Saturday, 14th December 2024

ವಿದೇಶ ಪ್ರವಾಸಕ್ಕೆ ಯಾರು ಹೋಗಬೇಕು, ಯಾರು ಹೋಗಬಾರದು ?

ಇದೇ ಅಂತರಂಗ ಸುದ್ದಿ

vbhat@me.com

ಪ್ರಧಾನಿಯಾಗಿ ಮೋದಿಯವರು ಆಗಾಗ ವಿದೇಶ ಪ್ರವಾಸ ಮಾಡುವುದಕ್ಕೆ ಆಗಾಗ ಚರ್ಚೆ ಆಗುತ್ತದೆ. ಅವರು ಭಾರತಕ್ಕೆ ಆಗಾಗ ಬರುತ್ತಾರೆ ಎಂದೂ ಕೆಲವರು ವ್ಯಂಗ್ಯ ನುಡಿಯುತ್ತಿದ್ದರು. ಕೋವಿಡ್ ನಂತರ ಈ ಟೀಕೆ ಕಮ್ಮಿಯಾಗಿದೆ.

ಆದರೆ ಪ್ರಧಾನಿ ಆಗುವುದಕ್ಕಿಂತ ಮುನ್ನ, ಗುಜರಾತಿನ ಮುಖ್ಯಮಂತ್ರಿ ಯಾಗಿದ್ದಾಗಲೇ ಅವರು, ಅರವತ್ತಕ್ಕಿಂತ ಹೆಚ್ಚು ದೇಶ ಗಳಿಗೆ ಹೋಗಿದ್ದರು. ಗುಜರಾತಿನ ಅಭಿವೃದ್ಧಿಗೆ ಅವರ ವಿದೇಶ ಪ್ರವಾಸವೂ ಒಂದು ಕಾರಣ ಎಂಬುದು ಗಮನಾರ್ಹ. ಅವರು ಮುಖ್ಯಮಂತ್ರಿಯಾಗಿzಗಲೇ ಇಸ್ರೇಲ್ ಸೇರಿದಂತೆ ಹಲವು ದೇಶಗಳ ಪ್ರಧಾನಿಗಳ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು.

ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರು ವಿದೇಶಕ್ಕೆ ಹೋಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರು ಗುಜರಾತಿಗೆ ಒಮ್ಮೆ ಭೇಟಿನೀಡಬೇಕು. ವಿದೇಶಗಳಲ್ಲಿ ಕಂಡ ಉತ್ತಮ ವ್ಯವಸ್ಥೆಗಳನ್ನು ಅವರು ಗುಜರಾತಿನಲ್ಲಿ ಆಗಲೇ ಜಾರಿಗೊಳಿಸಿ ದಶಕಗಳೇ ಸಂದಿವೆ.

ಬಿಜೆಪಿ ಮುಖ್ಯಮಂತ್ರಿಗಳು best practice ಬಗ್ಗೆ ರೆಯವರತ್ತ ನೋಡಬೇಕಿಲ್ಲ. ಮೋದಿಯವರಿಗಿಂತ ಉತ್ತಮ ನಿದರ್ಶನ ಅವರಿಗೆ ಸಿಗಲು ಸಾಧ್ಯವಿಲ್ಲ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿದೇಶ ಪ್ರವಾಸ ಹೋಗದಿರುವುದೇ ಒಂದು ಶ್ರೇಷ್ಠತೆ, ಅದೇ ಒಂದು ಸಂಪನ್ನತೆ (virtue) ಎಂದು ಭಾವಿಸಿದಂತಿದೆ. ವಿದೇಶಕ್ಕೆ ಹೋದರೆ ತಮ್ಮ ಕಾಮನ್ ಮ್ಯಾನ್ ಇಮೇಜಿಗೆ ಧಕ್ಕೆ ಬಂದೀತು ಎಂದು ಅವರು ಭಾವಿಸಿದಂತಿದೆ. ಹಾಗೆ ನೋಡಿದರೆ, ಈ ದಿನಗಳಲ್ಲಿ ವಿದೇಶಗಳಿಗೆ
ಹೋಗದಿರುವುದು ಅವರ ಬಲಹೀನತೆ ಎಂದೇ ಭಾವಿಸಬೇಕಾಗುತ್ತದೆ. ಕೆಲವರು ವಿದೇಶಗಳಿಗೆ ಹೋಗುವುದಿಲ್ಲ.

ಕಾರಣ, ಹೋಗಿ ಬರುವುದರೊಳಗೆ ತಮ್ಮ ಕುರ್ಚಿ ಮೇಲೆ ಬೇರೆಯವರು ಬಂದು ಕುಳಿತುಬಿಟ್ಟಾರು ಎಂಬ ಭಯ! ವಿದೇಶ ಗಳಿಗೆ ಹೋಗುವುದು ಏಕೆ ಎಂಬುದು ಅಷ್ಟೇ ಮುಖ್ಯ. ಮೋಜು-ಮಸ್ತಿ ಮಾಡಲು, ಮಜಾ ಉಡಾಯಿಸಲು ಯಾವ ಮುಖ್ಯಮಂತ್ರಿಯೂ ಹೋಗುವುದಿಲ್ಲ. ಅವರು ಅಲ್ಲಿಗೆ ಹೋದರೆ ನಿಶ್ಚಿತವಾಗಿಯೂ ಅದರ ಪ್ರಯೋಜನ ರಾಜ್ಯಕ್ಕೆ ಆಗುತ್ತದೆ. ತಾವು ಕಂಡ ಒಂದು ಉತ್ತಮ ಸಂಗತಿಯನ್ನಾದರೂ ನಮ್ಮಲ್ಲಿ ಅನುಷ್ಠಾನಗೊಳಿಸಲು ಸಹಾಯಕವಾಗುತ್ತದೆ. ಅಲ್ಲದೇ
ಸ್ವತಃ ಮುಖ್ಯಮಂತ್ರಿಯವರು ಅಪ್ಡೇಟ್ ಆಗಲು ಸಹಾಯಕವಾಗುತ್ತದೆ.

ಪ್ರತಿ ವರ್ಷ ನಮ್ಮ ಶಾಸಕರನ್ನು ಸರಕಾರ ಹತ್ತು-ಹನ್ನೆರಡು ದಿನಗಳ ಕಾಲ ಹಲವು ದೇಶಗಳಿಗೆ ಅಧ್ಯಯನಕ್ಕೆಂದು ವಿದೇಶ ಗಳಿಗೆ ಕಳಿಸಿಕೊಡುತ್ತದೆ. ಅದರಿಂದ ಇಲ್ಲಿ ತನಕ ಯಾವ ಪ್ರಯೋಜನ ಆಗಿದೆಯೋ, ಗೊತ್ತಿಲ್ಲ. ಶಾಸಕರು ವಿದೇಶ ಸುತ್ತಿ ಬಂದರೆ ಅದರ ಪ್ರಯೋಜನ ಅವರಿಗೆ ಆದೀತೇ ಹೊರತು ಜನರಿಗೆ ಆಗುವುದಿಲ್ಲ. ಅವರು ಯಾವ ನಿರ್ಧಾರಗಳನ್ನು
ತೆಗೆದುಕೊಳ್ಳಲಾರರು.

ಶಾಸಕರು ವಿದೇಶ ಪ್ರವಾಸ ಹೋದರೆ, ದಮಡಿ ಪ್ರಯೋಜನವೂ ಇಲ್ಲ. ಅನೇಕರು ಕುಡಿದು-ತಿಂದು, ಚೈನಿ ಮಾಡಿ, ಶಾಪಿಂಗ್ ಮಾಡಿಮರಳುತ್ತಾರೆ. ಅಂಥ ಪ್ರವಾಸಗಳಿಂದ ಏನೂ ಪ್ರಯೋಜನ ಇಲ್ಲ. ವಿದೇಶಗಳಿಗೆ ಹೋಗಿ ಬಂದ ಶಾಸಕರು ತಮ್ಮ ಪ್ರವಾಸ ಅಥವಾ ಅಧ್ಯಯನದ ವರದಿಗಳನ್ನು ಸರಕಾರಕ್ಕೆ ಸಲ್ಲಿಸಬೇಕು. ಆದರೆ ಯಾರೂ ಅಂಥ ವರದಿಗಳನ್ನು ಸಲ್ಲಿಸುವುದೂ ಇಲ್ಲ. ಒಂದು ವೇಳೆ ಸಲ್ಲಿಸಿದರೂ, ಸರಕಾರ ಗಂಭೀರವಾಗಿ ಅದನ್ನು ತೆರೆದು ಸಹ ನೋಡುವುದಿಲ್ಲ. ಇದು ಜನರ ಹಣದ ಹಗಲು ದರೋಡೆ.

ಒಮ್ಮೆ ಕರ್ನಾಟಕದಿಂದ ಹೀಗೆ ವಿದೇಶಕ್ಕೆ ಪ್ರವಾಸ ಹೋದ ಶಾಸಕರ ನಿಯೋಗ, ಯೂರೋಪಿನ ದೇಶವೊಂದರ ಪಾರ್ಲಿ ಮೆಂಟಿಗೆ ಭೇಟಿನೀಡಿತ್ತು. ಅಲ್ಲಿನ ಸಭಾಧ್ಯಕ್ಷರು (ಸ್ಪೀಕರ್) ನಮ್ಮ ಶಾಸಕರನ್ನುದ್ದೇಶಿಸಿ, ತಮ್ಮ ದೇಶದ ಸಂಸದೀಯ ವ್ಯವಸ್ಥೆ, ನಡಾವಳಿಗಳ ಬಗ್ಗೆವಿವರಿಸುವಾಗ, ರಾಜ್ಯದ ನಿಯೋಗದಲ್ಲಿದ್ದ ಶಾಸಕರೊಬ್ಬರು, ‘ನಿಮ್ಮ ದೇಶದಲ್ಲಿ ಎಸ್ಸಿ, ಎಸ್ಟಿಗಳಿಗೆ ಮೀಸಲು ಇವೆಯಾ? ಒಂದು ವೇಳೆ ಇದ್ದರೆಎಷ್ಟು ಪರ್ಸೆಂಟ್ ಮೀಸಲು ಇದೆ?’ ಎಂದು ಕೇಳಿ, ಇಡೀ ನಿಯೋಗದ ಮರ್ಯಾದೆ ಕಳೆದಿದ್ದರು.

ಆ ಸ್ಪೀಕರ್ ಮಹಾಶಯನಿಗೆ, ಎಸ್ಸಿ, ಎಸ್ಟಿ, ಮೀಸಲು, ಬದನೇಕಾಯಿ ಅಂದ್ರೆ ಏನಂತ ಅರ್ಥವೇ ಆಗಲಿಲ್ಲ. ಎಲ್ಲರೂ ಮುಖ ಮುಖ ನೋಡಿಕೊಂಡರು. ಪ್ರಶ್ನೆ ಕೇಳಿದ ಶಾಸಕನನ್ನು ರಾಜ್ಯ ನಿಯೋಗದಲ್ಲಿದ್ದ ಉಳಿದವರು ಬಾಯಿ ಮುಚ್ಚಿಸಿ ಸುಮ್ಮನೆ ಕುಳ್ಳಿರಿಸಿದರು. ಇನ್ನೊಮ್ಮೆ ಹೀಗೆ ವಿದೇಶಕ್ಕೆ ಹೋದ ನಿಯೋಗದಲ್ಲಿದ್ದ ಶಾಸಕರೊಬ್ಬರು, ‘ನಿಮ್ಮ ದೇಶದಲ್ಲಿ ಎಲ್ಲೂ ಟ್ರಾಫಿಕ್ ಪೊಲೀಸ್ ಇಲ್ಲವಲ್ಲ! ನೀವು ಹೇಗೆ ಟ್ರಾಫಿಕ್ ಮ್ಯಾನೇಜ್ ಮಾಡುತ್ತೀರಿ?’ ಎಂದು ಅಸಂಬದ್ಧ ಪ್ರಶ್ನೆ ಕೇಳಿ ಮುಖಭಂಗಕ್ಕೊಳ ಗಾಗಿದ್ದರು.

ಇಂಥವರನ್ನು ವಿದೇಶಕ್ಕೆ ಕಳಿಸದಿರುವುದೇ ವಾಸಿ. ಯಾಕೆಂದರೆ, ಇಂಥವರು ಹೋದರೇ ಸಮಸ್ಯೆ. ಇವರು ದೇಶದ ಅಥವಾ ರಾಜ್ಯದ ಮಾನಹರಾಜು ಹಾಕಿ ಬರುತ್ತಾರೆ.

ಇವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು!

ಉಚ್ಚರಂಗರಾಯ್ ನವಲಶಂಕರ ಧೇಬರ್! ರಾಜ್ಯ ಕಾಂಗ್ರೆಸ್ಸಿನ ನಾಯಕರ ಮುಂದೆ ಈ ಹೆಸರನ್ನು ಹೇಳಿ ನೋಡಿ. ಅವರಲ್ಲಿ ಯಾವುದೇ ಪುಳಕವಾಗಲಿ, ಸೆಳೆತವಾಗಲಿ, ಸಣ್ಣದೊಂದು ಕುತೂಹಲವಾಗಲಿ ಆಗುವುದಿಲ್ಲ. ಅಷ್ಟಕ್ಕೂ ಈ ಹೆಸರನ್ನು
ಕೇಳಿದ ನೆನಪೂ ಆಗಲಿಕ್ಕಿಲ್ಲ. ಹೀಗಿರುವಾಗ ಈ ಹೆಸರಿನ ಬಗ್ಗೆ ಇನ್ಯಾವಸೆಳೆತವಿರಲು ಸಾಧ್ಯ ?

ಅಚ್ಚರಿಯೆಂದರೆ, ಉಚ್ಚರಂಗರಾಯ್ ನವಲಶಂಕರ ಧೇಬರ್ ಅರ್ಥಾತ್ ಯು.ಎನ್.ಧೇಬರ್ ನಾಲ್ಕು ವರ್ಷಗಳ ಕಾಲ
ರಾಷ್ಟ್ರೀಯ ಕಾಂಗ್ರೆಸ್ ಸ್ಪಕ್ಷದ ಅಧ್ಯಕ್ಷರಾಗಿದ್ದರು. ಅದೂ ಯಾರ ಕಾಲದಲ್ಲಿ ಅಂತೀರಾ? ಪಂಡಿತ ಜವಾಹರಲಾಲ ನೆಹರು ಪ್ರಧಾನಿಯಾಗಿದ್ದಾಗ, ಧೇಬರ್ ಆಡಳಿತಪಕ್ಷದ ಅಧ್ಯಕ್ಷರಾಗಿದ್ದರು.

ಸಾಮಾನ್ಯವಾಗಿ ಯಾವ ಪಕ್ಷ ಅಧಿಕಾರದಲ್ಲಿ ಇರುವುದೋ, ಅದರ ರಾಷ್ಟ್ರೀಯ ಅಧ್ಯಕ್ಷರು ಬಹಳ ಪ್ರಭಾವಿಯಾಗಿರುತ್ತಾರೆ, ಇಲ್ಲವೇ ಡಮ್ಮಿಯಾಗಿರುತ್ತಾರೆ. ಈ ಎರಡು ವರ್ಗ ಬಿಟ್ಟರೆ, ಸಾಮಾನ್ಯವಾಗಿ ಮೂರನೇ ವರ್ಗ ಇರುವುದಿಲ್ಲ. ದುರ್ದೈವ ವೆಂದರೆ, ಧೇಬರ್ ಅವರು ಎರಡನೆಯ ವರ್ಗಕ್ಕೆ ಸೇರಿದ್ದರು. ನೆಹರು ವೇದಿಕೆಯಲ್ಲಿದ್ದಾಗ, ಪಕ್ಷದ ಅಧ್ಯಕ್ಷರಾದ ಧೇಬರ್ ಅವರಿಗೆ ಯಾರೂ ಕ್ಯಾರೇ ಅನ್ನುತ್ತಿರಲಿಲ್ಲ.

1955 ರಿಂದ ಸತತ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಧೇಬರ್, ಗಣಪತಿಯ ಮುಂದಿರುವ ಇಲಿಯಂತೆ ಇದ್ದರು.
ಪಕ್ಷದ ವೇದಿಕೆಯಲ್ಲಿದ್ದಾಗ ನೆಹರು ಮುಂದೆ ಸೇವಕನಂತೆ ಇರುತ್ತಿದ್ದರು. ಸಾಮಾನ್ಯವಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ
ಅಧ್ಯಕ್ಷರದೇ ಕೊನೆಯಮಾತು. ಆದರೆ ನೆಹರು ಮಾತಾಡಿದ ನಂತರ, ಧೇಬರ್ ಮಾತುಗಳನ್ನು ಕೇಳಲು ಜನರೇ ಇರುತ್ತಿ
ರಲಿಲ್ಲ. ಅದಕ್ಕಾಗಿ ಅವರು ಆರಂಭದಲ್ಲಿ ಸ್ವಾಗತ ಭಾಷಣ ಮಾ ಕುಳಿತುಕೊಂಡು ಬಿಡುತ್ತಿದ್ದರು.

ಆನಂತರ, ಅಧ್ಯಕ್ಷ ಎಂಬ ಒಂದು ಪ್ರಾಣಿ ವೇದಿಕೆಯ ಮೇಲಿದೆ ಎಂಬುದು ಗೊತ್ತಾಗದ ರೀತಿಯಲ್ಲಿ ಇರುತ್ತಿದ್ದರು. ನೆಹರುಗೆ ಇಂಥವರೇಬೇಕಿತ್ತು. ನೆಹರು ಪಕ್ಷದ ಕಚೇರಿಗೆ ಹೋದರೆ, ಧೇಬರ್ ಎದ್ದು ಬಂದು ತಮ್ಮ ಕುರ್ಚಿ ಬಿಟ್ಟುಕೊಡುತ್ತಿದ್ದರು. ಒಮ್ಮೊಮ್ಮೆ ನೆಹರು ಅವರು ಹೇಳಿದರೂ ಕುಳಿತುಕೊಳ್ಳುತ್ತಿರಲಿಲ್ಲ.

ಒಮ್ಮೆ ಧೇಬರ್ ವರ್ತನೆ ಬಗ್ಗೆ ಅಲ್ಲಲ್ಲಿ ಟೀಕೆಗಳು ಕೇಳಿಬರಲಾರಂಭಿಸಿದಾಗ, ಕಾಂಗ್ರೆಸ್ ನಾಯಕರು ‘ದೇಶಸೇವೆಗೆ ತಮ್ಮನ್ನು ಮುಡಿಪಾಗಿಡುವುದು ಹೇಗೆ’ಎಂಬ ವಿಷಯದ ಬಗ್ಗೆ ಚರ್ಚಿಸಲು ಹಿರಿಯ ನಾಯಕರ ಸಭೆ ಕರೆಯುತ್ತಿರುವುದಾಗಿ
ಘೋಷಿಸಿಬಿಟ್ಟರು. ಇದು ನೆಹರು ಅವರಿಗೆ ಗೊತ್ತಾಗುತ್ತಿದ್ದಂತೆ, ಧೇಬರ್ ಅವರನ್ನು ಕರೆದು ಚೆನ್ನಾಗಿ ಝಾಡಿಸಿದರು. ಕೊನೆಗೆ ಆ ಸಭೆ ಹೇಗೋ ಕಾಟಾಚಾರಕ್ಕೆ ನಡೆಯಿತು.

ಆದರೆ ಕೆಲ ನಾಯಕರಷ್ಟೇ ಪಾಲ್ಗೊಂಡಿದ್ದರು. 1948 ರಲ್ಲಿ ಅಂದಿನ ಸೌರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಧೇಬರ್,
ಗಾಂಧೀಜಿ ಕಟ್ಟಾ ಅನುಯಾಯಿ ಆಗಿದ್ದರು. ಆ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು. 1962 ರಲ್ಲಿ
ರಾಜಕೋಟದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಧೇಬರ್, ತಮ್ಮನ್ನು ಮಂತ್ರಿಮಾಡುವಂತೆ ನೆಹರು ಅವರನ್ನು
ಕೋರಿದ್ದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ತಮಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಧೇಬರ್, ನೆಹರು ಪುತ್ರಿ
ಇಂದಿರಾಗೆ ಮನವಿ ಪತ್ರ ಕೊಟ್ಟಿದ್ದರಂತೆ!

ಕೊನೆಗೆ ಧೇಬರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತೆನ್ನಿ. ಅಷ್ಟಕ್ಕೇ ಆ ಹಿರಿಯ ಜೀವ ಸಂತೋಷಪಟ್ಟು ಕೊಂಡಿತು. ಪಕ್ಷದಲ್ಲಿ ಮೂಲೆಗುಂಪಾದರೂ ಅವರು ಸಾಮಾಜಿಕ ಸೇವಾಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್ಸಿನ ‘ಮಾಜಿ ಅಧ್ಯಕ್ಷ’ ಎಂಬ ಕಾರಣಕ್ಕೆ ಅವರಿಗೆ ಅಯಾಚಿತವಾಗಿ ಒಂದಷ್ಟು ಮರ್ಯಾದೆ ಸಿಗುತ್ತಿತ್ತು. ರಾಜಕೋಟ ವಿಮಾನ ನಿಲ್ದಾಣಕ್ಕೆ ಧೇಬರ್ ಹೆಸರನ್ನಿಟ್ಟಿದ್ದೇ ಡ್ಡ ಸಂಗತಿ. ಇಂದಿನ ಕಾಂಗ್ರೆಸ್ಸಿಗರಿಗೆ ಅವರು ಯಾರೋ?!

ಮಂತ್ರಿಗಳ ಅರ್ಹತೆ – ಖಾತೆ ! 
ಮಂತ್ರಿಗಳಿಗೂ, ಅವರ ಸಾಮರ್ಥ್ಯಕ್ಕೂ, ಅವರ ಆಸಕ್ತಿಗೂ, ಅವರ ಪರಿಣತಿಗೂ, ಅವರಿಗೆ ಕೊಡುವ ಖಾತೆಗೂ ಸಂಬಂಧವೇ
ಇರುವುದಿಲ್ಲ. ಅಯೋಗ್ಯರಾದವರಿಗೆ, ಅಸಮರ್ಥರಾದವರಿಗೆ, ಒಳ್ಳೆಯ ಖಾತೆಗಳನ್ನು ಕೊಡುವುದು ಮೊದಲಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ.

ರಾಜಕೀಯವಾಗಿ ಬಲಿಷ್ಠರಾದವರಿಗೆ ಮಾತ್ರ ಒಳ್ಳೆಯ ಮತ್ತು ಪ್ರಭಾವಿ ಖಾತೆ ಸಿಗುತ್ತದೆಂಬುದು ಸುಳ್ಳು. ಪ್ರಭಾವಶಾಲಿಗಳಿಗೆ
ಮಹತ್ವದ ಖಾತೆಗಳನ್ನು ತಪ್ಪಿಸಲು, ಅಷ್ಟೇನೂ ಪ್ರಭಾವಿಗಳಲ್ಲದವರಿಗೆ ಪ್ರಮುಖ ಖಾತೆಗಳ ಹೊಣೆಗಾರಿಕೆಯನ್ನು ವಹಿಸಿದ
ಎಷ್ಟೋ ನಿದರ್ಶನಗಳಿವೆ.

ಪ್ರಮುಖ ಖಾತೆಗಳಲ್ಲಿ ದುರ್ಬಲರನ್ನು ಕುಳ್ಳಿರಿಸಿ, ಹಿಂದಿನ ಸೀಟಿನಲ್ಲಿ ಕುಳಿತು ಪ್ರಧಾನಿಗಳು ಮತ್ತು ಅವರ ಆಪ್ತರು ಡ್ರೈವಿಂಗ್ ಮಾಡುವುದು ಹೊಸತೇನೋ ಅಲ್ಲ. ನೆಹರು ಪ್ರಧಾನಿಯಾಗಿ ತಮ್ಮ ಸಾರ್ವಭೌಮತ್ವ ಸ್ಥಾಪಿಸಿಕೊಂಡ ನಂತರ, ಯಾರನ್ನೂ ಕೇಳುತ್ತಿರಲಿಲ್ಲ.

ಪಟೇಲರು ನಿಧನರಾದ ಬಳಿಕ ಮತ್ತು ಕೊನೆಯ ಹತ್ತು ವರ್ಷ ಅವರು ಸಂಪುಟ ರಚಿಸುವಾಗ ಯಾರನ್ನೂ ಕೇಳುತ್ತಿರಲಿಲ್ಲ.
ರಾಷ್ಟ್ರಪತಿಭವನದಿಂದ ಪ್ರಕಟಣೆ ಹೊರಬೀಳುವ ತನಕ ರಿಗೂ ಗೊತ್ತಾಗುತ್ತಿರಲಿಲ್ಲ. ಈ ಸಂಪ್ರದಾಯವನ್ನು ಪರಿಣಾಮಕಾರಿ ಯಾಗಿ ಮುಂದುವರಿಸಿಕೊಂಡು ಬಂದವರೆಂದರೆ ಇಂದಿರಾ ಗಾಂಧಿ. ಆರಂಭದಲ್ಲಿ ಅವರಿಗೂ ಸಂಪುಟ ರಚನೆ ಸುಲಭದ ತುತ್ತಾಗಿರಲಿಲ್ಲ. ಅವರ ಸಂಪುಟದಲ್ಲಿ ಘಟಾನುಘಟಿಗಳಿದ್ದರು.

ಮೊರಾರ್ಜಿ ದೇಸಾಯಿ, ಯಶವಂತರಾವ್ ಚೌಹಾಣ್, ಗುಲ್ಜಾರಿಲಾಲ್ ನಂದಾ, ಎಂ.ಸಿ.ಛಗ್ಲಾ, ನೀಲಂ ಸಂಜೀವ ರೆಡ್ಡಿ, ಜಗಜೀವನ್ ರಾಮ, ಸಿ.ಸುಬ್ರಮಣ್ಯಮ, ಸತ್ಯನಾರಾಯಣ ಸಿನ್ಹಾ ಮೊದಲಾದವರಿದ್ದರು. ವಯಸ್ಸು ಮತ್ತು ಅನುಭವದಿಂದ ಮೊರಾರ್ಜಿ ಯವರನ್ನು ಉಪಪ್ರಧಾನಿಯಾಗಿ ಮಾಡುವುದು ಅನಿವಾರ್ಯವಾಯಿತು. ಮೊರಾರ್ಜಿ ಉಪಪ್ರಧಾನಿ ಆಗುವುದನ್ನು ತಪ್ಪಿಸಲು ಇಂದಿರಾ ಬಹಳ ಪ್ರಯತ್ನಿಸಿದರು.

ಆದರೂ ಅದು ಸಾಧ್ಯವಾಗಲಿಲ್ಲ. ಮೊರಾರ್ಜಿ ತಮಗೆ ರಕ್ಷಣೆ ಅಥವಾ ಗೃಹ ಖಾತೆಯನ್ನು ನೀಡುವಂತೆ ಪಟ್ಟು ಹಿಡಿಡಿದ್ದರು.
ಆದರೆ ಉಪಪ್ರಧಾನಿ ಹುದ್ದೆ ನೀಡಿದ್ದರಿಂದ ಕೊಟ್ಟ ಖಾತೆಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲಾಯಿತು. ನಂತರ ಅವರು
ಹಣಕಾಸು ಖಾತೆಗೆ ಸೈಎಂದರು. ಯಶವಂತರಾವ್ ಚೌಹಾಣ್ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ಇಂದಿರಾ ಬೇಕೆಂದೇ ಸಾಧು ಸ್ವಭಾವದವರಾದ ಗುಲ್ಜಾರಿಲಾಲ್ ನಂದಾರನ್ನು ಗೃಹ ಸಚಿವರನ್ನಾಗಿ ಮಾಡಿದರು. ಅವರ ನಿಧನದ ನಂತರವೇ, ಚೌಹಾಣ್ ಗೃಹ ಮಂತ್ರಿಯಾಗಿದ್ದು.

ಎರಡು ವರ್ಷಗಳ ಅವಧಿಯಲ್ಲಿ ಇಂದಿರಾ, ವಿದೇಶಾಂಗ ವ್ಯವಹಾರಗಳ ಖಾತೆಗೆ ಇಬ್ಬರು (ಸರ್ದಾರ್ ಸ್ವರ್ಣ ಸಿಂಗ್ ಮತ್ತು ಎಂ.ಸಿ.ಛಗ್ಲಾ) ಸಚಿವರನ್ನುನೇಮಿಸಿದ್ದರು. ಕೊನೆಗೆ ಎರಡು ವರ್ಷಗಳ ಕಾಲ (1967-69) ಆ ಖಾತೆ ಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಜಗಜೀವನ್ ರಾಮ್ ತಮ್ಮ ಮಾತನ್ನು ಕೇಳುವ ತನಕ, ಕಾಲಕಾಲಕ್ಕೆ ಅವರು ಕೇಳಿದ ಖಾತೆಗಳನ್ನು ಕೊಡುತ್ತಿದ್ದರು. ಜಗಜೀವನ್ ರಾಮ್ ಅವರು ಇಂದಿರಾ ಸಂಪುಟದಲ್ಲಿ ಕಾರ್ಮಿಕ, ಉದ್ಯೋಗ, ಕೃಷಿಯಂಥ ಅಷ್ಟೇನೂ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದವರು, ಕೊನೆಗೆ ಅವರ ಸಂಪುಟದಲ್ಲಿ ರಕ್ಷಣಾ ಸಚಿವರೂ ಆದರು.

ಇಂದಿರಾ ಗಾಂಧಿ ತಮ್ಮ ಮನಸ್ಸಿಗೆ ಬಂದಂತೆ ಸಚಿವರನ್ನು ಮತ್ತು ಅವರ ಖಾತೆಗಳನ್ನು ಬದಲಿಸುತ್ತಿದ್ದರು. ಅದರಲ್ಲೂ
ಅವರ ಎರಡನೇ ಮತ್ತು ಮೂರನೇ ಸಲ ಪ್ರಧಾನಿಯಾದ ಬಳಿಕ, ಅವರು ಸಚಿವ ಸಂಪುಟ ರಚಿಸುವಾಗ ಯಾರನ್ನೂ ಕೇಳುತ್ತಿ
ರಲಿಲ್ಲ. ತಮಗೆ ಬೇಕಾದವರನ್ನು ಮಂತಿಯನ್ನಾಗಿ ಮಾಡುತ್ತಿದ್ದರು. ಬೇಡದವರನ್ನು ತೆಗೆದು ಹಾಕುತ್ತಿದ್ದರು. ಈ ಮಾತು
ಕೇವಲ ಮಂತ್ರಿಗಳಿಗೆ ಅನ್ವಯಿಸುತ್ತಿರಲಿಲ್ಲ. ರಾಷ್ಟ್ರಪತಿ ಹುದ್ದೆಗೆ ನೇಮಿಸುವಾಗಲೂ ಅವರು ಈ ಸಂಪ್ರದಾಯ
ಅನುಸರಿಸುತ್ತಿದ್ದರು.

ಸೀಟ್ ಬೆಲ್ಟ್ ಯಾಕೆ ಧರಿಸಬೇಕು?
ಇದನ್ನು ನಾನು ಯಾರದೋ ಲಿಂಕ್ಡ್ ಇನ್ ಪೇಜಿನಲ್ಲಿ ಓದಿದ್ದು. ನಿಮಗೂ ಗೊತ್ತಿರಲಿ ಮತ್ತು ನೀವು ಬೇರೆಯವರಿಗೂ
ಹೇಳಬೇಕೆಂದು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇದು ಟಾಟಾ ಸಮೂಹದ ಮಾಜಿ ಅಧ್ಯಕ್ಷರಾದ ಸೈರಸ್ ಮಿಸಿ ಸಾವು ಹೇಗೆ
ಸಂಭವಿಸಿತು ಎಂಬ ಬಗೆಗಿನದು. ಅಂದು ಮಿಸಿ ಕಾರಿನ ಹಿಂಬದಿ ಸೀಟಲ್ಲಿ ಕುಳಿತಿದ್ದರು. ಅಪಘಾತದಲ್ಲಿ ಬದುಕುಳಿದ ಇಬ್ಬರು
ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರು ಮತ್ತು ಸೀಟ್ ಬೆಲ್ಟ್ ಧರಿಸಿದ್ದರು.

ಕಾರಿನಲ್ಲಿ ಒಟ್ಟು ನಾಲ್ಕು ಜನರಿದ್ದರು. ಆ ಪೈಕಿ ಸೈರಸ್ ಮಿಸ್ತ್ರಿಯೂ ಸೇರಿದಂತೆ ಇಬ್ಬರು ಸ್ಥಳದ ಮೃತರಾದರು. ಮೃತರಾದ ಇನ್ನೊಬ್ಬರು ಜಹಾಂಗೀರ್ ಬಿನ್ ಶಾ ಪಂಡೋಲೆ ಎಂದು ಗುರುತಿಸಲಾಗಿದೆ. ಗಾಯಾಳುಗಳಾಗಿ ಬದುಕುಳಿದ ಇನ್ನಿಬ್ಬರು ಅನ್ಹಿತಾ ಪಂಡೋಲೆ, ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಖ್ಯಾತ ವೈದ್ಯೆ (ಈಕೆಯೇ ಕಾರುಚಲಾಯಿಸುತ್ತಿದ್ದರು) ಮತ್ತು ಡರಿಯಸ್
ಪಂಡೋಲೆ, ಜೆ.ಎಂ.ಫೈನಾನ್ಸಿಯಲ್ ಪ್ರೈವೇಟ್ ಈಕ್ವಿಟಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ.ಇ.ಒ. ಸೀಟುಬೆಲ್ಟ್ ಧರಿಸದೇ ಇದ್ದರೆ ಏರ್‌ಬ್ಯಾಗ್ ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಅದುವೇ ಮೊದಲ ರಕ್ಷಣಾಕವಚ. ಏರ್ ಬ್ಯಾಗ್ ಎರಡನೇ ಸುರಕ್ಷಾ ಸುವಿಧಾ.

ಮೊದಲನೆಯದನ್ನು ಅನುಸರಿಸಿದರೆ ಮಾತ್ರ ಎರಡನೆಯದು ಕೆಲಸಕ್ಕೆ ಬರುತ್ತದೆ. ಮರಣ ಹೊಂದಿದ ಮಿಸಿಯವರು ಶಾಪೂರ್‌ಜಿ ಪಂಜಿ ಉದ್ಯಮ ಸಮೂಹದ ವಾರಸುದಾರರು. ಅವರದು ದುರಂತ ಅಂತ್ಯ, ಉದ್ಯಮಲೋಕಕ್ಕೆ ದೊಡ್ಡ ನಷ್ಟ.
ನೀವು ನಿಮ್ಮ ಸೀಟ್ ಬೆಲ್ಟನ್ನು ಸರಿಯಾಗಿ ಲಾಕ್ ಮಾಡದೇ ಇದ್ದರೆ, ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದು ಕೊಳ್ಳುವುದಿಲ್ಲ.

ಸರಕಾರಿ ನಿಯಮಾನುಸಾರ ಎಲ್ಲ ಕಾರುಗಳಲ್ಲೂ ಹಿಂಬದಿ ಆಸನಗಳಿಗೆ ಸೀಟ್ ಬೆಲ್ಟ್ ಇರುತ್ತದೆ. ಆದರೆ ಕೆಲವೇ ಕೆಲವು
ಮಂದಿ ಅದನ್ನು ಧರಿಸುತ್ತಾರೆ. ಹಿಂಬದಿ ಕೂತವರು ಸುರಕ್ಷಿತ ಎಂಬುದು ಕೇವಲ ಭ್ರಮೆ ಅಷ್ಟೆ. ಅಪಘಾತವಾದಾಗ ಕಾರಿನ ಹಿಂಬದಿ ಸೀಟಲ್ಲಿ ಕುಳಿತ ವ್ಯಕ್ತಿ ೪೦ ಜಿ ವೇಗದಲ್ಲಿ (ಅಂದರೆ ಗುರುತ್ವಶಕ್ತಿಯ ೪೦ ಪಟ್ಟು ಹೆಚ್ಚು) ಮುಂಭಾಗಕ್ಕೆ ತಳ್ಳಲ್ಪಡು ತ್ತಾನೆ. ಅಂದರೆ 80 ಕೆಜಿ ತೂಗುವ ವ್ಯಕ್ತಿ 3200 ಕೆಜಿಯ ವ್ಯಕ್ತಿಯಂತಾಗುತ್ತಾನೆ.

ಮುಂಭಾಗದ ಸೀಟಿನಲ್ಲಿ ಕುಳಿತ ವ್ಯಕ್ತಿ ಸೀಟುಬೆಲ್ಟ್ ಧರಿಸಿ, ಹಿಂಬದಿ ಕೂತವರು ಸೀಟುಬೆಲ್ಟ ಧರಿಸದೇ ಇದ್ದರೆ ಏನಾಗ ಬಹುದು? ಹಿಂಭಾಗದಲ್ಲಿ ಕುಳಿತ ವ್ಯಕ್ತಿ ಹಠಾತ್ತಾಗಿ ಮುಂಭಾಗದ ವ್ಯಕ್ತಿಯ ಮೇಲೆ ಬೀಳುತ್ತಾನೆ. ಹಾಗೆ ಬೀಳುವಾಗ
ಆತ ಆನೆತೂಕದ ವ್ಯಕ್ತಿಯಂತೆ ಭಾಸವಾಗುತ್ತಾನೆ ಮತ್ತು ಮುಂಭಾಗದ ಸೀಟಿನಲ್ಲಿ ಕುಳಿತ ವ್ಯಕ್ತಿ ಸೀಟುಬೆಲ್ಟು ಧರಿಸಿದ್ದರೂ
ಕೂಡ ಸಾಯುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಇದು ಕೇಳುವುದಕ್ಕೆ ಅಚ್ಚರಿಯೆನಿಸುವ ಸಂಗತಿ ಎನಿಸಬಹುದು. ನೀವು ದುಡ್ಡುಕೊಟ್ಟು ಸೀಟುಬೆಲ್ಟ ಖರೀದಿಸಿರುತ್ತೀರಿ, ಅದನ್ನು ನಿಮ್ಮ ಸುರಕ್ಷತೆಗಾಗಿ ಬಳಸುವುದನ್ನು ಏಕೆ ಮರೆಯುತ್ತೀರಿ? ಏಕೆಂದರೆ ಎಲ್ಲರ ಜೀವ ಅಮೂಲ್ಯ. ದ್ವಿಚಕ್ರವಾಹನದಲ್ಲಿ ಹಿಂಬದಿ ಕೂರುವವನಿಗೆ ಹೆಲ್ಮೆಟ್ ಎಷ್ಟು ಅಗತ್ಯ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.