ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ದಾನಿಷ್ ಸೇಠ್ ಹೊಸ ಸಿನಿಮಾ ಬಂದಿದೆ. ಹೀಗೆ ಹೇಳಲೇಬೇಕು. ಯಾಕಂದ್ರೆ ಇತ್ತೀಚೆಗೆ ತಾನೇ ಮೊದಲು ಸಿನಿಮಾ ಆಗಿದ್ದ ಅವರ ಹಂಬಲ್ ಪೊಲಿಟಿಶಿಯನ್ ಅನ್ನು ವೆಬ್ ಸೀರೀಸ್‌ಗೆ ಇಳಿಸಿದ್ದರು ದಾನಿಷ್ ಸೇಠ್. ಈಗ ಒನ್ ಕಟ್ ಟೂ ಕಟ್ ಅನ್ನೋ ಸಿನಿಮಾ. ಆದರೆ ಇದನ್ನ ಸಿನಿಮಾ ಅಂದ್ರೆ ಕೆಲವರಿಗೆ ಬೇಜಾರಾಗಬ ಹುದು. ಅದಕ್ಕೆ ಚಿತ್ರದ ಅವಧಿ 1 ಗಂಟೆ ಅನ್ನೋದೊಂದೇ ಕಾರಣ ಅಲ್ಲ.
ಮೊದಲು ಚಿತ್ರದ ನಿರೂಪಣೆ ನೋಡಿದವರಿಗೆ ಅನ್ನಿಸೋದು ಈ ಒನ್ ಕಟ್ ಟೂ ಕಟ್ ಸಿನಿಮಾಗೆ ಇನ್ನೂ ಸಿಕ್ಕಾಪಟ್ಟೆ ಕಟ್ಸ ಬೇಕಾಗಿತ್ತು ಅಂತ. ನಿರ್ದೇಶಕರು ಬರೀ ಆಕ್ಷನ್ ಹೇಳಿ ಕಟ್ ಹೇಳೋದನ್ನ ಮರೆತಿದ್ದಾರಾ ಅನ್ನುವಷ್ಟರ ಮಟ್ಟಿಗೆ ಜಾಳು ಜಾಳು ನಿರೂಪಣೆ. ಒಬ್ಬರು ಕನ್ನಡದಲ್ಲಿ ಹೇಳಿದ್ದನ್ನ ನಾಯಕ ಇಂಗ್ಲೀಷಿಗೆ translate ಮಾಡೋದು, my self is an gopi ಅಂತ ಮತ್ತೆ ಮತ್ತೆ introduce ಮಾಡಿಕೊಳ್ಳೋದು, ಸಾಂಗು, ಸಾಂಗ್ ಥರಾನೇ ಆದ್ರೆ ಸಾಂಗ್ ಅಲ್ಲ ಅನ್ನಿಸುವಂಥ ಶಾಟ್ಸು ,ಇಂಥವನ್ನೆಲ್ಲ ಕಟ್ ಮಾಡಿದ್ರೆ, one cut, two cut 15 ನಿಮಿಷದ ಸಿನಿಮಾ ಆಗುತ್ತೆ.
ಕಟುವಾಗಿ ಹೇಳಬೇಕು ಅಂದ್ರೆ, ಅಕಟಕಟಾ..ಚೌಕಟ್ಟೇ ಸರಿ ಇಲ್ಲದ one cut two cut. ಯಶಸ್ಸಿಗೆ ಶಾರ್ಟ್ ಕಟ್ ಇಲ್ಲ ಅಂತ ತುಂಬಾ ಜನ ಹೇಳ್ತಾರೆ. ಆದ್ರೆ, ಇದು ನಿಜಕ್ಕೂ ಶಾರ್ಟ್ ಕಟ್‌ನಲ್ಲಿ ಯಶಸ್ಸು ಕಾಣೋಕೆ ಹೊರಟ ಪ್ರಯತ್ನದಂತಿದೆ. ಆ ಲೆಕ್ಕಕ್ಕೆ ಕನಿಷ್ಟ ಪಕ್ಷ ಶಾರ್ಟ್ ಫಿಲ್ಮ್ ಆದ್ರೂ ಮಾಡಬಹುದಿತ್ತು ಅನ್ನೋದು ಸಿನಿಮಾ ನೋಡಿದ ಬಹುತೇಕರ ಅನಿಸಿಕೆ. ಆದರೆ ಈ ಚಿತ್ರ ಪ್ರೈಮ್ ವಿಡಿಯೋ ಓಟಿಟಿಯಲ್ಲಿ ಬಿಡುಗಡೆ ಆಗಿರೋದ್ರಿಂದ ಎಂದಿನಂತೆ, ಪ್ರಾಯೋಜಿತ ವೇದಿಕೆಗಳಲ್ಲಿ ತುಂಬಾ ಒಳ್ಳೆ ಸಿನಿಮಾ ಎಂಬ ವಿಮರ್ಶೆಗಳು ಬರ್ತಾ ಇರೋದು ಮಾತ್ರ ಈ ಚಿತ್ರಕ್ಕಿಂತ ಹೆಚ್ಚು ಹಾಸ್ಯಾಸ್ಪದ.
Note: ದಾನಿಶ್ ಸೇಠ್ ‘ಮೂರು ದಿನದಲ್ಲಿ ಇಂಗ್ಲಿಷ್ ಮರೆಯಿರಿ’ ಅನ್ನೋ ಕೋರ್ಸ್ ಶುರು ಮಾಡಬಹುದು.
ಲೂಸ್ ಟಾಕ್
ನಿರ್ಮಲಾ ಸೀತಾರಾಮನ್ (ಕಾಲ್ಪನಿಕ ಸಂದರ್ಶನ)
?ಏನ್ ಮೇಡಂ, ನಿಮ್ಮೀ ಬಜೆಟ್ ಬಗ್ಗೆ ಜನ ಏನಂತಿದ್ದಾರೆ?
-ಏನ್ರೀ ಅದು? ನಿಮ್ಮಿ ಬಜೆಟ್ ಅಂತ ಕರೆಯೋದು, ನಾನೇನ್ ನಿಮ್ ಫ್ರೆಂಡಾ?
?ಹಲೋ ಮೇಡಂ, ನಾನ್ ಹೇಳಿದ್ದು, ನಿಮ್ಮ ‘ಪ್ಲಸ್ ಈ’ ಬಜೆಟ, ಎರಡೂ ಸೇರಿ ‘ನಿಮ್ಮೀ’ ಬಜೆಟ್ ಅಂತ..
-ಓಕೆ, ಓಕೆ, ಜನ ಇನ್ನೇನಂತಾರ್ರೀ.. ನಿರ್ಮಲಾ ಟಾಯ್ಲೆಟ್ ಆಗ್ಲಿ, ನಿರ್ಮಲಾ ಬಜೆಟ್ ಆಗ್ಲಿ, ಟ್ಯಾಕ್ಸ್ ಕಟ್ಟೋದು ತಪ್ಪಲ್ಲ ಅಂತಾರೆ. ಹೋಗ್ಲಿ ಬಿಡ್ರೀ..
?ಇದು ೨೫ ವರ್ಷದ ದೂರದೃಷ್ಠಿ ಇರೋ ಬಜೆಟ್ ಅಂತ ಹೇಳ್ಕೊಂಡಿದ್ದೀರಲ್ಲ?
-ಹೌದು. ಇದರ ಬಗ್ಗೆ ಇನ್ನು ೨೫ ವರ್ಷ ಯಾರೂ ಏನೂ ಕೇಳಂಗಿಲ್ಲ ಅಂತ ಅದರ ಅರ್ಥ
?ಆದ್ರೂ ಒಂದ್ ಸಣ್ಣ ಟ್ಯಾಬ್ಲೆಟ್ ಇಟ್ಕೊಂಡು ಬಜೆಟ್ ಮಂಡನೆ ಮಾಡಿಬಿಟ್ರ..
-ಏನ್ ಮಾಡೋದು ಬಜೆಟ್ ಕಮ್ಮಿ ಇತ್ತು,, ನಮ್ದು ಲೋ ಬಜೆಟ್ ಬಜೆಟ್ಟು
?ಮೇಡಂ, ತುಂಬಾ ಜನಕ್ಕೆ ಈ ಬಜೆಟ್ ಗಳಲ್ಲಿ ಏನಿದೆ ಅಂತಾನೇ ಅರ್ಥ ಆಗಲ್ಲ ಅದ್ಯಾಕೆ ಹಂಗೆ?
-ಅದ್ ಹಂಗೇ,,ಅರ್ಥ ಸಚಿವರು ಮಂಡನೆ ಮಾಡಿದ್ರೂ ಯಾರಿಗೂ ಅರ್ಥ ಆಗಲ್ಲ. ಅದಕ್ಕೇ ಅದನ್ನ ಬಜೆಟ್ ಅನ್ನೋದು.
ನೆಟ್ ಪಿಕ್ಸ್
ಖೇಮು, ರಾಮು, ಸೋಮು ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರೂ ಪ್ರತಿದಿನ ಲಂಚ್ ಬ್ರೇಕ್ ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ ಊಟವನ್ನು ಲಂಚ್ ಬಾಕ್ಸ್ ನಲ್ಲಿ ತರ್ತಾ ಇದ್ರು. ಅವರೆಲ್ಲರಿಗೂ ಒಂದು ವಿಷಯದ
ಬಗ್ಗೆ ಕಿರಿಕಿರಿ ಆಗ್ತಾ ಇತ್ತು. ಸೋಮು ಅವತ್ತು ಕ್ಯಾಂಟೀನ್ ನಲ್ಲಿ ಕೂತು, ನನ್ ಹೆಂಡ್ತಿ ಬೆಳಗ್ಗೆ ಮಾಡಿದ ತಿಂಡಿನೇ ಲಂಚ್ ಗೂ ಹಾಕಿಕೊಡ್ತಾಳೆ. ಅದೂ ಬರೀ ಮೊಸರನ್ನ. ಹೆಂಗಪ್ಪಾ ತಿನ್ನೋದು ಅಂತ ತನ್ನ ಕಷ್ಟ ಹೇಳಿಕೊಂಡು, ನೋಡು, ನನ್ನ ಬಾಕ್ಸ ನಲ್ಲಿ ಇವತ್ತೂ ಮೊಸರನ್ನ ಇದ್ರೆ, ನಾನು ಈ ಬಿಲ್ಡಿಂಗ್ ಮೇಲಿಂದ ಹಾರಿ ಕೆಳಗೆ ಬಿದ್ದು ಸತ್ತೋಗ್ತೀನಿ ಅಂತ ಬಾಕ್ಸ ಓಪನ್ ಮಾಡಿದ.
ಮೊಸರನ್ನ ಇತ್ತು. ರಾಮು ಮುಖ ನೋಡಿದ. ರಾಮು ಕೂಡಾ ಅದೇ ಮಾತನ್ನ ಹೇಳಿ, ನೋಡು, ಇವತ್ತೂ ನನ್ನ ಬಾಕ್ಸ್ ನಲ್ಲಿ ಚಿತ್ರಾನ್ನ ಇದ್ರೆ ನಾನೂ ಮೇಲಿಂದ ಬಿದ್ದು ಸಾಯ್ತೀನಿ ಅಂತ ಓಪನ್ ಮಾಡಿದ. ಚಿತ್ರಾನ್ನವೇ ಇತ್ತು. ಇವರಿಬ್ಬರ ನಂತರ ಖೇಮು ಕೂಡಾ, ಇವತ್ತೂನನ್ನ ಕ್ಯಾರಿಯರ‍್ ನಲ್ಲಿ ಉಪ್ಪಿಟ್ಟು ಇದ್ರೆ, ನಾನೂ ಸಾಯ್ತೀನಿ ಅಂತ. ತೆಗೆದು ನೋಡಿದ್ರೆ ಉಪ್ಪಿಟ್ಟೇ ಇತ್ತು. ಮೂವರು ಮೇಲಿಂದ ಬಿದ್ದು ಸತ್ತೋದ್ರು. ಪೊಲೀಸರು ಬಂದು ವಿಚಾರಣೆ ಮಾಡುವಾಗ ಸೋಮು ಹೆಂಡ್ತಿ, ಅಯ್ಯೋ ಅವರಿಗೆ ಮೊಸರನ್ನ ಕಂಡ್ರೆ ಇಷ್ಟ ಇಲ್ಲ ಅಂತ ನಂಗೊತ್ತಿರಲಿಲ್ಲ ಅಂದಳು. ರಾಮು ಹೆಂಡ್ತಿ, ಅಯ್ಯೋ, ಅವರಿಗೆ ಚಿತ್ರಾನ್ನ ಕಂಡ್ರೆ ಇಷ್ಟ ಇಲ್ಲ ಅಂತ ಗೊತ್ತಿರ ಲಿಲ್ಲ ಅಂದ್ಳು. ಕೊನೆಗೆ ಖೇಮು ಹೆಂಡ್ತಿ ಹೇಳಿದ್ಳು ಅದೇನಾಯ್ತು ಅಂತಲೇ ಗೊತ್ತಾಗ್ತಿಲ್ಲ, ಡೈಲಿ ಅವರ ಲಂಚ್ ಅವರೇ ಪ್ರಿಪೇರ‍್ ಮಾಡ್ಕೊತಾ ಇದ್ರು
ಲೈನ್ ಮ್ಯಾನ್
?ಜೀವನದಲ್ಲಿ ನಗು ಅನ್ನೋದೇ ಇಲ್ಲದಿದ್ರೆ ಏನಾಗುತ್ತೆ?
-ನಾಲ್ಕ ಜನ ನನ್ನ ನೋಡಿ ನಗ್ತಾರೆ ಅನ್ನೋ ಭಯ ಇರಲ್ಲ
?ಹೊಸ ರೀತಿಯ ಬರಹಗಾರರು ಬೇಕು ಅಂದ್ರೆ ಏನ್ ಮಾಡಬೇಕು?
-ನ್ಯೂ ಟೈಪ್- ರೈಟರ್ ತರಬೇಕು
?ಯಾರಿಗೂ ಗೊತ್ತಾಗದ ಹಾಗೆ ಮೆಲ್ಲಗೆ ಟೇಬಲ್ ಕೆಳಗಿಂದ ಹುಡುಗಿ ಕಾಲು ಟಚ್ ಮಾಡೋನು
-‘ಜೆಂಟಲ’ ಮ್ಯಾನ್
?ಎಷ್ಟೋ ಜನ ಬಿಜೆಪಿಯವರಿಗೇ ಬಜೆಟ್ ಅಂದ್ರೇನೇ ಇಷ್ಟ ಆಗಲ್ಲ
-ಯಾಕಂದ್ರೆ ಅವರಿಗೆ ಕಾಂಗ್ರೆಸ್ ‘ಸಿಂಬಲ್ ಕರ’ ಅಂದ್ರೆ ಆಗಲ್ಲ.
?ಕ್ಲೀನ್ ಹ್ಯಾಂಡ್ ಗಂಡಸು ಅಂದ್ರೆ ಯಾರು?
-ರಕ್ಷಾಬಂಧನದ ದಿನ ಯಾವ ಹುಡುಗಿನೂ ರಾಖಿ ಕಟ್ಟದೆ ಕೈ ಖಾಲಿ ಇರೋನು.
?ಮೆಳ್ಳೆಗಣ್ಣಿನ ದೃಷ್ಟಿ ದೋಷಕ್ಕೆ ಏನಂತಾರೆ ?
-ಕಾರ್ನರ್ಸೈಟ್
? ಕೊಹ್ಲಿನ ಕ್ಯಾಪ್ಟನ್ಸಿಯಿಂದ ಇಳಿಸಿ ಗಂಗೂಲಿ ಮಾಡ್ತಾ ಇರೋದೇನು ?
-ಹೊಸ‘ದಾದ’ ಕ್ರಾಂತಿ
?ದಾರಿಯಲ್ಲಿ ಒಂಟಿಯಾಗಿ ಹೋಗ್ತಾ ಇದ್ದ ಆಮೆ ಮೇಲೆ ಮೂರ್ನಾಲ್ಕು ಬಸವನ ಹುಳುಗಳು ದಾಳಿ ಮಾಡಿದ್ವು. ಅವುಗಳ ವಿರುದ್ಧ ಕಂಪ್ಲೇಂಟ್ ಕೊಡೋಣ ಅಂತ
ಆಮೆ ಪೊಲೀಸ್ ಸ್ಟೇಷನ್ ಗೆ ಹೋಯ್ತು. ಅಲ್ಲಿ ಪೊಲೀಸ್ ಅಽಕಾರಿ ಕೇಳಿದ. ನಿನ್ನ ಮೇಲೆ ಅಟ್ಯಾಕ್ ಮಾಡಿದ ಯಾರನ್ನಾದ್ರೂ ನೀನು ಗುರುತು ಹಿಡಿಯೋಕೆ ಸಾಧ್ಯನಾ?
-ಅದಕ್ಕೆ ಆಮೆ ಹೇಳ್ತು, ಇಲ್ಲ, ಅದೆ ಎಷ್ಟು – ಆಗಿ ಆಯ್ತು, ಅಂದ್ರೆ, ನಂಗೆ ಏನೂ ಗೊತ್ತೇ ಆಗ್ಲಿಲ್ಲ’.
? ಡೊಳ್ಳು ಹೊಟ್ಟೆಯ ರಾಜಕಾರಣಿಗಳು ಹೊಟ್ಟೆಗೇನ್ ತಿಂತಾರೆ ?
-‘ಓಟ್ಸ್’