ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಬಹುತೇಕ ರಾಷ್ಟ್ರಗಳು ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ವಿವಿಧ ಸಾರ್ವಜನಿಕ ಸೇವಾಕ್ಷೇತ್ರ ಗಳಲ್ಲಿ ಬಳಸುತ್ತಿವೆ. ಅದು ಕೃಷಿ ಚಟುವಟಿಕೆಗಳಿರಬಹುದು, ರಸ್ತೆ ಅಭಿವೃದ್ಧಿ ಸೇರಿದಂತೆ ಭೂಮಿಯ ಥರ್ಮಲ್ ಸ್ಕ್ಯಾನಿಂಗ್ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದಿರಬಹುದು, ಅರಣ್ಯಪ್ರದೇಶಗಳಲ್ಲಿ ಸಸ್ಯ ಸಂಕುಲಗಳ ಸಾಂದ್ರತೆ ಮತ್ತು ಅದರ ಮೈಲಿಗಟ್ಟಲೆ ವ್ಯಾಪ್ತಿಯನ್ನು ಕ್ಷಣಮಾತ್ರದಲ್ಲಿ ಅಳೆಯುವುದಿರಬಹುದು.
ಮುಂಬರುವ ಪ್ರಾಕೃತಿಕ ಆಪತ್ತುಗಳನ್ನು ಊಹಿಸಿ, ಅದಕ್ಕೆ ಪೂರಕವಾಗಿ ಪರಿಹಾರೋಪಾಯಗಳನ್ನು ಕ್ರೋಡೀಕರಿಸಿ
ಮಾನವನಿಗೆ ನೀಡುವ ಮೂಲಕ ಹಲವು ಆಪತ್ತಿನ ಕಾಲದಲ್ಲಿ ಸಹಾಯಕನಂತೆ ನಿಲ್ಲಲೂಬಹುದು. ಕೃಷಿ ಕ್ಷೇತ್ರದಲ್ಲಿ ಸ್ವಯಂಚಾಲಿತ ಕೃಷಿಯಂತ್ರಗಳು ತೋಟಗಳನ್ನು ಆಳುತ್ತಿವೆ. ಇಸ್ರೇಲ್ ದೇಶವಂತೂ ಇದರಲ್ಲಿ ಅಪರಿಮಿತ ಸಾಧನೆ ಗೈದಿದೆ ಎನ್ನಬಹುದು. ಲಕ್ಷಾಂತರ ಎಕರೆ ಕೃಷಿಭೂಮಿಗೆ ಔಷಧಿ ಸಿಂಪರಣೆಯನ್ನು ದಿನಮಾತ್ರದಲ್ಲಿ ಮುಗಿಸುವಂಥ ಯಂತ್ರೋಪಕರಣಗಳು ಬಂದಿವೆ. ಇಂಥ ತಂತ್ರಜ್ಞಾನವನ್ನು ಜಪಾನ್, ಜರ್ಮನಿ, ಚೀನಾ ಸೇರಿದಂತೆ ಬಹುತೇಕ ರಾಷ್ಟ್ರಗಳು ತಮ್ಮ ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತಿವೆ.
ನಮ್ಮ ದೇಶದಲ್ಲೂ ಖಾಸಗಿ ಸಂಸ್ಥೆಗಳು ಹಲವು ತಂತ್ರಾಂಶಗಳ ಮೂಲಕ ವಿವಿಧ ರೀತಿಯ ಶೈಕ್ಷಣಿಕ ಕಾರ್ಯ ಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಯತ್ನಿಸುತ್ತಿವೆ ಎನ್ನಬಹುದು. ಆದರೆ, ನಿಜಕ್ಕೂ ಆಗಬೇಕಿರುವುದು ನಮ್ಮ ಪುರಾತನ ಮತ್ತು ಅತ್ಯಂತ ವ್ಯವಸ್ಥಿತವಾಗಿದ್ದ, ಕರಾರುವಾಕ್ಕು eನ ಸಂಪತ್ತುಗಳಾಗಿದ್ದ ಭಾರತೀಯ ಶೈಕ್ಷಣಿಕ ಪದ್ಧತಿಯನ್ನು ಪರಿಷ್ಕೃತಗೊಳಿಸುವುದು. ಇದನ್ನು ‘ಎಐ’ ಮೂಲಕ ದೇಶದ ಮೂಲೆಮೂಲೆಗೆ ತಲುಪಿಸು ವಂತಾಗಬೇಕು. ಹೀಗೆ ತಂತ್ರeನದ ಸದ್ಬಳಕೆಯ ಮಾರ್ಗವನ್ನು, ರೂಪಿಸಿದ ನಿಯಮಗಳನ್ನು, ಯೋಜನೆಗಳನ್ನು
ಶಿಕ್ಷಣದಲ್ಲಿ ಅಳವಡಿಸಿಕೊಂಡಾಗ ಶಿಕ್ಷಣ ಕ್ರಾಂತಿ ಆಗಲು ಸಾಧ್ಯ ಎಂಬುದನ್ನು ಸರಕಾರಗಳು ಅರಿಯಬೇಕಾಗಿದೆ.
ನಮ್ಮ ಪುರಾತನ ‘ವೇದಿಕ್ ಗಣಿತ’ವಿರಬಹುದು; ಹಾಗೇ, ಇಂದಿಗೂ ಸೂರ್ಯ ಮತ್ತು ಚಂದ್ರಗ್ರಹಣಗಳ ನಿಖರತೆ ಯನ್ನು ಅಳೆದು ಹೇಳುವಲ್ಲಿ ನಾಸಾ ಸೇರಿದಂತೆ ಬಹುತೇಕ ಬಾಹ್ಯಾಕಾಶ ಸಂಸ್ಥೆಗಳು ತಿಣುಕಾಡುತ್ತಿರುವಾಗ, ವರ್ಷಗಳಿಂದ ಹಿಡಿದು ಮುಂದಿನ ೫೦ ವರ್ಷಗಳವರೆಗಿನ ಪಂಚಾಂಗ-ಕ್ಯಾಲೆಂಡರುಗಳಲ್ಲಿ ಸಮಸ್ತ ಗ್ರಹಣಗಳ ಮಾಹಿತಿ ಸೇರಿದಂತೆ ಹಲವು ಆಗುಹೋಗುಗಳನ್ನು ವರ್ಷಗಳಿಗೂ ಮೊದಲೇ ಮುದ್ರಿಸಿರುತ್ತಾರೆ! ಇಂಥ ವಿಷಯ ಗಳನ್ನು ನಮ್ಮ ಮುಂದಿನ ಪೀಳಿಗೆಗೆ ‘ಎಐ’ ತಂತ್ರeನದ ಮೂಲಕ ವ್ಯವಸ್ಥಿತವಾಗಿ ತಲುಪಿಸುವ ಕೆಲಸಗಳಾಗಬೇಕು.
ಊಹೆಗೂ ಮೀರಿದ ವ್ಯಾಪ್ತಿಕ್ಷೇತ್ರ ಹೊಂದುತ್ತಿರುವ ‘ಎಐ’ ತಂತ್ರಜ್ಞಾನವು ಅಗಾಧ ಪರಿಮಿತಿಗಳನ್ನು, ಅವಕಾಶ ಗಳನ್ನು ಮಾನವನ ಮುಂದೆ ತೆರೆದಿಟ್ಟಿದೆ. ಅದೇನನ್ನೋ ಹುಡುಕಲು ಹೋಗಿ, ಮತ್ತೇನನ್ನೋ ಪಡೆದುಕೊಂಡರು ಎಂಬಂತೆ, ಈ ಜ್ಞಾನವು ಆಧುನಿಕ ವಿeನಕ್ಕೆ ಆವಿಷ್ಕಾರದ ಹಾದಿಯಲ್ಲಿ ದೊರೆತ ಆಕಸ್ಮಿಕ ಉಡುಗೊರೆ ಎನ್ನಬ ಹುದು. ‘ಎಐ’ ಎನ್ನುವುದು ತಂತ್ರeನದ ವಿಶಾಲ ಕ್ಷೇತ್ರವಾಗಿದ್ದು, ಮಾನವನ ಬುದ್ಧಿಮತ್ತೆಯನ್ನು ಅನುಕರಿಸುವ ಮೂಲಕ ಕಂಪ್ಯೂಟರ್ಗಳು ಸುಧಾರಿತ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಇಂಥ ಒಂದು ವಿನೂತನ ತಂತ್ರಜ್ಞಾನವನ್ನು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬಳಸಬಹುದೇ ಎಂಬುದನ್ನು ಗಮನಿಸ ಬೇಕಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ, ಎಲ್ಲ ಕ್ಷೇತ್ರದಲ್ಲೂ ‘ಎಐ’ ಬಂದಾಗ, ಮುಂದೆ ಶಾಲಾ ಪಾಠದಲ್ಲೂ ಬರಬಹುದು. ಆಗ, ದೈಹಿಕವಾಗಿ ವಿದ್ಯಾರ್ಥಿಗಳ ಮುಂದಿರುವ ಶಿಕ್ಷಕ, ಮಕ್ಕಳ ಹಾವಭಾವ ಗಳನ್ನು ಗಮನಿಸಿ, ಅವರ ಭಾವನೆಗಳನ್ನು ಅರ್ಥೈಸಿಕೊಂಡು, ಅವರು ಯಾವ ಮಟ್ಟಕ್ಕೆ ಕಲಿಕಾಸಾಮರ್ಥ್ಯವನ್ನು ಹೊಂದಿದ್ದಾರೆಂದು ಅರಿತು ಮುಂದಿನ ಪಾಠ ಇತ್ಯಾದಿ ಚಟುವಟಿಕೆಗಳಲ್ಲಿ ಮುಂದುವರಿಯಬಹುದು. ಇಂದಿನ ಶಿಕ್ಷಕ-ಶಿಕ್ಷಕಿಯರಂತೆ ಆಪ್ತತೆ ಯಿಂದ, ಪ್ರೀತಿಯಿಂದ ಮಾತಾಡಿಸುತ್ತ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಲಿಸುವಿಕೆಯಲ್ಲಿ ತೊಡಗುವುದರಿಂದ ಆಗುವಂಥ ಶಿಕ್ಷಣ, ಕಲಿಕೆಯ ಸಾಮರ್ಥ್ಯದಲ್ಲಿನ ಬೆಳವಣಿಗೆಯನ್ನು, ಎಲ್ಲಾ ದೂರದಿಂದ ನಿಯಂತ್ರಿಸುವ ‘ಎಐ’ ಆಧರಿತ ‘ಟೆಕ್ನೋ ಚರ್’ನಿಂದ ನಿರೀಕ್ಷಿಸಬಹುದೇ? ಎಂಬುದೇ ಒಂದು ಪ್ರಶ್ನೆಯಾಗಿದೆ.
ಮಕ್ಕಳಿಗೆ ಎಷ್ಟರಮಟ್ಟಿಗೆ ನಮ್ಮ ನಿತ್ಯ ಬದುಕಿನ ಸಂಸ್ಕಾರವನ್ನು, ನಯ-ವಿನಯ, ನಡತೆ ಇತ್ಯಾದಿ ಮೌಲಿಕ ವಿಚಾರಗಳನ್ನು ಹೇಳಿಕೊಡುವಲ್ಲಿ ಈ ತಂತ್ರಜ್ಞಾನವು ಯಶಸ್ವಿಯಾಗಬಹುದು ಎಂಬುದನ್ನುನಾವು ಆಳವಾಗಿ ಯೋಚಿಸಬೇಕಿದೆ. ಪಠ್ಯಸಂಬಂಧಿತ ಕಲಿಕೆಯಲ್ಲಿ ಯಶಸ್ವಿಯಾದರೆ, ನೀತಿಶಿಕ್ಷಣವನ್ನು ಯಶಸ್ವಿಯಾಗಿ ವಿದ್ಯಾರ್ಥಿ ಗಳಿಗೆ ಕಲಿಸುವವರು ಯಾರು? ಅವುಗಳನ್ನು ಸರಿಯಾಗಿ ಒರೆಗೆ ಹಚ್ಚಿ ತಿದ್ದಿತೀಡುವವರು ಯಾರು? ಈ ಕೆಲಸವನ್ನು ‘ಎಐ’ ಮಾಡಬಲ್ಲುದೇ ಎಂಬುದು ಆಲೋಚಿಸಬೇಕಾದ ವಿಷಯವಾಗಿದೆ. ಇದರೊಟ್ಟಿಗೆ, ಇದನ್ನು ಜಾರಿಗೆ ತಂದರೆ, ಈಗ ಶಿಕ್ಷಕ ಹುದ್ದೆಯಲ್ಲಿರುವ ಲಕ್ಷಾಂತರ ಮಂದಿಯ ಪಾಡೇನು ಎಂಬುದೂ ಆತಂಕದ ವಿಚಾರ. ಈಗಿರುವ ನಿರುದ್ಯೋಗದ ಸಮಸ್ಯೆಯೇ ಪೆಡಂಭೂತ ದಂತೆ ಕಾಡುತ್ತಿರುವಾಗ, ಇನ್ನು ‘ಎಐ’ ಟೆಕ್ನೋ ಟೀಚರ್ಸ್ ಬಂದರೆ, ಇಂದಿನ ಶಿಕ್ಷಕರ ಪಾಡೇನು ಎಂಬುದನ್ನು ಜವಾಬ್ದಾರಿ ಸ್ಥಾನದಲ್ಲಿರುವವರು ಗಂಭೀರವಾಗಿ ಯೋಚಿಸ ಬೇಕಾಗಿದೆ.
ಹಾಗಾಗಿಯೇ, ತಂತ್ರಜ್ಞಾನ ಕ್ಷೇತ್ರದ ಬಹುತೇಕ ದಿಗ್ಗಜರು ಈ ಒಂದು ತಂತ್ರಜ್ಞಾನದ ಕುರಿತು ಭಾರಿ ಆತಂಕ ವ್ಯಕ್ತ ಪಡಿಸಿದ್ದಾರೆ. ಸ್ಪೇಸ್-ಎಕ್ಸ್ ಸಂಸ್ಥೆಯ ಮಾಲೀಕ ಎಲಾನ್ ಮ ಅಂತೂ, ‘ಇದು ಮಾನವ ಕುಲಕ್ಕೆ ಮುಂದೊಂದು ದಿನ ಭಾರಿ ವಿಪತ್ತು ತರಬಲ್ಲದು. ಇದು, ನಾವಂದುಕೊಂಡದ್ದಕ್ಕಿಂತ ಸಾವಿರ ಪಟ್ಟು ಬೇರೆಯದೇ ಆಯಾಮ ಹೊಂದಿದೆ ಮತ್ತು ಹೊಂದಲಿದೆ’ ಎಂಬ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದಾರೆ. ಇದೇ ಜುಲೈನಲ್ಲಿ ದಕ್ಷಿಣ ಕೊರಿಯಾ ದಲ್ಲಿ ‘ಎಐ’ ಆಧರಿತ, ಸ್ವಯಂಚಾಲಿತ ರೋಬೋ ಸೂಪರ್ವೈಜರ್ ಎಂಬ ಹೆಸರಿನ ರೋಬಾಟ್ ಒಂದು ಮೆಟ್ಟಿಲು ಗಳ ಮೇಲಿಂದ ಬಿದ್ದು ‘ಆತ್ಮಹತ್ಯೆ’ ಮಾಡಿಕೊಂಡಿತು. ಗುಮಿ ಸಿಟಿ ಕೌನ್ಸಿಲ್ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಈ ರೋಬಾಟ್, ೯ ರಿಂದ ೫ ರವರೆಗಿನ ನಿರಂತರ ಕೆಲಸದ ಒತ್ತಡ ತಡೆಯಲಾಗದೆ, ಒಂದು ದಿನ ೪ ಗಂಟೆಗೆ ವಿಚಿತ್ರ ವರ್ತನೆ ತೋರಲು ಆರಂಭಿಸಿ, This work is too hard, too tough ಎಂಬ ಸಂದೇಶ ವನ್ನು ತನ್ನ ಈಜಿomZqsನಲ್ಲಿ ತೋರಿಸುತ್ತಿತ್ತಂತೆ!
೨೦೦೪ರಲ್ಲಿ ‘ಐ-ರೋಬಾಟ್’ ಎಂಬ ಹಾಲಿವುಡ್ ಸಿನಿಮಾ ಬಂದಿತ್ತು. ಅದರಲ್ಲಿಯೂ ‘ಎಐ’ ಆಧರಿತ ರೋಬೋಗಳು
ಹೇಗೆ ವಿಪತ್ತು ತರಬಲ್ಲವು ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಹಾಗೆಯೇ, ಇವುಗಳನ್ನು ಕೋಡಿಂಗ್ ಮಾಡಿ
ಬಳಸುವ ಮಾನವನ ಮೇಲೆ ಇದರ ಸದುಪಯೋಗ ಮತ್ತು ದುರುಪಯೋಗದ ಪರಿಣಾಮಗಳು ನಿಂತಿವೆ ಎಂಬು ದನ್ನೂ ಇದರಲ್ಲಿ ಹೇಳಲು ಯತ್ನಿಸಿದ್ದಾರೆ.
ದೇಶ-ವಿದೇಶಗಳ ಕತೆ ಈ ‘ಎಐ’ ವಿಚಾರದಲ್ಲಿ ಹೇಗೇ ಇರಲಿ ಮತ್ತು ಹೇಗೇ ಬಳಸಲಿ, ಭಾರತೀಯರಾದ ನಾವು ಕೆಲ
ಅಪರೂಪದ eನಕ್ಕೆ ಹೆಸರುವಾಸಿಯಾದವರು ಮತ್ತು ಅವುಗಳ ಮೂಲಕ ವಿಶ್ವದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದವರು. ಅದು, ಭಾಸ್ಕರಾಚಾರ್ಯರ ಶೂನ್ಯದಿಂದ ಹಿಡಿದು ರಾಮಾನುಜರ ‘ಇನಿನಿಟಿ’ಯವರೆಗಿನ ಗಣಿತ ವಿರಬಹುದು, ‘ರಾಮನ್ ಎ-ಕ್ಸ್’ನಿಂದ ಚಂದ್ರಶೇಖರ್ವರೆಗಿನ ‘ಗಾಡ್ ಪಾರ್ಟಿಕಲ್ ’ನಂಥ ಫಿಜಿಕ್ಸ್ ಇರಬಹುದು, ಸಸ್ಯಗಳಿಗೂ ಜೀವವಿದೆ ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟ ಆಚಾರ್ಯ ಬೋಸ್ ಅವರ ಸಸ್ಯ ಶಾಸ್ತ್ರವಿರ ಬಹುದು, ೨೦೦೦ನೇ ಇಸವಿಯಲ್ಲಿ ಸೂಪರ್ ಕಂಪ್ಯೂಟರ್ಗೆ ಬಂದೊದಗಿದ್ದ ಆಪತ್ತನ್ನು ಭಾರತೀಯರು ಸರಿಪಡಿಸಿದ್ದಿರ ಬಹುದು, ಹೀಗೆ ಜಗತ್ತಿನ ಅನೇಕ ಸಮಸ್ಯೆಗಳಿಗೆ ನಮ್ಮಲ್ಲಿ ಪರಿಹಾರಗಳುಂಟು ಮತ್ತು ಅಂಥ ಪ್ರತಿಭೆಗಳೂ ನಮ್ಮಲ್ಲುಂಟು.
ಜನಸಂಖ್ಯೆ ಏರಿಕೆಯಾಗುತ್ತಿದ್ದಂತೆ ಸ್ವಾಭಾವಿಕವಾಗಿ ಆಹಾರಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆಗೆ ತಕ್ಕಂತೆ ಆಹಾರ ಪೂರೈಸಲು ಕೃಷಿ ಕ್ಷೇತ್ರದಲ್ಲೂ ಸನ್ನದ್ಧತೆ ಇರಬೇಕು. ಇತ್ತೀಚಿನ ದಿನಗಳಲ್ಲಿ ಹೊಸ ಪೀಳಿಗೆಯವರು (ಯುವ ಜನರು) ಸಾಂಪ್ರದಾಯಿಕ ಕೃಷಿ ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರಾಸಾಯನಿಕ ಕೃಷಿ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ.
ಕಡಿಮೆ ಭೂಮಿಯಲ್ಲಿ ಮಿಶ್ರಬೆಳೆ ಅಥವಾ ಏಕರೂಪದ ಬೆಳೆಯಲ್ಲಿ ಉತ್ತಮ -ಸಲು ಪಡೆದು ಆದಾಯವನ್ನು ಹೆಚ್ಚುಪಡೆಯಬೇಕು ಎನ್ನುವ ಆಶಯ. ಇದು ಆಧುನಿಕವಾಗಿ ಸರಿಯೂ ಕೂಡ. ಕೃಷಿಯಲ್ಲಿ ಹೊಸ ಪ್ರಯೋಗಕ್ಕೆ ‘ಎಐ’ ಹೆಚ್ಚು ಪರಿಣಾಮಕಾರಿಯಾಗಲಿದೆ. ‘ಎಐ’ ಆಧರಿತ ಉಪಕರಣಗಳು ಕೃಷಿ ಚಟುವಟಿಕೆಯಲ್ಲಿ ಬಳಕೆ ಆಗುತ್ತಿವೆ.
ಮಣ್ಣಿನ ಫಲವತ್ತತೆ, ಸಾರ, ಹಿಮದ ಪ್ರಮಾಣ, ಹವಾಮಾನ, ಬೆಳೆಯ ಬದಲಾವಣೆ, ಮಳೆ ಇತ್ಯಾದಿ ಮುಖ್ಯ. ‘ಎಐ’ ಮೂಲಕ ಬೆಳೆಯ ಉತ್ಪಾದನಾ ಪ್ರಮಾಣದ ಮೇಲೆ ನಿಗಾ ಇಡಲು ಸಾಧ್ಯವಿದೆ. ಮಣ್ಣು ಮತ್ತು ಬೆಳೆಯ ಆರೋಗ್ಯ,
ಡ್ರೋನ್ ಬಳಕೆ ಸಹಿತ ಒಟ್ಟಾರೆಯಾಗಿ ಕೃಷಿ ತಂತ್ರಜ್ಞಾನದಲ್ಲಿ ‘ಎಐ’ ಪ್ರಮುಖವಾಗಲಿದೆ ಎಂಬುದನ್ನು ಸಂಶೋಧ ಕರು ದೃಢಪಡಿಸಿದ್ದಾರೆ.
ಆದರೆ ‘ಎಐ’ ಬಳಕೆ ಮತ್ತು ಅನುಷ್ಠಾನ ಹೇಗಾಗಲಿದೆ ಎಂಬುದೂ ಒಂದು ಸವಾಲು. ಅದನ್ನು ಸರಿಯಾದ ಕ್ರಮ ದಲ್ಲಿ ಬಗೆಹರಿಸಬೇಕಿದೆ. ರೈತರು, ಬೆಳೆಗಾಗರರಿಗೆ ಇದರ ಪರಿಪೂರ್ಣ ಅರಿವು, ಸಾಧಕ-ಬಾಧಕಗಳನ್ನು ತಿಳಿಹೇಳುವ ಕಾರ್ಯವು ತಳಮಟ್ಟದಲ್ಲಿ ಆಗಬೇಕು. ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ದಿನೇದಿನೆ ‘ಎಐ’ ಪ್ರಭಾವ ಹೆಚ್ಚುತ್ತಲೇ ಇದೆ. ವೈದ್ಯಕೀಯ ಕ್ಷೇತ್ರದಲ್ಲಿನ ಜಟಿಲ ಸಮಸ್ಯೆಗಳಿಗೂ ‘ಎಐ’ ಮೂಲಕ ಪರಿಹಾರ ಕಂಡುಕೊಳ್ಳ ಲಾಗುತ್ತಿದೆ. ಶಿಕ್ಷಣ ಕ್ಷೇತ್ರವು ‘ಎಐ’ ಅನುಷ್ಠಾನದಲ್ಲಿ ಮುಂದಿದೆ ಎಂದರೂ ತಪ್ಪಾಗಲಾರದು. ವೃತ್ತಿಪರ ಕಲಿಕೆಗೆ ಶಿಕ್ಷಕ/ಉಪನ್ಯಾಸಕ/ಪ್ರಾಧ್ಯಾಪಕ ಹೀಗೆ ಎಲ್ಲರಿಗೂ ‘ಎಐ’ ಗೈಡ್ ಆಗಿ ನಿಲ್ಲಬಲ್ಲದು. ವಿದ್ಯಾರ್ಥಿಗೆ ಕಲಿಕೆಗೆ ಪೂರಕವಾದುದನ್ನು ತಂತ್ರಾಂಶ ಆಧಾರದಲ್ಲಿ ತನ್ನೆದುರು ತಂದುಬಿಡುತ್ತದೆ. ಯಾವುದೇ ವಿಷಯದ ಮಾಹಿತಿ ಕಲೆಹಾಕಲು, ಜಾಲಾಡಲು ಶ್ರಮ ಪಡಬೇಕಾಗಿಲ್ಲ. ಲಭ್ಯವಾಗುವ ಮಾಹಿತಿ ಆಧಾರದಲ್ಲಿ ಸ್ವ ವಿಶ್ಲೇಷಣೆ,
ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಹಾಗೂ ಅದರ ಬಳಕೆ ಎಷ್ಟು ಮತ್ತು ಅದರಿಂದ ಆಗುವ ದುಷ್ಟರಿಣಾಮಗಳೇನು ಎಂಬುದನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳುವಲ್ಲಿ ಇರಬೇಕಾದ ಜಾಣ್ಮೆಯೇ ಅತಿ ಮುಖ್ಯ.
ಮಾನವನ ಚಿಂತನಶಕ್ತಿಗೆ ಕೃತಕ ಬುದ್ಧಿಮತ್ತೆ ಈಗ ಸವಾಲಾಗಿದೆ. ಆದರೆ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯನ್ನು
ನಿರ್ವಹಣೆ ಮಾಡುವವನು ಮನುಷ್ಯನೇ ಆಗಿರುತ್ತಾನೆ.
ಸ್ವಾಭಾವಿಕ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಕೃತಕ ಬುದ್ಧಿಮತ್ತೆ ಎಷ್ಟು ಬಳಸಬೇಕು ಎಂಬುದು ಗೊತ್ತಿರಬೇಕು. ಇಷ್ಟು ಸ್ಪಷ್ಟತೆಯು ವಿದ್ಯಾರ್ಥಿ, ಶಿಕ್ಷಕ ಅಥವಾ ಉಪನ್ಯಾಸಕರಲ್ಲಿ ಸಿಕ್ಕಾಗಿ ಸಮಸ್ಯೆ ಕಡಿಮೆ ಯಾಗುತ್ತದೆ. ಎಲ್ಲದಕ್ಕೂ ಪರ್ಯಾಯ ಇದೆ. ಅದು ಮಾನವ ಬುದ್ಧಿಶಕ್ತಿಯ ಮತ್ತು ಆಲೋಚನಾ ಶಕ್ತಿಯ ಆಧಾರದಲ್ಲಿ ಬರುವ ಉತ್ಪನ್ನದಂತೆ. ಅದಕ್ಕೆ ‘ಎಐ’ ಕೂಡ ಹೊರತಾಗಿಲ್ಲ. ಮುಂದೆ ‘ಎಐ’ ಇನ್ನಷ್ಟು ಅನುಕೂಲತೆ ಗಳ ಜತೆಗೆ ಹೆಚ್ಚು ಸಮಸ್ಯೆ, ಸವಾಲುಗಳನ್ನು ತರಲಿದೆ. ಅದನ್ನು ಸ್ವಾಭಾವಿಕ ಬುದ್ಧಿಮತ್ತೆ ಬಳಸಿ ಬಗೆಹರಿಸಿಕೊಳ್ಳುವ ಚಾಕಚಕ್ಯತೆ ಯನ್ನು ನಾವು ಹೊಂದಿರಬೇಕು.
ಹಾಗಾಗಿ, ಇನ್ನೂ ಬರದಿರುವ ಸಮಸ್ಯೆಗಳನ್ನು ನೆನೆದುಕೊಂಡು ಕುಳಿತುಕೊಳ್ಳದೆ, ‘ಎಐ’ ಮೂಲಕ ಭಾರತೀಯ ಕೃಷಿ
ಪದ್ಧತಿಯಲ್ಲಿ ಸಂಶೋಧನೆ, ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಇದರ ಅಳವಡಿಕೆ ಮತ್ತು ಪುರಾತನ, ಪಾರಂಪರಿಕ ವೈದ್ಯಕೀಯ ವಿಷಯದಲ್ಲಿ ಗಿಡಮೂಲಿಕೆಗಳನ್ನು ಸಂಗ್ರಹಿಸುವ, ಸಂರಕ್ಷಿಸುವಂಥ ಕೆಲಸಗಳಾಗಬೇಕು, ಈ ನಿಟ್ಟಿನಲ್ಲಿ ನಮ್ಮ ಯುವಜನಾಂಗ ಗಂಭೀರವಾಗಿ ತೊಡಗಿಸಿಕೊಂಡು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಬೇಕು ಕೂಡ. ಹೀಗಾಗಿ ಹೊಸ ತಂತ್ರeನ ಎಷ್ಟೇ ಬಂದರೂ, ಅಭಿವೃದ್ಧಿ ಕಂಡರೂ ಅದರ ಹಿಂದಿನ ಶಕ್ತಿ ಮಾನವನೇ ಆಗಿರುವುದರಿಂದ ಯಂತ್ರಗಳು ಬೇಕು, ಮಾನವನ ಬುದ್ಧಿ ಶಕ್ತಿಯೂ ವೃದ್ಧಿಯಾಗಬೇಕು. ಯೋಚನಾಲಹರಿ ಬದಲಾಗಬೇಕು. ಎಲ್ಲಿ ‘ಎಐ’ ಬಳಸಬೇಕು ಅಲ್ಲಿ ಅವಶ್ಯವಾಗಿ ಬಳಕೆ ಆಗಬೇಕು. ಎಲ್ಲಿ ಸ್ವಾಭಾವಿಕ ಬುದ್ಧಿಶಕ್ತಿ ಬಳಸಬೇಕೋ ಅಲ್ಲಿ ‘ಎಐ’ ಬಳಸಿದರೆ ನಿರೀಕ್ಷಿತ ಫಲಿತಾಂಶ ಸಿಗದು. ‘ಎಐ’ ನಮ್ಮ ನಿತ್ಯಜೀವನದ ಸಂಗಾತಿ; ಹಾಗಂತ ಅದಕ್ಕೆ ಯಾವುದೇ ಭಾವನೆ ಅರ್ಥ ಆಗದು. ಆದರೆ ಬುದ್ಧಿಶಕ್ತಿ ಭಾವನೆಯ ಜತೆಗೆ ಬೆಳೆಯುವುದು.