Sunday, 15th December 2024

ಫಾಂಟ್‌ಗಳ ವಿಚಾರದಲ್ಲಿ ನಾನು ವಿಪರೀತ ಜಾತಿವಾದಿ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ಇಂಗ್ಲಿಷ್‌ನ ಟೈಪೋಗ್ರಾಫರ್‌ಗಳ ಅಂತಃಸತ್ವವಿರುವುದು Be bold or italic never regular ಎಂಬ ವಾಕ್ಯದಲ್ಲಿ. ಆದರೆ ಕನ್ನಡದಲ್ಲಿ ಈ ಮಾತನ್ನು Be bold never regular ಎಂದು ಬದಲಿಸಬೇಕಾದೀತು. ಅಕ್ಷರಗಳನ್ನು ಕೆತ್ತುವ ಲಿಪಿಬ್ರಹ್ಮರಿಗೆ ಈ ಪ್ರಾಥಮಿಕ ಜ್ಞಾನ ಇರಬೇಕಾಗುತ್ತದೆ. ಅಕ್ಷರಗಳನ್ನು ಕೆತ್ತುವ ಲಿಪಿಬ್ರಹ್ಮರಿಗೆ ಈ ಪ್ರಾಥಮಿಕ ಜ್ಞಾನ ಇರಬೇಕಾಗುತ್ತದೆ.

The first me I drew typeface, I felt like I was at the boom of Mt.
Everest. In swimsuit. Hennes Von Dohren ನನಗೇನಾದರೂ ಹೆಣ್ಣು ಮಗಳು ಇದ್ದಿದ್ದರೆ, ಭೂಮಿಕಾ, ದೇವಿಕಾ, ಆಶಿಕಾ, ದೀಪಿಕಾ….ಬದಲು ನಿಶ್ಚಿತ ವಾಗಿಯೂ ಹೆಲ್ವೆಟಿಕಾ ಎಂಬ ಹೆಸರನ್ನು ಇಡುತ್ತಿದ್ದೆನೇನೋ ಎಂದು ಎಷ್ಟೋ ಸಲ ಅನಿಸಿದ್ದಿದೆ.

ಇಂಗ್ಲಿಷ್ ಅಕ್ಷರಗಳಲ್ಲಿ ಅತಿ ಸುಂದರವಾದ ಅಕ್ಷರವೆಂದರೆ ಹೆಲ್ವೆಟಿಕಾ ಜಾತಿಗೆ ಸೇರಿದ ಅಕ್ಷರಗಳು. ಇದನ್ನು ಜಗತ್ತಿನಾದ್ಯಂತ ಎಲ್ಲ ಅಕ್ಷರಪ್ರಿಯರು, ವಿನ್ಯಾಸಕಾರರು ಬಳಸು ತ್ತಾರೆ. ಅನೇಕರು ಹೆಲ್ವೆಟಿಕಾವನ್ನು ಒಂದು ಫಾಂಟ್ (ಅಕ್ಷರ) ಅಥವಾ typeface (ಲಿಪಿ) ಎಂದು ಹೇಳಿದರೂ ಅಕ್ಷರ ಪರಿಣತರ ಪ್ರಕಾರ ಅದೊಂದು ಟಜಟ ಅಥವಾ ಲಾಂಛನ. ಹಾಗೆ ನೋಡಿದರೆ ಪ್ರತಿಯೊಂದು ಅಕ್ಷರವೂ ಲಾಂಛನವೇ.

ಇದನ್ನೇ ಮಹಾನ್ ಲಿಪಿ ವಿನ್ಯಾಸಕಾರ ಆಲಿವರ್ ಜಿ ‘My approach is to conceive and create each le er as if it were a logo’ ಎಂದು ಹೇಳಿರುವುದು. ನೋಕಿಯಾ, ಸೋನಿ, ಸಿಎನ್‌ಎನ್ ಮುಂತಾದ ಜಾಗತಿಕ ಬ್ರ್ಯಾಂಡ್‌ಗಳಿಗೆ ಲಾಂಛನ (logo)ಗಳಿಲ್ಲ. ಅವುಗಳ ಅಕ್ಷರಗಳೇ ಲಾಂಛನ. ನಾವು ನಮ್ಮ ಎಲ್ಲ ಆಲೋಚನೆಗಳನ್ನು, ಚಿಂತನೆಗಳನ್ನು ಪದಗಳಲ್ಲಿ ಹುದುಗಿಸಿಡು ತ್ತೇವೆ. ಈ ಪದ ಅಥವಾ ಅಕ್ಷರಗಳನ್ನು ಓದಿದಾಗ ಅವು ಒಂದು ಚಿತ್ರವಾಗಿ, ಇಮೇಜ್ ಆಗಿ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಬಿಡುತ್ತವೆ. ಕೋಕ್ (coke) ಎಂದು ಬರೆದಾಗ ಅದು ಅಕ್ಷರಗಳ ಜೋಡಣೆಯಾಗಿ ಕಾಣದೇ ಅದೊಂದು ಇಮೇಜ್‌ನಂತೆ ಮನಸ್ಸಿನಲ್ಲಿ ಶಾಶ್ವತವಾಗಿ ಕುಳಿತುಕೊಂಡು ಬಿಡುತ್ತದೆ. ಮುಂದೆ ಎಂದಾದರೂ ಕೋಕ್ ಎಂದು ನೆನಪಾದಾಗ, ನಮ್ಮ ಮುಂದೆ ಬರುವುದು D font ಗಳೇ.

ಇಂಗ್ಲಿಷಿನಲ್ಲಿ ಎಂಟು ಸಾವಿರಕ್ಕೂ ಮಿಕ್ಕಿ ಬೇರೆ ಬೇರೆ ರೀತಿಯ, ರೂಪದ, ಜಾತಿಯ, ವಿನ್ಯಾಸದ, ಬಗೆಯ ಅಕ್ಷರಗಳಿವೆ. ಎಲ್ಲಕ್ಕೂ ಎಲ್ಲ ಜಾತಿಯ ಅಕ್ಷರಗಳನ್ನು ಬಳಸುವುದಿಲ್ಲ. THE HINDU ಅಥವಾ THE TIMES OF INDIA ಎಂಬ ಅಕ್ಷರಗಳು ನಮ್ಮ ಮನಸ್ಸಿ ನಲ್ಲಿ ಸ್ಥಿರಚಿತ್ರಗಳಂತೆ ಅಚ್ಚೊತ್ತಿರುವುದರಿಂದ, ಇವುಗಳನ್ನು ಯಾರೂ ಪದೇಪದೆ ಬದಲಿಸುವುದಿಲ್ಲ. ದಶಕ ಅಥವಾ ಕಾಲು ಶತಮಾನ ಕ್ಕೊಮ್ಮೆ ಬದಲಾಯಿಸುವಾಗಲೂ ಹತ್ತಾರು ಸಲ ಯೋಚಿಸುವುದುಂಟು. ಇಷ್ಟು ದಿನಗಳ ಕಾಲ ಒಂದು ಅಕ್ಷರಗಳ ಇಮೇಜ್‌ ನಿಂದ ಗುರುತಿಸುತ್ತಿದ್ದ ಓದುಗರಿಗೆ ಇನ್ನು ಮುಂದೆ ಗಲಿಬಿಲಿಯಾಗಬಹುದು ಎಂಬ ಆತಂಕ ಕಾಡುತ್ತದೆ.

ಹೀಗಾಗಿ ಯಾರೂ ಅಂಥ ದುಸ್ಸಾಹಸಕ್ಕೆ ಮುಂದಾಗುವುದಿಲ್ಲ. ನಾಳೆ ಏಕಾಏಕಿ THE TIMES OF INDIA ಎಂಬ ಟೈಮ್ಸ್ ನ್ಯೂ ರೋಮನ್ ಫಾಂಟ್‌ಗಳ ಬದಲು ಹೆಲ್ವೆಟಿಕಾ, ಜಾರ್ಜಿಯಾ, ಗೆರಮಾಂಡ್, ಏರಿಯಲ್, ಗಿಲ್‌ಸಾನ್ಸ್ ಮುಂತಾದ ಫಾಂಟ್‌ಗಳಲ್ಲಿ ಮುದ್ರಿಸಿ
ದರೆ, ಓದುಗರಿಗೆ ಗಲಿಬಿಲಿಯಾಗುವುದು ಗ್ಯಾರಂಟಿ. ಬಹುತೇಕ ಓದುಗರಿಗೆ ತಾವು ಬೇರೆ ಪತ್ರಿಕೆಯನ್ನೇ ಓದುತ್ತಿದ್ದೇವೆ ಹಾಗೂ ನಿತ್ಯ ಓದುತ್ತಿದ್ದ ಪತ್ರಿಕೆ ಅಲ್ಲ ಎಂದು ಅನಿಸುತ್ತದೆ.

ಪತ್ರಿಕೆಯ ಹೆಸರಿನ ಜತೆಗೆ ಹೆಡ್‌ಲೈನ್ ಹಾಗೂ ಸುದ್ದಿಯ ಫಾಂಟ್‌ಗಳನ್ನೂ ಬದಲಿಸಿದರೆ, ಏನೋ ಯಡವಟ್ಟಾಗಿದೆಯೆಂದೂ ಇದು ತಾವು ಇಲ್ಲಿ ತನಕ ಓದುತ್ತಿದ್ದ ಪತ್ರಿಕೆ ಅಲ್ಲವೇ ಅಲ್ಲವೆಂದೂ ನಿರ್ಧರಿಸುವುದು ನಿಶ್ಚಿತ. ಇಷ್ಟು ವರ್ಷಗಳಿಂದ ನಾವು ನೋಡುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು ಸೂಟು, ಬೂಟು, ಕೂಲಿಂಗ್ ಗ್ಲಾಸ್, ಕೌಬಾಯ್ ಹ್ಯಾಟ್ ಧರಿಸಿ ಬಂದರೆ ನಮಗೇನನಿಸುವುದೋ ದಿಢೀರ್ ಫಾಂಟ್‌ ಗಳನ್ನು ಬದಲಿಸಿದರೆ ಹಾಗೇ ಆಗುತ್ತದೆ. ನಮ್ಮ ಮನಸ್ಸು ಅಂಥ ಬದಲಾವಣೆಯನ್ನು ಒಪ್ಪುವುದಿಲ್ಲ. ಮೊದಲು ಹಲವು ವರ್ಷಗಳ ಕಾಲ ಮೀಸೆ ಬಿಟ್ಟಿದ್ದ ನಾನು, ಅದನ್ನು ಬೋಳಿಸಿದಾಗ ನನಗೇ ನನ್ನ ಗುರುತು ಸಿಕ್ಕಿರಲಿಲ್ಲ.

ಕಾರಣ ನನ್ನ ಮುಖದಲ್ಲಿ ಮೀಸೆ ಕೇವಲ ಮೀಸೆಯಾಗಿರಲಿಲ್ಲ. ಅದೊಂದು ಇಮೇಜ್ ಆಗಿತ್ತು. ಈಗ ಬಹುಶಃ ಮತ್ತೆ ಮೀಸೆ ಅಥವಾ
ದಾಡಿ ಬಿಟ್ಟರೂ ಆ ಕಸಿವಿಸಿ ಇದ್ದದ್ದೇ. ಚಿತ್ರಕಾರನಿಗೆ ಒಂದು ಚುಕ್ಕೆಯೂ ನಕ್ಷತ್ರವಾಗುವಂತೆ ಪ್ರತಿ ಅಕ್ಷರವೂ ಒಂದು ರೂಪವಾಗುತ್ತದೆ, ವ್ಯಕ್ತಿತ್ವದ ಭಾಗವಾಗುತ್ತದೆ. ಈ ಕಾರಣಗಳಿಂದ ಅಕ್ಷರಗಳಿಗೆ ಅಷ್ಟೊಂದು ಮಹತ್ವ. ಅದೇ ಒಂದು ಪ್ರತ್ಯೇಕ ಶಾಸ್ತ್ರ, ಅದ್ಭುತಲೋಕ. ಇಂಗ್ಲಿಷಿನಲ್ಲಿ ಇದಕ್ಕೆ typography ಅಂತಾರೆ. ಕನ್ನಡದಲ್ಲಿ ಲಿಪಿಶಾಸ್ತ್ರ ಅಂತಾರೆ. font ಹಾಗೂ type ಅಂದ್ರೆ ಒಂದೇ. ಕನ್ನಡದಲ್ಲೂ ‘ಅವನ ಟೈಪೇ ಬೇರೆ’ ಎಂದು ಹೇಳುವುದುಂಟು. ಇಲ್ಲಿ ಟೈಪ್ ಅಂದ್ರೆ ವ್ಯಕ್ತಿತ್ವ, ಗುಣ-ಲಕ್ಷಣ ಎಂದರ್ಥ.

ಇದನ್ನು ಅಕ್ಷರಗಳಿಗೆ ಅನ್ವಯಿಸಿದರೂ ಅದೇ ಅರ್ಥ. ಇದನ್ನು ವಿನ್ಯಾಸಕಾರರು Iam very font of you because you are just my type ಎಂದು ಹೇಳುವುದುಂಟು. ಇದು ಕೇವಲ ಇಂಗ್ಲಿಷ್ ಅಕ್ಷರಗಳಿಗೆ ಮಾತ್ರ ಅಲ್ಲ, ಎಲ್ಲ ಭಾಷೆಗಳ ಅಕ್ಷರಗಳಿಗೂ ಅನ್ವಯಿಸು ವಂಥದ್ದು. ನಮ್ಮ ಕನ್ನಡ ದಲ್ಲೂ ಹಲವಾರು ಫಾಂಟ್‌ಗಳಿವೆ. ಆದರೆ ಇಂಗ್ಲಿಷ್‌ಗೆ ಹೋಲಿಸಿದರೆ ತೀರಾ ಅಂದ್ರೆ ತೀರಾ ಕಡಿಮೆ. ಕಂಪ್ಯೂಟರ್ ಬರುವುದಕ್ಕಿಂತ ಮುಂಚೆ ಕನ್ನಡದಲ್ಲಿದ್ದುದು ಕೇವಲ ಮೂರ್ನಾಲ್ಕು ಫಾಂಟುಗಳು. ದುರ್ದೈವವೆಂದರೆ ಅವುಗಳಿಗೆ ಹೆಸರೂ ಇರಲಿಲ್ಲ. ಯಾವ ಜಾತಿಗೆ ಸೇರಿದ ಅಕ್ಷರಗಳು ಎಂಬ ವರ್ಗೀಕರಣವೂ ಇರಲಿಲ್ಲ. ಕಂಪ್ಯೂಟರ್ ಬಂದ ನಂತರ, ಈ ಫಾಂಟ್‌ಗಳ ವಿಸ್ಮಯ ಲೋಕವೇ ತೆರೆದುಕೊಂಡಿತು.

ಆಗ ಕನ್ನಡದಲ್ಲಿ ಪ್ರಕಾಶಕ್, ನುಡಿ, ಲಿಪಿ, ಶ್ರೀಲಿಪಿ, ಅಕ್ಷರ…. ಮುಂತಾದ ಫಾಂಟ್‌ಗಳು ಬಂದವು. ಶ್ರೀಲಿಪಿ ಎಂಬ ಮೂಲ ಜಾತಿಯಲ್ಲಿ ನೂರಕ್ಕೂ ಹೆಚ್ಚು ಬಗೆಯ, ವಿನ್ಯಾಸದ ಅಕ್ಷರಗಳಿವೆ. ಇವುಗಳಿಗೆ ಒಂದು ಸುಂದರ ಹೆಸರನ್ನು ಸಹ ಇಡದಷ್ಟು ದಾರಿದ್ರ್ಯವಿದೆ. ನಾವು ಇದನ್ನು ಶ್ರೀಲಿಪಿ 852, ಶ್ರೀಲಿಪಿ 853, ಶ್ರೀಲಿಪಿ 857….ಎಂದು ಕರೆಯುತ್ತೇವೆ. ಇವುಗಳಲ್ಲಿ ಬೋಲ್ಡ್, ಇಟಾಲಿಕ್, ರೆಗ್ಯುಲರ್ ಎಂಬ ಪ್ರಭೇದಗಳನ್ನು ಬಿಟ್ಟರೆ, ಹೆಚ್ಚಿನ ಅವಕಾಶವಾಗಲಿ, ಸಾಧ್ಯತೆಗಳಾಗಲಿ ಕಡಿಮೆ.

You cant be a good typographer if you are not a good reader ಎಂಬ ಮಾತಿದೆ. ಕನ್ನಡದಲ್ಲಿ ಅವೆಷ್ಟೋ ಉತ್ತಮ ಓದುಗರಿಲ್ಲವಾ, ಖಂಡಿತವಾಗಿಯೂ ಇದ್ದಾರೆ. ಆದರೆ ಅವರಿಗೆ ಬಗೆ ಬಗೆಯ ಅಕ್ಷರಗಳನ್ನು ವಿನ್ಯಾಸಗೊಳಿಸಬೇಕೆಂದು ಏಕೆ ಅನಿಸ ಲಿಲ್ಲವೋ ಗೊತ್ತಿಲ್ಲ. ಕನ್ನಡದ ಕೆಲವು ಕಲಾವಿದರು ಈ ಕೊರತೆ ನೀಗುವಲ್ಲಿ ಸ್ವಲ್ಪ ಕೆಲಸ ಮಾಡಿದರೂ, ಆ ಕೆಲಸ ಸ್ವಲ್ಪವೇ.

ಹಾಗೆ ನೋಡಿದರೆ, ಎಲ್ಲ ಅಕ್ಷರಗಳಲ್ಲಿ ಕನ್ನಡ ಅಕ್ಷರಗಳು ಬಲು ಮುದ್ದು ಹಾಗೂ ಸುಂದರ ಅಂತಾರೆ ಟೈಪೋಗ್ರಾಫರ್ ಗಳು. ಅರೇಬಿಕ್, ಚೀನಿ ಭಾಷೆಯ ಲಿಪಿಗಳನ್ನು ಈ ಜನ್ಮದಲ್ಲಿ ಕಲಿಯಲು ಸಾಧ್ಯವಿಲ್ಲ ಎಂದು ಅನ್ಯಭಾಷಿಕರಿಗೆ ಅನಿಸುತ್ತ ದಂತೆ. ಆದರೆ ಕನ್ನಡ ಹಾಗಲ್ಲ. ಕನ್ನಡ ಲಿಪಿಯನ್ನು ಸುಲಭವಾಗಿ ಕಲಿಯಬಹುದು. ಕಾರಣ ಇಷ್ಟೆ. ಕನ್ನಡದ ಎಲ್ಲ ಅಕ್ಷರಗಳು ಒಂದೋ ಪೂರ್ಣಚಂದ್ರ (full circle) ಇಲ್ಲವೇ ಅರ್ಧಚಂದ್ರ (half circle) ನಮ್ಮ ಕಣ್ಣಿನ ಆಕಾರವೂ ಪೂರ್ಣಚಂದ್ರ. ಹೀಗಾಗಿ ಅದೇ ಆಕಾರದ ಅಕ್ಷರಗಳನ್ನು ನಮ್ಮ ಕಣ್ಣು ಸ್ವಾಭಾವಿಕವಾಗಿ, ಸಹಜವಾಗಿ ಇಷ್ಟ ಪಡುತ್ತದೆ.

ಇಂಗ್ಲಿಷ್ ನಲ್ಲಿ C ಹಾಗೂ O ಈ ಎರಡು ಅಕ್ಷರಗಳನ್ನು ಹೊರತು ಪಡಿಸಿದರೆ, ಉಳಿದೆಲ್ಲ ಅಕ್ಷರಗಳಿಗೂ ಒಂದು ಗೀಟು (I) ಸಾಮಾನ್ಯ.
ಈ ಎಂದು ಬರೆದಾಗಲೂ ಒಂದು ಗೀಟಿದೆ, ಆ ಎಂದು ಬರೆದಾಗಲೂ ಒಂದು ಗೀಟಿದೆ. ಹೀಗೆ ಉಳಿದ ಅಕ್ಷರಗಳೂ. ಈ ಕಾರಣದಿಂದ ಇಂಗ್ಲಿಷ್ ಅಕ್ಷರಗಳನ್ನು ತುಸು ಬಾಗಿಸಿದರೆ, ಮಲಗಿಸಿದರೆ ಚೆಂದವಾಗಿ ಕಾಣುತ್ತದೆ. ಇದನ್ನು ಇಟಾಲಿಸೈಸ್ ಅಥವಾ ಐಟೆಲಿಸೈಸ್ (Italics) ಮಾಡೋದು ಅಂತಾರೆ. ಒಂದು ವಾಕ್ಯದಲ್ಲಿ ಒಂದು ಪದ ಅಥವಾ ಒಂದು ಪ್ಯಾರಾದಲ್ಲಿ ಒಂದು ವಾಕ್ಯ ಭಿನ್ನವಾಗಿ ಎದ್ದು ಕಾಣುವಂತೆ (ಹೈಲೈಟ್) ಮಾಡುವುದಕ್ಕೆ ಹೀಗೆ ಐಟೆಲಿಸೈಸ್ ಮಾಡುತ್ತಾರೆ.

ಹಾಗೆ ಮಾಡಿದರೆ ಚೆಂದ ಕಾಣುತ್ತದೆ. ಇದಕ್ಕೆ ಕಾರಣ ಇಂಗ್ಲಿಷ್ ಅಕ್ಷರಗಳಲ್ಲಿರುವ ಗೀಟು. ಕನ್ನಡದ ಎಲ್ಲ ಅಕ್ಷರಗಳೂ ಉಂಡೆ ಅಥವಾ ಅರ್ಧ ಉಂಡೆ, ಉರುಟ ಅಥವಾ ಅರ್ಧ ಉರುಟ. ಅವುಗಳನ್ನು ಬಾಗಿಸಿದರೆ, ಮಲಗಿಸಿದರೆ ಅರ್ಥಹೀನ. ಕಾರಣ ವರ್ತುಲವನ್ನು ಹೇಗೆ ಮಲಗಿಸಿದರೂ ಅದು ಉರುಟವೇ. ಹೀಗಾಗಿ ಕನ್ನಡದಲ್ಲಿ ಅಕ್ಷರಗಳನ್ನು ಐಟೆಲಿಸೈಸ್ ಮಾಡಬಾರದು, ಚೆಂದ ಕಾಣುವುದಿಲ್ಲ. ಆದರೆ ಕಂಪ್ಯೂಟರ್‌ನಲ್ಲಿ ಈ ಐಟೆಲಿಕ್ op on ಇರುವುದರಿಂದ ಭಿನ್ನವಾಗಿ ಎದ್ದು ಕಾಣಬೇಕೆಂದು ಐಟೆಲಿಸೈಸ್ ಮಾಡಿ ಅಕ್ಷರಗಳ ಮೂಲ ಸೊಬಗನ್ನು ಹಾಳು ಮಾಡುತ್ತಾರೆ.

ಇಂಗ್ಲಿಷ್‌ನ ಟೈಪೋಗ್ರಾಫರ್‌ಗಳ ಅಂತಃಸತ್ವವಿರುವುದು Be bold or italic never regular ಎಂಬ ವಾಕ್ಯದಲ್ಲಿ. ಆದರೆ ಕನ್ನಡದಲ್ಲಿ ಈ ಮಾತನ್ನು Be bold never regular ಎಂದು ಬದಲಿಸಬೇಕಾದೀತು. ಅಕ್ಷರಗಳನ್ನು ಕೆತ್ತುವ ಲಿಪಿಬ್ರಹ್ಮರಿಗೆ ಈ ಪ್ರಾಥಮಿಕ ಜ್ಞಾನ ಇರಬೇಕಾಗುತ್ತದೆ. ಇಂಗ್ಲಿಷಿನಲ್ಲಿ ಈ ಟೈಪೋಗ್ರಫಿ ಅದ್ಯಾವ ಅಗಾಧ ಪ್ರಮಾಣದಲ್ಲಿ ಬೆಳೆದಿದೆಯೆಂದರೆ, ಒಂದೊಂದು ಸನ್ನಿವೇಶವನ್ನು ಕಟ್ಟಿಕೊಡಲು ಅಕ್ಷರಗಳ ಸಮೂಹವೇ ಇದೆ, ಪ್ರತ್ಯೇಕ ಪ್ರಭೇದಗಳಿವೆ. ಉದಾಹರಣೆಗೆ, ಮದುವೆಯ ಆಹ್ವಾನಪತ್ರಿಕೆಯನ್ನು ಮುದ್ರಿಸ ಲೆಂದೇ ಹಲವಾರು ಫಾಂಟ್ ಗಳಿವೆ.

Nup al, Black chancery, French canon, Blackwood castle, Canterbury, Kings Cross ಈ ಪೈಕಿ ಮುಖ್ಯ ವಾದವು. ಈ ಅಕ್ಷರಗಳನ್ನು ನೋಡುತ್ತಿದ್ದಂತೆ ಶುಭವಿವಾಹದ ಮಂಗಳಪತ್ರ ಎಂದು ತಕ್ಷಣ ಭಾವಿಸಬಹುದು. ಆದರೆ ಈ ಸಂಗತಿ ಗೊತ್ತಿಲ್ಲ ದವರು ಕೆಲವೊಮ್ಮೆ ಈ ಫಾಂಟ್ ಗಳನ್ನು ಶಿವಗಣಾರಾಧನೆ ಅಥವಾ ವೈಕುಂಠ ಸಮಾರಾಧನೆ ಆಹ್ವಾನಪತ್ರಕ್ಕೂ ಬಳಸಿ ಬಿಡುತ್ತಾರೆ. ಅವರಿಗೆ ಒಟ್ಟಾರೆ ಯಾವುದಾದರೂ ಫಾಂಟ್ ಆದರಾಯಿತು. ಆದರೆ ಪ್ರತಿ ಫಾಂಟ್‌ಗೂ ಒಂದು ಗುಣವೈಶಿಷ್ಟ್ಯ, ಕಥನ, ಸ್ವಭಾವ, ವ್ಯಕ್ತಿತ್ವ, ಭಾವನೆ, ?ಲಿಂಗ್ ಇರುತ್ತವೆ ಎಂಬುದು ಗೊತ್ತಿರುವುದಿಲ್ಲ.

ಕೈ ಮೇಲೋ, ಬೆನ್ನ ಮೇಲೋ, ಎದೆ ಮೇಲೋ ಹಚ್ಚೆ (tatoo) ಹಾಕಿಸಿಕೊಳ್ಳುತ್ತಾರಲ್ಲ. ಅದಕ್ಕಾಗಿಯೇ ಇಂಗ್ಲಿಷ್ ನಲ್ಲಿ ಹಲವು ಫಾಂಟ್‌ ಗಳಿವೆ. ಮನಸ್ಸಿಗೆ ಬಂದ ಅಕ್ಷರಗಳನ್ನು ಬಳಸುವಂತಿಲ್ಲ. ಒಂದು ವೇಳೆ ಬಳಸಿದರೆ ಅದು ಚೆಂದ ಕಾಣುವುದಿಲ್ಲ, ಒಪ್ಪುವುದೂ ಇಲ್ಲ. ಹಚ್ಚೆ ಹಾಕಿಸಿಕೊಳ್ಳಲೆಂದೇ scrip na, Ginga, Billy Argel, Eutemia, Beyond wonderland ನಂಥ ಸುಂದರವಾದ ಅಕ್ಷರ ಗಳಿವೆ. ಕ್ರಿಸ್ ಮಸ್, ವ್ಯಾಲಂಟೈನ್ಸ್ ಡೇ, ಹ್ಯಾಲೋವೀನ್, ಈಸ್ಟರ್ ಮುಂತಾದ ಹಬ್ಬಗಳ ಶುಭಾಶಯಗಳನ್ನು ಹೇಳಲು ಪ್ರತ್ಯೇಕ ಅಕ್ಷರಗಳಿವೆ. ಹಸ್ತಾಕ್ಷರಗಳಿಗಾಗಿ ಏನಿಲ್ಲವೆಂದರೂ ಕನಿಷ್ಠ ಐನೂರು ಬಗೆಯ ಫಾಂಟ್‌ಗಳಿವೆ. ಅದರಲ್ಲೂ ಹೆಂಗಸರ ಕೈ ಬರಹವೇ ಬೇರೆ, ಗಂಡಸರದ್ದೇ ಬೇರೆ, ಚಿಕ್ಕಮಕ್ಕಳದ್ದೇ ಬೇರೆ.

Airplanes in the Night Sky ಎಂಬ ಜಾತಿಯ ಅಕ್ಷರವಿದೆ. ಅದನ್ನು ಬಳಸಿದರೆ ವಿಮಾನದಲ್ಲಿ ಕುಳಿತು ಬರೆದಿದ್ದು ಎಂಬ ಭಾವನೆ ಸುರಿಸುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲಂತೂ ಎಷ್ಟೊಂದು ಬಗೆಬಗೆಯ ಅಕ್ಷರಗಳು! ಮೊದಲ ‘ಪ್ರೇಮಪತ್ರ’ಕ್ಕಾಗಿಯೇ I love glitter ಎಂಬ ಅಕ್ಷರವಿದೆ. ಅದನ್ನು ಮಾತ್ರ ಶಿವಗಣಾರಾಧನೆಗೆ ಬಳಸಬಾರದಷ್ಟೆ. ವಿಚ್ಛೇದನಕ್ಕಾಗಿ Divorca ಎಂಬ ಫಾಂಟ್ ಇದೆ. ಈ ಅಕ್ಷರ ಗಳನ್ನು ನೋಡಿದರೆ ಒಂಥರಾ ವಿಷಾದ ಬರುವಂತಿದೆ. ಫಾಂಟ್ ಹಿನ್ನೆಲೆ ಗೊತ್ತಿಲ್ಲದವರು, ಈ ಫಾಂಟ್‌ನ್ನು ಮದುವೆ ಆಮಂತ್ರಣ ಪತ್ರಿಕೆ ಗೇನಾದರೂ ಬಳಸಿದರೆ ಎಂಥಾ ಅಧ್ವಾನವಾಗಬಹುದೆಂದು ಊಹಿಸಬಹುದು.

ಜಾಹೀರಾತು ಲೋಕದಲ್ಲಿ ಒಂದು ಮಾತಿದೆ. ಅದೇನೆಂದರೆ We sell the ideas and products. More importantly, we sell the fonts to customers. Ultimately fonts remain in the minds. ಪ್ರತಿಯೊಂದು ಕಂಪನಿಯೂ ತನ್ನನ್ನು ಜಗತ್ತಿಗೆ ಸಾದರಪಡಿಸಿಕೊಳ್ಳುವುದೇ ಈ ಫಾಂಟ್‌ಗಳಿಂದ. ಗ್ರಾಹಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವುದು ಈ ಅಕ್ಷರಗಳೇ. ಇದನ್ನೇ ಖ್ಯಾತ ವಿನ್ಯಾಸಕಾರ ಎಚ್.ವಿ.ಡೊರೇನ್ On the streets, you look at girls but I look at fonts ಎಂದು ಮಾರ್ಮಿಕವಾಗಿ ಹೇಳಿದ್ದಾನೆ. ನೈಕಿ ಶೂ ಕಂಪನಿಯ ಹೆಸರು ಪ್ರಪಂಚ ದಾದ್ಯಂತ ಜನಪ್ರಿಯ ಹಾಗೂ ಸುಪರಿಚಿತ. ಆ ಕಂಪನಿಯ ಹೆಸರಿಗೆ ಬಳಸಿದ ಫಾಂಟ್ -ಚುರಾ ಬೋಲ್ಡ್ ಐಟೆಲಿಕ್. ಈ ಫಾಂಟ್ ಬದಲು ಬೇರೆಯದನ್ನೇನಾದರೂ ಏಕಾಏಕಿ ಬಳಸಿದರೆ, ನಾಳೆ ಜಗತ್ತಿನಾದ್ಯಂತ ಅದರ ಮಾರಾಟ ಕುಸಿಯಬಹುದು. ಗ್ರಾಹಕರು ಗಲಿಬಿಲಿಗೊಳಗಾಗಬಹುದು.

ಇಷ್ಟು ವರ್ಷ ಆ ಫಾಂಟ್ ಮೂಲಕ ಆ ಬ್ರ್ಯಾಂಡ್ ಜತೆಗೆ ಬಾಂಧವ್ಯ ಹೊಂದಿದ್ದ ಗ್ರಾಹಕರಿಗೆ ಗೊಂದಲವಾಗಬಹುದು. ಫಾಂಟನ್ನು ದಲಿಸುವುದೆಂದರೆ, ಹೆಸರು ಬದಲಿಸಿದಷ್ಟೇ ಅಪಾಯಕಾರಿ ಎಂಬ ಭಾವನೆಯಿದೆ. ಹೀಗಾಗಿ ಫಾಂಟ್ ಜತೆ ಯಾರೂ ಚೆಲ್ಲಾಟ ಆಡುವುದಿಲ್ಲ. ನೈಕಿ ಕಂಪನಿಗೆ ಬಳಸಿದ ಫಾಂಟ್ ಯಾವುದೆಂದು ಗೊತ್ತಿರದೇ ಇರಬಹುದು. ಆದರೆ ಅದರ ಮಾಟ, ಚಹರೆ, ನೋಟ, ಲಕ್ಷಣಗಳೆಲ್ಲ ಗ್ರಾಹಕರ ಮನಸ್ಸಿನಲ್ಲಿ ಬೆಚ್ಚಗೆ ಕುಳಿತಿರುತ್ತದೆ.

ಈ ಕಾರಣಕ್ಕೆ ಅಕ್ಷರಗಳನ್ನು ಕೆತ್ತುವವನದು ತೀರಾ ಮಹತ್ವದ ಪಾತ್ರ. ನಿಜವಾದ ಅರ್ಥದಲ್ಲಿ ಇವನೇ ಅಕ್ಷರಶಿಲ್ಪಿ ಅಥವಾ wordsmith. ನಮ್ಮ ಓದನ್ನು ಶುರು ಮಾಡುವುದು ಹಾಗೂ ಸಲೀಸು ಮಾಡುವುದೇ ಈ ಫಾಂಟ್‌ಗಳು. ಅಕ್ಷರಶಾಸ್ತ್ರಜ್ಞರ ಪ್ರಕಾರ ಒಂದೇ ಸಮಯದಲ್ಲಿ ಅಕ್ಷರಗಳನ್ನು ನೋಡುವುದು ಹಾಗೂ ಓದುವುದು ಅಸಾಧ್ಯ. ಅವೆರಡು ಪ್ರತ್ಯೇಕ ಕ್ರಿಯೆಗಳು. ಅವುಗಳನ್ನು ನೋಡಿದಾಗ ಆಪ್ತವಾದರೆ, ಪ್ರಸಂಗದ ವಾಸನೆಯನ್ನು ಬಿಟ್ಟುಕೊಡುವಂತಿದ್ದರೆ, ವಸ್ತುವಿನ ಮೂಡನ್ನು ತಿಳಿಸುವಂತಿದ್ದರೆ ಓದು ಸಹಜವೆನಿಸುತ್ತದೆ.

ಇದನ್ನೇ Typography is what language looks like ಎಂದೂ ಹೇಳುವುದುಂಟು. ಫಾಂಟ್‌ಗಳು ಭಾಷೆಗೆ ಬಾಸಿಂಗ
ತೊಡಿಸುತ್ತವೆ, ಭಾಷೆಗೆ ಅಸ್ತಿತ್ವದ ಅಹಮಿಕೆಯನ್ನು ನೀಡುತ್ತವೆ ಎಂದು ವಾದಿಸುವವರೂ ಇದ್ದಾರೆ. Fonts turn words into stories which will remain as strong and unforge able images ಎಂಬ ಮಾತು ಸತ್ಯವಾದುದು.

ಒಂದು ಭಾಷೆ ಸೌಂದರ್ಯಪ್ರಜ್ಞೆಯಿಂದ, ಆತ್ಮಸ್ಥೈರ್ಯ ದಿಂದ ಹಾಗೂ ಆಕರ್ಷಕ ನೋಟದಿಂದ ಗೆಲ್ಲಬೇಕಾದರೆ, ಅದಕ್ಕೆ ಬಗೆಬಗೆಯ ಅಕ್ಷರಗಳ ಸಹಕಾರ, ಬೆಂಬಲ ಬೇಕು. ಭಾಷೆಯ ಶ್ರೀಮಂತಿಕೆ ಅಕ್ಷರಗಳ ವಿನ್ಯಾಸದ ವಿಸ್ತಾರದಲ್ಲೂ ಸಂಭ್ರಮಿಸಬೇಕು. ಆಗ ಭಾಷೆ ಕಲಾತ್ಮಕವಾಗಿಯೂ ಗಮನ ಸೆಳೆಯುತ್ತದೆ. ಈ ಎಲ್ಲ ವಿಚಾರಗಳ ಮೂಸೆಯಲ್ಲಿ ‘ವಿಶ್ವವಾಣಿ’ ಶೀರ್ಷಿಕೆಯನ್ನು ವಿಶೇಷವಾಗಿ ರೂಪಿಸಿ ದೆವು. ಇದು ಕನ್ನಡಕ್ಕೆ ಹೊಸ ಅಕ್ಷರ. ನನಗೆ ಜಾತಿಗಳಲ್ಲಿ ನಂಬಿಕೆಯಿಲ್ಲ. ಆದರೆ ಅಕ್ಷರಗಳ ಜಾತಿಯಲ್ಲಿ ವಿಪರೀತ ಹುಚ್ಚು. ಈ ‘ಜಾತಿ ಪ್ರೇಮ’ ಭಾಷೆಯ ಬೆಳವಣಿಗೆಗೂ ಸಹಾಯಕ. ಈಗ ಹೇಳಿ, ಫಾಂಟುಗಳ ನಂಟು ಇಲ್ಲದಿದ್ದರೆ ಭಾಷೆಗೆ ಇಡಗಂಟು ಉಂಟೇ?