Sunday, 15th December 2024

ನಮಾಮಿ ಗಂಗೆ; ನಿರ್ಮಲ ಗಂಗೆ

ಪ್ರಚಲಿತ

ವಿಶ್ವನಾಥ್ ಭಟ್

ಬೋಳು ನೆಲವನ್ನು ಆರಲು ಬಿಡದೇ ಸಾಧ್ಯವಾದಷ್ಟು ಹುಲ್ಲು, ಗಿಡ ಗಂಟೆಗಳನ್ನು ಬೆಳೆಯಗೊಡುವುದೊಳಿತು. ಸಹಜವಾಗಿ ಹಸಿರು ಬೆಳೆಯದಿದ್ದರೂ ಹೆಸರು, ಉದ್ದು, ಹುರುಳಿಯಂಥವನ್ನು ಚೆಲ್ಲಿಯಾದರೂ ಅದನ್ನು ಉಳಿಸಿಕೊಳ್ಳುವುದು ಉಚಿತ. ತೆರೆದೆ ಭೂಮಿ ಎಂದರೆ ಅದು ಭವಿಷ್ಯದ ಬರಕ್ಕೆ ಆಹ್ವಾನ. ಹೀಗಾಗಿ ಭೂತಾಯ ಮೈಯ ಆದಷ್ಟು ಬೆತ್ತಲಾಗದಂತೆ ಕಾಪಾಡುವುದೊಳಿತು.

ಗಂಗಾನದಿಯು ಭಾರತದ ಸಮಷ್ಟಿ ಪ್ರಜ್ಞೆ, ತನ್ನ ಉಗಮದಿಂದ ಆರಂಭಿಸಿ ಮುಖಜ ಭೂಮಿಯ ವರೆಗೆ ಕಣ-ಅಣುಗಳಿಂದ ಪೊರೆಯುವ ದೇವನದಿಯೂ ದೇಶದ ಅರ್ಥವ್ಯವಸ್ಥೆಯನ್ನೂ ಅವರಿಸಿ ಕೊಂಡ ವಳು. ಕಾಲಪ್ರವಾಹದಲ್ಲಿ ಮೂಲ ಹರಿವನ್ನೇ ಮರೆಯುವ ಮಟ್ಟಿಗೆ ಕಲುಷಿತವಾದಾಗ ಗಂಗೆಯ ಶುದ್ಧೀಕರಣಕ್ಕೆ ಸರಕಾರಗಳು ಪ್ರಾಮುಖ್ಯತೆಯನ್ನು ನೀಡಿವೆ.

ಚಾಲ್ತಿಯಲ್ಲಿ ಜಲಸಂಸಾಧನ-ನದಿ ವಿಕಾಸ ಹಾಗೂ ಗಂಗಾ ಸಂರಕ್ಷಣಾ ವಿಭಾಗಗಳು ಜಲಶಕ್ತಿ ಮಂತ್ರಾಲಯದಲ್ಲಿರುವ ಬರುವ ಪ್ರಕೋಷ್ಠಗಳು. ನಮಾಮಿ ಗಂಗೆಯು ಸರಕಾರಿ ಪ್ರಾಯೋಜಿತ ಯೋಜನೆಯ ಹೊರತಾಗಿ ಜನ ಗಂಗೆಯಾಗಿ, ಅರ್ಥ ಗಂಗಾ, ಗಂಗಾ ಗ್ರಾಮ, ನಿರ್ಮಲ ಗಂಗಾ, ಅವಿರಲ ಗಂಗಾ, eನ ಗಂಗಾ, ಗಂಗಾ ವಿಲಾಸ ಎಂಬೆ ಅವತರಣಿಕೆಗಳಲ್ಲಿ ಜನಸ್ರೋತವಾಗಿ ಶುದ್ಧತೆಯತ್ತ ಹೊರಳುತ್ತಿದೆ.

ನಮಾಮಿ ಗಂಗೆಯನ್ನು ಕೇವಲ ನದಿ ಸ್ವಚ್ಛಗೊಳಿಸುವ ಯೋಜನೆಯಾಗಿ ನೋಡಿದರೆ ನಮ್ಮ ದೃಷ್ಟಿ ಪೇಲವವಾಗಬಹುದೇನೋ. ನದಿಗಳ ನಾನು ಗಂಗೆ’ ಎಂದು ಗೀತಾಚಾರ್ಯ ವಿಭೂತಿ ಪ್ರಜ್ಞೆಯನ್ನು ಹೇಳಿದುದು ಗಂಗಾನದಿಯ ಹಿರಿಮೆಯನ್ನು ಎತ್ತಿಹಿಡಿಯುತ್ತದೆ. ೧.೦೮ ಮಿಲಿಯನ್ ಚದರ ಕಿಲೋಮೀಟರ್ ಗಂಗಾ ಜಲಾನಯನ ಪ್ರದೇಶದಲ್ಲಿ ಬರೋಬ್ಬರಿ ೬೨೫ ಮಿಲಿಯನ್‌ಗಿಂತಲೂ ಹೆಚ್ಚು ಜನರು ನೆಲೆಸಿದ್ದಾರೆ. ಗಂಗಾ ನದಿಯೂ ೨೫೦೦ ಕಿಮೀ ಉದ್ದಕ್ಕೆ ಪ್ರವಹಿಸಿ ಮೂರೂ ರಾಜ್ಯಗಳನ್ನು ಮೊಗ್ಗಿನಂತೆ ಪೋಣಿಸಿ, ಹನ್ನೊಂದು ರಾಜ್ಯಗಳಲ್ಲಿ ಬಸಿದು ಸಾಗರವನ್ನು ಸೇರುತ್ತದೆ. ದೇಶದ ಜನ ಸಾಂದ್ರತೆಗಿಂತ ಗಂಗಾ ಜಲಾನಯನದ ಜನಸಾಂದ್ರತೆ ಹೆಚ್ಚು!

ಅಂದರೆ ಗಂಗೆಯು ದೇಶದ ಶೇ.೨೭ರಷ್ಟು ಭೂ ಭಾಗದ ೪೭ ಪ್ರತಿಶತ ಜನಸಂಖ್ಯೆಯನ್ನು ಪೋಷಿಸುತ್ತದೆ. ಗಂಗೆಗೆ ದಿನವೊಂದಕ್ಕೆ ಹರಿಯಬಿಡುತ್ತಿದ್ದ ೧.೭ ಬಿಲಿಯನ್ ಲೀಟರ್ ತ್ಯಾಜ್ಯದಲ್ಲಿ ೮೯ ಮಿಲಿಯನ್ ಲೀಟರ್ ಕೊಳಚೆ ನೀರಿತ್ತು. ನದಿಯ ಮಾಲಿನ್ಯಕಾರಕಗಳು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಸುರಕ್ಷತಾಮಟ್ಟದ ೩೦೦೦ಪಟ್ಟು ಅಪಾಯದ ಮಿತಿ ಮೀರಿಬಿಟ್ಟಿದ್ದವು. ನೀರಿನಲ್ಲಿರುವ ಕೊಲಿಫಾರ್ಮ್ ಬ್ಯಾಕ್ಟೀರಿಯಾ ನೂರರ ಬದಲು ಐದೂವರೆ ಸಾವಿರವನ್ನು ಮುಟ್ಟಿತ್ತು. ನದಿಯ ಕೆಲ ಪಾತ್ರಗಳು ಮಿತಿಮೀರಿದ ಮಾಲಿನ್ಯವನ್ನು ಹೊಂದಿ ಹರಿಯುತ್ತಿದ್ದರೆ, ಇನ್ನು ಕೆಲವು
ಪಾತ್ರಗಳಲ್ಲಿ ಅಣೆಕಟ್ಟುಗಳಲ್ಲಿ ಬಂಧಿಯಾಗಿದ್ದ ಕಾರಣದಿಂದ ಹರಿವಿನ ಗಾತ್ರ ಕಿರಿದಾಗುತ್ತಿದ್ದವು.

ನಮಾಮಿ ಗಂಗೆಯ ಅಡಿಯಲ್ಲಿ ನದಿ ನೀರಿನ ಗುಣಮಟ್ಟವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣಾ ಮಂಡಳಿಯು ಪರೀಕ್ಷಿಸುತ್ತಿದೆ. ಗಂಗೆಯ ಹರಿವಿನ ಆಯ್ದ ೯೭ ಜಾಗದ ಮಾದರಿಯನ್ನು ಪರೀಕ್ಷಿಸಿ, ೨೦೧೪ಕ್ಕೆ ಹೋಲಿಸಿದಂತೆ ೨೦೨೧ರಲ್ಲಿ ಗುಣಮಟ್ಟ ಸುಧಾರಿಸಿರುವುದು ವ್ಯಕ್ತವಾಗಿದೆ. ನದಿ ನೀರು ಸ್ನಾನಮಾಡುವ ಕನಿಷ್ಠ ಮಟ್ಟವನ್ನು ತಲುಪಿರುವುದು ಯಶಸ್ವಿಯಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಕ್ಕೇ. ನಮಾಮಿ ಗಂಗೆಯ ಮೊದಲ ಹಂತದ ೩೭೪ ಪ್ರಾಜೆಕ್ಟ್‌ಗಳಲ್ಲಿ ೨೧೦ ಈಗಾಗಲೇ ಮುಗಿದು ಕಾರ್ಯನಿರ್ವಹಿಸುತ್ತಿವೆ.

ಆದರೆ ನದಿ ಶುದ್ಧೀಕರಣಕ್ಕೆ ತೊಡಕುಗಳು ನೂರೆಂಟಿವೆ. ಕೊಳಚೆ ನೀರಿನ ಪರಿಮಾಣದ ಲೆಕ್ಕಹಾಕುವಿಕೆ, ಎಸ್‌ಟಿಪಿ ಸಾಮರ್ಥ್ಯ, ಶಕ್ತಿಯ ಅವಶ್ಯಕತೆ ಇವೆಲ್ಲವುಗಳಲ್ಲಿ ಸಂದೇಹವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಗಂಗೆಯನ್ನೇಕೆ ಪರಿಶುದ್ಧವಾಗಿಸಲು ಸಾಧ್ಯವಿಲ್ಲ ಎಂಬ ಒಕ್ಕಣೆಯ ಅನೇಕ ಬರಹ ಗಳೂ ಅಂತರ್ಜಾಲದಲ್ಲಿ ಲಭ್ಯವಿದೆ. ಇತರ ಬಹುತೇಕ ಸಮೀಕ್ಷೆಗಳಲ್ಲಿ ಭಾರತವನ್ನು ನಡೆಸಿಕೊಳ್ಳುವಂತೆಯೇ ಕಲುಷಿತ ನದಿಗಳ ಪಟ್ಟಿಯಲ್ಲಿಯೂ ಗಂಗೆಗೇ ಅಗ್ರಸ್ಥಾನ. ಜನರ ನಿಲುವನ್ನು ನದಿ ಸಂರಕ್ಷಣೆಗೆ ಸರಿಹೊಂದಿಸಿದರೆ ಮಾತ್ರ ಯೋಜನೆಗಳು ಯಶಸ್ಸು ಕಾಣಬಹುದಾಗಿತ್ತು.

ಅದಕ್ಕಾಗಿಯೇ ಗಂಗೆಯ ಶುದ್ಧೀಕರಣಕ್ಕೆ ನಮಾಮಿ ಗಂಗೆಯಂತಹ ಬಹು ಆಯಾಮದ, ಜನ ಮಾನಸದಲ್ಲಿ ಆವರಿಸಿಕೊಳ್ಳುವ ಂi ಜ ಂi
ಅಗತ್ಯವಿತ್ತು. ನದಿ ಶುದ್ದೀಕರಣ ಯೋಜನೆಗೆ ಮುಖ್ಯವಾಗಿ ಬೇಕಾಗಿದ್ದುದು ಕೊಳಚೆ ನೀರನ್ನು ಸರಾಗವಾಗಿ ಒಯ್ಯುವ ಚರಂಡಿ ವ್ಯವಸ್ಥೆ ಮತ್ತು ಶುದ್ಧೀಕರಿಸುವ ಎಸ್‌ಟಿಪಿಗಳು. ಬರೋಬ್ಬರಿ ೧೭೫ ಎಸ್‌ಟಿಪಿಗಳು ದಿನಕ್ಕೆ ಐದೂವರೆ ಸಾವಿರ ದಶಲಕ್ಷ ನೀರನ್ನು ಶುದ್ದೀಕರಿಸುವ ಸಾಮರ್ಥ್ಯ ಹೊಂದಿವೆ. ಆದರೆ ಈ ಐದು ರಾಜ್ಯಗಳಲ್ಲಿನ ಕೊಳಚೆ ನೀರಿನ ಉತ್ಪಾದನೆಯ ದರ ದಿನಕ್ಕೆ ಹತ್ತು ಸಾವಿರ ದಶಲಕ್ಷ ಲೀಟರುಗಳು. ಈ ಪ್ರಮಾಣದ ನೀರು ಒಂದು ಸಾಮಾನ್ಯ ನದಿಯ ಹರಿವಿನ ಪ್ರಮಾಣದಷ್ಟೇ ಇವೆ.

ಗಂಗಾ ಸ್ವಚ್ಛತಾ ರಾಷ್ಟ್ರೀಯ ಮಿಷನ್ ಇವಿಷ್ಟೇ ಧ್ಯೇಯಗಳನ್ನು ಹೊಂದಿಲ್ಲ. ಇದರೊಂದಿಗೆ ಅಪರೂಪದ ಮತ್ತು ಅತ್ಯಾವಶ್ಯಕ ಯೋಜನೆಗಳನ್ನೂ ಆಲೋಚಿಸಿದೆ. ನದಿಯ ಮೇಲ್ಮೈ ಶುಚಿಗೊಳಿಸುವುದು, ಜಲ-ಜೈವಿಕತೆಯನ್ನು ಮರುಸ್ಥಾಪಿಸುವುದು, ಕಾರ್ಖಾನೆಗಳು ಹೊರಸೂಸುವ ನೀರಿನ ಮೇಲಿನ ನಿಯಂತ್ರಣವೂ ನಮಾಮಿ ಗಂಗೆಯ ಅಡಿಯ ಕೈಗೆತ್ತಿಕೊಳ್ಳಲಾಗಿದೆ.

ಡಿಸ್ಟಿಲರಿ, ಟ್ಯಾನರಿ, ಪೇಪರ್- ಸಕ್ಕರೆ ಕಾರ್ಖಾನೆ, ವಸೋದ್ಯಮಗಳಿಂದ ಹೊರಸೂಸುವ ಕಲುಷಿತ ನೀರಿಗೆ ಭರಪೂರ ನಿರ್ಬಂಧ, ಆಕ್ಷನ್ ಪ್ಲಾನ್‌ಗಳು ಬಿದ್ದಿವೆ. ಶೂನ್ಯ ದ್ರವ ತ್ಯಾಜ್ಯದ ಕಲ್ಪನೆಯೊಂದಿಗೆ ವಿಜಿಲೆ ಸ್ಕ್ವಾಡ್ ಪರಿಶೀಲನೆಯ ಕಟ್ಟುಪಾಡುಗಳನ್ನೂ ನದಿಯ ಪಾತ್ರಕ್ಕೆ ಕಡ್ಡಾಯ ಗೊಳಿಸಲಾಗಿವೆ. ಗಂಗೆಯ ಶುದ್ಧೀಕರಣದೊಂದಿವೆ ಸುಸ್ಥಿರತೆಗೆ ಅರ್ಥ್ ಗಂಗಾ ಎಂಬ ಆಲೋಚನೆಯನ್ನು ೨೦೧೯ರಲ್ಲಿ ಪ್ರಸ್ತಾಪಿಸಲಾಯಿತು.
ಇದು ಗಂಗೆಯ ಆಸುಪಾಸಿನ ಜನರ ಜೀವನದ ಅರ್ಥವ್ಯವಸ್ಥೆಯನ್ನು ಬಲಪಡಿಸುವ ಆಲೋಚನೆ. ಇದರಲ್ಲಿ ಪ್ರವಾಸೋದ್ಯಮ ಇಲಾಖೆಯ ಟೂರಿಸಂ
ಸರ್ಕ್ಯೂಟ್, ಕೃಷಿ ಇಲಾಖೆಯ ನೈಸರ್ಗಿಕ ಕೃಷಿ ಕಾರಿಡಾರ್, ನಗರ ವ್ಯವಹಾರಗಳ ಸಚಿವಾಲಯದ ಒಳಚರಂಡಿಗಳ ನಕಾಶೆಗಳ ತಯಾರಿ ಮತ್ತು ಘನ ತ್ಯಾಜ್ಯ ನಿರ್ವಹಣೆ, ಪರಿಸರ ಸಚಿವಾಲಯವು ಹಸಿರೀಕರಣದ ಜತೆಗೆ ಗಂಗಾ ಡಾಲಿನ್ ರಕ್ಷಣೆಯ ಜವಾಬ್ದಾರಿಗಳನ್ನೂ ಹೊಂದಿವೆ.

ಅರ್ಥ್ ಗಂಗೆಯ ಇನ್ನೊಂದು ಮಹತ್ವದ ನಿರ್ಣಯ- ಎಸ್.ಟಿ.ಪಿ. ಗಳಿಂದ ಉತ್ಪತ್ತಿಯಾದ ರೊಚ್ಚು ಮಣ್ಣಿನ ಮೌಲ್ಯವರ್ಧನೆ ಹಾಗೂ ತ್ಯಾಜ್ಯದಿಂದ
ವಿದ್ಯುದುತ್ಪಾದನೆ. ಹೀಗಾಗಿ ಗಂಗೆಯ ಮಾಲಿನ್ಯ ತೊಳೆಯುವ ಕಲ್ಪನೆಯು ಒಂದು ವಿವಿಧೋದ್ದೇಶದ ವ್ಯಾಪಕ ಯೋಜನೆಯಾಗುವತ್ತ ಹೊರಳುತ್ತಿದೆ. ದೀರ್ಘತೆಯಲ್ಲಿ ಗಂಗೆಗಿಂತ ಎಂಟು ಪಟ್ಟು ಕಿರಿದಾಗಿರುವ ಥೇಮ್ಸ ನದಿಯ ಪುನರುಜ್ಜೀವನದ ಕಥೆ ಗಂಗೆಯಷ್ಟೇ ಆಶಾದಾಯಕ ಮತ್ತು ಪ್ರೇರಣೆಯೇ.
ಲಂಡನ್‌ನ ಹೃದಯಭಾಗದಲ್ಲಿ ಹರಿಯುತ್ತಿದ್ದ ಥೇಮ್ಸ್ ನಗರದ, ಕಾರ್ಖಾನೆಯ ಕೊಳಚೆಯನ್ನೆ ಅಪ್ಪಿಕೊಂಡು ೧೮೫೮ ರ ಬೇಸಗೆಗೆ ಗ್ರೇಟ್ ಸ್ಟಿಂಕ್ (ಮಹಾ ದುರ್ನಾತದ) ಕೂಪವಾಗಿ ಪರಿಣಮಿಸಿತ್ತು.

೧೯೫೭ಕ್ಕೆ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಥೇಮ್ಸ್ ನದಿಯನ್ನು ಅಳಿದ ನದಿಯೆಂದೇ ಘೋಷಿಸಿಬಿಟ್ಟಿತ್ತು. ಕಳೆದ ಅರವತ್ತು ವರ್ಷಗಳಲ್ಲಿ ಥೇಮ್ಸ
ನದಿಯ ನೀರಿನ ಗುಣಮಟ್ಟವನ್ನು ಮರುಸ್ಥಾಪಿಸಿದ ಪರಿಗಾಥೆಯೇ. ನದಿ ಶುದ್ಧೀಕರಣ, ಪುನರುಜ್ಜೀವನದಂತಹ ಮಾದರಿಗಳಿಗೆ ಅಭಿವೃದ್ಧಿಹೊಂದಿದ ರಾಷ್ಟ್ರಗಳು ಸಿದ್ಧ ಮಾದರಿಯನ್ನು ಕಂಡುಕೊಂಡಿವೆ. ದಡದ ಸವಕಳಿ, ಹೂಳಿನ ಸಮಸ್ಯೆ, ಹರಿವಿನ ಸ್ವರೂಪದ ಯಾವುದೋ ಸಮಸ್ಯೆಗಳಿಗೆ ನದಿಯ ಕೆಲ ಗುಂಟದ ಭಾಗಕ್ಕೆ ಯೋಜನೆಗಳನ್ನು ರೂಪಿಸಿದ್ದಿದೆ. ಆದರೆ ನಮಾಮಿ ಗಂಗೆಗೆ ಹೋಲಿಕೆಯಾಗುವ ಗಾತ್ರದಲ್ಲಿ ಕಾರ್ಯಗತವಾಗುತ್ತಿರುವ
ಯೋಜನೆಗಳು ವಿರಳದಲ್ಲಿ ಅತಿವಿರಳ.

ನಮಾಮಿ ಗಂಗೆ-ಗಂಗಾ ನದಿ ಪುನರುಜ್ಜೀವನ ಯೋಜನೆಗೆ ಅದಾಗಲೇ ಎಂಟು ವರ್ಷಗಳು ಸಂದಿವೆ. ಗಂಗಾನದಿಯನ್ನು ಉದ್ದೇಶಿಸಿ ೧೯೭೯ರ ನಂತರ ಅನೇಕ ಸರಕಾರಿ-ಸಾಂಸ್ಥಿಕ ಪ್ರಯತ್ನಗಳು ಮುನ್ನೆಲೆಗೆ ಬರುತ್ತಾ, ಆನಂತರ ಗಂಗಾ ಆಕ್ಷನ್ ಪ್ಲಾನ್ ಯೋಜನೆಯ ಎರಡು ಹಂತಗಳಲ್ಲಿ ಮಾಲಿನ್ಯವನ್ನು ಕಡಿಮೆಗೊಳಿಸುವ ದಾರಿ ಯಲ್ಲಿ ಗತಿಸಿತ್ತು. ಕಳೆದ ದಶಕದಲ್ಲಿ ಕೆಲ ಬದಲಾವಣೆಗಳಿಂದ ಆರಂಭವಾಗಿ ಹಿಂದಿಗಿಂತಲೂ ಹೆಚ್ಚಿನ ಆರ್ಥಿಕ- ತಾಂತ್ರಿಕ ಪೋಷಣೆಯೊಂದಿಗೆ ಗಂಗೆಯನ್ನು ಸ್ವಚ್ಛಗೊಳಿಸುತ್ತಿರುವುದು ನಮಾಮಿ ಗಂಗೆಯೇ.

ಹಾಗಾಗಿ, ಇದೊಂದು ಸಮಗ್ರ, ಫ್ಲ್ಯಾಗ್‌ಶಿಪ್ ಯೋಜನೆ. ಈ ಡಿಸೆಂಬರ್‌ನಲ್ಲಿ ವಿಶ್ವ ಸಂಸ್ಥೆಯು ನಮಾಮಿ ಗಂಗೆಯನ್ನು ಪರಿಸರ ವ್ಯವಸ್ಥೆ
ಮರುಸ್ಥಾಪನೆಯ ಹತ್ತು ಜಾಗತಿಕ ಉಪಕ್ರಮಗಳಂದು ಎಂದು ಗುರುತಿಸಿ ಭಾರತದ ಜವಾಬ್ದಾರಿ ಯನ್ನು ದ್ವಿಗುಣಗೊಳಿಸಿದೆ. ನೆನಪಿರಲಿ, ೨೦೨೧-೩೦ ವಿಶ್ವಸಂಸ್ಥೆಯ ಘೋಷಿತ ಗುರುತರವಾದ ದಶಕವಾಗಿದೆ. ಜಾಗತೀಕರಣ ದೊಂದಿಗೆ ಹವಾಗುಣ ಬದಲಾವಣೆಗೂ ನಮ್ಮನ್ನು ತೆರೆದುಕೊಂಡ ನಂತರ, ಸುಸ್ಥಿರತೆಯ ಕಲ್ಪನೆ ಕೇವಲ ಕನಸಾಗುತ್ತಿದೆಯೇ ಎಂಬ ಅಂಜಿಕೆ ವಿಶ್ವಸಂಸ್ಥೆಗೂ ಇದೆ. ಸುಸ್ಥಿರತೆ ಅಭಿವೃದ್ಧಿಯ ಹದಿನೇಳು ಧ್ಯೇಯಗಳು ೨೦೩೦ರಷ್ಟರಲ್ಲಿ ಈಡೇರಬೇಕಿವೆ.

ಹಾಗಾಗಿ ಸುಸ್ಥಿರ ಅಭಿವೃದ್ಧಿಯಲ್ಲಿ ವೈಯಕ್ತಿಕ ಜವಾಬ್ದಾರಿ ಬಹುಮುಖ್ಯ. ಅದು ನಮಾಮಿ ಗಂಗೆಯಂತಹ ಮಹತ್ವಾಕಾಂಕ್ಷೀ ಯೋಜನೆಗೂ ಹೊರತಲ್ಲ.
ವರಕವಿ ಬೆಂದ್ರೆಯವರು ಆಹ್ವಾನಿಸಿದಂತೆ – ‘ಕಂಚು ಮಿಂಚಾಗಿ ತೆರಳಿ ಬಾ, ನೀರು ನೀರಾಗಿ ಉರುಳಿ ಬಾ, ಮತ್ತೆ ಹೊಡೆಮರಳಿ ಹೊರಳಿ ಬಾ’ ಎಂಬಂತೆ ಗಂಗೆಯು ಶುದ್ಧ ತರಲ ಹರಿವನ್ನು ಪಾರಾವಾರವಿಹಾರಿಣಿಯಾಗಿ ಚರಾಚರಕ್ಕೆ ಪ್ರವಹಿಸುವ ದಿನ ಬಹುಬೇಗ ನಮ್ಮದಾಗಲಿ.

 
Read E-Paper click here