Thursday, 12th December 2024

ಅಪ್ಪಟ ದೇಶಪ್ರೇಮಿ ಗಂಭೀರ್

ಪ್ರಸ್ತುತ

ಶ್ರೀಧರ್‌ ಡಿ.ರಾಮಚಂದ್ರಪ್ಪ

ಭಾರತೀಯ ಕ್ರಿಕೆಟ್ ಕ್ಷೇತ್ರ ಕಂಡ ಅದ್ಭುತ ಕ್ರಿಕೆಟಿಗರಲ್ಲಿ ಒಬ್ಬರು, ದೇಶದ ರಾಜಧಾನಿ ದೆಹಲಿ ಮೂಲದ ಗೌತಮ್ ಗಂಭೀರ್. ಆರಂಭಿಕ ಬ್ಯಾಟ್ಸಮನ್ ಆಗಿ ಕೆಚ್ಚೆದೆಯ ಹೋರಾಟಕ್ಕೆ ಹೆಸರುವಾಸಿಯಾದ ಗಂಭೀರ್, ಭಾರತೀಯ ಪುರುಷರ ಕ್ರಿಕೆಟ್ ತಂಡಕ್ಕೆ ಮುಂಬರುವ ಶ್ರೀಲಂಕಾ ಟೂರ್ನಿಗೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಮಾಜಿ ನಾಯಕ, ಕ್ರಿಕೆಟ್ ಅಂಗಳದಲ್ಲಿ ಗೋಡೆ ಎಂದೇ ಖ್ಯಾತಿ ಪಡೆದಿರುವ ಇತ್ತೀಚೆಗೆ ನಡೆದ ಟಿ-೨೦ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿ ಸಿದ್ದ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಇಷ್ಟು ದಿನಗಳ ಕಾಲ ನಿರ್ವಹಿಸಿದ್ದ ಹುzಗೆ ವಿದಾಯ ಹೇಳಿದ್ದಾರೆ. ಅವರ ಜಾಗಕ್ಕೆ ಅನೇಕರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಬಿಸಿಸಿಐ ಮಾತ್ರ ಹಾಟ್ ಫೇವರಿಟ್ ಗೌತಮ್ ಗಂಭೀರ್ ಅವರನ್ನು ಆಯ್ಕೆ ಮಾಡಿದೆ. ಆ ಮುಖೇನ ಯುವ ಪ್ರತಿಭೆಗೆ ಮಣೆ ಹಾಕಿ ಜೈ ಎಂದಿದೆ. ೪೨ ನೇ ವಯಸ್ಸಿನ ಗೌತಮ್ ಗಂಭೀರ್ ೨೦೦೩ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ ಏಕದಿನ, ಟೆ, ಟಿ-೨೦ ಹಾಗೂ ಜನಪ್ರಿಯತೆ ಪಡೆದಿರುವ ಐಪಿಎಲ್ ಟೂರ್ನಿಯಲ್ಲಿ ಬ್ಯಾಟ್ಸಮನ್ ಆಗಿ ಅವರ ಪ್ರದರ್ಶನ ಗಣನೀಯ, ಗಮನಾರ್ಹ.

ದೇಶೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಅವರದು ಅತ್ಯುತ್ತಮ ಫಾರ್ಮ್. ಸರಿ ಸುಮಾರು ಹದಿಮೂರು ವರ್ಷ ಅಂದರೆ ೨೦೦೩-೨೦೧೬ರವರಗೆ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರನಾಗಿ ಗೌತಮ್ ಗಂರ್ಭೀ ಅವರದು ಆಕರ್ಷಕ, ಮಹತ್ವದ ಕೊಡುಗೆ. ಹಾಗೆಯೇ ೨೦೦೭, ೨೦೧೧ ರ ಏಕದಿನ, ಟಿ-೨೦ ಸರಣಿಗಳಲ್ಲಿ ಗಂಭೀರ್ ಕಾಣಿಕೆ ಅಮೋಘ. ಏಕೆಂದರೆ, ಈ ಎರಡು ಟೂರ್ನಿಯ ಫೈನಲ್‌ನಲ್ಲಿ ಗೌತಮ್ ಗಂಭೀರ್ ಅವರ ಉತ್ತಮ ಪ್ರದರ್ಶನ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಕ್ರಿಕೆಟ್ ಮೈದಾನದಲ್ಲಿ ದೇಶಪ್ರೇಮದ ಕೆಚ್ಚೆದೆಯ ಹೋರಾಟಕ್ಕೆ ಹೆಸರುವಾಸಿಯಾದ ಗಂಭೀರ್ ಬೀಸಾಟಕ್ಕೆ ಹೇಳಿ ಮಾಡಿಸಿದವರು. ಮುಖ, ಮೂಗಿನ ಮೇಲೆ ಸಿಟ್ಟಿನಿಂದ ಬ್ಯಾಟಿಂಗ್ ಮುಖೇನ ಉತ್ತರ ನೀಡುತ್ತಿದ್ದ ಗಂಭೀರ್ ಉತ್ತಮ ಫೀಲ್ಡರ್ ಸಹ. ತಮ್ಮ ಖಡಕ್ ಪ್ರದರ್ಶನ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಚಿರಪರಿಚಿತರಾದ ಗೌತಮ್ ತಮ್ಮ ತಾಯ್ನಾಡಿನ ಬಗ್ಗೆ ಅಪಾರ ಪ್ರೀತಿ, ಗೌರವ, ಅಭಿಮಾನ ಇಟ್ಟುಕೊಂಡವರು. ಇದೇ ಭಾವನೆ ಅವರನ್ನು ರಾಜಕಾರಣಕ್ಕೂ ಎಳೆದು ತಂದಿತು. ಕಳೆದ ಅವಧಿಯಲ್ಲಿ ಅಂದರೆ ೨೦೧೯ ರಲ್ಲಿ ಭಾರತೀಯ ಜನತಾ ಪಕ್ಷ-ಬಿಜೆಪಿ ಮೂಲಕ ಲೋಕಸಭೆ
ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡು ಸಂಸದರಾಗಿ ಕೆಲಸ ಮಾಡಿದವರು.

ಆದರೆ ಯಾಕೋ ಅವರಿಗೆ ರಾಜಕೀಯ ಕ್ಷೇತ್ರ ಒಗ್ಗಿಬರಲಿಲ್ಲ. ಆದಕಾರಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿಲ್ಲ.ಇದೇ ಸಮಯದಲ್ಲಿ ಭಾತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಅವಧಿ ಕೊನೆಗೊಂಡಿದೆ. ಈ ವೇಳೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ-ಬಿಸಿಸಿಐಗೆ ದ್ರಾವಿಡ್ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಗೆ ಭಾರತೀಯ ಕ್ರಿಕೆಟ್ ಕಂಡ ಅದ್ಭುತ ಪ್ರತಿಭೆಗಳಲ್ಲಿ ಒಬ್ಬರಾದ ಗೌತಮ್ ಗಂಭೀರ್ ಉತ್ತರ ರೂಪದಲ್ಲಿ ಸಿಕ್ಕಿದ್ದಾರೆ.

ನಾಯಕ ರೋಹಿತ್ ಶರ್ಮಾ ಹಾಗೂ ಕಿಂಗ್ ಕೋಹ್ಲಿ ಸದ್ಯ ಹಿರಿಯ ಆಟಗಾರಾಗಿದ್ದು, ಉಳಿದಂತೆ ಹೊಸ, ಯುವ ಆಟಗಾರ ಪಡೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸದ್ಯ ಇದೆ. ಹೀಗೀರುವಾಗ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಗೌತಮ್ ಗಂರ್ಭೀ ಮುಂದೆ ಹಲವು ಸವಾಲುಗಳಿವೆ. ಭಾರತೀಯ ಕ್ರಿಕೆಟ್ ಇತಿಹಾಸದ ಕಿರಿಯ ಮುಖ್ಯ ಕೋಚ್ ಆಗಿ ನಿಯುಕ್ತಿಗೊಂಡಿರುವ ಗೌತಮ್ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಉತ್ತಮ ಪ್ರದರ್ಶನಕ್ಕೆ ಹೇಗೆ ತಂಡವನ್ನು ತಯಾರು ಮಾಡುತ್ತಾರೆ ಎಂಬ ಪ್ರಶ್ನೆ, ಅನುಮಾನ ಎಲ್ಲರಲ್ಲೂ ಇದ್ದೇ ಇದೆ.

ಅವೆ ಸಂಶಯಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಕಟ್ಟಾ,ಅಪ್ಪಟ ದೇಶಭಕ್ತ ಗಂಭೀರ್ ಅವರು ಯಾವ ರೀತಿ ತಂಡವನ್ನು ಕಟ್ಟುವರು ಎಂಬುದು ಅವರ ಮುಂದಿರುವ ಜಿಜ್ಞಾಸೆ. ಏನೇ ಆಗಲಿ, ಭಾರತೀಯ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಗಿ ನೇಮಕಗೊಂಡಿರುವ ‘ಆಂಗ್ರಿ ಯಂಗ್ ಮ್ಯಾನ್’ ಗಂಭೀರ್ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳು! ಇತ್ತೀಚೆಗೆ ಅಮೇರಿಕ-ವೆಸ್ಟ್ ಇಂಡೀಸ್ ನಲ್ಲಿ ನಡೆದ ಟಿ-೨೦ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ
ಪ್ರದರ್ಶನದ ಮೂಲಕ ಗಮನಸೆಳೆದಿರುವ ಭಾರತ ಯುವ ಕ್ರಿಕೆಟ್ ತಂಡಕ್ಕೆ ಸೂತ್ರಧಾರಿಯಾಗಿ ನೇಮಕಗೊಂಡಿರುವ ಗಂಭೀರ್ ಅವರು ಉತ್ತಮ ತರಬೇತಿ ನೀಡುವ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಉತ್ತಮ, ಉಜ್ವಲ ಭವಿಷ್ಯವನ್ನು ರೂಪಿಸಲಿ ಎಂಬುದು ನಮ್ಮೆಲ್ಲರ ನಿರೀಕ್ಷೆ,ಆಶಯ-ಹಾರೈಕೆ!