ಅಭಿಮತ
ಎಲ್.ಪಿ.ಕುಲಕರ್ಣಿ, ಬಾದಾಮಿ
ಅಭಿನವ ಬೀಚಿ ಎಂದೇ ಜನಜನಿತರಾಗಿರುವ ಹಾಸ್ಯ ಕಲಾವಿದ, ಪ್ರಖರ ವಾಗ್ಮಿ ಗಂಗಾವತಿ ಪ್ರಾಣೇಶ್ ಅವರು ಕೇವಲ ಹಾಸ್ಯದ ಮಾತುಗಳು, ನಗೆ ಚಟಾಕಿ, ವಿಡಂಬನೆ, ಹಾಸ್ಯ ಬರಹಗಳಿಂದಷ್ಟೇ ಪ್ರಸಿದ್ಧರಾಗಿಲ್ಲ.
ತಮ್ಮ ಭಾಷಣದ ನಡುವೆ ಸಾಮಾಜಿಕ ಹಾಗೂ ಪರಿಸರಕ್ಕೆ ಸಂಬಂಧಿಸಿದ ಕಳಕಳಿಯ ವಿಚಾರಗಳನ್ನೂ ಸಹ ಪ್ರಸ್ತಾಪಿಸುತ್ತಾ ಬಂದಿzರೆ. ಈ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ಕನ್ನಡ ನಾಡು-ನುಡಿ, ಈ ನೆಲದ ಇತಿಹಾಸ, ಸಂಸ್ಕೃತಿಗಳನ್ನು ತಮ್ಮ ವಿಶಿಷ್ಠ ಹಾಸ್ಯ ಶೈಲಿಯಲ್ಲಿ ಒಬ್ಬ ಏನೂ ಕಲಿಯದ ಹಳ್ಳಿಯ ಗಮಾರನಿಗೂ ಮನಮುಟ್ಟುವಂತೆ, ತಿಳಿಯುವಂತೆ ಮಾಡುತ್ತಿದ್ದಾರೆ. ಪ್ರಾಣೇಶರ ಅಭಿಮಾನಿಯಾದ ನಾನು ಅವರ ಭಾಷಣದಲ್ಲಿ ಗಮನಿಸಿದ ಇನ್ನೊಂದು ಪ್ರಮುಖ ಅಂಶವೇನು ಗೊತ್ತಾ? ಅದೇ, ನಮ್ಮ ಸರಕಾರಿ ಕನ್ನಡ ಶಾಲಾ ಮಕ್ಕಳು ಹಾಗೂ ಇಂಗ್ಲಿಷ್ ಮೀಡಿಯಂ ಶಾಲಾ ಮಕ್ಕಳ ಗುಣಸ್ವಭಾವಗಳ ವಿವರಣೆ. ನಮ್ಮ ಹಳ್ಳಿ ಕನ್ನಡ ಶಾಲೆ ಮಕ್ಕಳಿಗೆ ಧೈರ್ಯ, ಆತ್ಮವಿಶ್ವಾಸಗಳು ಜಾಸ್ತಿ.
ಆದರೆ, ನಗರದ ಇಂಗ್ಲಿಷ್ ಕಾನ್ವೆಂಟ್ ಮಾದರಿಯಲ್ಲಿ ಕಲಿಯುವ ಮಕ್ಕಳಲ್ಲಿ ಕೊಂಚ ಭಯದ ಜತೆ ಆತ್ಮವಿಶ್ವಾಸವೂ ಕಡಿಮೆ
ಎಂದು ಅವರು ತಮ್ಮ ಹಾಸ್ಯದಲ್ಲಿ, ಅವರದರೆ ಕೆಲವು ಅನುಭವಗಳನ್ನು ತೆಗದುಕೊಂಡು ಹೇಳುವ ಆ ಶೈಲಿ ಇದೆಯಲ್ಲ, ಅದೂ ಎಲ್ಲರಿಗೂ ಒಲಿಯುವುದು ಅಸಾಧ್ಯದ ಮಾತು. ಇಂದು ನಾವು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಕಲಿತು, ನಮ್ಮ ಹೆಸರು, ತಂದೆಯ ಹೆಸರು, ಅಡ್ಡ ಹೆಸರುಗಳಲ್ಲಿ ಬರುವ ಸ್ಪೆಲ್ಲಿಂಗ್‌ಗಳಿಗಿಂತಲೂ ಪಡೆದ ಡಿಗ್ರಿ ಹೆಸರುಗಳೇ ದೊಡ್ಡದಿರಬಹುದು.
ಆದರೆ, ಲೋಕeನ, ಸಾಮಾನ್ಯ ಜ್ಞಾನಗಳ ಕುಂದುಕೊರತೆಯಂತೂ ಢಾಳಾಗಿ ಗೋಚರಿಸುತ್ತದೆ.
ಅದೇನೆ ಇರಲಿ, ಈಗ ಮುಖ್ಯ ವಿಷಯಕ್ಕೆ ಬರೋಣ. ಸದ್ಯ, ನಾವು ಕ್ಷಣಕ್ಷಣಕ್ಕೂ ತನ್ನ ವೇಷ ಬದಲಿಸಿಕೊಂಡು ಮತ್ತಷ್ಟು, ಮುಗಿಯದಷ್ಟು ಕ್ರೂರ ಸ್ವಭಾವ ತಾಳುತ್ತಾ, ಒಮ್ಮೆಲೇ ದೊತ್ತೆಂದು ನಮ್ಮ ಶ್ವಾಶಕೋಶಗಳಿಗೆ ಅಟ್ಯಾಕ್ ಮಾಡುತ್ತಿರುವ ಕರೋನಾ ವೈರಾಣುವಿನ ಜತೆ ಹೋರಾಡುತ್ತ ಹೈರಾಣಾಗಿದ್ದೇವೆ. ಇಷ್ಟು ದಿನ ಮೇಕಪ್ ಮಾಡಿಕೊಂಡು ಮುಖದ ಚೆಂದವನ್ನು ನಾಲ್ಕು ಜನ ನೋಡಲಿ ಎಂದು ಸಭೆ-ಸಮಾರಂಭಗಳಲ್ಲಿ ಬೀಗುತ್ತಿದ್ದೆವು. ಈಗ ಮಾಸ್ಕ್ ಧರಿಸಿಕೊಂಡು, ಪದೇಪದೆ ಸ್ಯಾನಿಟೈಸರ್‌ನಿಂದ ಕೈ
ತೊಳೆದುಕೊಳ್ಳುತ್ತಾ ಮನೆಯ ಕೂಡುವ ಪ್ರಮೇಯ ಬಂದೊದಗಿಬಿಟ್ಟಿದೆ. ಈ ಕೋವಿಡ್-19ಗೆ ತುತ್ತಾದ ಬಹುಪಾಲು ಜನರೆ ಇಂದು ಪ್ರಣವಾಯು ಆಕ್ಸಿಜನ್ ಗಾಗಿ ಪರದಾಡುತ್ತಿದ್ದಾರೆ. ಈ ಆಕ್ಸಿಜನ್ ಕೊರತೆ ಬಗ್ಗೆ ಗಂಗಾವತಿ ಪ್ರಾಣೇಶ್, ಐದು ವರ್ಷಗಳ ಹಿಂದೆ, ಅಂದರೆ, 2016ರ ತಮ್ಮ ಹಾಸ್ಯ ಕಾರ್ಯಕ್ರಮದಲ್ಲಿ ಎಚ್ಚರಿಕೆ ಕೊಟ್ಟಿದ್ದರು.
2016 ರಲ್ಲಿ ಬೆಂಗಳೂರಿನಲ್ಲಿ ಶಿವರಾತ್ರಿಯ ನಿಮಿತ್ತ ನಡೆದ ‘ಜಾಣೆಯರ ಜಾಗರಣೆ’ ಎಂಬ ಹೊನಲು ಬೆಳಕಿನ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ, ಮುಂದೊಂದು ದಿನ ಆಮ್ಲಜನಕ ಹಾಹಾಕಾರ ಉಂಟಾಗುವ ಭವಿಷ್ಯವಾಣಿಯನ್ನು ನುಡಿದಿದ್ದರು. ಆ ನಗೆ ಹಬ್ಬದ ಸನ್ನಿವೇಶದ ಪುಟ್ಟ ವಿಡಿಯೊ ಸದ್ಯ, ಫೇಸ್‌ಬುಕ್, ವಾಟ್ಸಾಪ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ನೋಡುಗರಿಗೆ ಪ್ರಾಣೇಶ ಅವರು ಹಾಸ್ಯದ ಜತೆಗೆ ಭವಿಷ್ಯವನ್ನೂ ನುಡಿಯುತ್ತಾರೆ ಎಂಬ ಅನುಮಾನ ಕಾಡಹತ್ತಿದೆ!
ಆ ವೇದಿಕೆಯ ಮೇಲೆ ಪ್ರಾಣೇಶ್ ಆಡಿದ ಮಾತಿನ ಸಮೀಪದ ಸಾರಾಂಶ ಹೀಗಿದೆ…. ಮರಗಳು ಎಷ್ಟು ಆಕ್ಸಿಜನ್ ಕೊಡುತ್ತೆ ಗೊತ್ತಾ ಸ್ನೇಹಿತರೆ, ನಾವ ಇಷ್ಟು ಆನಂದವಾಗಿ ಉಸಿರಾಡುತ್ತಾ ಇರೋಕೆ ಕಾರಣ ಅಲ್ಲೇ ನಿಂತಿರುವಂತಹ ಮರಗಳು. ಮರಗಳು ಇಲ್ಲದಿದ್ದರೆ ನಾವು ಆಕ್ಸಿಜನ್ ಸಿಲಿಂಡರ್ ತಗೋಬೇಕಾಗುತ್ತದೆ. ನೀವು ಒಂದು ಸಿಲಿಂಡರ್ ತಗೋಬೇಕಾದರೆ ಅದರ ಬೆಲೆ 700 ರು. ಒಬ್ಬ ಮನುಷ್ಯನಿಗೆ ದಿನಕ್ಕೆ 3 ಸಿಲಿಂಡರ್ ಬೇಕು. ಒಂದು ದಿನಕ್ಕೆ ಒಬ್ಬ ಮನುಷ್ಯನಿಗೆ 2100 ರು. ಅಂದರೆ ವರ್ಷಕ್ಕೆ
ಏನಿಲ್ಲವೆಂದರೂ 766500 ರುಪಾಯಿ ಬೇಕಾಗುತ್ತದೆ.
ನೀವು ಅಷ್ಟು ಶ್ರೀಮಂತರಾಗಿದ್ದೀರಾ? ನಿಮ್ಮ ಮಕ್ಕಳ ಕಾಲಕ್ಕೆ ಇದು ಬಂದೇ ಬರುತ್ತೆ. ಈಗಲೇ ಬೆಂಗಳೂರಿನಲ್ಲಿ ಹೆಲ್ಮೆಟ್, -, ಬ್ಯಾಗ್
ಇದರ ಜತೆಗೆ ಆಕ್ಸಿಜನ್ ಸಿಲಿಂಡರ್ ಬೇಕಾಗುತ್ತದೆ. ಶಾಲೆಗೆ ಹೋಗೊ ನಿಮ್ಮ ಮಕ್ಕಳಿಗೆ ತೊಗೋ ಕಂದ ಉಸಿರಾಡೋಕೆ ಅಂತ ಆಕ್ಸಿಜನ್ ಕೊಡಬೇಕಾಗುತ್ತದೆ. ಸ್ಕೂಲಿಗೆ ಹೋದಾಗ ಸಿಲಿಂಡರ್ ಮುಗಿದು ಹೋದರೆ ‘ಅಯ್ಯೋ ನಮ್ಮ ಮಗುವಿಗೆ ಸ್ಕೂಲಿನಲ್ಲೇ ಸಿಲಿಂಡರ್ ಮುಗಿದು ಹೋಗಿದೆ ಬೇಗ ಹೋಗಪ್ಪಾ’ ಅನ್ನಬೇಕಾಗುತ್ತದೆ. ಮನೆಗೆ ಗ್ಯಾಸ್ ಸಿಲಿಂಡರ್ ಹೇಗೆ ಬರುತ್ತೋ ಹಾಗೆ ಆಕ್ಸಿಜನ್ ಸಿಲಿಂಡರ್ ಬರೋ ಕಾಲ ದೂರ ಇಲ್ಲ. ಸ್ನೇಹಿತರೆ, ಮರಗಳನ್ನು ಹೀಗೇ ನಾವು ಕಡಿತಾ ಇದ್ದರೆ, ಆಕ್ಸಿಜನ್ ಸಿಲಿಂಡರ್ ಬೇಗನೆ ಬೇಕಾಗುತ್ತೆ..!
ದಯವಿಟ್ಟು ಮನೆಗಳ ಮುಂದೆ ಮರ ಹಾಕಿ ಅಥವಾ ನೆಟ್ಟಿರುವ ಮರಗಳಿಗೆ ನೀರು ಹಾಕಿ. ನೀವು ಎಷ್ಟು ಗಿಡ ಬೆಳೆಸುತ್ತೀರೋ ಅಷ್ಟು ನಿಮ್ಮ ಮಕ್ಕಳು, ಮೊಮ್ಮಕ್ಕಳು ಆಕ್ಸಿಜನ್‌ನಿಂದ ಸಂತೋಷವಾಗಿ ಇರುತ್ತಾರೆ. ನಾವು ಮರಗಳನ್ನೇ ಬೆಳೆಸಲ್ಲ ಅದಕ್ಕೆ, ‘ವಕ್ರ ತುಂಡೋಕ್ತಿ’ಯಲ್ಲಿ ‘ವಿಶ್ವೇಶ್ವರ ಭಟ್ಟರು’ ಬಹಳ ಚೆನ್ನಾಗಿ ಬರೀತಾರೆ. ‘ನಮ್ಮ ಗಾಡಿ ನಿಲ್ಲಿಸೋಕೆ ಮರಗಳನ್ನು ಹುಡುಕುತ್ತೇವೆ. ಆದರೆ, ಮರ ಎಲ್ಲಿ ನೆಡೋದು ಅಂತಾ ಜಾಗ ಹುಡುಕುತ್ತೀವಾ’.
ಇಲ್ಲ ನಾವು ಹುಡುಕುತ್ತಾ ಇಲ್ಲ. ಯಾರೋ ಪುಣ್ಯಾತ್ಮ ನೆಟ್ಟಿರೋ ಮರದ ಕೆಳಗೆ ನೀವು ಗಾಡಿ ನಿಲ್ಲಿಸ್ತೀರಿ. ಮುಂದೆ ಮತ್ತೊಂದು ಪುಣ್ಯಾತ್ಮ ಗಾಡಿ ನಿಲ್ಲಿಸಬೇಕಾದರೆ ಇವತ್ತು ನೀವು ಗಿಡ ನೆಡಬೇಕು. ಮಳೆ ಬಂದರೆ ಬೆಂಗಳೂರಿನ ಪರಿಸ್ಥಿತಿ ನಿಮಗೆ ಗೊತ್ತು. ಮಳೆ ಬಂದು ತಗ್ಗು ಪ್ರದೇಶಕ್ಕೆ ನೀರು ನುಗ್ಗಿತು. ತಗ್ಗಿಲ್ಲದ ಮತ್ತೆ ಏರು ಪ್ರದೇಶಕ್ಕೆ ನೀರು ನುಗ್ಗುತ್ತಾ. ಅದು ಯಾಕೆ ತಗ್ಗಾಗಿದೆ, ಅಲ್ಲಿ ಒಂದು ಕೆರೆನೋ ಹಳ್ಳಾನೋ ಇತ್ತಪ್ಪ. ಅಲ್ಲಿ ನೀವು ಈಗ ಅಪಾರ್ಟ್‌ಮೆಂಟ್ ಕಟ್ಟಿಕೊಂಡಿದ್ದೀರಿ. ಕೆರೆ ಒತ್ತುವರಿ ಮಾಡಿ, ಕಾಡು ಕಡಿದು ಬಿಲ್ಡಿಂಗ್ ಕಟ್ಟುತ್ತಿದ್ದೀರಿ. ನನಗೆ ಅನಿಸ್ತಾ ಇದೆ.
ಐದಾರು ವರ್ಷದಲ್ಲಿ ಆಕ್ಸಿಜನ್ ಕೊರತೆ ಶುರುವಾಗುತ್ತೆ. ದಯವಿಟ್ಟು ಅದರ ಕಡೆ ಗಮನಕೊಡಿ. ಎಂದು ಗಂಗಾವತಿ ಪ್ರಾಣೇಶ್ ಎಚ್ಚರಿಕೆ ನೀಡಿದ್ದರು. ನಮ್ಮ ಉತ್ತರ ಕರ್ನಾಟಕದ ಕಡೆ ಯಾರಾದರು ಆಡಿದ ಮಾತು ನಿಜವಾದರೆ, ಅವಂದು ಕರ್ಬಾಯಿ ಐತಿ ನೋಡು (ಸತ್ಯ ಹೇಳುವವ, ಆತ ಏನು ಹೇಳುತ್ತಾನೋ ಹಾಗೇ ಆಗುತ್ತದೆ) ಅಂತಾರೆ. ಪ್ರಾಣೇಶ್ ಹೇಳಿದ್ದು ನಿಜ ಇರಬಹುದು. ಅ, ನಿಜಾನೇ ಆಗಿದೆ. ಅಂದರೆ ಪ್ರಾಣೇಶ್ ಅವರದು’ ಕರ್ಬಾಯಿ’! ಅವರು 2016ರಲ್ಲಿ ಹೇಳಿದ್ದ ಆಕ್ಸಿಜನ್ ಕೊರತೆಯ ಮಾತಿಗೆ ಈಗ 2021ಕ್ಕೆ ಬರೋಬ್ಬರಿ ಐದು ವರ್ಷವಾಗುತ್ತದೆ. ಪ್ಲೇಗ್ ಮಹಾಮಾರಿ ಆಕ್ರಮಿಸಿದಾಗ ಜನ ಊರು ಬಿಟ್ಟು ಅಡವಿ ಸೇರುತ್ತಿದ್ದರು. ಪರಿಸರದ ಸಂರಕ್ಷಣೆಯ ಅರಿವು ಆಗ ಮನುಷ್ಯನಿಗೆ ಆಗಿತ್ತು.
ಯಾವಾಗ ಔಷಧೋಪಚಾರಗಳಿಂದ ಪ್ಲೇಗ್ ನಿರ್ಣಾಮವಾಗಿ ಹೋಯಿತೊ, ಈಗ ಅದಾಗಿ ಮತ್ತೆ ನೂರಾರು ವರ್ಷಗಳ ಕಾಲ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಕಾಡನ್ನೆ ನಾಶಮಾಡುತ್ತಾ ಸಾಗಿದ. ಒಂದು ಉದಾಹರಣೆ ತೆಗೆದುಕೊಂಡು ನೋಡುವುದಾದರೆ, ೨೦೧೯ರದ ಅಮೆಜಾನ್ ಕಾಡಿನ ಬೆಂಕಿ. ಪ್ರಪಂಚದ ಶೇ.80ರಷ್ಟು ಆಹಾರ ಉತ್ಪನ್ನಗಳಿಗೆ ಅಮೇಜಾನ್ ಕಾಡುಗಳೇ ಮೂಲ! ಭೂಮಿಯ ಮೇಲಿರುವ ಮಳೆಕಾಡುಗಳಲ್ಲಿ ಶೇ.50ರಷ್ಟು ಕೇವಲ ಈ ಅಮೇಜಾನ್ ಹೊಂದಿದೆ. ಅಲ್ಲದೇ ಭೂಮಿಯಲ್ಲಿ ಶೇ.೬ರಷ್ಟು ಪ್ರದೇಶವನ್ನು ಈ ಅಮೇಜಾನ್ ಕಾಡೇ ಆವರಿಸಿದೆ!.
ಇಷ್ಟೆ ವಿಶೇಷತೆಗಳಿಂದ ಕೂಡಿದ ಅಮೇಜಾನ್ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ, 2019 ರದ ಕಾಳ್ಗಿಚ್ಚು ಭಾರಿ ಪ್ರಮಾಣದ
ಅನಾಹುತ ಸೃಷ್ಟಿಸಿತ್ತು. ಸಾವಿರಾರು ಎಕರೆ ಕಾಡು ಬೆಂಕಿಯ ಜ್ವಾಲೆಗೆ ಸುಟ್ಟು ಭಸ್ಮವಾಗಿತ್ತು. ಒಂದೇ ದಿನದಲ್ಲಿ 1700 ಮೈಲು ವರೆಗೂ ಬೆಂಕಿಯ ಹೊಗೆ ಆವರಿಸಿತ್ತು!.
ಆಗ ನಾಸಾದ ಸ್ಯಾಟಲೈಟ್, ಬೆಂಕಿಯ ರೋಷಾವೇಷದ ಚಿತ್ರವನ್ನು ಸೆರೆಹಿಡಿದಿತ್ತು. ಭಾರಿ ಗಾಳಿಯಿಂದಾಗಿ ಬೆಂಕಿ ವ್ಯಾಪಿಸುವ ರಭಸ ಇನ್ನಷ್ಟು ಜೋರಾಗಿದ್ದು, ಕಪ್ಪನೆಯ ದಟ್ಟ ಹೊಗೆ ಆವರಿಸಿಕೊಂಡಿತ್ತು. ಅದನ್ನು ನಂದಿಸುವುದಕ್ಕೆ ಹರಸಾಹಸ ಪಡಬೇಕಾದ ಪರಿಸ್ಥಿತಿ ಬಂದೊದಗಿತ್ತು. ಆಗ ತಿಂಗಳ ಆರಂಭದಲ್ಲಿ ಬ್ರೆಜಿಲ್ ಈ ಪ್ರದೇಶದಲ್ಲಿ ಅಗ್ನಿ ಅನಾಹುತಗಳು ಹೆಚ್ಚುತ್ತಿ ರುವುದರಿಂದ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇದುವರೆಗೂ 73000 ದಷ್ಟು ಬೆಂಕಿ ಅನಾಹುತಗಳನ್ನು ಬ್ರೆಜಿಲ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಪತ್ತೆಹಚ್ಚಿದೆ.
ಜಗತ್ತಿನ ಶೇ.20ರಷ್ಟು ಆಮ್ಲಜನಕವನ್ನು ಅಮೇಜಾನ್ ಮಳೆ ಕಾಡು ಉತ್ಪಾದಿಸುತ್ತದೆ. ಜತೆಗೆ ಶೇ.10ರಷ್ಟು ಜೀವವೈವಿಧ್ಯ ಈ ಕಾಡಿನಲ್ಲಿದೆ. ಭೂಗ್ರಹದ ಶ್ವಾಸಕೋಶ ಎಂದೇ ಹೆಸರಾಗಿರುವ ಅಮೇಜಾನ್, ಹವಾಮಾನದ ವೈಪರೀತ್ಯಗಳನ್ನು ನಿಯಂತ್ರಿಸು ವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 550 ಮಿಲಿಯನ್ ಹೆಕ್ಟೇರ್ ವಿಸ್ತೀರ್ಣದಲ್ಲಿ ಅಮೇಜಾನ್ ಕಾಡು ಹರಡಿಕೊಂಡಿದೆ. ಆಗಿನ ಬೆಂಕಿಯ ರಭಸ ಕಾಡಿನ ಸುತ್ತಮುತ್ತ ವಾಸಿಸುವ ಪ್ರದೇಶಗಳ ಜನರಲ್ಲಿ ಆತಂಕ ಮೂಡಿಸಿತ್ತು. ಅನೇಕ ಸೆಲೆಬ್ರಿಟಿಗಳು ಅಮೇಜಾ
ನ್‌ಗಾಗಿ ಪ್ರಾರ್ಥಿಸಿ ಎಂದು ಫೇಸ್‌ಬುಕ್, ಇನ್ಸ್ಟಾಗ್ರಾಂಗಳಲ್ಲಿ ಪೋ ಮಾಡಿದ್ದನ್ನು ನಾವು ಮರೆಯುವಂತಿಲ್ಲ.
ವಿಚಿತ್ರವೆಂದರೆ, 22-08-2019 ಗುರುವಾರ ಸ್ಯಾಟಲೈಟ್ ಚಿತ್ರಗಳು ಸುಮಾರು 9507 ಹೊಸ ಕಾಳ್ಗಿಚ್ಚುಗಳನ್ನು ಪತ್ತೆಹಚ್ಚಿದ್ದವು. ಇವುಗಳಲ್ಲಿ ಹೆಚ್ಚಿನವು ಅಮೇಜಾನ್ ವಲಯದಲ್ಲಿ ಕಾಣಿಸಿಕೊಂಡಂತಹವು. ಸದ್ಯ ಈ ಬೆಂಕಿಗೆ ಮನುಷ್ಯನ ಸ್ವಾರ್ಥವೇ ಕಾರಣ, ಇಂತಹ ಸಂಪತ್ಭರಿತ ಕಾಡಿನ ಮೇಲೆ ಕಣ್ಣಿಟ್ಟವರೇ ಹೆಚ್ಚು. ಇಲ್ಲಿನ ಮರಮುಟ್ಟುಗಳು ಬಹುಬೇಡಿಕೆಯ ವಸ್ತುಗಳಾಗಿರುವು ದರಿಂದ, ಇಲ್ಲಿ ಟಿಂಬರ್ ಮಾಫಿಯಾದಿಂದ ಹಿಡಿದು ಕೃಷಿ ಒತ್ತುವರಿದಾರರವರೆಗೆ ಕಾಡಿನ ನಾಶದ ವ್ಯಾಪ್ತಿ ಆವರಿಸಿದೆ. ಕಳೆದೆರಡು ದಶಕಗಳಿಂದ ಅಮೇಜಾನ್ ಕಾಡನ್ನು ನಾನಾ ಕಾರಣಗಳಿಂದ ಕತ್ತರಿಸಲಾಗುತ್ತಿದೆ.
ಟಿಂಬರ್ ಮಾಫಿಯಾ ಮಹಾಶಯರು ಅರಣ್ಯವಾಸಿಗಳಾದ ಬುಡಕಟ್ಟು ನಿವಾಸಿಗಳನ್ನು ಅಲ್ಲಿಂದ ತೆರವು ಮಾಡಿಸಲು ಕಾಡಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯಗಳು ಆಗಾಗ ಕಂಡುಬರುತ್ತಿವೆ. ಭಾರಿ ಕೃಷಿ ಒತ್ತುವರಿದಾರರು ತಮ್ಮ ಜಮೀನಿಗೆ ಹತ್ತಿಕೊಂಡಿರುವ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟು ತಮ್ಮ ಜಮೀನನ್ನು ವಿಸ್ತರಿಸಿಕೊಳ್ಳುತ್ತಲಿದ್ದಾರೆ. ಈ ರೀತಿ ಕೊಡುವ ಬೆಂಕಿ ಕೆಲವೊಮ್ಮೆ ನಿಯಂತ್ರಣ ತಪ್ಪಿ ದೊಡ್ಡದಾಗಿ ವಿಸ್ತರಿಸುತ್ತದೆ. ತತ್ಪರಿಣಾಮ ನಿತ್ಯ ಹಸಿರು ಶಾಮಲೆಯಾದ ಅಮೇಜಾನ್ ಕಾಡು ಹೊತ್ತಿ ಉರಿಯುತ್ತದೆ. ಇತರ ಕಾಡುಗಳು ಒಣ ಕಾಡುಗಳಾಗಿರುವುದರಿಂದ ಬೆಂಕಿಯು ವಿಸ್ತರಿಸುತ್ತದೆ. ಆದರೆ, ಅಮೇಜಾನ್ ಕಾಡು
ಸತತ ಮಳೆಯಿಂದ ಕೂಡಿದ್ದು, ತೇವ ಭರಿತವಾಗಿರುವುದರಿಂದ ಇಲ್ಲಿ ಬೆಂಕಿಯ ಆಟ ಬಹಳ ಹೊತ್ತು ನಿಲ್ಲದು.
ಆದರೆ, ಆ ಸಾರಿ ಹತ್ತಿದ ಬೆಂಕಿ ಉದ್ದೇಶ ಪೂರ್ವಕವಾಗಿ ನಡೆದ ಮಾಫಿಯಾ ದೊರೆಗಳ ಕೃತ್ಯವೆಂದು ಮೇಲ್ನೋಟಕ್ಕೆ ಸಾಬೀತಾ ದಂತಿತ್ತು. ಇದರಲ್ಲಿ ಬ್ರೆಜಿಲ್ ಪಾಲು ತುಂಬಾನೆ ಇದೆ. ಅತಿ ಆಸೆ, ಉದ್ಯಮ ವಿಸ್ತರಣೆ, ಕೈಗಾರಿಕೆ ಸ್ಥಾಪನೆ ಸೇರಿ ಹಲವು ಕಾರಣ ಗಳಿಂದಾಗಿ ಅಮೇಜಾನ್ ಕಾಡು ನಾಶ ಮಾಡುತ್ತ ಹೊರಟಿದೆ.
ಜಗತ್ತಿನ ಶೇಕಡಾ 20 ಆಮ್ಲಜನಕವನ್ನು ಉತ್ಪಾದಿಸುವ ಅಮೇಜಾನ್ ಕಾಡೇ ಈ ರೀತಿ ಆಗಾಗ ಸುಟ್ಟು ಕರಕಲಾಗುತ್ತಾ ಹೋಗು ತ್ತಿದ್ದರೆ, ಇನ್ನುಳಿದ ದೇಶಗಳ ಸಣ್ಣಪುಟ್ಟ ಕಾಡುಗಳ ಬಗ್ಗೆ ಹೇಳುವುದೇ ಬೇಡ. ನೀವೇ ನೋಡಿ, ಪ್ರತಿವರ್ಷ ನಗರಗಳ ವಿಸ್ತೀರ್ಣ ಹೆಚ್ಚುತ್ತಾನೆ ಇದೆ. ಹಿಂದ ನಂತೆ ಜನ ಈಗ ಕೂಡು ಕುಟುಂಬದಲ್ಲಿರಲು ಬಯಸುತ್ತಿಲ್ಲ. ಉದಾಹರಣೆಗೆ, ಒಂದೇ ಕುಟುಂಬದಲ್ಲಿ ಎರಡು ಮಕ್ಕಳಿದ್ದರೆ, ಅವರು ಬೆಳೆದು ದೊಡ್ಡವರಾಗಿ ಸಂಸಾರ ಸಾಗರದಲ್ಲಿ ಬಿದ್ದಾಗ ಸೆಪರೇಟ್ ಆಗಿರಲು ಬಯಸಿ, ಪ್ಲಾಟ್ ಖರೀದಿಸಿ, ಎರಡು ಮನೆ ಕಟ್ಟಿಕೊಳ್ಳುತ್ತಾರೆ.
ಇದು ಕೇವಲ ಒಂದು ಕುಟುಂಬದ ಪರಿಸ್ಥಿತಿಯಾದರೆ, ಒಂದು ನಗರದಲ್ಲಿ ಈ ರೀತಿಯ ಎಷ್ಟು ಕುಟುಂಬಗಳಿರಬೇಕು ನೀವೇ ಲೆಕ್ಕ ಹಾಕಿ! ಹೀಗೆ ವರ್ಷದಿಂದ ವರ್ಷಕ್ಕೆ ಊರ ಹೊರಗಿನ ಹೊಲಗದ್ದೆಗಳು, ಕಾಡು-ಮೇಡುಗಳೆಲ್ಲವೂ ನಾಶವಾಗಿ ಹೊಸ ಮನೆಗಳಾಗುತ್ತಾ, ನಗರ ವಿಸ್ತರಿಸುತ್ತಾ ಹೋದರೆ, ಇನ್ನು ಕೆಲವೇ ದಶಕಗಳಲ್ಲಿ ಮನುಷ್ಯನ ಬದುಕು ಅಂತ್ಯವಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದೆನಿಸುತ್ತದೆ. ಈ ಸಂದರ್ಭದಲ್ಲಿ ಮಾಲಿನ್ಯದ ಸ್ಥಿತಿಗತಿಗಳ ಕಡೆ ಗಮನಕೊಡುವುದು ಬಹಳ ಮುಖ್ಯವೆನಿಸುತ್ತದೆ. ‘ಐ ಕ್ಯು ಏರ್ ವಿಶ್ಯುವಲ್ ಎಂಬ ವೆಬ್ ಪ್ಲಾಟ್ ಫಾರಂ’ ಇಡೀ ಜಗತ್ತಿನ ವಾಯು ಗುಣಮಟ್ಟ ಮತ್ತು ವಾಯಮಾಲಿನ್ಯವನ್ನು ಆಧರಿಸಿ ಪ್ರತಿಕ್ಷಣ ಮಾಲಿನ್ಯ ಸೂಚ್ಯಂಕ (ಎಕ್ಯೂ ಐ) ಬಿಡುಗಡೆ ಮಾಡುತ್ತದೆ.
ಅದರ ಪ್ರಕಾರ 2019ರ ನ.4 ಸೋಮವಾರ ಅತಿಹೆಚ್ಚು ವಾಯುಮಾಲಿನ್ಯ ಹೊಂದಿದ್ದ ಜಗತ್ತಿನ 10 ರಾಜಧಾನಿಗಳ ಪೈಕಿ ದೆಹಲಿ ನಂ.1 ಸ್ಥಾನದಲ್ಲಿತ್ತು. ದೆಹಲಿ- 623, ಲಾಹೋರ್ (ಪಾಕಿಸ್ತಾನ) -269, ಢಾಕಾ (ಬಾಂಗ್ಲಾದೇಶ)-226, ಕೊಲ್ಕತ್ತಾ-167,
ವುಹಾನ್ (ಚೀನಾ)-166, ಶೆನ್ಯಾಂಗ್(ಚೀನಾ)-161, ಕುವೈತ್-160, ಕಾಬೂಲ್ (ಅಫಘಾನಿಸ್ತಾನ್)-159, ಚೆಂಗ್ಡು (ಚೀನಾ)-156, ಕಾಠ್ಮಂಡು (ನೇಪಾಳ)-146 ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈ ವಾಯುಮಾಲಿನ್ಯ ಸೂಚ್ಯಂಕ 198 ಇತ್ತು.
2018ರಲ್ಲಿ ರಾಷ್ಟ್ರೀಯ ಹಸಿರು ಪೀಠ(NGT)ವು ಉತ್ತರಪ್ರದೇಶ, ಪಂಜಾಬ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯ ಕೃಷಿ ಪ್ರಧಾನ ಕಾರ್ಯದರ್ಶಿಗಳಿಗೆ ಸಮ ಜಾರಿ ಮಾಡಿ ದೆಹಲಿಯಲ್ಲಿ ಉಂಟಾಗಿರುವ ಕೆಟ್ಟ ವಾತಾವರಣದ ಬಗ್ಗೆ ನಿಗಾ ಇರಿಸುವಂತೆ ಹೇಳಿತ್ತು. ದೆಹಲಿಯ ಹಲವೆಡೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿ ಉಸಿರಾಡುವುದು ದಿನವೊಂದಕ್ಕೆ 14 ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮ ಎಂದೇ ಹೇಳಲಾಗುತ್ತಿದೆ. ಆ ಸಂದರ್ಭದಲ್ಲಿ, ‘ದೆಹಲಿಯು ಗ್ಯಾಸ್ ಚೇಂಬರ್ ಆಗಿದೆ’ ಎಂದು ಅಲ್ಲಿನ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆ ಕೊಟ್ಟು, ಆತಂಕ ವ್ಯಕ್ತಪಡಿಸಿದ್ದನ್ನು ಮರೆಯುವಂತಿಲ್ಲ. ಇದು ಈಗಲೂ ಕೂಡ ಮುಂದುವರಿದಿದೆ.
ಒಂದು ಖುಷಿಯ ವಿಚಾರವೆಂದರೆ ಕರೋನಾದಿಂದ ಪ್ರಕೃತಿ ಸ್ವಚ್ಛವಾಗುತ್ತಿದೆ! ಯಾವಾಗ ಭೂಮಿಯ ಮೇಲೆ ಇಷ್ಟೆ ಮಾನವನ ದುರಾಚಾರ ನಡೆಯಿತೋ, ಆಗ ಕೋವಿಡ್-19 ದಾಳಿ ಮಾಡಿ ಮುನಷ್ಯನ ಕ್ರೂರ ಚಟುವಟಿಕೆಗಳಿಗೆ ಬ್ರೆಕ್ ಹಾಕಿಬಿಟ್ಟಿತು. ಜಗತ್ತಿನಾದ್ಯಂತ ವಾರ್ಷಿಕ ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆ (ಕೈಗಾರಿಕೆ ಮುಂತಾದವುಗಳಿಂದ ವಾತಾವರಣ ಸೇರುವ ಕಾರ್ಬನ್ ಡೈ ಆಕ್ಸೈಡ್) 33 ಗೀಗಾ ಟನ್. ಅಂದರೆ ಒಂದು ಗೀಗಾ ಟನ್ ಅಂದರೆನೇ 1000000000 ಟನ್!
ಇನ್ನು 33 ಗೀಗಾ ಟನ್ ಎಂದರೆ ನೀವೇ ಲೆಕ್ಕಾಹಾಕಿ! ಕೋವಿಡ್-19ರ ಮೊದಲ ಸುಳಿವು ಸಿಕ್ಕಿದ್ದು, 2019ರ ಡಿ.30ರಂದು ಚೀನಾದ ಉಹಾನ್ ಪ್ರಾಂತದಲ್ಲಿ. ವಿಶ್ವ ಆರೋಗ್ಯ ಸಂಸ್ಥೆ ಇದೊಂದು ಜಾಗತಿಕ ಪಿಡುಗು ಎಂದು ಸಾರಿದ್ದು 11 ಮಾರ್ಚ್ 2020 ರಂದು. ನಂತರ ಈ ಸೋಂಕು ಜಗತ್ತಿನ 180ಕ್ಕೂ ಹೆಚ್ಚು ರಾಷ್ಟ್ರಗಳನ್ನು ಹಬ್ಬಿ ಇಂದಿಗೂ ಕಾಟ ಕೊಡುತ್ತಿದೆ.