Tuesday, 10th September 2024

ಸ್ಪಾಂಜ್ ಬಾಂಬ್: ಹಮಾಸ್ ಸುರಂಗಗಳ ವಿರುದ್ದ ಆಯುಧ

ಅಂತರ್ಯುದ್ದ 

ಗರೀಶ್ ಲಿಂಗಣ್ಣ

ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಗಾಜಾ ಪಟ್ಟಿಯಲ್ಲಿ ಭೂ ಕಾರ್ಯಾಚರಣೆಗೆ ಇಳಿದಿದೆ. ಸಹಜವಾಗಿ ಈ ಕಾರ್ಯಾಚರಣೆಯಲ್ಲಿ, ಇಸ್ರೇಲಿ
ಪಡೆಗಳು ಕಳೆದ ಹದಿನೈದು ವರ್ಷಗಳ ಹಿಂದಿನಿಂದ ಹಮಾಸ್ ನಿರ್ಮಿಸಿಕೊಂಡು ಬಂದಿರುವ, ’ಗಾಜಾ ಮೆಟ್ರೋ’ ಎಂದು ಕರೆಯಲಾಗುವ ಭೂಮಿಯಾಳದ ಸುರಂಗಗಳ ಮೂಲಕ ಅತ್ಯಂತ ಕಠಿಣ ಸವಾಲನ್ನು ಎದುರಿಸುತ್ತಿದೆ.

ನೆಲದಾಳದಲ್ಲಿ ಚಕ್ರವ್ಯೂಹದ ರೀತಿ ರಚಿಸಿರುವ ಈ ಸುರಂಗಗಳು ನೂರಾರು ಕಿಲೋಮೀಟರ್ ವ್ಯಾಪಿಸಿದ್ದು, ಅಲ್ಲಿ ಶತ್ರುಗಳನ್ನು ಸೆರೆಯಾಗಿಸುವ ವ್ಯವಸ್ಥೆಗಳು, ರಾಕೆಟ್ ಮತ್ತು ಇತರ ಆಯುಧಗಳ ಸಂಗ್ರಹಾಗಾರಗಳಿವೆ. ಅದರೊಡನೆ, ಹಮಾಸ್ ಉಗ್ರರಿಗೆ ರಹಸ್ಯವಾಗಿ, ಇಸ್ರೇಲ್ ಸೇನೆಯ
ಗಮನಕ್ಕೆ ಬಾರದಂತೆ ಚಲಿಸಲು ಇವು ನೆರವಾಗುತ್ತವೆ. ಆದರೆ, ಇಸ್ರೇಲ್ ಈ ಬಾರಿ ತನ್ನ ವಿನೂತನ, ‘ಸ್ಪಾಂಜ್ ಬಾಂಬ’ ಗಳನ್ನು ಪ್ರಯೋಗಿಸಿ, ಗಾಜಾದ ನೆಲದಾಳದಲ್ಲಿ ರುವ ಹಮಾಸ್ ಸುರಂಗಗಳಲ್ಲಿ ಸಂಚರಿಸಲು ಉದ್ದೇಶಿಸಿದೆ.

ಚಕ್ರವ್ಯೂಹದ ಜಾಲ
ಅಕ್ಟೋಬರ್ ಆರಂಭದಲ್ಲಿ ಇಸ್ರೇಲ್ ನೆಲೆಗಳ ಮೇಲೆ ಆಕ್ರಮಣ ನಡೆಸಿ, ವಶಪಡಿಸಿಕೊಂಡ ೨೦೦ ಒತ್ತೆಯಾಳು ಗಳನ್ನು ಹಮಾಸ್ ಈ ಸುರಂಗಗಳಲ್ಲಿ ಬಚ್ಚಿಟ್ಟಿದೆ ಎಂದು ವರದಿಗಳಿವೆ. ಅದರೊಡನೆ, ಇಸ್ರೇಲಿ ಸೇನಾಪಡೆಗಳು ಪೂರ್ಣ ಪ್ರಮಾಣದಲ್ಲಿ ಭೂ ಕಾರ್ಯಾಚರಣೆ ಆರಂಭಿಸಿದಾಗ ಹಮಾಸ್ ನಾಯಕರೂ ಈ ಸುರಂಗಗಳ ಬಚ್ಚಿಟ್ಟು ಕೊಳ್ಳುವ ಉದ್ದೇಶ ಹೊಂದಿದ್ದಾರೆ.

ಈ ಸುರಂಗಗಳಲ್ಲಿ ಹಲವನ್ನು ದಶಕಗಳ ಹಿಂದೆಯೇ ನಿರ್ಮಿಸಲು ಆರಂಭಿಸಲಾಗಿತ್ತು. ಅವುಗಳು ಈಗ ಕೇವಲ ಆಶ್ರಯ ತಾಣಗಳಾಗಿ ಅಥವಾ ಬಚ್ಚಿಟ್ಟುಕೊಳ್ಳುವ ಮರೆಗಳಾಗಿ ಉಳಿದಿಲ್ಲ. ಅವುಗಳು ಭೂಮಿಯ ಮೇಲೆ ಬರುವ ಇಸ್ರೇಲಿ ಪಡೆಗಳನ್ನು ನೆಲದಾಳದಿಂದ ಹೊಡೆದುರುಳಿಸುವ ಯುದ್ಧ ತಂತ್ರದ ಪ್ರಮುಖ ಭಾಗವಾಗಿವೆ. ಇವುಗಳಲ್ಲಿ ಹಲವು ಸುರಂಗಗಳು ನಾಗರಿಕ ಕಟ್ಟಡಗಳ ಕೆಳಗೂ ಸಾಗಿ ಹೋಗಿದ್ದು, ಇವುಗಳ ಪ್ರವೇಶ ಮತ್ತು ಹೊರಬರುವ ಜಾಗಗಳು ವಿವಿಧ ವಸತಿ ಸಮುಚ್ಚಯಗಳು ಹಾಗೂ ಮಿಲಿಟರೇತರ ಕಟ್ಟಡಗಳಲ್ಲಿವೆ. ಈ ಕಾರಣದಿಂದ, ಸಾರ್ವಜನಿಕ ಆಸ್ತಪಾಸ್ತಿಗಳಿಗೆ ತೊಂದರೆಯಾಗದಂತೆ, ಅಂತಾರಾಷ್ಟ್ರೀಯ ಸಮುದಾಯದ ಟೀಕೆಗೆ ಒಳಗಾಗದಂತೆ ಕಾರ್ಯಾಚರಣೆ ನಡೆಸುವುದು ಇಸ್ರೇಲ್ ಪಾಲಿಗೆ ಅತ್ಯಂತ
ಸವಾಲಿನ ವಿಚಾರವಾಗಿದೆ.

ಒಂದು ಸಾಮಾನ್ಯ ಸುರಂಗ ಎರಡು ಮೀಟರ್‌ಗಳಷ್ಟು ಎತ್ತರ ಮತ್ತು ಒಂದು ಮೀಟರ್ ಅಗಲವಿರುತ್ತದೆ. ಆ ಮೂಲಕ ಅವುಗಳನ್ನು ಶೀಘ್ರವಾಗಿ ನಿರ್ಮಿಸಲು ಅನುಕೂಲಕರವಾಗಿದೆ. ಕೆಲವು ಸುರಂಗಗಳ ನಿರ್ಮಾಣದಲ್ಲಿ ಕಾಂಕ್ರೀಟ್ ಮತ್ತು ಲೋಹಗಳನ್ನು ಬಳಸಿ ಗಟ್ಟಿಗೊಳಿಸಲಾಗಿದ್ದು, ಅವುಗಳು ಅಷ್ಟೇನೂ ವಿಶೇಷ ವಿನ್ಯಾಸಗಳನ್ನು ಹೊಂದಿಲ್ಲ. ಇನ್ನೊಂದೆಡೆ ಕೆಲವು ಸುರಂಗಗಳು ವಿದ್ಯುತ್ ಪೂರೈಕೆ, ನೀರು ಮತ್ತು ಗಾಳಿಯ ವ್ಯವಸ್ಥೆಗಳನ್ನು ಹೊಂದಿವೆ. ಇವುಗಳು ನಿರ್ವಹಣಾ ಕೇಂದ್ರಗಳಾಗಿ, ವಿಶ್ರಾಂತಿ ತಾಣ ಗಳಾಗಿ, ಆಯುಧ ಸಂಗ್ರಹಣಾ ವ್ಯವಸ್ಥೆಗಳಾಗಿ, ಇಸ್ರೇಲ್
ಒಳಗೆ ಅಕ್ರಮ ಪ್ರವೇಶ ನಡೆಸಲು ರಹಸ್ಯ ಮಾರ್ಗಗಳಾಗಿ, ರಾಕೆಟ್ ಉಡಾವಣಾ ಪ್ರದೇಶಗಳಿಗೆ ತೆರಳುವ ಮಾರ್ಗಗಳಾಗಿ ಕಾರ್ಯಾಚರಿಸುತ್ತವೆ. ಕೆಲವು ಸುರಂಗ ಜಾಲಗಳಲ್ಲಿ ಆಯುಧಗಳು ಮತ್ತು ನಿರ್ಮಾಣ ಉಪಕರಣಗಳನ್ನು ಸಾಗಿಸಲು ಸಣ್ಣ ರೈಲ್ವೇ ವ್ಯವಸ್ಥೆಯೂ ಇದೆ ಎನ್ನಲಾಗಿದೆ.
ಹಮಾಸ್ ಸುರಂಗ ಜಾಲವನ್ನು ತೊಡೆದು ಹಾಕಲು ತೀರಾ ಇತ್ತೀಚಿನ ಪ್ರಯತ್ನ ೨೦೧೪ರಲ್ಲಿ ನಡೆಯಿತು.

ಇದಕ್ಕೆ ‘ಆಪರೇಶನ್ ಪ್ರೊಟೆಕ್ಟಿವ್ ಎಡ್ಜ್’ ಎಂದು ಹೆಸರಿಡಲಾಗಿತ್ತು. ಆದರೆ, ಆ ಸುರಂಗ ವ್ಯವಸ್ಥೆಯನ್ನು ಮರು ನಿರ್ಮಿಸಿದ್ದು ಮಾತ್ರವಲ್ಲದೆ, ಅದನ್ನು ಇನ್ನಷ್ಟು ವಿಸ್ತರಿಸಲಾಯಿತು.

ಸ್ಪಾಂಜ್ ಬಾಂಬ್ ಪರಿಹಾರ
ಸ್ಪಾಂಜ್ ಬಾಂಬ್ ಎಂಬ ನವೀನ ರಾಸಾಯನಿಕ ಉಪಕರಣಗಳನ್ನು ಐಡಿಎಫ್ ಅಭಿವೃದ್ಧಿ ಪಡಿಸಿದ್ದು, ಇದರಲ್ಲಿ ಯಾವುದೇ ಸೋಟಕಗಳಿರುವುದಿಲ್ಲ. ಇದು ಬೃಹತ್ ಪ್ರಮಾಣದಲ್ಲಿ ನೊರೆಯನ್ನು ಉಂಟುಮಾಡಿ, ಸುರಂಗದ ತೆರೆಯುವಿಕೆಗಳು ಮತ್ತು ಬಾಗಿಲುಗಳನ್ನು ಮುಚ್ಚಿ ಹಾಕಿ, ಶತ್ರು ಸೈನಿಕರು ಬರದಂತೆ ತಡೆಯುತ್ತದೆ. ಐಡಿಎಫ್ ಇನ್ನೂ ಸ್ಪಾಂಜ್ ಬಾಂಬ್‌ಗಳ ಬಳಕೆಯ ಕುರಿತು ಅಽಕೃತವಾಗಿ ಮಾತನಾಡಿಲ್ಲ. ಈ ಸ್ಪಾಂಜ್ ಬಾಂಬ್
ಗಳು ಇದ್ದಕ್ಕಿದ್ದ ಹಾಗೇ ಭಾರೀ ಪ್ರಮಾಣದಲ್ಲಿ ನೊರೆ ಹೊರ ಹಾಕುತ್ತವೆ. ಈ ನೊರೆ ಅತ್ಯಂತ ವೇಗವಾಗಿ ವ್ಯಾಪಿಸಿ, ಘನೀಕರಿಸುತ್ತದೆ. ಆದರೆ, ಇಸ್ರೇಲಿ ಸೈನಿಕರು ಈ ಉಪಕರಣಗಳನ್ನು ೨೦೨೧ರಲ್ಲಿ ಗಾಜಾ ಗಡಿಯ ಬಳಿಯ ನೆಗೆವ್ ಮರುಭೂಮಿಯ ಟ್ಜೀಲಿಮ್ ಸೇನಾನೆಲೆಯಲ್ಲಿ ಅಣಕು ಸುರಂಗ ಕಾರ್ಯಾಚರಣೆಯ ವೇಳೆ ಪ್ರಯೋಗಿಸಿದ್ದರು.

ಹೇಗೆ ಕಾರ್ಯಾಚರಿಸುತ್ತದೆ?
ಸ್ಪಾಂಜ್ ಬಾಂಬನ್ನು ಸೈನಿಕರು ಸುರಂಗಗಳ ಒಳಗೆ ಮುಂದೆ ಮುಂದೆ ಸಾಗಿದಂತೆ ಶತ್ರುಗಳು ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಲು ಸಾಧ್ಯವಾಗದಂತೆ ಮಾಡಲು ಹಮಾಸ್ ಉಗ್ರರು ಬಳಸಬಹುದಾದ ಹಾದಿಗಳನ್ನು ಮುಚ್ಚಿಹಾಕುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ಉಪಕರಣ ಗಳು ಪ್ಲಾಸ್ಟಿಕ್ ಕಂಟೇನರ್ ಒಳಗಡೆ ಇರುತ್ತವೆ. ಇಲ್ಲಿ ಎರಡು ರೀತಿಯ ದ್ರವಗಳನ್ನು ಒಂದು ಲೋಹದ ಗೋಡೆ ಬೇರ್ಪಡಿಸುತ್ತದೆ. ಒಂದು ಬಾರಿ ಈ ಗೋಡೆಯನ್ನು ತೆಗೆದು, ಸೈನಿಕ ಬಾಂಬನ್ನು ಇಡುತ್ತಿದ್ದಂತೆ ಅಥವಾ ಮುಂದಕ್ಕೆ ಎಸೆದ ತಕ್ಷಣವೇ ಎರಡು ದ್ರವಗಳು ಮಿಶ್ರಗೊಳ್ಳುತ್ತವೆ.
ಐಡಿಎ-ನ ಎಜಿನಿಯರಿಂಗ್ ಕಾರ್ಪ್ಸ್ ಮತ್ತು ವೈಮಾನಿಕ ಸೆನ್ಸರ್‌ಗಳನ್ನು ಒಳಗೊಂಡಿರುವ ಸುರಂಗ ವಿಚಕ್ಷಣಾ ವ್ಯವಸ್ಥೆಗಳನ್ನು, ನೆಲವನ್ನು ಸೀಳುವ ರೇಡಾರ್ ಮತ್ತು ಸುರಂಗಗಳನ್ನು ಹುಡುಕುವ ವಿಶೇಷ ಕೊರೆಯುವ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಿದೆ.

ಇವುಗಳೊಡನೆ, ನೆಲದಾಳದಲ್ಲಿ ವೀಕ್ಷಿಸಲು ಅನುಕೂಲಕರವಾದ ವಿಶೇಷ ಉಪಕರಣಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಯಾಕೆಂದರೆ, ಸಾಮಾನ್ಯವಾದ ರಾತ್ರಿ ವೀಕ್ಷಣೆಯ ಕನ್ನಡಕಗಳು ಕಾರ್ಯಾಚರಿಸಬೇಕಾದರೆ ಕೊಂಚವಾದರೂ ಸುತ್ತಲಿನ ಬೆಳಕಿನ ಅವಶ್ಯಕತೆಯಿರುತ್ತದೆ.
ಆದರೆ ಸುರಂಗಗಳ ಒಳಗೆ ಚಲಿಸುವುದೆಂದರೆ, ಅಲ್ಲಿ ಕೊಂಚವೂ ನೈಸರ್ಗಿಕ ಬೆಳಕು ಇರುವುದಿಲ್ಲ. ಆದ್ದರಿಂದ ಸೇನಾಪಡೆಗಳು ಆ ಕತ್ತಲಲ್ಲಿ ನೋಡಲು ಥರ್ಮಲ್ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರಬೇಕಾಗುತ್ತದೆ. ಭೂಮಿಯಾಳದ ಸನ್ನಿವೇಶದಲ್ಲಿ ಬಳಸಲು ಸಮರ್ಪಕವಾದ ನೂತನ ರೇಡಿಯೋಗಳನ್ನೂ ಅಭಿವೃದ್ಧಿ ಪಡಿಸಲಾಗಿದೆ.

ಕುರುಡುತನದ ಅಪಾಯ

ಈ ಸುರಂಗದಲ್ಲಿ ಬಳಸುವ ಆಯುಧಕ್ಕೆ ಸಂಬಂಧಿಸಿದಂತೆ  ಒಂದಷ್ಟು ಅಪಾಯಗಳೂ ಇವೆ. ಸ್ಪಾಂಜ್ ಬಾಂಬ್ ಎನ್ನುವುದು ತಾಂತ್ರಿಕವಾಗಿ ಒಂದು ದ್ರವ ಎಮಲ್ಷನ್ ಆಗಿದ್ದು, ಅವುಗಳ ನಿರ್ವಹಣೆಯ ಸಂದರ್ಭದಲ್ಲಿ ಸಾಕಷ್ಟು ಅಪಾಯ ಗಳನ್ನು ತಂದೊಡ್ಡಬಲ್ಲದು. ಈ ಮಿಶ್ರಣವನ್ನು ಸರಿಯಾಗಿ
ನಿರ್ವಹಿಸದ ಕಾರಣದಿಂದ ಹಲವಾರು ಇಸ್ರೇಲಿ ಯೋಧರು ದೃಷ್ಟಿ ಕಳೆದುಕೊಂಡ ಘಟನೆಗಳೂ ನಡೆದಿವೆ. ಆದ್ದರಿಂದ, ಯೋಧರಿಗೆ ನೆರವಾಗಲು ಮತ್ತು ಸುರಂಗದಲ್ಲಿ ಹಾದಿ ತೋರಿಸಲು ಇಸ್ರೇಲ್ ರೋಬೋಟ್‌ಗಳು ಮತ್ತು ಡ್ರೋನ್ ಗಳನ್ನು ಬಳಸುತ್ತಿದೆ. ಆದರೆ, ಭೂಮಿಯಾಳದಲ್ಲಿ ಇಂತಹ
ತಂತ್ರeನವನ್ನು ಬಳಸುವುದು ಅತ್ಯಂತ ಸವಾಲಿನದ್ದಾಗಿದೆ. ಇವುಗಳಲ್ಲಿ ಹಲವು ರೋಬೋಟ್‌ಗಳನ್ನು ಹಿಂಭಾಗದಿಂದ ಸಂಪರ್ಕಿಸಿರುವ ಕೇಬಲ್‌ಗಳ ಮೂಲಕ ನಿರ್ದೇಶಿಸಲಾಗುತ್ತದೆ.

ಇತರ ರೋಬೋಟ್‌ಗಳು ರೇಡಿಯೋ ತರಂಗಗಳ ಮೇಲೆ ಅವಲಂಬಿಸಿರುತ್ತವೆ. ಆದರೆ ಭೂಮಿಯಾಳದ ಪರಿಸ್ಥಿತಿಯಲ್ಲಿ ರೇಡಿಯೋ ತರಂಗಗಳು ಸಾಕಷ್ಟು ದುರ್ಬಲ ವಾಗಿರುತ್ತವೆ. ಆದ್ದರಿಂದ ಅವುಗಳು ಕಾರ್ಯಾಚರಿಸುವಂತೆ ಮಾಡಲು ರಿಪೀಟರ್ ನೋಡ್‌ಗಳು ಜಾಲದ ಅವಶ್ಯಕತೆಯಿರುತ್ತದೆ. ರಿಪೀಟರ್ ನೋಡ್‌ಗಳೆಂದರೆ, ಒಂದು ಜಾಲದಲ್ಲಿ ಸಂಕೇತಗಳನ್ನು ಪಡೆದುಕೊಂಡು, ವೃದ್ಧಿಸಿ, ಹೆಚ್ಚಿನ ವ್ಯಾಪ್ತಿ ಹೊಂದುವಂತೆ ಮಾಡುವ ಉಪಕರಣಗಳಾಗಿವೆ. ಅವುಗಳನ್ನು ಸಾಮಾನ್ಯವಾಗಿ ಟೆಲಿ ಕಮ್ಯುನಿಕೇಷನ್ ಮತ್ತು ವೈಯರ್‌ಲೆಸ್ ಸಂವಹನದಲ್ಲಿ ಸಂಕೇತ ದುರ್ಬಲತೆಯನ್ನು
ಸರಿಪಡಿಸುವ ಸಲುವಾಗಿ ಬಳಸಲಾಗುತ್ತದೆ.

ಮೈಕೋಡೋನ್, ಥೋಬೋಟ್
ವಿಚಕ್ಷಣಾ ಉದ್ದೇಶಗಳಿಗೆಂದು ನಿರ್ಮಿಸಿರುವ ಮೈಕ್ರೋ ಡ್ರೋನ್‌ಗಳು ಅಂಗೈಯಲ್ಲಿ ಹಿಡಿಯುವುಷ್ಟು ಸಣ್ಣ ಗಾತ್ರದವಾಗಿವೆ. ಭೂಮಿಯಾಳದ ಸನ್ನಿವೇಶಗಳಲ್ಲಿ ಅವುಗಳ ಸಂಕೇತ ಪಡೆಯುವ ಸಾಮರ್ಥ್ಯ ಕಡಿಮೆಯಾದರೂ, ಅವುಗಳನ್ನು ಬಳಸಿಕೊಳ್ಳಬಹುದಾಗಿದೆ. ರೋಬೋಟೀಮ್
ಎಂಬ ಇಸ್ರೇಲಿ ತಂತ್ರeನ ಸಂಸ್ಥೆ ಐರಿಸ್ ಎಂಬ ಸಣ್ಣದಾದ, ಎಸೆಯಬಹುದಾದ ಡ್ರೋನ್‌ಗಳನ್ನು ಅಭಿವೃದ್ಧಿ ಪಡಿಸಿದೆ. ಅವುಗಳನ್ನು ದೂರದಿಂದಲೇ ನಿರ್ವಹಿಸಬಹುದಾಗಿದ್ದು, ದೊಡ್ಡ ಚಕ್ರಗಳ ಮೇಲೆ ಚಲಿಸುತ್ತವೆ. ಈ ರೀತಿಯ ಡ್ರೋನ್ ಗಳನ್ನು ನಿರ್ದಿಷ್ಟ ಸ್ಥಳಗಳಿಗೆ ಎಸೆಯುವ ರೀತಿಯಲ್ಲಿ
ವಿನ್ಯಾಸಗೊಳಿಸಲಾಗಿದ್ದು, ಅಲ್ಲಿ ಅವುಗಳು ತಮ್ಮ ಚಕ್ರಗಳನ್ನು ಬಳಸಿ, ರಿಮೋಟ್ ಕಂಟ್ರೋಲ್ ಸಾಮರ್ಥ್ಯದ ಮೂಲಕ ಉದ್ದೇಶಿತ ಕಾರ್ಯಗಳನ್ನು ಕೈಗೊಳ್ಳುತ್ತವೆ.

ವಿಶೇಷ ಪಡೆಗಳು ಥ್ರೋಬೋಟ್ ಎನ್ನುವ, ದೊಡ್ಡ ಚಕ್ರಗಳ ಐರಿಸ್ ಡ್ರೋನ್‌ಗಳನ್ನು ಉದ್ದೇಶಿತ ಪ್ರದೇಶಗಳಿಗೆ ಎಸೆಯಬಹುದು. ಬಳಿಕ ಅವುಗಳು ಸುರಕ್ಷಿತ ಸ್ಥಳದಿಂದ ಛಾಯಾಚಿತ್ರಗಳನ್ನು ಕಳುಹಿಸಿಕೊಡುತ್ತವೆ. ಈ ಉಪಕರಣಗಳ ಕೆಲವು ಆವೃತ್ತಿಗಳಲ್ಲಿ ಸೋಟಕಗಳನ್ನು ಅಳವಡಿಸಿ,
ಎದುರಾದ ಶತ್ರು ಪಡೆಗಳ ಮೇಲೆ ಸೋಟಿಸಬಹುದು. ಐರಿಸ್ ಜತೆಗೆ, ‘ಮೈಕ್ರೋ ಟ್ಯಾಕ್ಟಿಕಲ್ ಗ್ರೌಂಡ್ ರೋಬಾಟ್’ (ಎಂಟಿಜಿಆರ್) ಸಹ ಅಭಿವೃದ್ಧಿ ಹೊಂದಿದ್ದು, ಇದು ಮೆಟ್ಟಿಲುಗಳನ್ನು ಹತ್ತುವ ಸಾಮರ್ಥ್ಯ ಹೊಂದಿದೆ. ಇದನ್ನು ಸೈನಿಕರು ಕಟ್ಟಡಗಳಲ್ಲಿ ಹಾಗೂ ಗುಹೆಗಳಲ್ಲಿ ಬಳಸಬಹುದಾಗಿದೆ.

ಭೂಮಿಯಾಳದ ವಾತಾವರಣ ಹಮಾಸ್ ತನ್ನ ಒಟ್ಟಾರೆ ಮಿಲಿಟರಿ ಕಾರ್ಯತಂತ್ರಕ್ಕೆ ಭೂಮಿ ಯಾಳದ ಯುದ್ಧತಂತ್ರವನ್ನು ಅಳವಡಿಸಿಕೊಂಡಿದೆ.
ಅಮೆರಿಕದ ನಿವೃತ್ತ ಮೇಜರ್, ವೆಸ್ಟ್ ಪಾಯಿಂಟಿನ ಮಾಡರ್ನ್ ವಾರ್ ಫಾರ್ ಇನ್ಸ್ಟಿಟ್ಯೂಟ್‌ನಲ್ಲಿ ಅರ್ಬನ್ ವಾರ್ ಫಾರ್ ಸ್ಟಡೀಸ್ ವಿಭಾಗದ ಮುಖ್ಯಸ್ಥರಾದ ಜಾನ್ ಸ್ಪೆನ್ಸರ್ ಅವರ ಪ್ರಕಾರ, ಭೂಮಿಯಾಳದಲ್ಲಿ ನಡೆಸುವ ಯುದ್ಧ ಬಹುಪಾಲು ಕಟ್ಟಡಗಳಲ್ಲಿನ ಯುದ್ಧಕ್ಕಿಂತ ಹೆಚ್ಚಾಗಿ
ನೀರಿನಾಳದ ಯುದ್ಧವನ್ನು ಹೋಲುತ್ತದೆ ಎಂದಿದ್ದಾರೆ. ಭೂಮಿಯ ಮೇಲೆ ಬಳಸಲು ವಿನ್ಯಾಸಗೊಳಿಸಿರುವ ಆಯುಧಗಳು ಭೂಮಿಯಾಳದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ.

ನೋಡುವಿಕೆ, ಉಸಿರಾಟ, ಸಂಚರಣೆ, ನಕ್ಷೆ, ಸಂವಹನ, ಹಾಗೂ ಮಾರಣಾಂತಿಕ ಆಯುಧಗಳ ಬಳಕೆಗೆ ವಿಶೇಷ ಉಪಕರಣಗಳ ಅವಶ್ಯಕತೆ ಯಿರುತ್ತದೆ. ಐಡಿಎಫ್ ಮಿಲಿಟರಿ ಮುಖಂಡರು, ಪ್ರಸ್ತುತ ಸುರಂಗಗಳನ್ನು ಈ ಹಿಂದೆ ಇಸ್ರೇಲಿನ ಉತ್ತರ ಭಾಗದಲ್ಲಿ ಹಿಜ್ಬುಸಂಘಟನೆ ಕೊರೆದ ಸುರಂಗಗಳನ್ನು ಕಾಂಕ್ರೀಟ್‌ನಿಂದ ಮುಚ್ಚಿದ ರೀತಿಯಲ್ಲಿ ಮುಚ್ಚಿಬಿಡಬೇಕೆ ಎಂಬ ಪ್ರಶ್ನೆಯನ್ನು ಎದುರಿಸುತ್ತಿದೆ. ಅದರೊಡನೆ, ಹಮಾಸ್ ಉಗ್ರರನ್ನು ಖಾಲಿ ಮಾಡುವ ಕಾರ್ಯಾಚರಣೆಯಲ್ಲಿ (ಇನ್ನೂ ಕಷ್ಟದ ಕಾರ್ಯಾಚರಣೆ) ಈ ಸುರಂಗಗಳನ್ನು ಕಾರ್ಯಾಚರಿಸುವ ರೀತಿಯ ಇಟ್ಟುಕೊಂಡು, ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಒಯ್ದವರ ಹುಡುಕಾಟ ನಡೆಸುವ ಅವಶ್ಯಕತೆ ಬರಬಹುದು. ಈಗಿನ ಸನ್ನಿವೇಶದಲ್ಲಿ, ಸಾಂಪ್ರದಾಯಿಕ
ಮಿಲಿಟರಿ ಪ್ರತಿಕ್ರಿಯೆಯಾದ ಸುರಂಗದೊಳಗೆ ಜಲಪ್ರವಾಹ ಬರುವಂತೆ ಮಾಡುವುದು ಅಥವಾ ಸೋಟಕಗಳನ್ನು ಬಳಸಿ ನಾಶಗೊಳಿಸುವುದು ಈ ಸನ್ನಿವೇಶದಲ್ಲಿ ಸೂಕ್ತ ಆಯ್ಕೆಯಾಗಿಲ್ಲ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Leave a Reply

Your email address will not be published. Required fields are marked *