Monday, 9th December 2024

ಕಾಯಿದೆಗೆ ಬಲ ನೀಡಿ ಅನುಷ್ಠಾನ ಹುಸಿಗೊಳಿಸಿದರೆಂತಯ್ಯ?!

 ಬೇಳೂರು ರಾಘವ ಶೆಟ್ಟಿ, ಉಡುಪಿ

ಒಂದು ವಿಚಾರದಲ್ಲಿ ನಾನು ಇಂದೂ ಜಿಜ್ಞಾಾಸು. ಬಗೆಹರಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವು ಪುಸ್ತಕಗಳನ್ನು ಮಗುಚಿ ಹಾಕಿದ್ದೇನೆ. ಗೊತ್ತಿಿರುವ ವಿದ್ವಾಾಂಸರುಗಳನ್ನು ಸಂಪರ್ಕಿಸಿ ಚರ್ಚಿಸಿದ್ದೇನೆ. ಆದಾಗ್ಯೂ ನಾನು ಜಿಜ್ಞಾಾಸುವಾಗಿಯೇ ಉಳಿದಿದ್ದೇನೆ ಎನ್ನುವುದು ಬೇಸರದ ಸಂಗತಿ. ಹಾಗೆಂದು ನನ್ನ ಜಿಜ್ಞಾಾಸೆ ಅಷ್ಟು ಕ್ಲಿಿಷ್ಟಕರವಾದುದೇನಲ್ಲ. ವಿಷಯ ಇಷ್ಟೇ: ನಮ್ಮ ಸಂವಿಧಾನ ಸಮಾನತೆಯನ್ನು ಪ್ರತಿಪಾದಿಸುತ್ತದೆ. ಪರಿಚ್ಛೇಧ 14ರಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ತತ್ವ ಪ್ರತಿಷ್ಠಾಾಪಿಸಲ್ಪಟ್ಟಿಿದೆ. ಸಂಗತವಾಗಿ ಭಾರತೀಯ ದಂಡ ಸಂಹಿತೆ *(ಐ್ಞಜ್ಞಿ ಛ್ಞಿ್ಝಿ ್ಚಟಛಿ) ಮತ್ತು ಕ್ರಿಿಮಿನಲ್ ಅಪರಾಧ ತಡೆ ನಿಯಮಾವಳಿಗಳಿವೆ. ಇದರ ಪ್ರಕಾರ ಗಂಡ ಹೆಂಡತಿಗೆ ಹೊಡೆಯುವಂತಿಲ್ಲ. ಮಗ ಅಪ್ಪನಿಗೆ ಹಿಂಸೆ ನೀಡುವಂತಿಲ್ಲ.

ಒಟ್ಟಿಿನಲ್ಲಿ ಯಾರು ಯಾರಿಗೂ ದೈಹಿಕ, ಮಾನಸಿಕ ಹಿಂಸೆ ನೀಡುವಂತಿಲ್ಲ. ಅದು ಕ್ರಿಿಮಿನಲ್ ಅಪರಾಧ ಎಂದು ಪರಿಗಣಿಸಲ್ಪಟ್ಟಿಿದ್ದು, ಆ ಅಪರಾಧಗಳ ತೀವ್ರತೆಗನುಗುಣವಾಗಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಿಸಲಾಗಿದೆ.

ದುರದೃಷ್ಟವೇನೆಂದರೆ ಈ ಸಂವಿಧಾನ ಹಾಗೂ ಅದಕ್ಕೆೆ ಹೊಂದಿಕೊಂಡ ಕಾನೂನಿನಲ್ಲಿ ಒದಗಿಸಲಾದ ರಕ್ಷಣೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸರಿಯಾಗಿ ದೊರೆಯುತ್ತಿಿಲ್ಲ ಎಂಬ ಕೂಗೆದ್ದಿದೆ. ಪೊಲಿಸ್ ಸ್ಟೇಶನ್‌ಗೆ ಬರುವ ದೂರುಗಳನ್ನು ಅವುಗಳ ಅರ್ಹತೆ *(ಛ್ಟಿಿಜಿಠಿ)ಯಂತೆ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಅದು ಬ್ರಾಾಹ್ಮಣನ ವಿರುದ್ಧವೋ ಆಯಾ ಪ್ರತಿಷ್ಠಿಿತ ವ್ಯಕ್ತಿಿ ಅಥವಾ ರಾಜಕಾರಣಿಯ ವಿರುದ್ಧವೋ ಎಂಬ ತರ್ಕಕ್ಕೆೆ ಅವಕಾಶವಿಲ್ಲವಷ್ಟೇ! ನೊಂದವನು ಯಾರು ಹಾಗೂ ನೋವಿನ ಅಗಾಧತೆ ಎಷ್ಟು ಎಂಬುದರ ನೆಲೆಯಲ್ಲಿ ಮುಂದಿನ ಕಾನೂನು ಕ್ರಮ ಜರಗಬೇಕಾದದ್ದು ಸರಿಯಷ್ಟೇ. ಗುದ್ದಿದವನು ಪ್ರತಿಷ್ಠಿಿತ ವ್ಯಕ್ತಿಿಯಾದರೆ ಕಾನೂನನ್ನು ಸಡಿಲುಗೊಳಿಸಲು ಉಪನಿಬಂಧನೆಗಳಿರುವುದಿಲ್ಲ.

ಕಾನೂನಿನ ಸ್ಥಿಿತಿ ಹೀಗಿರುವಾಗ ಪ.ಜಾತಿ, ಪ.ಪಂ ಮೇಲಿನ ದೌರ್ಜನ್ಯ ಹೆಚ್ಚುತ್ತಿಿರುವ ಕಾರಣವೇನು? ಒಬ್ಬ ನಿರಕ್ಷರ ಕುಕ್ಷಿಗೂ ಅರ್ಥವಾಗುವ ವಿಷಯವೇನೆಂದರೆ ಆ ವರ್ಗದವರ ದೂರು ಅರ್ಜಿಗಳನ್ನು ನಿಷ್ಪಕ್ಷಪಾತವಾಗಿ, ಸಮರ್ಪಕವಾಗಿ ಹಾಗೂ ದೂರಿನ ಅರ್ಹತೆಗನುಗುಣವಾಗಿ ತನಿಖಾ ಪ್ರಾಾಧಿಕಾರಗಳು ಕೈಗೆತ್ತಿಿಕೊಳ್ಳಲೇ ಇಲ್ಲ. ಆಪಾಧಿತನು ಪ್ರತಿಷ್ಠಿಿತ ವ್ಯಕ್ತಿಿಯಾಗಿದ್ದರೆ ತಕ್ಷಣ ತನಿಖಾ ಪ್ರಾಾಧಿಕಾರಗಳು ಮೆತ್ತಗಾಗುತ್ತವೆ. ಯಾಕೆಂದರೆ ಸರಕಾರದ ಸುಪ್ತ ಕಟಾಕ್ಷ ಈ ಪ್ರತಿಷ್ಠಿಿತ ವ್ಯಕ್ತಿಿಗಳ ಪಾಲಿಗೆ ಇರುತ್ತದೆ. ಇದನ್ನರಿತ ನೌಕರಶಾಹಿ ಆಪಾದಿತ ವ್ಯಕ್ತಿಿಯ ಪರವಾಗಿ ಕಾನೂನಿನ ಕಣ್‌ಕಟ್ ಮಾಡಿ ಮುಗಿಸುತ್ತದೆ. ಇದು ಸರಕಾರದ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ.

ವಿಷಯ ಅದಲ್ಲ. ಇದು ಕಾನೂನಿನ ದೋಷವೋ ಅಥವಾ ಅನುಷ್ಠಾಾನ ದೋಷವೋ ನಿಷ್ಕರ್ಷೆ ಆಗಬೇಕಾಗಿದೆ. ಆದರೆ, ಸರಕಾರ ಇದನ್ನು ಕಾನೂನಿನ ದೋಷವೆಂದು ಪರಿಗಣಿಸಿ ಭಾರತೀಯ ದಂಡ ಸಂಹಿತೆಗೆ ತಿದ್ದುಪಡಿ ಮಾಡಿ ‘ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ-1989’ ಎಂಬ ಹೊಸ ಕಾನೂನನ್ನು ಜಾರಿಗೆ ತಂದಿತು. ಈ ಕಾಯಿದೆ ಜಾರಿಗೆ ಬರುವ ಕಾಲಕ್ಕೆೆ ನಮಗೆ ಸ್ವಾಾತಂತ್ರ್ಯ ದೊರೆತು ನಲ್ವತ್ತು ವರ್ಷಗಳು ಕಳೆದಿತ್ತು.

ಈ ನಾಲ್ಕು ದಶಕಗಳಲ್ಲಿ ಭಾರತೀಯ ದಂಡ ಸಂಹಿತೆ ಕುಲೀನರಿಗಲ್ಲದೆ ಹಿಂದುಳಿದವರಿಗೆ ರಕ್ಷಣೆ ಕೊಡಲಿಲ್ಲ ಎಂದು ಇದರರ್ಥವೇ? ಬೇಸರದ ಸಂಗತಿಯೆಂದರೆ ಈ ನೂತನ ಕಾಯಿದೆಯೂ ಕೂಡ ನಿರೀಕ್ಷಿತ ಫಲವನ್ನು ನೀಡಲಿಲ್ಲ. ಅಟ್ರಾಾಸಿಟಿ ಕಾಯಿದೆಯ ದುರುಪಯೋಗ ಶುರುವಾಯಿತು. ಮಾತೆತ್ತಿಿದರೆ ಅಟ್ರಾಾಸಿಟಿ ಕೇಸ್ ಹಾಕಿ ಬಾಯಿ ಮುಚ್ಚಿಿಸುವುದು ಪರಿಪಾಠವಾಯಿತು. ಆದಾಗ್ಯೂ ಆ ವರ್ಗದವರ ಮೇಲಿನ ದೌರ್ಜನ್ಯ ಕಡಿಮೆಯಾಗಲಿಲ್ಲ ಎಂದು ತಿಳಿದ ಸರಕಾರ 2018ರಲ್ಲಿ (ಸುಮಾರು ಮೂವತ್ತು ವರ್ಷಗಳ ಬಳಿಕ) ಕಾಯಿದೆಯನ್ನು ಇನ್ನು ಬಿಗಿಗೊಳಿಸುವುದೇ ಸೂಕ್ತ ಎಂಬ ತೀರ್ಮಾನಕ್ಕೆೆ ಬಂದು ಕೆಲವು ತಿದ್ದುಪಡಿಗಳನ್ನು ತಂದಿತು. ಅದರಂತೆ ಎಸ್‌ಸಿ, ಎಸ್‌ಟಿ ದೌರ್ಜನ್ಯಕ್ಕೆೆ ಸಂಬಂಧಿಸಿದ ದೂರು ಬಂದಾಕ್ಷಣ ಎಫ್‌ಐಆರ್ ದಾಖಲಿಸಿ ದಸ್ತಗಿರಿ ಮಾಡಿ ಕಾನೂನಿನ ಕ್ರಮ ಜರಗಿಸಬಹುದಾಗಿದೆ.

ಈ ತಿದ್ದುಪಡಿಯಿಂದ ಓರ್ವ ಅಮಾಯಕ ಆಪಾದಿತನ ಪಾಡು ಬಾಣಲೆಯಿಂದ ತೆಗೆದು ಬೆಂಕಿಗೆ ಹಾಕಿದಂತಾಯಿತಷ್ಟೇ. ತನಿಖಾಧಿಕಾರಿ ದೂರಿನ ಪ್ರಾಾಥಮಿಕ ತನಿಖೆ ನಡೆಸಿ ತನ್ನ ವಿವೇಚನೆಯಂತೆ ಕಾನೂನು ಕ್ರಮ ಕೈಗೊಳ್ಳದೆ ಏಕಾಏಕಿ ದಸ್ತಗಿರಿ ಮಾಡಬಹುದಾದ ಕಾನೂನಿನಿಂದ ಪೌರನ ಮೂಲಭೂತ ಹಕ್ಕಿಿನ ಹನನವಾಗುತ್ತದೆ ಎಂದು ಗುಲ್ಲೆೆದ್ದಿತು. ಸಾರ್ವಜನಿಕ ಹಿತಾಸಕ್ತಿಿಯ ದೂರು ಸರ್ವೋಚ್ಚ ನ್ಯಾಾಯಾಲಯದಲ್ಲಿ ದಾಖಲಾಯಿತು. ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್ ದೂರಿನ ಪ್ರಾಾಥಮಿಕ ತನಿಖೆಗೆ ಮುನ್ನವೇ ಅರ್ಥಾತ್ ದೂರು ಬಂದಾಕ್ಷಣ ದಸ್ತಗಿರಿ ಮಾಡುವುದು ಪೌರನ ಮೂಲಭೂತ ಹಕ್ಕಿಿನ ನಿರಾಕರಣೆಯಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ದೂರಿನ ಬಗ್ಗೆೆ ಪ್ರಾಾಥಮಿಕ ತನಿಖೆ ನಡೆಸದೆ ಹಾಗೂ ಆಪಾದಿತ ಅಹವಾಲನ್ನು ಹೇಳಿಕೊಳ್ಳುವ ಮುನ್ನ ಕಾನೂನು ಕ್ರಮ ಜರುಗಿಸಬಾರದು ಎಂದು ಸೂಚನೆ ನೀಡಿತು. ಆದರೆ, ಸರಕಾರ ಕಾನೂನನ್ನು ಸಮರ್ಥಿಸಿಕೊಳ್ಳುತ್ತಾಾ ಘನ ಸರ್ವೋಚ್ಚ ನ್ಯಾಾಯಾಲಯ ನೀಡಿದ ಸೂಚನೆ ಈ ದೌರ್ಜನ್ಯ ತಡೆ ಕಾಯಿದೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂದು ವಾದ ಮಂಡಿಸಿದೆ.

ಈ ವಾದವನ್ನು ಪುರಸ್ಕರಿಸುತ್ತಾಾ ಇದೇ ಅ. 01ರಂದು ಸರ್ವೋಚ್ಚ ನ್ಯಾಾಯಾಲಯ ತನ್ನ ಮಾರ್ಚ್ 20, 2018ರ ತೀರ್ಪು ಅಟ್ರಾಾಸಿಟಿ ತಡೆ ಕಾನೂನನ್ನು ಶಿಥಿಲಗೊಳಿಸುತ್ತದೆ ಎಂಬ ವಾದದಲ್ಲಿ ಹುರುಳಿದೆ ಎಂದು ಅಭಿಪ್ರಾಾಯಪಟ್ಟಿಿದೆ. ಮುಂದುವರಿದು, ಆ ವರ್ಗದವರು ಇಂದೂ ದುರ್ಬಲರಾಗಿಯೇ ಇದ್ದಾಾರೆ ಎಂದು ಪ್ರಲಾಪಿಸಿದೆ.

ಖೇದದ ವಿಚಾರವೆಂದರೆ ಸರಕಾರ ಪ.ಜಾತಿ, ಪ.ಪಂ.ಗಳ ರಕ್ಷಣೆಗಾಗಿ ಈ ಪರಿ ದಿಟ್ಟ ಹೆಜ್ಜೆೆಯನಿಟ್ಟು ಕಾನೂನನ್ನು ಕಠಿಣಗೊಳಿಸುವಾಗ ಒಮ್ಮೆೆಯೂ ತನ್ನ ಅನುಷ್ಠಾಾನದ ದಕ್ಷತೆಯನ್ನು ಶಂಕಿಸಲಿಲ್ಲ. ಸಮಾನತೆಯನ್ನು ಪ್ರತಿಪಾದಿಸುವ ಸಂವಿಧಾನ ರೀತ್ಯಾಾ ಆಡಳಿತ ನಡೆಸುವ ಸರಕಾರ ಕಾನೂನಿನ ರಕ್ಷಣೆಯನ್ನು ಯಾವುದೋ ಒಂದು ವರ್ಗದ ಮಂದಿಗೆ ನೀಡಲು ಅಸಮರ್ಥವಾಗುತ್ತದಾದರೆ ಅದು ಕೇವಲ ಕಾನೂನಿನ ತೊಡಕೇ? ನಿಷ್ಪಕ್ಷಪಾತವಾಗಿ, ಸಮರ್ಪಕವಾಗಿ ಊರ್ಜಿತದಲ್ಲಿರುವ ಕಾನೂನು ಕಾರ್ಯಗತವಾಗುತ್ತಿಿಲ್ಲ ಎಂದರ್ಥ ಬರುವುದಿಲ್ಲವೇ! ಇದು ಅದಕ್ಷತೆಯ ಲಕ್ಷಣವಲ್ಲವೇ?

ಸರಕಾರ ಎಂದಾದರೂ ಈ ಬಗ್ಗೆೆ ಗಂಭೀರವಾಗಿ ಚಿಂತಿಸಿದೆಯೇ? ಪ್ರಜಾಸತ್ತಾಾತ್ಮಕ ಆಡಳಿತ ವ್ಯವಸ್ಥೆೆಯ ಸರಕಾರ ಎಲ್ಲ ವರ್ಗದ ಜನರನ್ನು ಒಂದೇ ದೃಷ್ಟಿಿಯಲ್ಲಿ ಕಾಣಬೇಕು. ತಾರತಮ್ಯ ಎಸಗಬಾರದು. ಸಾರ್ವಜನಿಕ ಹಿತಾಸಕ್ತಿಿಯಲ್ಲಿ ರೂಪಿಸಿದ ಕಾನೂನಿನ ಅನುಷ್ಠಾಾನದಲ್ಲಿ ಪ್ರತಿಷ್ಠಿಿತ ವರ್ಗ ಸವಾಲಾಗುವುದಾದರೆ ಅದು ಆಡಳಿತದ ಅದಕ್ಷತೆಯನ್ನು ಸೂಚಿಸುತ್ತದೆ. ಅನುಷ್ಠಾಾನ ಪ್ರಾಾಧಿಕಾರಗಳ ದಕ್ಷತೆಯನ್ನು ಹೆಚ್ಚಿಿಸುವ ಕ್ರಮಕ್ಕೆೆ ಸರಕಾರ ಮುಂದಾಗಬೇಕು. ಆದರೆ, ನಮ್ಮ ದೇಶದಲ್ಲಿ ಯಾವ ರಾಜಕೀಯ ಪಕ್ಷದ ನೇತೃತ್ವದ ಸರಕಾರ ಬಂದರೂ ಅನುಷ್ಠಾಾನ ಪ್ರಾಾಧಿಕಾರಗಳ ಕಾರ್ಯದಕ್ಷತೆಯನ್ನು ಹೆಚ್ಚಿಿಸುವ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಎಲ್ಲ ಆಡಳಿತ ವ್ಯವಸ್ಥೆೆಗಿಂತಲೂ ಪ್ರಜಾಸತ್ತಾಾತ್ಮಕ ಆಡಳಿತವೇ ಸರ್ವ ಶ್ರೇಷ್ಠ ಎಂಬುದು ಬುದ್ಧಿಿಜೀವಿಗಳ ಅಭಿಪ್ರಾಾಯ. ಯಾಕೆಂದರೆ ಪ್ರಜಾಸತ್ತೆೆಯಲ್ಲಿ ಸಮಾನತೆಯೇ ಮುಖ್ಯ. ಈ ಸಮಾನತೆಯ ಯಶಸ್ಸಿಿಗೆ ದಕ್ಷತೆ ಪ್ರಧಾನ. ಭಾರತದಲ್ಲಿ ಅದರ ವ್ಯಾಾಖ್ಯಾಾನ ಬೇರೆಯಾಗಬಾರದು.

ಇನ್ನು ಪ.ಜಾತಿ, ಪ.ಪಂದವರು ಇನ್ನು ದುರ್ಬಲರಾಗಿಯೇ ಇದ್ದಾಾರೆ ಎಂದು ಅವಲತ್ತುಕೊಳ್ಳುವ ನ್ಯಾಾಯಾಂಗ, ಆಡಳಿತದ ಅದಕ್ಷತೆಯ ಬಗ್ಗೆೆ ಚಕಾರ ಎತ್ತದಿರುವುದು ನಮ್ಮ ದೌರ್ಭಾಗ್ಯವೇ ಸರಿ. ಸ್ವಾಾತಂತ್ರ್ಯ ಸಿಕ್ಕಿಿ ವರುಷ ಎಪ್ಪತ್ತು ಕಳೆದರೂ ಹಿಂದುಳಿದವರು ಇನ್ನು ದುರ್ಬಲರಾಗಿಯೇ ಇದ್ದಾಾರೆ ಎಂಬ ಬಗ್ಗೆೆ ನಮ್ಮ ಮರುಕವೂ ಇದೆ. ಆದರೆ, ಆ ಸ್ಥಿಿತಿಗೆ ನಮ್ಮ ಸರಕಾರಗಳ ಮೊಸಳೆ ಕಣ್ಣೀರೇ ಕಾರಣ. ಆ ವರ್ಗದ ಮತ ಬೇಕು. ಅದಕ್ಕಾಾಗಿ ಅವರಿಗೆ ಬೇಕು, ಬೇಡಾದ ಎಲ್ಲ ಸೌಲಭ್ಯಗಳ ಜತೆ ಅವರ ರಕ್ಷಣೆಗೆ ಕಾನೂನನ್ನು ಕಠಿಣಗೊಳಿಸುತ್ತಲೇ ಇರುತ್ತದೆ. ಆದರೆ, ಅನುಷ್ಠಾಾನ ಪ್ರಾಾಧಿಕಾರಗಳ ದಕ್ಷತೆಯನ್ನು ಹೆಚ್ಚಿಿಸುವ ಮೂಲಕ ಆ ವರ್ಗದ ಮೇಲಾಗುವ ದೌರ್ಜನ್ಯವನ್ನು ಅಕ್ಷರಶಃ ಕಡಿಮೆ ಮಾಡುವ ಸಾಹಸಕ್ಕೆೆ ಇಳಿಯುವುದಿಲ್ಲ.

ಈ ತಾರತಮ್ಯ ಕಣ್ಣಿಿಗೆ ಎರಚುತ್ತಿಿರುವಾಗ ನ್ಯಾಾಯಾಲಯದವೂ ಸರಕಾರದ ಈ ಕ್ರಮವನ್ನು ಸಮರ್ಥಿಸಿಕೊಳ್ಳುವುದಾದರೆ ನಾವು ಇನ್ನು ಯಾರ ಮೊರೆ ಹೋಗಬೇಕು? ಒಬ್ಬ ದುರ್ಬಲ ವರ್ಗದವ ಕಾನೂನನ್ನು ದುರುಪಯೋಗ ಮಾಡಿಕೊಂಡಿರಬಹುದಾದುದನ್ನು ಸಾರ್ವತ್ರಿಿಕಗೊಳಿಸಲಾಗದು ಎಂದು ಹೇಳುವ ನ್ಯಾಾಯಾಲಯ, ಅನುಷ್ಠಾಾನದ ಅದಕ್ಷತೆಯನ್ನು ಗಮನಿಸಿದೆ ಎಂದಾಯ್ತಲ್ಲವೇ. ಆದರೆ, ಆಡಳಿತದ ದಕ್ಷತೆಯನ್ನು ಹೆಚ್ಚಿಿಸಲು ಸೂಚನೆ ನೀಡಲಿಲ್ಲ ಅಥವಾ ಅದರ ಕೊರತೆ ಇದೆ ಎಂದೂ ಅಭಿಪ್ರಾಾಯಪಟ್ಟಿಿಲ್ಲ.

ಮೀಸಲು ಕುರಿತಾಗಿ ಒಂದು ವಿಸ್ತೃತವಾದ ಚರ್ಚೆ ಹಾಗೂ ತೀರ್ಪು ಪ್ರಪ್ರಥಮ ಬಾರಿಗೆ ಸರ್ವೋಚ್ಚ ನ್ಯಾಾಯಾಲಯದಿಂದ ಬಂದುದು ನ.11, 1972ರಲ್ಲಿ. ಆ ತೀರ್ಪಿನಲ್ಲಿ ಸದ್ಯದ ಪರಿಸ್ಥಿಿತಿಯಲ್ಲಿ ಜಾತಿ ಆಧರಿತ ಮೀಸಲು ಅಗತ್ಯವಿದೆ ಎಂದಿರುವುದನ್ನು ಗಮನಿಸಿದ ಖ್ಯಾಾತ ಪತ್ರಕರ್ತ, ಅಂಕಣಕಾರ ಅರುಣ್ ಶೌರಿಯವರ ಉದ್ಗಾಾರ ಹೀಗಿದೆ. ‘ಭಾರತದಲ್ಲಿ ಇನ್ನು ಒಂದು ಸಾವಿರ ವರ್ಷ ಕಳೆದರೂ ಜಾತಿಯನ್ನು ಅಳಿಸಿ ತೆಗೆಯಲು ಸಾಧ್ಯವಿಲ್ಲ’. ಈಗ ಈ ಉದ್ಗಾಾರಕ್ಕೆೆ ‘ಅನುಷ್ಠಾಾನ ಪ್ರಾಾಧಿಕಾರಗಳ ದಕ್ಷತೆ ಅರ್ಥಾತ್ ಸರಕಾರದ ಕಾರ್ಯದಕ್ಷತೆಯನ್ನು ಹೆಚ್ಚಿಿಸದೆ ಕೇವಲ ಕಾನೂನನ್ನು ಕಠಿಣಗೊಳಿಸುವುದರಿಂದ ಇನ್ನು ಒಂದು ಸಾವಿರ ವರ್ಷವಾದರೂ ದುರ್ಬಲ ವರ್ಗಕ್ಕಾಾಗುವ ದೌರ್ಜನ್ಯ ತಡೆಯಲು ಸಾಧ್ಯವಾಗಲಾರದು’ ಎಂಬುದನ್ನು ಸೇರಿಸಬೇಕೇನೋ.