ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
ಕರೋನಾ ಮಹಾಮಾರಿ ಜಗತ್ತಿನ ಹಲವು ದೇಶಗಳ ಜನರನ್ನು ಬಡತನ ರೇಖೆಯ ಕೆಳಗೆ ತಳ್ಳಿ ಬಿಟ್ಟಿತು. ಸತತವಾಗಿ ಎರಡು ವರ್ಷಗಳ ಕಾಲ ಅರೋಗ್ಯ ಹಾಗು ಆರ್ಥಿಕತೆಯ ನಡುವೆ ನಡೆದ ಸಂಘರ್ಷದಲ್ಲಿ ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ಹದೆಗಟ್ಟಿದೆ.
ಅಮೆರಿಕ ದೇಶದಲ್ಲಿ ಹಣದುಬ್ಬರ ದರ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಐರೋಪ್ಯ ಒಕ್ಕೂಟ ರಾಷ್ಟ್ರಗಳಲ್ಲಿನ ಜನರು ನಿರುದ್ಯೋಗಿ ಗಳಾಗಿದ್ದಾರೆ, ಅಮೇರಿಕಾ ದೇಶ ತನ್ನ ಪ್ರಜೆಗಳ ಖಾತೆಗೆ 5000 ಡಾಲರ್ ಹಣವನ್ನು ಸಹಾಯದ ರೂಪದಲ್ಲಿ ನೀಡಿತ್ತು. ದ್ವೀಪ ರಾಷ್ಟ್ರ ಶ್ರೀಲಂಕಾವಂತೂ ಅಕ್ಷರಶಃ ನಲುಗಿ ಹೋಗಿದೆ. ಅಲ್ಲಿನ ಜನರಿಗೆ ಪೆಟ್ರೋಲ್, ಡೀಸೆಲ್ ಸಿಗುತ್ತಿಲ್ಲ. ಅಕ್ಕಿ, ಬೇಳೆ ಇಲ್ಲ. ಉದ್ಯೋಗವಿಲ್ಲ. ಸುಮಾರು 2,87,000 ಕೋಟಿ ರುಪಾಯಿಯ ವಿದೇಶಿ ಸಾಲವನ್ನು ತೀರಿಸಲಾಗುವುದಿಲ್ಲವೆಂದು ಶ್ರೀಲಂಕಾ ಅಧ್ಯಕ್ಷ ಹೇಳಿದ್ದಾರೆ.
ಸಾಲ ತೀರಿಸಲಿಲ್ಲವೆಂದರೆ ಜಗತ್ತಿನ ರಾಷ್ಟ್ರಗಳು ಸಾಲ ನೀಡುವುದಿಲ್ಲ, ಹಾಗಂತ ನೋಟು ಗಳನ್ನು ಮುದ್ರಿಸಿ ಆರ್ಥಿಕತೆಯನ್ನು ಸರಿ ದೂಗಿಸಲಾಗುವುದಿಲ್ಲ. ಅಲ್ಲಿನ ಪ್ರಜೆಗಳು ಬೀದಿಗಿಳಿದು ಆಹಾರಕ್ಕಾಗಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 138 ಕೋಟಿ ಜನಸಂಖ್ಯೆಯ ಭಾರತದ ಆರ್ಥಿಕತೆಯ ಮೇಲೂ ಸಹ ಕರೋನಾ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು ಬೀರಿತ್ತು. ಸಮಯಕ್ಕೆ ತಕ್ಕಂತೆ ತೆಗೆದುಕೊಂಡ ಉತ್ತಮ ನಿರ್ಧಾರಗಳು ಭಾರತದ ಆರ್ಥಿಕತೆಯನ್ನು ನಿಯಂತ್ರಿಸಲು ಸಾಧ್ಯವಾದವು.
ಸುಮಾರು 20 ಲಕ್ಷ ಕೋಟಿಯ ಆರ್ಥಿಕ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕಷ್ಟ ಕಾಲದಲ್ಲಿ ರೈತರು, ಬಡವರು, ಸಣ್ಣ ಉದ್ಯಮಿಗಳ ಕೈ ಹಿಡಿಯುವ ಮೂಲಕ ಕೇಂದ್ರ ಸರಕಾರ, ಕರೋನಾ ಮಹಾಮಾರಿಯ ನಡುವೆ ಮೂರನೇ ಮಹಾಯುದ್ಧವನ್ನು ಗೆದ್ದಿದೆ.
ಪಕ್ಕದ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕರೋನಾ ಹೊಡೆತಕ್ಕೆ ಸಿಕ್ಕಂತಹ ಪಾಕಿಸ್ತಾನದ ಆರ್ಥಿಕತೆಯನ್ನು ನಿಯಂತ್ರಣಕ್ಕೆ ತರುವಲ್ಲಿ ವಿಫಲರಾಗಿದ್ದರು. ಪಾಕಿಸ್ತಾನದಲ್ಲಿನ ಬಡ ಕುಟುಂಬಗಳು ಅನ್ನ, ನೀರಿಲ್ಲದೆ ಪ್ರತಿಭಟಿಸಿದ್ದವು. ಏನೇ ಹೇಳಿ ಶತ್ರುವಿಗೂ ಸಹ ಅನ್ನಕ್ಕಾಗಿ ಪರಿದಾಡುವ ಪರಿಸ್ಥಿತಿ ಎದುರಾಗಬಾರದು, ಅದರಂತಹ ಬಹುದೊಡ್ಡ ದುರಂತ ಮತ್ತೊಂದಿಲ್ಲ.
ಶ್ರೀಲಂಕಾ ಪರಿಸ್ಥಿತಿಯನ್ನು ನೆನೆದರೆ ಎರಡೂ ಕಣ್ಣಂಚುಗಳು ಒದ್ದೆಯಾಗುತ್ತವೆ. ಕರೋನಾ ಸಂದರ್ಭದಲ್ಲಿ ಸರಿಯಾದ ಸಮಯದಲ್ಲಿ
ಎಚ್ಚೆತ್ತುಕೊಂಡ ಭಾರತ ಸರಕಾರ ಬಡವರ ಮೂಲಭೂತ ಅವಶ್ಯಕೆತೆಯೆಡೆಗೆ ಗಮನಹರಿಸಿತ್ತು. ಲಾಕ್‌ಡೌನ್ ಸಂದರ್ಭದಲ್ಲಿ ಕುಟುಂಬ ಗಳಿಗೆ ಆಹಾರ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’ಯನ್ನು ಜಾರಿಗೆ ತಂದರು. ದಿನದಲ್ಲಿ ಮೂರು ಹೊತ್ತು ಊಟಕ್ಕೆ ಕೊರತೆಯಾಗದಂತೆ ನೋಡಿಕೊಂಡರೆ ಬಡ ಕುಟುಂಬದ ಮೊದಲ ಆದ್ಯತೆ ಯನ್ನು ಈಡೇರಿಸಿದಂತಾಗುತ್ತದೆಯೆಂಬ ಸ್ಪಷ್ಟ ಚಿತ್ರಣ ಮೋದಿಯವರ ಮುಂದಿತ್ತು.
ಪ್ರತಿ ಕುಟುಂಬಕ್ಕೆ ತಿಂಗಳಿಗೆ 5 ಕೆ.ಜಿ. ಪಡಿತರ ನೀಡುವ ಮೂಲಕ ಬಡವರ ಹಸಿವನ್ನು ನೀಗಿಸುವಲ್ಲಿ ಯಶಸ್ವಿಯಾದರು. ಲಾಕ್‌ಡೌನ್ ತೆರವಾದ ನಂತರ ಆರ್ಥಿಕ ಪರಿಸ್ಥಿತಿ ಪುನಃ ಹಳೆಯ ಹಾದಿಗೆ ಬರಲು ಸಮಯ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಬಡವರ ಪಡಿತರ ಯೋಜನೆಯನ್ನು ಮತ್ತಷ್ಟು ದಿನಗಳ ಕಾಲ ಮುಂದುವರೆಸಿದರು. ದೇಶದಾದ್ಯಂತ ವಲಸೆ ಕಾರ್ಮಿಕರು ನಗರ ಪ್ರದೇಶಗಳನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಗುಳೆ ಹೋಗುತ್ತಿರುವ ಸಂದರ್ಭದಲ್ಲಿ ಅವರಿಗೆ ತಮ್ಮ ತವರಿನಲ್ಲಿ ಅಗತ್ಯವಿದ್ದಂತಹ ಅಕ್ಕಿ, ಬೇಳೆ, ರಾಗಿ, ಗೋಧಿಯನ್ನು ಈ ಯೋಜನೆಯ ಮೂಲಕ ತಲುಪಿಸುವಲ್ಲಿ ಮೋದಿ ಯಶಸ್ವಿಯಾದರು.
ನರೇಂದ್ರ ಮೋದಿಯವರು ಈ ಯೋಜನೆಗೆ ಯಾವ ನಾಯಕರ ಹೆಸರನ್ನೂ ಇಡಲಿಲ್ಲ. ಆದರೆ ಕಾಂಗ್ರೆಸ್ ಈ ಯೋಜನೆಯನ್ನೇನ್ನಾದರೂ ಜಾರಿಗೆ ತಂದಿದ್ದರೆ ನೆಹರು ಅಥವಾ ಇಂದಿರಾ ಅಥವಾ ರಾಜೀವ್ ಗಾಂಧಿಯವರ ಹೆಸರಿಡುತ್ತಿದ್ದರು. ಕರ್ನಾಟಕದಲ್ಲಿ ‘ಇಂದಿರಾ ಗಾಂಧಿ’ ಯವರ ಹೆಸರಿನಲ್ಲಿ ಕ್ಯಾಂಟೀನ್ ತೆಗೆದ ಸಿದ್ದರಾಮಯ್ಯ ಸರ್ಕಾರ ಬಡವರ ಹೊಟ್ಟೆ ತುಂಬಿಸುವುದ್ದಕ್ಕಿಂತಲೂ ಹೆಚ್ಚಾಗಿ ಪ್ರಚಾರ
ಪಡೆಯುವಲ್ಲಿ ನಿರತರಾಗಿತ್ತು. ನೆಹರು ಕುಟುಂಬಸ್ಥರ ಹೆಸರಿನಲ್ಲಿ ಯೋಜನೆಗಳನ್ನು ಮಾಡಿ ಮತ ಬ್ಯಾಂಕನ್ನು ಭದ್ರ ಪಡಿಸಿಕೊಳ್ಳುವ ಪ್ರಚಾರದ ತೆವಲನ್ನು ಕಾಂಗ್ರೆಸ್ ಇನ್ನೂ ಬಿಟ್ಟಿಲ್ಲ.
ಓಲೈಕೆ ರಾಜಕಾರಣಕ್ಕಾಗಿ ಮಾತ್ರ ಕಾಂಗ್ರೆಸ್ ಬಡವರ ಪರವಾಗಿ ನಿಂತಿದ್ದೇನೆಂದು ಹೇಳುತ್ತದೆ. 1971ರಲ್ಲಿ ಇಂದಿರಾ ಗಾಂಧಿ ಚುನಾವಣೆಯ ಘೋಷವಾಕ್ಯ ‘ಗರೀಬಿ ಹಠಾವೋ’ 2019ರಲ್ಲಿ ಅವರ ಮೊಮ್ಮೊಗ ರಾಹುಲ್ ಗಾಂಧಿಯ ಚುನಾವಣಾ ಘೋಷವಾಕ್ಯ ‘ಗರೀಭಿ ಹಠಾವೋ’. 48 ವರ್ಷಗಳ ನಂತರವೂ ಅದೇ ಘೋಷಣೆಯ ಮೂಲಕ ಚುನಾವಣೆ ಎದುರಿಸುತ್ತಾರೆಂದರೆ ಇವರ ಬಡಪರ ಕಾಳಜಿ ಶೂನ್ಯವೆಂಬುದು ಅರ್ಥವಾಗುತ್ತದೆ. ಮೋದಿಯವರು ಕರೋನಾ ಸಂಕಷ್ಟ ಕಾಲದಲ್ಲಿ ಬಡವರ ಪರ ನಿಂತು ಮನೆ ಮನೆಗೆ ಪಡಿತರ
ತಲುಪಿಸಿದರು. ಕಾಂಗ್ರೆಸ್ಸಿನ ರೀತಿಯಲ್ಲಿ ತಮ್ಮ ಚುನಾವಣಾ ಪ್ರಚಾರಕ್ಕಾಗಿ ಈ ಯೋಜನೆಯನ್ನು ಘೋಷಿಸಲಿಲ್ಲ.
’IMF’ ಕಳೆದ ವಾರ ಪ್ರಧಾನ ಮಂತ್ರಿಯವರ ’ಗರೀಬ್ ಕಲ್ಯಾಣ್ ಯೋಜನೆ’ಯನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಜಗತ್ತಿನ ಹಲವು ದೇಶಗಳು ಕರೋನಾ ಸಂದರ್ಭದಲ್ಲಿ ತನ್ನ ಪ್ರಜೆಗಳಿಗೆ ಸರಿಯಾದ ಊಟವನ್ನು ನೀಡಲಾಗದೆ ಬಡತನ ಸೂಚ್ಯಂಕದಲ್ಲಿ ಕೆಳಗಿಳಿದಿರುವ ಸಂದರ್ಭದಲ್ಲಿ ಭಾರತ ಮಾತ್ರ ಕರೋನಾ ಪೂರ್ವ ಸೂಚ್ಯಂಕವನ್ನೇ ಕಾಪಾಡಿಕೊಂಡಿರುವ ಅಂಶವನ್ನು ಬಹಿರಂಗಪಡಿಸಿದೆ. ಇದು ಕೇವಲ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯವಾಯಿತೆಂಬ ಅಂಶವನ್ನೂ ಹೇಳಿದೆ.
“Pandemic,Poverty, and Inequality : Evidence from India ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡಿರುವ ವರದಿಯಲ್ಲಿ 2004-05 ರಿಂದ 2020-21 ರವರೆಗಿನ ಭಾರತದ ಬಡತನದ ಪ್ರಮುಖ ಅಂಶಗಳ ಬಗ್ಗೆ ಉಖಿಸಲಾಗಿದೆ. ಕರೋನಾ ಕಾಲಘಟ್ಟಕ್ಕಿಂತಲೂ ಹಿಂದೆ ಭಾರತದ ಕಡು ಬಡತನ ಸೂಚ್ಯಂಕದ ದರವು ಭಾರತದ ಜನಸಂಖ್ಯೆಯ ಶೇಕಡಾ 0.80ಯಷ್ಟಿತ್ತು, ಕರೋನಾದಿಂದ ತತ್ತರಿಸಿದ ನಂತರವೂ ಸಹ ಭಾರತದ ಕಡು ಬಡತನದ ಸೂಚ್ಯಂಕ ದರವು ಅಷ್ಟೇ ಇದೆಯೆಂದು ಈ ವರದಿಯಲ್ಲಿ ಹೇಳಲಾಗಿದೆ. ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲಿ ನೀಡುತ್ತಿರುವ ಪಡಿತರದ ಪರಿಣಾಮವಾಗಿ ಭಾರತವು ಕರೋನಾ ಸಂದರ್ಭದಲ್ಲಿಯೂ ಸಹ ಹೆಚ್ಚುವರಿ ಜನರನ್ನು ಕಡುಬಡತನಕ್ಕೆ ತಳ್ಳಲಿಲ್ಲವೆಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ.
ಮೋದಿಯವರು ಬಡವರಿಗಾಗಿ ಏನು ಮಾಡಿದರು, ಅವರು ಅಂಬಾನಿ, ಅದಾನಿಯ ದಳ್ಳಾಳಿಯೆಂದು ಬೊಬ್ಬೆ ಹೊಡೆಯುವ ಟೊಳ್ಳು ನಾಯಕರೆಲ್ಲರೂ IMF ನೀಡಿರುವ ವರದಿಯ ನಂತರ ತಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಕೇವಲ ಬಾಯಿ ಮಾತಿನಲ್ಲಿ ‘ಗರೀಭಿ ಹಠಾವೋ’ಎಂದು ಹೇಳಿ ಮತ ಬ್ಯಾಂಕಿನ ರಾಜಕೀಯ ಮಾಡುವುದಲ್ಲ ನಿಜವಾದಂತಹ ಬಡತನವನ್ನು ನಿರ್ಮೂಲನೆ ಮಾಡಬೇಕು ಅಥವಾ ಮತ್ತಷ್ಟು ಜನರು ಬಡತನಕ್ಕಿಳಿಯುವುದನ್ನು ತಡೆಯಬೇಕು.
ಈ ಎರಡೂ ಕಾರ್ಯಗಳನ್ನು ಅನುಷ್ಠಾನಗೊಳಿಸುವಲ್ಲಿ ಮೋದಿಯವರು ಯಶಸ್ವಿಯಾಗಿದ್ದರೆಂಬುದು ’IMF’ ನೀಡಿರುವ ವರದಿಯಿಂದ ಸ್ಪಷ್ಟವಾಗಿದೆ. ಮೋದಿಯವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಗಂಟೆಗಟ್ಟಲೆ ಚರ್ಚೆ ಮಾಡುವ ಹಲವು ಮಾಧ್ಯಮಗಳು ಈ ವಿಷಯದ ಬಗ್ಗೆ ಒಂದೇ ಒಂದು ಚರ್ಚೆಯನ್ನು ಮಾಡಿಲ್ಲ. ಜಗತ್ತಿನ ದೊಡ್ಡಣ್ಣ ಅಮೆರಿಕ ಪ್ರಧಾನ ಮಂತ್ರಿಗಳ ‘ಗರೀಬ್ ಕಲ್ಯಾಣ್’ ಯೋಜನೆ
ಯನ್ನು ಶ್ಲಾಸಿದೆ. ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಜತೆಗಿನ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಇಡೀ ಜಗತ್ತಿಗೆ ಭಾರತ ಪಡಿತರ ನೀಡಬಲ್ಲದೆಂದು ಹೇಳಿದರು. ಭಾರತದ ಬಡತನವನ್ನು ಆಡಿಕೊಂಡು ನಗುತ್ತಿದ್ದಂತಹ ಕಾಲಘಟ್ಟವೊಂದಿತ್ತು. ಆದರೆ ಇಂದು ಇಡೀ ಜಗತ್ತಿಗೆ ಅನ್ನ ನೀಡುವ ಶಕ್ತಿಯನ್ನು ಭಾರತ ಗಳಿಸಿದೆ. ಯುದ್ಧ ಪೀಡಿತ ಅ-ನಿಸ್ತಾನಕ್ಕೆ ಟನ್‌ಗಟ್ಟಲೆ ಗೋಽಯನ್ನು ದಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದ ದೇಶ ಭಾರತ. ಶ್ರೀಲಂಕಾಕ್ಕೆ ಮಿಲಿಯನ್ ಡಾಲರ್ ಗಟ್ಟಲೆ ಹಣವನ್ನು ಸಾಲದ ರೂಪದಲ್ಲಿ ನೀಡಿದ ದೇಶ ಭಾರತ.
ಈ ಹಿಂದೆ ದಿನವೊಂದಕ್ಕೆ 1.90 ಡಾಲರ್‌ಗಿಂತಲೂ ಕಡಿಮೆ ಆದಾಯ ಗಳಿಕೆಯನ್ನು ಬಡತನ ರೇಖೆಯನ್ನು ಅಳೆಯುವ ಮಾಪಕ ವನ್ನಾಗಿಸಲಾಗಿತ್ತು. ಕರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರತದಲ್ಲಿ ಆದಾಯ ಗಳಿಕೆಯ ಪ್ರಮಾಣ 3.20 ಡಾಲರ್ ಇತ್ತೆಂದು ವರದಿಯಲ್ಲಿ ಹೇಳಲಾಗಿದೆ . ಜಗತ್ತಿನಾದ್ಯಂತ 1.90 ಡಾಲರ್‌ಗಿಂತಲೂ ಕಡಿಮೆ ಆದಾಯ ಗಳಿಕೆ ಮಾಡಿ ಕಡುಬಡತನಕ್ಕೆ ಜಾರಿದವರ ಸಂಖ್ಯೆಯಲ್ಲಿ ಏರಿಕೆ ಯಾಗಿದ್ದರೆ ಭಾರತದಲ್ಲಿ ಮಾತ್ರ ಏರಿಕೆಯಾಗಿಲ್ಲ.
ಕರೋನಾ ಸಂದರ್ಭದಲ್ಲಿ ಕೇಂದ್ರ ಸರಕಾರವು ಕೈಗೊಂಡಂತಹ ಉತ್ತಮ ನಿರ್ಧಾರಗಳ ಫಲವಾಗಿ ಭಾರತದಲ್ಲಿ ಬಡತನ ಏರಿಕೆ ಯಾಗಲಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಈ ವರದಿಯ ಮತ್ತೊಂದು ಪ್ರಮುಖ ಅಂಶವೆಂದರೆ ಆಧಾರ್ ಜೋಡಣೆಯ ಮೂಲಕ ನೇರವಾಗಿ -ಲಾನುಭವಿಗಳಿಗೆ ಬಡವರ ಪರ ಯೋಜನೆಗಳನ್ನು ತಲುಪಿಸುವಲ್ಲಿ ಭಾರತ ಯಶಸ್ವಿಯಾಗಿದ್ದು, ಅದರ ನೇರ ಪರಿಣಾಮ ವಾಗಿ ಮನೆ ಮನೆಗೆ ಸರಕಾರದ ಯೋಜನೆಗಳು ತಲುಪಿದೆಯೆಂದು ಹೇಳಲಾಗಿದೆ. ಈ ಯೋಜನೆಯಡಿಯಲ್ಲಿ ಸುಮಾರು ೮೦ಕೋಟಿ ಜನರಿಗೆ ಉಚಿತ ಪಡಿತರವನ್ನು ತಲುಪಿಸಲಾಗಿದೆ. ಅಂದರೆ ಭಾರತದ ಜನಸಂಖ್ಯೆಯ ಸುಮಾರು ೨/೩ ಭಾಗದಷ್ಟು ಜನರು ಈ ಯೋಜನೆಯ ನೇರ ಫಲಾನುಭವಿಗಳಾಗಿದ್ದಾರೆ.
ರಾಜ್ಯ ಸರಕಾರಗಳು ನೀಡುವ ಪಡಿತರ ವ್ಯವಸ್ಥೆಯ ಜೊತೆಗೆ ಈ ಯೋಜನೆ ಯಡಿಯಲ್ಲಿ ನೀಡುತ್ತಿರುವ ಪಡಿತರ ಜನರಿಗೆ ಬಹಳಷ್ಟು
ಅನುಕೂಲವನ್ನು ಮಾಡಿದೆ. ಕರೋನಾ ಹೊಡೆತಕ್ಕೆ ಸಿಕ್ಕು ನಲುಗಿರುವ ದೇಶಗಳ ಪೈಕಿ ಅತ್ಯಂತ ವೇಗವಾಗಿ ಚೇತರಿಸಿಕೊಂಡ ದೇಶ ಭಾರತ. ಕರೋನಾ ಸಾವು ನೋವುಗಳ ಸಂಖ್ಯೆಯನ್ನು ಕಡಿಮೆ ಮಾಡುವುದರಲ್ಲಿ ಭಾರತ ಯಶಸ್ಸು ಕಂಡಿದೆ. ಆರ್ಥಿಕತೆಯ ವಿವಿಧ ಯೋಜನೆಗಳನ್ನು ನೀಡಿ ಸಮಾಜದ ಎಲ್ಲ ವರ್ಗಗಳ ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಕೈಗಾರಿಕೋದ್ಯಮಿಗಳಿಗೆ ಉತ್ತಮ ಯೋಜನೆಗಳನ್ನು ನೀಡುವಲ್ಲಿ ಭಾರತ ಯಶಸ್ವಿಯಾಗಿದೆ, ಅರೋಗ್ಯ ಕ್ಷೇತ್ರದಲ್ಲಿ ಉತ್ತಮ ಮೂಲ ಭೂತ ಸೌಕರ್ಯಗಳನ್ನು ನಿರ್ಮಿಸುವಲ್ಲಿ ಭಾರತ ಯಶಸ್ವಿಯಾಗಿದೆ, ಭಾರತದ ಪ್ರಜೆಗಳಿಗೆ ಕರೋನಾ ಲಸಿಕೆ ಸಿಗುವುದು ಅನುಮಾನ ವೆಂದು ಎಲ್ಲರೂ ಹೇಳುತ್ತಿದ್ದರು ಸಿಕ್ಕರೂ ಸಾವಿರಾರು ರೂಪಾಯಿಯ ಹಣವನ್ನು ಖರ್ಚು ಮಾಡಬೇಕೆಂದು ಹೇಳಲಾಗುತ್ತಿತ್ತು. ಆದರೆ ಭಾರತದ ಪ್ರತಿಯೊಬ್ಬ ಅರ್ಹ -ಲಾನುಭವಿಗಳಿಗೆ ಉಚಿತ ಲಸಿಕೆ ನೀಡುವ ಮೂಲಕ ಜಗತ್ತಿಗೆ ಮಾದರಿಯಾಯಿತು. ‘ಕೊವ್ಯಾಕ್ಸಿನ್’ ಹಾಗು ‘ಕೋವಿಶೀಲ್ಡ’ ಲಸಿಕೆ ಯನ್ನು ಭಾರತದಲ್ಲಿಯೇ ಉತ್ಪಾದಿಸಿ ವಿಶ್ವ ಗುರುವಾಯಿತು.
ಬಡತನದ ವಿಷಯದಲ್ಲಿ ಇಡೀ ಜಗತ್ತೇ ಕರೋನಾ ಪರಿಣಾಮವಾಗಿ ಸೂಚ್ಯಂಕದ ಕೆಳಗಿಳಿದರೆ ಭಾರತ ಮಾತ್ರ ಕರೋನಾ ಹಿಂದಿನ ಪ್ರಮಾಣವನ್ನೇ ಉಳಿಸಿಕೊಳ್ಳುವ ಮೂಲಕ ಜಗತ್ತಿನ ದೊಡ್ಡ ದೊಡ್ಡ ದೇಶಗಳಿಗೆ ಮಾದರಿಯಾಗಿದೆ. ಬಡವರ ಪರವೆಂದು ಹೇಳಿಕೊಂಡು ಉಚಿತ ಯೋಜನೆಗಳ ಮೂಲಕ ಅಽಕೃತವಾಗಿ ಮತಗಳನ್ನು ಖರೀದಿಸುವ ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಸಾಲದ ಕೂಪಕ್ಕೆ ತಳ್ಳಿಯಾಯಿತು. ಆಂಧ್ರ ಪ್ರದೇಶದ ಜಗನ್ ಮೋಹನ್ ರೆಡ್ಡಿ ಸಹ ರಾಜ್ಯವನ್ನು ಅತ್ಯಽಕ ಸಾಲಕ್ಕೆ ತಳ್ಳಿಯಾಯಿತು. ಪಂಜಾಬ್ ಈಗಾಗಲೇ
ಸಾಲದ ಕೂಪದಲ್ಲಿತ್ತು ಅರವಿಂದ್ ಕೇಜ್ರಿವಾಲ್ ಆಡಳಿತ ಶುರುವಾದ ನಂತ ರ ಮತ್ತಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸ
ಬೇಕು.
೧೯೭೧ರಿಂದಲೂ ಕಾಂಗ್ರೆಸ್ ಕೇವಲ ಬಾಯಿಮಾತಿಗೆ ಗರೀಭಿ ಹಠಾವೋ’ ಎಂದು ಹೇಳಿಕೊಂಡು ತಿರುಗಾಡುತ್ತಿದೆ. ಆದರೆ ನರೇಂದ್ರ ಮೋದಿ ಮಾತ್ರ ಪ್ರಧಾನಮಂತ್ರಿಗಳ ‘ಗರೀಬ್ ಕಲ್ಯಾಣ್ ಯೋಜನೆ’ ಯಡಿಯಲ್ಲಿ ಬಡವರ ಪರವಾಗಿ ನಿಂತು ಬಡತನವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿ ದ್ದರೆಂಬುದಕ್ಕೆ ’IMF’ ನೀಡಿರುವ ವರದಿಯೇ ಸಾಕ್ಷಿ.