ಅಭಿಪ್ರಾಯ
ಮೋಹನದಾಸ ಕಿಣಿ, ಕಾಪು
ಹಿಂದೆ ಔದ್ಯೋಗಿಕ, ವ್ಯಾಾವಹಾರಿಕ ವಲಯ ಈಗಿನಷ್ಟು ವಿಸ್ತಾಾರವಿರಲಿಲ್ಲ. ಆದ್ದರಿಂದ ಮಾತೃಭಾಷೆ ಹೊರತಾಗಿ ಹಿಂದಿ ಅಥವಾ ಇಂಗ್ಲಿಿಷ್ ಕಲಿಯುವುದು ಅವಶ್ಯಕ ಎನಿಸಿರಲಿಲ್ಲ. ಯಾವಾಗ ಅವಕಾಶಗಳು ವಿಶ್ವವ್ಯಾಾಪಿಯಾಗತೊಡಗಿದವೋ ಆಗ ಕಲಿಕಾ ಮಾಧ್ಯಮವೂ ಕನ್ನಡದಿಂದ ಆಂಗ್ಲ ಭಾಷೆಗೆ ಹೊರಳಿತು.
ಜಗತ್ಪ್ರಸಿದ್ಧ ಭಾರತೀಯರ ಜೀವನಕಥನವನ್ನು ಅವಲೋಕಿಸಿದಾಗ, ಬಹುತೇಕರ ಪ್ರಾಾಥಮಿಕ ಶಿಕ್ಷಣ ಸರಕಾರಿ ಶಾಲೆಗಳಲ್ಲೇ
ನಡೆದಿತ್ತೆೆಂಬ ಕುತೂಹಲಕಾರಿ ಅಂಶ ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳು ಜನರಿಂದ ದೂರವಾಗಲು ಮೇಲ್ನೋೋಟಕ್ಕೆೆ ಅರ್ಥವಾಗದ ಕಾರಣಗಳಿವೆ. ಪ್ರಾಾಥಮಿಕ ಅವಶ್ಯಕತೆಯಾಗಿರುವ ವಿದ್ಯೆೆಯನ್ನು ಧಾರೆಯೆರೆಯುವ ವಿದ್ಯಾಾದೇಗುಲಗಳ ಇಂದಿನ ಸ್ಥಿಿತಿಯ ಕುರಿತಾಗಿ ಶಿಕ್ಷಕ ಮಿತ್ರರ ಅನುಭವಗಳನ್ನು ಮತ್ತು ಜನಸಾಮಾನ್ಯರ ಅನಿಸಿಕೆಗಳನ್ನು ಆಧರಿಸಿ ಪರಾಮರ್ಶಿಸುವ ಸಣ್ಣ ಪ್ರಯತ್ನ ಇದಾಗಿದೆ.
ಖಾಸಗಿ ಶಾಲೆಗಳ ಆಡಳಿತಾತ್ಮಕ ನಿರ್ಧಾರಗಳು ಸೀಮಿತ ಸಂಖ್ಯೆೆಯ ವ್ಯಕ್ತಿಿಗಳ ವಿವೇಚನೆಗೊಳಪಟ್ಟಿಿರುವುದರಿಂದ ಕೆಲವೊಮ್ಮೆೆ ಏಕಪಕ್ಷೀಯವೆಂದೆನಿಸಿದರೂ, ಸರಕಾರಿ ಶಾಲೆಗಳಲ್ಲಿ ಇರುವಂತೆ ಧೀರ್ಘ ಪ್ರಕ್ರಿಿಯೆ, ಕೆಂಪು ಪಟ್ಟಿಿಗಳ ಜಂಜಾಟವಿಲ್ಲ. ಖಾಸಗಿ ಶಾಲೆಗಳು ಭ್ರಷ್ಟಾಾಚಾರದಿಂದ ಮುಕ್ತವಾಗಿರುತ್ತವೆ ಎಂದು ಖಂಡಿತವಾಗಿ ಹೇಳಲಾಗದಿದ್ದರೂ, ಸರಕಾರಿ ವ್ಯವಸ್ಥೆೆಯಲ್ಲಿರುವಂತೆ ಸಾರ್ವಜನಿಕರ ತೆರಿಗೆ ಹಣದ ದುರುಪಯೋಗವಿಲ್ಲ. ಇಷ್ಟಿಿದ್ದರೂ ಸರಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಅಗಾಧವಾದ ಅಂತರವಿರಲು ಕಾರಣಗಳೇನು? ವ್ಯವಸ್ಥೆೆ ಹಳಿ ತಪ್ಪಿಿರುವುದೆಲ್ಲಿ?
ಹಿಂದೆಲ್ಲಾ ಔದ್ಯೋೋಗಿಕ, ವ್ಯಾಾವಹಾರಿಕ ವಲಯ ಈಗಿನಷ್ಟು ವಿಸ್ತಾಾರವಿರಲಿಲ್ಲ. ಆದ್ದರಿಂದ ಮಾತೃಭಾಷೆ ಹೊರತಾಗಿ ಹಿಂದಿ ಅಥವಾ ಇಂಗ್ಲಿಿಷ್ ಕಲಿಯುವುದು ಅವಶ್ಯಕ ಎನಿಸಿರಲಿಲ್ಲ. ಯಾವಾಗ ಅವಕಾಶಗಳು ವಿಶ್ವವ್ಯಾಾಪಿಯಾಗತೊಡಗಿದವೋ ಆಗ ಉನ್ನತ ವ್ಯಾಾಸಂಗದ ನಾನಾ ಮಜಲುಗಳು ತೆರೆಯಲ್ಪಟ್ಟು ಕಲಿಕಾ ಮಾಧ್ಯಮವೂ ಕನ್ನಡದಿಂದ ಆಂಗ್ಲ ಭಾಷೆಗೆ ಹೊರಳಿತು. ಖಾಸಗಿ ವಿದ್ಯಾಾಸಂಸ್ಥೆೆಗಳು ಈ ಅವಕಾಶವನ್ನು ನಗದೀಕರಿಸಿಕೊಂಡಷ್ಟು ವೇಗದಲ್ಲಿ ಸರಕಾರಿ ಶಾಲೆಗಳು ಆಧುನೀಕರಣಗೊಳ್ಳಲಿಲ್ಲ. ಆದ್ದರಿಂದಲೇ ಸರಕಾರಿ ಶಾಲೆಗಳು, ಪ್ರಾಾಥಮಿಕ ಹಂತದಲ್ಲೇ ಮುಗ್ಗರಿಸಿದವು. ಪರಿಣಾಮವಾಗಿ ಸರಕಾರಿ ಶಾಲೆಗಳು ಕನ್ನಡ ಮಾಧ್ಯಮದಲ್ಲೇ ಉಳಿದು, ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮವಾಯಿತು. ಇದರಿಂದ ಹೆಚ್ಚು ದ್ವಂದ್ವಕ್ಕೊೊಳಗಾದವರು ಕನ್ನಡ ಸಾಹಿತಿಗಳು ಮತ್ತು ಕನ್ನಡಪರ ಸಂಘಟನೆಗಳು. ಹೊರಜಗತ್ತಿಿಗೆ ಕನ್ನಡದ ಪರವಾಗಿ ಇರಬೇಕಾಗುವ ಅನಿವಾರ್ಯತೆ ಇವರದಾದರೆ ಆಂತರಿಕವಾಗಿ ಮಕ್ಕಳ ಭವಿಷ್ಯ, ಮನೆಯವರ ಒತ್ತಡ ಇವರನ್ನು ಖಾಸಗಿ ಶಾಲೆಗಳ ಆಂಗ್ಲ ಮಾಧ್ಯಮದತ್ತ ಮುಖಮಾಡುವ ಅಸಹಾಯಕತೆಗೆ ತಳ್ಳಿಿದೆ.
ಕನ್ನಡದ ಖ್ಯಾಾತ ಸಾಹಿತಿಯೊಬ್ಬರು ಸಮಾರಂಭವೊಂದರಲ್ಲಿ ಮಾತನಾಡುತ್ತಾಾ, ತನ್ನ ಆಂತರ್ಯದ ಬೇಗುದಿಯನ್ನು ಬಿಚ್ಚಿಿಟ್ಟರು. ಅದೆಂದರೆ, ‘ತಾನೋರ್ವ ಸಾಹಿತಿಯಾಗಿಯೂ ತನ್ನ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಓದಿಸುವ ಅನಿವಾರ್ಯತೆಗೆ ಸಿಲುಕಿದ್ದೇನೆ. ಮಕ್ಕಳ ಭವಿಷ್ಯದ ದೃಷ್ಟಿಿಯಿಂದ ಮತ್ತು ಮನೆಯವರ ಒತ್ತಡದಿಂದ ಹೀಗೆ ಮಾಡಬೇಕಾಯಿತು. ಆದ್ದರಿಂದ ತನ್ನ ಪುಸ್ತಕಗಳನ್ನೇ ತನ್ನ ಮಕ್ಕಳು ಓದಲಾಗದ ಪರಿಸ್ಥಿಿತಿಯಿದೆ’ ಎಂದರು. ಆದರೆ, ಸೂಕ್ತ ಮುಂದಾಲೋಚನೆ ಮಾಡಿದ್ದರೆ ಇದನ್ನು ಸರಿಪಡಿಲು ಸಾಧ್ಯವಿತ್ತು. ಏಕೆಂದರೆ ಕಲಿಕಾ ಮಾಧ್ಯಮ ಯಾವುದೇ ಇರಲಿ, ಕನ್ನಡವನ್ನು ಕನಿಷ್ಠ ಒಂದು ಐಚ್ಛಿಿಕ ವಿಷಯವಾಗಿ ಅಧ್ಯಯನ ಮಾಡಿದರೆ, ಓದಲು, ಬರೆಯಲು ಅಗತ್ಯವಾದಷ್ಟು ಕನ್ನಡ ಖಂಡಿತ ತಿಳಿಯುತ್ತದೆ. ಮನಸ್ಸಿಿರಬೇಕು ಅಷ್ಟೇ. ಇದು ನನ್ನ ಅನುಭವವೂ ಹೌದು. ನನ್ನ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಿದ್ದರೂ, ಕನ್ನಡವನ್ನು ಪ್ರಥಮ ಭಾಷೆಯಾಗಿ ಅಧ್ಯಯನ ಮಾಡಿದ್ದಾರೆ. ಆದ್ದರಿಂದ ಇಂದು ಉನ್ನತ ವ್ಯಾಾಸಂಗ ಪಡೆದು ಉತ್ತಮ ಉದ್ಯೋೋಗದಲ್ಲಿದ್ದರೂ ಕನ್ನಡ ಪಂಡಿತರೆನ್ನಿಿಸಿಕೊಳ್ಳುವಷ್ಟು ಅಲ್ಲದಿದ್ದರೂ ಕನ್ನಡದಲ್ಲಿ ಸುಲಲಿತ ಸಂವಹನ ಸಾಧ್ಯವಾಗುವಷ್ಟು ಭಾಷಾ ಜ್ಞಾನ ಹೊಂದಿದ್ದಾರೆ. ಕನ್ನಡ ಓದುತ್ತಾಾರೆ, ಬರೆಯುತ್ತಾಾರೆ, ಸಾಲದೆ?
ಉತ್ತಮ ಭವಿಷ್ಯ, ಉನ್ನತ ವ್ಯಾಾಸಂಗದ ದೃಷ್ಟಿಿಯಿಂದ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಾರ್ಜನೆ ಅಗತ್ಯವಿದೆಯೆಂದು ಒಪ್ಪೋೋಣ. ಅಲ್ಲದೆ ವಿದ್ಯಾಾರ್ಜನೆಯ ಮಾಧ್ಯಮ ಯಾವುದಿರಬೇಕೆಂಬ ಆಯ್ಕೆೆಯ ಸ್ವಾಾತಂತ್ರ್ಯ ಪ್ರತಿಯೊಬ್ಬ ವಿದ್ಯಾಾರ್ಥಿಯ ವೈಯಕ್ತಿಿಕ ಹಕ್ಕು. ಅದೇ ವೇಳೆ ಆಯ್ಕೆೆಯ ಮಾಧ್ಯಮದಲ್ಲಿ ವಿದ್ಯಾಾರ್ಜನೆಗೆ ವ್ಯವಸ್ಥೆೆ ಮಾಡುವುದು ಸರಕಾರದ ಕರ್ತವ್ಯ ಸಹ ಆಗಿದೆ. ಆದರೆ, ಕೆಲವೊಂದು ಕಾರಣಕ್ಕೆೆ ಆಡಳಿತ ನಡೆಸಿದ ಎಲ್ಲಾ ಸರಕಾರಗಳು ಇದನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿರುವುದೇ ಇಂದು ಸರಕಾರಿ ಶಾಲೆಗಳು ಸೊರಗಲು ಕಾರಣ ಎಂದರೆ ತಪ್ಪಿಿಲ್ಲ. ಇಷ್ಟೊೊಂದು ಪೀಠಿಕೆ ನಂತರ ಸರಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರ ಹೆಚ್ಚಲು ಕಾರಣಗಳ ಬಗ್ಗೆೆ ವಿಮರ್ಶಿಸುವ ಸಣ್ಣದೊಂದು ಪ್ರಯತ್ನ ಇಲ್ಲಿದೆ.
ಸರಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ಪ್ರಮುಖ ಕಾರಣ. ಹಳೆಯ ಶೈಲಿಯ ಕಟ್ಟಡಗಳು ಅನುದಾನದ ಕೊರತೆಯಿಂದ ವರ್ಷಾನುಗಟ್ಟಲೆ ದುರಸ್ತಿಿ ಮತ್ತು ನಿರ್ವಹಣೆ ಇಲ್ಲದೆ ಶಿಥಿಲವಾಗಿರುವುದು ಹಾಗೂ ಕಟ್ಟಡಗಳು ಅಪಾಯಕಾರಿ ಸ್ಥಿಿತಿಗೆ ತಲುಪಿರುವ ಕಾರಣ ಮಕ್ಕಳನ್ನು ಅಂತಹ ಶಾಲೆಗೆ ಕಳುಹಿಸಲು ಪೋಷಕರ ಹಿಂಜರಿಕೆ. ಆದರೆ ಖಾಸಗಿ ಶಾಲಾ ಕಟ್ಟಡಗಳು ಪ್ರತಿವರ್ಷ ಸುಣ್ಣಬಣ್ಣದೊಂದಿಗೆ ಜಗಮಗಿಸುತ್ತವೆ. ಇದಕ್ಕೆೆ ಹಣ ವಿದ್ಯಾಾರ್ಥಿಗಳ ಪೋಷಕರದ್ದು, ಆದರೆ ತ್ವರಿತ ನಿರ್ಧಾರ ಆಡಳಿತದ್ದು. ಖಾಸಗಿ ಸಂಸ್ಥೆೆಗಳಲ್ಲಿ ಎಲ್ಲಾ ವಿಷಯಗಳಿಗೆ ಬೋಧಕರನ್ನು ತ್ವರಿತವಾಗಿ ಆಯ್ಕೆೆ ಮಾಡುವ ಸ್ವಾಾತಂತ್ರ್ಯವಿದೆ ಮಾತ್ರವಲ್ಲ, ನೇಮಕಾತಿಯಲ್ಲಿ ಸರಕಾರಿ ವ್ಯವಸ್ಥೆೆಯಲ್ಲಿ ಇರುವಂತೆ ಮೀಸಲು ಮೊದಲಾದ ನಿರ್ಬಂಧಗಳಿರುವುದಿಲ್ಲ. ನಿಬಂಧನೆಗಳು ಹೆಚ್ಚಾಾದಷ್ಟು ಗುಣಮಟ್ಟ ಕುಸಿಯುತ್ತದೆ. ಇದು ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ.
ಖಾಸಗಿ ಸಂಸ್ಥೆೆಗಳು ಮಾಡುವ ನೇಮಕಾತಿಯಲ್ಲಿ ಸ್ಥಳೀಯರಿದ್ದರೆ, ಸರಕಾರಿ ಶಾಲೆಯ ನೇಮಕಾತಿಯಲ್ಲಿ ದೂರದ ಊರಿನವರೇ ನೇಮಕವಾಗುವುದು ಹೆಚ್ಚು. ಇಂತಹವರಿಗೆ ಕುಟುಂಬದ ಕಡೆಗೆ ಸೆಳೆತ. ಇದರಿಂದ ಪಾಠ ಪ್ರವಚನಗಳತ್ತ ಅರೆಮನಸ್ಸು ಜತೆಗೆ ಸ್ಥಳೀಯ ವಾತಾವರಣಕ್ಕೆೆ, ಸ್ಥಳೀಯರೊಂದಿಗೆ ಹೊಂದಿಕೊಳ್ಳುವ ಮನಸ್ಥಿಿತಿಯ ಕೊರತೆ ಇರುತ್ತದೆ. ಇದರಿಂದ ಸ್ವಾಾಭಾವಿಕವಾಗಿ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತವೆ.
ಅತ್ಯಾಾಧುನಿಕ ಬೋಧಕ ತಂತ್ರಜ್ಞಾನ, ಪೂರಕ ಸಾಮಗ್ರಿಿಗಳನ್ನು ಖಾಸಗಿ ವಿದ್ಯಾಾಸಂಸ್ಥೆೆಗಳು ಅಳವಡಿಸಿಕೊಂಡಷ್ಟು ತ್ವರಿತವಾಗಿ ಸರಕಾರಿ ಶಾಲೆಗಳಲ್ಲಿ ಅಳವಡಿಸುವುದು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆೆ ಸರಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕಾರ್ಯಶೀಲತೆ, ಪ್ರತಿಭೆ ಸಾರಾಸಗಟಾಗಿ ಕಳಪೆಯೆಂಬ ಅರ್ಥವಲ್ಲ. ಖಾಸಗಿ ಶಾಲೆಗಳ ಬೋಧಕರಿಗಿಂತ ಹಲವುಪಟ್ಟು ಉತ್ತಮ ಪ್ರತಿಭೆ, ಸಮರ್ಪಣಾ ಮನೋಭಾವದ ಶಿಕ್ಷಕರು ಸರಕಾರಿ ಶಾಲೆಗಳಲ್ಲಿದ್ದಾರೆ. ಆದರೆ ಕ್ಷುಲ್ಲಕ ರಾಜಕೀಯ, ಶಿಕ್ಷಕರ ನಡುವಿನ ಹೊಂದಾಣಿಕೆಯ ಕೊರತೆ, ಸರಕಾರಿ ಶಾಲೆಯ ಶಿಕ್ಷಕರಿಗೆ ವೃತ್ತಿಿಗೆ ಹೊರತಾದ-ಚುನಾವಣೆ, ಜನಗಣತಿ ಮುಂತಾದ ಕೆಲಸಗಳ ಒತ್ತಡ, ಪ್ರತಿಭೆಯಿದ್ದರೂ ಪೂರಕ ಸೌಲಭ್ಯಗಳ ಕೊರತೆಯಿಂದ ಅದನ್ನು ಸಮರ್ಪಕವಾಗಿ ವಿದ್ಯಾಾರ್ಥಿಗಳಿಗೆ ವರ್ಗಾಯಿಸಲು ಸಾಧ್ಯವಾಗದಿರುವುದು ಊಟಕ್ಕಿಿಲ್ಲದ ಉಪ್ಪಿಿನಕಾಯಿಯಂತಾಗಿಸಿದೆ.
ಮೂಲ ಸೌಕರ್ಯಗಳ ಕೊರತೆ ನೀಗಿಸುವಲ್ಲಿ ಸಾರ್ವಜನಿಕರು ದಾನರೂಪದಲ್ಲಿ ಸಹಕರಿಸಿದ ಉದಾಹರಣೆಗಳು ಸಹ ಸಾಕಷ್ಟಿಿವೆ. ಆದರೆ, ಇದರಲ್ಲೂ ಪ್ರತ್ಯಕ್ಷ ಮತ್ತು ಪರೋಕ್ಷ ರಾಜಕೀಯ ಕೈಚಳಕ ಅಂತಹ ದಾನಿಗಳನ್ನೂ ಹಿಮ್ಮೆೆಟ್ಟಿಿಸುವಂತೆ ಮಾಡಿರುವುದಿದೆ. ನಾನು ಸ್ವತಃ ನೋಡಿದ ಒಂದು ಘಟನೆಯಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದವರೊಬ್ಬರು ತಾನು ಪ್ರಾಾಥಮಿಕ ಶಿಕ್ಷಣ ಪಡೆದ ಸರಕಾರಿ ಶಾಲೆಗೆ ದೊಡ್ಡ ಮೊತ್ತವನ್ನು ದಾನರೂಪದಲ್ಲಿ ನೀಡುತ್ತಿಿದ್ದರು. ಸಹಜವಾಗಿ ತಾನು ನೀಡಿದ ದಾನವು ನೈಜ ಫಲಾನುಭವಿಗಳಿಗೆ ಸಿಗಬೇಕು, ಶಾಲೆಗೆ ದಾಖಲಾಗುವವರ ಶೈಕ್ಷಣಿಕ ಯೋಗ್ಯತೆ ಪ್ರಾಾಮಾಣಿಕವಾಗಿರಬೇಕು ಮತ್ತು ಅವರು ವಿದ್ಯಾಾರ್ಥಿ ನೆಲೆಯಲ್ಲಿ ಶಿಸ್ತು ಮತ್ತು ಉತ್ತಮ ನಡತೆಯನ್ನು ಹೊಂದಿರಬೇಕು ಎಂಬ ಉದ್ದೇಶದಿಂದ ಅಂತಹ ಗುಣಲಕ್ಷಣಗಳನ್ನು ಖಚಿತಪಡಿಸಿಕೊಳ್ಳಲು ಆ ಶಾಲೆಗೆ ಸೇರಬಯಸುವವರಿಗಾಗಿ ಒಂದು ಪರೀಕ್ಷೆ ನಡೆಸಬೇಕೆಂದು ಅಪೇಕ್ಷಿಸಿದ್ದರು. ಇದಕ್ಕೆೆ ಸರಕಾರ ಅನುಮತಿಯನ್ನೂ ನೀಡಿತ್ತು.
ಇದೆಲ್ಲವೂ ಕೆಲವು ವರ್ಷ ಸುಲಲಿತವಾಗಿ ನಡೆಯುತ್ತಿಿತ್ತು. ಕ್ರಮೇಣ ಆ ಶಾಲೆಗೆ ದಾಖಲಾಗುವ ವಿದ್ಯಾಾರ್ಥಿಗಳ ಸಂಖ್ಯೆೆ, ಫಲಿತಾಂಶದ ಗುಣಮಟ್ಟ, ಸೌಲಭ್ಯಗಳು ಖಾಸಗಿ ಶಾಲೆಗಳ ಕಣ್ಣು ಕುಕ್ಕಿಿತೋ, ವಿಘ್ನ ಸಂತೋಷಿಗಳ ನೆಮ್ಮದಿ ಕೆಡಿಸಿತೋ, ಒಟ್ಟಿಿನಲ್ಲಿ ಶಾಲೆಯ ಪ್ರಗತಿ ಸಹಿಸಲಾಗದ ಕೆಲವು ಸ್ವಯಂ ಘೋಷಿತ ಮುಖಂಡರ ದಂಡು ದಾಖಲಾತಿಗೆ ಪೂರ್ವಭಾವಿಯಾಗಿ ನಡೆಸುತ್ತಿಿದ್ದ ಪರೀಕ್ಷೆಗೆ ಸರಕಾರ ನೀಡಿದ್ದ ಅನುಮತಿಯನ್ನು ರದ್ದುಪಡಿಸುವಲ್ಲಿ ಯಶಸ್ವಿಿಯಾಯಿತು. ಅಲ್ಲಿಗೆ ಶಾಲೆಗೆ ಬರುತ್ತಿಿದ್ದ ದಾನವೂ ನಿಂತುಹೋಯಿತು. ಹೀಗೆ ಕೊಡಿಸುವ ಯೋಗ್ಯತೆ ಇಲ್ಲದಿದ್ದರೂ ಕೊಡಿಸುವುದನ್ನು ಕೆಡಿಸುವವರಿಂದಾಗಿ ಸ್ಥಳೀಯ ಪ್ರತಿಭೆಗಳಿಗೆ ಉಚಿತವಾಗಿ ಸಿಗುತ್ತಿಿದ್ದ ಉತ್ತಮ ಶಿಕ್ಷಣ ಸೌಲಭ್ಯಗಳು ನಿಂತು ಹೋಯಿತು.
ಆದರೂ ಸರಕಾರಿ ಶಾಲೆಗಳ ಅಸ್ತಿಿತ್ವದ ಬುನಾದಿಯನ್ನು ಗಟ್ಟಿಿಗೊಳಿಸುವಲ್ಲಿ ಸಮಾಜದ ಸಹಾಯ ಹಸ್ತ ಸದಾ ಇರುತ್ತದೆ ಎನ್ನುವುದು ಸರ್ವವಿದಿತ. ಇದಕ್ಕೆೆ ಹರೇಕಳ ಹಾಜಬ್ಬ ಅವರಂತಹವರು ಉತ್ತಮ ಉದಾಹರಣೆ. ಅಲ್ಲದೆ ಹುಬ್ಬಳ್ಳಿಿಯ ಗ್ರಾಾಮೀಣ ಭಾಗದ ಸರಕಾರಿ ಶಾಲೆಯೊಂದರಲ್ಲಿ ವೃತ್ತಿಿಪರ ಎಂಜಿನಿಯರರು ತಮ್ಮ ಬಿಡುವಿನ ವೇಳೆಯಲ್ಲಿ ಆಂಗ್ಲ ಭಾಷೆಯಲ್ಲಿ ಉಚಿತವಾಗಿ ಪಾಠ ಮಾಡಿ ಮಕ್ಕಳಿಗೆ ಆಂಗ್ಲ ಭಾಷೆಯ ಪರಿಣತಿ ಒದಗಿಸುತ್ತಿಿರುವ ಉದಾಹರಣೆಯನ್ನು ಸಹ ಕಾಣಬಹುದು. ದ.ಕ. ಜಿಲ್ಲೆಯ ಬೆಳ್ತಂಗಡಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಿಂದ ಸುಮಾರು 300ರಷ್ಟು ಮಕ್ಕಳು ಸರಕಾರಿ ಶಾಲೆಗೆ ಸೇರಿರುವುದು, ಗಡಿಭಾಗದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಾಲೆಯೊಂದರಲ್ಲಿ ಹಾಜರಾತಿ 90ರಿಂದ 207ಕ್ಕೆೆ ಏರಿಕೆಯಾಗಿರುವುದನ್ನು ಗಮನಿಸಿದಾಗ, ಸಮಾಜದಲ್ಲಿ ಇನ್ನೂ ಸರಕಾರಿ ಶಾಲೆಯತ್ತ ಇರುವ ಒಲವನ್ನು ತೋರಿಸುತ್ತದೆ.
ಒಳ್ಳೆೆಯ ಅಂಕಗಳನ್ನು ಪಡೆದವರು ಪ್ರತಿಷ್ಠಿಿತ ಶಾಲೆಗಳಲ್ಲಿ ದಾಖಲಾತಿ ಪಡೆಯುತ್ತಾಾರೆ. ಕನಿಷ್ಠ ಅಂಕ ಪಡೆದವರಿಗೆ ಅಂತಹ ಶಾಲೆಯಲ್ಲಿ ಪ್ರವೇಶ ಸಿಗದ ಕಾರಣ ಅನಿವಾರ್ಯವಾಗಿ ಸರಕಾರಿ ಶಾಲೆಗೆ ಸೇರುತ್ತಾಾರೆ ಎಂಬುದು ಜನರಲ್ಲಿರುವ ಒಂದು ಸಾಮಾನ್ಯ ಅಭಿಪ್ರಾಾಯ. ಆದರೆ, ಇದು ತಪ್ಪುು. ದುಬಾರಿ ಶುಲ್ಕ ಪಡೆದು, ಹೆಚ್ಚು ಅಂಕಗಳಿಸಿದವರನ್ನು ಸೇರಿಸಿಕೊಳ್ಳುವ ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ನೀಡುತ್ತಿಿದ್ದೇವೆ ಎಂದು ಹೇಳುವುದರಲ್ಲಿ ಹೆಚ್ಚುಗಾರಿಕೆಯೇನೂ ಇಲ್ಲ. ಏಕೆಂದರೆ ಮೂಲತಃ ಹೆಚ್ಚು ಅಂಕಗಳಿಸುವ ಸಾಮರ್ಥ್ಯವಿರುವವರನ್ನು ತರಬೇತಿಗೊಳಿಸುವುದು ಸುಲಭ. ಕಡಿಮೆ ಅಂಕಗಳಿಸಿದವರಿಗೆ ಶಿಕ್ಷಣ ನೀಡಿ ಉತ್ತಮ ಅಂಕಗಳಿಸುವಂತೆ ಮಾಡುವುದು ನಿಜವಾದ ಸಾಧನೆ. ಅದನ್ನು ಸೀಮಿತ ಸೌಲಭ್ಯವಿದ್ದರೂ ಸರಕಾರಿ ಶಾಲೆಗಳು ಮಾಡಿ ತೋರಿಸಿವೆ.
ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆಯ 111 ಸರಕಾರಿ ಪ್ರೌೌಢಶಾಲೆಗಳ ಪೈಕಿ (ಎಸ್‌ಎಸ್‌ಎಲ್ಸಿ) 15 ಶಾಲೆಗಳಲ್ಲಿ 100% ಫಲಿತಾಂಶ ಬಂದಿರುವುದು ಇದಕ್ಕೆೆ ಸಾಕ್ಷಿ. ಏಕೆಂದರೆ ಸೀಮಿತ ಸೌಲಭ್ಯಗಳು, ಶಿಕ್ಷಕರ ಕೊರತೆ, ಅಷ್ಟೇನೂ ಪ್ರತಿಭಾವಂತರಲ್ಲದ ವಿದ್ಯಾಾರ್ಥಿಗಳಿದ್ದೂ ಇಂತಹ ಸಾಧನೆ ಕಡಿಮೆಯೇನಲ್ಲ. ಅದೇ ವೇಳೆ ಎಲ್ಲಾ ಸವಲತ್ತುಗಳು ಇದ್ದರೂ, ದುಬಾರಿ ಶುಲ್ಕ ತೆತ್ತು ವಿದ್ಯಾಾರ್ಜನೆ ಮಾಡುವ 77 ಖಾಸಗಿ ಶಾಲೆಯಲ್ಲಿ 26 ಶಾಲೆಗಳು ಮಾತ್ರ ಶೇ.100ರಷ್ಟು ಫಲಿತಾಂಶ ಪಡೆದಿವೆ.
ಈ ಅಂಕಿಅಂಶಗಳನ್ನು ಖಾಸಗಿ ಮತ್ತು ಸರಕಾರಿ ಶಾಲೆಗಳಿಗೆ ಅನ್ವಯಿಸಿ ತುಲನೆ ಮಾಡುವುದಾದರೆ, ಉಡುಪಿ ಜಿಲ್ಲೆಯ ಒಟ್ಟು 912 ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 84,000ದಷ್ಟು ವಿದ್ಯಾಾರ್ಥಿಗಳಿದ್ದರೆ, ಅದೇ ವೇಳೆ ಕೇವಲ 260 ಖಾಸಗಿ ಶಾಲೆಗಳಲ್ಲಿ 76,000ಕ್ಕೂ ಅಧಿಕ ವಿದ್ಯಾಾರ್ಥಿಗಳಿದ್ದಾರೆ. ಅಷ್ಟರಮಟ್ಟಿಿಗೆ ಖಾಸಗಿ ಶಾಲೆಗಳತ್ತ ಆಕರ್ಷಣೆ ಇದೆ.
ಪ್ರಾಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಡ್ಡಾಾಯ ಮಾಡಿ, ನಂತರ ಪ್ರೌೌಢ ಮತ್ತು ಉನ್ನತ ಶಿಕ್ಷಣ ಮಾಧ್ಯಮದ ಆಯ್ಕೆೆ ವ್ಯಕ್ತಿಿಗತ
ನಿರ್ಧಾರ ಏಕಾಗಬಾರದು? ಇದನ್ನು ಈಗಾಗಲೇ ಅಳವಡಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಅವರು ಉನ್ನತ ಶಿಕ್ಷಣದಲ್ಲಿ
ಉತ್ತಮ ಸಾಧನೆ ಮಾಡಿದ ಉದಾಹರಣೆ ಬಹಳಷ್ಟಿಿದೆ. ಒಂದು ಕಾಲದಲ್ಲಿ ಶಾಲೆಯಿಂದಲೇ ದೂರವಿದ್ದ ಉತ್ತರಕರ್ನಾಟಕದ ವಲಸೆ ಕೂಲಿಕಾರ್ಮಿಕರ ಮಕ್ಕಳು ಈಗ ಆಂಗ್ಲ ಮಾಧ್ಯಮ ಕಲಿಯಲು ಉತ್ಸುಕತೆ ತೋರುತ್ತಿಿರುವುದು, ತಮ್ಮ ಆದಾಯಕ್ಕೆೆ ಎಟುಕದಿದ್ದರೂ ಆಂಗ್ಲ ಮಾಧ್ಯಮ ವಿದ್ಯಾಾಭ್ಯಾಾಸಕ್ಕೆೆ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿಿರುವುದು ಒಂದರ್ಥದಲ್ಲಿ ಉತ್ತಮ ಬೆಳವಣಿಗೆ. ಆದರೆ, ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ದೊರೆಯುವಂತಾದರೆ ಸಹಜವಾಗಿಯೇ ಸರಕಾರಿ ಶಾಲೆಯಲ್ಲಿ ವಿದ್ಯಾಾರ್ಥಿಗಳ ಸಂಖ್ಯೆೆ ಹೆಚ್ಚುತ್ತದೆ. ಉನ್ನತ ಶಿಕ್ಷಣದ ಆಯ್ಕೆೆ ಮಕ್ಕಳ ಪ್ರತಿಭೆಗೆ ಅನುಗುಣವಾಗಿರುವುದರ ಬದಲಿಗೆ ಎಲ್ಕೆಜಿಯಲ್ಲೇ ತಮ್ಮ ಮಕ್ಕಳು ಮುಂದೆ ಇದನ್ನೇ ಕಲಿಯಬೇಕೆಂದು ಒತ್ತಡ ಹೇರುವುದು, ಪ್ರಸಿದ್ಧ ಖಾಸಗಿ ಶಾಲೆಗೆ ಸೇರಿಸುವುದು ತಮಗೊಂದು ಘನತೆ ಎಂಬ ಧೋರಣೆಗಳು ಇಂದಿನ ಸಾಮಾಜಿಕ ದುರಂತಗಳು.