ಸರಸ್ವತಿ ವಿಶ್ವನಾಥ್ ಪಾಟೀಲ್
ಒಂದೆಡೆ ಕಿತ್ತು ತಿನ್ನುವ ಬಡತನ, ಇನ್ನೊಂದೆಡೆ ಕುಟುಂಬದ ಜವಾಬ್ದಾರಿ ಹೊರಬೇಕಾದ ಮನೆಯ ಯಜಮಾನನ ದುಶ್ಚಟ, ಚಿಕ್ಕ
ವಯಸ್ಸಿನ ಕುಟುಂಬದ ಹೊಣೆ ಹೊತ್ತ ಯುವತಿಯರು. ದುಡಿದುಕೊಳ್ಳಬೇಕಾದ ಅನಿವಾರ್ಯತೆ.
ಸಮಯಕ್ಕೆ ಸರಿಯಾಗಿ ಉಟವಿಲ್ಲ, ನಿದ್ದೆಯೂ ಇಲ್ಲ, ಸೂರ್ಯನ ಕಿರಣ ಗಳು ಭೂಮಿಗೆ ಮುತ್ತಿಕ್ಕುವ ಮುನ್ನವೇ ಎಚ್ಚರಗೊಂಡು ಮನೆ ಕೆಲಸ ನಿಭಾಯಿಸಿ ಕೊಂಡು ಅವಸರದ ತುತ್ತಿನ ಚೀಲ ಹಿಡಿದು ಫ್ಯಾಕ್ಟರಿಯತ್ತ ಓಡಬೇಕು. ಫ್ಯಾಕ್ಟರಿಯ ಮ್ಯಾನೇಜರ್ ಗಳು, ಸೂಪರ್‌ವೈಸರ್‌ಗಳು ಮೈಮುಟ್ಟಿದರೂ, ಅಶ್ಲೀಲವಾಗಿ ಮಾತನಾಡಿದರೂ ಪ್ರಶ್ನಿಸು ವಂತಿಲ್ಲ. ಲೈಂಗಿಕ ದೌರ್ಜನ್ಯ ವೆಸಗಿದರೂ ಯಾರ ಮುಂದು ಕೂಡ ಬಾಯಿ ಬಿಡು ವಂತಿಲ್ಲ.
ಇದು ಗಾರ್ಮೆಂಟ್‌ಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಮತ್ತು ಯುವತಿಯರ ದಿನದ ಗೋಳು. ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಬದುಕೇ ಯಾಂತ್ರಿಕ, ವಿಶ್ರಾಂತಿ ರಹಿತವಾಗಿ ದುಡಿಯುತ್ತಿರುವ ಮಹಿಳೆಯರು ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಆದರೆ, ಅವರ ದುಡಿಮೆಗೆ ತಕ್ಕಂತೆ ವೇತನವು ಸಿಗುತ್ತಿಲ್ಲ. ಸೌಲಭ್ಯಗಳಂತೂ ಕನಸಿನ ಮಾತು. ತಮಗೆ ಅವಶ್ಯಕವಾಗಿ ಬೇಕಾಗಿದ್ದರೂ ಅದನ್ನು ಕೇಳಿ ಪಡೆಯುವ ಧೈರ್ಯವೂ ಅವರಲ್ಲಿ ಮುನ್ನುಗ್ಗಿ ಹೋಗಿ ಪಡೆದುಕೊಳ್ಳುವ ಮನೋ ಬಲವೂ ಕಾಣುವುದಿಲ್ಲ, ಏಕೆಂದರೆ ಅವರಿಗೆ ಬಲ ನೀಡಲು ಇನ್ನೊಬ್ಬರು ದನಿ ಗೂಡಿಸುವುದೂ ಇಲ್ಲಿ.
ಮಹಿಳೆಯರು ಕೌಟುಂಬಿಕವಾಗಿ, ವೈಯಕ್ತಿಕವಾಗಿ ಹಲವು ಸಮಸ್ಯೆ ಎದುರಿಸುತ್ತಿರುತ್ತಾರೆ, ಇದರ ನಡುವೆ ಗಾರ್ಮೆಂಟ್‌ಗಳಲ್ಲೂ ಒತ್ತಡದ ಕೆಲಸ ಮಾಡುವ ಅವರಿಗೆ ವಿಶ್ರಾಂತಿ ಎಂಬುದು, ಗಗನ ಕುಸುಮ, ಹೇಗೋ ಜೀವನ ದೂರಿದ ರಾಯಿತು ಎಂದು ತಾವೇ ದುಡಿಯಲು ಬರುವ ಮಹಿಳೆಯರಿಗೆ ಎದುರಾಗುತ್ತಿರುವುದು ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಹಿಂಸೆ ಎಂಬ ಭೂತ. ವಾಣಿಜ್ಯ ನಗರಗಳಿಂದ ಸುಮಾರು ೬೦-೭೦ ಕಿ.ಮೀ. ದೂರದ ಹಳ್ಳಿಗಳಿಂದ ಗಾರ್ಮೆಂಟ್‌ಗಳಲ್ಲಿ ದುಡಿಯಲು ಮಹಿಳೆಯರು ಬರುತ್ತಾರೆ. ಅವರನ್ನು ಕರೆತರಲು ಮತ್ತು ವಾಪಸ್ ಬಿಡಲು ಫ್ಯಾಕ್ಟರಿಗಳು ಒದರುವ ವಾಹನ ಸೌಲಭ್ಯವೂ ಅತ್ಯಂತ ಕಳಪೆ ಮಟ್ಟದ್ದಾಗಿ ರುತ್ತದೆ.
Read E-Paper click here
ಕುರಿಗಳಂತೆ ಕಾರ್ಮಿಕರನ್ನು ತುಂಬಿಕೊಂಡು ಬರಲಾಗುತ್ತದೆ. ಕೆಲ ಕಾರ್ಖಾನೆಗಳು ವಾಹನ ಸೌಲಭ್ಯವನ್ನೂ ನೀಡುವುದಿಲ್ಲ. ತುಸು ಆರಾಮವಾಗಿ ಪ್ರಯಾಣಿಸೋಣ ಎಂದರೆ ದಿನಗಳು ಕಾರ್ಮಿಕರಿಗೆ ಸರಕಾರಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಿಗುವುದು ಇಲ್ಲ ಹಾಗಾಗಿ, ಮರಳಿನ ಲಾ, ಟೆಂಪೊ ಅಥವಾ ಸರಕು ಸಾಗಣೆ ವಾಹನಗಳೇ ಓಡಾಟಕ್ಕೆ ಇರುವ ಕೊನೆಯ ಆಯ್ಕೆ, ಇಂಥ ಅಸುರಕ್ಷಿತ ವಾಹನಗಳು ಕಾರ್ಮಿಕರ ಪ್ರಾಣಕ್ಕೆ ಎರವಾಗಿರುವ ಸಾಕಷ್ಟು ಘಟನೆಗಳೂ ದಿನನಿತ್ಯ ನೋಡುತ್ತಲೇ ಇರುತ್ತೇವೆ.
ಮಹಿಳೆಯರು ದೂರದ ಊರುಗಳಿಂದ ಬರುತ್ತಾರೆ. ನಗರದಲ್ಲಿ ನೆಲೆ ನಿಂತಿರುವವರಲ್ಲಿ ದೂರದ ಜಿಲ್ಲೆಗಳಿಂದ ಬಂದವರೇ ಹೆಚ್ಚು ದಿನ ಬೆಳಗಾದರೆ ಕೆಲಸಕ್ಕೆ ಓಡುವ ಆತುರ, ಆಡುವ ಮಕ್ಕಳನ್ನು ಅಂಗಳದಲ್ಲಿ ಅನಾಥರಂತೆ ಬಿಟ್ಟು ಹೋಗುವುದು ಹೇಗೆ ಎಂಬ ಸಂಕಟ, ಪ್ಲೇ ಹೋಮ್ನಲ್ಲಿ ಬಿಡುವಷ್ಟು ಅವರು ಆರ್ಥಿಕ ಶಕ್ತ ರಲ್ಲ, ಮಕ್ಕಳ ಮೇಲಿನ ಜೀವದ ಹಂಗು ಬಿಟ್ಟು ಒಂಟಿಯಾಗಿ ಬಿಟ್ಟು ಬರುವಂತೆಯೂ ಇಲ್ಲ. ಇಂಥ ತೊಳಲಾಟದಲ್ಲಿಯೇ ತಮ್ಮೊಂದಿಗೆ ಮಕ್ಕಳನ್ನು ಫ್ಯಾಕ್ಟರಿಗೆ ಹೊತ್ತು ಬರುತ್ತಾರೆ.
ಕಾನೂನು ಪ್ರಕಾರ ಕಾರ್ಖಾನೆಯೊಂದರಲ್ಲಿ ೩೦ಕ್ಕಿಂತ ಅಧಿಕ ಮಹಿಳೆಯರು ದುಡಿಯುತ್ತಿದ್ದರೆ, ಅಂಥ ಸ್ಥಳಗಳಲ್ಲಿ ತಾಯಂದಿರಿಗೆ ಮೂರು ಬಾರಿ ಹಾಲು ಕುಡಿಸಲು ಅವಕಾಶ ನೀಡಬೇಕು. ಆದರೆ, ಈ ಕಾನೂನಿಗೆ ಬಹುತೇಕ ಕಾರ್ಖಾನೆ ಗಳಲ್ಲಿ ಪಾಲನೆಯಾಗು ತ್ತಿಲ್ಲ. ಇದ್ದರೂ, ತಾಯಂದಿರಿಗೆ ಅಳುವ ಮಕ್ಕಳನ್ನು ಸಮಾಧಾನ ಪಡಿಸಲು ಅವಕಾಶ ನೀಡಲ್ಲ. ಇದರಿಂದಾಗಿ ಮಕ್ಕಳಿಗೆ ಅಮ್ಮನ ಮಮತೆ ಸಿಗದಾಗಿದೆ.
ನೀನು ನನ್ ಜತೆ ಸ್ವಲ್ಪ ಅಡ ಮಾಡ್ಕೊ ಸಾಕು. ಪೊಡೆಕ್ಷನ್ ಟಾರ್ಗೆಟ್ ರೀಚ್ ಮಾಡದಿದ್ರೂ ಪರವಾಗಿಲ್ಲ. ನಾವು ಮ್ಯಾನೇಜ್ ಮಾಡ್ತಿನಿ, ಗಂಡ ಇಲ್ವಂತೆ, ಹೆಂಗ್ ಇರ್ತಿಯಾ ಒಬ್ಳೆ, ಬಾಡಿಗೆ ಮನೇಲಿ ಒಬ್ಳೆ ಇದೀಯಂತೆ ಹೌದಾ? ನಿಮ್ಮ ಮೊಬೈಲ್ ನಂಬರ್ ಕೊಡು ಕಷ್ಟ-ಸುಖ ಮಾತಾಡೋಣ, ನಿನ್ನ ಏನೇ ಕಷ್ಟ ಇನ್ನೂ ಹೇಳು ನಾನ್ ಬರುವೆ, ಇದು ಗಾರ್ಮೆಂಟ್‌ಗಳಲ್ಲಿ ತುತ್ತು ಅನ್ನಕ್ಕಾಗಿ ದುಡಿಯುವ ಬಡ ಮತ್ತು ಮಧ್ಯಮ ವರ್ಗದ, ಚೆಂದದ ಯುವತಿಯರು ಬದುಕು. ಮಹಿಳೆಯರಿಗೆ ನಿತ್ಯ ಬೆಳಗಾದಂತೆ ಎದುರಾಗುವ ಲೈಂಗಿಕ ಕಿರುಕುಳದ ಸ್ಯಾಂಪಲ್. ಉಸ್ತುವಾರಿಗಳು ಕೆಲಸ ಹೇಳಿಕೊಡುವ ನೆಪದಲ್ಲಿ ಮೈ ಮುಟ್ಟುತ್ತಾರೆ. ಅಶ್ಲೀಲ ವಾಗಿ ಮಾತಾಡ್ತಾರೆ.
ಇದರ ಬಗ್ಗೆ ತಕರಾರೇನಾದು ಮಾಡಿದ್ರೆ, ಪ್ರೊಡಕ್ಷನ್ ಟಾರ್ಗೆಟ್ ರೀಚ್ ಮಾಡಿಲ್ಲ. ಅನ್ನೋ ನೆಪ ಇಷ್ಟೊಂಡು ಬಾಯಿಗೆ ಬಂದಂಗೆ
ಬಯ್ಯುತ್ತಾರೆ. ಏನೇ ಕಿರುಕುಳ ನೀಡಿದ್ರೂ, ಯಾರ ಬಳಿಯೂ ಹೇಳೋ ಹಂಗಿಲ್ಲ, ಒಂದೊಮ್ಮೆ ಹೇಳಿದ್ರೆ ಜತೆ ಯಲ್ಲಿ ಕೆಲ್ಸ ಮಾಡೋರ ನಮ್ಮನ್ನು ನೋಡುವ ದೃಷ್ಟಿ ಬದಲಾಗುತ್ತದೆ, ಹಂಗಾಗಿ, ಮನಸ್ಸ ನಮಗಾದ ನೋವಿನ ಕೆಂಡ ಇಟ್ಟುಕೊಂಡು ಕೆಲ್ಸ ಮಾಡೇಕು, ಮಾನಸಿಕ, ಲೈಂಗಿಕ ದೌರ್ಜನ್ಯ ನುಂಗಿಕೊಳ್ಳಬೇಕು ಇದು ಮಹಿಳಾ ಕಾರ್ಮಿಕರ ನೋವಿನ ಮಾತು.
ಕಾರ್ಖಾನೆಯ ಆಡಳಿತ ಮಂಡಳಿಯು ಮಹಿಳಾ ಕಾರ್ಮಿಕರನ್ನು ಪ್ರೊಡಕ್ಷನ್ ಟಾರ್ಗೆಟ್ ಎಂಬ ಸುಳಿಯಲ್ಲಿ ಸಿಲುಕಿಸಿ ದಿನ ನಿತ್ಯ ನರಳುವಂತೆ ಮಾಡುತ್ತಿರುತ್ತದೆ. ಅವೈಜ್ಞಾನಿಕ ಟಾರ್ಗೆಟ್ ನಿಗದಿಯಿಂದ ಕಾರ್ಮಿಕರು ಯಂತ್ರಗಳ ಜತೆ ಪೈಪೋಟಿಗಿಳಿದು ದುಡಿಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಪ್ರತಿ ಗಂಟೆಗೆ ೧೪೦-೧೮೦, ಪೀಸ್ ಪ್ರೊಡಕ್ಷನ್ ಟಾರ್ಗೆಟ್ ನೀಡಲಾಗುತ್ತದೆ. ಅದರಂತೆ ಎಂಟು ಗಂಟೆಗಳ ಅವಧಿಗೆ ೧೨೬೦ ೧೪೪೦ ಪೀಸ್ ಟಾರ್ಗೆಟ್ ರೀಚ್ ಆಗಲೇಬೇಕು, ಇಷ್ಟು ಕಡಿಮೆ ಅವಧಿಯಲ್ಲಿ ಆ ಗುರಿ ಮುಟ್ಟಲು ಸಾಧ್ಯವೇ ಇಲ್ಲ, ಟಾರ್ಗೆಟ್ ರೀಚ್ ಮಾಡಲಾಗದಿದ್ದರೆ ಮೇಲಿನವರಿಂದ ಆಶ್ಲೀಲ ಬೈಗುಳಗಳಂತೂ ಗ್ಯಾರಂಟಿ,
ಕೆಲಸದ ಅವಧಿ ಮುಗಿದರೂ ೪೫-೬೦ ನಿಮಿಷ ಪುಕ್ಕಟೆಯಾಗಿ ದುಡಿಯಬೇಕು.
ಕೆಲಸದ ಸರತಿ ಮುಗಿದ ನಂತರ ಫ್ಯಾಕ್ಟರಿಯ ಸೈರನ್ ಮೊಳಗಿದರೂ ಮನೆಯತ್ತ ಹೆಜ್ಜೆ ಹಾಕುವ ನೆರವಿಗೆ ಧಾವಿಸುತ್ತಿಲ್ಲ. ಕಾರ್ಮಿಕರು ಒಮ್ಮೆ ಕಾರ್ಡ್ ಪಂಚ್ ಮಾಡಿ, ಮತ್ತೆ ಒಂದು ಗಂಟೆ ಕಾಲ ಫ್ಯಾಕ್ಟರಿಯ ಚಕ್ರ ವ್ಯೂಹದ ಬಂಧಿ. ಕಡಿಮೆ ಸಂಬಳೆ, ಒತ್ತಡದ ಕೆಲಸ, ಕಳಪೆ ಗುಣಮಟ್ಟದಿಂದ ಕೂಡಿರುವ ಫ್ಯಾಕ್ಟರಿಗಳ ಸನ್ನಿವೇಶ, ಲಿಂಗ ತಾರತಮ್ಯ ಗಾರ್ಮೆಂಟ್ ಕಾರ್ಮಿಕರಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಶೇ.೯೦ಕ್ಕಿಂತಲೂ ಹೆಚ್ಚು ಜನ ದಿನಕ್ಕೆ ೧೦೦ ರಿಂದ ೫೦೦ ರೂಪಾಯಿ ಒಳಗೆ ಸಂಬಳ ಪಡೆಯುತ್ತಿದ್ದಾರೆ.
ತಿಂಗಳಿಗೆ ಸರಾಸರಿ ಐದು ಸಾವಿರ ರೂಪಾಯಿ ದುಡಿಮೆ ಇದ್ದು ಮೂಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕಷ್ಟವಾಗುತ್ತಿದೆ. ಇದು ಸರಕಾರ ನಿಗದಿಪಡಿಸಿದ ಕನಿಷ್ಟ ವೇತನಕ್ಕಿಂತ ಕಡಿಮೆಯಾಗಿದ್ದು, ಶೇ.೩೩.೧ರಷ್ಟು ಕಾರ್ಮಿಕರು ನಗದು ರೂಪದಲ್ಲಿ ಸಂಬಳ ಪಡೆಯುತ್ತಿದ್ದಾರೆ. ಯಾರ ಗಮನಕ್ಕೂ ಬಾರದಂತೆ ಮಾಲೀಕರು ಕಾರ್ಮಿಕರ ಸಮೇತ ಕಾರ್ಖಾನೆಯನ್ನು ಮಾರಾಟ ಮಾಡುವುದು ಸಾಮಾನ್ಯ! ಇಲ್ಲವೇ ಯಾವ ಮುನ್ಸೂಚನೆಯೂ ನೀಡದೆ ಇದ್ದಕ್ಕಿದ್ದಂತೆ ಮುಚ್ಚಲಾಗುತ್ತಿದೆ. ಇದರಿಂದ ನಿತ್ಯದ ಕಾಯಕ ನಂಬಿಕೊಂಡಿರುವ ಮಹಿಳೆಯರು ಬೀದಿಗೆ ಬೀಳುವಂತಾಗಿದೆ. ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಓದು-
ಬರಹ ಬಾರದ ಕಾರ್ಮಿಕರಿಂದ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ವಂಚಿಸಲಾಗುತ್ತಿದೆ.
ಇದೆಲ್ಲವನ್ನೂ ವಿರೋಧಿಸಿ, ಪ್ರತಿಭಟಿಸಿದರೂ ಪ್ರಯೋಜನ ವಾಗುತ್ತಿಲ್ಲ. ಸರ್ಕಾರವು ಇಂತವರ ನೆರವಿಗೆ ಧಾವಿಸುತ್ತಿಲ್ಲ.