Saturday, 7th September 2024

ಭಾರತೀಯ ಚಿತ್ರರಂಗದ ಮೊದಲ ರಾಣಿ

ವಿದೇಶವಾಸಿ

dhyapaa@gmail.com

ಸಿನಿಮಾದಲ್ಲಿ ಪುರುಷರೇ ಮಹಿಳೆಯರ ಪಾತ್ರವನ್ನೂ ನಿಭಾಯಿಸುತ್ತಿದ್ದ ಕಾಲ ಅದು. ಕಾರಣ, ಮಹಿಳೆಯರು ಚಿತ್ರರಂಗದಲ್ಲಿ ಕೆಲಸ ಮಾಡಿದರೆ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗಿತ್ತು. ಅಂಥಕಾಲದಲ್ಲಿ ದೇವಿಕಾ ಚಿತ್ರರಂಗ ಪ್ರವೇಶಿಸಿದ್ದಳು. ಕೇವಲ ಅಭಿನಯಕ್ಕಷ್ಟೇ ಸೀಮಿತವಾಗದೆ, ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದಳು.

ನೀವು ಇಂಟರ್‌ನೆಟ್‌ನಲ್ಲಿ The Longest Kiss ಎಂದು ಹುಡುಕಿದರೆ ಮೊದಲು ಕಾಣುವುದು ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಸುದೀರ್ಘವಾಗಿ ಚುಂಬಿಸಿದ ಜೋಡಿಯ ವಿಷಯ. ಥಾಯ್ಲೆಂಡ್‌ನ ಎಕ್ಕಚಾಯ್ಮತ್ತು ಲಕ್ಷಣಾತಿರನರದ ದಂಪತಿ ಐವತ್ತೆಂಟು ಗಂಟೆ ಮೂವತ್ತೈದು ನಿಮಿಷ ಐವತ್ತೆಂಟು ಸೆಕೆಂಡು ಗಳವರೆಗೆ ಸುದೀರ್ಘವಾಗಿ ಚುಂಬಿಸಿದರಂತೆ. ಆ ಸ್ಪರ್ಧೆಯ ಅಂತಿಮ ಹಂತದಲ್ಲಿ ಒಟ್ಟೂ ಒಂಬತ್ತು ಜೋಡಿಗಳು ಪಾಲ್ಗೊಂಡಿದ್ದ ವಂತೆ.

ಅದರಲ್ಲಿ ಜಯಗಳಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದವರು ತಿರನರತ್ಜೋಡಿ. ವಿಷಯ ಏನೆಂದರೆ, ಲೇಖಕಿ ಈಶ್ವರ್ ದೇಸಾಯಿ The Longest Kiss – The life and times of Devikaa raani ಎಂಬ ಒಂದು ಪುಸ್ತಕ ಬರೆದಿದ್ದಾರೆ. ಈ ಹೆಸರಿನ ಒಂದು ಪುಸ್ತಕವಿದೆ, ಓದಲು ಯೋಗ್ಯವಾಗಿದೆ ಎಂಬ ಮಿತ್ರರೊಬ್ಬರ ಸಲಹೆಯ ಮೇರೆಗೆ ಅಮೆಝಾನ್ ನಿಂದ ಪುಸ್ತಕ ತರಿಸಿಕೊಳ್ಳಬೇಕೆಂದು ಹುಡುಕುತ್ತಿರುವಾಗ ಇದು ಕಂಡದ್ದೇ ವಿನಾ ಅದೇ ಪ್ರಮುಖ ವಿಷಯವಲ್ಲ. ಇರಲಿ, ದೇಸಾಯಿ ಬರೆದ ಈ ಪುಸ್ತಕ ದಕ ಥಾನಾಯಕಿ ದೇವಿಕಾರಾಣಿ. ಆಕೆ ಮೂವತ್ತು ಮತ್ತು ನಲವತ್ತರ ದಶಕದಲ್ಲಿ ಹಿಂದಿ ಚಿತ್ರರಂಗ ವನ್ನುಅಕ್ಷರಶಃ ಆಳಿದ ಮಹಾರಾಣಿಯೂ ಹೌದು.

ಹಿಂದಿ ಚಿತ್ರರಂಗದಲ್ಲಿ ಇಂದು ಸಾಕಷ್ಟು ಹೆಸರು ಮಾಡಿದ ಅಭಿನೇತ್ರಿಯರಿದ್ದಾರೆ. ಅವರ ನಡುವೆ ಈ ದೇವಿಕಾ ರಾಣಿಯಾರು ಎಂದು ಕೇಳಿದರೆ ಇಂದಿನ
ಯುವಪೀಳಿಗೆಗಂತೂ ಖಂಡಿತ ಗೊತ್ತಿರಲಿಕ್ಕಿಲ್ಲ. ಅದೇ ಮೂವತ್ತು, ನಲವತ್ತರ ದಶಕದ ಹಿಂದಿ ಸಿನಿಮಾ ನೋಡಿದವರಲ್ಲಿ ಈ ಹೆಸರು ಕೇಳಿದರೆ, ಅವರ ಇಳಿವಯಸ್ಸಿನಲ್ಲೂ ಒಮ್ಮೆ ಮಿಂಚಿನ ಸಂಚಾರವಾಗುತ್ತದೆ. ಹಿಂದಿ ಚಿತ್ರರಂಗದ ಡ್ರೀಮ್ ಗರ್ಲ್ ಎಂದರೆ ಹೇಮಾಮಾಲಿನಿ ಎನ್ನುವವರೇ ಹೆಚ್ಚು.
ಆದರೆ, ಹೇಮಾಮಾಲಿನಿ ಎರಡನೆಯ ಡ್ರೀಮ್ ಗರ್ಲ್. ಅದಕ್ಕೂ ಕೆಲವು ದಶಕಗಳ ಹಿಂದೆಯೇ ಬಾಲಿವುಡ್‌ನ ಮೊದಲ ಡ್ರೀಮ್ ಆಗಿ ಮೆರೆದವಳು
ದೇವಿಕಾರಾಣಿ.

ನಮ್ಮ ತಲೆಮಾರಿನವರು ಆಕೆಯ ಚಿತ್ರಗಳನ್ನು ಹೆಚ್ಚು ನೋಡೇ ಇಲ್ಲ ಎಂದರೂ ತಪ್ಪಿಲ್ಲ. ಅದಕ್ಕೆ ನಾನೂ ಹೊರತಲ್ಲ. ಎಂಬತ್ತರ ದಶಕದಲ್ಲಿ ದೂರ
ದರ್ಶನದಲ್ಲಿ ಜನಪ್ರಿಯ ಕಾರ್ಯಕ್ರಮ ಚಿತ್ರಹಾರ್ ಬರುತ್ತಿತ್ತು. ಅದರಲ್ಲಿ ಮೈಬನ ಕಿಚಿಡಿಯಾ ಬನಕೆ ಬನ ಬನ ಬೋಲೂರೆ ಒಂದು ಕಾಯಂ ಹಾಡು. ಬಣ್ಣದ ಟಿವಿಯಲ್ಲಿ ಏನಿಲ್ಲ ವೆಂದರೂ ಒಂದು ನೂರು ಸಲವಾದರೂ ಆ ಕಪ್ಪು ಬಿಳುಪಿನ ಹಾಡು ನೋಡಿದ ನೆನಪು. ಅದನ್ನೂಅಶೋಕ ಕುಮಾರ್ ಆಗಿ ಸಹಿಸಿಕೊಂಡಿದ್ದೇ ಶಿವಾಯ್ ಜತೆಗಿರುವ ನಾಯಕಿ ಯಾರೆಂದು ಒಮ್ಮೆಯೂ ತಲೆಕೆಡಿಸಿಕೊಂಡಿರಲಿಲ್ಲ.

ದೇವಿಕಾರಾಣಿ ಅಭಿನಯಿಸಿದ ಅಚೂತ್ ಕನ್ಯಾ ಮತ್ತು ಅಂಜಾನಿ ಬಿಟ್ಟು ಇನ್ಯಾವ ಚಿತ್ರವನ್ನೂ ನೋಡಿಲ್ಲ. ಆ ಎರಡು ಸಿನಿಮಾ ನೋಡಿದ್ದೂ ನಟ ಅಶೋಕ್ಕು ಮಾಡಿದ್ದಾನೆಂಬ ಕಾರಣಕ್ಕಾಗಿಯೇ ಹೊರತು ದೇವಿಕಾ ಇದ್ದಾಳೆಂಬ ಕಾರಣಕ್ಕಾಗಿ ಅಲ್ಲ. ಏಕೆಂದರೆ ಆಗ ಆಕೆಯ ಕುರಿತಾಗಲಿ, ಆಕೆಯ
ಸಾಹಸದ ಕುರಿತಾಗಲಿ ತಿಳಿದಿರಲಿಲ್ಲ. ಅದು ತಿಳಿದದ್ದು ಇತ್ತೀಚೆಗೆ ಕಿಶ್ವರ್ ದೇಸಾಯಿ ಬರೆದ ಪುಸ್ತಕ ಓದಿದ ನಂತರವೇ. ಸಿನಿಮಾದಲ್ಲಿ ಪುರುಷರೇ
ಮಹಿಳೆಯರ ಪಾತ್ರವನ್ನೂ ನಿಭಾಯಿಸುತ್ತಿದ್ದ ಕಾಲ ಅದು. ಕಾರಣ, ಮಹಿಳೆಯರು ಚಿತ್ರರಂಗದಲ್ಲಿ ಕೆಲಸ ಮಾಡಿದರೆ ಸಮಾಜದ ಕೆಂಗಣ್ಣಿಗೆ ಗುರಿಯಾಗ
ಬೇಕಾಗಿತ್ತು.

ಅಂಥಕಾಲದಲ್ಲಿ ದೇವಿಕಾ ಚಿತ್ರರಂಗ ಪ್ರವೇಶಿಸಿದ್ದಳು. ಕೇವಲ ಅಭಿನಯಕ್ಕಷ್ಟೇ ಸೀಮಿತವಾಗದೆ, ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದಳು. ಇಂದು ಅಶೋಕ್ ಕುಮಾರ್, ದಿಲೀಪ್ ಕುಮಾರರಂತಹ ನಟರು ಹೆಸರು ಮಾಡಿದ್ದರೆ ಅದಕ್ಕೆ ದೇವಿಕಾ ರಾಣಿಯೂ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ಅವಳು ಹುಟ್ಟಿದ ಪರಿವಾರ, ಪರಿಸರ ಇದಕ್ಕೆಲ್ಲ ಕಾರಣ ಎನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ದೇವಿಕಾ ಹುಟ್ಟಿದ್ದು ೧೯೦೮ರ ಮಾರ್ಚ್ ೩೦ರಂದು ವಲೈರ್ (ಈಗಿನ ವಿಶಾಖಪಟ್ಟಣಂ)ನಲ್ಲಿ. ಆಕೆ ನಮ್ಮ ರಾಷ್ಟ್ರ ಗೀತೆ ಬರೆದ ಕವಿ ರವೀಂದ್ರನಾಥ ಠಾಗೋರರ ಸೋದರ ಮೊಮ್ಮಗಳು. ಅವಳ ತಂದೆ ಮನ್ಮಥನಾಥ
ಚೌಧರಿ ಮದ್ರಾಸ್ ಪ್ರೆಸಿಡೆನ್ಸಿಯ ಮೊದಲ ಜನರಲ್ ಸರ್ಜನ್ ಆಗಿದ್ದರು.

ಮನೆಯಲ್ಲಿ ಹಣಕ್ಕೆ, ಸಿರಿತನಕ್ಕೆ ಯಾವುದೇ ಕೊರತೆ ಇರಲಿಲ್ಲವಾದ್ದರಿಂದ, ಒಂಬತ್ತು ವರ್ಷದವಳಾಗಿದ್ದಾಗಲೇ ದೇವಿಕಾರಾಣಿಯನ್ನು ವಿದ್ಯಾಭ್ಯಾಸ ಕ್ಕೆಂದು ಇಂಗ್ಲೆಂಡಿಗೆ ಕಳಿಸಲಾಯಿತು. ಪ್ರಾಥಮಿಕ ಶಿಕ್ಷಣ ಮುಗಿಸಿದ ದೇವಿಕಾ, ರಾಯಲ್ ಅಕಾಡೆಮಿ ಆ- ಡ್ರಾಮಾಟ್ರಿಕ್ಸ್‌ನಲ್ಲಿ ಅಭಿನಯದ ತರಬೇತಿ ಪಡೆದಳು. ಅಲ್ಲಿ ಅವಳಿಗೆ ಹಿಮಾಂಶುರಾಯ್ ಪರಿಚಯವಾಯಿತು. ಭಾರತದಲ್ಲಿ ಬ್ಯಾರಿಸ್ಟರ್ ಆಗಿದ್ದ ಹಿಮಾಂಶು ಚಿತ್ರೋದ್ಯಮದ ಕಡೆ ಆಕರ್ಷಿತ ರಾಗಿದ್ದರು. ತಮ್ಮ ಮೊದಲ ಮೂಕಿಚಿತ್ರ ಎ ಥ್ರೋ ಆ- ಡೈಸ್ ಚಿತ್ರ ನಿರ್ಮಾಣದ ಕುರಿತು ಯೋಚಿಸುತ್ತಿದ್ದರು. ಅದರ ನಿಮಿತ್ತ ಇಂಗ್ಲೆಂಡಿಗೆ ಬಂದಾಗ ಅವರಿಗೆ ದೇವಿಕಾರಾಣಿಯ ಪರಿಚಯವಾಯಿತು. ಆಕೆಯ ಅಸಾಧಾರಣ ಕೌಶಲ ಕಂಡು ತನ್ನ ಚಿತ್ರ ನಿರ್ಮಾಣದಲ್ಲಿ ಸಹಕರಿಸುವಂತೆ ಹಿಮಾಂಶು ಕೇಳಿಕೊಂಡರು.

ಅದಕ್ಕೆ ಒಪ್ಪಿದ ದೇವಿಕಾ ವಸ ವಿನ್ಯಾಸಕಿ ಮತ್ತು ಕಲಾ ನಿರ್ದೇಶಕಳಾಗಿ ಸೇರಿಕೊಂಡಳು. ಚಿತ್ರೀಕರಣ ಮುಗಿಸಿ, ಮುಂದಿನ ಕೆಲಸಕ್ಕೆ ಇಬ್ಬರೂ ಜರ್ಮನಿಗೆ
ಹೋದರು. ಅಲ್ಲಿಯ ತಂತ್ರಜ್ಞಾನ ಕಂಡು ಬೆರಗಾದ ದೇವಿಕಾ, ಚಿತ್ರ ನಿರ್ಮಾಣದ ಹೆಚ್ಚಿನ ತರಬೇತಿ ಪಡೆದಳು. ಚಿತ್ರಮುಗಿಯುವ ಹೊತ್ತಿಗೆ ದೇವಿಕಾ
ಮತ್ತು ಹಿಮಾಂಶು ಪರಸ್ಪರ ಆಕರ್ಷಿತರಾಗಿದ್ದರು. ೧೯೨೯ರಲ್ಲಿ ದೇವಿಕಾ, ವಯಸ್ಸಿನಲ್ಲಿ ತನಗಿಂತ ಹದಿನಾರು ವರ್ಷ ಹಿರಿಯ ಪ್ರಾಯದ ಹಿಮಾಂಶುವನ್ನು ಮದುವೆಯಾದಳು.

ವಿವಾಹದ ನಂತರ ಇಬ್ಬರೂ ಕೆಲಕಾಲ ಜರ್ಮನಿಯಲ್ಲಿ ಉಳಿದರು. ಅಲ್ಲಿ ಜರ್ಮನ್ ಮೋಶನ್ ಪಿಕ್ಚರ್ ಪ್ರೋಡಕ್ಷನ್ ಕಂಪನಿಯಲ್ಲಿ ಕೆಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದರು. ಹಿಮಾಂಶು ಆಗಾಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಂದರ್ಭ ಒದಗಿ ಬಂದಾಗ ದೇವಿಕಾ ಕೂಡ ಹಿಮಾಂಶು ಜತೆ ಅಭಿನಯಿಸುತ್ತಿದ್ದರು. ಅವರಿಬ್ಬರ ಜೋಡಿ ಜರ್ಮನಿಯಲ್ಲಷ್ಟೇ ಅಲ್ಲ, ಯೂರೋಪ್‌ನ ಇನ್ನೂಕೆಲವು ದೇಶಗಳಲ್ಲಿ ಜನಪ್ರಿಯ ವಾಯಿತು.

ಮದುವೆಯಾಗಿ ನಾಲ್ಕು ವರ್ಷದ ನಂತರ ಇಬ್ಬರೂ ಭಾರತದಲ್ಲಿ ನೆಲೆಸಲು ನಿರ್ಧರಿಸಿದರು. ಹಿಮಾಂಶು ತಮ್ಮ ಮೊದಲ ಟಾಕಿ ಚಿತ್ರದ ಸಿದ್ಧತೆ ನಡೆಸಿದರು. ಇಂಗ್ಲೆಂಡ್ ಮತ್ತು ಜರ್ಮನಿಯ ಮಿತ್ರರೊಂದಿಗೆ ಸೇರಿ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಲಾಗುತ್ತಿದ್ದ ಚಿತ್ರಕ್ಕೆ ಸ್ವತಃ ತಾವೇ ನಾಯಕರಾಗಿ, ದೇವಿಕಾರನ್ನು ನಾಯಕಿ ಯನ್ನಾಗಿ ಆಯ್ದುಕೊಂಡರು ಹಿಮಾಂಶು. ಕರ್ಮ ಚಿತ್ರ ಬಿಡುಗಡೆಯಾದಾಗ ಇಂಗ್ಲೆಂಡಿನಲ್ಲಷ್ಟೇ ಅಲ್ಲ, ಇತರ ಯೂರೋಪ್ ದೇಶಗಳಲ್ಲೂ ಸದ್ದು ಮಾಡಿತು. ರಾತ್ರಿ ಬೆಳಗಾಗುವುದರೊಳಗೆ ದೇವಿಕಾ ಇಂಗ್ಲೆಂಡಿನಲ್ಲಿ ತಾರೆಯಾಗಿದ್ದಳು. ಆ ಚಿತ್ರದಲ್ಲಿ ದೇವಿಕಾ ಒಂದು ಹಾಡನ್ನೂ ಹಾಡಿದ್ದರು. ಇಂಗ್ಲೆಂಡ್‌ನಲ್ಲಿ ಜನಪ್ರಿಯವಾದ ಆ ಹಾಡು, ಭಾರತದ ಚಲನಚಿತ್ರಗಳಲ್ಲೇ ಮೊದಲ ಇಂಗ್ಲೀಷ್ ಹಾಡು ಎಂದು ದಾಖಲಾ ಯಿತು. ಆ ಚಿತ್ರದಲ್ಲಿ ದೇವಿಕಾ ಮತ್ತು ಹಿಮಾಂಶು ಚುಂಬನದ ದೃಶ್ಯವೂ ಸಾಕಷ್ಟು ಸುದ್ದಿ ಯಾಯಿತು.

ಕರ್ಮ ಚಿತ್ರದ ನಾಲ್ಕು ನಿಮಿಷಗಳ ಆದೃಶ್ಯ, ಹಿಂದಿ ಚಿತ್ರರಂಗದ ಸುದೀರ್ಘ ಚುಂಬನ ಎಂಬ (ಕು)ಖ್ಯಾತಿಗೂ ಪಾತ್ರವಾಯಿತು. ಬಹುಶಃ ಇದೇ ಕಾರಣವೋ ಏನೋ, ಚಿತ್ರ ಭಾರತದಲ್ಲಿ ನಡೆಯಲೇ ಇಲ್ಲ. ಅಂದು ಭಾರತದ ಪ್ರೇಕ್ಷಕ ಇದನ್ನೆಲ್ಲ ಸ್ವೀಕರಿಸುವ ಮನಃಸ್ಥಿತಿಯಲ್ಲಿರಲಿಲ್ಲವೋ ಏನೋ, ವಿದೇಶದಲ್ಲಿ ಸೊಲ್ಲೆಬ್ಬಿಸಿದ್ದ ಚಿತ್ರ ಭಾರತ ದಲ್ಲಿ ಸೋತಿತ್ತು. ಆದರೆ ದೇವಿಕಾ ಗೆದ್ದಿದ್ದಳು. ದೇವಿಕಾ ಕರ್ಮ ಚಿತ್ರದ ತನ್ನ ಅಭಿನಯದಿಂದ ವಿಮರ್ಶಕರ ಮನಗೆದ್ದಿದ್ದಳು. ಎಲ್ಲಿಯವರೆಗೆ ಎಂದರೆ, ಅಂದು ಸರೋಜಿನಿ ನಾಯ್ಡು ಕೂಡ ದೇವಿಕಾಳನ್ನು ಸೌಂದರ್ಯ ಮತ್ತು ಪ್ರತಿಭೆಯುಳ್ಳ ಮಹಿಳೆ ಎಂದು ಹೊಗಳಿದರು.

ಯೂರೋಪ್‌ನಲ್ಲಿ ಕರ್ಮ ಚಿತ್ರದ ಯಶಸ್ಸಿನ ಉತ್ಸಾಹದಲ್ಲಿದ್ದ ಹಿಮಾಂಶು, ಕೆಲವು ಮಿತ್ರರೊಂದಿಗೆ ಸೇರಿ ಮುಂಬೈನಲ್ಲಿ ಹದಿನೆಂಟು ಎಕರೆ ಜಮೀನು ಖರೀದಿಸಿ ಬಾಂಬೆ ಟಾಕೀಸ್ ಸಂಸ್ಥೆಯನ್ನು ಹುಟ್ಟು ಹಾಕಿದರು. ಬಾಂಬೆ ಟಾಕೀಸ್‌ನ ಮೊದಲ ಚಿತ್ರ ಜವಾನಿ ಕಿ ಹವಾದಲ್ಲಿ ದೇವಿಕಾ ನಾಯಕಿಯಾದರೆ ನಜ್ಮ್-ಉಲ್-ಹಸನ್ ನಾಯಕ ಯನಾಗಿದ್ದ. ಒಂದೆಡೆ ಚಿತ್ರದ ಸಂಪೂರ್ಣ ಚಿತ್ರೀಕರಣ ರೈಲಿನಲ್ಲಿ ನಡೆಯುತ್ತಿದ್ದರೆ, ಇನ್ನೊಂದೆಡೆ ದೇವಿಕಾ ಹಸನ್‌ನ ಪ್ರೇಮದ ಕೂಪದಲ್ಲಿ ಇಳಿಯುತ್ತಾ ಹೋದಳು. ಇಬ್ಬರೂ ಜತೆಯಾಗಿ ಎರಡನೆಯ ಚಿತ್ರ ಜೀವನ್ನಯ್ಯಾ ಮುಗಿಸುವುದಕ್ಕಿಂತ ಮೊದಲೇ ಮುಂಬೈ ಬಿಟ್ಟುಹೋಗಿದ್ದರು.

ಅಲ್ಲಿಯವರೆಗೂ ಹಿಮಾಂಶುಗೆ ಅವರಿಬ್ಬರ ನಡುವಿನ ಪ್ರೀತಿಯ ವಿಷಯವೇ ತಿಳಿದಿರಲಿಲ್ಲ. ಚಿತ್ರೀಕರಣಕ್ಕೆ ಸಾಕಷ್ಟು ಹಣ ಖರ್ಚಾಗಿತ್ತು. ಚಿತ್ರ  ಮುಗಿಸುವುದು ಅನಿವಾರ್ಯವಾಗಿತ್ತು. ದೇವಿಕಾ ಮತ್ತು ಹಸನ್ ಕೋಲ್ಕತಾದ ಒಂದು ಹೊಟೇಲಿನಲ್ಲಿ ಉಳಿದುಕೊಂಡಿದ್ದರು. ಮಿತ್ರರ ಮಧ್ಯಸ್ಥಿಕೆಯಿಂ
ದಾಗಿ ದೇವಿಕಾ ಹಿಂತಿರುಗಿ ಮನೆಗೆ ಬಂದಳು. ಆದರೆ ಆರ್ಥಿಕ ಸ್ವಾತಂತ್ರ ವನ್ನು ಬಯಸಿದ್ದಳು ಹಿಮಾಂಶು ಅದಕ್ಕೆ ಒಪ್ಪಿದ್ದರು. ಆದರೆ, ಒಂದೇ ಸೂರಿನ ಅಡಿಯಲ್ಲಿ ಇರುತ್ತಿದ್ದರೂ ಅವರಿಬ್ಬರ ನಡುವಿನ ಪ್ರೀತಿ ಮಾತ್ರ ಮೊದಲಿನಂತೆ ಸಿಹಿಯಾಗಿರಲಿಲ್ಲ. ಇತ್ತ ಹಿಮಾಂಶು ಹಸನ್‌ನನ್ನು ಬಾಂಬೆ ಟಾಕೀಸ್‌ ನಿಂದ ತೆಗೆದು ಹಾಕಿದರು. ಇಲ್ಲಿಂದ ಮುಂದೆ ಹಸನ್‌ಗೆ ಚಿತ್ರರಂಗದಲ್ಲಿ ಅವಕಾಶಗಳೇ ಸಿಗಲಿಲ್ಲ. ಜೀವನ್ನಯ್ಯಾ ಚಿತ್ರದ ಹಸನ್ ಪಾತ್ರಕ್ಕೆ ಬೇರೆ ನಾಯಕ ನಟನ ಶೋಧ ನಡೆಯುತ್ತಿತ್ತು. ಆಗ ಸಿಕ್ಕಿದ್ದೇ ಹಿಂದಿ ಚಿತ್ರರಂಗದ ದಾದಾ ಮೋನಿ, ಅಶೋಕ್‌ಕುಮಾರ್. ಮುಂದೆ ಅಶೋಕ್ ಕುಮಾರ್ ಮತ್ತು ದೇವಿಕಾರಾಣಿ ಜೋಡಿಯೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದು ಈಗ ಇತಿಹಾಸ.

ಬಾಂಬೆಟಾಕೀಸ್ ಸಾಕಷ್ಟು ಚಿತ್ರ ನಿರ್ಮಾಣ ಮಾಡಿ ಅಶೋಕ್ ಕುಮಾರ್, ದಿಲೀಪ್ ಕುಮಾರ್, ರಾಜ್‌ಕಪೂರ್, ಮಧು ಬಾಲಾ, ಮಮ್ತಾಜ್ ಮೊದಲಾ ದವರನ್ನು ಚಿತ್ರರಂಗಕ್ಕೆ ಪರಿಚಯಿಸಿತು. ೧೯೪೦ರಲ್ಲಿ ಹಿಮಾಂಶು ರಾಯ್ ನಿಧನರಾದ ನಂತರ ದೇವಿಕಾರಾಣಿ ಬಾಂಬೆ ಟಾಕೀಸ್‌ನ ಉಸ್ತುವಾರಿ
ವಹಿಸಿಕೊಂಡು ಅನೇಕ ಚಿತ್ರ ನಿರ್ಮಿಸಿದರು. ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರ ವಿರುದ್ಧ ಹೋರಾಟದ ಚಿತ್ರ ನಿರ್ಮಿಸಿ ಸುದ್ದಿ ಮಾಡಿದರು. ಈ ನಡುವೆ ಕೆಲವು ಭಿನ್ನಾಭಿಪ್ರಾಯದಿಂದಾಗಿ ಅಶೋಕ್‌ಕುಮಾರ್ ಮತ್ತು ಕೆಲವು ಖ್ಯಾತ ನಟರು ಬಾಂಬೆ ಟಾಕೀಸ್ ಬಿಟ್ಟು ಹೋದರು. ೧೯೪೫ರಲ್ಲಿ ಬಾಂಬೆ ಟಾಕೀಸ್ ಸ್ಥಗಿತಗೊಳಿಸಿದ ದೇವಿಕಾ ರಷ್ಯಾದ ವರ್ಣ ಚಿತ್ರಕಾರ ಸ್ವೆಟೊಸ್ಲಾವ್ರೋರಿಚ್ ರನ್ನು ಮದುವೆಯಾಗಿ ಮಧುಚಂದ್ರಕ್ಕೆಂದು ಹಿಮಾಲಯದ ತೊಪ್ಪಲಿಗೆ ಹೋಗಿದ್ದರು. ಆಕಾಲದಲ್ಲಿ ಅದೂ ಕೂಡ ದೊಡ್ಡ ಸುದ್ದಿಯಾಗಿತ್ತು. ಕಾರಣ, ಆ ಕಾಲದಲ್ಲಿ ಮದುವೆಯಾದವರಲ್ಲಿ ಶೇಕಡಾ ಹತ್ತರಷ್ಟು ಮಾತ್ರ ಮಧುಚಂದ್ರಕ್ಕೆ ಹೋಗುತ್ತಿದ್ದರು! (ಇದು ಆಕಾಲದಲ್ಲಿ ಬಾಂಬೆ ವಿಶ್ವವಿದ್ಯಾಲಯದ ಸಮಾಜಶಾಸಜ್ಞ ಪ್ರೊ. ಗೋವಿಂದು ಘುಯೆರ್ ನಡೆಸಿದ ಸಮೀಕ್ಷೆಯ ವರದಿ) ಮದುವೆಯ ನಂತರ ಕೆಲವು ವರ್ಷ ದಂಪತಿಗಳು ಮನಾಲಿಯಲ್ಲಿ ಉಳಿದರು. ಕ್ರಮೇಣ ಬೆಂಗಳೂರಿನ ಬಳಿ ನಾಲ್ಕು ನೂರ ಐವತ್ತು ಎಕರೆಯ ಎಸ್ಟೇಟ್ ಖರೀದಿಸಿ, ಸಿನಿಮಾ ಪ್ರಪಂಚದಿಂದ ದೂರಉಳಿದರು. ೧೯೯೩ರಲ್ಲಿ ರೋರಿಚ್ ನಿಧನರಾದರು.

ಅದಾಗಿ ಒಂದೇ ವರ್ಷದಲ್ಲಿ ದೇವಿಕಾ ಕೂಡ ಕೊನೆ ಯುಸಿರೆಳೆದಳು. ದೇವಿಕಾಗೆ ಸಂತಾನವಿರಲಿಲ್ಲ ವಾದ್ದರಿಂದ ಕೆಲವು ವರ್ಷಗಳ ನಂತರ ಆಕೆಯ
ಎಸ್ಟೇಟ್ ಅನ್ನು ಕರ್ನಾಟಕ ಸರಕಾರ ತನ್ನ ಸ್ವಾಧೀನಕ್ಕೆ ಒಳಪಡಿಸಿಕೊಂಡಿತು. ದೇವಿಕಾರಾಣಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ. ಸಿನಿಮಾರಂಗದಲ್ಲಿ ಸಲ್ಲಿಸಿದ ಸೇವೆಗೆ ನೀಡುವ ದಾದಾ ಸಾಹೇಬ್-ಲ್ಕೆ ಪ್ರಶಸ್ತಿಯನ್ನುಮೊದಲು ಪಡೆದ ಶ್ರೇಯವೂ ದೇವಿಕಾರಾಣಿಗೆ ಸಲ್ಲುತ್ತದೆ. ೨೦೧೧ರಲ್ಲಿ ಭಾರತ ಸರಕಾರ ಆಕೆಯನ್ನು ಭಾರತದ ಚಿತ್ರರಂಗದ ಪ್ರಥಮ ಮಹಿಳೆ ಎಂಬ ಗೌರವ ನೀಡಿ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದೆ. ದೇವಿಕಾ ಪಯಣ ಹಲವಾರು ತಿರುವುಗಳಲ್ಲಿ ತಿರುಗಿದೆ. ಇಳಿಮೋರೆಯಲ್ಲಿ ಇಳಿದಿದೆ, ಏರನ್ನೂ ಹತ್ತಿದೆ.

ಏನೇ ಆದರೂ ಭಾರತೀಯ ಚಿತ್ರ ರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯುವಲ್ಲಿ ದೇವಿಕಾರಾಣಿಯ ಪಾತ್ರವೂ ಇದೆ. ಸುಮಾರು ಒಂಬತ್ತು ದಶಕದ ಹಿಂದೆಯೇ ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆ ದೇವಿಕಾರಾಣಿ. ದೇವಿಕಾರಾಣಿಯ ಜೀವನದ ಇನ್ನಷ್ಟು ಕುತೂಹಲಕಾರಿ ಘಟನೆ ಗಳನ್ನು ಕಿಶ್ವರ್ ದೇಸಾಯಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಚಲನಚಿತ್ರಾಸಕ್ತರು ಓದಬಹುದಾದ ಒಂದು ಉತ್ತಮ ಕೃತಿ – The Longest Kiss.

Leave a Reply

Your email address will not be published. Required fields are marked *

error: Content is protected !!