ಪರಿಶ್ರಮ
parishramamd@gmail.com
ಯಾರನ್ನು ಕೂಡ ಕಡೆಗಣಿಸಿ ಮಾತನಾಡಬಾರದು ಯಾರು ಕೂಡ ಕಮ್ಮಿ ಅಲ್ಲ ಅವರಲ್ಲೂ ಒಂದು ವಿಶೇಷವಾದ ಶಕ್ತಿ ಇರುತ್ತದೆ. ಅದನ್ನ ಹೆಕ್ಕಿತೆಗೆದು ಅವರಿಗೆ ತನ್ನ ಶಕ್ತಿಯನ್ನ ತೋರಿಸುವವನೆ ನಿಜವಾದ ಗುರು. ಗುರು ಎಂದರೆ ನಮಗೆಲ್ಲ ಗೊತ್ತಿರೋ ಹಾಗೆಯೇ ಕತ್ತಲಿನಿಂದ eನವೆಂಬ ಬೆಳಕಿನ ಕಡೆ ಕರೆದಕೊಂಡು ಹೋಗುವವನೇ ನಿಜವಾದ ಗುರು.
ಒಂದು ದಿನ ಒಂದು ಶಾಲೆಯೇ ಮೇಲೆ ಬರೆದಿದ್ದ ಗೋಡೆ ಬರಹವನ್ನು ನನ್ನ ಸ್ನೇಹಿತ ರೊಬ್ಬರು ಕಳುಹಿಸಿಕೊಟ್ಟರು, ಅದರಲ್ಲಿ ನೀವು ಜನ್ಮಕೊಟ್ಟ ಮಕ್ಕಳು ನಿಮಗೆ ಅನ್ನ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ನೀವು ಇಂದು ವಿದ್ಯೆ ಹೇಳಿಕೊಡುವ ಮಕ್ಕಳಿಂದ ನೀವು ನಾಳೆ ಅನ್ನತಿನ್ನಬಹುದು. ಅಂತ ಬರೆಯಲಾಗಿತ್ತು.
ಅಬ್ಬಾ! ಒಮ್ಮೆ ಶಿಕ್ಷಕನಾದ ನನಗೂ ಆ ಮಾತು ಮನಸನ್ನು ಹಾದು ಹೋಯಿತು, ಆ ಮಾತು ಯಾವಾಗಲೂ ಗುಯ್ಂ ಗುಡು ತ್ತಿತ್ತು. ಆಗ ನನಗನಸಿದ್ದು, ಶಿಕ್ಷಕನಾಗಿ ನಾವು ಮೊದಲು ಮಾಡಬೇಕಾದ ಕೆಲಸ ಒಂದೇ ‘ಎಲ್ಲ ಮಕ್ಕಳು ಮುಂದೊಂದು ದಿನ ದೊಡ್ಡ ಸಾಧಕ ರಾಗುತ್ತಾರೆ’ ಎಂಬ ಆಶಯದಲ್ಲೇ ಅವರಿಗೆ ಪಾಠ ಮಾಡಬೇಕು.
ಏನಾಗುತ್ತಾರೆ ಎಂಬುದನ್ನ ಸಮಯ, ಸಂಧರ್ಭ ಮತ್ತು ಅವರ ಮನಸ್ಥಿತಿ ನಿರ್ಧಾರ ಮಾಡುತ್ತದೆ. ಅದಕ್ಕೆ ಕಬೀರ ದಾಸರು ಒಂದು ಕಡೆ ಹೇಳುತ್ತಾರೆ ‘ದೇವರು ಮತ್ತು ಗುರು ಇಬ್ಬರು ನಿನ್ನ ಎದುರು ಬಂದರೆ ಮೊದಲು ಯಾರ ಕಾಲಿಗೆ ಬೀಳುತ್ತೀರಿ, ಎಂದು ಆಗ ಕಬೀರದಾಸರು ನಾನು ಮೊದಲು ಗುರುವಿನ ಕಾಲಿಗೆ ಬೀಳುತ್ತೇನೆ, ಯಾಕೆಂದರೆ ಗುರುವೆ ನನಗೆ ದೇವರ ಇರುವಿಕೆಯ ಬಗ್ಗೆ ತಿಳಿಸಿ ಕೊಟ್ಟವರು, ದೇವರಿಗೆ ಹತ್ತಿರವಾಗುವ ವಿದ್ಯೆಯನ್ನು ಕೊಟ್ಟವರು, ಹಾಗಾಗಿ ನಾನು ಗುರುವಿನ ಪಾದಕ್ಕೆ ಮೊದಲು ಎರಗುತ್ತೇನೆ’ ಎಂದು.
ಹೀಗೆ ಎಲ್ಲೇ ಹೋದರೂ ಗೌರವಕ್ಕೆ ಭಾಜನರಾಗೋ, ಪೂಜನೀಯ ಸ್ಥಾನದಲ್ಲಿದ್ದು ಮಕ್ಕಳಿಗೆ ಪಾಠ ಹೇಳುವ ಗುರುವಿನ ಕೆಲಸ ಮಾಡುವುದು ಬಹಳ ವಿಶೇಷ ಮತ್ತು ಅದು ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯವೆಂದೂ ಭಾವಿಸಬಹುದು. ಗುರುವಿನ ಬಗ್ಗೆ ಹೇಳುತ್ತಾ ಹೋದರೆ ನಮಗೆ ಬಹಳಷ್ಟು ಕಥೆಗಳು ಸಿಗುತ್ತವೆ. ಗುರುವನ್ನ ನಂಬಿ ಬದುಕಿದರೆ ಗುರುವಿನ ಮಾತನ್ನ ಪಾಲಿಸಿದರೆ ಏನಾಗುತ್ತದೆ ಎಂಬ ಒಂದು ನಿದರ್ಶನ ಹೇಳಬೇಕೆಂದರೆ ಒಮ್ಮೆ ಕೃಷ್ಣದೇವರಾಯನ ಸಾಮ್ರಾಜ್ಯದಲ್ಲಿ ತೀವ್ರ ಕಷ್ಟಗಳ
ಸರಮಾಲೆ ಶುರುವಾಗುತ್ತದೆ. ಆಗ ಅದನ್ನ ಜ್ಯೋತಿಷಿಗಳಿಂದ ಕೇಳಿ ತಿಳಿಯುವ ಕೃಷ್ಣದೇವರಾಯನಿಗೆ ಕೆಟ್ಟ ಘಳಿಗೆ ಅವನಿಗೆ ಮತ್ತು ಅವನ ಸಿಂಹಾಸನಕ್ಕೆ ಶುರುವಾಗುತ್ತದೆ ಎಂದು ತಿಳಿದು ಬರುತ್ತದೆ.
ಆಗ ಅಲ್ಲಿಗೆ ಒಬ್ಬರು ಗುರುಗಳ ಆಗಮನವಾಗುತ್ತದೆ. ಅಲ್ಲಿಗೆ ಬಂದ ಗುರುಗಳಿಗೆ ರಾಜ ತನ್ನ ಕಷ್ಟವನ್ನ ಹೇಳಿಕೊಳ್ಳುತ್ತಾನೆ, ಆಗ
ಆ ಗುರುವು ರಾಜನಿಗೆ ತನ್ನ ಸಿಂಹಾಸನವನ್ನ ಬಿಟ್ಟುಕೊಡು ಎಂದು ಹೇಳುತ್ತಾನೆ. ಮರುಯೋಚಿಸದೆ ರಾಜ ತನ್ನ ಸಿಂಹಾಸನವನ್ನ ಬಿಟ್ಟು ಎದ್ದು ಹೋಗುತ್ತಾನೆ ಅದೇ ಸಮಯಕ್ಕೆ ಗುರು ತನ್ನ ಹೆಗಲ ಮೇಲಿದ್ದ ಒಂದು ಬಿಳಿ ವಸ್ತವನ್ನ ತೆಗೆದು ಸಿಂಹಾಸನದ ಮೇಲೆ ಹಾಕುತ್ತಾನೆ.
ಅದೇ ಸಮಯಕ್ಕೆ ಸರಿಯಾಗಿ ಬರುವ ಆ ಕೆಟ್ಟ ಸಮಯ ರಾಜಸಿಂಹಾಸನದ ಮೇಲಿದ್ದ ವಸವನ್ನ ಮುಟ್ಟುತ್ತದೆ ಆಗ ಆ ವಸ್ತ್ರ ಸುಟ್ಟುಹೋಗುತ್ತದೆ ರಾಜನಿಗೆ ಮತ್ತು ಸಿಂಹಾಸನಕ್ಕೆ ಬಂದಿದ್ದ ಕೆಟ್ಟ ಸಮಯ ಕಳೆದುಹೋಗುತ್ತದೆ. ಹೀಗೆ ಗುರುವನ್ನ ನಂಬಿ ನಡೆಯುತ್ತಿದ್ದ ಕೃಷ್ಣದೇವರಾಯನನ್ನ ಇಂದು ಜನ ನೆನಪಿಸಿಕೊಳ್ಳುತ್ತಾರೆ. ನಂಬಿಕೆಟ್ಟವರಿಲ್ಲವೋ ಗುರುಗಳನ್ನು ಅನ್ನುತ್ತಾರಲ್ಲ ಹಾಗೆ ಗುರುವನ್ನ ಗಟ್ಟಿಯಾಗಿ ನಂಬಿ ಅವನು ನಿಮಗೆ ದಾರಿ ತೋರಿಸಿಯೇ ತೀರುತ್ತಾನೆ.
ಯಾವತ್ತೂ ಒಂದು ಮಾತನ್ನ ನೆನಪಿಟ್ಟುಕೊಳ್ಳಬೇಕು ಅದೇನೆಂದರೆ ನೀವು ಪಾಠ ಮಾಡುವ ಮಕ್ಕಳನ್ನ ನೀವು ದಡ್ಡರು, ದಡ್ಡರು ಎನ್ನುತ್ತಾ ಹೋದರೆ ಅವರು ಅದನ್ನ ಪ್ರೂವ್ ಮಾಡಿ ತೋರಿಸುತ್ತಾರೆ. ಅಂತ ಒಬ್ಬ ಮಹಾನುಬಾವರು ಒಂದು ಕಡೆ ಹೇಳುತ್ತಾರೆ ಅದಕ್ಕೆ ಯಾರನ್ನು ಕೂಡ ಕಡೆಗಣಿಸಿ ಮಾತನಾಡಬಾರದು ಯಾರು ಕೂಡ ಕಮ್ಮಿ ಅಲ್ಲ ಅವರಲ್ಲೂ ಒಂದು ವಿಶೇಷವಾದ ಶಕ್ತಿ ಇರುತ್ತದೆ. ಅದನ್ನ ಹೆಕ್ಕಿತೆಗೆದು ಅವರಿಗೆ ತನ್ನ ಶಕ್ತಿಯನ್ನ ತೋರಿಸುವವನೆ ನಿಜವಾದ ಗುರು.
ಗುರು ಎಂದರೆ ನಮಗೆಲ್ಲ ಗೊತ್ತಿರೋ ಹಾಗೆಯೇ ಕತ್ತಲಿನಿಂದ ಜ್ಞಾನವೆಂಬ ಬೆಳಕಿನ ಕಡೆ ಕರೆದಕೊಂಡು ಹೋಗುವವನೇ
ನಿಜವಾದ ಗುರು. ಗುರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ಕೇಳಿ, ಒಮ್ಮೆ ಒಂದು ದೊಡ್ಡ ಹಳ್ಳಿಯಲ್ಲಿ ಆ ಊರಿನ ಸಾಹುಕಾರ ಶಾಲೆಯೊಂದನ್ನು ತೆರೆದಿದ್ದ ಆ ಶಾಲೆಯಲ್ಲಿ ಎಲ್ಲರಿಗು ಮುಕ್ತಾವದ ಪ್ರವೇಶವಿತ್ತು ಆ ಶಾಲೆಯ ಕೊಠಡಿಯನ್ನ ಅಲ್ಲಿ ಬರುವ ವಿದ್ಯಾರ್ಥಿಗಳ ಬುದ್ಧಿವಂತಿಕೆ ಅನುಗುಣವಾಗಿ ವಿಂಗಡಿಸಲಾಗಿತ್ತು.
ಅದರಲ್ಲಿ ಬುದ್ದಿವಂತರನ್ನ ಸೆಕ್ಷನ್ ಎ, ಸ್ವಲ್ಪ ಕಡಿಮೆ ಬುದ್ದಿವಂತರನ್ನ ಸೆಕ್ಷನ್ ಬಿ, ಹೀಗೆ ಅತೀ ದಡ್ಡರನ್ನ ಸೆಕ್ಷನ್ ಡಿಗೆ ಹಾಕಲಾ ಗಿತ್ತು. ಹೀಗೆ ಶಾಲೆ ನಡೆಯುತ್ತ ಇದ್ದ ಕಾಲ ಆ ಊರಿನ ಸಾಹುಕಾರನ ಮಗನಿಗೆ ಮದುವೆ ಮಾಡಲು ನಿರ್ಧರಿಸಲಾಯಿತು. ಬಹಳ ಹುಡುಕಿದ ಮೇಲೆ ವಿದೇಶದಲ್ಲಿ ಓದಿದ್ದ ಒಂದು ಹುಡಗಿಯನ್ನ ತಂದು ಅವನಿಗೆ ಮದುವೆ ಮಾಡಲಾಯಿತು. ಮೊದಲೆ ಓದಿದ್ದ ಹುಡುಗಿಯಾದ ಕಾರಣ ಅವಳಿಗೆ ಬಹಳ ದಿನ ಮನೆಯಲ್ಲಿ ಕೂರಲು ಆಗಲಿಲ್ಲ, ಅವಳು ತನ್ನ ಗಂಡನ ಬಳಿ ಬಂದು ನಾನು ನಮ್ಮ ಶಾಲೆಯಲ್ಲಿ ಪಾಠ ಮಾಡಬೇಕೆಂದು ಅಂದುಕೊಂಡಿದ್ದೇನೆ.
ನನಗೂ ಮನೆಯಲ್ಲಿ ಕೂತು ಬೇಜಾರಾಗಿದೆ ಎಂದು ಆಗ ಅವಳ ಜಾಣ್ಮೆಯನ್ನ ಪರೀಕ್ಷಿಸಬೇಕು ಎಂದು ನಿರ್ಧರಿಸಿದ ಅವಳ
ಗಂಡ ಮತ್ತು ಮಾವ ಅವಳನ್ನ ಅವರ ಶಾಲೆಯ 10ನೇ ತರಗತಿಯ ಡಿ ವಿಭಾಗದ ಶಿಕ್ಷಯಾಗಿ ನೇಮಿಸಿದರು. ಮೊದಲ ದಿನ ಪಾಠ ಮಾಡಲು ಹೋದ ಅವಳಿಗೆ ಆ ಮಕ್ಕಳು ಶತದಡ್ಡರು ಎಂಬುದು ಅರಿವಿಗೆ ಬಂತು, ಆಗ ಅವರನ್ನ ತಿದ್ದುವ ಕೆಲಸ ಹೇಗೆ ಎಂಬು ದನ್ನ ಯೋಚಿಸುತ್ತ ತಡರಾತ್ರಿ ಕಳೆದ, ಅವಳಿಗೆ ಮಧ್ಯರಾತ್ರಿ ಅವಳಿಗೆ ಒಂದು ಯೋಚನೆ ಹೊಳೆಯಿತು, ಅವಳು ರಾತ್ರಿಯೆಲ್ಲ ಕೂತು ಒಂದು ಪ್ರಶ್ನೆ ಪತ್ರಿಕೆಯನ್ನ ತಯಾರು ಮಾಡಿದಳು.
ಮಾರನೆ ದಿನ ತರಗತಿಗೆ ತೆರಳಿದ ಅವಳು ಮಕ್ಕಳಿಗೆ ಮಕ್ಕಳೆ ಇದು ನಾನು ಓದುವಾಗ ವಿದೇಶದಲ್ಲಿ ತಯಾರಾದ ಪ್ರಶ್ನೆ ಪತ್ರಿಕೆ ನಾನು ಈಗ ಇದನ್ನ ನಿಮಗೆ ಕೊಡುತ್ತೇನೆ. ನೀವು ಇದಕ್ಕೆ ಉತ್ತರ ಬರೆದುಕೊಡಬೇಕು ಆಮೇಲೆ ನೀವು ದಡ್ಡರೋ ಬುದ್ದಿವಂತರೋ ನಾನು ನಿರ್ಧರಿಸುತ್ತೇನೆ ಎಂದಳು, ಮಕ್ಕಳು ಬಹಳ ಖುಷಿಯಿಂದ ಅದನ್ನು ಒಪ್ಪಿಕೊಂಡರು ಕೊನೆಗೆ ಮಕ್ಕಳು ಬರೆದು ಉತ್ತರ
ಪತ್ರಿಕೆಯನ್ನ ಆಕೆ ತೆಗೆದುಕೊಂಡು ಹೋಗಿ ಅದನ್ನು ಓದಿಕೂಡ ನೋಡದೆ ಮಾರನೆದಿನ ತರಗತಿಗೆ ಬಂದು ಹೀಗೆ ಹೇಳುತ್ತಾಳೆ,
ನೀವೆಲ್ಲರು ಅದ್ಭುತವಾಗಿ ಉತ್ತರ ಮಾಡಿದ್ದೀರಿ ನಿಮಗೆಲ್ಲ ವಿದೇಶಿ ಪ್ರಶ್ನೆಪತ್ರಿಕೆಯನ್ನು ಉತ್ತರಿಸುವ ತಾಕತ್ತಿದೆ ಆದರು ನಿಮ್ಮನ್ನ ಯಾಕೆ ದಡ್ಡರೆಂದು ಕರೆಯುತ್ತಾರೆ. ಇದಕ್ಕೆ ನೀವು ಯಾಕೆ ಉತ್ತರಿಸುತ್ತಿಲ್ಲವೆಂದು, ಅವಳ ಈ ಮಾತು ಮಕ್ಕಳ ಸ್ವಾಭಿಮಾನವನ್ನ ಕೆರಳಿಸಿತು, ಮಕ್ಕಳೂ ಜಿದ್ದಿಗೆ ಬಿದ್ದರು ಆಕೆಕೊಟ್ಟ ಧೈರ್ಯ ಮತ್ತು ಉತ್ತೇಜನ ಆ ವರ್ಷ ಆ ಶಾಲೆಯ ರಿಸಲ್ಟ್ ೮೭ ಪ್ರತಿಶತಕ್ಕೆ ಜಿಗಿಯಿತು. ಮಾವ ಸೇರಿದಂತೆ ಅವಳ ಗಂಡ ಅವಳ ಚಾಣಾಕ್ಷ ನಡೆಗೆ ಬೆರಗಾದರು.
ಗುರು ಮನಸ್ಸು ಮಾಡಿದರೆ ಕಲ್ಲನ್ನು ಮೂರ್ತಿಯಾಗಿ ಪೂಜೆಗೆ ಸಲ್ಲುವಂತೆ ಮಾಡುತ್ತಾನೆ, ಎಂಬುದು ಮತ್ತೆ ಪ್ರೂವ್ ಆಗೋಯ್ತು. ನಂಬೋದಾದ್ರೆ ಕಣ್ಣುಮುಚ್ಚಿ ಗುರುವನ್ನ ನಂಬಿ ಅವನು ನಿಮ್ಮನ್ನ ಗುರಿ ತಲುಪಿಸುತ್ತಾನೆ.