Sunday, 13th October 2024

ಗ್ಲ್ಯಾಸ್ಗೋ ಸಮ್ಮೇಳನ ಮನುಕುಲಕ್ಕೆ ನಿರ್ಣಾಯಕ

ಸಕಾಲಿಕ

ಜೋನಾಥನ್ ಝಡ್ಕಾ

ನಿಜ, ಪರಿಸರದ ದೃಷ್ಟಿಯಿಂದ ಸವಾಲು ಅಗಾಧವಾಗಿದೆ. ಹಾಗೆಂದು ಅಧೀರರಾಗಬೇಕಿಲ್ಲ. ಒಮ್ಮತದಿಂದ ಹೊರಟರೆ ಖಂಡಿತಾ ವಿಕೋಪ ಗಳನ್ನು ನಾವು ಸಮರ್ಥವಾಗಿ ಹಿಮ್ಮೆಟ್ಟಿಸಬಹುದು. ಅಂಥ ವಿಶ್ವಾಸವಿದೆ. ಮಾನವೇತಿಹಾಸದಲ್ಲಿ ಮೊದಲ ಬಾರಿಗೆ ನಾನಾ ರಾಷ್ಟ್ರಗಳ ಸರ್ಕಾರಗಳು, ಖಾಸಗಿವಲಯ, ನಾಗರಿಕ ಸಮಾಜ, ಮಾಧ್ಯಮಗಳು, ಶೈಕ್ಷಣಿಕ ಮತ್ತು ಧಾರ್ಮಿಕ ನಾಯಕರು ಸೇರಿದಂತೆ ಎಲ್ಲ ಪ್ರಮುಖ ಜಾಗತಿಕ ನಿರ್ಣಾಯಕರನ್ನು ಸಜ್ಜುಗೊಳಿಸಿ, ಸಂಘಟಿಸುವ ಪ್ರಯತ್ನದ ಅಗತ್ಯವಿದೆ.

ಪ್ರಸ್ತುತ ತಲೆಮಾರಿನ ಭವಿಷ್ಯ ಬರೆಯುವ ಅತ್ಯಂತ ನಿರ್ಣಾಯಕ ಸಮ್ಮೇಳನಗಳ ವೊಂದರ ಹಿನ್ನಲೆಯಲ್ಲಿ ಒಂದೆರಡು ದಿನ ಗಳಲ್ಲೇ ವಿಶ್ವ ನಾಯಕರು ಗ್ಲ್ಯಾಸ್ಗೋದಲ್ಲಿ ಸಮಾವೇಶಗೊಳ್ಳಲಿದ್ದಾರೆ. ಅತ್ಯಂತ ಸಂಕೀರ್ಣ ಸನ್ನಿವೇಶದಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಹವಾಮಾನ ಬದಲಾವಣೆಯ ಅತ್ಯಂತ ಭೀಕರ ಪರಿಣಾಮಗಳು, ಮತ್ತದನ್ನು ತಡೆಯುವ ಬಗೆ, ಆ ನಿಟ್ಟಿನಲ್ಲಿರುವ ಸವಾಲುಗಳು, ಗುರಿ ಮತ್ತು ಮಾರ್ಗಗಳ ಕುರಿತು ಬಹುತೇಕ ಪ್ರಮುಖ ದೇಶಗಳ ನಾಯಕರು ಸರ್ವಸಮ್ಮತಕ್ಕೆ ಬರುವ ನಿರೀಕ್ಷೆ ಇದ್ದು ಮಹತ್ವದ ಜಂಟಿ ಒಪ್ಪಂದವೊಂದಕ್ಕೆ ಸಹಿ ಹಾಕಲಿದ್ದಾರೆ.

ಹೌದು, ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಗಾಗಿನ ಜಾಗತಿಕ ಸಮ್ಮೇಳನ (COP 26) ನಿರ್ಣಾಯಕ ಹಂತದಲ್ಲಿದೆ. 2050ರ ವೇಳೆಗೆ ಜಗತ್ತಿನ ಎಲ್ಲ ದೇಶಗಳೂ ‘ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ’ಯ ಗುರಿಯನ್ನು ತಲುಪುವ ನಿರ್ಣಯ ಅಂಗೀ ಕರಿಸಿ, ಯಶ ಕಾಣಲು ಸಾಧ್ಯವಾಗುವುದಾದರೆ ಮಾತ್ರ ಬಿಸಿಯೇರುತ್ತಿರುವ ಭೂತಾಪಮಾನಕ್ಕೆ ಕಡಿವಾಣ ಹಾಕಿ, 1.5 ಡಿಗ್ರಿ ಸೆಲ್ಸಿಯಸ್ ತಾಪಮಾನದ ಗರಿಷ್ಠ ಮಿತಿ ದಾಟಿ ಆಗಬಹುದಾದ ಅನಾಹುತದಿಂದ ಬಚಾವಾಗಬಹುದು.

ಹಾಗಾದಲ್ಲಿ ಮಾತ್ರವೇ ಹವಾಮಾನ ಬಿಕ್ಕಟ್ಟಿನ ಅತ್ಯಂತ ಗಂಭೀರ ಪರಿಣಾಮಗಳಿಂದ ನಾವು ಉಳಿಯುವುದು ಖಚಿತ. ಸಮ್ಮೇಳನ ದಲ್ಲಿ ಇಂಥ ಒಂದು ಒಪ್ಪಂದಕ್ಕೆ ಎಲ್ಲರೂ ಬದ್ಧರಾಗದಿದ್ದಲ್ಲಿ ಭೂಮಿಯ ಭವಿಷ್ಯ ಕರಾಳವಾಗಲಿದೆಯಷ್ಟೇ ಅಲ್ಲ, ಹಲ ಬಗೆಯ ನೈಸರ್ಗಿಕ ವಿಕೋಪಗಳ ಸುಳಿಗೆ ನಾವು ಅನಿವಾರ್ಯವಾಗಿ ಸಿಲುಕುವುದರಲ್ಲಿ ಅನುಮಾನವಿಲ್ಲ.

ನಿಜ, ಪರಿಸರದ ದೃಷ್ಟಿಯಿಂದ ಸವಾಲು ಅಗಾಧವಾಗಿದೆ. ಹಾಗೆಂದು ಅಧೀರರಾಗಬೇಕಿಲ್ಲ. ಒಮ್ಮತದಿಂದ ಹೊರಟರೆ ಖಂಡಿತಾ ವಿಕೋಪ ಗಳನ್ನು ನಾವು ಸಮರ್ಥವಾಗಿ ಹಿಮ್ಮೆಟ್ಟಿಸಬಹುದು. ಅಂಥ ವಿಶ್ವಾಸವಿದೆ. ಮಾನವೇತಿಹಾಸದಲ್ಲಿ ಮೊದಲ ಬಾರಿಗೆ ನಾನಾ ರಾಷ್ಟ್ರಗಳ ಸರ್ಕಾರಗಳು, ಖಾಸಗಿವಲಯ, ನಾಗರಿಕಸಮಾಜ, ಮಾಧ್ಯಮಗಳು, ಶೈಕ್ಷಣಿಕ ಮತ್ತು ಧಾರ್ಮಿಕ ನಾಯಕರು ಸೇರಿದಂತೆ ಎಲ್ಲ ಪ್ರಮುಖ ಜಾಗತಿಕ ನಿರ್ಣಾಯಕರನ್ನು ಸಜ್ಜುಗೊಳಿಸಿ, ಸಂಘಟಿಸುವ ಪ್ರಯತ್ನದ ಅಗತ್ಯವಿದೆ.

ಮೊದಲ ಬಾರಿಗೆ, ಮಾನವ ಕುಲ ಹಿಂದೆಂದಿಗಿಂತ ಹೆಚ್ಚು ಬೆದರಿಕೆಯ ಕರೆಗಂಟೆಯನ್ನು ಕೇಳುತ್ತಿದೆ. ಹೀಗೆಯೇ ಮುಂದುವರಿ ದಲ್ಲಿ, ಅದು ತಲೆತಲೆಮಾರುಗಳವರೆಗಿನ ದೂರ ಗಾಮಿ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಈ ಹಿನ್ನೆಲೆಯಲ್ಲಿ ಗ್ಲ್ಯಾಸ್ಗೋ ಹವಾಮಾನ ಸಮ್ಮೇಳನ ಮಹತ್ವಪೂರ್ಣ ಹೆಜ್ಜೆ ಮಾತ್ರವಲ್ಲ, ಅದನ್ನು ಯಶಸ್ವಿ ಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಾವು ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಪಂಚದ ಎಲ್ಲ ರಾಷ್ಟ್ರಗಳ ಪ್ರತೀ ನಾಗರಿಕನೂ ಹವಾಮಾನ ಸ್ಥಿರತೆ, ರಕ್ಷಣೆ ಮತ್ತು ಸಮೃದ್ಧಿಯ ವಿಷಯದಲ್ಲಿ ಕರ್ತವ್ಯ ಬಾಧ್ಯತೆಯನ್ನು ಹೊಂದಿದ್ದು, ಇದಕ್ಕಾಗಿ ನಮ್ಮನ್ನು ನಾವು ಸಜ್ಜುಗೊಳಿಸಿ ಕೊಳ್ಳಬೇಕಿದೆ.

ಪ್ರಸ್ತುತ ಆಧುನಿಕ ನಗರೀಕರಣ, ಕೈಗಾರಿಕೀಕರಣದ ಸನ್ನಿವೇಶದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಮತ್ತು ಹವಾಮಾನ ಬಿಕ್ಕಟ್ಟಿನ ಪರಿಣಾಮಗಳ ಬಗೆಗಿನ ಸ್ಥಿತಿ ಸ್ಥಾಪಕತ್ವ ಹಾಗೂ ಹೊಂದಾಣಿಕೆ ಏರ್ಪಡಿಸಲು ಬಹುದೊಡ್ಡ ಮಟ್ಟದ ಪ್ರಯತ್ನ ಗಳಾಗಬೇಕಿದೆ. ಜತೆಗೆ ಅತ್ಯಂತ ಸುಲಭ ಹಾಗೂ ಅಗ್ಗದ ಪ್ರಾಯೋಗಿಕ ಕ್ರಮಗಳನ್ನು ತ್ವರಿತಗತಿಯಲ್ಲಿ ಕಾರ್ಯಗತ ಗೊಳಿಸಬೇಕಿದೆ. ಈ ಎಲ್ಲ ದೃಷ್ಟಿಕೋನಗಳಿಂದ ನೋಡಿದಲ್ಲಿ, ಇಸ್ರೇಲ್ ಜಗತ್ತಿನ ಎಲ್ಲ ರಾಷ್ಟ್ರಗಳ ಗಮನಸೆಳೆಯುತ್ತದೆ.

ಹವಾಮಾನ ಆವಿಷ್ಕಾರದಲ್ಲಿ ಇಸ್ರೇಲ್ ಗಮನಾರ್ಹ ದೇಶವೆಂಬುದರಲ್ಲಿ ಎರಡಿಲ್ಲ. ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೈವಿಧ್ಯ ಮಯ ಕಂಪನಿಗಳು ಮತ್ತು ಸ್ಟಾರ್ಟ್-ಅಪ್ ಗಳು ಯಥೇಚ್ಛವಾಗಿ ಇಸ್ರೇಲ್‌ನಲ್ಲಿವೆ. ದರಲ್ಲಿ ಹೇರಳ ಪ್ರಮುಖ ಹೂಡಿಕೆಯನ್ನು ಇಸ್ರೇಲ್ ಆಕರ್ಷಿಸಿದೆ. ಈ ಕ್ಷೇತ್ರಗಳಲ್ಲಿ ೧,೨೦೦ಕ್ಕೂ ಹೆಚ್ಚು ಕಂಪನಿಗಳು ಮತ್ತು ಸ್ಟಾರ್ಟ್-ಅಪ್‌ಗಳನ್ನು ಒಳಗೊಂಡಿರುವ ಅಸಾಧಾರಣ ಪಡೆ ಕಾರ್ಯನಿರತವಾಗಿದೆ. ಎಲ್ಲವೂ ಆಧುನಿಕ ಹವಾಮಾನ ಸಂದರ್ಭ, ಪರಿಸರ ವ್ಯವಸ್ಥೆಯ ಮೇಲೆಯೇ ಕೆಲಸ ಮಾಡುತ್ತಿವೆ.

ಅಷ್ಟೇ ಅಲ್ಲ, ಇಸ್ರೇಲ್ ನ ಮೊದಲ ಸ್ಟೇಟ್ ಆಫ್ ಕ್ಲೈಮೇಟಿಕ್ 2021 ವರದಿಯ ಪ್ರಕಾರ ಈ ಸಂಖ್ಯೆ ದಿನದಿಂದ ದಿನಕ್ಕೆ ನಿರಂತರ
ಬೆಳೆಯುತ್ತಲೇ ಇದೆ. ಕಳೆದ ವರ್ಷ ಇಸ್ರೇಲ್‌ನಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಹೈಟೆಕ್ ಕಂಪನಿಗಳ ಪೈಕಿ ಸುಮಾರು ಶೇ.೧೦ರಷ್ಟು ಹವಾಮಾನ ಮತ್ತು ಪರಿಸರ ಕ್ಷೇತ್ರದ ಹಿನ್ನೆಲೆಯವು ಎಂಬುದು ಗಮನಾರ್ಹ. ಪರಿಸರಕ್ಕೆ ಸಂಬಂಽಸಿದಂತೆ ಇಸ್ರೇಲ್ ನೀಡುವ
ಪರಿಹಾರಗಳ ವ್ಯಾಪ್ತಿ ವೈವಿಧ್ಯಮಯ. ಕೃಷಿ, ನೀರಾವರಿ ವಿಷಯದಲ್ಲಿ ಇಸ್ರೇಲ್‌ನ ನಿಖರ ಸಾಧನೆ ಜಗದ್ವಿಖ್ಯಾತ.

ನಗರ ನೀರು ಪೂರೈಕೆ, ಜಲ ಸಂರಕ್ಷಣೆ, ಸೋರಿಕೆ ತಡೆಗೆ ಇರುವ ಕಠಿಣ ಕ್ರಮಗಳು ಇತ್ಯಾದಿ ಕ್ಷೇತ್ರದಲ್ಲಿ ಇಸ್ರೇಲ್ ಪರಿಶ್ರಮ ಮಾದರಿ ಯಾಗಿದೆ. ನಿಮಗೆ ಗೊತ್ತಿರಲಿ ಇಸ್ರೇಲ್ ತನ್ನ ಜಲಬಳಕೆಯ ಸಂದರ್ಭದಲ್ಲಿನ ನಷ್ಟ, ಸೋರಿಕೆಯ ಪ್ರಮಾಣವನ್ನು ತ್ಯಂತ ಕನಿಷ್ಠ ಅಂದರೆ ಶೇ.3ಕ್ಕೆ ತಂದು ನಿಲ್ಲಿಸಿದೆ. ಶೇ.90 ತ್ಯಾಜ್ಯ ನೀರಿನ ಮರುಬಳಕೆಯೊಂದಿಗೆ ವಿಶ್ವದಾಖಲೆಯನ್ನು ಬರೆದಿದೆ.

ವಾತಾವರಣದಲ್ಲಿನ ತೇವಾಂಶ ಸಂಗ್ರಹ, ಮಂಜುಗಡ್ಡೆಯಲ್ಲಿನ ಜಲಶಕ್ತಿ ಸಂಗ್ರಹ, ಇಂಧನ ದಕ್ಷತೆ, ಮರು ಅರಣ್ಯೀಕರಣ, ಸುಸ್ಥಿರ ಸಾರಿಗೆ, ಹೊಸ ತಂತ್ರಜ್ಞಾನದ ಅಭಿವೃದ್ಧಿಗಳಂಥ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಆಹರ ನಷ್ಟ ತಡೆ, ಈ-ಮುದ್ರಿತ ಸ್ಟೀಕ್‌ನಂತಹ ಪ್ರಾಣಿ ಪ್ರೋಟೀನ್‌ಗೆ ಪರ್ಯಾಯ ಬಳಕೆಯನ್ನೂ ಜಾರಿಗೊಳಿಸಲಾದೆ. ಇಂಥ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಉತ್ತೇಜಕ ಕ್ರಮಗಳಿಗೆ ಜಾಗತಿಕವಾಗಿ ಇಸ್ರೇನ್ ಮುನ್ನಡಿ ಇಟ್ಟಿದೆ. ಇಸ್ರೇಲ್ ತನ್ನ ಈ ಎಲ್ಲ ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಈ ಪರಿಹಾರಗಳನ್ನು ಕಾರ್ಯಗತ ಗೊಳಿಸುವ ನಿಟ್ಟಿನಲ್ಲಿ ಜಗತ್ತಿನ ಯಾವುದೇ ದೇಶದೊಂದಿಗೆ ಸಹಕರಿಸಲು ಬಯಸುತ್ತದೆ.

ಮಾಲಿನ್ಯ ತಗ್ಗಿಸುವಿಕೆಯ ಗುರಿಯೊಂದಿಗೆ ಈಗಾಗಲೇ ಸಂತ್ರಸ್ತ ದೇಶಗಳು ಮತ್ತು ಸಮುದಾಯಗಳಲ್ಲಿ ಜತೆ ಜಂಟಿ ಸಹಕಾರಕ್ಕೆ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ (ಖಈಎo) ಅನುಷ್ಠಾನಕ್ಕೆ ನೆರವೀಯಲು ಇಸ್ರೇಲ್ ಬದ್ಧ. ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರದ ಜತೆಗೆ ಆರ್ಥಿಕ ಸಬಲತೆ, ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಇಸ್ರೇಲ್ ಬಾಗಿಲು ಸದಾ ತೆರೆದಿದೆ. ಪ್ರಕೃತಿ, ಹವಾಮಾನ ಮತ್ತು ಭೂ ಗ್ರಹದ ಪರಿಸರ ವೈವಿಧ್ಯ ರಕ್ಷಣೆ ಇಡೀ ಮಾನವ ಜನಾಂಗದ ಏಳಿಗೆ ಮತ್ತು ಪ್ರವರ್ಧಮಾನದ ದೃಷ್ಟಿ ಯಿಂದ ತುರ್ತು ಅಗತ್ಯ. ಇದಕ್ಕೆ ಕಠಿಬದ್ಧರಾಗಲು ಈಗಿನದು ಒಂದು ಅದ್ಭುತ ಅವಕಾಶ. ನಾವೆಲ್ಲ ಒಟ್ಟಿಗೆ ಕೆಲಸ ಮಾಡೋಣ!

ಗ್ಲ್ಯಾಸ್ಗೋದಲ್ಲಿನ ಹವಾಮಾನ ಸಮ್ಮೇಳನವು ಮುಂದಿನ ಒಂದಿಡೀ ತಲೆಮಾರನ್ನು ಧನಾತ್ಮಕವಾಗಿ ತಿರುಗಲು ಪ್ರೇರೇಪಿಸು ವಂಥದ್ದು ಎಂಬುದು ನಮ್ಮ ಪ್ರಾಮಾಣಿಕ ಭಾವನೆ ಮತ್ತು ನಿಲುವು. ಅದನ್ನು ಯಶಸ್ವಿಗೊಳಿಸುವುದು ನಮ್ಮ ಕೈಯಲ್ಲಿದೆ.

(ಲೇಖಕರು ದಕ್ಷಿಣ ಭಾರತಕ್ಕೆ ಇಸ್ರೇಲ್‌ನ ಕಾನ್ಸುಲ್ ಜನರಲ್)