Thursday, 12th December 2024

ಸರಕಾರಿ ನೇಮಕಾತಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿ

ಅಭಿಪ್ರಾಯ

ಆದರ್ಶ್ ಶೆಟ್ಟಿ, ಉಪ್ಪಿನಂಗಡಿ

ಕೋವಿಡ್ ಹಿನ್ನೆಲೆಯಲ್ಲಿ ಹಲವಾರು ಇಲಾಖೆಯ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಿಗೆ ಸರಕಾರದ ಆರ್ಥಿಕ ಇಲಾಖೆ ತಡೆಯಾಜ್ಞೆ ನೀಡಿತ್ತು. ಗೃಹ, ಗ್ರಾಮೀಣಾಭಿವೃದ್ಧಿ, ಕಂದಾಯ, ಶಿಕ್ಷಣ, ಉನ್ನತ ಶಿಕ್ಷಣ, ಪೌರಾಡಳಿತ, ನಗರಾಭಿವೃದ್ಧಿ, ಪಶು ಸಂಗೋಪನೆ, ಸಹಕಾರ, ಗಣಿ ಮತ್ತು ಭೂವಿಜ್ಞಾನ, ಇಂಧನ, ಪ್ರವಾಸೋದ್ಯಮ, ವಸತಿ, ಸಮಾಜಕಲ್ಯಾಣ, ಸಾರಿಗೆ,ಆರೋಗ್ಯ ಸೇರಿದಂತೆ ಹಲವಾರು ಇಲಾಖೆಗಳ ಸಾವಿರಾರು ಹುದ್ದೆಗಳ ಪೈಕಿ ಗೃಹ ಇಲಾಖೆಯ ಕಾನ್ಸ್‌ಟೇಬಲ್, ಪಿಎಸ್‌ಐ ಹುದ್ದೆಗಳಿಗೆ ಪ್ರಸ್ತುತ ನೇಮಕಾತಿ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ಆದರೂ ತಕ್ಕಮಟ್ಟಿಗೆ ನಡೆಯುತ್ತಿದೆ.

ಉಳಿದ ಇಲಾಖೆಗಳ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೂಲಕ, ತಾತ್ಕಾಲಿಕ ನೆಲೆಯಲ್ಲಿ ಆಂತರಿಕವಾಗಿ ತುಂಬಿಸಿಕೊಂಡು ಕರೋನಾ ಆರ್ಥಿಕ ತೆಯ ನೆಪವೊಡ್ಡಿ ಸರಕಾರ ನೇಮಕಾತಿ ಪ್ರಕ್ರಿಯೆಗಳಿಂದ ನುಣುಚಿ ಕೊಳ್ಳುತ್ತಿದೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವ ಬೆನ್ನಿಗೆ ಮೀಸಲಾತಿ ಮತ್ತು ತಾಂತ್ರಿಕ ಕಾರಣಗಳನ್ನು ನೀಡಿ ತಡೆಯಾಜ್ಞೆ ನೀಡಲಾಗಿದೆ.

ಯಾವುದಾದ ರೊಂದು ಇಲಾಖೆಯ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಿದರೂ ಲಿಖಿತ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಎಲ್ಲಾ ಸೇರಿ ಒಂದರಿಂದ ಒಂದೂವರೆ ವರ್ಷಗಳು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಹಿಡಿಯುತ್ತದೆ. ಇಲ್ಲಿ ವರ್ಷಗಳು ಉರುಳಿದಂತೆ ಪದವಿ, ಉನ್ನತ ಶಿಕ್ಷಣ ಪಡೆದು ಅಭ್ಯರ್ಥಿಗಳು ಲಕ್ಷಗಟ್ಟಲೆ ಪ್ರಮಾಣದಲ್ಲಿ ಹೊರಬರುತ್ತಿದ್ದು, ಜತೆಗೆ ನೇಮಕಾತಿ ಪ್ರಕ್ರಿಯೆಯ ಮೀನಾಮೇಷ, ವಿಳಂಬದಿಂದ ಅಭ್ಯರ್ಥಿಗಳು ವಯಸ್ಸು ಮೀರಿ ಹುದ್ದೆಗಳಿಗೆ ನೇಮಕಗೊಳ್ಳುವ ಅವಕಾಶವನ್ನೇ ಕಳೆದು ಕೊಳ್ಳುತ್ತಾರೆ.

ಜತೆಗೆ ಅವ್ಯವಹಾರ, ಲಂಚ, ಸ್ವಜನಪಕ್ಷಪಾತ, ಅಕ್ರಮಗಳು ಕಂಡು ಬಂದಲ್ಲಿ ಯಾರಾದರೊಬ್ಬ ಅಭ್ಯರ್ಥಿ ಕೋರ್ಟ್ ಮೊರೆ ಹೋದರೆ ನೇಮಕಾತಿ ಪ್ರಕ್ರಿಯೆಯು ರದ್ದುಗೊಂಡು ಅರ್ಜಿ ಶುಲ್ಕವನ್ನು ಅಭ್ಯರ್ಥಿ ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಸರಕಾರಿ ಹುzಗಳ ನೇಮಕಾತಿಗಳಲ್ಲೂ ಆಯಾಯ
ಜಿ, ಸ್ಥಳೀಯ ಪ್ರಾತಿನಿಧ್ಯ, ಪ್ರಾದೇಶಿಕ ಪ್ರಾತಿನಿಧ್ಯವನ್ನು ನೀಡುವ ಮೂಲಕ ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ದೊರಕುವಂತಾಗಬೇಕು. ಉದಾಹರಣೆಗೆ ಸಾರಿಗೆ ಇಲಾಖೆಯ ಕೆಲ ನಿರ್ವಾಹಕರಿಗೆ ಕೆಲವು ಊರಿನ ಭಾಷೆಗಳು ತಿಳಿಯದೆ, ಊರಿನ ನಿಲ್ದಾಣಗಳು ತಿಳಿಯದೆ ಪ್ರಯಾಣಿಕ ರೊಂದಿಗೆ ಅನುಚಿತವಾಗಿ ವರ್ತಿಸುವ ಹೊರಜಿಗಳ ಬಸ್ ನಿರ್ವಾಹಕ ಡ್ರೈವರುಗಳನ್ನು ಕಾಣಬಹುದು. ಇನ್ನುಳಿದಂತೆ ತಮ್ಮ ತಮ್ಮ ಊರಿನ ರಾಷ್ಟ್ರೀಕೃತ ಬ್ಯಾಂಕುಗಳ ಮ್ಯಾನೇಜರ್‌ಗಳಿಂದ ಹಿಡಿದು ಗುಮಾಸ್ತರವರೆಗೆ ಉತ್ತರಭಾರತ, ಕೇರಳ, ತಮಿಳುನಾಡು ಮೂಲದ ಸಿಬ್ಬಂದಿಗಳೇ ತುಂಬಿಕೊಂಡು
ಬ್ಯಾಂಕ್ ವ್ಯವಹಾರದ ಸಂದರ್ಭ ಗ್ರಾಹಕರೊಂದಿಗೆ ಭಾಷಾ ಸಂವಹನ ಕೊರತೆ ಉಂಟಾದ ನಿದರ್ಶನಗಳಿವೆ.

ಇನ್ನು ಕೆಲ ಇಲಾಖೆಗಳಲ್ಲಿ ತಾತ್ಕಾಲಿಕ ನೆಲೆ, ಗುತ್ತಿಗೆ ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಾರು ಮಂದಿ ಹತ್ತಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಇಂತಹ ಸಿಬ್ಬಂದಿಗಳಿಗೆ ಸರಿಯಾದ ಕನಿಷ್ಠ ಜೀವನ ಭದ್ರತೆ ಒದಗಿಸದೆ ಹುzಯನ್ನು ಶಾಶ್ವತಗೊಳಿಸದೆ ಅರೆಕಾಸಿಗೆ ಗಾಣದ ಎತ್ತಿನಂತೆ ದುಡಿಸುವ ವ್ಯವಸ್ಥೆಗಳು ನೇಮಕಾತಿ ಸಂದರ್ಭ ತಾತ್ಕಾಲಿಕ ನೆಲೆ ಮತ್ತು ಗುತ್ತಿಗೆಯಾಧಾರದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಪ್ರಥಮ ಪ್ರಾಶಸ್ತ್ಯಯ ನೀಡು ವಂತಾಗ ಬೇಕು. ಈಗಾಗಲೇ ಸರಕಾರದಲ್ಲಿ ಸಾವಿರಾರು ಹುದ್ದೆಗಳು ಆರ್ಥಿಕತೆಯ ನೆಪವೊಡ್ಡಿ ಖಾಲಿ ಬಿದ್ದಿದ್ದು ಇವುಗಳಿಗೆ ತಕ್ಷಣ ನೇಮಕಾತಿ ಪ್ರಕ್ರಿಯೆ ನಡೆಸುವ ಅವಶ್ಯಕತೆ ಇದೆ.