Friday, 20th September 2024

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ

ತುಂಟರಗಾಳಿ

ಸಿನಿಗನ್ನಡ

ಸಿನಿಮಾರಂಗ ಮತ್ತು ರಾಜಕೀಯ ರಂಗ ಮೊದಲಿನಿಂದಲೂ ದೂರ ದೂರ ಇರುವಂಥವೇನಲ್ಲ. ಸಿನಿಮಾ ರಂಗದಲ್ಲಿ ಹೆಸರು ಮಾಡಿ, ತಮ್ಮ ಕಾಲ ಮುಗಿಯುತ್ತಾ ಬಂದಂತೆ, ತಮ್ಮ ಡಿಮ್ಯಾಂಡ್ ಕಮ್ಮಿ ಆಗುತ್ತಾ ಬಂದಂತೆ ಹಲವು ಸಿನಿಮಾ ಮಂದಿ ಮೆಲ್ಲಗೆ ರಾಜಕೀಯ ಮಾತಾ ಡೋಕೆ ಶುರು ಮಾಡೋದು ಸಹಜ. ಈ ಚುನಾವಣೆ ಸಮಯದಲ್ಲಿ ಸುಮ್ನೆ ಇರಲಾದೀತೇ? ಆದರೆ ಇತ್ತೀಚೆಗೆ ಈಗಿನ್ನೂ ಅಂಬೆಗಾಲಿಡುತ್ತಿರುವ ನಟ ನಟಿಯರೂ ರಾಜಕೀಯದ ಬಗ್ಗೆ ಮಾತಾಡೋಕೆ ಶುರು ಮಾಡ್ತಾ ಇರೋದು ಹೊಸ ಟ್ರೆಂಡು. ಕನ್ನಡದಲ್ಲಿ ಅನಂತ್ ನಾಗ್, ಅಂಬರೀಷ್ ಅವರಂಥ ಹಿರಿಯರ ನಂತರ ಈಗಿನ ಸಿನಿಮಾ ಹೀರೋಗಳು ರಾಜಕೀಯದ ವರಸೆ ಶುರು ಮಾಡಿದ್ದಾರೆ. ಉಪೇಂದ್ರ ಅವರಂಥ ಕೆಲವರು ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳುವ ಪ್ರಯತ್ನಕ್ಕೆ ಈಗಲೇ ಮುನ್ನುಡಿ ಬರೆಯುತ್ತಿದ್ದಾರೆ.

ಇನ್ನು ಚೇತನ್ ಅವರಂಥ ನಟ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರೂ ರಾಜಕೀಯದ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ ಇವರ ಹೊರತಾಗಿ ಒಂದೆರಡು ಸಿನಿಮಾ ಮಾಡಿದ ನಟ ನಟಿಯರೂ ಈಗ ರಾಜಕೀಯ ಪ್ರಿಯರಾಗಿದ್ದಾರೆ. ರಿಶಭ್ ಶೆಟ್ಟಿಯಂಥವರು ರಾಜಕೀಯವಾಗಿ ಸಕ್ರಿಯರಾಗಿಲ್ಲವಾದರೂ ಮುಂದೊಂದು ದಿನ ಕೆಲಸಕ್ಕೆ ಬರುತ್ತೆ ಎಂಬ ದಾರಿಯಲ್ಲಿ ಮಾತನಾಡುತ್ತಿದ್ದಾರೆ.

ಆದರೆ ಇದೇ ಹಾದಿಯಲ್ಲಿ ಕೆಲಸಕ್ಕೆ ಬಾರದ ನಾಲ್ಕು ಸಿನಿಮಾ ಮಾಡಿರುವ ಅವರಂಥವರೂ ತಳ ಬುಡ ಇಲ್ಲದ ಫಾರ್ವರ್ಡ್ ಮೇಸೇಜ್‌ಗಳನ್ನು ಓದಿಕೊಂಡು, ಹಾರ್ವಡ್ ಯೂನಿವರ್ಸಿಟಿಯಿಂದ ಬಂದವರಂತೆ ಮಾತಾಡುತ್ತಿರೋದು ಮಾತ್ರ ಎಡೆ ಚರ್ಚೆಗೆ ಕಾರಣವಾಗುತ್ತಿದೆ. ಎಲ್ಲಿಗೇ ಹೋದ್ರೂ ನಾನೊಬ್ಬ ನಟ, ನಟಿ ಅಂತ ಇಂಟ್ರಡ್ಯೂಸ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇರೋರು ಇವರು. ಆದರೂ, ವಯಸ್ಸಾದ ಮೇಲೆ ರಾಜಕೀಯ ಪಕ್ಷಗಳನ್ನು ಒಲಿಸಿಕೊಂಡು ರಾಜಕೀಯ ಪ್ರವೇಶಿಸುವ ಆಸೆ ಇಟ್ಟುಕೊಂಡವರಂತೆ ತಮಗೆ ಇಷ್ಟವಾದ ಪಕ್ಷದ ಪರ, ಅವರ ವಿರೋಧಿಗಳ ವಿರೋಧವಾಗಿ ಬಾಯಿಗೆ ಬಂದಿದ್ದು ಮಾತಾಡೋದು ಮಾತ್ರ ಹಾಸ್ಯಾಸ್ಪದ.

ಬಾಲಿವುಡ್‌ನಲ್ಲಿ ಸ್ಮೃತಿ ಇರಾನಿ, ಕಂಗನಾ ರಣಾವತ್ ಅವರೆಲ್ಲ ಮಾತಾಡುವಾಗ ನಾನೂ ಮಾತಾಡಿದ್ರೆ ಅವರಂತೆ ಆಗಬಹುದುಅಂತ ಇಲ್ಲಿನ ಕೆಲವು ಸೈಡ್ ಆಕ್ಟ್ರೆಸ್ ನಟಿಯರು ಕನಸು ಕಾಣೋದ್ರಲ್ಲಿ ತಪ್ಪಿಲ್ಲ ಬಿಡಿ. ಆದರೆ ಕೇವಲ ತಮ್ಮ ಸ್ವಾರ್ಥ ಸಾಧನೆಗಾಗಿ, ದೇಶದ ಹಿರಿಯ ನಾಯಕರ ಬಗ್ಗೆ, ಮಹಾತ್ಮರ ಬಗ್ಗೆ ಹಗುರವಾಗಿ ಮಾತಾಡುವ ಮೂಲಕ ತಮ್ಮ ಆತುರ ಮತ್ತು ಅಜ್ಞಾನವನ್ನ ತೋರಿಸಿಕೊಳ್ಳುತ್ತಿರೋದು ಮಾತ್ರ ದುರಂತ.

ಲೂಸ್ ಟಾಕ್
ಬಿಜೆಪಿ ಕಾರ್ಯಕರ್ತ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ನಿಮ್ ಪಾರ್ಟಿ ಸೋತೋಯ್ತಲ್ಲ, ಏನಾಯ್ತು?
-ಏನ್ ಮಾಡೋದು, ಸೋಷಿಯಲ್ ಮೀಡಿಯಾದ ಎಲೆಕ್ಷನ್ ಮಾಡಿದ್ದಿದ್ರೆ ಗೆಲ್ತಾ ಇದ್ವಿ ಅನ್ಸುತ್ತೆ

ಅದೆಂಗ್ರೀ, ಮೊದ್ಲೇ ಸೋಷಿಯಲ್ ಮೀಡಿಯಾದಲ್ಲಿ ಬರೀ ಫೇಕ್ ಅಕೌಂಟ್ ಗಳೇ ಜಾಸ್ತಿ?
-ಅದಕ್ಕೇ ಹೇಳಿದ್ದು..

ಓ ಹಂಗೆ, ಸರಿ, ಆದ್ರೂ, ಮೋದಿ ಅವರು ರೋಡ್ ಶೋ ಮಾಡಿ ಅಷ್ಟೆ ಕಷ್ಟಪಟ್ಟಿದ್ದು ವೇ ಆಗೋಯ್ತಲ್ಲ?
-ಅ ಆಗಿದ್ದು ತಪ್ಪು, ನಮ್ಮ ವೋಟುಗಳೆ ಟ್ರಾಫಿಕ್‌ನ ಜಾಮ್ ಆಗಿಬಿಟ್ವು

ಅಂದ್ರೆ ಮೋದಿ ಅಲೆ ಎಲ್ಲ ವರ್ಕ್ ಆಗ್ಲಿಲ್ಲ ಅಂತೀರಾ?
-ಆಗ್ತಿತ್ತು ಕಣ್ರೀ, ನಮ್ಮೋರು ಮೋದಿ ಬಂದಾಗ ಕಮಲದ ಹೂ ಬಿಟ್ಟು ಬರೀ ಚೆಂಡೂವು ಎಸೆದುಬಿಟ್ರು, ಪಾಪ ಜನ ಕನ್ಯೂಸ್ ಆಗೋದ್ರು.

ಓ ಹಂಗೆ..ಸರಿ, ಆದ್ರೆ ತೀರಾ ಈ ಪರಿ, ನಿಮ್ಮ ಮಿನಿಸ್ಟರ್‌ಗಳೇ ಸೋಲೋ ಥರ ಯಾಕಾಯ್ತು. ಪಾಪ ಸುಧಾಕರ್ ಅವರನ್ನೂ ಜನ ಬಿಡಲಿಲ್ವಲ್ರೀ? 
-ಏನ್ ಮಾಡೋದು, ಜನ, ನಮ್ಮ ಕ್ಷೇತ್ರಕ್ಕೆ ಸುಧಾಕರ ಬೇಡ, ಸುಧಾರಕ ಬೇಕು ಅಂದ್ಬಿಟ್ರು

ನೆಟ್ ಪಿಕ್ಸ್

ಖೇಮು ದಿನಾ ರಾತ್ರಿ ಕುಡ್ಕೊಂಡು ಮನೆಗೆ ಲೇಟ್ ಆಗಿ ಬರ್ತಾ ಇದ್ದ. ಖೇಮುಶ್ರೀ, ದಿನಾ ಬಯ್ತಾ ಇದ್ಳು. ಎಷ್ಟು ಹೇಳಿದರೂ ಖೇಮು ಕೇಳ್ತಾ ಇರಲಿಲ್ಲ. ಒಂದು ದಿನ ರೋಸಿ ಹೋದ ಖೇಮುಶ್ರೀ, ೧೨ ಗಂಟೆ ಒಳಗೆ ಮನೆಗೆ ಬನ್ನಿ ಅಂತ ಎಲ್ಲಾ ಸಲ ಹೇಳಿದೀನಿ, ಇನ್ನೊಂದ್ಸಲ ಲೇಟಾಗಿ ಬಂದ್ರೆ ನಾನು ನಿಮಗೆ ಡಿವೋರ್ಸ್ ಕೊಟ್ಟು, ಗಂಡನ್ನ ಬದಲಾಯಿಸ್ತೀನಿ ಅಷ್ಟೇ ಅಂತ ಹೆದರಿಸಿದಳು.

ಅದಕ್ಕೆ ಖೇಮು ಇನ್ಮೇಲೆ ಕುಡಿಯೋದನ್ನ ಬೇಗ ಮುಗಿಸಿ ಕರೆಕ್ಟ್ ಟೈಮಿಗೆ ಮನೆಗೆ ಬರ್ಬೇಕು ಅಂತ ಅಂದುಕೊಂಡ. ಅವತ್ತು ಸ್ನೇಹಿತರು ಸಿಗ್ತೀವಿ ಅಂತ ಹೇಳಿದ್ರು. ಸರಿ ಪಾರ್ಟಿಗೆ ಹೋದ. ಮಾತಾಡ್ತಾ, ಮಾತಾಡ್ತಾ, ಟೈಮ್ ಹೋಗಿದ್ದೇ ಗೊತ್ತಾಗಲಿಲ್ಲ. ಎಲ್ಲಾ ಪಾರ್ಟಿ ಮುಗಿಸಿ ಮನೆಗೆ ಬಂದ. ಮನೆಗೆ ಬರೋವಷ್ಟರಲ್ಲಿ ಬೆಳಗಿನ ಜಾವ ೩ ಗಂಟೆ ಆಗಿತ್ತು. ಖೇಮುಶ್ರೀ ಮಲಗಿದ್ಳು. ನಿzಗಣ್ಣ, ಎಷ್ಟು ಗಂಟೆ ರೀ ಅಂತ ಕೇಳಿದ್ಳು.

ಖೇಮು ೧೨ ಗಂಟೆ ಕಣೇ ಅಂದ. ಅದೇ ಸಮಯಕ್ಕೆ ಸರಿಯಾಗಿ ಗಡಿಯಾರದ ಗಂಟೆ ಹೊಡಕೊಳ್ಳೋಕೆ ಶುರು ಆಯ್ತು. ಅದು ಹನ್ನೆರಡು ಸಲ ಹೊಡೆದುಕೊಂಡಿದ್ದನ್ನು ಕೇಳಿದ ಖೇಮುಶ್ರೀ ಹಾಗೇ ಮಲಗಿಕೊಂಡಳು. ಬೆಳಗ್ಗೆ ಬೇಗ ಎದ್ದು ತಿಂಡಿ ಬಡಿಸುವಾಗ ಖೇಮುಶ್ರೀ ಕೇಳಿದ್ಳು, ನಿಜ ಹೇಳ್ರೀ ನೀವು ನಿನ್ನೆ ರಾತ್ರಿ ಬಂದಾಗ ಟೈಮ್ ಎಷ್ಟಾಗಿತ್ತು?. ಅದಕ್ಕೆ ಖೇಮು ಹೇಳಿದ, ನೀನೇ ಕೇಳಿದ್ಯ, ಗಡಿಯಾರ ಹನ್ನೆರಡು ಸಲ ಹೊಡಕೊಂತು ಅಲ್ವಾ, ಗಂಡನ್ನ ಬದಲಾಯಿಸ್ತೀನಿ ಅಂತೆಲ್ಲ ಹೇಳಬೇಡ ಈಗ ಅಂದ. ಅದಕ್ಕೆ ಖೇಮುಶ್ರೀ ಹೇಳಿದ್ಳು, ಇಲ್ಲ, ರೀ, ಗಂಡನ್ನ ಬದಲಾಯಿಸೋ ಅಗತ್ಯ ಇಲ್ಲ, ಆದ್ರೆ ನಮ್ಮನೆ ಗಡಿಯಾರನ
ಬದಲಾಯಿಸ್ಬೇಕು ಅಂದ್ಳು. ಯಾಕೆ ಅಂತ ಖೇಮು ಕೇಳಿದ.

ಅದಕ್ಕೆ ಖೇಮುಶ್ರೀ ಹೇಳಿದ್ಳು, ಪಾಪ ನಮ್ ಗಡಿಯಾರಕ್ಕೆ ವಯಸ್ಸಾಯ್ತು, ಹುಷಾರಿಲ್ಲ ಅನ್ಸುತ್ತೆ. ನಿನ್ನೆ ರಾತ್ರಿ ನೀವು ಬಂದಾಗ ನಮ್ಮ ಗಡಿಯಾರ ೩ ಸಲ ಬಡಕೊಂತು, ಆಮೇಲೆ ಓಹ್ ಶಿಟ್ ಅಂತು, ಮತ್ತೆ ೭ ಸಲ ಬಡಕೊಂತು, ಮಧ್ಯೆ ಒಂದ್ಸಲ ಕೆಮ್ಮಿತು, ಆಮೇಲೆ ಎರಡು ಸಲ ಸೀನಿತು, ಮತ್ತೆ ಗಂಟಲು ಸರಿ ಮಾಡ್ಕೊಂಡು ೨ ಸಲ ಬಡಕೊಂಡು, ಹಾಲ್‌ನ ಟೇಬಲ್ ಮೇಲಿದ್ದ -ವರ್ ವಾಸ್‌ಗೆ ಡಿಕ್ಕಿ ಹೊಡೆದು ಅದನ್ನ ಕೆಳಗೆ ಬೀಳಿಸಿ ಅ ಇದ್ದ ಬೆಡ್ ಮೇಲೆ ಬಿದ್ಕೊಂತು.

ಲೈನ್ ಮ್ಯಾನ್

ಬಿಜೆಪಿ- ಈ ಸಲ ನಮಗೆ ಗ್ಯಾರಂಟಿ ಬಹುಮತ ಬರುತ್ತೆ. ಬರದೇ ಇದ್ರೂ ಸರಕಾರ ಮಾಡೋದು ನಮಗೆ ಗೊತ್ತು
ಮತದಾರ- ರೆಸಾರ್ಟಿಗೆ ಹೋಗ್ತಿ, ವಿಧಾನಸೌಧಕ್ಕೆ ಹೋಗ್ತಿ, ಆದ್ರೆ ನಿನ್ನ ತೀರ್ಮಾನ ಮೆಟ್ಟಿಲಲ್ಲಿ ನಾನು ಮಾಡ್ತೇನೆ.

ಈ ಬಾರಿ ಆಪರೇಶನ್ ಮಾಡಿಸ್ಕೊಂಡೇ ಸರಕಾರ ರಚನೆ ಆಗುತ್ತೆ ಅಂದ್ಕೊಂಡಿದ್ದವರಿಗೆ ಗುಡ್ ನ್ಯೂಸ್
-ಆಪರೇಷನ್ -ಲ್ಡ, ಬಟ್ ಪೇಷೆಂಟ್ ಈಸ್ ಹೆಲ್ತಿ

ಏನ್ ಸಿಟಿ ರವಿ ಅವ್ರೇ, ಕಿಡ್ನಿ ಸ್ಟೋನ್ ಅಂತ ಮೊನ್ನೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ರಿ, ಇವತ್ತು ಎಲೆಕ್ಷನ್ನಲ್ಲಿ ಸೋತ್ಬಿಟ್ರಲ್ಲಾ?

-ಕಿಡ್ನಿಯಲ್ಲಿ ಸ್ಟೋನ್ ಇದ್ದೋನಿಗೆ ಇದೆಲ್ಲ ಅಂಟೋದೂ ಇಲ್ಲ

ಏನ್ ಬಿ.ಸಿ ಪಾಟೀಲ್ರೇ, ಎಲೆಕ್ಷನ್ನಲ್ಲಿ ಗೆದ್ರಂತೆ?
-ಯಾವ್ ಬೋ…ಮಗ ರೀ ಹೇಳಿದ್ದು..
ಜನಾರ್ಧನ ರೆಡ್ಡಿ ಅವರೇ, ಅಂತೂ ಗೆದ್ಬಿಟ್ರಿ, ಕಂಗ್ರಾಟ್ಸ್
-ಇದು ನನ್ನ ಗೆಲುವಲ್ಲ, ಜನತಾ ಜನಾರ್ಧನನ ಗೆಲುವು
ಬಿಜೆಪಿ ನಾಯಕರು ಜ್ಯೋತಿಷ್ಯ ಕೇಳೋಕ್ ಹೋಗಲ್ಲ
-ಯಾಕಂದ್ರೆ ಜ್ಯೋತಿಷಿಗಳು ಕೈ ನೋಡಿ ಭವಿಷ್ಯ ಹೇಳ್ತಾರೆ

ಕ್ರಿಕೆಟ್ ಟೀಮ್ ಸೆಲೆಕ್ಷನ್
-ಅವ್ನ್ ಲಾ ಮ್ಯಾಚ್ ಚೆನ್ನಾಗೇ ಆಡಿದ್ನಲ್ಲ, ಅವನನ್ನ ‘ಯಾಕ್ ಬಿಟ್ರು?’
-‘ಅವ್ನಿಗೆ ಪೈಲ್ಸ ಆಗಿದೆಯಂತೆ, ಅದಕ್ಕೇ ಕೂಡ್ಸಿದಾರೆ’
-‘ಪೈಲ್ಸ ಆದ್ರೆ ಕೂಡ್ಸಂಗಿಲ್ಲ, ಆಡಿಸ್ಬೇಕು ತಾನೇ?’

ಯಾರ ಮೇಲೂ ಬ್ಯಾಟಿಂಗ್ ಮಾಡದ ಶಾರ್ದೂಲ್ ಠಾಕೂರ್ ಆರ್‌ಸಿಬಿ ಮೇಲೆ ಆಡಿದ್ದಕ್ಕೆ ಆರ್‌ಸಿಬಿ ಪ್ಲೇಯರ್ಸ್ ಏನ್ ಹೇಳಿದ್ರು?
– ಯೇ ಹಾಥ್ ಮುಝೆ ದೇದೇ ಠಾಕೂರ್
ಹೆಂಡತಿಗೆ ಪ್ರಾಮಿಸ್ ಮಾಡಿದ ಟೈಮಿಗೆ ಸರಿಯಾಗಿ ಉಂಗುರ ಕೊಡಿಸದೆ ಕಾಯಿಸಿದ್ರೆ, ಅದು
-ಬಫ‘ರಿಂಗ್’
ಐಪೋನ್ ಪ್ರಿಯರ ಪ್ರಕಾರ
-ಎ ಫಾರ್ ಆಪಲ್ ಅಲ್ಲ, ಐ ಫಾರ್ ಆಪಲ್