ ರಕ್ಷಣೆಗೆ ಒಂದು ವಾತಾರಣ ರೂಪಿಸಬಹುದು, ರೂಪುಗೊಳ್ಳಬಹುದು ಎಂಬ ಕೊನೆಯ ಆಶಾಭಾವ ಇಟ್ಟುಕೊಳ್ಳುತ್ತೇವೆ. ಇನ್ನೊಂದು ಅವಕಾಶ ಖಂಡಿತ ನಿಮಗೆ ಕೊಡುವು ದಿಲ್ಲ. ಜಿಹಾದಿಗಳ ಅಟ್ಟಹಾಸ ಸರಕಾರವಾಗಿ ನೀವು ನಿಲ್ಲಿಸದಿದ್ದರೆ, ಚುನಾವಣೆಯಲ್ಲಿ ನಿಮಗೇನು ಸಿಗುವುದೋ ಅದನ್ನು ಖಂಡಿತ ಹಿಂದೂ ಸಮಾಜ ಕೊಟ್ಟೇ ಕೊಡುತ್ತದೆ.
ಎಚ್ಚರ, ಎಚ್ಚರ, ಎಚ್ಚರ.