Thursday, 12th December 2024

ರಾಜಕೀಯ ಕ್ಷೇತ್ರದಲ್ಲಿ ಕಾಲ್ಚೆಂಡಾಟ

ಸಂಗತ

ವಿಜಯ್ ದರಡಾ

ಕತಾರಿನ ಲುಸೈಲ್ ಕ್ರೀಡಾಂಗಣದಲ್ಲಿ ಆರ್ಜೆಂಟೈನಾದ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ಮತ್ತು ಫ್ರಾನ್ಸಿನ ಸ್ಟಾರ್ ಆಟಗಾರ
ಕೈಲಿಯನ್ ಎಂಬಪೆ ನಡುವೆ ನಡೆದ ಹಣಾಹಣಿ ರೋಚಕವಾಗಿತ್ತು. ಫುಟ್ಬಾಲ್ ಪ್ರಿಯರಿಗಂತೂ ರಸದೌತಣವನ್ನೇ ಒದಗಿಸಿತ್ತು. ನಾನೂ ಈ ಆಟವನ್ನು ಬಹಳ ಉತ್ಸುಕತೆಯಿಂದಲೇ ವೀಕ್ಷಿಸಿದ್ದೆ. ಆಟದ ತೀವ್ರತೆ ಹೆಚ್ಚುತ್ತಿದ್ದಂತೆ ನನ್ನ ಎದೆಬಡಿತದ ವೇಗವೂ ಹೆಚ್ಚಿತ್ತು. ಆದರೆ ನನ್ನ ಮನದೊಳಗೊಂದು ತಾಕಲಾಟ ಇದ್ದೇ ಇತ್ತು.

ವಿಶ್ವಾದ್ಯಂತ ನಡೆಯುತ್ತಿರುವ ರಾಜಕೀಯ ಮೇಲಾಟ ದಲ್ಲಿ ದೊಡ್ಡ ದೇಶಗಳು, ಪ್ರಭಾವೀ ದೇಶಗಳು ಸಣ್ಣ ಸಣ್ಣ ದೇಶಗಳಿಗೆ ಇಂತಹ ಕ್ರೀಡೋತ್ಸವ ನಡೆಸುವ ಅವಕಾಶವನ್ನು ಯಾಕೆ ಕೊಡುತ್ತಿವೆ. ಅಂದರೆ ಸಣ್ಣ ದೇಶಗಳು ಕೂಡ ಮುನ್ನೆಲೆಗೆ ಬರಲಿ ಎಂಬುದೇ ಅದರ ಹಿಂದಿನ ಉದ್ದೇಶವಾಗಿರ ಬಹುದು. ಅದಿರಲಿ ನಮ್ಮ ದೇಶದಲ್ಲಿ ಇಂತಹ ಫುಟ್ಬಾಲ್ ಕ್ರೀಡೋತ್ಸವ ನಡೆಯು ವುದು ಯಾವಾಗ? ಬಣ್ಣಗೆಟ್ಟು ಸಂಬಂಧಗಳನ್ನು ಹದಗೆಡಿಸಿಕೊಂಡಿರುವ ಇಡೀ ವಿಶ್ವವನ್ನು ಬೆಸೆಯಬಲ್ಲ ಶಕ್ತಿ ಇರುವುದು ಸಂಗೀತ ಮತ್ತು ಕ್ರೀಡೆಗೆ ಮಾತ್ರ. ಆದರೆ ರಾಜಕೀಯ ಎಡೆ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡಿದೆ.

ಅಮೆರಿಕ ತನಗೆ ಬೇಕೆಂದಾಗ ಪಾಕಿಸ್ತಾನವನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿ ಮುದ್ದಾಡುತ್ತದೆ. ಬೇಡವೆನಿಸಿದಾಗ ಒದ್ದುಬಿಡು ತ್ತದೆ. ಅಂತೆಯೇ ರಷಿಯನ್ ಅಧ್ಯಕ್ಷ ಪುಟಿನ್ ತನ್ನ ಸುತ್ತಲಿನ ಸಣ್ಣಪುಟ್ಟ ದೇಶಗಳನ್ನು ಒದ್ದು ದೂರ ತಳ್ಳಿ ಬಿಟ್ಟಿದ್ದಾರೆ. ಅದರ ಭಾಗವಾಗಿ ಉಕ್ರೇನ್ ಧ್ವಂಸವಾಗಿದೆ. ಅಮೆರಿಕ ಉತ್ತರ ಕೊರಿಯಾವನ್ನು ಒದ್ದು ಘಾಸಿ ಗೊಳಿಸುತ್ತಲೇ ಇದೆ. ಅಮೆರಿಕ, ರಷ್ಯಾ, ಚೀನಾ ದಂತಹ ದೊಡ್ಡ ದೇಶಗಳು ಸಣ್ಣಪುಟ್ಟ ರಾಷ್ಟಗಳಲ್ಲಿ ಅಭದ್ರತೆ ಮೂಡಿಸುವ ಕೆಲಸವನ್ನು ನಿರಂತರ ಮಾಡುತ್ತಲೇ ಇರುತ್ತದೆ.

ಇನ್ನು ಆಫ್ರಿಕನ್ ದೇಶಗಳ ವಿಚಾರಕ್ಕೆ ಬಂದರೆ ಅಲ್ಲಿನ ಸರ್ವಾಧಿಕಾರಿ ಮನೋಪ್ರವೃತ್ತಿಯ ಕೆಲವರು ತಮ್ಮ ದೇಶದೊಳಗಿನ ಜನರನ್ನೇ ಕಾಲ್ಚೆಂಡಿನಂತೆ ಒದ್ದು ಹೈರಾಣಾ ಗಿಸುತ್ತಾರೆ. ಅಫ್ಘಾನಿಸ್ತಾನದಲ್ಲೂ ಇದೇ ನಡೆದಿದೆ. ಅಲ್ಲಿನ ಕೋಟಿಗಟ್ಟಲೆ ಜನ ನಿರಾಳವಾಗಿ ಉಸಿರಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಅವರ ಬದುಕು ಕೂಡ ಫುಟ್ಬಾಲ್‌ನಂತಾಗಿದೆ. ಯಾವಾಗ ಎಷ್ಟು ಹೊತ್ತಿಗೆ ತಮಗೆ ಒದೆ ಬೀಳುತ್ತದೆಯೋ ಅವರಿಗೇ ಗೊತ್ತಿಲ್ಲ. ಕಾಲ್ಚೆಂಡಾಟದಲ್ಲಿ ಗೆಲುವೆಂಬುದು ಸಾಧಿತವಾಗಬೇಕಾ ದರೆ ಚೆಂಡು
ಗೋಲ್ ಪೋಸ್ಟನ್ನು ತಲುಪಬೇಕು. ಸಣ್ಣ ಪುಟ್ಟ ದೇಶಗಳು ಇಂದು ಕಾಲ್ಚೆಂಡು ಒದೆತಕ್ಕೆ ಗುರಿಯಾಗುತ್ತವೆ ಆದರೆ ಅವಕ್ಕೆ ಗೋಲ್‌ಪೋಸ್ಟಿಗೆ ಹೋಗುವುದು ಸಾಧ್ಯವಾಗುವುದಿಲ್ಲ.

ಈ ಬಾರಿಯ ಫುಟ್ಬಾಲ್ ಪಂದ್ಯ ವೀಕ್ಷಣೆ ಮಾಡಿದಾಗ ನನಗೆ ೨೦೧೮ರ ಫಿಫಾ ವಿಶ್ವಕಪ್ಪಿನ ಸಂದರ್ಭದ ಒಂದು ಚಿತ್ರಣ ನೆನಪಿಗೆ ಬಂತು. ಅಂದು ಫೈನಲ್ ಪಂದ್ಯದ ದಿನ ಸಣ್ಣ ಮಳೆ ಹನಿಯಾಡುತ್ತಿತ್ತು. ಫೀಫಾ ಅಧ್ಯಕ್ಷ ಗಿಯಾನಿ ಇನಾಂಟಿನೋ ಹಿಂದುಗಡೆ
ಒಬ್ಬ ವ್ಯಕ್ತಿ ಛತ್ರಿ ಹಿಡಿದು ಅಧ್ಯಕ್ಷರಿಗೆ ಮಳೆ ಬೀಳದಂತೆ ರಕ್ಷಣೆಯಲ್ಲಿ ನಿರತನಾಗಿದ್ದ. ಆದರೆ ಪುಟಿನ್ ತಲೆಯ ಮೇಲೆ ಛತ್ರಿ ಇರಲಿಲ್ಲ. ಇಲ್ಲಿ ಫಿಫಾ ಅಧ್ಯಕ್ಷನ ಹೆಚ್ಚುಗಾರಿಕೆ ಎದ್ದು ಕಾಣುವಂತಿತ್ತು. ಫಿಫಾ ಸ್ಥಾಪನೆಯಾಗಿದ್ದೇ ವಿಶ್ವದಲ್ಲಿ ಭ್ರಾತೃತ್ವವನ್ನು ಸೃಷ್ಟಿ ಮಾಡುವುದಕ್ಕೆ. ಕ್ರೀಡೋತ್ಸಾಹದಲ್ಲಿ ಅನೇಕ ದೇಶದ ಅಭಿಮಾನಿಗಳು ತಮ್ಮ ದೇಶದ ತಂಡದ ಪರ ಅತ್ಯುತ್ಸಾಹ
ಪ್ರದರ್ಶನ ಮಾಡುತ್ತಾರೆ. ಅದು ಸಹಜ. ಆದರೆ ಎಂದೂ ಕೂಡ ಕ್ರೀಡೆ ಹಿಂಸೆಗೆ ಅವಕಾಶ ಮಾಡಿಕೊಟ್ಟದ್ದಿಲ್ಲ.

ದೇಶದ ಭವಿಷ್ಯವನ್ನು ಕ್ರೀಡೆ ಹೇಗೆ ಎತ್ತರಕ್ಕೇರಿಸ ಬಲ್ಲದು ಎಂಬುದಕ್ಕೆ ಆರ್ಜೆಂಟೀನಾ ಉತ್ತಮ ಉದಾ ಹರಣೆಯೆನಿಸುತ್ತದೆ. ೫೦ ವರ್ಷಗಳ ಹಿಂದೆ, ಶ್ರೀಮಂತ ಮತ್ತು ಪ್ರಭಾವಶಾಲಿ ದೇಶವಾಗಿ ಹೊರಹೊಮ್ಮುವ ಸಾಮರ್ಥ್ಯವನ್ನು ಅರ್ಜೆಂಟೀನಾ ತೋರಿತ್ತು. ಆದರೆ ಇಂದಿಗೂ ಹತ್ತರಲ್ಲಿ ನಾಲ್ಕು ಮಂದಿ ಬಡವರೇ ಅಲ್ಲಿದ್ದಾರೆ. ಸರಿಸುಮಾರು ಅರ್ಧದಷ್ಟು ಜನಸಂಖ್ಯೆ ಬಡತನದ ಇದೆ. ಇಷ್ಟಿzಗ್ಯೂ ಆ ದೇಶದ ಜನ ಫುಟ್ಬಾಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸುತ್ತಾರೆ ಮತ್ತು ವಿಶ್ವನಕಾಶೆಯಲ್ಲಿ ತಮ್ಮದೇ ಆದ ಸ್ಥಾನಮಾನ ಉಳಿಸಿಕೊಂಡು ಬಂದಿದ್ದಾರೆ.

ನನ್ನ ಮನಸ್ಸಿನಲ್ಲಿ ಎದ್ದಂತೆ ನಿಮ್ಮ ಮನಸ್ಸಲ್ಲೂ ಇಂತಹ ಪ್ರಶ್ನೆಗಳು ಎದ್ದಿರಬಹುದೆನಿಸುತ್ತದೆ. ನಮ್ಮ ದೇಶದ ಒಂದು ರಾಜ್ಯ ಕ್ಕಿಂತಲೂ ಕಡಿಮೆ ಜನಸಂಖ್ಯೆನ ಇರುವ ಪುಟ್ಟ ರಾಷ್ಟ್ರ ಫುಟ್ಬಾಲ್‌ನ ವಿಶ್ವಮಟ್ಟದ ಕ್ರೀಡಾ ಆಯೋಜನೆ ಮಾಡುವುದು ಹೇಗೆ ಸಾಧ್ಯವಾಯ್ತು ಎಂಬ ಪ್ರಶ್ನೆ ನಮ್ಮೆಲ್ಲರ ಮನದಲ್ಲಿ ಏಳುವುದು ಸಹಜ. ೧೩೦ ಕೋಟಿಗೂ ಮೀರಿದ ಜನಸಂಖ್ಯೆಯುಳ್ಳ ನಮ್ಮ ದೇಶಕ್ಕೆ ಅದ್ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದೂ ಪ್ರಶ್ನೆ.

ನಮ್ಮಲ್ಲಿ ಫುಟ್ಬಾಲ್ ಆಟದ ಕುರಿತಾಗಿ ಆಸಕ್ತಿ ಇಲ್ಲವೆಂದರ್ಥವೇ? ಹಾಗೇನೂ ಅಂದುಕೊಳ್ಳಬೇಡಿ. ಪಶ್ಚಿಮಬಂಗಾಲ, ಕೇರಳ, ಮಹಾ ರಾಷ್ಟ, ಗೋವಾದಿಂದ ಅಸ್ಸಾಮಿನ ತನಕ, ಅರುಣಾಚಲ ಪ್ರದೇಶ ಮೇಘಾಲಯ, ತ್ರಿಪುರಾ, ನಾಗಾಲ್ಯಾಂಡ್, ಮಣಿಪುರ ಅಷ್ಟೇ ಏಕೆ, ಕಾಶ್ಮೀರದ ಭಾಗಗಳಲ್ಲೂ ಮಕ್ಕಳು ಕಾಲ್ಚೆಂಡಾಟ ಆಡುತ್ತಾರೆ. ಅವರುಗಳಲ್ಲೂ ಪೀಲೆ, ರೊನಾಲ್ಡೋ, ಮೆಸ್ಸಿ ತರಹದ ಅದ್ಭುತ ಆಟಗಾರರಿರ ಬಹುದು. ಅವರಲ್ಲಿ ಉತ್ಸಾಹ, ಶಕ್ತಿ ತುಂಬುವ ಕೆಲಸ ಆಗಬೇಕು, ಅಷ್ಟೆ. ತಪ್ಪುಗಳಾಗುತ್ತಿರುವುದು
ಇ. ಹಾಗಾಗಿಯೇ ಅಂತಾರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ ನಮ್ಮ ಸ್ಥಾನ ಬಹಳ ದೂರದಲ್ಲಿದೆ.

ನಮ್ಮಲ್ಲಿ ಉತ್ಸಾಹದ ಕೊರತೆ ಎಂದೂ ಇರಲಿಲ್ಲ. ೧೯೪೮ರ ಲಂಡನ್ ಸಮ್ಮರ್ ಒಲಿಂಪಿಕ್ಸ್ ನಲ್ಲಿ ಫ್ರಾನ್ಸ್ ವಿರುದ್ಧ ಆಟವಾಡಿದ ನಮ್ಮ ದೇಶದ ಫುಟ್ಬಾಲ್ ತಂಡದ ೧೧ ಆಟಗಾರರ ಪೈಕಿ ೮ ಮಂದಿ ಕಾಲಿಗೆ ಶೂಸ್ ಇಲ್ಲದೆಯೇ ಮೈದಾನ ಪ್ರವೇಶಿಸಿದ್ದರು. ಆ ಬಗ್ಗೆ ನಮ್ಮ ತಂಡದ ಕ್ಯಾಪ್ಟನ್‌ರನ್ನು ಯಾರೋ ಪ್ರಶ್ನಿಸಿದಾಗ ಅವರು ನಕ್ಕು ನಾವು ಫುಟ್ಬಾಲ್ ಆಡುತ್ತೇವೆ, ಆದರೆ ನೀವು ಆಡುತ್ತಿರುವುದು ಬೂಟ್  ಬಾಲ್ ಎಂದಿದ್ದರು.

ವಿಷಾದವೆಂದರೆ ನಮ್ಮ ಸರಕಾರಗಳಿಗೆ ಕ್ರೀಡಾಸಕ್ತಿ ಹೆಚ್ಚಾಗಿ ಇಲ್ಲ. 1982ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ವಿಶೇಷ ಕಾಳಜಿಯ ಕಾರಣದಿಂದಾಗಿ ದೆಹಲಿಯಲ್ಲಿ ಏಷಿಯನ್ ಗೇಮ್ಸ ಆಯೋಜನೆಯಾ ಗಿತ್ತು. ಆ ದಿನಗಳಲ್ಲಿ ದೆಹಲಿ ವಿಶ್ವದೆಡೆ ಪ್ರಸಿದ್ಧ ವಾಗಿತ್ತು. ಅದೇ ಕಾಲದಲ್ಲಿ ಭಾರತದಲ್ಲಿ ಕಲರ್ ಟೆಲಿವಿಷನ್ ಎಡೆ ವ್ಯಾಪಕವಾಗಿತ್ತು. ಅಂತಹ ಕ್ರೀಡಾಕೂಟಗಳಿಗೆ ಭಾರತ ಹೆಚ್ಚು ಹೆಚ್ಚು ಉತ್ತೇಜನ ಕೊಟ್ಟಿದ್ದಲ್ಲಿ ಇಂದು ಅದು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವುದು ಸಾಧ್ಯವಿತ್ತು. ಆಟ ಎಲ್ಲ ಮಕ್ಕಳಿಗೂ ಪ್ರಿಯ. ಆದರೆ ನಮ್ಮಲ್ಲಿ ಸವಲತ್ತುಗಳ ಕೊರತೆ ಇದೆ. ಉತ್ತಮ ಕ್ರೀಡಾಂಗಣಗಳ ಕೊರತೆಯೂ ಇದೆ. ಇಂದು ನಮ್ಮ ದೇಶದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಒಂದೇ ಎಂಬ ಅಭಿಪ್ರಾಯವೇ ವ್ಯಾಪಕವಾಗಿದೆ.

ನಾನೂ ಯುವಕನಾಗಿದ್ದಾಗ ಕ್ರಿಕೆಟ್‌ನತ್ತ ಆಕರ್ಷಿತನಾಗಿದ್ದೆ. ಆದರೆ, ಒಂದು ಕ್ರೀಡೆಗೆ ಪ್ರಾಮುಖ್ಯ ಕೊಟ್ಟು ಉಳಿದವನ್ನು ಉಪೇಕ್ಷೆ ಮಾಡುವುದು ಸರಿಯಲ್ಲ ಎಂಬುದು ನನ್ನ ಅಭಿಮತ. ನಮ್ಮಲ್ಲಿ ಖಾಸಗೀ ರಂಗದ ಕೆಲ ಸಂಸ್ಥೆಗಳು ಫುಟ್ಬಾಲ್‌ಗೆ ಉತ್ತೇಜನ ಕೊಡುತ್ತ ಬಂದಿವೆ. ಆದರೆ ಅದು ಸಾಕಾಗದು. ಸರಕಾರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ನಮ್ಮ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿರ್ಧಾರ ತೆಗೆದುಕೊಳ್ಳಬೇಕು. ಇದರಿಂದ
ಮೂಲಭೂತ ಸೌಕರ್ಯಗಳನ್ನು ಒದಗಿಸಿ ದಂತೂ ಆಗುತ್ತದೆ, ಮಕ್ಕಳಲ್ಲಿ ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸಿದಂತೂ ಆಗುತ್ತದೆ.

ರಾಜ್ಯಗಳಲ್ಲಿ ಮುಖ್ಯಮಂತ್ರಿ ಗಳು ಕ್ರೀಡೆಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವತ್ತ ಮನಸ್ಸು ಮಾಡಬೇಕು. ಮುಂದೊಂದು ದಿನ ನಮ್ಮ ಫುಟ್ಬಾಲ್ ಆಟಗಾರರು ಗೆಲುವಿನತ್ತ ದಾಪುಗಾಲು ಹಾಕುವುದನ್ನು ನಾವು ನೋಡಿ ಸಿಳ್ಳೆ ಹೊಡೆದು ಕುಣಿದು ಕುಪ್ಪಳಿಸುವಂತಾಗಬೇಕು.

Read E-Paper click here