Saturday, 27th July 2024

ವಾಜಪೇಯಿ ವ್ಯಕ್ತಿತ್ವ ಬಿಂಬಿಸುವ ಪಂಚ ಅಂಶಗಳು

ಶಕ್ತಿ ಸಿನ್ಹಾ ನಿವೃತ್ತ ಐಎಎಸ್ ಅಧಿಕಾರಿ

ಇಂದು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಈ ಅಂಕಣದ ಲೇಖಕ ನಿವೃತ್ತ ಐಎಎಸ್ ಅಧಿಕಾರಿ ಶಕ್ತಿ ಸಿನ್ಹಾ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕಾರ್ಯದರ್ಶಿಯಾಗಿದ್ದರು. ವಾಜಪೇಯಿ ಅವರನ್ನು ತೀರ ಹತ್ತಿರದಿಂದ ನೋಡಿದ ಸಿನ್ಹಾ, ಅವರ ವಿಚಾರ, ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡಿರುವ ಕೆಲವು ಸಂಗತಿಗಳನ್ನು ಇಲ್ಲಿ ವಿವರಿಸಿದ್ದಾರೆ. ಸಿನ್ಹಾ ಅವರು ‘ವಾಜಪೇಯಿ: ದ ಇಯರ್ಸ್ ದಟ್ ಚೇಂಜ್ಡ್‌ ಇಂಡಿಯಾ’ ಎಂಬ ಕೃತಿಯನ್ನೂ ಬರೆದಿದ್ದಾರೆ.

ಪ್ರಸಿದ್ಧ ಸಾರ್ವಜನಿಕ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ ಅಂಥವರನ್ನು ಅರ್ಥಮಾಡಿಕೊಳ್ಳುವುದರಲ್ಲಿ ಇರುವ ಸಮಸ್ಯೆೆ ಯೆಂದರೆ ಅವರು ಮಹಾತ್ಮ ಗಾಂಧಿ ಅಥವಾ ಜವಾಹರಲಾಲ್ ನೆಹರು ಅವರಂತೆ ಸಾಕಷ್ಟು ಪುಸ್ತಕಗಳನ್ನು ಬರೆದಿಲ್ಲ ಅಥವಾ
ಡೈರಿಯಂತಹ ಬರಹಗಳನ್ನು ಬಿಟ್ಟುಹೋಗಿಲ್ಲ. ವಾಜಪೇಯಿ ಅವರು ಡೈರಿ ಅಥವಾ ಜರ್ನಲ್‌ಗಳನ್ನು ಯಾವತ್ತೂ ಬರೆಯು ತ್ತಿರಲಿಲ್ಲ.

ನನ್ನ ಇತ್ತೀಚಿನ ಪುಸ್ತಕವಾದ ‘ವಾಜಪೇಯಿ: ದಿ ಇಯರ್ಸ್ ದಟ್ ಚೇಂಜ್ಡ್‌ ಇಂಡಿಯಾ’ ಬರೆಯಲು ಮಾಹಿತಿ ಕಲೆಹಾಕು
ತ್ತಿದ್ದಾಗ ಅವರ ಸಾಕಷ್ಟು ಭಾಷಣಗಳನ್ನೂ, ಪದ್ಯಗಳನ್ನೂ ಓದಿ ಅವರ ತಾತ್ವಿಕತೆಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದೆ. ಏಕೆಂದರೆ ಅವರು ಯಾವತ್ತೂ ತಮ್ಮ ಸಿದ್ಧಾಂತವೇನೆಂಬುದನ್ನು ನೇರವಾಗಿ ಎಲ್ಲೂ ಹೇಳಿಲ್ಲ. ಆದರೆ, ಅವರ ಮಾತು ಅಥವಾ ಕೃತಿಗಳಿಂದ ಅದನ್ನು ಊಹಿಸಬಹುದು.

ಒಮ್ಮೆ ವಾಜಪೇಯಿ ತಮ್ಮ ಸ್ನೇಹಿತ ಎನ್.ಎಂ.ಘಟಾಟೆ (ಅಪ್ಪ) ಅವರಿಗೊಂದು ದೀರ್ಘ ಪ್ರಬಂಧ ಬರೆದುಕೊಟ್ಟಿದ್ದು ನನಗೆ ಗೊತ್ತಿತ್ತು. ಎನ್‌ಎಂ ಆಗ ವಾಜಪೇಯಿ ಅವರ ಭಾಷಣಗಳ ಸಂಗ್ರಹ ‘ಡಿಸಿಸಿವ್ ಡೇಯ್ಸ್‌’ ಕೃತಿಯನ್ನು ಸಂಪಾದಿಸುತ್ತಿದ್ದರು.
ಹಾಗೆಯೇ ವಾಜಪೇಯಿ ಅವರ ಇನ್ನೊಂದು ಭಾಷಣಗಳ ಸಂಗ್ರಹವನ್ನು ಚಂದ್ರಿಕಾ ಪ್ರಸಾದ್ ಶರ್ಮಾ ಅವರು ಸಂಪಾದಿಸಿದ್ದಾರೆ.

ಅದಕ್ಕೂ ವಾಜಪೇಯಿ ಒಂದು ಸುದೀರ್ಘವಾದ ಆತ್ಮವೃತ್ತಾಂತ ರೂಪದ ಲೇಖನ ಬರೆದುಕೊಟ್ಟಿದ್ದರು. ಈ ಎರಡು ಪ್ರಬಂಧಗಳೇ ನನಗೆ ವಾಜಪೇಯಿ ಅವರ ಜಾಗತಿಕ ದೃಷ್ಟಿಕೋನವೇನು, ಹೇಗೆ ಅವರು ಇತಿಹಾಸವನ್ನು ಅರ್ಥೈಸಿಕೊಂಡಿದ್ದರು ಮತ್ತು ಹೇಗೆ ಸಮಕಾಲೀನ ಸಂಗತಿಗಳನ್ನು ಅವಲೋಕಿಸುತ್ತಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಹಾಯ ಮಾಡಿವೆ.

ವಾಜಪೇಯಿಯವರ ಜಾಗತಿಕ ದೃಷ್ಟಿಕೋನ ಹೇಗಿತ್ತು ಎಂಬುದನ್ನು ಐದು ಸಂಗತಿಗಳ ಮೂಲಕ ಹೇಳಬಹುದು. 1ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್‌ಎಸ್) ಜತೆಗೆ ಬೆಳೆದು ಬಂದ ಎಲ್ಲರಂತೆ ವಾಜಪೇಯಿ ಅವರೂ ಭಾರತೀಯ ಸಮಾಜ
ದಲ್ಲಿದ್ದ ಸಾಮಾಜಿಕ ತಾರತಮ್ಯವೇ ದೇಶಿ ದಾಳಿಕೋರರಿಗೆ ಭಾರತವನ್ನು ಸುಲಭದ ತುತ್ತಾಗಿಸಿತು ಎಂಬ ನಿಲುವು ಹೊಂದಿದ್ದರು. ಜಾತಿ ವ್ಯವಸ್ಥೆ ಭಾರತೀಯ ಸಮಾಜವನ್ನು ಒಡೆದಿದೆ, ಇದರಿಂದಾಗಿಯೇ ಕ್ಷತ್ರಿಯರು ಮಾತ್ರ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಹಕ್ಕುದಾರರು ಎಂಬಂತಾಗಿದೆ.

ಹಾಗೆಯೇ, ಭಾರತೀಯ ಸಮಾಜವು ಬಹಳ ಜನರಿಗೆ ವೇದ ಮತ್ತು ಉಪನಿಷತ್ತುಗಳನ್ನು ಮುಟ್ಟಲು ಬಿಡುತ್ತಿರಲಿಲ್ಲ. ಪ್ಲಾಸಿ ಕದನ ದಲ್ಲಿ ಹೋರಾಡಿದವರಿಗಿಂತ ನೋಡಿದವರೇ ಹೆಚ್ಚಿದ್ದರು, ಅವರೆಲ್ಲರಿಗೂ ಫಲಿತಾಂಶ ಮುಖ್ಯವಾಗಿತ್ತು. ಆದರೆ ಯಾರೂ ಯುದ್ಧ ದಲ್ಲಿ ಪಾಲ್ಗೊಳ್ಳಲು ತಯಾರಿರಲಿಲ್ಲ ಎಂದು ವಾಜಪೇಯಿ ಟೀಕಿಸಿದ್ದರು.

ಆರ್‌ಎಸ್‌ಎಸ್‌ನ ಮಾಜಿ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ನಿಧನರಾದಾಗ ಅಸ್ಪಶ್ಯತೆ ಪಾಪವಲ್ಲ ಅಂತಾದರೆ ಇನ್ನಾವುದೂ ಪಾಪವಾಗಲು ಸಾಧ್ಯವೇ ಇಲ್ಲವೆಂದು ಬಾಳಾಸಾಹೇಬ್ ಹೇಳುತ್ತಿದ್ದರು ಎಂದು ವಾಜಪೇಯಿ ನೆನಪಿಸಿಕೊಂಡಿದ್ದರು. ಇಂತಹ ತಾರತಮ್ಯ ಮೊದಲು ಹೋಗಬೇಕು ಎಂಬುದು ಅವರ ನಿಲುವಾಗಿತ್ತು.

2 ಹಿಂದು ಸಂಪ್ರದಾಯಗಳಲ್ಲಿ ಅವರಿಗಿದ್ದ ಗಾಢವಾದ ನಂಬಿಕೆ. ಈ ನಂಬಿಕೆ ಸಾಂಸ್ಕೃತಿಕ ಮತ್ತು ತಾತ್ವಿಕ ನೆಲೆಗಟ್ಟಿನಲ್ಲಿತ್ತೇ ಹೊರತು ಧಾರ್ಮಿಕ ಅಥವಾ ಆಚರಣೆಗಳ ನೆಲೆಗಟ್ಟಿನಲ್ಲಿರಲಿಲ್ಲ. ಆರ್‌ಎಸ್‌ಎಸ್‌ನಿಂದ ಬಂದ ಎಲ್ಲರಂತೆ ವಾಜಪೇಯಿ ಅವರೂ ಧರ್ಮ ಎಂಬುದು ಭಾರತಕ್ಕೆ ಹೊಸ ಸಂಗತಿಯೆಂದೇ ನಂಬಿದ್ದರು. ಭಾರತದಲ್ಲಿರುವುದು ವಿವಿಧ ಪೂಜಾಪದ್ಧತಿಗಳು ಅಥವಾ
ಉಪಾಸನಾ ಪದ್ಧತಿಗಳು. ಇವ್ಯಾವುದಕ್ಕೂ ಸತ್ಯದ ಮೇಲೆ ಏಕಸ್ವಾಮ್ಯವಿಲ್ಲ. ಯಾವುದೇ ನಂಬಿಕೆಗಿಂತ ತಾಯ್ನಾಡಿಗೆ ನಿಷ್ಠನಾಗಿ ರುವುದು ಪ್ರತಿಯೊಬ್ಬರಿಗೂ ಪರಮೋಚ್ಚ ಶ್ರದ್ಧೆೆಯಾಗಿರಬೇಕು. ಹಿಂದು ಧರ್ಮದ ಸಾರವೇ ಇದು ಎಂದು ವಾಜಪೇಯಿ ಹೇಳು ತ್ತಿದ್ದರು. ಅಬ್ರಹಾಮಿಕ್ ನಂಬಿಕೆಯವರು ತಮಗೆ ಮಾತ್ರ ಸತ್ಯದ ಮೇಲೆ ಏಕಸ್ವಾಮ್ಯವಿದೆ, ನಾಗರಿಕ ರಾಷ್ಟ್ರೀಯ ವಾದಕ್ಕಿಂತ ಧಾರ್ಮಿಕ ನಂಬಿಕೆಗಳೇ ಮುಖ್ಯವೆಂದು ನಂಬಿದ್ದರು.

ಇಂತಹ ನಂಬಿಕೆಗಳ ಬಗ್ಗೆೆ ವಾಜಪೇಯಿಗೆ ಒಲವಿರಲಿಲ್ಲ. ಸರಕಾರ ಯಾವತ್ತೂ ಜನರ ನಂಬಿಕೆಗನುಗುಣವಾಗಿ ಅವರಲ್ಲಿ ತಾರತಮ್ಯ ಮಾಡಬಾರದು, ಅದು ಎಲ್ಲರ ನಂಬಿಕೆಗಳನ್ನೂ ಗೌರಸಬೇಕು, ಏಕೆಂದರೆ ಅವರೆಲ್ಲರೂ ಸಮಾಜದ ಒಂದು ಅಂಗವೇ
ಆಗಿದ್ದಾರೆಂದು ವಾಜಪೇಯಿ ಹೇಳುತ್ತಿದ್ದರು. 3ವಾಜಪೇಯಿ ಅವರಿಗೆ ಮತಾಂತರದ ಬಗ್ಗೆ ಬಹಳ ಅಸಹನೆ ಇತ್ತು. 1988ರಲ್ಲಿ ಪುಣೆ
ಯಲ್ಲಿ ಲೇಖಕ ಪು.ಲ ದೇಶಪಾಂಡೆಯವರಿಗೆ ಸನ್ಮಾನ ಮಾಡಿದ ನಂತರ ಅವರು ಮಾಡಿದ ಭಾಷಣದಲ್ಲಿ ಇಂಡೋನೇಷ್ಯಾ ಮತ್ತು ಅಫ್ಘಾನಿಸ್ತಾನ ಮುಸ್ಲಿಂ ರಾಷ್ಟ್ರಗಳಾಗಿ ಪರಿವರ್ತನೆ ಹೊಂದಿದ್ದರೂ ಅವು ತಮ್ಮ ಇಸ್ಲಾಂ-ಪೂರ್ವದ ಪರಂಪರೆಯನ್ನು
ಮರೆತಿಲ್ಲ.

ರಾಮಾಯಣವು ಇಂಡೋನೇಷ್ಯಾದ ಸಂಪ್ರದಾಯವಾಗಿತ್ತು. ಧಾರ್ಮಿಕ ಮತಾಂತರವೆಂಬುದು ಏಕೆ ನಮ್ಮ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ತ್ಯಜಿಸುವ ಕ್ರಿಯೆಯಾಗಬೇಕು ಎಂದು ಪ್ರಶ್ನಿಸಿದ್ದರು.

ಅವರು ಬಾಯಿಬಿಟ್ಟು ಹೇಳದಿದ್ದರೂ ಮುಸ್ಲಿಮರು ಭಾರತೀಯ ಸಂಪ್ರದಾಯಗಳನ್ನು ತಮ್ಮದಾಗಿಸಿಕೊಳ್ಳಬೇಕು ಎಂಬುದು ವಾಜಪೇಯಿಯವರ ಮಾತಿನ ಒಳಾರ್ಥವಾಗಿತ್ತು. ಜವಾಹರಲಾಲ್ ನೆಹರು ಕೂಡ 1948ರ ಜನವರಿ 24ರಂದು ಅಲೀಗಢ ಮುಸ್ಲಿಂ
ಯುನಿವರ್ಸಿಟಿಯಲ್ಲಿ ಭಾಷಣ ಮಾಡುತ್ತಾ ಇದೇ ಮಾತು ಹೇಳಿದ್ದರು. ನನಗೆ ಭಾರತೀಯ ಪರಂಪರೆಯ ಬಗ್ಗೆ ಹಾಗೂ ನಮ್ಮ ಪೂರ್ವಜರ ಬಗ್ಗೆ ಬಹಳ ಹೆಮ್ಮೆ ಇದೆ. ಅವರು ನಮಗೆ ಬೌದ್ಧಿಕ ಹಾಗೂ ಸಾಂಸ್ಕೃತಿಕ ತಳಪಾಯ ಹಾಕಿ ಕೊಟ್ಟಿದ್ದಾರೆ. ನಿಮಗೂ ಹಾಗೆ ಅನ್ನಿಸುತ್ತದೆಯೇ ಅಥವಾ ಈ ಪರಂಪರೆ ನಿಮಗೆಲ್ಲ ಹೊಸತು ಅನ್ನಿಸುತ್ತದೆಯೇ ಎಂದು ನೆಹರು ಅಲೀಗಢ ವಿವಿಯ ವಿದ್ಯಾರ್ಥಿಗಳನ್ನು ಕೇಳಿದ್ದರು.

4 ವಾಜಪೇಯಿಯವರ ದೃಷ್ಟಿಕೋನ ಭಾರತದ ಮಣ್ಣಿನಲ್ಲಿ ಮಿಳಿತವಾಗಿತ್ತು. ಭಾರತದ ಸಾಹಿತ್ಯಿಕ ಸಂಪ್ರದಾಯಗಳು ಅವರ ಚಿಂತನೆಗಳನ್ನು ರೂಪಿಸುವಲ್ಲಿ ಸಾಕಷ್ಟು ಪ್ರಭಾವ ಬೀರಿದ್ದವು. ಅವರು ಬಹಳ ಮೆಚ್ಚಿಕೊಳ್ಳುತ್ತಿದ್ದ ಲೇಖಕರು ಮತ್ತು ಕೃತಿ ಗಳೆಂದರೆ ತುಳಸಿದಾಸರ ರಾಮಚರಿತಮಾನಸ, ಜೈಶಂಕರ್ ಪ್ರಸಾದ್ ಅವರ ಕಾಮಯಾನ, ನಿರಾಳರ ರಾಮ್ ಕಿ ಶಕ್ತಿ ಪೂಜಾ ಹಾಗೂ ಮಹಾದೇವಿ ವರ್ಮಾ ಅವರ ಕತೆಗಳು. ಪ್ರೇಮಚಂದ್‌ರ ವಾಸ್ತವವಾದ ಅವರನ್ನು ಬಹಳ ಪ್ರಭಾವಿಸಿತ್ತು.

ಜೈನೇಂದ್ರ (ಪತ್ನಿ ಔರ್ ಪ್ರೇಯಸಿ), ಅಗೇಯ (ಶೇಖರ್: ಏಕ್ ಜೀವಾನಿ) ಮತ್ತು ವೃಂದಾವನ ವರ್ಮಾ ಅವರ ಹಲವಾರು ಕೃತಿ ಗಳನ್ನು ಅವರು ಮೆಚ್ಚಿಕೊಂಡಿದ್ದರು. ವೃಂದಾವನ ವರ್ಮಾ ಅವರ ಕೃತಿಗಳಲ್ಲಿ ಐತಿಹಾಸಿಕ ಕತೆಗಳು ಹಾಗೂ ವಾಜಪೇಯಿ ಯವರ ಬ್ರಜಭೂಮಿಯ ಜಾನಪದ ಕತೆಗಳಿರುತ್ತಿದ್ದವು. ಈ ಲೇಖಕರು ವಾಜಪೇಯಿಗೆ ಗತ ವೈಭವವನ್ನು ನೆನಪಿಸುವುದಷ್ಟೇ ಅಲ್ಲ, ಆಗಿನ ಸಮಸ್ಯೆಗಳನ್ನು ಮೀರಿ ಭಾರತವನ್ನು ಮುನ್ನಡೆಸಲು ಇರುವ ಸವಾಲುಗಳ ಬಗ್ಗೆಯೂ ಅವರು ಯೋಚಿಸುವಂತೆ ಮಾಡಿದ್ದರು.

5 ಭಾರತವು ಅದ್ಭುತವಾಗಿ ಬೆಳೆಯಬೇಕಾದ ದೇಶ. ಆದರೆ ಅದಕ್ಕೆ ಸಲ್ಲಬೇಕಾದ ನ್ಯಾಯ ಇನ್ನೂ ಸಂದಿಲ್ಲವೆಂದೇ ವಾಜಪೇಯಿ ನಂಬಿದ್ದರು. ನಾವು ನೆಲದ ಮೇಲೆ ನಿಲ್ಲುವಂತೆ ಮಾಡಲು ಇತಿಹಾಸ ಮುಖ್ಯ. ಆದರೆ ಅವು ನಮ್ಮನ್ನು ಕಟ್ಟಿಹಾಕಬಾರದು ಎಂದು
ಹೇಳುತ್ತಿದ್ದರು. ಆಗಷ್ಟೇ ಜಗತ್ತಿನಲ್ಲಿ ಶೀತಲ ಸಮರ ಮುಗಿದಿತ್ತು. ರಾಜಕೀಯವಾಗಿ ಅದೊಂದು ಮುಖ್ಯ ಘಟ್ಟ. ಆಗ  ಉದಯೋ ನ್ಮುಖ ನವಜಗತ್ತು ಭಾರತಕ್ಕೆ ವಿರುದ್ಧವಾಗಿತ್ತು.

ಅಮೆರಿಕವನ್ನು ಧಿಕ್ಕರಿಸಿ ಪರಮಾಣು ಪರೀಕ್ಷೆ ನಡೆಸಿದರೂ ವಾಜಪೇಯಿ ಅವರು ಅಮೆರಿಕದ ಜತೆ ಭಾರತ ಹೆಜ್ಜೆ ಹಾಕಬೇಕು ಎಂದೇ ಹೇಳುತ್ತಿದ್ದರು. ಏಕೆಂದರೆ ಚೀನಾದ ಬೆಳವಣಿಗೆ ಭಾರತಕ್ಕೆ ಯಾವತ್ತಿದ್ದರೂ ಅಪಾಯ ಎಂಬುದನ್ನು ಅವರು ಆಗಲೇ ಯೋಚಿಸಿದ್ದರು. ಹೀಗಾಗಿ ಚೀನಾದ ವಿರುದ್ಧ ಭಾರತ ಮತ್ತು ಅಮೆರಿಕ ಒಂದೇ ಬದಿಯಲ್ಲಿರಬೇಕು. ಹಾಗಂತ ನಾವು ಚೀನಾದ ಜತೆಗೆ ಸಂಬಂಧ ಸುಧಾರಿಸಿಕೊಳ್ಳಲು ಹಿಂಜರಿಯಬಾರದು. ಆದರೆ, ಕೊನೆಯಲ್ಲಿ ಭಾರತ ಮತ್ತು ಅಮೆರಿಕವೇ ನೈಸರ್ಗಿಕ
ಸ್ನೇಹಿತರಾಗಿರಬೇಕು ಎಂಬುದು ಅವರ ವಾದವಾಗಿತ್ತು.

ಆರ್ಥಿಕವಾಗಿ ಭಾರತಕ್ಕಿರುವ ಸಂಕೋಲೆಗಳನ್ನು ಬಿಡಿಸಲು ಇಲ್ಲಿನ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಬೇಕು ಎಂದು ಅವರು
ಪ್ರಯತ್ನಿಸಿದರು. ಅವರೊಬ್ಬ ಸಹಜ ಸುಧಾರಕ. ಲೈಸನ್ಸ್‌ ಪರ್ಮಿಟ್ ರಾಜ್ ವ್ಯವಸ್ಥೆಯಿಂದಾಗಿಯೇ ಭಾರತ ಹಿಂದುಳಿದಿದೆ. ಅದನ್ನು ಕಿತ್ತುಹಾಕಬೇಕು ಎಂದು ಪ್ರತಿಪಾದಿಸಿದ್ದರು.

ಅಟಲ್ ಬಿಹಾರಿ ವಾಜಪೇಯಿ ಒಬ್ಬ ಸಂಕೀರ್ಣ ರಾಜಕೀಯ ಮುತ್ಸದ್ಧಿ. ಆದರೆ, ಅವರ ಸಂಕೀರ್ಣ ಜಾಗತಿಕ ದೃಷ್ಟಿಕೋನವು ಇವತ್ತಿನ ಭಾರತವನ್ನು ಕಟ್ಟುವಲ್ಲಿ ಸಾಕಷ್ಟು ಕೊಡುಗೆ ನೀಡಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.

Leave a Reply

Your email address will not be published. Required fields are marked *

error: Content is protected !!